"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 5 September 2015

☀ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು) : ✧.3) 2014 ರ ಜಾಗತಿಕ ಇ–ತ್ಯಾಜ್ಯದ ಪ್ರಮಾಣ: ವಿಶೇಷ ವರದಿ: (Special Reports-figures on World E-Waste)

☀ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು) :
✧.3) 2014 ರ ಜಾಗತಿಕ ಇ–ತ್ಯಾಜ್ಯದ ಪ್ರಮಾಣ: ವಿಶೇಷ ವರದಿ:
(Special Reports-figures on World E-Waste)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು)
(Current useful surveys and special reports-figures)

★ ಪ್ರಚಲಿತ ಘಟನೆಗಳು.
(Current Affairs)


●. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಇ–ತ್ಯಾಜ್ಯ ಉತ್ಪಾದನೆ ಮಾಡುವ ರಾಷ್ಟ್ರಗಳ ಪಟ್ಟಿ ಯ ಲ್ಲಿ ಭಾರತ ಐದನೇ ಸ್ಥಾನದಲ್ಲಿದೆ.

●. 2014ರಲ್ಲಿ 17 ಲಕ್ಷ ಟನ್‌ಗಳಷ್ಟು ಎಲೆಕ್ಟ್ರಾನಿಕ್‌ ಮತ್ತು ಎಲೆಕ್ಟ್ರಾನಿಕ್‌ ಉಪಕರಣಗಳ ತ್ಯಾಜ್ಯಗಳನ್ನು ಉತ್ಪಾದಿಸಿದೆ.

●. ಜಾಗತಿಕ ಇ–ತ್ಯಾಜ್ಯದ ಪ್ರಮಾಣವು ಮುಂದಿನ ಮೂರು ವರ್ಷಗಳಲ್ಲಿ ಶೇ 21ರಷ್ಟು ಹೆಚ್ಚುವ ಸಾಧ್ಯತೆ ಇದ್ದು, 500 ಲಕ್ಷ ಟನ್‌ಗಳಿಗೆ ಏರಿಕೆಯಾಗಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

●. 2014ರಲ್ಲಿ ಅಮೆರಿಕ ಮತ್ತು ಚೀನಾ ಶೇ 36ರಷ್ಟು ಇ–ತ್ಯಾಜ್ಯ ಉತ್ಪಾದಿಸಿವೆ ಎಂದು ವಿಶ್ವಸಂಸ್ಥೆಯ ‘ಜಾಗತಿಕ ಇ–ತ್ಯಾಜ್ಯ ಮೇಲ್ವಿಚಾರಣೆ–2014ರಲ್ಲಿ ವಿವರಿಸಲಾಗಿದೆ.

●. ಅಮೆರಿಕ, ಚೀನಾ, ಜಪಾನ್‌ ಮತ್ತು ಜರ್ಮನಿ ನಂತರದ ಸ್ಥಾನದಲ್ಲಿ ಭಾರತ ಇದೆ.

●. ಜಾಗತಿಕ ಮಟ್ಟದಲ್ಲೇ ಏಷ್ಯಾದಲ್ಲಿ ಅತಿ ಹೆಚ್ಚು ಅಂದರೆ 160 ಲಕ್ಷ ಟನ್‌ ಅಥವಾ ಪ್ರತಿ ವ್ಯಕ್ತಿಗೆ 3.7 ಕೆ.ಜಿಯಷ್ಟು ಇ–ತ್ಯಾಜ್ಯ ಉತ್ಪಾದನೆಯಾಗಿದೆ. ಇದರಲ್ಲಿ ಚೀನಾ, ಜಪಾನ್‌ ಮತ್ತು ಭಾರತ ಮುಂಚೂಣಿ ಯಲ್ಲಿವೆ.

●. ಆಫ್ರಿಕಾ ದೇಶದಲ್ಲಿ ಪ್ರತಿ ವ್ಯಕ್ತಿಗೆ ಕೇವಲ 1.7ಕಿ.ಗ್ರಾಂನಷ್ಟು ಮಾತ್ರ ಇ–ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಈ ದೃಷ್ಟಿಯಂದ ಅತಿ ಕಡಿಮೆ ಇ–ತ್ಯಾಜ್ಯ ಉತ್ಪಾದಿಸುವ ದೇಶ ಎನಿಸಿಕೊಂಡಿದೆ.

●. ಒಟ್ಟು ಇ–ತ್ಯಾಜ್ಯದಲ್ಲಿ ಶೇ 60ರಷ್ಟು ಅತಿ ಹೆಚ್ಚಿನ ಇ–ತ್ಯಾಜ್ಯವು ಗೃಹ ಬಳಕೆ ಮತ್ತು ವ್ಯಾಪಾರ ಉದ್ದೇಶಗಳಿಗೆ ಬಳಸಿರುವ ಎಲೆಕ್ಟ್ರಾನಿಕ್‌ ಉಪಕರಣ ಗಳಿಂದ ಸೃಷ್ಟಿಯಾಗಿವೆ.

●. 2014ರಲ್ಲಿ ಉತ್ಪಾದನೆಯಾಗಿರುವ ಇ–ತ್ಯಾಜ್ಯದಲ್ಲಿ 16,500 ಕಿ.ಟನ್‌ಗಳಷ್ಟು ಕಬ್ಬಿಣ, 1,900 ಕಿ.ಟನ್‌ಗಳಷ್ಟು ತಾಮ್ರ ಮತ್ತು 300 ಟನ್‌ಗಳಷ್ಟು ಚಿನ್ನ ಒಳಗೊಂಡಿದೆ. ಇಷ್ಟೇ ಅಲ್ಲದೆ, ಬೆಳ್ಳಿ, ಪ್ಲಾಸ್ಟಿಕ್‌, ಅಲ್ಯುಮಿನಿಯಂ ತ್ಯಾಜ್ಯ ಗಳೂ ಸೇರಿಕೊಂಡಿವೆ.

No comments:

Post a Comment