"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 12 September 2015

☀ಭಾರತದ ಪ್ರಮುಖ ಶೇರು ವಿನಿಮಯ ಕೇಂದ್ರಗಳು : (The major stock exchange Centers in India)

☀ಭಾರತದ ಪ್ರಮುಖ ಶೇರು ವಿನಿಮಯ ಕೇಂದ್ರಗಳು :
(The major stock exchange Centers in India)
━━━━━━━━━━━━━━━━━━━━━━━━━━━━━━━━━━━━━━━━━━━━━
★ಭಾರತದ ಅರ್ಥವ್ಯವಸ್ಥೆ
(Indian Economics)


●.ಮುಂಬಯಿ ಶೇರು ವಿನಿಮಯ ಕೇಂದ್ರ :
•┈┈┈┈┈┈┈┈┈┈┈┈┈┈┈┈┈┈┈┈┈•
✧. ಇದು ಏಶಿಯಾದ ಮೊಟ್ಟ ಮೊದಲ ಶೇರು ವಿನಿಮಯ ಕೇಂದ್ರ ( ಎನಿಸಿದೆ, ಹಾಗೂ 1956ರ ಭದ್ರತಾ ಗುತ್ತಿಗೆ ನಿಯಮಾವಳಿ ಕಾಯ್ದೆಯಡಿ ಖಾಯಂ ಮಾನ್ಯತೆಗೆ ಪಾತ್ರವಾದ ದೇಶದ ಮೊದಲ ಶೇರು ವಿನಿಮಯ ಕೇಂದ್ರವಾಗಿದೆ.

✧. ಇದರ ಸ್ಥಾಪನೆ - 1875 ರಲ್ಲಿ.

✧. ಈ ಕೇಂದ್ರ ಕಳೆದ 137 ವರ್ಷಗಳಲ್ಲಿ ಅತಿ ಆಸಕ್ತಿದಾಯಕ ಆದ್ಯತೆಯನ್ನುಗಳಿಸಿದೆ. ಇದು ಭಾರತೀಯ ಕಾರ್ಪೊರೇಟ್ ವಲಯಕ್ಕೆ ಬಂಡವಾಳ ಎತ್ತಲು ವೇದಿಕೆಯಾಗಿ ಅವುಗಳ ಬೆಳವಣಿಗೆಗೆ ಅವಕಾಶ ಕಲ್ಪಿಸಿದೆ.

✧. ಅತಿ ಹೆಚ್ಚು (4900ಕ್ಕೂ ಹೆಚ್ಚು) ಲಿಸ್ಟೆಡ್ ಕಂಪನಿಗಳನ್ನು ಹೊಂದಿದ ವಿಶ್ವದ ಅಗ್ರ ಮಾನ್ಯ ವಿನಿಮಯ ಕೇಂದ್ರ ಇದಾಗಿದ್ದು. ವಿದ್ಯುನ್ಮಾನ ವಹಿವಾಟು ವ್ಯವಸ್ಥೆ ಮೂಲಕ ಕಾರ್ಯ ನಿರ್ವಹಿಸುವ ವಿಶ್ವದ ಐದನೇ ಸಕ್ರಿಯ ವಿನಿಮಯ ಕೇಂದ್ರವೆನಿಸಿದೆ.

✧. ಭಾರತದಲ್ಲಿ ಸೆಕ್ಯುರಿಟೀಸ್ ಶೇರುಗಳ ವ್ಯಾಪಾರ ಆರಂಭಿಸಿದ ಮುಂಬಯಿ ಶೇರು ವಿನಿಮಯ ನಿಯಮಿತವು 1995ರಲ್ಲಿ ಬಿಎಸ್‍ಇ ಆನ್‍ ಲೈನ್ ವಹಿವಾಟು ವ್ಯವಸ್ಥೆ ಮೂಲಕ ಸಂಪೂರ್ಣವಾಗಿ ಸ್ವಯಂ ಚಾಲಿತ ವ್ಯಾಪಾರ ನಿರ್ವಹಣೆಗೆ (ಬಿಓಎಲï ಟಿ)ಮುಂದಾಯಿತು.

✧.ಈ ವ್ಯವಸ್ಥೆಯನ್ನು 1997ರಲ್ಲಿ ದೇಶ ವ್ಯಾಪ್ತಿ ವಿಸ್ತರಿಸಲಾಯಿತು.

✧.ಐಎಸ್‍ಓ 9001; 2000 ಪ್ರಮಾಣ ಪತ್ರವನ್ನು ಪಡೆದ ವಿಶ್ವದ ಎರಡನೇ ವಿನಿಮಯ ಕೇಂದ್ರ ಮುಂಬಯಿ ಶೇರು ವಿನಿಮಯ ಕೇಂದ್ರವಾಗಿದೆ.

✧. ಆನ್ ಲೈನ್ ವಹಿವಾಟಿಗಾಗಿ ಸೆಕ್ಯುರಿಟಿ ನಿರ್ವಹಣಾ ವ್ಯವಸ್ಥೆಯ ಗುಣಮಟ್ಟ ಬಿಎಸ್ 7799-2-2002 ಪ್ರಮಾಣ ಪತ್ರವನ್ನು ಪಡೆದ ಜಗತ್ತಿನ ಎರಡನೆ ವಿನಿಮಯ ಕೇಂದ್ರವಾಗಿದೆ. ಇದು ಸದ್ಯ ಐಎಸ್‍ಓ 27001; 2005 ಪ್ರಮಾಣ ಪತ್ರವನ್ನು ಹೊಂದಿದೆ.


●.ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ :
•┈┈┈┈┈┈┈┈┈┈┈┈┈┈┈┈┈┈┈┈┈•
✧. ಹೊಸ ಶೇರು ವಿನಿಮಯ ಕೇಂದ್ರಗಳ ಸ್ಥಾಪನೆ ಕುರಿತಾದ ಉನ್ನತಾಧಿಕಾರದ ಅಧ್ಯಯನ ಗುಂಪಿನ ವರದಿ ಆಧಾರದ ಮೇಲೆ ಭಾರತಕ್ಕೆ ರಾಷ್ಟ್ರೀಯ ಶೇರು ವಿನಿಮಯ ನಿಯಮಿತ ಅಸ್ತಿತ ಬಂದಿದೆ.

✧. ದೇಶದೆಲ್ಲೆಡೆ ಹೂಡಿಕೆದಾರರಿಗೆ ಲಭ್ಯವಿರುವಂತೆ ಹಣಕಾಸು ಸಂಸ್ಥೆಗಳಿಂದ ರಾಷ್ಟ್ರೀಯ ಶೇರು ವಿನಿಮಯ ನಿಯಮಿತವನ್ನು ಅಭಿವೃದ್ಧಿ ಪಡಿಸುವಂತೆ ಬಂದ ಶಿಫಾರಸಿನನ್ವಯ ಈ ವ್ಯವಸ್ಥೆ ರೂಪುಗೊಂಡಿದೆ.

✧. ಭಾರತದ ರಾಷ್ಟ್ರೀಯ ಶೇರು ವಿನಿಮಯ ನಿಯಮಿತವು 1992 ನವೆಂಬರ್‍ನಲ್ಲಿ ತೆರಿಗೆ ಸಲ್ಲಿಸುವ ಕಂಪನಿಯಾಗಿ ಹೊರಹೊಮ್ಮಿತು.

(ಕೃಪೆ : ಯೋಜನಾ)

No comments:

Post a Comment