"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 4 September 2015

☀ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು) : ✧.1) 2015 ರ ರಾಷ್ಟ್ರೀಯ ಸೈಬರ್‌ ಅಪರಾಧ ಪ್ರಕರಣ: ವಿಶೇಷ ವರದಿ: (Special Reports-figures on National Cyber Crime)

☀ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು) :
✧.1) 2015 ರ ರಾಷ್ಟ್ರೀಯ ಸೈಬರ್‌ ಅಪರಾಧ ಪ್ರಕರಣ: ವಿಶೇಷ ವರದಿ:
(Special Reports-figures on National Cyber Crime)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು)
(Current useful surveys and special reports-figures)

★ ಪ್ರಚಲಿತ ಘಟನೆಗಳು.
(Current Affairs)


●.ದೇಶದಲ್ಲಿ ಕಳೆದ ವರ್ಷ ದಾಖಲಾದ ಸೈಬರ್‌ ಅಪರಾಧ ಪ್ರಕರಣಗಳ ಪ್ರಮಾಣ ಶೇ 69ರಷ್ಟು ಹೆಚ್ಚಾಗಿದೆ. ಅದೇ ರೀತಿ ಅಪರಾಧಿಗಳ ಬಂಧನ ಪ್ರಮಾಣವೂ ಶೇ 74.3ರಷ್ಟು ಹೆಚ್ಚಾಗಿದೆ.

●.ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪೊಲೀಸರು 2014ರಲ್ಲಿ ಒಟ್ಟು 9,622 ಸೈಬರ್‌ ಅಪರಾಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

●.ಆ ಪೈಕಿ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿಯೇ ಶೇ 48.18 ರಷ್ಟು ಪ್ರಕರಣಗಳು (5,693) ದಾಖಲಾಗಿವೆ.

●.ಆ ಪೈಕಿ ಮಹಾರಾಷ್ಟ್ರದಲ್ಲಿ 1,879 ಪ್ರಕರಣ ದಾಖಲಾಗಿದ್ದು ಅಗ್ರ ಸ್ಥಾನದಲ್ಲಿದೆ. ಉತ್ತರ ಪ್ರದೇಶ (1,737 ಪ್ರಕರಣ) ಹಾಗೂ ಕರ್ನಾಟಕ (1020 ಪ್ರಕರಣ) ಕ್ರಮವಾಗಿ ನಂತರದ ಸ್ಥಾನದಲ್ಲಿವೆ.

●.ಮಾಹಿತಿ ತಂತ್ರಜ್ಞಾನದ ಸೆಕ್ಷನ್‌ 66ಎ ಅಡಿ ದಾಖಲಾದ ಒಟ್ಟು 4,192 ಪ್ರಕರಣಗಳಲ್ಲಿಯೂ ಉತ್ತರ ಪ್ರದೇಶ (898) ಮತ್ತು ಕರ್ನಾಟಕ (603) ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿವೆ. ಅಸ್ಸಾಂನಲ್ಲಿ 377 ಪ್ರಕರಣ ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಮಂಡಳಿ (ಎನ್‌ಸಿಆರ್‌ಬಿ) ವರದಿ ಹೇಳಿದೆ.

●.ಸಾಮಾಜಿಕ ಜಾಲತಾಣ, ಅಂತರ್ಜಾಲದಂಥ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಅಶ್ಲೀಲ ಚಿತ್ರ, ಸಾಹಿತ್ಯ ಪ್ರಕಟಿಸಿದ್ದಕ್ಕೆ ಸಂಬಂಧಿಸಿದ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲೂ ಕರ್ನಾಟಕ (375) ಹಾಗೂ ಉತ್ತರ ಪ್ರದೇಶ (371) ಮೊದಲೆರಡು ಸ್ಥಾನದಲ್ಲಿವೆ.

●.ಸೈಬರ್‌ ಮಾಧ್ಯಮದ ಮೂಲಕ ದಾಖಲಾದ ಮೋಸ, ವಂಚನೆ 1,115 ಪ್ರಕರಣಗಳಲ್ಲಿ ಮಹಾರಾಷ್ಟ್ರ (671) ಮೊದಲ ಸ್ಥಾನದಲ್ಲಿದೆ.

●.ಸೈಬರ್‌ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿಸಲಾದ 5,603 ಜನರಲ್ಲಿ 118 ಮಹಿಳೆಯರಿದ್ದಾರೆ. ಸೆಕ್ಷನ್‌ 66ಎ ಪ್ರಕರಣಗಳಲ್ಲಿ ಬಂಧಿಸಲಾದ 2,402 ಮಂದಿಯಲ್ಲಿ 29 ಮಹಿಳೆಯರಿದ್ದಾರೆ.

(ಕೃಪೆ : ಪ್ರಜಾವಾಣಿ)

1 comment: