☀5.ಕರ್ನಾಟಕ ರಾಜ್ಯದ ಭೂ ಸ್ಥಳ (ಮೇಲ್ಮೈ) ಲಕ್ಷಣಗಳು:
Unit 2.ಕರ್ನಾಟಕ ರಾಜ್ಯದ ಭೂ ಭೌತ ಲಕ್ಷಣಗಳು:.. ಮುಂದುವರೆದ ಭಾಗ...
(Karnataka land (surface) features)
━━━━━━━━━━━━━━━━━━━━━━━━━━━━━━━━━━━━━━━━━━━━━
♦.(ಕರ್ನಾಟಕ ಪ್ರಾಕೃತಿಕ ಭೂಗೋಳ)
(Karnataka physical Geography)
●.5. ಭೂ ಸ್ಥಳ (ಮೇಲ್ಮೈ) ಲಕ್ಷಣ:
•┈┈┈┈┈┈┈┈┈┈┈┈┈┈┈┈┈┈┈•
— ಸ್ಥಳ ಲಕ್ಷಣಗಳ ಎಲ್ಲ ವ್ಯತ್ಯಯಗಳ ನಮೂನೆಗಳನ್ನು ಕರ್ನಾಟಕ ಪ್ರತಿನಿಧಿಸುತ್ತದೆ. ಉನ್ನತ ಪರ್ವತಗಳು, ಪ್ರಸ್ಥಭೂಮಿ, ಶೇಷ ಗುಡ್ಡಗಳು ಹಾಗೂ ಕರಾವಳಿ ಬಯಲು. ರಾಜ್ಯವು ಪಶ್ಚಿಮ, ಪೂರ್ವ ಮತ್ತು ದಕ್ಷಿಣದಲ್ಲಿ ಪರ್ವತಮಾಲೆಯಿಂದ ಆವೃತವಾಗಿದೆ. ಆದರೆ ರಾಜ್ಯದ ಪ್ರಧಾನ ಲಕ್ಷಣವೆಂದರೆ ಪ್ರಸ್ಥಭೂಮಿ.
●.ಸರಾಸರಿ ಸಮುದ್ರ ಮಟ್ಟದಿಂದ ಪ್ರಸ್ಥಭೂಮಿಯು 600 ರಿಂದ 900 ಮೀಟರ್ ಎತ್ತರದಲ್ಲಿದೆ. ಇಡೀ ಭೂ ದೃಶ್ಯ ಅಂಕುಡೊಂಕಾಗಿದ್ದು, ಪರ್ವತಗಳಿಂದ, ಆಳ ಕಮರಿಗಳಿಂದ ಛೇದಿತವಾಗಿದೆ. ಅರಬ್ಬೀ ಸಮುದ್ರಕ್ಕೆ ಎದುರಾಗಿರುವ ಕಿರಿದಾದ ಕರಾವಳಿ ಪಟ್ಟಿಯಲ್ಲಿ ಮಾತ್ರ ಸರಾಸರಿ ಸಮುದ್ರ ಮಟ್ಟಕ್ಕಿಂತ ಮೇಲೆ 300 ಮೀಟರಿಗಿಂತ ಕಡಿಮೆ ಎತ್ತರದ ಮೈದಾನವನ್ನು ಕಾಣಬಹುದು. 1,500 ಮೀಟರಿಗಿಂತ ಹೆಚ್ಚು ಎತ್ತರದ ಕೆಲವೇ ಶೃಂಗಗಳು ಪಶ್ಚಿಮ ಮತ್ತು ಪೂರ್ವ ಘಟ್ಟದ ಸಮೂಹದಲ್ಲಿವೆ.
●.ಪಶ್ಚಿಮಘಟ್ಟವನ್ನು ಪಶ್ಚಿಮ ಪೂರ್ವ ದಿಕ್ಕುಗಳಲ್ಲಿ ಅಡ್ಡ ಕೊಯ್ದಂತೆ ಚಿತ್ರ ಪಡೆಯುವುದಾದರೆ ನಾವು ಸಾಮಾನ್ಯವಾಗಿ ಮೊದಲು ಕಿರಿದಾದ ಕರಾವಳಿ ಬಯಲು, ಮುಂದೆ ಪೂರ್ವಕ್ಕೆ ಹಾಯ್ದಂತೆ ಚಿಕ್ಕ ಚಿಕ್ಕ ಪ್ರಸ್ಥಭೂಮಿಗಳನ್ನು ವಿವಿಧ ಔನ್ನತ್ಯದಲ್ಲಿ ಕಾಣುತ್ತೇವೆ. ಮುಂದುವರಿದಂತೆ ದಿಢೀರೆಂದು ಬಹು ಎತ್ತರದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದರ ನಂತರ ಪೂರ್ವಕ್ಕೆ ಇಳಿಜಾರು ಎದುರಾಗುತ್ತದೆ. ಹಾಗೆಯೇ ಪೂರ್ವ, ಉತ್ತರ ಮತ್ತು ಪಶ್ಚಿಮಕ್ಕೆ ಇಳಿಜಾರು ತೋರುವ ಪ್ರಸ್ಥಭೂಮಿ ಎದುರಾಗುತ್ತದೆ.
●.ಕರ್ನಾಟಕದ ಉನ್ನತ ಗಿರಿಶೃಂಗಗಳ ಪೈಕಿ ಮುಖ್ಯವಾದವುಗಳೆಂದರೆ ,
ಮುಳ್ಳಯ್ಯನಗಿರಿ (1,925 ಮೀಟರ್), ಬಾಬಾಬುಡನ್‍ಗಿರಿ (ಚಂದ್ರದ್ರೋಣ ಪರ್ವತ-1,894 ಮೀಟರ್), ಮತ್ತು ಕುದುರೆಮುಖ (1,895 ಮೀಟರ್). ಇವೆಲ್ಲವೂ ಚಿಕ್ಕಮಗಳೂರು ಜಿಲ್ಲೆಯಲ್ಲೇ ಇವೆ. ಪುಷ್ಪಗಿರಿ (1,908 ಮೀಟರ್) ಕೊಡಗು ಜಿಲ್ಲೆಯಲ್ಲಿದೆ.
(ಕೃಪೆ: ಕರ್ನಾಟಕ ಕೈಪಿಡಿ)

No comments:
Post a Comment