"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 7 September 2015

☀ಭಾರತದಲ್ಲಿ ಘಟಿಸಿದ ಪ್ರಮುಖ ಐತಿಹಾಸಿಕ ಕದನಗಳು : (The Major Historical Battles taking place in India)

☀ಭಾರತದಲ್ಲಿ ಘಟಿಸಿದ ಪ್ರಮುಖ ಐತಿಹಾಸಿಕ ಕದನಗಳು :
(The Major Historical Battles taking place in India)
━━━━━━━━━━━━━━━━━━━━━━━━━━━━━━━━━━━━━━━━━━━━━

★ಪ್ರಾಚೀನ ಭಾರತದ ಇತಿಹಾಸ
(Indian Ancient History)

★ ಭಾರತದ ಇತಿಹಾಸ
(Indian History)


●.1. ಮೊದಲನೆಯ ತರೈನ್ ಕದನ:
•┈┈┈┈┈┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ. 1191
✧.ಫಲಿತಾಂಶ: ಪೃಥ್ವಿರಾಜ್ ಚೌಹಾನ್ ಮೊಹಮ್ಮದ್ ಘೋರಿ ನನ್ನು ಸೋಲಿಸಿದನು.


●.2. ಎರಡನೆಯ ತರೈನ್ ಕದನ :
•┈┈┈┈┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1192
✧.ಫಲಿತಾಂಶ: ಮೊಹಮ್ಮದ್ ಘೋರಿ ಪೃಥ್ವಿರಾಜ್ ಚೌಹಾನ್ ನನ್ನು ಸೋಲಿಸಿದನು.


●.3. ಮೊದಲನೆಯ ಪಾಣಿಪತ್ ಕದನ :
•┈┈┈┈┈┈┈┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1526
✧.ಫಲಿತಾಂಶ: ಬಾಬರ್ ಇಬ್ರಾಹಿಂ ಲೋದಿನನ್ನು ಸೋಲಿಸಿದನು.


●.4. ಖನವಾ ಕದನ :
•┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1527
✧.ಫಲಿತಾಂಶ: ಬಾಬರ್ ರಾಣಾ ಶುಂಗನನ್ನು ಸೋಲಿಸಿದನು. ಇದು ಭಾರತದಲ್ಲಿ ಬಾಬರ್ ಮತ್ತಷ್ಟು ತನ್ನ ಹೆಗ್ಗುರುತು ಬಲಪಡಿಸುವಲ್ಲಿ ಸಹಕಾರಿಯಾಯಿತು.


●.5. ಘಾಘ್ರ ಕದನ :
•┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1529
✧.ಫಲಿತಾಂಶ: ಬಾಬರ್ ನು ಮಹಮೂದ್ ಲೋದಿ ಮತ್ತು ಸುಲ್ತಾನ್ ನುಸ್ರತ್ ಶಾರನ್ನು ಸೋಲಿಸಿದನು. ಈ ಯುದ್ಧ ಭಾರತದಲ್ಲಿ ಮುಘಲ್ ಆಡಳಿತದ ಸ್ಥಾಪನೆಗೆ ಕಾರಣೀಭೂತವಾಯಿತು.


●.6. ಎರಡನೆಯ ಪಾಣಿಪತ್ ಕದನ :
•┈┈┈┈┈┈┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1556
✧.ಫಲಿತಾಂಶ: ಅಕ್ಬರ್ ಹೇಮುನನ್ನು ಸೋಲಿಸಿದನು.


●.7. ಮೂರನೇಯ ಪಾಣಿಪತ್ ಕದನ :
•┈┈┈┈┈┈┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1761
✧.ಫಲಿತಾಂಶ: ಅಹ್ಮದ್ ಶಾ ಅಬ್ದಾಲಿ ಮರಾಠರನ್ನು ಸೋಲಿಸಿದನು.


●.8. ತಾಳಿಕೋಟೆ ಕದನ :
•┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1565
✧.ಫಲಿತಾಂಶ: ಡೆಕ್ಕನ್ ಸುಲ್ತಾನರು ಖ್ಯಾತಿವೆತ್ತ ವಿಜಯನಗರ ಸಾಮ್ರಾಜ್ಯವನ್ನು ಸೋಲಿಸಿದರು.


●.9.ಹಲ್ದಿಘಾಟಿ ಕದನ :
•┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1576
✧.ಫಲಿತಾಂಶ: ಮೊಘಲ್ ಸೇನೆಯ ನೇತೃತ್ವದಲ್ಲಿ ರಾಜ ಮಾನ್ ಸಿಂಗ್ ಮತ್ತು ಮೇವಾರದ ರಾಣ ಪ್ರತಾಪ್ ನಡುವೆ ನಿರ್ಣಾಯಕ ಯುದ್ಧ ನಡೆಯಿತು.


●.10.ಪ್ಲಾಸೀ ಕದನ :
•┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1757
✧.ಫಲಿತಾಂಶ: ಬ್ರಿಟಿಷರು ಮೀರ್ ಜಾಫರ್ ನ ಸಹಾಯದಿಂದ ಸಿರಾಜ್ - ಉದ್-ದೌಲಾನನ್ನು ಸೋಲಿಸಿದರು. ಈ ಯುದ್ಧ ಭಾರತದಲ್ಲಿನ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿತು.


●.11. ವಾಂಡಿವಾಷ್ ಕದನ :
•┈┈┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1760
✧.ಫಲಿತಾಂಶ: ಬ್ರಿಟಿಷರು ಭಾರತದಲ್ಲಿ ನಿರ್ಣಾಯಕವಾಗಿ ಫ್ರೆಂಚರನ್ನು ಸೋಲಿಸಿದರು. ಯೂರೋಪಿನಲ್ಲಿನ ಬ್ರಿಟಿಷ್ ಮತ್ತು ಫ್ರೆಂಚರ ನಡುವೆ ನಡೆದ ಏಳು ವರ್ಷಗಳ ಯುದ್ಧ (1756 -1763) ಈ ಯುದ್ಧಕ್ಕೆ ಕಾರಣ. ಬ್ರಿಟಿಷ್ ಮತ್ತು ಫ್ರೆಂಚರ ನಡುವೆ ಮೂರು ಕಾರ್ನಾಟಿಕ್ ಯುದ್ಧಗಳು ನಡೆದವು ಮತ್ತು ಈ ಯುದ್ಧವು ಮೂರನೇಯ ನೇ ಕಾರ್ನಾಟಿಕ್ ಯುದ್ದದ ಭಾಗವಾಗಿತ್ತು.


●.12.ಬಕ್ಸಾರ್ ಕದನ :
•┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1764
✧.ಫಲಿತಾಂಶ: ಬ್ರಿಟಿಷರು ಮೀರ್ ಖಾಸಿಮ್, ಶುಜಾ-ಉದ್-ದೌಲಾ (ಔದ್ಧಿನ ನವಾಬ್) ಮತ್ತು ಶಾ ಆಲಮ್ II (ಮೊಘಲ್ ಚಕ್ರವರ್ತಿ) ರು ಒಡಗೂಡಿದ ಸಂಯೋಜಿತ ಪಡೆಗಳನ್ನು ಸೋಲಿಸಿದರು.


●.13.ಸಮುಘರ್ ಕದನ :
•┈┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1658
✧.ಫಲಿತಾಂಶ: ಔರಂಗಜೇಬನು ದಾರಾ ಶಿಕೊಹ್ ನನ್ನು ಸೋಲಿಸಿದನು.


●.14.ಕರ್ನಾಲ್ ಕದನ :
•┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1739
✧.ಫಲಿತಾಂಶ: ನಾದಿರ್ ಷಾನು ಮುಘಲ್ ದೊರೆ ಮೊಹಮ್ಮದ್ ಶಾನನ್ನು ಸೋಲಿಸಿದರು.

2 comments:

  1. ನೇರವಾಗಿ face book ಗೆ post ಮಾಡಿ

    ReplyDelete
  2. ನೇರವಾಗಿ face book ಗೆ post ಮಾಡಿ

    ReplyDelete