"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 23 September 2015

☀"ಮಾದರಿ ಪ್ರಶ್ನೆ ಪತ್ರಿಕೆ 2-2015 ಸಾಮಾನ್ಯ ಜ್ಞಾನ. (ಎಸ್ ಡಿ ಎ (SDA) ಮತ್ತು ಎಫ್ ಡಿ ಎ (FDA) ಪರೀಕ್ಷಾ ವಿಶೇಷಾಂಕ) ●ಸಾಮಾನ್ಯ ಜ್ಞಾನ (GENERAL KNOWLEDGE)  (SDA/FDA GK MODEL QUESTION PAPER-II-2015)

☀"ಮಾದರಿ ಪ್ರಶ್ನೆ ಪತ್ರಿಕೆ 2-2015 ಸಾಮಾನ್ಯ ಜ್ಞಾನ.
(ಎಸ್ ಡಿ ಎ (SDA) ಮತ್ತು ಎಫ್ ಡಿ ಎ (FDA) ಪರೀಕ್ಷಾ ವಿಶೇಷಾಂಕ)
●ಸಾಮಾನ್ಯ ಜ್ಞಾನ (GENERAL KNOWLEDGE)

(SDA/FDA GK MODEL QUESTION PAPER-II-2015)
━━━━━━━━━━━━━━━━━━━━━━━━━━━━━━━━━━━━━━━━━━━━━

●.ಸೂಚನೆಗಳು :

★ ಇಲ್ಲಿ ತಯಾರಿಸಲಾದ ಸಾಮಾನ್ಯ ಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ 2 ಯು ಸಹ ಮೊದಲನೆಯ ಮಾದರಿ ಪ್ರಶ್ನೆ ಪತ್ರಿಕೆಯಂತೆ ಕೇವಲ ಎಸ್ ಡಿ ಎ (SDA) ಮತ್ತು ಎಫ್ ಡಿ ಎ (FDA) ಪರೀಕ್ಷೆಗಷ್ಟೇ ಸೀಮಿತಗೊಳಪಡಿಸದೇ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುವ ದೃಷ್ಟಿಯಿಂದ ತಯಾರಿಸಲಾಗಿದೆ.

★ ಸ್ಪರ್ಧಾಳುಗಳ ಸಲಹೆಯಂತೆ ನಾನು ಉತ್ತರಗಳ ಸಹಿತ ಪ್ರಶ್ನೆ ಪತ್ರಿಕೆಯನ್ನು ಇಲ್ಲಿ ಪ್ರಕಟಿಸಿದ್ದು, ಕಾರಣ ಶೀಘ್ರದಲ್ಲೇ ಸಮೀಪಿಸುತ್ತಿರುವ ಮುಖ್ಯ ಪರೀಕ್ಷೆಗಳು ಹಾಗೂ ಸಮಯದ ಅಭಾವದಿಂದಾಗಿ.

★ ಹಿಂದೆ ನಡೆಸಲ್ಪಟ್ಟ ಪ್ರಶ್ನೆ ಪತ್ರಿಕೆಯನ್ನುಗಮನದಲ್ಲಿಡ್ಟುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಈ ಮಾದರಿ ಪ್ರಶ್ನೆ ಪತ್ರಿಕೆ 2 ನ್ನು ತಯಾರಿಸಲಾಗಿದ್ದು, ಏನಾದರೂ ಪ್ರಮಾದ ಕಂಡುಬಂದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿಸಿಕೊಳ್ಳುವೆ.

★ ತಾವು ನಿಮ್ಮ ಸರಿ ಉತ್ತರಗಳನ್ನು ನನಗೆ ಕಮೆಂಟ್ ಮೂಲಕ ತಿಳಿಸಿ.

— ನಿಮ್ಮ ಸಲಹೆಗಳು ನನಗೆ ಅತ್ಯಮೂಲ್ಯವಾದವುಗಳು.

•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•


ಪ್ರಶ್ನೆ ನಂ: 1) ಫುಟ್ಬಾಲ್ ಮತ್ತು ಕ್ರಿಕೆಟ್ ಕ್ರೀಡೆಗಳ ವಿಶ್ವಕಪ್ ಪಂದ್ಯಾವಳಿಗಳನ್ನು ಆಡಿದ ವಿಶ್ವದ ಏಕೈಕ ಆಟಗಾರ ಯಾರು ?
1. ಎ.ಬಿ.ಡಿವಿಲಿಯರ್ಸ್
2. ಗ್ಯಾರಿ ಸೋಬರ್ಸ್
3. ವಿವಿಯನ್ ರಿಚರ್ಡ್ಸ್√
4. ರೋಜರ್ ಮಿಲ್ಲಾ


ಪ್ರಶ್ನೆ ನಂ: 2) ಇತ್ತೀಚೆಗೆ ನಿಧನರಾದ 'ದೇವನ್ ವರ್ಮಾ'ರವರಿಗೆ 3ನೇ ಬಾರಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತಂದುಕೊಟ್ಟ ಚಿತ್ರ ಯಾವುದು?
A] ಅಂಗೂರ್√
B] ಧರ್ಮಪುತ್ರ
C] ಅನುಪಮಾ
D] ಭಾಮೋಶಿ


ಪ್ರಶ್ನೆ ನಂ: 3) 2014 ರ FIFA ಫುಟ್ಬಾಲ್ ವಿಶ್ವಕಪ್ ನಲ್ಲಿ ಫೈನಲ್ ಪಂದ್ಯವನ್ನು ಆಡಿದ ರಾಷ್ಟ್ರಗಳು ಯಾವುವು?
A] ಬ್ರೆಜಿಲ್ ಮತ್ತು ಜರ್ಮನಿ
B] ಜರ್ಮನಿ ಮತ್ತು ಇಟಲಿ
C] ಅರ್ಜೆಂಟೈನ ಮತ್ತು ನೆದರ್‌ಲ್ಯಾಂಡ್
D] ಅರ್ಜೆಂಟೈನ ಮತ್ತು ಜರ್ಮನಿ √


ಪ್ರಶ್ನೆ ನಂ: 4) ಇತ್ತೀಚೆಗೆ ಆಂಧ್ರ ಪ್ರದೇಶದ ನೂತನ ರಾಜಧಾನಿಯಾಗಿ ಘೋಸಿಸಲ್ಪಟ್ಡ ಐತಿಹಾಸಿಕ ಪಟ್ಟಣ ಯಾವುದು?
A] ಅಮರಾವತಿ √
B] ಚಿದಂಬರಂ
C] ವೈಜಯಂತಿ
D] ಅಮರೇಶ್ವರ್


ಪ್ರಶ್ನೆ ನಂ: 5) 2015 ರ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ (Captain) ಯಾರು?
A] ಅಲ್ಲನ್ ಬಾರ್ಡರ್
B] ಸ್ವಿಟ್ ವಾಘ್
C] ತಿಕೋಟದಲ್ಲಿ ಪಾಂಟಿಂಗ್
D] ಮೈಕೆಲ್ ಕ್ಲಾರ್ಕ್ √

ಪ್ರಶ್ನೆ ನಂ: 6) ಸೂರ್ಯ ಮತ್ತು ನಕ್ಷತ್ರಗಲ್ಲಿ ಶಕ್ತಿಯು ಈ ಕೆಳಕಂಡ ಪ್ರಕ್ರಿಯೆಯಿಂದ ಬಿಡುಗಡೆಯಾಗುತ್ತದೆ?
A] ಹಗುರ ನ್ಯೂಕ್ಲಿಯಸ್ ಗಳ ಸಮ್ಮಿಲನದಿಂದ ಭಾರವಾದ ನ್ಯೂಕ್ಲಿಯಸ್ ಗಳು ರೂಪುಗೊಳ್ಳುವುದು.√    
B] ಭಾರವಾದ ನ್ಯೂಕ್ಲಿಯಸ್ ಗಳು ವಿದಳನಗೊಂಡು ಹಗುರ ನ್ಯೂಕ್ಲಿಯಸ್ ಗಳಾಗುವುದು.
C] ಅನಿಲಗಳ ದಹನ ಕ್ರಿಯೆ
D] ರೇಡಿಯೋ ವಿಕಿರಣ ಕ್ರಿಯೆ


ಪ್ರಶ್ನೆ ನಂ: 7) ಅಂಕೋಲಾದ ಉಪ್ಪಿನ ಸತ್ಯಾಗ್ರಹ ನೇತೃತ್ವವನ್ನು ವಹಿಸಿದವರು ಯಾರು?
A] ಎಂ.ಪಿ.ನಾಡಕರ್ಣಿ√
B] ಆರ್.ಆರ್.ದಿವಾಕರ್
C] ಮಂಜಪ್ಪ ಹರ್ಡಿಕರ್
D] ಪಂಡಿತ ತಾರಾನಾಥ


ಪ್ರಶ್ನೆ ನಂ: 8) 'ಸಾರ್ಕ್ ವಿಕೋಪ ನಿರ್ವಹಣಾ ಕೇಂದ್ರ' ಯಾವ ಸ್ಥಳದಲ್ಲಿ ಪ್ರಾರಂಭಿಸಲ್ಪಟ್ಟಿದೆ?
A] ಮುಂಬಯಿ
B] ಬೆಂಗಳೂರು
C] ನವ ದೆಹಲಿ√
D] ನೊಯಿಡಾ


ಪ್ರಶ್ನೆ ನಂ: 9) ಭೂಮಿಯ ವಿಮೋಚನೆ ವೇಗ ಎಷ್ಟು?
A] 11.2 ಕಿ.ಮೀ / ಸೆಕೆಂಡ್√
B] 11.0 ಕಿ.ಮೀ / ಸೆಕೆಂಡ್
C] 12.2 ಕಿ.ಮೀ / ಸೆಕೆಂಡ್
D] 11.6 ಕಿ.ಮೀ / ಸೆಕೆಂಡ್


ಪ್ರಶ್ನೆ ನಂ: 10) ಈ ಕೆಳಗಿನ ಯಾವ ಹೇಳಿಕೆ ಯಾವುದು ತಪ್ಪಾಗಿದೆ?
1.ರಾಜ್ಯದಲ್ಲಿ 6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಲಿಂಗಾನುಪಾತ: 943.
2.ರಾಜ್ಯದಲ್ಲಿ ಜನ ಸಾಂದ್ರತೆ ಪ್ರಮಾಣ ಪ್ರತಿ ಚದುರ ಕಿ.ಮೀ.ಗೆ: 319.
3.ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ 2011ರಲ್ಲಿ ಶೇ.75.60ಕ್ಕೆ ಏರಿಕೆಯಾಗಿದೆ.
-ಸಂಕೇತಗಳು
A] 1 ಮತ್ತು 2 ಮಾತ್ರ
B] 2 ಮತ್ತು 3 ಮಾತ್ರ
C] 1 ಮತ್ತು 3 ಮಾತ್ರ
D] ಎಲ್ಲವೂ ಸರಿ.√


ಪ್ರಶ್ನೆ ನಂ: 11) ಹೊಂದಿಸಿ ಬರೆಯಿರಿ.

   ಮರುಭೂಮಿಗಳು ದೇಶ
ಎ) ತಾಕ್ಲಾ ಮಾಕಾನ್ 1) ಆಸ್ಟ್ರೇಲಿಯಾ                                  
ಬಿ) ಕಲಹರಿ 2) ಚಿಲಿ
ಸಿ) ಗ್ರೇಟ್ ವಿಕ್ಟೋರಿಯಾ 3) ಚೀನಾ
ಡಿ) ಪಟಗೋನಿಯನ್ 4) ದಕ್ಷಿಣ ಆಪ್ರಿಕಾ
ಇ) ಅಟಕಾಮಾ 5) ಅರ್ಜೆಂಟೈನಾ
-ಸಂಕೇತಗಳು
ಎ)ಎ-1. ಬಿ-2. ಸಿ -3. ಡಿ-5. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -3. ಬಿ-4. ಸಿ -1. ಡಿ-5. ಇ-2√
ಡಿ)ಎ-1. ಬಿ-5. ಸಿ -2. ಡಿ-4. ಇ-3


ಪ್ರಶ್ನೆ ನಂ: 12) 'New India and Common Wheel' ಎಂಬ ಪತ್ರಿಕೆಗಳನ್ನು ಹೊರಡಿಸಿದವರು?
A] ಅನಿಬೆಸಂಟ್√
B] ದಾದಾಬಾಯಿ ನೌರೋಜಿ
C] ರಾಜಾರಾಮ್ ಮೋಹನ್ ರಾಯ್
D] ದೇವೇಂದ್ರನಾಥ ಠಾಗೋರ್


ಪ್ರಶ್ನೆ ನಂ: 13) ಹೊಂದಿಸಿ ಬರೆಯಿರಿ.

2014 ನೇ ಸಾಲಿನ ನೊಬೆಲ್‌ ಪ್ರಶಸ್ತಿಗಳು ಪುರಸ್ಕೃತರು
ಎ) ಸಾಹಿತ್ಯ ವಿಭಾಗ 1) ಕೈಲಾಶ್‌ ಸತ್ಯಾರ್ಥಿ ಮತ್ತು ಮಲಾಲ ಬಿ) ಶಾಂತಿ ವಿಭಾಗ 2) ಜಿನ್‌ ಟಿರೋಲ್‌
ಸಿ) ಅರ್ಥಶಾಸ್ತ್ರ ವಿಭಾಗ 3) ಜಾನ್ ಓ ಕೀಫೆ, ಬ್ರಿಟ್‌ ಮೋಸರ್‌ ಮತ್ತು ಎಡ್ವರ್ಡ್‌ ಐ
ಡಿ) ಸೈಕಲಾಜಿ ಅಥವಾ ಔಷಧಿ 4) ಪ್ಯಾಟ್ರಿಕ್‌ ಮೊಡಿಯಾನೊ
ಸಂಕೇತಗಳು
A] ಎ-1. ಬಿ-2. ಸಿ -3. ಡಿ-4.
B] ಎ-4. ಬಿ-1. ಸಿ-2. ಡಿ-3.√
C] ಎ -2. ಬಿ-1. ಸಿ -4. ಡಿ-3.
D] ಎ-1. ಬಿ-4. ಸಿ -3. ಡಿ-4.


ಪ್ರಶ್ನೆ ನಂ: 14) ಮಂಜುಗಡ್ಡೆಯು ನೀರಿನಲ್ಲಿ ತೇಲುತ್ತದೆ ಆದರೆ ಆಲ್ಕೋಹಾಲ್ ನಲ್ಲಿ ಮುಳುಗುತ್ತದೆ. ಏಕೆಂದರೆ,
A] ಇದು ನೀರಿನ ಶೀತಘನಿಕೃತ ರೂಪವಾಗಿದೆ.
B] ನೀರು ಆಲ್ಕೋಹಾಲ್ ಗಿಂತ ಪಾರದರ್ಶಕವಾಗಿದೆ.
C] ಮಂಜುಗಡ್ಡೆಯು ಘನವಸ್ತು, ಆದರೆ ಆಲ್ಕೋಹಾಲ್ ದ್ರವ ಪದಾರ್ಥ
D] ಮಂಜುಗಡ್ಡೆಯು ನೀರಿಗಿಂತ ಹಗುರ ಮತ್ತು ಆಲ್ಕೋಹಾಲ್ ಗಿಂತ ಭಾರ √


ಪ್ರಶ್ನೆ ನಂ: 15) ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ?
A] ದಕ್ಷಿಣ ಕನ್ನಡ
B] ಬಳ್ಳಾರಿ √
C] ಮಂಡ್ಯ
D] ಶಿವಮೊಗ್ಗ


ಪ್ರಶ್ನೆ ನಂ: 16) ನೀರು ಯಾವ ಉಷ್ಣಾಂಶದಲ್ಲಿ ಕುಗ್ಗುತ್ತದೆ ಮತ್ತು ಅಧಿಕ ಸಾಂದ್ರತೆ ಹೊಂದಿರುತ್ತದೆ?
A] 4°C√
B] 3°C
C] -4°C
D] 0°C


ಪ್ರಶ್ನೆ ನಂ: 17) ಲಿಥುವೇನಿಯಾ ಯೂರೋ ವಲಯಕ್ಕೆ ಸೇರಿದ ಎಷ್ಟನೆಯ ಸದಸ್ಯ ರಾಷ್ಟ್ರ?
A] 17 ನೇ ರಾಷ್ಟ್ರ
B] 18 ನೇ ರಾಷ್ಟ್ರ
C] 19 ನೇ ರಾಷ್ಟ್ರ
D] 20 ನೇ ರಾಷ್ಟ್ರ √.


ಪ್ರಶ್ನೆ ನಂ: 18) ರಾಷ್ಟ್ರೀಯ ಹ್ಯಾಂಡ್‌ಲೂಮ್‌ ದಿನಾಚರಣೆಯನ್ನು ಯಾವ ವರ್ಷದಿಂದ ಆಚರಣೆ ಮಾಡಲಾಗುತ್ತಿದೆ?
a) 7, ಆಗಸ್ಟ್  1984        
b) 7, ಆಗಸ್ಟ್  2015√
c) 7, ಆಗಸ್ಟ್  1999        
d) 7, ಆಗಸ್ಟ್  1989


ಪ್ರಶ್ನೆ ನಂ: 19) 'ಮುದ್ರಾ ಬ್ಯಾಂಕ' ಎಷ್ಟು ಮುಖ ಬಂಡವಾಳದೊಂದಿಗೆ ಆರಂಭಿಸಲ್ಪಟ್ಟಿದೆ?
A] 20,000 ಕೋ.ರೂ√
B] 25,000 ಕೋ.ರೂ
C] 50,000 ಕೋ.ರೂ
D] 1,00,000 ಕೋ.ರೂ


ಪ್ರಶ್ನೆ ನಂ: 20) 'ಮಿಷನ್ ಇಂದ್ರ ಧನುಷ್ 201' ಯಾವುದಕ್ಕೆ ಸಂಬಂಧಿಸಿದೆ?
A] ಸೌರ ಇಂಧನಕ್ಕೆ
B] ಬಾಲಕಿಯರ ಶಿಕ್ಷಣಕ್ಕೆ
C] ಮಕ್ಕಳ 7 ಮಾರಣಾಂತಿಕ ರೋಗಗಳಿಗೆ √
D] ಮೋಡ ಬಿತ್ತನೆಗೆ


ಪ್ರಶ್ನೆ ನಂ: 21) ಭಾರತೀಯ ರೇಲ್ವೆಯ ಸುಧಾರಣೆಗಾಗಿ ರಚಿಸಲಾದ 'ಕಾಯಕಲ್ಪ' ಮಂಡಳಿಯ ಮುಖ್ಯಸ್ಥರು ಯಾರು?
A] ರತನ್ ಟಾಟಾ √
B] ಎ.ಕೆ.ಮಿತ್ತಲ್
C] ಅಜಾಯಿ ಶಂಕರ್
D] ಅಶೋಕ ಚಾವ್ಲಾ


ಪ್ರಶ್ನೆ ನಂ: 22) ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ " ಡಿಜಿಟಲ್ ಇಂಡಿಯಾ " ಕ್ಕೆ ರಾಯಬಾರಿಯಾಗಿ ಆಯ್ಕೆಗೊಂಡವರು ಯಾರು ?
1. ಕತ್ರೀನಾ ಕೈಪ್
2. ಮಾಧುರಿ ದಿಕ್ಷಿತ್
3. ಕೃತ ಬಂದು
4. ಕೃತಿ ತಿವಾರಿ✅


ಪ್ರಶ್ನೆ ನಂ: 23) ಪ್ರಸ್ತುತ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡವರು ಯಾರು ?
A] ಜಾವೇದ್ ಉಸ್ಮಾನಿ
B] ಜಯಪ್ರಕಾಶ್ ಪಾಂಡೆ
C] ಪಿ.ಎನ್‌. ಶ್ರೀನಿವಾಸಾಚಾರಿ
D] ನಸೀಮ್ ಜೈಯ್ಧಿ √


ಪ್ರಶ್ನೆ ನಂ: 24) ಹೊಂದಿಸಿ ಬರೆಯಿರಿ.

ನಾಯಕರು ಸಮಾಧಿ ಸ್ಥಳ      
ಎ) ಮೊರಾರ್ಜಿ ದೇಸಾಯಿ 1) ವಿಜಯ್ ಘಾಟ್.                                  
ಬಿ) ಜಗಜೀವನ ರಾಂ 2) ನಾರಾಯಣ್ ಘಾಟ್.
ಸಿ) ಲಾಲ್ ಬಹದ್ದೂರ್ ಶಾಸ್ತ್ರಿ 3) ಅಭಯಘಾಟ್
ಡಿ) ಜವಾಹರಲಾಲ ನೆಹರು 4) ಸಮತಾಸ್ಥಳ
ಇ) ಗುಲ್ಜಾರಿ ಲಾಲ್ ನಂದಾ 5) ಶಾಂತಿವನ
ಸಂಕೇತಗಳು
ಎ)ಎ-3. ಬಿ-4. ಸಿ -1. ಡಿ-5. ಇ-2√
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3


ಪ್ರಶ್ನೆ ನಂ: 25) ಭಾರತದಲ್ಲಿ ಸಂವಿಧಾನದ ಮೊದಲನೇ ತಿದ್ದುಪಡಿ ಈ ಕೆಳಕಂಡ ಯಾವ ದಿನಾಂಕದಂದು ಜಾರಿಗೆ ಬಂದಿತು
A. ಜೂನ್ 18, 1951 √
B. ಜನವರಿ 26, 1950
C. ನವೆಂಬರ್ 26, 1952
D. ಜುಲೈ 1, 1951


ಪ್ರಶ್ನೆ ನಂ: 26) ಭಾರತದ ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಇಳಿಸಿದ ಸಂವಿಧಾನದ ತಿದ್ದುಪಡಿ ಯಾವುದು?
A. ಸಂವಿಧಾನದ ತಿದ್ದುಪಡಿ 72, 1990
B. ಸಂವಿಧಾನದ ತಿದ್ದುಪಡಿ 61, 1989√
C. ಸಂವಿಧಾನದ ತಿದ್ದುಪಡಿ 81, 1985
D. ಸಂವಿಧಾನದ ತಿದ್ದುಪಡಿ 75, 1991


ಪ್ರಶ್ನೆ ನಂ: 27) ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರ ಸ್ಮರಣಾರ್ಥ ‘ಅಬ್ದುಲ್‌ ಕಲಾಂ ಯುವ ಪ್ರಶಸ್ತಿ’ ನೀಡಲು ಯಾವ ರಾಜ್ಯ ನಿರ್ಧರಿಸಿದೆ.
a) ತಮಿಳುನಾಡು √
b)ಕರ್ನಾಟಕ
c) ಕೇರಳ          
d) ಆಂಧ್ರಪ್ರದೇಶ


ಪ್ರಶ್ನೆ ನಂ: 28) ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಇತ್ತೀಚೆಗೆ ‘ಸಮನ್ವಯ್‌’ ಯೋಜನೆಯನ್ನು ಪ್ರಕಟಿಸಿತು. ಈ ಯೋಜನೆ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
a) ತಾಲ್ಲೂಕು ಪಂಚಾಯ್ತಿ      
b) ಜಿಲ್ಲಾ ಪಂಚಾಯ್ತಿ
c) ಕಾಪ್‌ ಪಂಚಾಯ್ತಿ        
d) ಗ್ರಾಮ ಪಂಚಾಯ್ತಿ √


ಪ್ರಶ್ನೆ ನಂ: 29) ಹೊಂದಿಸಿ ಬರೆಯಿರಿ.

   ನದಿ ದೇಶ
ಎ)ಹ್ವಾಂಗ್ ಹೋ 1) ಯುರೋಪ್                                  
ಬಿ)ವೋಲ್ಗಾ 2) ಚೀನಾ
ಸಿ)ಡ್ಯಾನ್ಯೂಬ್ 3) ಆಫ್ರಿಕಾ
ಡಿ)ನೈಲ್ 4) ಯುಎಸ್ಎಸ್ಆರ್
ಇ)ಮುರ್ರೆ ಡಾರ್ಲಿಂಗ್ 5) ಆಸ್ಟ್ರೇಲಿಯಾ
— ಸಂಕೇತಗಳು
ಎ)ಎ-1. ಬಿ-2. ಸಿ -3. ಡಿ-5. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5 √
ಡಿ)ಎ-1. ಬಿ-5. ಸಿ -2. ಡಿ-4. ಇ-3


ಪ್ರಶ್ನೆ ನಂ: 30) ಕೆಳಕಂಡ ದೇಶಗಳಲ್ಲಿ ಯಾವುದು 'ಜಾತ್ಯತೀತ ರಾಷ್ಟ್ರ' ಎಂದು ತನ್ನ ಸಂವಿಧಾನದಲ್ಲಿ ಸೇರಿಸಿಕೊಂಡಿತು?
A. ಶ್ರೀಲಂಕಾ
B. ಪಾಕಿಸ್ತಾನ
C. ನೇಪಾಳ√
D. ಬಾಂಗ್ಲಾದೇಶ


ಪ್ರಶ್ನೆ ನಂ: 31) ವಿಶ್ವಸಂಸ್ಥೆಯ ಅಂಗಸಂಸ್ಥೆಗಳಲ್ಲಿ ಕೆಳಕಂಡವುಗಳಲ್ಲಿ ಸರಿ ಹೊಂದದ ಜೋಡಿಯನ್ನು ಗುರುತಿಸಿ.
A. ಆಹಾರ ಮತ್ತು ಕೃಷಿ ಸಂಘಟನೆ - ರೋಮ್
B. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ - ಜಿನೇವಾ
C. ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ - ಲಂಡನ್√
D. ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ - ವಿಯೆನ್ನಾ


ಪ್ರಶ್ನೆ ನಂ: 32) ಹೊಂದಿಸಿ ಬರೆಯಿರಿ.

   ಜಲಪಾತಗಳು ದೇಶ
ಎ) ಏಂಜೆಲ್ 1) ವೆನೆಜುವೆಲಾ                                  
ಬಿ) ರಿಬ್ಬನ್ 2) ದಕ್ಷಿಣ ಆಫ್ರಿಕಾ
ಸಿ) ಟುಗೆಲಾ 3) ಜಿಂಬಾಬ್ವೆ
ಡಿ) ನಯಾಗರಾ 4) ಕೆನಡಾ
ಇ) ವಿಕ್ಟೋರಿಯಾ 5) ಅಮೇರಿಕಾ
ಸಂಕೇತಗಳು
ಎ)ಎ-1. ಬಿ-2. ಸಿ -3. ಡಿ-5. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3 √


ಪ್ರಶ್ನೆ ನಂ: 33) ಯಾವ ದೇಶದಿಂದ "ಸಂವಿಧಾನ ತಿದ್ದುಪಡಿ ವಿಧಾನ"ವನ್ನು ಎರವಲು ಪಡೆದು ಭಾರತದ ಸಂವಿಧಾನದಲ್ಲಿ ಅಳವಡಿಸಲಾಗಿದೆ ?
A. ರಷ್ಯಾ
B. ದಕ್ಷಿಣ ಆಪ್ರೀಕಾ √
C. ಬ್ರಿಟನ್
D. ಅಮೆರಿಕಾ


ಪ್ರಶ್ನೆ ನಂ: 34) ಹೊಂದಿಸಿ ಬರೆಯಿರಿ.

  ರೈಲ್ವೆ ವಲಯಗಳು ಸ್ಥಳ
ಎ) ಈಶಾನ್ಯ ರೈಲ್ವೆ 1) ಕೋಲ್ಕತಾ                                  
ಬಿ) ಆಗ್ನೇಯ ರೈಲ್ವೆ 2) ಹುಬ್ಬಳ್ಳಿ
ಸಿ) ನೈಋತ್ಯ ರೈಲ್ವೆ 3) ಗೋರಕ್ ಪುರ
ಡಿ) ವಾಯವ್ಯ ರೈಲ್ವೆ 4) ಚೆನೈ
ಇ) ದಕ್ಷಿಣ ರೈಲ್ವೆ 5) ಜೈಪುರ
ಸಂಕೇತಗಳು
ಎ)ಎ-3. ಬಿ-1. ಸಿ -2. ಡಿ-5. ಇ-4√
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3


ಪ್ರಶ್ನೆ ನಂ: 35) ಹೊಂದಿಸಿ ಬರೆಯಿರಿ.

   ಕವಿ ಆತ್ಮಕಥೆಗಳು
ಎ) ಪಿ.ಲಂಕೇಶ್ 1) ಭಾವ                                  
ಬಿ) ಮಾಸ್ತಿ 2) ಹುಚ್ಚು ಮನಸಿನ ಹತ್ತು ಮುಖಗಳು
ಸಿ) ಕುವೆಂಪು 3) ಭಿತ್ತ
ಡಿ) ಎಸ್.ಎಲ್.ಭೈರಪ್ಪ 4) ಹುಳಿ ಮಾವಿನ ಮರ
ಇ) ಶಿವರಾಮ ಕಾರಂತ 5) ನೆನಪಿನ ದೋಣಿಯಲ್ಲಿ
ಸಂಕೇತಗಳು
ಎ)ಎ-1. ಬಿ-5. ಸಿ -3. ಡಿ-2. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2√
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3


ಪ್ರಶ್ನೆ ನಂ: 36) ಶ್ರವಣಬೆಳಗೋಳದ ಮಹಾಮಸ್ತಾಭಿಷೇಕವು ಎಷ್ಟು ವರ್ಷಗಳಿಗೊಂದು ಸಲ ಜರುಗುತ್ತದೆ?  
A] 6 ವರ್ಷ
B] 8 ವರ್ಷ
C]10 ವರ್ಷ
D]12 ವರ್ಷ√


ಪ್ರಶ್ನೆ ನಂ: 37) FM ರೇಡಿಯೋದ ತರಂಗಾಂತರ ವ್ಯಾಪ್ತಿ?
A] 200-300 MHz
B] 88-108 MHz √
C] 600-800 MHz
D] 100-200 MHz


ಪ್ರಶ್ನೆ ನಂ: 38) ಇತ್ತೀಚೆಗೆ ಸುಪ್ರೀಂ ಕೋರ್ಟ್ ರದ್ದು ಪಡಿಸಿದ ವಿವಾದಿತ ಸೆಕ್ಷನ್ 66ಅ ಯಾವ ಕಾಯ್ದೆಯ ಭಾಗವಾಗಿತ್ತು?
A] ಭಯೋತ್ಪಾದನೆ ಪ್ರತಿಬಂಧ ಕಾಯಿದೆ
B] ಮಾಹಿತಿ ತಂತ್ರಜ್ಞಾನ ಕಾಯಿದೆ √
C] ಬೌದ್ಧಿಕ ಆಸ್ತಿ ಕಾಯಿದೆ
D] ಮಹಿಳಾ ರಕ್ಷಣಾ ಕಾಯಿದೆ


ಪ್ರಶ್ನೆ ನಂ: 39) ನ್ಯಾನೊ ಪದಾರ್ಥಗಳು ಎಂತಹ ಕಣಗಳಿಂದ ಆಗಿರುತ್ತವೆ ಎಂದರೆ ಕಣಗಳ ಗಾತ್ರವು ಸುಮಾರು,  
A] 10-⁹ ನ್ಯಾನೋಮಿಟರ್ ಇರುತ್ತದೆ
B] 10⁹ ನ್ಯಾನೋಮಿಟರ್ ಇರುತ್ತದೆ
C] 10-⁹ ಮಿಟರ್ ಇರುತ್ತದೆ √
D] 9 ಮಿಟರ್ ಇರುತ್ತದೆ


ಪ್ರಶ್ನೆ ನಂ: 40) ಶ್ರೀಲಂಕಾದ ನೂತನ ಪ್ರಧಾನಮಂತ್ರಿ ಯಾರು?
a) ಆರ್‌. ವಿಕ್ರಮಸಿಂಘೆ √
b) ಎಂ. ರಾಜಪಕ್ಸೆ
c) ಸಿ. ಕೆ. ತುಂಗಾ          
d) ಮೇಲಿನ ಯಾರು ಅಲ್ಲ


ಪ್ರಶ್ನೆ ನಂ: 41) ಪ್ರೆಶರ್ ಕುಕ್ಕರ್‌ನಲ್ಲಿ ಬೇಗ ಅಡುಗೆಯಾಗುತ್ತದೆ. ಏಕೆಂದರೆ,
A] ಆಹಾರವು ಬೇಯುವುದಕ್ಕೆ ಇಲ್ಲಿ ಅಧಿಕ ಹಬೆ (ಉಗಿ) ಲಭ್ಯ.
B] ಒತ್ತಡವು ನೀರಿನ ಕುದಿಯುವ ಬಿಂದುವನ್ನು ಹೆಚ್ಚಿಸುತ್ತದೆ. √
C] ಒತ್ತಡವು ನೀರಿನ ಕುದಿಯುವ ಬಿಂದುವನ್ನು ಕಡಿಮೆಮಾಡುತ್ತದೆ.
D] ಕುಕ್ಕರ್‌ ಅನ್ನು ವಿಶೇಷ ವಸ್ತುವಿನಿಂದ ಮಾಡಲಾಗಿದೆ.


ಪ್ರಶ್ನೆ ನಂ: 42) ಈ ಕೆಳಗಿನ ಯಾವ ಮುಖ್ಯಮಂತ್ರಿಯ ಕಾಲದಲ್ಲಿ ಮೈಸೂರು ರಾಜ್ಯಕ್ಕೆ 'ಕರ್ನಾಟಕ' ಎಂದು ನಾಮಕರಣ ಮಾಡಲಾಯಿತು?
A] ಕೆ.ಸಿ.ರೆಡ್ಡಿ
B] ಚಿಕ್ಕ ದೇವರಾಜ ಒಡೆಯರ್
C] ಟಿ.ಸಿದ್ಧಲಿಂಗಯ್ಯ
D] ದೇವರಾಜ್ ಅರಸು √


ಪ್ರಶ್ನೆ ನಂ: 43) ಎಷ್ಟು ವರ್ಷಗಳಿಗೊಮ್ಮೆ ಹಣಕಾಸು ಆಯೋಗ ರಚಿಸಲಾಗುತ್ತದೆ.
A] ಪ್ರತೀ ವರ್ಷ
B] 07 ವರ್ಷ
C] 05 ವರ್ಷ√
D] 04 ವರ್ಷ


ಪ್ರಶ್ನೆ ನಂ: 44) ಜಾಗತಿಕ ಅರ್ಥವ್ಯವಸ್ಥೆಯು ಕೆಳಮುಖವಾಗಿರುವ ಈ ಸಂದರ್ಭದಲ್ಲಿ ಸರ್ಕಾರಗಳು ...
A] ಸಾಧ್ಯವಾದಷ್ಟು ಕಡಿಮೆ ಖರ್ಚು ಮಾಡಿ ಹೆಚ್ಚೆಚ್ಚು ಹಣವನ್ನು ಉಳಿತಾಯ ಮಾಡಬೇಕು.
B] ಚಿನ್ನವನ್ನು ಖರೀದಿಸಿ ದಾಸ್ತಾನು ಮಾಡಬೇಕು.
C] ಆರೋಗ್ಯ ವ್ಯವಸ್ಥೆಯನ್ನು ಖಾಸಗೀಕರಣ ಮಾಡಬೇಕು.
D] ಸಾರ್ವಜನಿಕ ಮೂಲಸೌಕರ್ಯ ವ್ಯವಸ್ಥೆಗಳಿಗಾಗಿ ಹೆಚ್ಚು ಹಣ ವಿನಿಯೋಗಿಸಬೇಕು √


ಪ್ರಶ್ನೆ ನಂ: 45) ಒಣ ಕೂದಲನ್ನು ಬಾಚಿದ ಬಾಚಣಿಕೆಯು ಕಾಗದದ ಚೂರುಗಳನ್ನು ಆಕರ್ಷಿಸುತ್ತದೆ. ಏಕೆಂದರೆ...
A] ಸ್ಫುರಣಗೊಂಡ ಬಾಚಣಿಕೆಯಿಂದಾಗಿ ಕಾಗದದಲ್ಲಿರುವ ಪರಮಾಣುಗಳು ಧ್ರುವೀಕರಣಗೊಳ್ಳುತ್ತವೆ. √
B] ಬಾಚಣಿಕೆಯು ಕಾಂತೀಯ ಗುಣಧರ್ಮಗಳನ್ನು ಹೊಂದಿದೆ.
C] ಬಾಚಣಿಕೆಯು ಉತ್ತಮ ವಾಹಕವಾಗಿದೆ.
D] ಕಾಗದವು ಉತ್ತಮ ವಾಹಕವಾಗಿದೆ.


ಪ್ರಶ್ನೆ ನಂ: 46) ಹೊಂದಿಸಿ ಬರೆಯಿರಿ.

   ಕಣಿವೆ ಮಾರ್ಗಗಳು ರಾಜ್ಯ
ಎ) ಹಲ್ದಿಘಾಟಿ ಪಾಸ್ 1) ಜಮ್ಮು ಮತ್ತು ಕಾಶ್ಮೀರ
ಬಿ) ರೋಹ್ ಟಂಗ್ ಪಾಸ್ 2) ಮಧ್ಯಪ್ರದೇಶ
ಸಿ) ಜಿಲೇಪ ಲಾ ಪಾಸ್ 3) ಹಿಮಾಚಲ ಪ್ರದೇಶ
ಡಿ) ಬಾರಾ-ಲಾಚಾ-ಲಾ ಪಾಸ್ 4) ರಾಜಸ್ಥಾನ
ಇ) ಅಸಿರ್ ಘರ್ ಪಾಸ್ 5) ಸಿಕ್ಕಿಂ
ಸಂಕೇತಗಳು
ಎ)ಎ-1. ಬಿ-4. ಸಿ -3. ಡಿ-5. ಇ-2
ಬಿ)ಎ-4. ಬಿ-3. ಸಿ-5. ಡಿ-1. ಇ-2√
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3


ಪ್ರಶ್ನೆ ನಂ: 47) ಹಾಲನ್ನು ಕಡೆದಾಗ ಕೆನೆಯು ಹಾಲಿನಿಂದ ಬೇರೆಯಾಗುವುದು ಈ ಪರಿಣಾಮದಿಂದಾಗಿ..
a.ಘರ್ಷಣೆಯ ಬಲ
b.ಕೇಂದ್ರಾಪಗಾಮಿ ಬಲ√
c.ಕೇಂದ್ರಾಪಗಾಮಿ ಪ್ರತಿಕ್ರಿಯೆ
d.ಗುರುತ್ವಾಕರ್ಷಣ ಬಲ


ಪ್ರಶ್ನೆ ನಂ: 48) ಪಶ್ಚಿಮ ಘಟ್ಟಗಳಲ್ಲಿರುವ ಅರಣ್ಯಗಳು ಯಾವ ವಿಧಕ್ಕೆ ಸೇರಿವೆ?
A] ಮ್ಯಾನ್ ಗ್ರೋವ್ ಕಾಡುಗಳು
B] ನಿತ್ಯಹರಿದ್ವರ್ಣ ಕಾಡುಗಳು√
C] ಎಲೆ ಉದುರುವ ಕಾಡುಗಳು
D] ಸಾಲ್


ಪ್ರಶ್ನೆ ನಂ: 49) ಗಣಿತ ಶಾಸ್ತ್ರದಲ್ಲಿ ಸಾಧನೆಗೈದ ಸಾಧಕರಿಗೆ ನೀಡಲಾಗುವ ರಾಮಾನುಜಂ ರಾಷ್ಟ್ರೀಯ ಪ್ರಶಸ್ತಿ 2015ನೇ ಸಾಲಿನಲ್ಲಿ ಯಾರಿಗೆ ಬಂದಿದೆ.
a) ಸಚ್ಚಿದೇವಾ ಬನ್ಸಾಲಿ
b) ಮೊಹಮ್ಮದ್‌ ಫಕೀರ್‌ ಖಾನ್‌
c) ಅಲಮೆಂದು ಕೃಷ್ಣ √
d) ಕರಣ್‌ ಶಂಕರ ದೇವಾ


ಪ್ರಶ್ನೆ ನಂ: 50) ಇತ್ತೀಚೆಗೆ ಭೂಕಂಪದಲ್ಲಿ ಧರೆಗುರುಳಿದ 'ಐತಿಹಾಸಿಕ ಧರಹರ ಟವರ್' ಯಾವ ದೇಶಕ್ಕೆ ಸಂಬಂಧಿಸಿದ್ದು?
A. ಭಾರತ
B. ನೇಪಾಳ √
C. ಮಲೇಶಿಯಾ  
D. ಶ್ರೀಲಂಕಾ


ಪ್ರಶ್ನೆ ನಂ: 51) ಹೊಂದಿಸಿ ಬರೆಯಿರಿ.

   ಪುಸ್ತಕಗಳು ಲೇಖಕರು
ಎ) ಎಲೆಕ್ಷನ್ ಡಟ್ ಚೇಂಜ್ಡ್ ಇಂಡಿಯಾ 1) ಅರವಿಂದ್ ಅಡಿಗ                          
ಬಿ) ಟ್ರೈನ್ ಟು ಪಾಕಿಸ್ತಾನ್ 2) ವಿಕ್ರಮ್ ಚಂದ್
ಸಿ) ಸೇಕ್ರೆಡ್ ಗೇಮ್ಸ್ 3) ಅಮಿತ್ ಚೌಧರಿ
ಡಿ) ದಿ ವೈಟ್ ಟೈಗರ್ 4) ರಾಜ್ ದೀಪ್ ಸರ್ದೇಸಾಯ
ಇ) ದಿ ಇಮ್ಮಾರ್ಟಲ್ಸ್ 5) ಖುಷ್ವಂತ್ ಸಿಂಗ್
ಸಂಕೇತಗಳು
ಎ)ಎ-1. ಬಿ-2. ಸಿ -3. ಡಿ-5. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-4. ಬಿ-5. ಸಿ -2. ಡಿ-1. ಇ-3√


ಪ್ರಶ್ನೆ ನಂ: 52) ಹಿಂದಿ ಸಾಹಿತ್ಯದ ಸಮಗ್ರ ಸೇವೆಗೆ ನೀಡುವ 2014ನೇ ಸಾಲಿನ ‘ಭಾರತ್‌ ಭಾರತಿ’ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಯಾರಿಗೆ ಸಂದಿದೆ.
a) ಖುಷ್ವಂತ್‌ ಸಿಂಗ್‌          
b) ಕಿಶನ್‌ ಸಿಂಗ್‌ ಅಮ್ರಪಾಲಿ
c) ಸೀತಾರಾಮ್‌ ಶಾಸ್ತ್ರಿ  
d) ಕಾಶಿನಾಥ್‌ ಸಿಂಗ್√‌


ಪ್ರಶ್ನೆ ನಂ: 53) ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಇತ್ತೀಚೆಗೆ ‘ಸಮನ್ವಯ್‌’ ಯೋಜನೆಯನ್ನು ಪ್ರಕಟಿಸಿತು. ಈ ಯೋಜನೆ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
a) ತಾಲ್ಲೂಕು ಪಂಚಾಯ್ತಿ      
b) ಜಿಲ್ಲಾ ಪಂಚಾಯ್ತಿ
c) ಕಾಪ್‌ ಪಂಚಾಯ್ತಿ        
d) ಗ್ರಾಮ ಪಂಚಾಯ್ತಿ √


ಪ್ರಶ್ನೆ ನಂ: 54) ಹೊಂದಿಸಿ ಬರೆಯಿರಿ.

       ಕವಿ/ಸಾಹಿತಿ ಕಾವ್ಯನಾಮ
ಎ) ಕಯ್ಯಾರ ಕಿಞ್ಞಣ್ಣರೈ 1) ಚಂಪಾ                                  
ಬಿ) ಪಂಜೆ ಮಂಗೇಶರಾಯ 2) ದುರ್ಗಾದಾಸ
ಸಿ) ಚಂದ್ರಶೇಖರ ಪಾಟೀಲ 3) ನಿರಂಜನ
ಡಿ) ಕುಳಕುಂದ ಶಿವರಾಯ 4) ಕವಿಶಿಷ್ಯ
ಇ) ದೇವುಡು ನರಸಿಂಹ ಶಾಸ್ತ್ರಿ 5) ಕುಮಾರ ಕಾಳಿದಾಸ
ಸಂಕೇತಗಳು
ಎ)ಎ-1. ಬಿ-4. ಸಿ -3. ಡಿ-5. ಇ-2
ಬಿ)ಎ-2. ಬಿ-1. ಸಿ-5. ಡಿ-3. ಇ-4
ಸಿ)ಎ -2. ಬಿ-4. ಸಿ -1. ಡಿ-3. ಇ-5 √
ಡಿ)ಎ-1. ಬಿ-5. ಸಿ -2. ಡಿ-4. ಇ-3


ಪ್ರಶ್ನೆ ನಂ: 55) ಕೇದಾರನಾಥ ಮತ್ತು ಬದ್ರಿನಾಥ ಯಾವ ಹಿಮಾಲಯದಲ್ಲಿದೆ?
A. ಕುಮಾನ್ ಹಿಮಾಲಯ√
B. ಪಂಜಾಬ್ ಹಿಮಾಲಯ
C. ಆಸ್ಸಾಂ ಹಿಮಾಲಯ
D. ನೇಪಾಳ ಹಿಮಾಲಯ


ಪ್ರಶ್ನೆ ನಂ: 56) ಕುಶಾಣರ ಕಾಲದಲ್ಲಿ ಅಸ್ಥಿತ್ವಕ್ಕೆ ಬಂದ ಕಲೆ ಯಾವುದು?
a) ಗಾಂಧಾರ ಕಲೆ√
b) ವೇಸರ ಕಲೆ
c) ಇಂಡೋಸಾರ್ಸಾನಿಕ್
d) ಯಾವುದು ಅಲ್ಲ


ಪ್ರಶ್ನೆ ನಂ: 57) ಭಾರತ ಸರ್ಕಾರದ "ನಳಂದಾ ಪ್ರಾಜೆಕ್ಟ್" ಯಾವ ಸಚಿವಾಲಯದ ಕಾರ್ಯಕ್ರಮವಾಗಿದೆ ?
೧. ಕೃಷಿ ಸಚಿವಾಲಯ
೨. ಮಾನವ ಸಂಪನ್ಮೂಲ ಸಚಿವಾಲಯ
೩. ಅಲ್ಪಸಂಖ್ಯಾತ ಸಚಿವಾಲಯ√
೪. ಹಣಕಾಸು ಸಚಿವಾಲಯ


ಪ್ರಶ್ನೆ ನಂ: 58) ಪಕ್ಷಾಂತರ ವಿರೋಧ (Anti defection) ಕಾನೂನಿನ ಪ್ರಕಾರ, ಸದನದಿಂದ ಸದಸ್ಯರೊಬ್ಬರನ್ನು ಅನರ್ಹಗೊಳಿಸುವುದನ್ನು ನಿರ್ಧರಿಸುವ ಅಂತಿಮ ಅಧಿಕಾರ ಯಾರಿಗೆ ಸೇರಿದೆ ?
A] ಅಟಾರ್ನಿ ಜನರಲ್
B] ಪ್ರಧಾನ ಮಂತ್ರಿ
C] ಸದನದ ಸ್ಪೀಕರ್.√
D] ರಾಷ್ಟ್ರಪತಿ


ಪ್ರಶ್ನೆ ನಂ: 59) ಸಮ ಪ್ರಮಾಣದಲ್ಲಿ ಮಳೆಯನ್ನು ಪಡೆಯುವ ಪ್ರದೇಶಗಳನ್ನು ಜೋಡಿಸುವ ರೇಖೆಯನ್ನು ಏನೆಂದು ಕರೆಯುತ್ತಾರೆ.
ಎ) ಐಸೋ ಹೆಲಾಯನ್ಸ್ ರೇಖೆ
ಬಿ) ಐಸೋಬಾರ್ ರೇಖೆ
ಸಿ) ಪರಿಭ್ರಮಣ ರೇಖೆ
ಡಿ) ಐಸೋಹೈಟ್ಸ್‌ಲೈನ್√


ಪ್ರಶ್ನೆ ನಂ: 60) ಇತ್ತೀಚೆಗೆ ನಿಧನರಾದ ಓಂ ಪ್ರಕಾಶ್‌ ಮುಂಜಲ್‌ ಅವರು ಯಾವ ಪ್ರಸಿದ್ಧ ಕಂಪೆನಿಯನ್ನು ಹುಟ್ಟುಹಾಕಿದ್ದರು?
a) ಟಿವಿಎಸ್‌ ಕಂಪೆನಿ
b) ಅಶೋಕ್‌ ಲೈಲ್ಯಾಂಡ್‌
c) ಹಿರೋ ಸೈಕಲ್‌√
d) ಬಜಾಜ್‌ ಕಂಪೆನಿ


ಪ್ರಶ್ನೆ ನಂ: 61) "ಬರಾಕ್ 8" ಕ್ಷಿಪ್ಪಣಿಯನ್ನು ಯಾವ ಎರಡು ದೇಶಗಳು ಜಂಟಿಯಾಗಿ ನಿರ್ಮಿಸಿವೆ?
A. ಪಾಕಿಸ್ತಾನ ಮತ್ತು ಚೀನಾ
B. ಭಾರತ ಮತ್ತು ಬಾಂಗ್ಲಾದೇಶ
C. ಪಾಕಿಸ್ತಾನ ಮತ್ತು ಅಮೆರಿಕಾ
D. ಭಾರತ ಮತ್ತು ಇಸ್ರೇಲ್ √


ಪ್ರಶ್ನೆ ನಂ: 62) ಇತ್ತೀಚೆಗೆ 7ನೇ ಬ್ರಿಕ್ಸ್ (BRICS) ಶೃಂಗ ಸಭೆ ನಡೆದದ್ದು ಎಲ್ಲಿ?
A. ರಷ್ಯಾ√
B. ದ.ಆಪ್ರೀಕಾ
C. ಬಾಂಗ್ಲಾದೇಶ
D. ಚೀನಾ


ಪ್ರಶ್ನೆ ನಂ: 63) ಮನುಷ್ಯನ ಮೂತ್ರಪಿಂಡದಲ್ಲಿ ಉಂಟಾಗುವ ಹರಳುಗಳು (ಕಿಡ್ನಿ ಕಲ್ಲು) ಮುಖ್ಯವಾಗಿ ಈ ಕೆಳಗಿನ ಯಾವ ರಾಸಾಯನಿಕದ ಸಂಯುಕ್ತವಾಗಿದೆ
1. ಕ್ಯಾಲ್ಸಿಯಂ ಅಕ್ಸಲೇಟ್ √
2. ಕ್ಯಾಲ್ಸಿಯಂ
3. ಯೂರಿಕ್ ಆಮ್ಲ
4. ಕ್ಯಾಲ್ಸಿಯಂ ಕಾರ್ಬೋನೆಟ್


ಪ್ರಶ್ನೆ ನಂ: 64) ಭಾರತೀಯ ಮಹಿಳಾ ಬ್ಯಾಂಕಿನ (BMB) ಪ್ರಸ್ತುತ ಅಧ್ಯಕ್ಷರು ಯಾರು?
A] ತಥಾಗತ್ ರಾಯ್
B] ಮನೋಬಿ ಬಂಧೋಪಾಧ್ಯಾಯ
C] ದ್ರೌಪದಿ ಮುರ್ಮ
D] ಉಷಾ ಅನಂತಸುಬ್ರಮಣ್ಯ√


ಪ್ರಶ್ನೆ ನಂ: 65) ಸೂರ್ಯಾಸ್ತ ಮತ್ತು ಸೂರ್ಯೋದಯಗಳು ಕೆಂಪಾಗಿರುತ್ತವೆ ಹಾಗೂ ಆಕಾಶವು ನೀಲಿಯಾಗಿರುತ್ತದೆ. ಇದನ್ನು ಯಾವ ಆಧಾರದ ಮೇಲೆ ವಿವರಿಸಬಹುದು?
A] ಬೆಳಕಿನ ವಿವರ್ತನ
B] ಬೆಳಕಿನ ಪ್ರತಿಫಲನ
C] ಬೆಳಕಿನ ಬಾಗುವಿಕೆ
D] ಬೆಳಕಿನ ಚದುರುವಿಕೆ√


ಪ್ರಶ್ನೆ ನಂ: 66) ಪಾರ್ಲಿಮೆಂಟ್ ನ ಎರಡು ಅಧಿವೇಶನದ ಮಧ್ಯೆ ಇರಬೇಕಾದ ಅತ್ಯಧಿಕ ಅಂತರ ?
A] 6 ತಿಂಗಳು√
B] 5 ತಿಂಗಳು
C] 4 ತಿಂಗಳು
D] 12 ತಿಂಗಳು .


ಪ್ರಶ್ನೆ ನಂ: 67) ಗಣಿತ ಶಾಸ್ತ್ರದಲ್ಲಿ ಸಾಧನೆಗೈದ ಸಾಧಕರಿಗೆ ನೀಡಲಾಗುವ ರಾಮಾನುಜಂ ರಾಷ್ಟ್ರೀಯ ಪ್ರಶಸ್ತಿ 2015ನೇ ಸಾಲಿನಲ್ಲಿ ಯಾರಿಗೆ ಬಂದಿದೆ.
a) ಸಚ್ಚಿದೇವಾ ಬನ್ಸಾಲಿ
b) ಮೊಹಮ್ಮದ್‌ ಫಕೀರ್‌ ಖಾನ್‌
c) ಅಲಮೆಂದು ಕೃಷ್ಣ √
d) ಕರಣ್‌ ಶಂಕರ ದೇವಾ


ಪ್ರಶ್ನೆ ನಂ: 68) ಭಾರತದ ರಾಷ್ಟ್ರಪತಿಗಳು ಸಂವಿಧಾನದ ಯಾವ ವಿಧಿ ಅನ್ವಯ ಇಬ್ಬರು ಆಂಗ್ಲೋ ಇಂಡಿಯನ್ ರನ್ನು ನೇಮಕಮಾಡಬಹುದು?
a) 332 ನೇ ವಿಧಿ
b) 333 ನೇ ವಿಧಿ
c) 331 ನೇ ವಿಧಿ✅
d) 329 ನೇ ವಿಧಿ


ಪ್ರಶ್ನೆ ನಂ: 69) ಇತ್ತೀಚೆಗೆ ಯೆಮೆನ್ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯರನ್ನು ರಕ್ಷಿಸುವ ಸಲುವಾಗಿ ಭಾರತ ಸರ್ಕಾರವು ನಡೆಸಿದ ಸೈನಿಕ ಕಾರ್ಯಾಚರಣೆಯ ಹೆಸರೇನು?
A] `ಆಪರೇಷನ್ ಹಿಮ್ಮತ್ '
B] `ಆಪರೇಷನ್ ರಾಹತ್'√
C] `ಆಪರೇಷನ್ ಆಲ್ ಕ್ಲಿಯರ್'
D] `ಆಪರೇಷನ್ ರಕ್ಷಿತ್ '


ಪ್ರಶ್ನೆ ನಂ: 70) ಈ ಕೆಳಗಿನ ಯಾವ ಹೇಳಿಕೆ ಯಾವುದು ತಪ್ಪಾಗಿದೆ?
1.ರಾಜ್ಯದಲ್ಲಿ 2011ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆ 6.11 ಕೋಟಿಗೆ ತಲುಪಿದ್ದು, ಒಂದು ರಾಜ್ಯದಲ್ಲಿ ದಶಕದಲ್ಲಿ ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದರೂ ಜನಸಂಖ್ಯೆ ಬೆಳವಣಿಗೆ ದರ ಶೇ.15.67ಗೆ ಕುಸಿದಿದೆ.
2.ರಾಜ್ಯದಲ್ಲಿ ಲಿಂಗಾನುಪಾತ ಪ್ರತಿ ಸಾವಿರ ಪುರುಷರಿಗೆ ಸರಾಸರಿ 968 ಮಹಿಳೆಯರು.
A] 1 ಮಾತ್ರ
B] 2 ಮಾತ್ರ
C] ಎರಡೂ ತಪ್ಪು.
D] ಎರಡೂ ಸರಿ.√


ಪ್ರಶ್ನೆ ನಂ: 71) ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ದೇಶದ ಎಷ್ಟು ರಾಜ್ಯಗಳ ರಾಜಧಾನಿ ನಗರಗಳು ಸೇರ್ಪಡೆಗೊಂಡಿವೆ?
a) 48  
b) 24 √
c) 32      
d) 13


ಪ್ರಶ್ನೆ ನಂ: 72) ಮೂರು ಭಾಗಗಳಾಗಿ ವಿಭಜಿಸಲ್ಪಟ್ಟ ಹರಪ್ಪ ನಾಗರಿಕತೆಯ ನಗರ ಯಾವುದು?
A] ಲೋಥಾಲ್
B] ಕಾಲಿಬಂಗಾನ್
C] ಧಾಮಲಾವೀರ √
D] ಸುರ್ಕೊಟಾ


ಪ್ರಶ್ನೆ ನಂ: 73) " ದುಡಿತವೆ ನನ್ನ ದೇವರು " ಇದು ಯಾರ ಆತ್ಮ ಕಥೆಯಾಗಿದೆ ?
1. ದೇ.ಜ.ಗೌ
2. ಪಾಪು
3. ಕುಂ.ವಿ
4. ಕಯ್ಯಾರ ಕಿಯ್ಞಣ ರೈ✅


ಪ್ರಶ್ನೆ ನಂ: 74) ಕೆಳಗಿನ ವಿವರಣೆಗಳನ್ನು ಪರಿಶೀಲಿಸಿ.
(i) ವಿಂದ್ಯಾಪರ್ವತವು ಉತ್ತರ ಭಾರತವನ್ನು ದಕ್ಷಿಣ ಭಾರತದಿಂದ ಪ್ರತ್ಯೇಕಿಸುವ ಶ್ರೇಣಿಯಾಗಿದೆ.
(ii) ಮೂರು ಸಮುದ್ರಗಳು ಸಂಗಮವಾಗುವ ರಾಜ್ಯವೆಂದರೆ, ತಮಿಳುನಾಡು.
(iii) ಸೈಬಿರಿಯಾದಿಂದ ಭಾರತದ ಕಡೆಗೆ ಬೀಸುವ ಮಾರುತವೆಂದರೆ ಶೀತಮಾರುತ
ಸಂಕೇತಗಳು
A) (i) ಮತ್ತು (ii) ಮಾತ್ರ.
B) (i) ಮತ್ತು (iii) ಮಾತ್ರ.
C) (ii) ಮತ್ತು (iii) ಮಾತ್ರ.
D) ಮೇಲಿನೆಲ್ಲವೂ.√


ಪ್ರಶ್ನೆ ನಂ: 75) ಇವುಗಳಲ್ಲಿ 'ಪ್ರಾಥಮಿಕ ಬಣ್ಣ(ವರ್ಣ)ಗಳು' ಯಾವವು?
A] ಕೆಂಪು, ಹಸಿರು ಮತ್ತು ನೀಲಿ √
B] ಕೆಂಪು, ಹಳದಿ ಮತ್ತು ನೀಲಿ
C] ಹಳದಿ, ನೀಲಿ ಮತ್ತು ಹಸಿರು
D] ಕೆಂಪು, ಹಳದಿ ಮತ್ತು ಹಸಿರು


ಪ್ರಶ್ನೆ ನಂ: 76) ಹೊಂದಿಸಿ ಬರೆಯಿರಿ.

 ಬೌದ್ಧ ಮಹಾಸಭೆಗಳು ರಾಜರು(ಆಶ್ರಯದಾತರು)
ಎ) ಮೊದಲನೆಯ ಬೌದ್ಧ ಮಹಾಸಭೆ 1) ಅಜಾತಶತ್ರು
ಬಿ) ಎರಡನೆಯ ಬೌದ್ಧ ಮಹಾಸಭೆ 2) ಅಶೋಕ
ಸಿ) ಮೂರನೆಯ ಬೌದ್ಧ ಮಹಾಸಭೆ 3) ಕಾಲಾಸೋಕ
ಡಿ) ನಾಲ್ಕನೆಯ ಬೌದ್ಧ ಮಹಾಸಭೆ 4) ಕಾನಿಷ್ಕ
ಸಂಕೇತಗಳು
ಎ)ಎ-1. ಬಿ-2. ಸಿ -4. ಡಿ-3.
ಬಿ)ಎ-4. ಬಿ-1. ಸಿ-3. ಡಿ-2.
ಸಿ)ಎ -2. ಬಿ-4. ಸಿ -1. ಡಿ-3.
ಡಿ)ಎ-1. ಬಿ-3. ಸಿ -2. ಡಿ-4.√


ಪ್ರಶ್ನೆ ನಂ: 77) 2018 ರ ಕಾಮನ್‌ವೆಲ್ತ್ ಗೇಮ್ ಗಳು ಎಲ್ಲಿ ನಡೆಯುತ್ತವೆ?
A] ವೆಲ್ಲಿಂಗಟನ್
B] ಗೋಲ್ಡ್ ಕೋಸ್ಟ್ √
C] ಕೌಲಾಲಂಪುರ್
D] ಹ್ಯಾಮಿಲ್ಟನ್


ಪ್ರಶ್ನೆ ನಂ: 78) ಈ ವರ್ಷದ ಪ್ರತಿಷ್ಟಿತ ಸ್ಟಾಕ್ ಹೋಂ ಜಲಪ್ರಶಸ್ತಿ (ಜಲ ನೊಬೆಲ್) ಯಾರಿಗೆ ಲಭಿಸಿದೆ?
A] ಮನೋಜ್ ಕುಮಾರ
B] ರಾಜೇಂದ್ರ ಸಿಂಗ್ √
C] ನರೇಶ ಗುಪ್ತ
D] ಸಂಜೀವ ಲಗಾಂಡೆ


ಪ್ರಶ್ನೆ ನಂ: 79) ಈ ಕೆಳಗಿನ ಯಾವ ಸಾರ್ವಜನಿಕ ವಲಯದ ಬ್ಯಾಂಕು "Honor Your Trust" ಎಂಬ ಕೆಳಬರಹವನ್ನು ಹೊಂದಿದೆ?
A. ಪಂಜಾಬ್ ನ್ಯಾಷನಲ್ ಬ್ಯಾಂಕ
B. ಯುಸಿಒ ಬ್ಯಾಂಕು √
C. ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ
D. ಅಲಹಾಬಾದ್ ಬ್ಯಾಂಕ


ಪ್ರಶ್ನೆ ನಂ: 80) 'ರಾಷ್ಟ್ರೀಯ ಕಾನೂನು ಸಾಕ್ಷರತಾ ದಿನ'ವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ?
A. ಅಕ್ಟೋಬರ್ 24
B. ಜೂನ್ 29
C. ಮಾರ್ಚ್ 9
D. ನವಂಬರ್ 9√


ಪ್ರಶ್ನೆ ನಂ: 81) ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ(PTI)ದ ನೂತನ ಅಧ್ಯಕ್ಷರಾಗಿ ಎಚ್.ಎಸ್.ಕಾಮಾ ಆಯ್ಕೆಯಾದರು. ಅವರು ಕೆಳಕಂಡ ಯಾವ ಪತ್ರಿಕೆಗೆ ಸಂಬಂಧಪಟ್ಟಿದ್ದಾರೆ?
A. ಟೈಮ್ಸ್ ಆಫ್ ಇಂಡಿಯಾ
B. ಹಿಂದೂಸ್ತಾನ ಟೈಮ್ಸ್
C. ಬಾಂಬೆ ಸಮಾಚಾರ್√
D. ನವಭಾರತ್ ಟೈಮ್ಸ್


ಪ್ರಶ್ನೆ ನಂ: 82) ಇತ್ತೀಚೆಗೆ ‘ವರ್ಲ್ಡ್ ಹ್ಯಾಪಿನೆಸ್ ಸಂಸ್ಥೆ’ ನಡೆಸಿದ ಸಮೀಕ್ಷೆಯಲ್ಲಿ ಜಾಗತಿಕ ಮಟ್ಟದ 158 ಸುಖೀ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ರಾಷ್ಟ್ರ ಯಾವುದು?
A. ಸ್ವಿಜರ್ಲೆಂಡ್ √
B. ಐಸ್ಲೆಂಡ್
C. ಸೌದಿ ಅರೇಬಿಯಾ
D. ಐಱ್ಲೆಂಡ್


ಪ್ರಶ್ನೆ ನಂ: 83) ‘48ನೇ ಆಸೀನ್‌ ವಿದೇಶಾಂಗ ಸಚಿವರ ಶೃಂಗ ಸಮ್ಮೇಳನ’ ಈ ಕೆಳಕಂಡ ಯಾವ ಸ್ಥಳದಲ್ಲಿ ಜರುಗಿತು.
a) ನವದೆಹಲಿ                  
b) ಕೊಲಂಬೊ
c) ಕೌಲಲಾಂಪುರ √          
d) ಇಸ್ಲಾಮಾಬಾದ್


ಪ್ರಶ್ನೆ ನಂ: 84) ಕೇಂದ್ರ ಸರ್ಕಾರದ 'PAHAL' ಸ್ಕಿಮ್ ಯಾವುದಕ್ಕೆ ಸಂಬಂಧಿಸಿದೆ?
A] ಗ್ರಾಹಕರ ಖಾತೆಗೆ LPG ಸಬ್ಸಿಡಿ ವರ್ಗಾವಣೆ √
B] ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣ
C] ಹುಡುಗಿಯರ ಶಿಕ್ಷಣಕ್ಕೆ ಪ್ರೋತ್ಸಾಹ ಧನ    
D] ಹಿರಿಯ ನಾಗರಿಕರಿಗೆ ಆರೋಗ್ಯ ಸೌಲಭ್ಯ


ಪ್ರಶ್ನೆ ನಂ: 85) ಕೇಂದ್ರ ಸರ್ಕಾರದ "ಹೃದಯ" ಯೋಜನೆ ಯಾವ ವಲಯಕ್ಕಾಗಿ ಪ್ರಾರಂಬಿಸಲಾಗಿದೆ
1. ಶಿಕ್ಷಣ
2. ಕೆಲಸಗಾರರ ಆರೋಗ್ಯ
3. ಉದ್ಯೋಗ
4. ಪಾರಂಪರಿಕ ತಾಣಗಳ ಅಭಿವೃದ್ಧಿ √


ಪ್ರಶ್ನೆ ನಂ: 86) 30000 ಕೋಟಿ ರೂಪಾಯಿ ವೆಚ್ಚದ ನಾಗಪುರ–ಮುಂಬೈ ಎಕ್ಸ್‌ಪ್ರೆಸ್‌ ಹೈವೆ ಯೋಜನೆಯನ್ನು ಯಾವ ಸರ್ಕಾರ ಘೋಷಣೆ ಮಾಡಿದೆ?
a) ಮಹಾರಾಷ್ಟ್ರ ಸರ್ಕಾರ√      
b) ಕೇಂದ್ರ ಸರ್ಕಾರ
c) ನಾಗಪುರ ಸರ್ಕಾರ          
d) ವಿಶ್ವಸಂಸ್ಥೆ


ಪ್ರಶ್ನೆ ನಂ: 87) ಯೆಮೆನ್ ದೇಶದ ರಾಜಧಾನಿ ಯಾವುದು?
A] ಡೈರ್ ಅಲ್ ಝವುರ್
B] ಡಮಾಸ್ಕಸ್
C] ಸನಾ√
D] ಹಮಾ


ಪ್ರಶ್ನೆ ನಂ: 88) ವೈರಸ್ ಗಳ ಗಾತ್ರ?
A] 0.115 ರಿಂದ 0.2 ಮೈಕ್ರಾನ್.
B] 0.015 ರಿಂದ 0.5 ಮೈಕ್ರಾನ್.
C] 0.010 ರಿಂದ 0.1 ಮೈಕ್ರಾನ್.
D] 0.015 ರಿಂದ 0.2 ಮೈಕ್ರಾನ್.√


ಪ್ರಶ್ನೆ ನಂ: 89) ಒಬ್ಬ ವ್ಯಕ್ತಿಯು ಬೆಟ್ಟವನ್ನು ಹತ್ತುವಾಗ ಮುಂದಕ್ಕೆ ಬಾಗುತ್ತಾನೆೆ ಏಕೆಂದರೆ?
ಎ) ವೇಗವನ್ನು ಹೆಚ್ಚಿಸಲು
ಬಿ) ಬೀಳುವುದನ್ನು ತಪ್ಪಿಸಲು
ಸಿ) ಗುರುತ್ವಾಕರ್ಷಣೆಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು √
ಡಿ) ಯಾವುದೂ ಅಲ್ಲ.


ಪ್ರಶ್ನೆ ನಂ: 90) ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತದ ಈ ಕೆಳಗಿನ ಯಾವ ರಾಜ್ಯಗಳ ಮೂಲಕ ಹಾದು ಹೋಗುತ್ತದೆ
1.ಮಹಾರಾಷ್ಟ್ರ
2.ಪಶ್ಚಿಮ ಬಂಗಾಳ
3.ಮಣಿಪುರ
4.ತ್ರಿಪುರ
5.ಜಾರ್ಖಂಡ್
ಈ ಕೆಳಗಿನವುಗಳಲ್ಲಿ ಸರಿಯಾದುದನ್ನು ಆಯ್ಕೆಮಾಡಿ
A. 1, 3, 4 ಮತ್ತು 5
B.2, 3 ಮತ್ತು 5
C. 1, 2, 3 ಮತ್ತು 4
D. 2, 4 ಮತ್ತು 5√


ಪ್ರಶ್ನೆ ನಂ: 91) ಕೇಂದ್ರದ ಸ್ಮಾರ್ಟ್‌ಸಿಟಿ ಯೋಜನೆಗೆ ಈ ಕೆಳಕಂಡ ಯಾವ ನಗರ ಸ್ಮಾರ್ಟ್‌ ಸಿಟಿ ಯೋಜನೆಯ ಪಟ್ಟಿಯಲ್ಲಿ ಇಲ್ಲ?
a) ತುಮಕೂರು  
b)ದಾವಣಗೆರೆ
c) ಮೈಸೂರು√  
d) ಮಂಗಳೂರು


ಪ್ರಶ್ನೆ ನಂ: 92) ಭಾರತೀಯ ರಿಜರ್ವ್ ಬ್ಯಾಂಕ ವ್ಯಾಖ್ಯಾನಿಸಿದಂತೆ 'ಸೂಕ್ಷ್ಮ ವಲಯ' ಒಳಗೊಂಡಿರುವುದು-
A] ಬಂಡವಾಳ ಮಾರುಕಟ್ಟೆ
B] ರಿಯಲ್ ಎಸ್ಟೇಟ್
C] ಸರಕುಗಳು
D] ಮೇಲಿನೆಲ್ಲವೂ √


ಪ್ರಶ್ನೆ ನಂ: 93) ವಿಪತ್ತು ನಿರ್ವಹಣಾ ಕಾಯ್ದೆ 2005 ರನ್ವಯ “ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ”ಯನ್ನು ಯಾರು ನಿರ್ವಹಣೆ ಮಾಡುತ್ತಾರೆ
A. ಪ್ರಧಾನ ಮಂತ್ರಿ
B. ಗೃಹ ಮಂತ್ರಿ√
C. ಪರಿಸರ ಮತ್ತು ಅರಣ್ಯ ಮಂತ್ರಿ
D. ಹಣಕಾಸು ಮಂತ್ರಿ


ಪ್ರಶ್ನೆ ನಂ: 94) ಕರ್ನಾಟಕ ಈಗ ಗಂಧದ ಬೀಡು, ಕಾಫಿ ತವರೂರು ಎಂಬ ಖ್ಯಾತಿಯ ಜತೆಗೆ 'ವ್ಯಾಘ್ರ ನಾಡು' ಎಂಬ ನವೀನ ಖ್ಯಾತಿಗೂ ಪ್ರಾಪ್ತವಾಯಿತು. ಅಂದಹಾಗೆ 2014ನೇ ಸಾಲಿನ ಹುಲಿ ಗಣತಿ ಪ್ರಕಾರ, ರಾಜ್ಯದಲ್ಲಿ ಎಷ್ಟು ಹುಲಿಗಳಿರುವುದು ಕಂಡು ಬಂದಿದೆ?
A. 316
B. 366
C. 406√
D. 416


ಪ್ರಶ್ನೆ ನಂ: 95) ರಾಜ್ಯಸಭೆಯು ಒಂದು ವೇಳೆ ಧನಮಸೂದೆಯಲ್ಲಿ ಮೂಲಭೂತವಾಗಿ ಬಹಳಷ್ಟು ತಿದ್ದುಪಡಿ ತಂದರೆ ಏನಾಗುತ್ತದೆ?
A. ರಾಜ್ಯಸಭೆಯ ತಿದ್ದುಪಡಿಗಳನ್ನು ಸಮ್ಮತಿಸಿ ಅಥವಾ ಸಮ್ಮತಿಸದೇ ಲೋಕಸಭೆಯು ಮಸೂದೆಯೊಂದಿಗೆ ಮುಂದುವರೆಯಬಹುದು.√
B. ಮಸೂದೆಯನ್ನು ಲೋಕಸಭೆ ಮುಂದಕ್ಕೆ ಪರಿಗಣಿಸುವುದಿಲ್ಲ.
C. ಪುನರ್ ಪರಿಶೀಲನೆಗಾಗಿ ಲೋಕಸಭೆಯು ಮತ್ತೆ ರಾಜ್ಯಸಭೆಗೆ ಕಳುಹಿಸಬಹುದು.
D. ಮಸೂದೆಯನ್ನು ಅಂಗಿಕರಿಸಲು ರಾಷ್ಟ್ರಪತಿಗಳು ಜಂಟಿ ಅಧಿವೇಶನ ಕರೆಯಬಹುದು.


ಪ್ರಶ್ನೆ ನಂ: 96) ಇತ್ತೀಚೆಗೆ ‘ವರ್ಲ್ಡ್ ಹ್ಯಾಪಿನೆಸ್ ಸಂಸ್ಥೆ’ ನಡೆಸಿದ ಸಮೀಕ್ಷೆಯಲ್ಲಿ ಜಾಗತಿಕ ಮಟ್ಟದ 158 ಸುಖೀ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನ ಪಡೆದುಕೊಂಡಿದೆ?
A. 111ನೇ
B. 108ನೇ
C. 117ನೇ√
D. 112ನೇ


ಪ್ರಶ್ನೆ ನಂ: 97) ಪ್ರಸ್ತುತ ಕರ್ನಾಟಕ ರಾಜ್ಯ ಚುನಾವಣಾ ಆಯುಕ್ತ ಯಾರು?
A] ವೆಂಕಟರಾಮನ್ ರಾಮಕೃಷ್ಣನ್
B] ಉಮಾನಾಥ್ ಸಿಂಗ್
C] ಪಿ.ಎನ್‌. ಶ್ರೀನಿವಾಸಾಚಾರಿ√
D] ನಸೀಮ್ ಜೈಯ್ಧಿ


ಪ್ರಶ್ನೆ ನಂ: 98) ಭೂಮಿಯ ಮೇಲ್ಮೈಗೆ ಹತ್ತಿರವಾಗಿರುವ ವಾತಾವರಣದ ವಲಯದಿಂದಾರಂಭಿಸಿ ಅತ್ಯಂತ ದೂರವಾಗಿರುವ ವಲಯದವರೆಗೆ ವಾತಾವರಣದ ವಲಯಗಳ ಕ್ರಮವಾದ ವ್ಯವಸ್ಥೆಯನ್ನು ಪ್ರತಿನಿಧಿಸುವ ಸರಿಯಾದ ಉತ್ತರವನ್ನು ಆಯ್ಕೆಮಾಡಿ.
I. ಸ್ಟ್ರಾಟೋಸ್ಪಿಯರ್
II. ಟ್ರೋಟೋಸ್ಪಿಯರ್
III. ಅಯಾನೋಸ್ಪಿಯರ್
IV. ಮಿಸೋಸ್ಪಿಯರ್
ಎ. I, II, III, IV
ಬಿ. II, I, III, IV
ಸಿ. III, I IV, II
ಡಿ. II, I, IV, III√


ಪ್ರಶ್ನೆ ನಂ: 99) ಹೊಂದಿಸಿ ಬರೆಯಿರಿ.

   ದಿನ ಆಚರಣೆ
ಎ) ಏಪ್ರಿಲ್ 22 1) ಭೂದಿನ                                  
ಬಿ) ಸೆಪ್ಟೆಂಬರ್ 16 2) ವಿಶ್ವ ಓಜೋನ್ ದಿನ
ಸಿ) ಡಿಸೆಂಬರ್ 10 3) ಮಾನವ ಹಕ್ಕುಗಳ ದಿನ
ಡಿ) ಮಾರ್ಚ್ 22. 4) ವಿಶ್ವ ಜಲ ದಿನ
ಇ) ಜೂನ್ 5 5) ವಿಶ್ವ ಪರಿಸರ ದಿನ    
ಸಂಕೇತಗಳು
A] ಎ-1. ಬಿ-2. ಸಿ -3. ಡಿ-4. ಇ-5√
B] ಎ-4. ಬಿ-1. ಸಿ-5. ಡಿ-3. ಇ-2
C] ಎ -2. ಬಿ-4. ಸಿ -1. ಡಿ-3. ಇ-5
D] ಎ-1. ಬಿ-5. ಸಿ -2. ಡಿ-4. ಇ-3


ಪ್ರಶ್ನೆ ನಂ: 100) ಇತ್ತೀಚೆಗೆ ನಿಧನರಾದ "ಆಧುನಿಕ ಸಿಂಗಾಪುರದ ನಿರ್ಮಾತೃ ಎಂದೇ ಖ್ಯಾತರಾದ ಸಿಂಗಾಪುರದ ಮೊದಲ ಪ್ರಧಾನಿಯಾಗಿದ್ದ ವ್ಯಕ್ತಿ ಯಾರು?
A] ಜಾನ್ ನ್ಯಾಶ್
B] ಕ್ರಿಸ್ಟೋಫರ್ ಲೀ
C] ಲೀ ಕುವಾನ್ ಯು √
D] ಸಕರಿ ಮೆಮೋಯ್

Monday, 21 September 2015

☀ಪ್ರಧಾನ ಮಂತ್ರಿ ಮೋದಿಯವರು 2015 ರಲ್ಲಿ ಭೇಟಿ ಕೊಟ್ಟ ವಿದೇಶಗಳ ಪ್ರಮುಖ ಮಾಹಿತಿಗಳು : (PM MODI's Foreign Visits-2015)

☀ಪ್ರಧಾನ ಮಂತ್ರಿ ಮೋದಿಯವರು 2015 ರಲ್ಲಿ ಭೇಟಿ ಕೊಟ್ಟ ವಿದೇಶಗಳ ಪ್ರಮುಖ ಮಾಹಿತಿಗಳು :
(PM MODI's Foreign Visits-2015)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)


1. ಸೆಚೆಲಿಸ್.
■.ಅಧ್ಯಕ್ಷ: •┈┈┈┈┈• ಜೇಮ್ಸ್ ಮೈಕೆಲ್.
■.ಕರೆನ್ಸಿ: •┈┈┈┈┈• ಸೆಚೆಲಿಯೊಸ್ ರೂಪಿ.
■.ರಾಜಧಾನಿ: •┈┈┈┈• ವಿಕ್ಟೋರಿಯಾ.


2. ಮಾರಿಷಿಸ್ .
■.ಅಧ್ಯಕ್ಷ: •┈┈┈┈┈• ಅಮಿನಾ ಗರಿಬ್.
■.ಪ್ರಧಾನಿ: •┈┈┈┈┈• ಅನಿರೂದ್ ಜುಗ್ನಾತ್.
■.ಕರೆನ್ಸಿ: •┈┈┈┈┈• ಮಾರಿಷಿಯನ್ ರೂಪಿ.
■.ರಾಜಧಾನಿ: •┈┈┈┈┈• ಪೋರ್ಟ್ ಲೂಯಿಸ್.


3. ಶ್ರೀಲಂಕಾ.
■.ಅಧ್ಯಕ್ಷ: •┈┈┈┈┈• ಮೈತ್ರಿಪಾಲ ಸಿರಿಸೇನ.
■.ಪ್ರಧಾನಿ: •┈┈┈┈┈• ರೆನಿಲ್ ವಿಕ್ರಮ್ ಸಿಂಘೆ.
■.ಕರೆನ್ಸಿ: •┈┈┈┈┈• ಶ್ರೀಲಂಕನ್ ರೂಪಿ.
■.ರಾಜಧಾನಿ: •┈┈┈┈┈• ಶ್ರೀ ಜಯವರ್ಧನೆಪುರ ಕೊಟ್ಟೆ, (ಕೊಲಂಬೊ)


4. ಸಿಂಗಾಪೂರ.
■.ಅಧ್ಯಕ್ಷ: •┈┈┈┈┈• ಟೋನಿ ಟಾನ್.
■.ಪ್ರಧಾನಿ: •┈┈┈┈┈• ಲೀ ಸೀನ್ ಲೂಂಗ್.
■.ಕರೆನ್ಸಿ: •┈┈┈┈┈• ಸಿಂಗಪುರ್ ಡಾಲರ್.
■.ರಾಜಧಾನಿ: •┈┈┈┈┈• ಸಿಂಗಪುರ್.


5. ಫ್ರಾನ್ಸ್.
■.ಅಧ್ಯಕ್ಷ: •┈┈┈┈┈• ಫ್ರಾಂಕೋಯಿಸ್ ಹೊಲಾಂಡ್.
■.ಪ್ರಧಾನಿ: •┈┈┈┈┈• ಮ್ಯಾನುಯೆಲ್ ವಾಲ್ಸ್.
■.ಕರೆನ್ಸಿ: •┈┈┈┈┈• ಯುರೋ.
■.ರಾಜಧಾನಿ: •┈┈┈┈┈• ಪ್ಯಾರಿಸ್.


6. ಜರ್ಮನಿ.
■.ಅಧ್ಯಕ್ಷ: •┈┈┈┈┈• ಜೋಕಿಮ್ ಗೌಕ್ .
■.ಛಾನ್ಸಲರ್: •┈┈┈┈┈• ಏಂಜೆಲಾ ಮರ್ಕೆಲ್.
■.ಕರೆನ್ಸಿ: •┈┈┈┈┈• ಯುರೋ.
■.ರಾಜಧಾನಿ: •┈┈┈┈┈• ಬರ್ಲಿನ್.


7. ಕೆನಡಾ.
■.ಮುಖ್ಯಸ್ಥರು: •┈┈┈┈┈• ಎಲಿಜಬೆತ್ II.
■.ಪ್ರಧಾನಿ: •┈┈┈┈┈• ಸ್ಟೀಫನ್ ಹಾರ್ಪರ್.
■.ಕರೆನ್ಸಿ: •┈┈┈┈┈• ಕೆನಡಿಯನ್ ಡಾಲರ್.
■.ರಾಜಧಾನಿ: •┈┈┈┈┈• ಒಟ್ಟಾವಾ.


8. ಚೀನಾ
ಅಧ್ಯಕ್ಷ: •┈┈┈┈┈• ಕ್ಸಿ ಜಿನ್ ಪಿಂಗ್ .
ಪ್ರೀಮಿಯರ್: •┈┈┈┈┈• ಲಿ ಕೈಕಿಯಾಂಗ್.
ಕರೆನ್ಸಿ: •┈┈┈┈┈• ಯುವಾನ್.
ರಾಜಧಾನಿ: •┈┈┈┈┈• ಬೀಜಿಂಗ್.


9. ಮಂಗೋಲಿಯಾ.
■.ಅಧ್ಯಕ್ಷ: •┈┈┈┈┈• Tsakhiagiin Elbegdorj.
■.ಪ್ರಧಾನಿ: •┈┈┈┈┈• Chimed Saikhanbileg.
■.ಕರೆನ್ಸಿ: •┈┈┈┈┈• ಟೊಗ್ರಾಗ್.
■.ರಾಜಧಾನಿ: •┈┈┈┈┈• ಉಲಾನ್ ಬಟರ್.


10. ದಕ್ಷಿಣ ಕೊರಿಯಾ.
■.ಅಧ್ಯಕ್ಷ: •┈┈┈┈┈• ಪಾರ್ಕ್ ಗಿಯೊನ್- ಹೆ.
■.ಪ್ರಧಾನಿ: •┈┈┈┈┈• ಹ್ವಾಂಗ್ ಕ್ಯೂ-ಆಹನ್.
■.ಕರೆನ್ಸಿ: •┈┈┈┈┈• ದಕ್ಷಿಣ ಕೊರಿಯನ್ ಓನ್.
■.ರಾಜಧಾನಿ: •┈┈┈┈┈• ಸಿಯೋಲ್.


11. ಬಾಂಗ್ಲಾದೇಶ.
■.ಅಧ್ಯಕ್ಷ: •┈┈┈┈┈• ಮೊಹಮ್ಮದ್ ಅಬ್ದುಲ್ ಹಮೀದ್.
■.ಪ್ರಧಾನಿ: •┈┈┈┈┈• ಶೇಖ್ ಹಸೀನಾ.
■.ಕರೆನ್ಸಿ: •┈┈┈┈┈• ಬಾಂಗ್ಲಾದೇಶಿ ಟಾಕಾ.
■.ರಾಜಧಾನಿ: •┈┈┈┈┈• ಢಾಕಾ.


12. ಉಜ್ಬೆಕಿಸ್ಥಾನ.
■.ಅಧ್ಯಕ್ಷ: •┈┈┈┈┈• ಇಸ್ಲಾಂ ಕರಿಮೋವ್.
■.ಪ್ರಧಾನಿ: •┈┈┈┈┈• ಶಾವ್ಕತ್ ಮಿರ್ಜಿಯೋಯೆವ್.
■.ಕರೆನ್ಸಿ: •┈┈┈┈┈• ಉಜ್ಬೆಕಿಸ್ಥಾನಿ ಸೊಮ್.
■.ರಾಜಧಾನಿ: •┈┈┈┈┈• ತಾಷ್ಕೆಂಟ್.


13. ಕಝಾಕಸ್ತಾನ
■.ಅಧ್ಯಕ್ಷ: •┈┈┈┈┈• ನೂರ್ ಸುಲ್ತಾನ್ ನಜರ್ಬಯೆವ್.
■.ಪ್ರಧಾನಿ: •┈┈┈┈┈• ಕರೀಮ್ ಮಸ್ಸಿಮೋಯ್.
■.ಕರೆನ್ಸಿ: •┈┈┈┈┈• ಕಝಾಕಸ್ತಾನಿ ಟೆಂಗೆ.
■.ರಾಜಧಾನಿ: •┈┈┈┈┈• ಆಸ್ತಾನಾ.


14. ರಶಿಯಾ.
■.ಅಧ್ಯಕ್ಷ: •┈┈┈┈┈• ವ್ಲಾಡಿಮಿರ್ ಪುಟಿನ್.
■.ಪ್ರಧಾನಿ: •┈┈┈┈┈• ಡಿಮಿಟ್ರಿ ಮೆಡ್ವೆಡೆವ್.
■.ಕರೆನ್ಸಿ: •┈┈┈┈┈• ರಷ್ಯನ್ ರೂಬಲ್.
■.ರಾಜಧಾನಿ: •┈┈┈┈┈• ಮಾಸ್ಕೋ.


15.ತುರ್ಕಮೆನಿಸ್ಥಾನ .
■.ಅಧ್ಯಕ್ಷ: •┈┈┈┈┈• ಗುರ್ಬಾಂಗುಲಿ ಬೇರ್ದಿಮುಹಾಮೆದೊವ್.
■.ಕರೆನ್ಸಿ: •┈┈┈┈┈• ಟರ್ಕ್ಮೆನ್ ನೇವ್ ಮನತ್.
■.ರಾಜಧಾನಿ: •┈┈┈┈┈• ಅಶ್ಗಬಾಟ್ .


16. ಕಿರ್ಗಿಸ್ತಾನ್.
■.ಅಧ್ಯಕ್ಷ: •┈┈┈┈┈• ಅಲ್ಮಜ್ ಬೆಕ್ ಅತಂಬಯೆವ್.
■.ಪ್ರಧಾನಿ: •┈┈┈┈┈• ತೆಮಿರ್ ಸರಿಯೆವ್ .
■.ಕರೆನ್ಸಿ: •┈┈┈┈┈• ಕಿರ್ಗಿಸ್ತಾನಿ ಸಿಕ್ಸ್ .
■.ರಾಜಧಾನಿ: •┈┈┈┈┈• ಬಿಶ್ಕೆಕ್


17. ತಜಿಕಿಸ್ತಾನ್.
■.ಅಧ್ಯಕ್ಷ: •┈┈┈┈┈• ಇಮೋಮಲಿ ರೆಹಮಾನ್.
■.ಪ್ರಧಾನಿ: •┈┈┈┈┈• ಕೊಖಿರ್ ರಾಸುಲ್ಜೊಡ .
■.ಕರೆನ್ಸಿ: ತಜಕಿಸ್ತಾನಿ ಸೊಮೋನಿ.
■.ರಾಜಧಾನಿ: ದುಶಂಬೆ .


18.ಯುನೈಟೆಡ್ ಅರಬ್ ಎಮಿರೇಟ್ಸ್.
■.ಅಧ್ಯಕ್ಷ: •┈┈┈┈┈• ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್.
■.ಪ್ರಧಾನಿ: •┈┈┈┈┈• ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್.
■.ಕರೆನ್ಸಿ: •┈┈┈┈┈• ಯುನೈಟೆಡ್ ಅರಬ್ ಎಮಿರೇಟ್ಸ್ ದಿರ್ಹಾಮ್.
■.ರಾಜಧಾನಿ: •┈┈┈┈┈• ಅಬುಧಾಬಿ.

★ಗಮನಿಸಿ:
--ನಿಮಗೇನಾದರೂ ಇದರಲ್ಲಿ ತಪ್ಪುಗಳು ಕಂಡುಬಂದರೆ, ಅಥವಾ ಇನ್ನೇನಾದರೂ ಸೇರ್ಪಡೆಯಾಗಬೇಕೆಂದು ತಮಗೆ ಅನ್ನಿಸಿದ್ದಲ್ಲಿ, ತಾವು ದಯವಿಟ್ಟು ಸರಿಯೆನಿಸಿದ ಮಾಹಿತಿಗಳನ್ನು ಕಾಮೆಂಟ್ ಗಳ ಮೂಲಕ ಕೆಳಗೆ ಕಾಮೆಂಟ್ ಬಾಕ್ಸ್ ನಲ್ಲಿ ನಮೂದಿಸಿ. ಇದು ಇತರರಿಗೆ ಸಹಾಯಕವಾಗಿರುತ್ತದೆ. ಧನ್ಯವಾದಗಳು !!! "!!!.

☀ವಿವಿಧ ವೈಜ್ಞಾನಿಕ ಪರಿಮಾಣಗಳು ಮತ್ತು ಅವುಗಳ ಮಾನ) (Scientific different Parameters and Units)

☀ವಿವಿಧ ವೈಜ್ಞಾನಿಕ ಪರಿಮಾಣಗಳು ಮತ್ತು ಅವುಗಳ ಮಾನ)
(Scientific different Parameters and Units)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ವಿಜ್ಞಾನ
(General Science)

★ ಸಾಮಾನ್ಯ ಜ್ಞಾನ
(General Knowledge)


☀ಪರಿಮಾಣಗಳು •┈┈┈┈┈┈┈┈┈┈┈┈┈┈• ಮಾನ
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
●.ಆಂಪಿಯರ್ (A) •┈┈┈┈┈┈┈• ವಿದ್ಯುತ್ ಪ್ರವಾಹ.

●.ಆಯ್ಂಗ್ ಸ್ಟ್ರಾಮ್ •┈┈┈┈┈┈┈• ಬೆಳಕಿನ ತರಂಗಾಂತರ.

●.ಬಾರ್ •┈┈┈┈┈┈┈• ವಾತಾವರಣದ ಒತ್ತಡ.

●.ಡೆಸಿಬೆಲ್ •┈┈┈┈┈┈┈• ಧ್ವನಿ ತೀವ್ರತೆ.

●.ಡಾಲ್ಟನ್ •┈┈┈┈┈┈┈• ಪರಮಾಣು ದ್ರವ್ಯರಾಶಿ.

●.ಡಾರ್ಸಿ •┈┈┈┈┈┈┈• ಪ್ರವೇಶಸಾಧ್ಯತೆ.

●.ನ್ಯೂಟಾನ್ (N) •┈┈┈┈┈┈┈• ಬಲ

●.ಫ್ಯಾರಡ್(F) •┈┈┈┈┈┈┈• ಎಲೆಕ್ಟ್ರಿಕ್ ಧಾರಣಶಕ್ತಿ, ಸಂಚಯ ಸಾಮರ್ಥ್ಯ.

●.ಫ್ಯಾಥಮ್ •┈┈┈┈┈┈┈• ಸಮುದ್ರದ ಆಳ.

●.ಹೆನ್ರಿ (H) •┈┈┈┈┈┈┈• ಪ್ರೇರಣಾಂಕ (Inductance) .

●.ಹರ್ಟ್ಜ್ (HZ) •┈┈┈┈┈┈┈• ಧ್ವನಿ ಆವರ್ತನ (Frequency) .

●.ಜೌಲ್(J) •┈┈┈┈┈┈┈• ಶಕ್ತಿ, ಕೆಲಸ.

●.ನಾಟ್ •┈┈┈┈┈┈┈• ಹಡಗಿನ ಸ್ಪೀಡ್.

●.ಕಿಲೋವಾಟ್ •┈┈┈┈┈┈┈• ವಿದ್ಯುತ್.

●.ಕಿಲೋಗ್ರಾಮ್(Kg) •┈┈┈┈┈┈┈• ದ್ರವ್ಯರಾಶಿ.

●.ಲ್ಯಾಕ್ಸ್(LX) •┈┈┈┈┈┈┈• ಪ್ರಕಾಶತೆ (ದೀಪನ)

●.ಕೆಲ್ವಿನ್ (K) •┈┈┈┈┈┈┈• ಉಷ್ಣತೆ

●.M/S •┈┈┈┈┈┈┈• ವೇಗ

●.ಮೋಲ್ (MOL) •┈┈┈┈┈┈┈• ವಸ್ತು ಪ್ರಮಾಣ.

●.ಮ್ಯಾಕ್ಸ್ವೆಲ್ •┈┈┈┈┈┈┈• ಆಯಸ್ಕಾಂತೀಯ ಪ್ರವಾಹ.

●.ಓಮ್ನ •┈┈┈┈┈┈┈• ವಿದ್ಯುತ್ ಪ್ರತಿರೋಧಕ.

●.ವೋಲ್ಟ್(V) •┈┈┈┈┈┈┈• ವಿದ್ಯುತ್ ವಿಭವಾಂತರ (Electric potential) .

●.ಪ್ಯಾಸ್ಕಿಲ್ (Pa) •┈┈┈┈┈┈┈• ಒತ್ತಡ

●.ವ್ಯಾಟ್ •┈┈┈┈┈┈┈• ಕಾರ್ಯ ಸಾಮರ್ಥ್ಯ (ಪವರ್).

Sunday, 20 September 2015

☀***Updated! (ಸರಿ ಉತ್ತರಗಳೊಂದಿಗೆ) "ಎಸ್ ಡಿ ಎ (SDA) ಮತ್ತು  ಎಫ್ ಡಿ ಎ(FDA) - ಮಾದರಿ ಪ್ರಶ್ನೆ ಪತ್ರಿಕೆ 1"  ●ಸಾಮಾನ್ಯ ಜ್ಞಾನ (GENERAL KNOWLEDGE)  (SDA/FDA GK MODEL QUESTION PAPER)***Updated! 


☀***Updated! (ಸರಿ ಉತ್ತರಗಳೊಂದಿಗೆ) "ಎಸ್ ಡಿ ಎ (SDA) ಮತ್ತು
ಎಫ್ ಡಿ ಎ(FDA) - ಮಾದರಿ ಪ್ರಶ್ನೆ ಪತ್ರಿಕೆ 1"
●ಸಾಮಾನ್ಯ ಜ್ಞಾನ (GENERAL KNOWLEDGE)

(SDA/FDA GK MODEL QUESTION PAPER)***Updated!
━━━━━━━━━━━━━━━━━━━━━━━━━━━━━━━━━━━━━━━━━━━━━


●.ಸೂಚನೆಗಳು :-
★ ಇಲ್ಲಿ ತಯಾರಿಸಲಾದ ಸಾಮಾನ್ಯ ಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ 1 ಯು ಕೇವಲ ಎಸ್ ಡಿ ಎ (SDA) ಮತ್ತು ಎಫ್ ಡಿ ಎ(FDA) ಪರೀಕ್ಷೆಗಷ್ಟೇ ಸೀಮಿತಗೊಳಪಡಿಸದೇ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುವ ದೃಷ್ಟಿಯಿಂದ ತಯಾರಿಸಲಾಗಿದೆ.

★ ನಿಮ್ಮ ಕೌಶಲ್ಯಕ್ಕಾಗಿಯೇ ನಾನು ಉತ್ತರಗಳನ್ನು ಇಲ್ಲಿ ಪ್ರಕಟಿಸಿಲ್ಲ. ಶೀಘ್ರದಲ್ಲಿಯೇ ಉತ್ತರಗಳನ್ನೂ ನಿಮ್ಮ ಮುಂದಿಡುವೆ.

★ ಹಿಂದೆ ನಡೆಸಲ್ಪಟ್ಟ ಪ್ರಶ್ನೆ ಪತ್ರಿಕೆಯನ್ನುಗಮನದಲ್ಲಿಡ್ಟುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಈ ಮಾದರಿ ಪ್ರಶ್ನೆ ಪತ್ರಿಕೆ 1ಯನ್ನು ತಯಾರಿಸಲಾಗಿದ್ದು, ಏನಾದರೂ ಪ್ರಮಾದ ಕಂಡುಬಂದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿಸಿಕೊಳ್ಳುವೆ.

★ ಅತೀ ಶೀಘ್ರದಲ್ಲಿಯೇ---- "ಎಸ್ ಡಿ ಎ (SDA) ಮತ್ತು ಎಫ್ ಡಿ ಎ(FDA) ಸಾಮಾನ್ಯ ಜ್ಞಾನ-
ಮಾದರಿ ಪ್ರಶ್ನೆ ಪತ್ರಿಕೆ 2-2015"

— ನಿಮ್ಮ ಸಲಹೆಗಳು ನನಗೆ ಅತ್ಯಮೂಲ್ಯವಾದವುಗಳು.


•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•




ಪ್ರಶ್ನೆ ನಂ: 1) ಇತ್ತೀಚೆಗೆ ಭಾರತದಲ್ಲಿ ರದ್ದಾದ 'ಮ್ಯಾಗಿ ನೂಡಲ್ಸ್' (Maggi) ನಲ್ಲಿ ಕಂಡು ಬಂದ ಅಪಾಯಕಾರಿ ಅಂಶಗಳು ಯಾವುವು?
A] ಸೀಸ ಮತ್ತು ಗ್ಲುಟಮೇಟ್‌ √
B] ಮೋನೊ ಸೋಡಿಯಂ ಮತ್ತು ಹೈಡ್ರಾಕ್ಸೈಡ್
C] ಮೋನೊ ಆಕ್ಸೈಡ್ ಮತ್ತು ಸೀಸ
D] ಮೋನೊ ಸೋಡಿಯಂ ಸೀಸ ಮತ್ತು ಗ್ಲುಟಮೇಟ್‌


ಪ್ರಶ್ನೆ ನಂ: 2) ಯಾವ ದೇಶವು 2014 ರಲ್ಲಿ 'ಯೂರೋ ಜೋನ್' ಸೇರಿತು?
A] ಲಿಥುವೇನಿಯಾ
B] ಈಸ್ಟೊನಿಯಾ
C] ಸೈಪ್ರಸ್
D] ಲಾಟ್ವಿಯಾ √


ಪ್ರಶ್ನೆ ನಂ: 3) ಚುನಾವಣೆಗಳಲ್ಲಿ ಮತದಾರರ ಬೆರಳಿಗೆ ಹಚ್ಚುವ ಶಾಹಿಯಲ್ಲಿರುವ ರಾಸಾಯನಿಕ ವಸ್ತು?
A] ಸಿಲ್ವರ್ ನೈಟ್ರೇಟ್ √
B] ಸೋಡಿಯಂ ಅಸಿಡೇಟ್
C] ಸೋಡಿಯಂ ಪ್ಲೋರೈಡ್
D] ಪೊಟ್ಯಾಶಿಯಂ ಫಾಸ್ಫೇಟ್


ಪ್ರಶ್ನೆ ನಂ: 4) ರಾಕೆಟ್ ನ ಚಲನೆಯು ಈ ಕೆಳಗಿನ ಯಾವುದನ್ನು ಆಧರಿಸಿದೆ?
A] ನ್ಯೂಟನ್ ನ ಮೊದಲನೆಯ ನಿಯಮ
B] ನ್ಯೂಟನ್ ನ ಮೂರನೆಯ ನಿಯಮ √
C] ಐನ್‌ಸ್ಟೈನ್ ನ ನಿಯಮ
D] ಕೆಪ್ಲರನ ನಿಯಮ.


ಪ್ರಶ್ನೆ ನಂ: 5) ‘ಪೂರ್ವ ಮುತ್ತು’ ಎಂಬ ಭೌಗೋಳಿಕ ಅನ್ವರ್ಥನಾಮದ ಹೆಸರಿಟ್ಟು ಕರೆಯುವ ದೇಶ ಯಾವುದು?
A] ಆಸ್ಟ್ರೇಲಿಯಾ
B] ಬಹರೈನ್ √
C] ಬೆಲ್ಜಿಯಂ
D] ಶ್ರೀಲಂಕಾ


ಪ್ರಶ್ನೆ ನಂ: 6) ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶವೊಂದರ ರಾಷ್ಟ್ರೀಯ ಆದಾಯವು ಇದಕ್ಕೆ ಸಮ-
A] ಆ ದೇಶದ ಪ್ರಜೆಗಳು ಉತ್ಪಾದಿಸಿದ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯ.
B] ಒಟ್ಟು ಅನುಭೋಗ ಮತ್ತು ಹೂಡಿಕೆ ವೆಚ್ಚಗಳ ಮೊತ್ತ.
C] ಎಲ್ಲಾ ವ್ಯಕ್ತಿಗಳ ವೈಯುಕ್ತಿಕ ಆದಾಯಗಳ ಮೊತ್ತ.
D] ಅಂತಿಮವಾಗಿ ಎಲ್ಲಾ ಉತ್ಪಾದಿತ ಸರಕು ಮತ್ತು ಸೇವೆಗಳ ಹಣದ ಮೌಲ್ಯ. √


ಪ್ರಶ್ನೆ ನಂ: 7) ಭೂಮಧ್ಯೆ ರೇಖೆಯಿಂದ ಧ್ರುವಗಳ ಕಡೆಗೆ ನಾವು ಹೋಗುತ್ತಿದ್ದಂತೆ ಗುರುತ್ವದ ವೇಗೋತ್ಕರ್ಷವು....  
A] ಸ್ಥಿರವಾಗಿರುತ್ತದೆ
B] ಹೆಚ್ಚುತ್ತದೆ √
C] ಕಡಿಮೆಯಾಗುವುದು
D] 45° ಅಕ್ಷಾಂಶದವರೆಗೆ ಕಡಿಮೆಯಾಗಿ ಮತ್ತೆ ಹೆಚ್ಚುತ್ತದೆ.


ಪ್ರಶ್ನೆ ನಂ: 8) ಶರಾವತಿ ನದಿಯು ಸೃಷ್ಠಿಸಿದ ಜಲಪಾತ ಯಾವುದು?
A] ಮೊಗೋಡ ಜಲಪಾತ
B] ಊಂಚಳ್ಳಿ ಜಲಪಾತ
C] ಗೋಕಾಕ್ ಜಲಪಾತ
D] ಗೇರು ಸೊಪ್ಪೆ ಜಲಪಾತ√


ಪ್ರಶ್ನೆ ನಂ: 9) ದೆಹಲಿಯ ಯಾವ ರಸ್ತೆಯನ್ನು ಅಬ್ದುಲ್ ಕಲಾಂ ಹೆಸರನ್ನು ಇಡಲಾಗುವುದು?
A] ಔರಂಗಜೇಬ್ ರಸ್ತೆ.√
B] ಲೋಧಿ ರಸ್ತೆ
C] ವಸಂತ್ ಕುಂಜ್ ಮಾರ್ಗ್
D] ಅಕ್ಬರ್ ರಸ್ತೆ


ಪ್ರಶ್ನೆ ನಂ: 10) ಕಂಪ್ಯೂಟರುಗಳಲ್ಲಿ ಬಳಕೆಯಾಗುವ ಒಂದು ಬೈಟ್ (Byte) ನಲ್ಲಿ ಎಷ್ಟು ಬಿಟ್ (bit) ಗಳಿರುತ್ತವೆ ?
A] 4 ಬಿಟ್
B] 8 ಬಿಟ್√
C] 12 ಬಿಟ್
D] 16 ಬಿಟ್


ಪ್ರಶ್ನೆ ನಂ: 11) ರಾಷ್ಟ್ರಪತಿ ಆಡಳಿತವನ್ನು ಮೊತ್ತಮೊದಲ ಬಾರಿಗೆ ಮೈಸೂರು ರಾಜ್ಯದಲ್ಲಿ ವಿಧಿಸಿದ ವರ್ಷ ಯಾವುದು ?
A] 1969
B] 1970
C] 1971√
D] 1973


ಪ್ರಶ್ನೆ ನಂ: 12) ಯಾವ ರಾಷ್ಟ್ರೀಯ ಹೆದ್ದಾರಿಯು 2,369km ಉದ್ದವಿದ್ದು ವಾರಣಾಸಿಯಿಂದ ಕನ್ಯಾಕುಮಾರಿಯನ್ನು ಸಂಧಿಸುತ್ತದೆ?
A] ರಾಷ್ಟ್ರೀಯ ಹೆದ್ದಾರಿ
B] ರಾಷ್ಟ್ರೀಯ ಹೆದ್ದಾರಿ
C] ರಾಷ್ಟ್ರೀಯ ಹೆದ್ದಾರಿ 09
D]ರಾಷ್ಟ್ರೀಯ ಹೆದ್ದಾರಿ 07 √


ಪ್ರಶ್ನೆ ನಂ: 13)ಸುನಾಮಿ ಸಂಭವಿಸುವ ಮುನ್ನ ಮುನ್ಸೂಚನೆಯನ್ನು ನೀಡುವ ಸಾಧನ?
A] Tsuart
B] ಓಶನ್ ವೇವ್ ಡಿಟೆಕ್ಟೀವ್
C] ಸಿಸ್ಮೋಗ್ರಾಫ್
D] Doart (ಡೀಪ್ ಓಶನ್ ಅಸೆಸ್ ಮೆಂಟ್ ಆಂಡ್ ರಿಪೋರ್ಟಿಂಗ್ ಟೆಕ್ನಾಲಜಿ)√


ಪ್ರಶ್ನೆ ನಂ: 14) ಜಾಗತಿಕ ಮಟ್ಟದಲ್ಲಿ ಹೆಚ್ಚು ಇ- ತ್ಯಾಜ್ಯ ಉತ್ಪಾದನಾ ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತದ ಸ್ಥಾನ?
A] 6 ನೇಯ
B] 5 ನೇಯ√
C] 7 ನೇಯ
D] 11 ನೇಯ


ಪ್ರಶ್ನೆ ನಂ: 15) ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ 2014ರಲ್ಲಿ ಸೇರ್ಪಡೆಯಾದ ಭಾರತದ ಎರಡು ಹೊಸ ತಾಣಗಳೆಂದರೆ..,
A] ಹಿಮಾಚಲ ಪ್ರದೇಶದ ಕುಲುವಿನಲ್ಲಿರುವ ‘ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್’ ಹಾಗೂ ಗುಜರಾತ್‌ನ ಸುಂದರ ಮೆಟ್ಟಿಲುಗಳಿರುವ ‘ರಾಣಿಯ ಬಾವಿ’.√
B] ಗುಜರಾತ್‌ನ ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ & ರಾಜಸ್ಥಾನದ ಕೇವಲಾದೇವ್ ರಾಷ್ಟ್ರೀಯ ಉದ್ಯಾನ.
C] ಉತ್ತರಾಖಂಡದ ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು.
D] ಹಿಮಾಚಲ ಪ್ರದೇಶದ ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ ಮತ್ತು ಮಧ್ಯ ಪ್ರದೇಶದ ಭೀಮ್‌ಬೇಟ್ಕಾದ ಶಿಲಾಶ್ರಯಗಳು


ಪ್ರಶ್ನೆ ನಂ: 16) ಶಾಸನಬದ್ಧ ಲಿಕ್ವಿಡಿಟಿ ಅನುಪಾತವನ್ನು ನಿಗದಿಸುವವರು..
A] ಭಾರತ ಸರ್ಕಾರ
B] ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ
C] ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ√
D] ಯೋಜನಾ ಆಯೋಗ


ಪ್ರಶ್ನೆ ನಂ: 17) ಈಚೆಗಷ್ಟೆ ನಿಧನರಾದ ಕೆ.ಎನ್. ರಾಮಚಂದ್ರನ್ ಅವರು ಕೆಳಕಂಡ ಯಾವ ಕ್ಷೇತ್ರದಲ್ಲಿ ಹೆಸರುವಾಸಿಯಾಗದ್ದರು?
A] ಗೀತರಚನೆ
B] ಚಿತ್ರಕಲೆ√
C] ವೈದ್ಯಕೀಯ
D] ಇತಿಹಾಸಜ್ಞ


ಪ್ರಶ್ನೆ ನಂ: 18) ಮರಭೂಮಿಯಲ್ಲಿ ಸುಡು ಬಿಸಿಲಿನಲ್ಲಿ ಮರೀಚಿಕೆಯು ಕಂಡು ಬರುವ ಕಾರಣ?
A] ತೀಕ್ಷ್ಣವಾದ ಬೆಳಕಲ್ಲಿ ಮಸುಕಾಗಿ ಕಾಣುವುದರಿಂದ
B] ಭ್ರಮೆಯಿಂದ
C] ಅದ್ಬುತ ಕಲ್ಪನೆಯಿಂದಾಗಿ
D] ಒಟ್ಟು ಆಂತರಿಕ ಪ್ರತಿಫಲನ ವಿಲೋಮವಾಗಿರುವುದರಿಂದ.√


ಪ್ರಶ್ನೆ ನಂ: 19) ಇತ್ತೀಚೆಗೆ ಬಿಡುಗಡೆ ಮಾಡಲಾದ ‘ಅಂಡ್‌ ದೆನ್‌ ಒನ್‌ ಡೇ: ಎ ಮೆಮೊರ್‌’(And then One Day: A Memoir) ಎಂಬ ಆತ್ಮಕತೆ ಪುಸ್ತಕ ಯಾರದ್ದು?
A] ಅಮಿತಾಭ ಘೋಷ್
B] ಯಶವಂತ್ ಸಿನ್ಹಾ
C] ನಾಸಿರುದ್ದೀನ್‌ ಶಾ √
D] ಸಚೀನ್ ತೆಂಡೊಲ್ಕರ್


ಪ್ರಶ್ನೆ ನಂ: 20) ಭಾರತದಲ್ಲಿ ಎಷ್ಟು ರಾಜ್ಯಗಳು ಕರಾವಳಿ ತೀರವನ್ನು ಹೊಂದಿವೆ?
A] 10 ರಾಜ್ಯಗಳು
B] 15 ರಾಜ್ಯಗಳು
C] 07 ರಾಜ್ಯಗಳು
D] 09 ರಾಜ್ಯಗಳು√


ಪ್ರಶ್ನೆ ನಂ: 21) ಮೊದಲನೆ ಮಹಾಯುದ್ಧವನ್ನು ಯಾವ ಒಪ್ಪಂದವು ಔಪಚಾರಿಕವಾಗಿ ಮುಕ್ತಾಯಗೊಳಿಸಿತು
A] ವರ್ಸೆಲ್ಸ್ ಒಪ್ಪಂದ
B] ಪ್ಯಾರಿಸ್ ಒಪ್ಪಂದ √
C] ವಾಷಿಂಗ್ಟನ್ ಒಪ್ಪಂದ
D] ಲಂಡನ್ ಒಪ್ಪಂದ


ಪ್ರಶ್ನೆ ನಂ: 22) ಯಾರ ಸೈನ್ಯವು 'ಕರ್ನಾಟಕ ಬಲ' ಎಂದು ಪ್ರಸಿದ್ದವಾಗಿತ್ತು ಹಾಗೇಯೆ 'ಅಜೇಯ' ಎಂಬ ಕೀರ್ತಿ ಪಡೆದಿತ್ತು?
A] ಗಂಗರು
B] ಹೊಯ್ಸಳರು
C] ಕದಂಬರು
D] ಬಾದಾಮಿ ಚಾಲುಕ್ಯರು √


ಪ್ರಶ್ನೆ ನಂ: 23) ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕುರಿತು ಅಧ್ಯಯನ ಮಾಡಲು ನೇಮಕವಾಗಿದ್ದ ಆಯೋಗ ಯಾವುದು?
A] ಸಾಡ್ಲರ್ ಆಯೋಗ.
B] ಚಾರ್ಲ್ಸವುಡ್ ಆಯೋಗ.
C] ಹಂಟರ್ ಆಯೋಗ.√
D] ಶ್ಯಾಲೆ ಆಯೋಗ.


ಪ್ರಶ್ನೆ ನಂ: 24) ಮೃತದೇಹವನ್ನು ಕೆಡದಂತೆ ಇರಿಸಲು ಬಳಸುವ ರಾಸಾಯನಿಕ ಯಾವುದು?
A] ಸಾರ್ಬಿಟಾಲ್.
B] ಫಾರ್ಮಲ್ಡಿಹೈಡ.√
C] ಫ್ಲೂರೈಡ್.
D] ಯುರೇನಿಯಂ.


ಪ್ರಶ್ನೆ ನಂ: 25) ಹೊಂದಿಸಿ ಬರೆಯಿರಿ.
 
ವಾತಾವರಣ ವಲಯಗಳು ಪ್ರಕ್ರಿಯೆ
ಎ) ಟ್ರೋಟೋಸ್ಪಿಯರ್ 1) ಉಲ್ಕೆಗಳು                                  
ಬಿ) ಸ್ಟ್ರಾಟೋಸ್ಪಿಯರ್ 2) ಮೋಡಗಳು
ಸಿ) ಮಿಸೋಸ್ಪಿಯರ್ 3) ರೇಡಿಯೋ ತರಂಗಗಳು
ಡಿ) ಅಯಾನೋಸ್ಪಿಯರ್ 4) ಓಜೋನ್ ಪದರ

-ಸಂಕೇತಗಳು
A] ಎ-2. ಬಿ-3. ಸಿ -1. ಡಿ-4.
B] ಎ-4. ಬಿ-1. ಸಿ-2. ಡಿ-3.
C] ಎ -2. ಬಿ-4. ಸಿ -1. ಡಿ-3.√
D] ಎ-1. ಬಿ-3. ಸಿ -2. ಡಿ-4.


ಪ್ರಶ್ನೆ ನಂ: 26) ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2015 ನೇ ಇಸವಿಯನ್ನು ಈ ಕೆಳಕಂಡ ಯಾವ ವರ್ಷವನ್ನಾಗಿ ಘೋಷಿಸಿದೆ ?
A] ಅಂತರಾಷ್ಟ್ರೀಯ ಮಣ್ಣಿನ ವರ್ಷ√
B] ಅಂತರಾಷ್ಟ್ರೀಯ ಸಾಗರ ವರ್ಷ
C] ಅಂತರಾಷ್ಟ್ರೀಯ ತರಕಾರಿ ವರ್ಷ
D] ಅಂತರಾಷ್ಟ್ರೀಯ ಆಹಾರ ವರ್ಷ


ಪ್ರಶ್ನೆ ನಂ: 27) ಈಚೆಗೆ ನಿಧನರಾದ ಡಾರ್ಲೆ ಡಾಕಿನ್ಸ್ ಕ್ರೀಡಾಪಟು ಈ ಕೆಳಗಿನ ಯಾವ ಕ್ರೀಡೆಯಲ್ಲಿ ಪ್ರಸಿದ್ಧಿ ಪಡೆದಿದ್ದರು?
A] ಬಾಸ್ಕೆಟ್‌ಬಾಲ್ √
B] ಫುಟ್‌ಬಾಲ್
C] ವ್ಹಾಲಿಬಾಲ್
D] ಬ್ಯಾಡ್ಮಿಂಟನ್


ಪ್ರಶ್ನೆ ನಂ: 28) ಸಾಮಾನ್ಯವಾಗಿ ಮರೆಮಾಚಿದ ನಿರುದ್ಯೋಗ ಎಂದರೆ -
A] ಹೆಚ್ಚಿನ ಸಂಖ್ಯೆಯ ಜನರು ನಿರುದ್ಯೋಗಿಗಳಾಗಿರುತ್ತಾರೆ.
B] ಪರ್ಯಾಯ ಉದ್ಯೋಗ ಲಭ್ಯವಿಲ್ಲದಿರುವುದು.
C] ಕಾರ್ಮಿಕರ ಕನಿಷ್ಠ ಮಿತಿಯ (ಮಾರ್ಜಿನಲ್) ಉತ್ಪಾದಕತೆ ಶೂನ್ಯವಾಗಿರುದು √
D] ಕಾರ್ಮಿಕರ ಉತ್ಪಾದಕತೆ ಕಡಿಮೆಯಾಗಿರುವುದು.


ಪ್ರಶ್ನೆ ನಂ: 29) ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಮಾರಕ ಕಾಯಿಲೆ 'ಮೆರ್ಸ್(MERS)'ದ ವಿಸ್ತೃತ ರೂಪ-
A] Migraine Eosinophils respiratory syndrome
B] Middle Earth refraction cellulose
C] Middle East respiratory syndrome √
D] Middle East rectaculor syndrome


ಪ್ರಶ್ನೆ ನಂ: 30) 'ಮಾತು ಬೆಳ್ಳಿ ಮೌನ ಬಂಗಾರ' ಎಂಬುದು....
A] ರೂಪಕಾಲಂಕಾರ
B] ದೃಷ್ಟಾಲಂಕಾರ √
C] ಉತ್ಪ್ರೇಕ್ಷಾಲಂಕಾರ
D] ಉಪಮಾಲಂಕಾರ


ಪ್ರಶ್ನೆ ನಂ: 31) 2014 ನೇ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿಯನ್ನು ಪಡೆದವರು ಯಾರು?
A] ಹಾರ್ಪರ್ ಲೀ.
B] ಹೆನ್ರಿ ಮಿಲ್ಲರ್
C] ಲಿಡಿಯಾ ಡೇವಿಸ್
D] ರಿಚರ್ಡ್ ಪ್ಲಾನಗಾನ್. √


ಪ್ರಶ್ನೆ ನಂ: 32) ಅಂಕೋಲಾದ ಉಪ್ಪಿನ ಸತ್ಯಾಗ್ರಹದ ನೇತೃತ್ವವನ್ನು ವಹಿಸಿದವರು ಯಾರು?
A] ಎ.ಆರ್.ದಿವಾಕರ್
B] ಡಿ.ಕೆ.ಕರ್ವೆ
C] ಎಮ್.ಪಿ.ನಾಡಕರ್ಣಿ√
D] ಮಂಜಪ್ಪ ಹರ್ಡೆಕರ್


ಪ್ರಶ್ನೆ ನಂ: 33) ದಪ್ಪ ಗಾಜಿನ ಲೋಟದೊಳಗೆ ಕುದಿಯುವ ನೀರನ್ನು ಸುರಿದಾಗ ಅದರಲ್ಲಿ ಬಿರುಕು ಉಂಟಾಗುತ್ತದೆ. ಏಕೆಂದರೆ,
A] ಗಾಜು ಒಂದು ಉತ್ತಮ ಉಷ್ಣವಾಹಕ
B] ಗಾಜು ತುಲನಾತ್ಮಕವಾಗಿ ಒಳ್ಳೆಯ ಉಷ್ಣವಾಹಕ
C] ಗಾಜು ಹೆಚ್ಚು ಶಾಖದ ಒತ್ತಡ ತಡೆದುಕೊಳ್ಳುವ ವಸ್ತು
D] ಗಾಜು ಹೀನ, ಕಳಪೆ ಉಷ್ಣವಾಹಕ. √


ಪ್ರಶ್ನೆ ನಂ: 34) ಯಾರ 125 ನೇ ಜನ್ಮದಿನಾಚರಣೆಯ ವಾರ್ಷಿಕೋತ್ಸವದ ಅಂಗವಾಗಿ ಭಾರತ ಸರ್ಕಾರವು ರೂ 125 ನಾಣ್ಯವನ್ನು ಬಿಡುಗಡೆ ಮಾಡಲಾಗಿದೆ ?
A] ವಲ್ಲಭಭಾಯಿ ಪಟೇಲ್
B] ಬಾಲಗಂಗಾಧರ ತಿಲಕ್
C] ಭೀಮ್ ರಾವ್ ಅಂಬೇಡ್ಕರ್√
D] ರಾಜೇಂದ್ರ ಪ್ರಸಾದ್


ಪ್ರಶ್ನೆ ನಂ: 35) 'ಹಚ್ಚೇವು ಕನ್ನಡದ ದೀಪ' ಈ ಸುಮಧುರ ಭಾವಗೀತೆಯನ್ನು ರಚಿಸಿದವರು ಯಾರು?
A] ಕುವೆಂಪು
B] ಕೆ.ಎಸ್.ನಿಸಾರ್ ಅಹಮದ್
C] ಡಿ.ಎಸ್.ಕರ್ಕಿ √
D] ಜಿ.ಎಸ್.ಶಿವರುದ್ರಪ್ಪ


ಪ್ರಶ್ನೆ ನಂ: 36) ಬಾದಾಮಿ ಚಾಲುಕ್ಯರ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ವಾಸ್ತುಶಿಲ್ಪ ಶೈಲಿಯ ಹೆಸರು...
A] ಇಂಡೋ ಸಾರ್ಸೆನಿಕ್ ಶೈಲಿ
B] ದ್ರಾವಿಡ ಶೈಲಿ
C] ನಾಗರಶೈಲಿ
D] ವೇಸರ ಶೈಲಿ √


ಪ್ರಶ್ನೆ ನಂ: 37) ಪ್ರಪಂಚದ ಅತಿ ಎತ್ತರವಾದ ಜಾಗೃತ ಜ್ವಾಲಾಮುಖಿ ಪರ್ವತ ಯಾವುದು?
A] ಅಕಾನಕಾಗುವಾ
B] ಒಜಾಸ್ ಡೆಲ್ ಸಲಾಡೊ√
C] ಕೊಟೋಪಾಕ್ಷಿ
D] ಕಿಲಿಮಂಜಾರೋ


ಪ್ರಶ್ನೆ ನಂ: 38) ಕ್ರೀಡಾಂಗಣ ಇರುವ ಸಿಂಧೂ ನಾಗರಿಕತೆಯ ನಗರ -
A] ಚನೋಹ್ದರೋ
B] ದೊಲ್ವೀರ್ √
C] ಲೋಥಾಲ್
D] ಕಾಲಿಬಂಗಾನ್


ಪ್ರಶ್ನೆ ನಂ: 39) ಒಣಗಿದ ಮಣ್ಣಿನ ಮೇಲೆ ಮಳೆ ಬಿದ್ದಾಗ ಆ ಮಣ್ಣು ಉತ್ಪಾದಿಸುವ ವಾಸನೆಗೆ ಕಾರಣ...
A] ಮಣ್ಣಿನಲ್ಲಿರುವ ನಾಯಿಕೊಡೆ, ಬೂಸ್ಟು ಮೊದಲಾದ ಸಸ್ಯಜಾತಿಗಳು.
B] ಮಣ್ಣಿನ ಸ್ಟ್ರೆಪ್ಟೊಮೈಸ್ ಗಳು. √
C] ಮಣ್ಣಿನ ಪಾಚಿ
D] ಮಣ್ಣಿನ ಪ್ರೊಟೊಸೋವ್.


ಪ್ರಶ್ನೆ ನಂ: 40) ಯಾವ ಸಂವಿಧಾನದ ತಿದ್ದುಪಡಿಯನ್ನು 'ಮಿನಿ ಸಂವಿಧಾನ' ಎಂದು ಕರೆಯಲಾಗುತ್ತದೆ?
A] 42 ನೇ ತಿದ್ದುಪಡಿ (1976). √
B] 45 ನೇ ತಿದ್ದುಪಡಿ (1980).
C] 15 ನೇ ತಿದ್ದುಪಡಿ (1963).
D] 86 ನೇ ತಿದ್ದುಪಡಿ (2002).


ಪ್ರಶ್ನೆ ನಂ: 41) 'ಕಳಿಂಗ ಯುದ್ಧ' ನಡೆದ ಕಳಿಂಗ ಪ್ರದೇಶವು ಈ ಎರಡು ನದಿಗಳ ಮಧ್ಯದಲ್ಲಿನ ಪ್ರದೇಶವಾಗಿದೆ -
A] ಮಹಾನದಿ ಮತ್ತು ಗೋದಾವರಿ √
B] ಮಾಂಜ್ರಾ ಮತ್ತು ಇಂದ್ರಾವತಿ
C] ಗೋದಾವರಿ ಮತ್ತು ಸುವರ್ಣರೇಖಾ
D] ಮಹಾನದಿ ಮತ್ತು ವೇನಗಂಗಾ


ಪ್ರಶ್ನೆ ನಂ: 42) ಕನ್ನಡದ ಮೊದಲ ಪತ್ರಿಕೆ 'ಮಂಗಳೂರು ಸಮಾಚಾರ'ದ ಸಂಪಾದಕರು?
A] ಹರ್ಮನ್ ಮೊಂಗ್ಲಿಂಗ್ √
B] ರೆ.ಎಫ್.ಕಿಟೆಲ್
C] ವೈಗ್ಳೆ
D] ಹರ್ಮನ್ ಹಸ್ಸೆ


ಪ್ರಶ್ನೆ ನಂ: 43) 'ಉದ್ಯಮಿ ಸ್ನೇಹಿ' ರಾಜ್ಯಗಳ ಪಟ್ಪಿಯಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು?
A] ಗುಜರಾತ್√
B] ತಮಿಳುನಾಡು
C] ಆಂಧ್ರಪ್ರದೇಶ
D] ಮಹಾರಾಷ್ಟ್ರ


ಪ್ರಶ್ನೆ ನಂ: 44) ಹೊಂದಿಸಿ ಬರೆಯಿರಿ.

ಬೌದ್ಧ ಮಹಾಸಭೆಗಳು                  ಅಧ್ಯಕ್ಷರು
ಎ) ಮೊದಲನೆಯ ಬೌದ್ಧ ಮಹಾಸಭೆ   1) ಮುಗ್ಗಲಿಪುತ್ತ ತಿಸ್ಸ          
ಬಿ) ಎರಡನೆಯ ಬೌದ್ಧ ಮಹಾಸಭೆ       2) ಸಬಾಕಮಿ
ಸಿ) ಮೂರನೆಯ ಬೌದ್ಧ ಮಹಾಸಭೆ      3) ವಸುಮಿತ್ರ
ಡಿ) ನಾಲ್ಕನೆಯ ಬೌದ್ಧ ಮಹಾಸಭೆ      4) ಮಹಾಕಶ್ಯಪ

-ಸಂಕೇತಗಳು
A]ಎ-4. ಬಿ-2. ಸಿ -1. ಡಿ-3.√
B]ಎ-4. ಬಿ-1. ಸಿ-2. ಡಿ-3.
C]ಎ -2. ಬಿ-4. ಸಿ -1. ಡಿ-3.
D]ಎ-1. ಬಿ-3. ಸಿ -2. ಡಿ-4.


ಪ್ರಶ್ನೆ ನಂ: 45) ಇತ್ತೀಚೆಗೆ ಅಂತರರಾಷ್ಟ್ರೀಯ ಅಣು ಪ್ರಸರಣ ನಿಷೇಧ ಕಾಯಿದೆ ವ್ಯಾಪ್ತಿಗೊಳಪಟ್ಟ ರಾಷ್ಟ್ರ ಯಾವುದು?
A] ಇರಾಕ್
B] ಇರಾನ್ √
C] ಲಿಬಿಯಾ
D] ಅಫಘಾನಿಸ್ತಾನ


ಪ್ರಶ್ನೆ ನಂ: 46) ಭಾರತದ ಮೊಟ್ಟ ಮೊದಲ ಸಂಸ್ಕೃತ ಶಾಸನ ಯಾವುದು?
A] ಜುನಾಘಡ ಶಾಸನ √
B] ಚಂದ್ರವಳ್ಳಿ ಶಾಸನ
C] ತಾಳಗುಂದ ಶಾಸನ
D] ಐಹೋಳೆ ಶಾಸನ


ಪ್ರಶ್ನೆ ನಂ: 47) ಈ ಕೆಳಗಿನ ಯಾವ ಜೋಡಿಯು ಸರಿಯಾಗಿ ಹೊಂದಿಕೆಯಾಗಿಲ್ಲ ?
A]. ಐಸೋಥರ್ಮ್ – ಉಷ್ಣತೆ
B]. ಐಸೋಬಾರ್ – ಒತ್ತಡ
C]. ಐಸೋಹೆಲ್ಸ್ – ಬಿಸಿಲಿನ ಅವಧಿ
D]. ಐಸೋಹೈಟ್ಸ್ – ಆರ್ದ್ರತೆ √


ಪ್ರಶ್ನೆ ನಂ: 48) ಬಾವಲಿಗಳು ನಿಶಾಚರಿಗಳು, ಕತ್ತಲಲ್ಲಿ ಇತರ ವಸ್ತುಗಳಿಗೆ ತಾಗದೆ ಹಾರಾಡಬಲ್ಲವು. ಇದಕ್ಕೆ ಕಾರಣ ...
A] ತಮ್ಮ ರೆಕ್ಕೆಗಳಿಂದ ಸುತ್ತಮುತ್ತಲಿನ ವಸ್ತುಗಳನ್ನು ಸ್ಪರ್ಶಿಸುವುದರೊಂದಿಗೆ.
B] ಸುತ್ತಮುತ್ತಲಿನ ವಸ್ತುಗಳಿಂದ ಪ್ರತಿಫಲನಗೊಂಡ ಉಷ್ಣದ ಅಲೆಗಳನ್ನು ಸೂಕ್ಷ್ಮವಾಗಿ ಗ್ರಹಿಸುವುದರೊಂದಿಗೆ
C] ಶ್ರವಣಾತೀತ ಧ್ವನಿ ಅಲೆಗಳನ್ನು ಹೊರಸೂಸಿ, ಸುತ್ತಮುತ್ತಲಿನ ವಸ್ತುಗಳಿಂದ ಪ್ರತಿಫಲನಗೊಂಡ ಮರುಧ್ವನಿಯನ್ನು ಗ್ರಹಿಸುವುದರೊಂದಿಗೆ √
D] ಅವುಗಳಿಗೆ ರಾತ್ರಿ ದೃಷ್ಟಿ ಚುರುಕಾಗಿರುವುದರಿಂದ.


ಪ್ರಶ್ನೆ ನಂ: 49) ಸಂವಿಧಾನದ ಯಾವ ವಿಧಿಯು 'ಅಪಾಯಕಾರಿ ಕೈಗಾರಿಕೆಗಳು ಮತ್ತು ಕಾರ್ಖಾನೆ'ಗಳಲ್ಲಿ 14 ವರ್ಷದ ಕೆಳಗಿನ ಮಕ್ಕಳ ನೇಮಕಕ್ಕೆ ನಿಷೇಧಿಸುತ್ತದೆ ?
ಉತ್ತರ: 24ನೇ ವಿಧಿ.
A] 23 ನೇ ವಿಧಿ.
B] 19 ನೇ ವಿಧಿ.
C] 24 ನೇ ವಿಧಿ.√
D] 45 ನೇ ವಿಧಿ.


ಪ್ರಶ್ನೆ ನಂ: 50) ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ ಯಾರು?
A] ಘಿಯಾಸುದ್ಧೀನ್ ತುಘಲಕ್
B] ಫೀರೋಜ್ ಷಾ ತುಘಲಕ್ √
C] ಮಹಮ್ಮದ್ ಬಿನ್ ತುಘಲಕ್
D] ಖುಸ್ರಾವ್ ಖಾನ್


ಪ್ರಶ್ನೆ ನಂ: 51) ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದವರು ಯಾರು?
A] ಮುಮ್ಮಡಿ ಕೃಷ್ಣರಾಜ ಒಡೆಯರ್
B] ನಾಲ್ವಡಿ ಕೃಷ್ಣರಾಜ ಒಡೆಯರ್ √
C] ಚಾಮರಾಜ ಒಡೆಯರ್
D] ಜಯಚಾಮರಾಜ. ಒಡೆಯರ್


ಪ್ರಶ್ನೆ ನಂ: 52)'ಸ್ವಸ್ಥ ಧರಾ ಖೇತ್ ಹರಾ' ಯಾವ ಯೋಜನೆಗೆ ಸಂಬಂಧಿಸಿದೆ?
A] ರಾಷ್ಟ್ರೀಯ ಸ್ವಚ್ಛತಾ ಮಿಷನ್
B] ಪ್ರಧಾನಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆ
C] ಮಣ್ಣಿನ ಆರೋಗ್ಯ ಕಾರ್ಡ್ √
D] ಡಿಜಿಟಲ್ ಇಂಡಿಯಾ


ಪ್ರಶ್ನೆ ನಂ: 53) ಸಿಮೆಂಟ್ ಈ ವಸ್ತುಗಳ ಮಿಶ್ರಣವಾಗಿದೆ.
A] ಕ್ಯಾಲ್ಸಿಯಂ ಸಿಲಿಕೇಟ್, ಕ್ಯಾಲ್ಸಿಯಂ ಅಲ್ಯುಮಿನೇಟ್ ಮತ್ತು ಜಿಪ್ಸಮ್ √
B] ಕ್ಯಾಲ್ಸಿಯಂ ಸಿಲಿಕೇಟ್, ಕ್ಯಾಲ್ಸಿಯಂ ಹೈಡ್ರಾಕ್ಸೈಡ್
C] ಕ್ಯಾಲ್ಸಿಯಂ ಅಲ್ಯುಮಿನೇಟ್ ಮತ್ತು ಕ್ಯಾಲ್ಸಿಯಂ ಅಲ್ಯುಮಿನೇಟ್
D] ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಮತ್ತು ಜಿಪ್ಸಮ್


ಪ್ರಶ್ನೆ ನಂ: 54) 'ಕವಿರಾಜ ಮಾರ್ಗ' ಇದು ಯಾರ ಅವಧಿಗೆ ಸೇರಿದ್ದಾಗಿದೆ?
A] ಕದಂಬರು
B] ಚಾಲುಕ್ಯರು
C] ಹೊಯ್ಸಳರು
D] ರಾಷ್ಟ್ರಕೂಟರು √


ಪ್ರಶ್ನೆ ನಂ: 55) ಅದೇ ಜಿಲ್ಲೆಯಲ್ಲಿ ಹುಟ್ಟಿ ಅದೇ ಜಿಲ್ಲೆಯಲ್ಲಿ ಸಮುದ್ರ ಸೇರುವ ನದಿ ಯಾವುದು?
A] ಮಲಪ್ರಭಾ
B] ಘಟಪ್ರಭಾ
C] ಕಾಳಿ √
D] ವರದಾ


ಪ್ರಶ್ನೆ ನಂ: 56) ಉತ್ತರ ಗೋಳಾರ್ಧದಲ್ಲಿ ಗಾಳಿಯ ದಿಕ್ಕು ಬಲಕ್ಕೆ ವಿಕ್ಷೇಪಣಗೊಳ್ಳುತ್ತದೆ. ಕಾರಣ?
A] ಭೂಮಿಯ ಪರಿಭ್ರಮಣ√
B] ಭೂಮಿಯ ಅಕ್ಷದ ಬಾಗುವಿಕೆ
C] ಸೂರ್ಯನ ಸುತ್ತ ಭೂಮಿಯ ಪರಿಕ್ರಮಣ
D] ಚಂದ್ರನ ಗುರುತ್ವಾಕರ್ಷಣ ಬಲ


ಪ್ರಶ್ನೆ ನಂ: 57) ಕರ್ನಾಟಕದ ಪ್ರಥಮ ಚಕ್ರವರ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ ಅರಸ ಮಯೂರವರ್ಮನ ಸೈನಿಕ ಸಾಧನೆಯನ್ನು ತಿಳಿಸುವ ಶಾಸನ ಯಾವುದು?
A] ಜುನಾಘಡ ಶಾಸನ
B] ಐಹೋಳೆ ಶಾಸನ
C] ತಾಳಗುಂದ ಶಾಸನ
D] ಚಂದ್ರವಳ್ಳಿ ಶಾಸನ √


ಪ್ರಶ್ನೆ ನಂ: 58) ಸುದರ್ಶನ ಸರೋವರವನ್ನು ಉತ್ಖನನ ಮಾಡಿದ ಸ್ಥಳ ಯಾವುದು?
A] ಮಾಳ್ವ
B] ಪಂಜಾಬ್
C] ಕಾಥಿಯಾವರ್√
D] ಮಹಾರಾಷ್ಟ್ರ


ಪ್ರಶ್ನೆ ನಂ: 59) ಮಹಾದಾಯಿ ನದಿ ವಿವಾದ ನ್ಯಾಯಮಂಡಲಿಯು ಈ ಕೆಳಗಿನ ಯಾವ ರಾಜ್ಯಗಳಿಗೆ ಸಂಬಂಧಿಸಿದೆ?
A] ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ√
B] ತಮಿಳುನಾಡು, ಕೇರಳ ಮತ್ತು ಕರ್ನಾಟಕ
C] ಕೇರಳ, ಗೋವಾ ಮತ್ತು ಕರ್ನಾಟಕ
D] ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕ


ಪ್ರಶ್ನೆ ನಂ: 60) 'ಬ್ಯಾಂಕ್ ಓಂಬಡ್ಸಮನ್' ಬಗೆಗಿನ ಈ ಕೆಳಗಿನ ಯಾವ ಹೇಳಿಕೆ ಸರಿಯಲ್ಲ.
A] ಇವರನ್ನು ಭಾರತೀಯ ರಿಜರ್ವ್‌ ಬ್ಯಾಂಕು ನೇಮಿಸುತ್ತದೆ.
B] ಬ್ಯಾಂಕ್ ಓಂಬಡ್ಸಮನ್ ಪ್ರಥಮವಾಗಿ ಬ್ರಿಟನ್ (UK) ನಲ್ಲಿ ಜಾರಿಗೆ ತರಲಾಯಿತು.
C] ಇದನ್ನು ಭಾರತದಲ್ಲಿ RBIಯು 1995ರಲ್ಲಿ ಜಾರಿಗೆ ತರಲಾಯಿತು.
D] ಬ್ಯಾಂಕ್ ಓಂಬಡ್ಸಮನ್ ಜಮ್ಮು ಕಾಶ್ಮೀರವನ್ನು ಹೊರತುಪಡಿಸಿ ಇಡೀ ಭಾರತಕ್ಕೆಲ್ಲ ಸಂಬಂಧಿಸಿದೆ. √


ಪ್ರಶ್ನೆ ನಂ: 61) ಸರೋವರದಲ್ಲಿ ಘನೀಕೃತವಾಗಿರುವ ಮಂಜುಗಡ್ಡೆಯು ಕರಗಲು ಪ್ರಾರಂಭಿಸಿದಾಗ....
A] ಸುತ್ತಮುತ್ತಲಿನ ಪ್ರದೇಶದ ತಾಪವು ಹೆಚ್ಚುತ್ತದೆ.
B] ಸುತ್ತಮುತ್ತಲಿನ ಪ್ರದೇಶದ ತಾಪವು ಅಷ್ಟೇ ಇರುತ್ತದೆ.
C] ಸುತ್ತಮುತ್ತಲಿನ ಪ್ರದೇಶದ ತಾಪವು ಕಡಿಮೆಯಾಗುವುದು. √
D] ಸರೋವರದ ನೀರಿನ ಮಟ್ಟ ಏರುತ್ತದೆ.


ಪ್ರಶ್ನೆ ನಂ: 62) ಇತ್ತೀಚೆಗೆ ಕೇಂದ್ರ ಮುಖ್ಯ ಮಾಹಿತಿ ಆಯುಕ್ತರನ್ನಾಗಿ (ಸಿಐಸಿ) ಯಾರನ್ನು ನೇಮಕ ಮಾಡಲಾಯಿತು?
A] ವಿಜಯ್‌ ಶರ್ಮಾ.√
B] ಕೆ.ವಿ.ಚೌಧರಿ
C] ಪಿ.ಎನ್‌. ಶ್ರೀನಿವಾಸಾಚಾರಿ
D] ಕಿರಣ ಕುಮಾರ್

ಪ್ರಶ್ನೆ ನಂ: 63) 'ಮನುಷ್ಯಜಾತಿ ತಾನೊಂದೆ ವಲಂ' ಎಂಬ ಉಕ್ತಿ —
A] 'ಪಂಪಭಾರತ' ದಲ್ಲಿದೆ.
B] 'ಯಶೋಧರ ಚರಿತೆ' ಯಲ್ಲಿದೆ.
C] 'ಆದಿ ಪುರಾಣ' ದಲ್ಲಿದೆ. √
D] 'ಶಾಂತಿ ಪುರಾಣ' ದಲ್ಲಿದೆ.


ಪ್ರಶ್ನೆ ನಂ: 64) ಸಂವಿಧಾನದ ಯಾವ ವಿಧಿಯು 06 ವರ್ಷಗಳವರೆಗಿನ ಎಲ್ಲಾ ಮಕ್ಕಳಿಗೆ 'ಬಾಲ್ಯ ಪೋಷಣೆ ಮತ್ತು ಉಚಿತ ಹಾಗೂ ಕಡ್ಡಾಯ ಶಿಕ್ಷಣ' ವನ್ನು ಒದಗಿಸುವ ಕುರಿತು ತಿಳಿಸುತ್ತದೆ?
ಉತ್ತರ: 45 ನೇ ವಿಧಿ.
A] 23 ನೇ ವಿಧಿ.
B] 19 ನೇ ವಿಧಿ.
C] 24 ನೇ ವಿಧಿ.
D] 45 ನೇ ವಿಧಿ.√


ಪ್ರಶ್ನೆ ನಂ: 65) ಪ್ರಥಮ ತರೈನ್ ಯುದ್ಧ ಯಾರ ಮಧ್ಯದಲ್ಲಿ ನಡೆಯಿತು?
A] ಘೋರಿಮಹಮ್ಮದ್ ಮತ್ತು ಪೃಥ್ವಿರಾಜ್ ಚೌಹನ್ √
B] ಘೋರಿಮಹಮ್ಮದ್ ಮತ್ತು ಅಜಯ ರಾಜ್
C] ಘಜ್ನಿ ಮಹಮ್ಮದ್ ಮತ್ತು ಪೃಥ್ವಿರಾಜ್ ಚೌಹನ್
D] ಘಜ್ನಿ ಮಹಮ್ಮದ್ ಮತ್ತು ಎರಡನೇ ಪೃಥ್ವಿರಾಜ್


ಪ್ರಶ್ನೆ ನಂ: 66) 2015 ರ 'ಮ್ಯಾನ್ ಬೂಕರ್ ಅಂತರರಾಷ್ಟ್ರೀಯ ಪ್ರಶಸ್ತಿ'ಯನ್ನು ಪಡೆದವರು ಯಾರು?
A] ಲಿಡಿಯಾ ಡೇವಿಸ್
B] ಲಾಸ್ಲೊ ಕೃಸ್ಕಹೊರ್ಕೊ √
C] ಅಮಿತಾಬ್ ಘೋಷ್
D] ಪಿಲಿಪ್ ರೋತ್


ಪ್ರಶ್ನೆ ನಂ: 67) ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ಪ್ರಸ್ತಾವನೆ ( Preamble) ಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?
A] ಆಸ್ಟ್ರೇಲಿಯಾ
B] ಬ್ರಿಟನ್
C] ಅಮೆರಿಕಾ.√
D] ರಷ್ಯಾ


ಪ್ರಶ್ನೆ ನಂ: 68) ಭೂಮಿ ಮತ್ತು ಚಂದ್ರನ ನಡುವೆ ಇರುವ ಅಂತರವನ್ನು ನಿಖರವಾಗಿ ಈ ಕೆಳಗಿನ ಯಾವ ವಿಧಾನ/ಸಾಧನದಿಂದ ಅಳೆಯಲಾಗಿದೆ?
A] ಹಬಲ್ ನ ಟೆಲಿಸ್ಕೋಪ್.
B] ಯುರೇನಿಯಂ.
C] ರಿಟ್ರೋ ರಿಫ್ಲೆಕ್ಟರ್.√
D] ಮೇಲಿನ ಯಾವುದು ಅಲ್ಲ.


ಪ್ರಶ್ನೆ ನಂ: 69) ಇತ್ತೀಚೆಗೆ ಭಾರತವು 'Ex-Ekuverin 2015' ಎಂಬ ಹೆಸರಿನ 'ಜಂಟಿ ಮಿಲಿಟರಿ ಸಮರಾಭ್ಯಾಸ'ವನ್ನು ಯಾವ ದೇಶದೊಂದಿಗೆ ನಡೆಸಿತ್ತು?
A] ಮಾರಿಷಸ್
B] ಮಾಲ್ಡೀವ್ಸ್ √
C] ಶ್ರೀಲಂಕಾ
D] ಮಡಗಾಸ್ಕರ್


ಪ್ರಶ್ನೆ ನಂ: 70) ಮೂಕನಾಯಕ್ ಪತ್ರಿಕೆಯ ಸಂಫಾದಕರು
A] ಅರವಿಂದೋ ಘೋಷ್.
B] ಈಶ್ವರಚಂದ್ರ ವಿದ್ಯಾಸಾಗರ.
C] ಮಾಳವೀಯ
D] ಡಾ|| ಬಿ.ಆರ್.ಅಂಬೇಡ್ಕರ್. √


ಪ್ರಶ್ನೆ ನಂ: 71) ಮಾನವನ ಬಡತನ ಸೂಚಕವನ್ನು ಅಳೆಯುವ ಮಾನದಂಡ
A] ದೀರ್ಘಾಯುಷ್ಯ, ಪೋಷನೆ ಮತ್ತು ಜ್ಞಾನ,
B] ಜ್ಞಾನ, ಅವಶ್ಯಕತೆ ಮತ್ತು ಜೀವನ ಮಟ್ಟ,
C] ದೀರ್ಘಾಯುಷ್ಯ, ಜೀವನ ಮಟ್ಟ ಮತ್ತು ನೈರ್ಮಲ್ಯ,
D] ದೀರ್ಘಾಯುಷ್ಯ, ಜ್ಞಾನ ಮತ್ತು ಜೀವನ ಮಟ್ಟ√


ಪ್ರಶ್ನೆ ನಂ: 72) 'ಪ್ರಾಥಮಿಕ ಶಿಕ್ಷಣದ ಹಕ್ಕು' ಕುರಿತು ಸಂವಿಧಾನದ ಯಾವ ವಿಧಿಯು ತಿಳಿಸುತ್ತದೆ ?
ಉತ್ತರ:
A] 21 A ವಿಧಿ.√
B] 19 ನೇ ವಿಧಿ.
C] 24 ನೇ ವಿಧಿ.
D] 45 ನೇ ವಿಧಿ.


ಪ್ರಶ್ನೆ ನಂ: 73) ಅಧಿಕ ಉಬ್ಬರ ವಿಳಿತವು...
A] ಪ್ರತಿ 24 ಗಂಟೆಗಳಿಗೊಮ್ಮೆ ಉಂಟಾಗುತ್ತದೆ
B] ಪ್ರತಿ 12 ಗಂಟೆಗಳಿಗೊಮ್ಮೆ ಉಂಟಾಗುತ್ತದೆ√
C]. ಪ್ರತಿ 6 ಗಂಟೆಗಳಿಗೊಮ್ಮೆ ಉಂಟಾಗುತ್ತದೆ
D] ಪ್ರತಿ 8 ಗಂಟೆಗಳಿಗೊಮ್ಮೆ ಉಂಟಾಗುತ್ತದೆ


ಪ್ರಶ್ನೆ ನಂ: 74) ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ
1. 'ಅಶೋಬಾ' ಎಂಬ ಚಂಡಮಾರುತ ಭಾರತದ ಪಶ್ಚಿಮ ಕರಾವಳಿಯಲ್ಲಿ ಕಾಣಿಸಿತು
2. 'ಅಶೋಬಾ' ಚಂಡಮಾರುತವು ಕರ್ನಾಟಕದ ಕರಾವಳಿಯಲ್ಲಿ ಹೆಚ್ಚು ಮಳೆಯನ್ನು ಸುರಿಸಿತು.
3. 'ಅಶೋಬಾ' ಎಂದು ಚಂಡಮಾರುತಕ್ಕೆ ಹೆಸರಿಟ್ಟ ದೇಶ-ಶ್ರೀಲಂಕಾ.
4. 'ಸೈಮಾಟ್' ಎಂಬ ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆಯು 'ಅಶೋಬಾ' ಚಂಡಮಾರುತದ ಕುರಿತು ಮಾಹಿತಿ ನೀಡಿದೆ.
— ಮೇಲಿನ ಯಾವ ಹೇಳಿಕೆ ಸರಿಯಾಗಿದೆ?
A] 1,2 ಮತ್ತು 3
B] 2, 3 ಮತ್ತು 4
C] 1, 3 ಮತ್ತು 4
D] ಮೇಲಿನೆಲ್ಲವೂ √


ಪ್ರಶ್ನೆ ನಂ: 75) ಹೊಂದಿಸಿ ಬರೆಯಿರಿ.
   ರಾಜ್ಯ. ರಾಷ್ಟೀಯ ಉದ್ಯಾನವನಗಳು
ಎ) ಮೇಘಾಲಯ 1)ಬಾಲ್ಪಾಕ್ರಮ್                                  
ಬಿ) ಅರುಣಾಚಲ ಪ್ರದೇಶ 2) ನಮ್ದಾಪಾ
ಸಿ) ಜಾರ್ಖಂಡ್ 3) ಹಜಾರಿಬಾಗ್
ಡಿ) ಕರ್ನಾಟಕ 4) ಅಂಶಿ
ಇ) ಉತ್ತರ ಪ್ರದೇಶ 5) ದುಧ್ವಾ
ಸಂಕೇತಗಳು
A] ಎ-1. ಬಿ-2. ಸಿ -3. ಡಿ-4. ಇ-5 √
B] ಎ-4. ಬಿ-1. ಸಿ-5. ಡಿ-3. ಇ-2
C] ಎ -2. ಬಿ-4. ಸಿ -1. ಡಿ-5. ಇ-3
D] ಎ-1. ಬಿ-3. ಸಿ -2. ಡಿ-4. ಇ-5


ಪ್ರಶ್ನೆ ನಂ: 76) ವಾಸನೆ ಮತ್ತು ಬಣ್ಣ ರಹಿತವಾದ ವಿಕಿರಣವನ್ನು ಹೊರ ಸೂಸುವ (Radio Active Gas) ವಾಯುಮಂಡಲದ ಏಕೈಕ ಅನಿಲ ಯಾವುದು?
A] ಇಂಗಾಲಾಮ್ಲ
B] ಓಝೋನ್
C] ರಡಾನ್√
D] ಜಲಜನಕ


ಪ್ರಶ್ನೆ ನಂ: 77) ಅಮೆರಿಕಾ ಒಪನ್ ಟೆನಿಸ್ ಟೂರ್ನಿಯಲ್ಲಿ ನೊವಾಕ್ ಜೊಕೊವಿಚ್ ಸಿಂಗಲ್ಸ್'ನಲ್ಲಿ ಪ್ರಶಸ್ತಿ ಪಡೆದರು. ಅಂದಹಾಗೆ ಅವರು ಯಾವ ದೇಶದವರು?
A] ರಷ್ಯಾ
B] ಅಮೆರಿಕಾ
C] ಸರ್ಬಿಯಾ√
D] ಫ್ರಾನ್ಸ್


ಪ್ರಶ್ನೆ ನಂ: 78) ಪ್ರಥಮ 'ಅಂತರರಾಷ್ಟ್ರೀಯ ಓಝೋನ್ ಒಪ್ಪಂದ' ಯಾವ ವರ್ಷ ನಡೆಯಿತು?
A] 1960 Sept 20
B] 1988 Sept 16√
C] 1987 Jun 16
D] 2006 Jun 29


ಪ್ರಶ್ನೆ ನಂ: 79) ಕ್ರಿಕೆಟಿಗ ಡೆನಿಸ್ ಬ್ರಾಯನ್ ಕ್ಲೋಸ್ ಈಚೆಗೆ ನಿಧನರಾದರು. ಅಂದಹಾಗೆ ಅವರು ಯಾವ ದೇಶದ ಕ್ರಿಕೆಟ್ ತಂಡದ ನಾಯಕರಾಗಿದ್ದರು?
A] ನ್ಯೂಜಿಲೆಂಡ್
B] ಇಂಗ್ಲೆಂಡ್√
C] ದ.ಆಫ್ರಿಕಾ
D] ಆಸ್ಟ್ರೆಲಿಯಾ


ಪ್ರಶ್ನೆ ನಂ: 80) ಕ್ರೀಡಾಂಗಣ ಇರುವ ಸಿಂಧೂ ನಾಗರಿಕತೆಯ ನಗರ -
A] ಚನೋಹ್ದರೋ
B] ದೊಲ್ವೀರ್ √
C] ಲೋಥಾಲ್
D] ಕಾಲಿಬಂಗಾನ್


ಪ್ರಶ್ನೆ ನಂ: 81) ಅತೀ ಹೆಚ್ಚು ಬಂಜರು ಭೂಮಿಯನ್ನು ಹೊಂದಿರುವ ರಾಜ್ಯ ಯಾವುದು?
A] ಜಮ್ಮು-ಕಾಶ್ಮೀರ √
B] ರಾಜಸ್ಥಾನ
C] ಗುಜರಾತ್
D] ಪಂಜಾಬ್


ಪ್ರಶ್ನೆ ನಂ: 82) 'TROPEX -2015' ಇದು...
A] ಭಾರತ ಮತ್ತು ಜಪಾನ್ ನಡುವಿನ ಸಮರಾಭ್ಯಾಸ
B] ಭಾರತ ಮತ್ತು ಫ್ರಾನ್ಸ್ ನಡುವಿನ ಸಮರಾಭ್ಯಾಸ
C] ಭಾರತ ಸೇನಾಪಡೆಯು ಏಕಮುಖವಾಗಿ ಕೈಗೊಂಡ ಸಮರಾಭ್ಯಾಸ√
D] ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಮರಾಭ್ಯಾಸ


ಪ್ರಶ್ನೆ ನಂ: 83) ಭಾರತದ ಸಂವಿಧಾನ ನಿರ್ಮಾಪಕರು ಸಂಸದೀಯ ಪ್ರಜಾಪ್ರಭುತ್ವ ಮತ್ತು ದ್ವಿಸದನಗಳ ವ್ಯವಸ್ಥೆಯ ಪರಿಕಲ್ಪನೆಗಳನ್ನು ಯಾವ ವಿದೇಶದ ಸಂವಿಧಾನದಿಂದ ಎರವಲು ಪಡೆದಿದ್ದಾರೆ ?
A] ಅಮೇರಿಕಾದ ಸಂವಿಧಾನ
B] ಬ್ರಿಟೀಷ್ ಸಂವಿಧಾನ√
C] ಐರಿಷ್ ಸಂವಿಧಾನ
D] ಫ್ರೆಂಚ್ ಸಂವಿಧಾನ


ಪ್ರಶ್ನೆ ನಂ: 84) ಭಾರತದಲ್ಲಿ ಯಾವ ರಾಜ್ಯ ಅತಿ ಉದ್ದದ ಸಮುದ್ರ ಕಿನಾರೆ ಹೊ೦ದಿದೆ?
A] ಕೇರಳ
B]ಒಡಿಸ್ಸಾ
C] ಆಂಧ್ರಪ್ರದೇಶ
D] ಗುಜರಾತ್√


ಪ್ರಶ್ನೆ ನಂ: 85) ರೈಲ್ವೆ ಬ್ರಾಡ್ ಗೇಜ್ ನ ಸರಾಸರಿ ವಿಸ್ತಾರ?
A] 2.00 ಮೀ.
B] 1.83 ಮೀ.
C] 1.67 ಮೀ.√
D] 1.33 ಮೀ.


ಪ್ರಶ್ನೆ ನಂ: 86) ಹೊಂದಿಸಿ ಬರೆಯಿರಿ.

   ನಾಯಕರು ಸಮಾಧಿ ಸ್ಥಳ
ಎ) ಗಾಂಧೀಜಿ 1) ಶಕ್ತಿಸ್ಥಳ                                  
ಬಿ) ಬಿ.ಆರ್.ಅಂಬೇಡ್ಕರ್ 2) ರಾಜ್ ಘಾಟ್.
ಸಿ) ಇಂದಿರಾಗಾಂಧಿ 3) ಕಿಸಾನ್ ಘಾಟ್.
ಡಿ) ಚರಣ್ ಸಿಂಗ್ 4) ಚೈತ್ರಭೂಮಿ
ಇ) ರಾಜೀವ್ ಗಾಂಧಿ 5) ವೀರಭೂಮಿ

-ಸಂಕೇತಗಳು
A] ಎ-1. ಬಿ-2. ಸಿ -3. ಡಿ-5. ಇ-4
B] ಎ-4. ಬಿ-1. ಸಿ-5. ಡಿ-3. ಇ-2
C] ಎ -2. ಬಿ-4. ಸಿ -1. ಡಿ-3. ಇ-5 √
D] ಎ-2. ಬಿ-5. ಸಿ -1. ಡಿ-4. ಇ-3


ಪ್ರಶ್ನೆ ನಂ: 87) ವಾಯುಮಂಡಲದಲ್ಲಿರುವ ಅತ್ಯಂತ ಸಾಂದ್ರವಾದ ಅನಿಲ ಯಾವುದು?
A] ಆರ್ಗಾನ್ √
B] ಸಾರಜನಕ
C] ಜಲಜನಕ
D] ಆಮ್ಲಜನಕ


ಪ್ರಶ್ನೆ ನಂ: 88) ವಿಶ್ವ ಅಭಿವೃದ್ಧಿ ವರದಿಯನ್ನು ಸಿದ್ಧಪಡಿಸುವವರು ಯಾರು?
A] ವಿಶ್ವ ಆರ್ಥಿಕ ಪೋರಂ
B] ಅಂತರಾಷ್ಟ್ರೀಯ ಹಣಕಾಸು ನಿಧಿ
C] ವಿಶ್ವಬ್ಯಾಂಕ್√
D] ವಿಶ್ವ ವ್ಯಾಪಾರ ಸಂಸ್ಥೆ


ಪ್ರಶ್ನೆ ನಂ: 89) ಕರ್ನಾಟಕದ ರಾಜ್ಯ ಆದಾಯವನ್ನು ಅಧಿಕೃತವಾಗಿ ಅಂದಾಜು ಮಾಡುವವರು
A] ಕೇಂದ್ರ ಸಾಂಖ್ಯಿಕ ಸಂಸ್ಥೆ
B] ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ√
C] ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಸಂಸ್ಥೆ
D] ರಾಷ್ಟ್ರೀಯ ಸಾಂಖ್ಯಿಕ ಆಯೋಗ


ಪ್ರಶ್ನೆ ನಂ: 90) ಗಂಗರ ರಾಜಧಾನಿ ತಲಕಾಡು ಪ್ರಸ್ತುತ ಈ ಜಿಲ್ಲೆಯಲ್ಲಿದೆ -
A] ಚಿತ್ರದುರ್ಗ
B] ಬೆಂಗಳೂರು
C] ಬಾಗಲಕೋಟೆ
D] ಮೈಸೂರು √


ಪ್ರಶ್ನೆ ನಂ: 91) 'ಟಚ್ ಪ್ಲೇ' ಇದು ಯಾವ ಭಾರತೀಯ ಕ್ರೀಡಾಪಟುವಿನ ಜೀವನ ಚರಿತ್ರೆಯಾಗಿದೆ?
A] ಧ್ಯಾನ್ ಚಂದ್
B] ಪ್ರಕಾಶ ಪಡುಕೋಣೆ√
C] ಕಪಿಲದೇವ್
D] ವಿಶ್ವನಾಥನ್ ಆನಂದ್


ಪ್ರಶ್ನೆ ನಂ: 92) ಯಾವ ದಿನದಂದು ಸಂವಿಧಾನಿಕ ಸಭೆಯು ಭಾರತ ಸಂವಿಧಾನವನ್ನು ಒಪ್ಪಿತು (ಅಂಗೀಕರಿಸಿತು)?
A] 18-08-1947,
B] 26-01-1950,
C] 9-12-1946,
D] 26-11-1949√


ಪ್ರಶ್ನೆ ನಂ: 93) ಪರಿಸರ ಸಮತೋಲನ ಕಾಪಾಡಲು ಪ್ರತಿಶತ ಎಷ್ಟು ಪ್ರಮಾಣದ ಅರಣ್ಯ ಪ್ರದೇಶವನ್ನು ಹೊಂದಿರಬೇಕು ?
A] 10%
B] 23%
C] 33%√
D] 53%


ಪ್ರಶ್ನೆ ನಂ: 94) ಸಂವಿಧಾನದ ನಿರ್ದೇಶಕ ತತ್ವಗಳಿಗೆ ಸಂಬಂಧಿಸಿದಂತೆ ಇವುಗಳಲ್ಲಿ ಯಾವುದು ನಿಜವಲ್ಲ
A] ಭಾರತದ ಸಂವಿಧಾನದ ಭಾಗ 4 ರಲ್ಲಿ ಅಳವಡಿಸಿದೆ,
B] ಐರ್ಲೆಂಡಿನ ಸಂವಿಧಾನದಿಂದ ಪ್ರೇರಣೆ ಪಡೆದಿದೆ,
C] ನ್ಯಾಯಾಂಗದ ಮೂಲಕ ಸಮರ್ಥಿಸಲಾಗದ ಜನರ (ನಾಗರೀಕರ) ಹಕ್ಕುಗಳೆಂದು ತಿಳಿಯಲಾಗಿದೆ,
D] ರಚನೆಯ ನಂತರ ಅವುಗಳನ್ನು ತಿದ್ದುಪಡಿಮಾಡಲಾಗಿಲ್ಲ.√


ಪ್ರಶ್ನೆ ನಂ: 95) ಆಕಾಶದಲ್ಲಿ ಮೋಡವಿಲ್ಲದಾಗ ಇರುವುದಕ್ಕಿಂತ ಮೋಡವಿರುವಂತಹ ರಾತ್ರಿಗಳು ಹೆಚ್ಚು ತಾಪಯುಕ್ತವಾಗಿರುತ್ತವೆ ಏಕೆಂದರೆ...
A] ಹಸಿರು ಮನೆ ಪರಿಣಾಮ√
B] ಭೂಪ್ರದೇಶದ ವಿಕಿರಣ
C] ಇನ್ಸೋಲೇಶನ್ (ಆತಪನ)
D] ಅಲ್ಟ್ರಾವೈಲೆಟ್ ಕಿರಣಗಳು


ಪ್ರಶ್ನೆ ನಂ: 96) ದೇಶದ ನೀತಿ ಆಯೋಗದ ಮೊದಲ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವರು ಯಾರು?
A] ದಲವೀರ್ ಭಂಡಾರಿ
B] ಹರೀಶ್ ರಾವತ್
C] ಅರವಿಂದ್‌ ಪನಗರಿಯಾ √
D] ರಾಜೀವ್ ಶುಕ್ಲ


ಪ್ರಶ್ನೆ ನಂ: 97) ‘ಸೂಪರ್‌ಮೂನ್‌’ ಪ್ರಕ್ರಿಯೆ ಸುಮಾರು ಎಷ್ಟು ತಿಂಗಳಿಗೊಮ್ಮೆ ನಡೆಯುತ್ತಿರುತ್ತದೆ.?
A] 14 ತಿಂಗಳಿಗೊಮ್ಮೆ √
B] 12 ತಿಂಗಳಿಗೊಮ್ಮೆ
C] 06 ತಿಂಗಳಿಗೊಮ್ಮೆ
D] 24 ತಿಂಗಳಿಗೊಮ್ಮೆ


ಪ್ರಶ್ನೆ ನಂ: 98) 2014 ರ ಮಾನವ ಅಭಿವೃದ್ಧಿ ಸೂಚ್ಯಂಕ (ಎಚ್ ಡಿ ಐ) ದಲ್ಲಿ ಭಾರತವು ಎಷ್ಟನೇ ಸ್ಥಾನ ಪಡೆದುಕೊಂಡಿದೆ?
A]133 ನೇ ಸ್ಥಾನ
B]134 ನೇ ಸ್ಥಾನ
C]135 ನೇ ಸ್ಥಾನ √
D]136 ನೇ ಸ್ಥಾನ


ಪ್ರಶ್ನೆ ನಂ: 99) ಕಾರ್ಮಿಕರ ಸ್ಥಿತಿಗತಿ ಸುಧಾರಿಸಲು ಈಚೆಗಷ್ಟೇ ಪ್ರಧಾನಮಂತ್ರಿಗಳು ಯಾರ ಹೆಸರಿನಲ್ಲಿ 'ಶ್ರಮೇವ ಜಯತೆ' ಯೋಜನೆ ಆರಂಭಿಸಿದರು?
A] ಸ್ವಾಮಿ ವಿವೇಕಾನಂದ
B] ಪಂಡಿತ ದೀನ ದಯಾಳ ಉಪಾದ್ಯಾಯ √
C] ಮಹಾತ್ಮ ಗಾಂಧಿ
D] ಸರ್ದಾರ್ ವಲ್ಲಭಭಾಯ್ ಪಟೇಲ್


ಪ್ರಶ್ನೆ ನಂ: 100) ಕ್ವಿಟ್ ಇಂಡಿಯಾ ಚಳುವಳಿಯು ಯಾವ ಸಂಧಾನದ ಅಸಫಲತೆಯ ಕಾರಣಕ್ಕೆ ಪ್ರಾರಂಭವಾಯಿತು
A] ಕ್ರಿಪ್ಸ್ ನಿಯೋಗ √
B] ಸೈಮನ್ ಆಯೋಗ
C] ಹಂಟರ್ ಆಯೋಗ
D] ಕ್ಯಾಬಿನೆಟ್ ಸಂಧಾನ

Saturday, 12 September 2015

☀5.ಕರ್ನಾಟಕ ರಾಜ್ಯದ ಭೂ ಸ್ಥಳ (ಮೇಲ್ಮೈ) ಲಕ್ಷಣಗಳು:  Unit 2.ಕರ್ನಾಟಕ ರಾಜ್ಯದ ಭೂ ಭೌತ ಲಕ್ಷಣಗಳು:.. ಮುಂದುವರೆದ ಭಾಗ... (Karnataka land (surface) features)

☀5.ಕರ್ನಾಟಕ ರಾಜ್ಯದ ಭೂ ಸ್ಥಳ (ಮೇಲ್ಮೈ) ಲಕ್ಷಣಗಳು:
Unit 2.ಕರ್ನಾಟಕ ರಾಜ್ಯದ ಭೂ ಭೌತ ಲಕ್ಷಣಗಳು:.. ಮುಂದುವರೆದ ಭಾಗ...
(Karnataka land (surface) features)
━━━━━━━━━━━━━━━━━━━━━━━━━━━━━━━━━━━━━━━━━━━━━

♦.(ಕರ್ನಾಟಕ ಪ್ರಾಕೃತಿಕ ಭೂಗೋಳ)
(Karnataka physical Geography)


●.5. ಭೂ ಸ್ಥಳ (ಮೇಲ್ಮೈ) ಲಕ್ಷಣ:
•┈┈┈┈┈┈┈┈┈┈┈┈┈┈┈┈┈┈┈•
— ಸ್ಥಳ ಲಕ್ಷಣಗಳ ಎಲ್ಲ ವ್ಯತ್ಯಯಗಳ ನಮೂನೆಗಳನ್ನು ಕರ್ನಾಟಕ ಪ್ರತಿನಿಧಿಸುತ್ತದೆ. ಉನ್ನತ ಪರ್ವತಗಳು, ಪ್ರಸ್ಥಭೂಮಿ, ಶೇಷ ಗುಡ್ಡಗಳು ಹಾಗೂ ಕರಾವಳಿ ಬಯಲು. ರಾಜ್ಯವು ಪಶ್ಚಿಮ, ಪೂರ್ವ ಮತ್ತು ದಕ್ಷಿಣದಲ್ಲಿ ಪರ್ವತಮಾಲೆಯಿಂದ ಆವೃತವಾಗಿದೆ. ಆದರೆ ರಾಜ್ಯದ ಪ್ರಧಾನ ಲಕ್ಷಣವೆಂದರೆ ಪ್ರಸ್ಥಭೂಮಿ.

●.ಸರಾಸರಿ ಸಮುದ್ರ ಮಟ್ಟದಿಂದ ಪ್ರಸ್ಥಭೂಮಿಯು 600 ರಿಂದ 900 ಮೀಟರ್ ಎತ್ತರದಲ್ಲಿದೆ. ಇಡೀ ಭೂ ದೃಶ್ಯ ಅಂಕುಡೊಂಕಾಗಿದ್ದು, ಪರ್ವತಗಳಿಂದ, ಆಳ ಕಮರಿಗಳಿಂದ ಛೇದಿತವಾಗಿದೆ. ಅರಬ್ಬೀ ಸಮುದ್ರಕ್ಕೆ ಎದುರಾಗಿರುವ ಕಿರಿದಾದ ಕರಾವಳಿ ಪಟ್ಟಿಯಲ್ಲಿ ಮಾತ್ರ ಸರಾಸರಿ ಸಮುದ್ರ ಮಟ್ಟಕ್ಕಿಂತ ಮೇಲೆ 300 ಮೀಟರಿಗಿಂತ ಕಡಿಮೆ ಎತ್ತರದ ಮೈದಾನವನ್ನು ಕಾಣಬಹುದು. 1,500 ಮೀಟರಿಗಿಂತ ಹೆಚ್ಚು ಎತ್ತರದ ಕೆಲವೇ ಶೃಂಗಗಳು ಪಶ್ಚಿಮ ಮತ್ತು ಪೂರ್ವ ಘಟ್ಟದ ಸಮೂಹದಲ್ಲಿವೆ.

●.ಪಶ್ಚಿಮಘಟ್ಟವನ್ನು ಪಶ್ಚಿಮ ಪೂರ್ವ ದಿಕ್ಕುಗಳಲ್ಲಿ ಅಡ್ಡ ಕೊಯ್ದಂತೆ ಚಿತ್ರ ಪಡೆಯುವುದಾದರೆ ನಾವು ಸಾಮಾನ್ಯವಾಗಿ ಮೊದಲು ಕಿರಿದಾದ ಕರಾವಳಿ ಬಯಲು, ಮುಂದೆ ಪೂರ್ವಕ್ಕೆ ಹಾಯ್ದಂತೆ ಚಿಕ್ಕ ಚಿಕ್ಕ ಪ್ರಸ್ಥಭೂಮಿಗಳನ್ನು ವಿವಿಧ ಔನ್ನತ್ಯದಲ್ಲಿ ಕಾಣುತ್ತೇವೆ. ಮುಂದುವರಿದಂತೆ ದಿಢೀರೆಂದು ಬಹು ಎತ್ತರದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದರ ನಂತರ ಪೂರ್ವಕ್ಕೆ ಇಳಿಜಾರು ಎದುರಾಗುತ್ತದೆ. ಹಾಗೆಯೇ ಪೂರ್ವ, ಉತ್ತರ ಮತ್ತು ಪಶ್ಚಿಮಕ್ಕೆ ಇಳಿಜಾರು ತೋರುವ ಪ್ರಸ್ಥಭೂಮಿ ಎದುರಾಗುತ್ತದೆ.

●.ಕರ್ನಾಟಕದ ಉನ್ನತ ಗಿರಿಶೃಂಗಗಳ ಪೈಕಿ ಮುಖ್ಯವಾದವುಗಳೆಂದರೆ ,
ಮುಳ್ಳಯ್ಯನಗಿರಿ (1,925 ಮೀಟರ್), ಬಾಬಾಬುಡನ್‍ಗಿರಿ (ಚಂದ್ರದ್ರೋಣ ಪರ್ವತ-1,894 ಮೀಟರ್), ಮತ್ತು ಕುದುರೆಮುಖ (1,895 ಮೀಟರ್). ಇವೆಲ್ಲವೂ ಚಿಕ್ಕಮಗಳೂರು ಜಿಲ್ಲೆಯಲ್ಲೇ ಇವೆ. ಪುಷ್ಪಗಿರಿ (1,908 ಮೀಟರ್) ಕೊಡಗು ಜಿಲ್ಲೆಯಲ್ಲಿದೆ.

(ಕೃಪೆ: ಕರ್ನಾಟಕ ಕೈಪಿಡಿ)

☀ಈ ದಿನದ (ಐಎಎಸ್/ಕೆಎಎಸ್) ಪರೀಕ್ಷಾ ಪ್ರಶ್ನೆ : ☀ಕರ್ನಾಟಕದ ಭೂ ಪ್ರದೇಶದ ಪ್ರಾಚೀನ ಪರಂಪರೆ ಹಾಗೂ ಕರ್ನಾಟಕ ಶಬ್ದದ ಪ್ರಾಚೀನತೆ : (The Ancient Heritage of the Karnataka Landscape and the Word "Karnataka")

☀ಈ ದಿನದ (ಐಎಎಸ್/ಕೆಎಎಸ್) ಪರೀಕ್ಷಾ ಪ್ರಶ್ನೆ :
☀ಕರ್ನಾಟಕದ ಭೂ ಪ್ರದೇಶದ ಪ್ರಾಚೀನ ಪರಂಪರೆ ಹಾಗೂ ಕರ್ನಾಟಕ ಶಬ್ದದ ಪ್ರಾಚೀನತೆ :
(The Ancient Heritage of the Karnataka Landscape and the Word "Karnataka")
━━━━━━━━━━━━━━━━━━━━━━━━━━━━━━━━━━━━━━━━━━━━━

★ಪ್ರಾಚೀನ ಕರ್ನಾಟಕದ ಇತಿಹಾಸ
(Ancient Karnataka History)

★ಸಾಮಾನ್ಯ ಕನ್ನಡ
(General Kannada)


●.ಮಹಾಭಾರತದ ಭೀಷ್ಮಪರ್ವದಲ್ಲಿ “ಕರ್ಣಾಟ ಮಹಿಷಕಾ ವಿಕಲ್ಪ ಮೂಷಕಸ್ತಥಾ ಝಿಲ್ಲಿಕಾಃ ಕುನ್ತಲಾಶ್ಚೈವ ಸೌಹೃದಾ ನಭಕಾನನ” ಎಂದು ಹೇಳಿದೆ. ಇದು ಕರ್ನಾಟಕದ ಮೊದಲ ಉಲ್ಲೇಖ ಎಂದು ಹೇಳಬಹುದು.

●.ಕರ್ನಾಟಕ ಇಂದಿನ ಕರ್ನಾಟಕದ ದಕ್ಷಿಣಭಾಗ, ಮಹಿಷಿಕಾ ಇಂದಿನ ಮೈಸೂರು ಜಿಲ್ಲೆಯ ಸುತ್ತಮುತ್ತಲ ಪ್ರದೇಶ, ಕುಂತಲಾ ಎಂಬುದು ಉತ್ತರ ಕರ್ನಾಟಕ ಪ್ರದೇಶ ಎಂದು ಹೇಳಬಹುದು.

●.ಇದನ್ನು ಬಿಟ್ಟರೆ ಕರ್ನಾಟಕದ ಭೂ ಪ್ರದೇಶದ ಪ್ರಾಚೀನತೆ ಇಂದಿನ ಕರ್ನಾಟಕದ ಭೂಪ್ರದೇಶದ ಪ್ರಾಚೀನ ಪರಂಪರೆಯು ನಮ್ಮ ದೇಶದ ಸುಮಾರು 4-5ನೇ ಶತಮಾನದ ಕೃತಿಗಳಾದ ಶೂದ್ರಕ ಕವಿಯ 'ಮೃಚ್ಛಕಟಿಕಾ', 'ವಿಷ್ಣುಧರ್ಮೋತ್ತರ ಪುರಾಣ', ಸುಮಾರು ಆರನೆಯ ಶತಮಾನದ ಕೃತಿಗಳಾದ ವರಾಹಮಿಹಿರನ 'ಬೃಹತ್ಸಂಹಿತೆ', 'ಭಾಗವತ ಪುರಾಣ', ಎಂಟನೇ ಶತಮಾನದ 'ಮಾರ್ಕಂಡೇಯ ಪುರಾಣ', 9ನೇ ಶತಮಾನದ ಮತಂಗನ 'ಬೃಹದ್ದೇಶಿ', ಇನ್ನೂ ಮುಂತಾದ ಕೃತಿಗಳಲ್ಲಿ ಕರ್ಣಾಟ(ಕ)ದ ಉಲ್ಲೇಖವಿದೆ.

●.ಉದ್ಯೋತನ ಸೂರಿ ಎಂಬ ಕವಿಯ 'ಕುವಲಯಮಾಲಾ ಕಥಾ' ಎಂಬ ಪ್ರಾಕೃತ ಕೃತಿಯಲ್ಲಿ (ಕ್ರಿ.ಶ.779) ತಮಿಳಿನ 'ಶಿಲಪ್ಪದಿಗಾರಂ' (ಕ್ರಿ.ಶ.600) ಕೃತಿಗಳಲ್ಲಿ ಕರ್ಣಾಟಕದ ಉಲ್ಲೇಖವಿದೆ.

●.ಕ್ರಿ.ಶ. 9-10ನೇ ಶತಮಾನಕ್ಕೆ ಸೇರಿದ ಅನೇಕ ಕನ್ನಡದ ಪ್ರಾಚೀನ ಕೃತಿಗಳಲ್ಲಿ “ಕರ್ಣಾಟ(ಕ), ಕರ್ನಾಟ(ಕ)” ಎಂಬುದನ್ನು ಕನ್ನಡದ ಪ್ರದೇಶ ಮತ್ತು ಕನ್ನಡ ಭಾಷೆ ಎಂಬ ಅರ್ಥದಲ್ಲಿ ಬಳಸಲಾಗಿದೆ.


●.ಶಾಸನಗಳ ವಿಚಾರಕ್ಕೆ ಬಂದರೆ ಕದಂಬರ ಶಾಂತಿವರ್ಮನ ಕ್ರಿ.ಶ.450ರ ಬೀರೂರು ತಾಮ್ರ ಶಾಸನದಲ್ಲಿ “ಸಮಸ್ತ ಕರ್ಣಾಟ” ಎಂಬ ಪದದ ಬಳಕೆಯಾಗಿದೆ.

●.ಕ್ರಿ.ಶ.633ರ ಗಂಗರ ದೊರೆ ಭೂವಿಕ್ರಮನ ಶಾಸನದಲ್ಲಿ 'ಕನ್ನಾಟ' ಎಂಬುದನ್ನು ಕನ್ನಡ ಭಾಷೆಯ ಅರ್ಥದಲ್ಲಿ ಬಳಸಿದೆ.

●.ರಾಷ್ಟ್ರಕೂಟರ ದೊರೆ ದಂತಿದುರ್ಗನ ಕ್ರಿ.ಶ.753ರ ಸಾಮನಗಢಾ ತಾಮ್ರಶಾಸನದಲ್ಲಿ 'ಕರ್ಣಾಟಕ ಬಲಮಚಿನ್ತ್ಯಮ್ ಅಜೇಯಮ್' ಎಂದು ಕನ್ನಡ ರಾಜರ ಸೇನೆಯನ್ನು ವರ್ಣಿಸಿದೆ.

●.ತಮಿಳಿನ ಪಾಂಡ್ಯ ರಾಜನ ಕ್ರಿ.ಶ.770ರ ವೇಳ್ವಿಕ್ಕುಡಿ ತಾಮ್ರಶಾಸನದಲ್ಲಿ “ಕರುನಾಡಗರ್” ಎಂಬ ಶಬ್ದದ ಪ್ರಯೋಗವಿದೆ.

●.ಇನ್ನು ಕೆಲವು ಪ್ರಾಚೀನ ತಮಿಳು ಶಾಸನಗಳಲ್ಲಿ “ಕನ್ನಾಟ, ಕನ್ನಾಟಕ, ಕನ್ನಾಡಗರುಂ” ಎಂಬ ಉಲ್ಲೇಖಗಳು ಕಂಡುಬರುತ್ತವೆ.

●.ಕನ್ನಡ ಭಾಷೆಯನ್ನು ಕರ್ನಾಟ ಭಾಷೆ, ಕರ್ನಾಟಕ ಭಾಷೆ ಎಂದು ಹೇಳಿರುವುದನ್ನು ಕ್ರಿ.ಶ.500ರ ನಂತರದ ಅನೇಕ ಕೃತಿಗಳಲ್ಲಿ ಕಾಣಬಹುದು. ಇದರಿಂದ ಕರ್ನಾಟ(ಕ), ಕರ್ಣಾಟ(ಕ), ಕರುನಾಡು, ಕರುನಾಡಗರ್ ಎಂಬುದನ್ನು ಒಂದು ಪ್ರದೇಶಕ್ಕೆ ಒಂದು ಭಾಷೆಗೆ ಮತ್ತು ಒಂದು ಜನಾಂಗಕ್ಕೆ ಬಳಸಿರುವುದು ಕಂಡುಬರುತ್ತದೆ. ಕಂನಾಡು ಎಂಬುದರಿಂದ ಕರ್ನಾಟಕ ಶಬ್ದ ರೂಪು ತಳೆದಿದೆ ಎಂದು ವಿದ್ವಾಂಸರು ಹೇಳುತ್ತಾರೆ.

(ಕೃಪೆ : ಜಾನಪದ)

☀ಈ ದಿನದ (ಐಎಎಸ್/ಕೆಎಎಸ್) ಪರೀಕ್ಷಾ ಪ್ರಶ್ನೆ : ☀ ಜಾಮ್‌ (ಜೆಎಎಂ) ಎಂದರೇನು ? (ಟಿಪ್ಪಣಿ ಬರಹ) (What do you mean by "JAM"?)

☀ಈ ದಿನದ (ಐಎಎಸ್/ಕೆಎಎಸ್) ಪರೀಕ್ಷಾ ಪ್ರಶ್ನೆ :
☀ ಜಾಮ್‌ (ಜೆಎಎಂ) ಎಂದರೇನು ? (ಟಿಪ್ಪಣಿ ಬರಹ)
(What do you mean by "JAM"?)
━━━━━━━━━━━━━━━━━━━━━━━━━━━
★ಸಾಮಾನ್ಯ ಅಧ್ಯಯನ
(General Studies)

●."ಜೆ' ಎಂದರೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ "ಜನ್‌ ಧನ್‌' ಯೋಜನೆ. ಇದರಡಿ ಪ್ರತಿಯೊಬ್ಬರು ಬ್ಯಾಂಕ್‌ ಖಾತೆಗಳನ್ನು ತೆರೆಯಲು ಅನುವು ಮಾಡಿಕೊಟ್ಟಿದೆ.

●."ಎ' ಎಂದರೆ ಆಧಾರ್‌. "ಜನ್‌ ಧನ್‌' ಮೂಲಕ ತೆರೆಯಲಾದ ಬ್ಯಾಂಕ್‌ ಖಾತೆಗಳಿಗೆ ಅಥವಾ ನೇರವಾಗಿ ತೆರೆದ ಬ್ಯಾಂಕ್‌ ಖಾತೆಗಳಿಗೆ ಈ ಆಧಾರ್‌ ನಂಬರ್‌ ಅನ್ನು ಜೋಡಿಸಬಹುದಾಗಿದೆ.

●.ಇನ್ನು "ಎಂ' ಎಂದರೆ ಮೊಬೈಲ್‌ ನಂಬರ್‌. ಹೀಗೆ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಹಾಗೂ ಮೊಬೈಲ್‌ ನಂಬರ್‌ನ್ನು ಜೋಡಿಸುವ ಮೂಲಕ ಸಬ್ಸಿಡಿ ಸೌಲಭ್ಯಗಳು ನೇರವಾಗಿ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಬಹುದು.

☀ಭಾರತದ ಪ್ರಮುಖ ಶೇರು ವಿನಿಮಯ ಕೇಂದ್ರಗಳು : (The major stock exchange Centers in India)

☀ಭಾರತದ ಪ್ರಮುಖ ಶೇರು ವಿನಿಮಯ ಕೇಂದ್ರಗಳು :
(The major stock exchange Centers in India)
━━━━━━━━━━━━━━━━━━━━━━━━━━━━━━━━━━━━━━━━━━━━━
★ಭಾರತದ ಅರ್ಥವ್ಯವಸ್ಥೆ
(Indian Economics)


●.ಮುಂಬಯಿ ಶೇರು ವಿನಿಮಯ ಕೇಂದ್ರ :
•┈┈┈┈┈┈┈┈┈┈┈┈┈┈┈┈┈┈┈┈┈•
✧. ಇದು ಏಶಿಯಾದ ಮೊಟ್ಟ ಮೊದಲ ಶೇರು ವಿನಿಮಯ ಕೇಂದ್ರ ( ಎನಿಸಿದೆ, ಹಾಗೂ 1956ರ ಭದ್ರತಾ ಗುತ್ತಿಗೆ ನಿಯಮಾವಳಿ ಕಾಯ್ದೆಯಡಿ ಖಾಯಂ ಮಾನ್ಯತೆಗೆ ಪಾತ್ರವಾದ ದೇಶದ ಮೊದಲ ಶೇರು ವಿನಿಮಯ ಕೇಂದ್ರವಾಗಿದೆ.

✧. ಇದರ ಸ್ಥಾಪನೆ - 1875 ರಲ್ಲಿ.

✧. ಈ ಕೇಂದ್ರ ಕಳೆದ 137 ವರ್ಷಗಳಲ್ಲಿ ಅತಿ ಆಸಕ್ತಿದಾಯಕ ಆದ್ಯತೆಯನ್ನುಗಳಿಸಿದೆ. ಇದು ಭಾರತೀಯ ಕಾರ್ಪೊರೇಟ್ ವಲಯಕ್ಕೆ ಬಂಡವಾಳ ಎತ್ತಲು ವೇದಿಕೆಯಾಗಿ ಅವುಗಳ ಬೆಳವಣಿಗೆಗೆ ಅವಕಾಶ ಕಲ್ಪಿಸಿದೆ.

✧. ಅತಿ ಹೆಚ್ಚು (4900ಕ್ಕೂ ಹೆಚ್ಚು) ಲಿಸ್ಟೆಡ್ ಕಂಪನಿಗಳನ್ನು ಹೊಂದಿದ ವಿಶ್ವದ ಅಗ್ರ ಮಾನ್ಯ ವಿನಿಮಯ ಕೇಂದ್ರ ಇದಾಗಿದ್ದು. ವಿದ್ಯುನ್ಮಾನ ವಹಿವಾಟು ವ್ಯವಸ್ಥೆ ಮೂಲಕ ಕಾರ್ಯ ನಿರ್ವಹಿಸುವ ವಿಶ್ವದ ಐದನೇ ಸಕ್ರಿಯ ವಿನಿಮಯ ಕೇಂದ್ರವೆನಿಸಿದೆ.

✧. ಭಾರತದಲ್ಲಿ ಸೆಕ್ಯುರಿಟೀಸ್ ಶೇರುಗಳ ವ್ಯಾಪಾರ ಆರಂಭಿಸಿದ ಮುಂಬಯಿ ಶೇರು ವಿನಿಮಯ ನಿಯಮಿತವು 1995ರಲ್ಲಿ ಬಿಎಸ್‍ಇ ಆನ್‍ ಲೈನ್ ವಹಿವಾಟು ವ್ಯವಸ್ಥೆ ಮೂಲಕ ಸಂಪೂರ್ಣವಾಗಿ ಸ್ವಯಂ ಚಾಲಿತ ವ್ಯಾಪಾರ ನಿರ್ವಹಣೆಗೆ (ಬಿಓಎಲï ಟಿ)ಮುಂದಾಯಿತು.

✧.ಈ ವ್ಯವಸ್ಥೆಯನ್ನು 1997ರಲ್ಲಿ ದೇಶ ವ್ಯಾಪ್ತಿ ವಿಸ್ತರಿಸಲಾಯಿತು.

✧.ಐಎಸ್‍ಓ 9001; 2000 ಪ್ರಮಾಣ ಪತ್ರವನ್ನು ಪಡೆದ ವಿಶ್ವದ ಎರಡನೇ ವಿನಿಮಯ ಕೇಂದ್ರ ಮುಂಬಯಿ ಶೇರು ವಿನಿಮಯ ಕೇಂದ್ರವಾಗಿದೆ.

✧. ಆನ್ ಲೈನ್ ವಹಿವಾಟಿಗಾಗಿ ಸೆಕ್ಯುರಿಟಿ ನಿರ್ವಹಣಾ ವ್ಯವಸ್ಥೆಯ ಗುಣಮಟ್ಟ ಬಿಎಸ್ 7799-2-2002 ಪ್ರಮಾಣ ಪತ್ರವನ್ನು ಪಡೆದ ಜಗತ್ತಿನ ಎರಡನೆ ವಿನಿಮಯ ಕೇಂದ್ರವಾಗಿದೆ. ಇದು ಸದ್ಯ ಐಎಸ್‍ಓ 27001; 2005 ಪ್ರಮಾಣ ಪತ್ರವನ್ನು ಹೊಂದಿದೆ.


●.ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ :
•┈┈┈┈┈┈┈┈┈┈┈┈┈┈┈┈┈┈┈┈┈•
✧. ಹೊಸ ಶೇರು ವಿನಿಮಯ ಕೇಂದ್ರಗಳ ಸ್ಥಾಪನೆ ಕುರಿತಾದ ಉನ್ನತಾಧಿಕಾರದ ಅಧ್ಯಯನ ಗುಂಪಿನ ವರದಿ ಆಧಾರದ ಮೇಲೆ ಭಾರತಕ್ಕೆ ರಾಷ್ಟ್ರೀಯ ಶೇರು ವಿನಿಮಯ ನಿಯಮಿತ ಅಸ್ತಿತ ಬಂದಿದೆ.

✧. ದೇಶದೆಲ್ಲೆಡೆ ಹೂಡಿಕೆದಾರರಿಗೆ ಲಭ್ಯವಿರುವಂತೆ ಹಣಕಾಸು ಸಂಸ್ಥೆಗಳಿಂದ ರಾಷ್ಟ್ರೀಯ ಶೇರು ವಿನಿಮಯ ನಿಯಮಿತವನ್ನು ಅಭಿವೃದ್ಧಿ ಪಡಿಸುವಂತೆ ಬಂದ ಶಿಫಾರಸಿನನ್ವಯ ಈ ವ್ಯವಸ್ಥೆ ರೂಪುಗೊಂಡಿದೆ.

✧. ಭಾರತದ ರಾಷ್ಟ್ರೀಯ ಶೇರು ವಿನಿಮಯ ನಿಯಮಿತವು 1992 ನವೆಂಬರ್‍ನಲ್ಲಿ ತೆರಿಗೆ ಸಲ್ಲಿಸುವ ಕಂಪನಿಯಾಗಿ ಹೊರಹೊಮ್ಮಿತು.

(ಕೃಪೆ : ಯೋಜನಾ)

Friday, 11 September 2015

☀ಭಾರತದ ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳು ಮತ್ತು ಅವುಗಳ ಪ್ರಸ್ತುತ ರಾಜ್ಯಪಾಲರು:  ●.(2015 ಆಗಸ್ಟ್ ರಲ್ಲಿರುವ ಮಾಹಿತಿಯಂತೆ ಪರೀಷ್ಕೃತಗೊಂಡಿದೆ.) (Current Governors in India) ●. (Updated as per 2015 August Information)

☀ಭಾರತದ ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳು ಮತ್ತು ಅವುಗಳ ಪ್ರಸ್ತುತ ರಾಜ್ಯಪಾಲರು:
●.(2015 ಆಗಸ್ಟ್ ರಲ್ಲಿರುವ ಮಾಹಿತಿಯಂತೆ ಪರೀಷ್ಕೃತಗೊಂಡಿದೆ.)

(Current Governors in India)
●. (Updated as per 2015 August Information)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಜ್ಞಾನ
(General Knowledge)


●.ರಾಜ್ಯ •┈┈┈┈┈┈┈┈┈┈┈┈┈┈┈┈┈┈• ●.ರಾಜ್ಯಪಾಲರು :
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

●.ಆಂಧ್ರಪ್ರದೇಶ •┈┈┈┈┈┈┈┈┈• ಇ.ಎಸ್.ಎಲ್ ನರಸಿಂಹನ್.

●.ಅರುಣಾಚಲ ಪ್ರದೇಶ •┈┈┈┈┈┈┈┈┈• ಜ್ಯೋತಿ ಪ್ರಸಾದ್ ರಾಜಖೊವಾ .

●.ಅಸ್ಸಾಂ •┈┈┈┈┈┈┈┈┈• ಪದ್ಮನಾಭ ಬಾಲಕೃಷ್ಣ ಆಚಾರ್ಯ.

●.ಬಿಹಾರ •┈┈┈┈┈┈┈┈┈• ರಾಮ್ ನಾಥ್ ಕೊವಿಂದ್ .

●.ಛತ್ತೀಸ್ ಗಢ •┈┈┈┈┈┈┈┈┈• ಬಲರಾಮ್ ಜಿ ದಾಸ್ ಟಂಡನ್.

●.ಗೋವಾ •┈┈┈┈┈┈┈┈┈• ಮೃದುಲಾ ಸಿನ್ಹಾ.

●.ಗುಜರಾತ್ •┈┈┈┈┈┈┈┈┈• ಓಂ ಪ್ರಕಾಶ್ ಕೊಹ್ಲಿ.

●.ಹರ್ಯಾಣ •┈┈┈┈┈┈┈┈┈• ಕಪ್ತಾನ್ ಸಿಂಗ್ ಸೋಲಂಕಿ.

●.ಹಿಮಾಚಲ ಪ್ರದೇಶ •┈┈┈┈┈┈┈┈┈• ಆಚಾರ್ಯ ದೇವ್ ವ್ರತ್ .

●.ಜಮ್ಮು ಮತ್ತು ಕಾಶ್ಮೀರ •┈┈┈┈┈┈┈┈┈• ನರೀಂದರ್ ನಾಥ್ ವೋಹ್ರಾ.

●.ಜಾರ್ಖಂಡ್ •┈┈┈┈┈┈┈┈┈• ದ್ರೌಪದಿ ಮುರ್ಮು.

●.ಕರ್ನಾಟಕ •┈┈┈┈┈┈┈┈┈• ವಜುಭಾಯಿ ವಾಲಾ.

●.ಕೇರಳ •┈┈┈┈┈┈┈┈┈• ಪಿ ಸದಾಶಿವಂ.

●.ಮಧ್ಯ ಪ್ರದೇಶ •┈┈┈┈┈┈┈┈┈• ರಾಮ್ ನರೇಶ್ ಯಾದವ್.

●.ಮಹಾರಾಷ್ಟ್ರ •┈┈┈┈┈┈┈┈┈• ಸಿ ವಿದ್ಯಾಸಾಗರ್ ರಾವ್.

●.ಮಣಿಪುರ •┈┈┈┈┈┈┈┈┈• ಸಯ್ಯದ್ ಅಹ್ಮದ್.

●.ಮೇಘಾಲಯ •┈┈┈┈┈┈┈┈┈• ವಿ ಷಣ್ಮುಗನಾಥಂ.

●.ಮಿಜೋರಾಂ •┈┈┈┈┈┈┈┈┈• ನಿರ್ಭಯ್ ಶರ್ಮಾ.

●.ನಾಗಾಲ್ಯಾಂಡ್ •┈┈┈┈┈┈┈┈┈• ಪದ್ಮನಾಭ ಆಚಾರ್ಯ
.
●.ಒಡಿಶಾ •┈┈┈┈┈┈┈┈┈• ಎಸ್ ಸಿ ಜಮೀರ್ .

●.ಪಂಜಾಬ್ •┈┈┈┈┈┈┈┈┈• ಕಪ್ತಾನ್ ಸಿಂಗ್ ಸೋಲಂಕಿ.

●.ರಾಜಸ್ಥಾನ •┈┈┈┈┈┈┈┈┈• ಕಲ್ಯಾಣ್ ಸಿಂಗ್.

●.ಸಿಕ್ಕಿಂ •┈┈┈┈┈┈┈┈┈• ಶ್ರೀನಿವಾಸ್ ದಾದಾಸಾಹೇಬ್ ಪಾಟೀಲ್.

●.ತಮಿಳುನಾಡು •┈┈┈┈┈┈┈┈┈• ಕೆ ರೋಸಯ್ಯ.

●.ತೆಲಂಗಾಣ •┈┈┈┈┈┈┈┈┈• ಇ ಎಸ್ ಎಲ್ ನರಸಿಂಹನ್.

●.ತ್ರಿಪುರ •┈┈┈┈┈┈┈┈┈• ತಥಾಗತ ರಾಯ್.

●.ಉತ್ತರ ಪ್ರದೇಶ •┈┈┈┈┈┈┈┈┈• ರಾಮ್ ನಾಯ್ಕ್.

●.ಉತ್ತರಾಖಂಡ್ •┈┈┈┈┈┈┈┈┈• ಕೃಷ್ಣನ್ ಕಾಂತ್ ಪಾಲ್.

●.ಪಶ್ಚಿಮ ಬಂಗಾಳ •┈┈┈┈┈┈┈┈┈• ಕೆಶಾರಿ ನಾಥ್ ತ್ರಿಪಾಠಿ.


☀ಪ್ರಸ್ತುತ ಲೆಫ್ಟಿನೆಂಟ್ ಗವರ್ನರ್ ಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
(Current Lieutenant Governors and Union Territories)
━━━━━━━━━━━━━━━━━━━━━━━━━━━━━━━━━━━━━━━━━━━━━


●.ಕೇಂದ್ರಾಡಳಿತ ಪ್ರದೇಶ •┈┈┈┈┈┈┈┈┈┈┈┈┈┈┈┈•●.ಲೆಫ್ಟಿನೆಂಟ್ ಗವರ್ನರ್.
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

●.ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು •┈┈┈┈┈┈┈┈┈• ಎ.ಕೆ. ಸಿಂಗ್

●.ಚಂಡೀಘಢ •┈┈┈┈┈┈┈┈┈• ಕಪ್ತಾನ್ ಸಿಂಗ್ ಸೋಲಂಕಿ.

●.ದಾದ್ರಾ ಮತ್ತು ನಗರ್ ಹವೇಲಿ •┈┈┈┈┈┈┈┈┈• ಆಶಿಶ್ ಕುಂದ್ರಾ.

●.ದಮನ್ ಮತ್ತು ದಿಯು •┈┈┈┈┈┈┈┈┈• ಆಶಿಶ್ ಕುಂದ್ರಾ.

●.ದೆಹಲಿ •┈┈┈┈┈┈┈┈┈• ನಜೀಬ್ ಜಂಗ್.

●.ಲಕ್ಷ ದ್ವೀಪ •┈┈┈┈┈┈┈┈┈• ಎಚ್ ರಾಜೇಶ್ ಪ್ರಸಾದ್.

●.ಪುದುಚೇರಿ •┈┈┈┈┈┈┈┈┈• ಎ ಕೆ ಸಿಂಗ್.

Monday, 7 September 2015

☀ಭಾರತದಲ್ಲಿ ಘಟಿಸಿದ ಪ್ರಮುಖ ಐತಿಹಾಸಿಕ ಕದನಗಳು : (The Major Historical Battles taking place in India)

☀ಭಾರತದಲ್ಲಿ ಘಟಿಸಿದ ಪ್ರಮುಖ ಐತಿಹಾಸಿಕ ಕದನಗಳು :
(The Major Historical Battles taking place in India)
━━━━━━━━━━━━━━━━━━━━━━━━━━━━━━━━━━━━━━━━━━━━━

★ಪ್ರಾಚೀನ ಭಾರತದ ಇತಿಹಾಸ
(Indian Ancient History)

★ ಭಾರತದ ಇತಿಹಾಸ
(Indian History)


●.1. ಮೊದಲನೆಯ ತರೈನ್ ಕದನ:
•┈┈┈┈┈┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ. 1191
✧.ಫಲಿತಾಂಶ: ಪೃಥ್ವಿರಾಜ್ ಚೌಹಾನ್ ಮೊಹಮ್ಮದ್ ಘೋರಿ ನನ್ನು ಸೋಲಿಸಿದನು.


●.2. ಎರಡನೆಯ ತರೈನ್ ಕದನ :
•┈┈┈┈┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1192
✧.ಫಲಿತಾಂಶ: ಮೊಹಮ್ಮದ್ ಘೋರಿ ಪೃಥ್ವಿರಾಜ್ ಚೌಹಾನ್ ನನ್ನು ಸೋಲಿಸಿದನು.


●.3. ಮೊದಲನೆಯ ಪಾಣಿಪತ್ ಕದನ :
•┈┈┈┈┈┈┈┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1526
✧.ಫಲಿತಾಂಶ: ಬಾಬರ್ ಇಬ್ರಾಹಿಂ ಲೋದಿನನ್ನು ಸೋಲಿಸಿದನು.


●.4. ಖನವಾ ಕದನ :
•┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1527
✧.ಫಲಿತಾಂಶ: ಬಾಬರ್ ರಾಣಾ ಶುಂಗನನ್ನು ಸೋಲಿಸಿದನು. ಇದು ಭಾರತದಲ್ಲಿ ಬಾಬರ್ ಮತ್ತಷ್ಟು ತನ್ನ ಹೆಗ್ಗುರುತು ಬಲಪಡಿಸುವಲ್ಲಿ ಸಹಕಾರಿಯಾಯಿತು.


●.5. ಘಾಘ್ರ ಕದನ :
•┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1529
✧.ಫಲಿತಾಂಶ: ಬಾಬರ್ ನು ಮಹಮೂದ್ ಲೋದಿ ಮತ್ತು ಸುಲ್ತಾನ್ ನುಸ್ರತ್ ಶಾರನ್ನು ಸೋಲಿಸಿದನು. ಈ ಯುದ್ಧ ಭಾರತದಲ್ಲಿ ಮುಘಲ್ ಆಡಳಿತದ ಸ್ಥಾಪನೆಗೆ ಕಾರಣೀಭೂತವಾಯಿತು.


●.6. ಎರಡನೆಯ ಪಾಣಿಪತ್ ಕದನ :
•┈┈┈┈┈┈┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1556
✧.ಫಲಿತಾಂಶ: ಅಕ್ಬರ್ ಹೇಮುನನ್ನು ಸೋಲಿಸಿದನು.


●.7. ಮೂರನೇಯ ಪಾಣಿಪತ್ ಕದನ :
•┈┈┈┈┈┈┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1761
✧.ಫಲಿತಾಂಶ: ಅಹ್ಮದ್ ಶಾ ಅಬ್ದಾಲಿ ಮರಾಠರನ್ನು ಸೋಲಿಸಿದನು.


●.8. ತಾಳಿಕೋಟೆ ಕದನ :
•┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1565
✧.ಫಲಿತಾಂಶ: ಡೆಕ್ಕನ್ ಸುಲ್ತಾನರು ಖ್ಯಾತಿವೆತ್ತ ವಿಜಯನಗರ ಸಾಮ್ರಾಜ್ಯವನ್ನು ಸೋಲಿಸಿದರು.


●.9.ಹಲ್ದಿಘಾಟಿ ಕದನ :
•┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1576
✧.ಫಲಿತಾಂಶ: ಮೊಘಲ್ ಸೇನೆಯ ನೇತೃತ್ವದಲ್ಲಿ ರಾಜ ಮಾನ್ ಸಿಂಗ್ ಮತ್ತು ಮೇವಾರದ ರಾಣ ಪ್ರತಾಪ್ ನಡುವೆ ನಿರ್ಣಾಯಕ ಯುದ್ಧ ನಡೆಯಿತು.


●.10.ಪ್ಲಾಸೀ ಕದನ :
•┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1757
✧.ಫಲಿತಾಂಶ: ಬ್ರಿಟಿಷರು ಮೀರ್ ಜಾಫರ್ ನ ಸಹಾಯದಿಂದ ಸಿರಾಜ್ - ಉದ್-ದೌಲಾನನ್ನು ಸೋಲಿಸಿದರು. ಈ ಯುದ್ಧ ಭಾರತದಲ್ಲಿನ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿತು.


●.11. ವಾಂಡಿವಾಷ್ ಕದನ :
•┈┈┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1760
✧.ಫಲಿತಾಂಶ: ಬ್ರಿಟಿಷರು ಭಾರತದಲ್ಲಿ ನಿರ್ಣಾಯಕವಾಗಿ ಫ್ರೆಂಚರನ್ನು ಸೋಲಿಸಿದರು. ಯೂರೋಪಿನಲ್ಲಿನ ಬ್ರಿಟಿಷ್ ಮತ್ತು ಫ್ರೆಂಚರ ನಡುವೆ ನಡೆದ ಏಳು ವರ್ಷಗಳ ಯುದ್ಧ (1756 -1763) ಈ ಯುದ್ಧಕ್ಕೆ ಕಾರಣ. ಬ್ರಿಟಿಷ್ ಮತ್ತು ಫ್ರೆಂಚರ ನಡುವೆ ಮೂರು ಕಾರ್ನಾಟಿಕ್ ಯುದ್ಧಗಳು ನಡೆದವು ಮತ್ತು ಈ ಯುದ್ಧವು ಮೂರನೇಯ ನೇ ಕಾರ್ನಾಟಿಕ್ ಯುದ್ದದ ಭಾಗವಾಗಿತ್ತು.


●.12.ಬಕ್ಸಾರ್ ಕದನ :
•┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1764
✧.ಫಲಿತಾಂಶ: ಬ್ರಿಟಿಷರು ಮೀರ್ ಖಾಸಿಮ್, ಶುಜಾ-ಉದ್-ದೌಲಾ (ಔದ್ಧಿನ ನವಾಬ್) ಮತ್ತು ಶಾ ಆಲಮ್ II (ಮೊಘಲ್ ಚಕ್ರವರ್ತಿ) ರು ಒಡಗೂಡಿದ ಸಂಯೋಜಿತ ಪಡೆಗಳನ್ನು ಸೋಲಿಸಿದರು.


●.13.ಸಮುಘರ್ ಕದನ :
•┈┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1658
✧.ಫಲಿತಾಂಶ: ಔರಂಗಜೇಬನು ದಾರಾ ಶಿಕೊಹ್ ನನ್ನು ಸೋಲಿಸಿದನು.


●.14.ಕರ್ನಾಲ್ ಕದನ :
•┈┈┈┈┈┈┈┈┈┈┈┈┈•
✧.ನಡೆದ ಇಸ್ವಿ : ಕ್ರಿ.ಶ.1739
✧.ಫಲಿತಾಂಶ: ನಾದಿರ್ ಷಾನು ಮುಘಲ್ ದೊರೆ ಮೊಹಮ್ಮದ್ ಶಾನನ್ನು ಸೋಲಿಸಿದರು.

Sunday, 6 September 2015

☀ಜಗತ್ತಿನ ಪ್ರಮುಖ ಜಲಪಾತಗಳು : ಎಸ್.ಡಿ.ಎ. ಮತ್ತು ಎಫ್.ಡಿ.ಎ ಎಕ್ಸಾಂ ವಿಶೇಷಾಂಕ (World Famous Waterfalls)

☀ಜಗತ್ತಿನ ಪ್ರಮುಖ ಜಲಪಾತಗಳು : ಎಸ್.ಡಿ.ಎ. ಮತ್ತು ಎಫ್.ಡಿ.ಎ ಎಕ್ಸಾಂ ವಿಶೇಷಾಂಕ
(World Famous Waterfalls)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)


●.ಜಲಪಾತಗಳು •┈┈┈┈┈┈┈┈┈┈•●.ದೇಶ.
 •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

01). ಏಂಜೆಲ್ •┈┈┈┈┈┈┈┈┈┈• ವೆನೆಜುವೆಲಾ

02). ಕುಕೆನಾಮ್ •┈┈┈┈┈┈┈┈┈• ವೆನೆಜುವೆಲಾ

03). ರಿಬ್ಬನ್ •┈┈┈┈┈┈┈┈┈┈┈• ಅಮೇರಿಕಾ

04). ಟುಗೆಲಾ •┈┈┈┈┈┈┈┈┈┈• ದಕ್ಷಿಣ ಆಫ್ರಿಕಾ

05). ಓಲ್ಲೊಮೊಂಬಿ •┈┈┈┈ ┈┈┈• ಆಸ್ಟ್ರೇಲಿಯಾ

06). ಗುವಾರಿಯಾ •┈┈┈┈┈┈┈┈• ಬ್ರೆಜಿಲ್

07). ನಯಾಗರಾ •┈┈┈┈┈┈┈┈• ಕೆನಡಾ

08). ವಿಕ್ಟೋರಿಯಾ •┈┈┈┈┈┈┈• ಜಿಂಬಾಬ್ವೆ

☀ಜಗತ್ತಿನ ಪ್ರಮುಖ ಸರೋವರಗಳು : ಎಸ್.ಡಿ.ಎ. ಮತ್ತು ಎಫ್.ಡಿ.ಎ ಎಕ್ಸಾಂ ವಿಶೇಷಾಂಕ (World Famous Lakes)

☀ಜಗತ್ತಿನ ಪ್ರಮುಖ ಸರೋವರಗಳು : ಎಸ್.ಡಿ.ಎ. ಮತ್ತು ಎಫ್.ಡಿ.ಎ ಎಕ್ಸಾಂ ವಿಶೇಷಾಂಕ
(World Famous Lakes)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)


●.ಸರೋವರಗಳು •┈┈┈┈┈┈┈┈┈┈• ●.ದೇಶ •┈┈┈┈┈┈┈┈┈┈• ●.ವಿಸ್ತಾರ
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

01). ಕ್ಯಾಸ್ಪಿಯನ್ ಸಮುದ್ರ •┈┈┈┈┈┈┈┈┈┈• ರಶಿಯಾ-ಇರಾನ್  (393898 ಚ.ಕೀ.ಮಿ)

02). ಸುಪೀರಿಯರ್ ಸರೋವರ •┈┈┈┈┈┈┈┈┈┈• ಅಮೇರಿಕಾ-ಕೆನಡಾ  (82814 ಚ.ಕೀ.ಮಿ)

03). ವಿಕ್ಟೋರಿಯಾ ಸರೋವರ •┈┈┈┈┈┈┈┈┈┈• ಕೀನ್ಯಾ-ಉಗಾಂಡಾ-ಟಾಂಜಾನಿಯಾ  (69485 ಚ.ಕೀ.ಮಿ)

04). ಅರಾಲ್ (ಉಪ್ಪು) ಸರೋವರ •┈┈┈┈┈┈┈┈┈┈• ಸಿಐಎಸ್ (ಹಿಂದಿನ ಯುಎಸ್ಎಸ್ಆರ್) (68682 ಚ.ಕೀ.ಮಿ)

05). ಮಿಚಿಗನ್ ಸರೋವರ •┈┈┈┈┈┈┈┈┈┈• ಅಮೇರಿಕಾ  (58016 ಚ.ಕೀ.ಮಿ)

06). ಗ್ರೇಟ್ ಬೇರ್ ಸರೋವರ •┈┈┈┈┈┈┈┈┈┈• ಕೆನಡಾ  (31792 ಚ.ಕೀ.ಮಿ)

07). ಬೈಕಲ್ ಸರೋವರ •┈┈┈┈┈┈┈┈┈┈• ಸಿಐಎಸ್  (31492 ಚ.ಕೀ.ಮಿ)

08). ಒಂಟಾರಿಯೊ ಸರೋವರ •┈┈┈┈┈┈┈┈┈┈• ಅಮೇರಿಕಾ ಕೆನಡಾ  (19529 ಚ.ಕೀ.ಮಿ)

09). ಐರ್ (ಉಪ್ಪು) ಸರೋವರ •┈┈┈┈┈┈┈┈┈┈• ಆಸ್ಟ್ರೇಲಿಯಾ  (9324 ಚ.ಕೀ.ಮಿ)

10). ಟೊರೆನ್ಸ್ (ಉಪ್ಪು) ಸರೋವರ •┈┈┈┈┈┈┈┈┈┈• ಆಸ್ಟ್ರೇಲಿಯಾ  (5775 ಚ.ಕೀ.ಮಿ)

***(ಸಿಐಎಸ್) -Commonwealth of Independent States

☀ಜಗತ್ತಿನ ಪ್ರಮುಖ ನದಿಗಳು : ಎಸ್.ಡಿ.ಎ. ಮತ್ತು ಎಫ್.ಡಿ.ಎ ಎಕ್ಸಾಂ ವಿಶೇಷಾಂಕ  : (World Famous Rivers)

☀ಜಗತ್ತಿನ ಪ್ರಮುಖ ನದಿಗಳು : ಎಸ್.ಡಿ.ಎ. ಮತ್ತು ಎಫ್.ಡಿ.ಎ ಎಕ್ಸಾಂ ವಿಶೇಷಾಂಕ
(World Famous Rivers)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)


●.ನದಿ •┈┈┈┈┈┈┈┈┈┈• ●.ದೇಶ •┈┈┈┈┈┈┈┈┈┈• ●.ವಿಸ್ತಾರ.
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

01). ನೈಲ್ ನದಿ •┈┈┈┈┈┈┈┈┈┈┈┈┈┈• ಆಫ್ರಿಕಾ   (6690 ಕಿ.ಮೀ)

02). ಅಮೆಜಾನ್ ನದಿ •┈┈┈┈┈┈┈┈┈┈┈┈• ದಕ್ಷಿಣ ಅಮೆರಿಕ.  (6570 ಕಿ.ಮೀ)

03). ಮಿಸಿಸಿಪ್ಪಿ ಮಿಸೌರಿ ನದಿ •┈┈┈┈┈┈┈┈┈┈• ಅಮೇರಿಕಾ   (6212 ಕಿ.ಮೀ)

04). ಇರ್ಟಿಶ್ ನದಿ •┈┈┈┈┈┈┈┈┈┈┈• ಯುಎಸ್ಎಸ್ಆರ್ (ಇಂದು ಸಿಐಎಸ್)  (5570 ಕಿ.ಮೀ)

05). ಯಾಂಗತ್ಸೆ-ಕಿಯಾಂಗ್ ನದಿ •┈┈┈┈┈┈┈┈┈┈• ಚೀನಾ  (5520 ಕಿ.ಮೀ)

06). ಹ್ವಾಂಗ್ ಹೋ ನದಿ •┈┈┈┈┈┈┈┈┈┈• ಚೀನಾ  (4672 ಕಿ.ಮೀ)

07). ಮೆಕಾಂಗ್ ನದಿ •┈┈┈┈┈┈┈┈┈┈• ಏಷ್ಯಾ  (4184 ಕಿ.ಮೀ)

08). ನೈಜರ್ ನದಿ •┈┈┈┈┈┈┈┈┈┈• ಆಫ್ರಿಕಾ  (4168 ಕಿ.ಮೀ)

09). ಮುರ್ರೆ ಡಾರ್ಲಿಂಗ್ ನದಿ •┈┈┈┈┈┈┈┈┈┈• ಆಸ್ಟ್ರೇಲಿಯಾ  (3701 ಕಿ.ಮೀ)

10). ವೋಲ್ಗಾ ನದಿ •┈┈┈┈┈┈┈┈┈┈• ಯುಎಸ್ಎಸ್ಆರ್ (ಇಂದು ಸಿಐಎಸ್)  (3690 ಕಿ.ಮೀ)

11). ಡ್ಯಾನ್ಯೂಬ್ ನದಿ •┈┈┈┈┈┈┈┈┈┈• ಯುರೋಪ್  (2848 ಕಿ.ಮೀ)

12). ಸಿಂಧೂ ನದಿ •┈┈┈┈┈┈┈┈┈┈• ಏಷ್ಯಾ  (2736 ಕಿ.ಮೀ)

13). ಬ್ರಹ್ಮಪುತ್ರ ನದಿ •┈┈┈┈┈┈┈┈┈┈• ಏಷ್ಯಾ  (2704 ಕಿ.ಮೀ)

Saturday, 5 September 2015

☀ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು) : ✧.4) 2015 ನೇ ಸಾಲಿನ ಕೇಂದ್ರ ಬಜೆಟ್ ಆರ್ಥಿಕ ಸಮೀಕ್ಷಾ ವರದಿ: (Special Reports-figures on 2015 Union Budget Economic Survey )

☀ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು) :
✧.4) 2015 ನೇ ಸಾಲಿನ ಕೇಂದ್ರ ಬಜೆಟ್ ಆರ್ಥಿಕ ಸಮೀಕ್ಷಾ ವರದಿ:
(Special Reports-figures on 2015 Union Budget Economic Survey )
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು)
(Current useful surveys and special reports-figures)

★ ಪ್ರಚಲಿತ ಘಟನೆಗಳು.
(Current Affairs)


●. 2015ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿ ಪ್ರಕಾರ ಮುಂದಿನ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ.8ರಷ್ಟು ಪ್ರಗತಿ ಕಾಣುವ ಸಾಧ್ಯತೆ ಇದೆ ಎಂದು ಶುಕ್ರವಾರ ಸಮೀಕ್ಷಾ ವರದಿ ಮಂಡಿಸಿದ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

●. ಪ್ರಸಕ್ತ ಸಾಲಿನ ಆರ್ಥಿಕ ಸಮೀಕ್ಷಾ ವರದಿ ಪ್ರಕಟಗೊಂಡಿದ್ದು, ದೇಶದ ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) 2016–17ನೇ ಸಾಲಿನಲ್ಲಿ ಶೇ 8.1 ರಿಂದ ಶೇ 8.5ರ ವರೆಗೆ ಪ್ರಗತಿ ಕಾಣಲಿದೆ.

●. 2018-20ರ ವೇಳೆಗೆ ದೇಶವು ಎರಡಂಕಿ ಪ್ರಗತಿ ಪಥದಲ್ಲಿ ಮುನ್ನಡೆಯಲಿದೆ ಎಂದು ಅಂದಾಜಿಸಲಾಗಿದ್ದು, 2013–14ನೇ ಸಾಲಿನಲ್ಲಿ ಇದು ಶೇ 6.9ರಷ್ಟಿದ್ದ ಜಿಡಿಪಿ ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ 7.4ರಷ್ಟು ಏರಿಕೆ ಕಾಣುವ ನಿರೀಕ್ಷೆ ಇದೆ.

●. ಕಚ್ಚಾ ತೈಲದ ಬೆಲೆ ಮತ್ತು ಹಣದುಬ್ಬರವೂ ಗಣನೀಯವಾಗಿ ಇಳಿಕೆಯಾಗಿರುವ ಹಿನ್ನಲೆಯಲ್ಲಿ ಬ್ಯಾಂಕ್‌ಗಳು ಬಡ್ಡಿ ದರ ತಗ್ಗಿಸುವ ಸಾಧ್ಯತೆ ಹೆಚ್ಚಿದ್ದು ಮಾರುಕಟ್ಟೆಗೆ ಹೆಚ್ಚಿನ ಬಂಡವಾಳ ಹರಿವು ನಿರೀಕ್ಷಿಸಲಾಗಿದೆ.

●. ಅಲ್ಲದೇ ಜಿಡಿಪಿ ಪ್ರಗತಿಗಾಗಿ ಮತ್ತು ರಫ್ತು ಉತ್ತೇಜನಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಳಿಸಲು ಸಲಹೆ ನೀಡಲಾಗಿದ್ದು, ಹಣಕಾಸು ಮಾರುಕಟ್ಟೆ ಸ್ಥಿರತೆಗೆ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲಾಗವುದು ಎಂದು ಕೇಂದ್ರ ಹಣಕಾಸು ಸಚಿವ ಹೇಳಿದ್ದಾರೆ.


☀ಆರ್ಥಿಕ ಸಮೀಕ್ಷಾ ವರದಿಯ ಪ್ರಮುಖಾಂಶಗಳು :
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

●. ಮುಂಬರುವ ವರ್ಷದಲ್ಲಿ ಶೇ.8ರಷ್ಟು ಆರ್ಥಿಕ ವೃದ್ಧಿ ನಿರೀಕ್ಷೆ

●. ಆರ್ಥಿಕ ಬಲವರ್ಧನೆ ಸರ್ಕಾರ ಬದ್ಧ

●. ಬಿಗ್ ಬ್ಯಾಂಗ್ ಸುಧಾರಣೆಗೆ ಅವಕಾಶ

●. ದೇಶವು ಎರಡಂಕಿ ಪ್ರಗತಿ ಪಥದಲ್ಲಿ ಮುನ್ನಡೆಯಲಿದೆ.

●. ಕಚ್ಚಾ ತೈಲದ ಬೆಲೆ ತಗ್ಗಿದೆ.

●. ಹಣದುಬ್ಬರವೂ ಗಣನೀಯವಾಗಿ ಇಳಿಕೆಯಾಗಿದೆ.

●. 2015–16ನೇ ಸಾಲಿನಲ್ಲಿ ಸಹಜ ಮುಂಗಾರು ಲಭಿಸಿದರೆ ಉತ್ತಮ ಆರ್ಥಿಕ ವೃದ್ಧಿ ದರ ನಿರೀಕ್ಷೆ

●. ಬ್ಯಾಂಕ್‌ ಬಡ್ಡಿ ದರ ಕಡಿತ ಸಾಧ್ಯತೆ ಹೆಚ್ಚಳ

●. ಏಪ್ರಿಲ್‌–ಜನವರಿ ಅವಧಿಯಲ್ಲಿ ಆಹಾರ ಸಬ್ಸಿಡಿ ಮೊತ್ತದಲ್ಲಿ ಶೇ 20 ರಷ್ಟು ಹೆಚ್ಚಳ. 1.08 ಲಕ್ಷ ಕೋಟಿಗೆ ಏರಿಕೆ

●. 2015–16ನೇ ಸಾಲಿನಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ ಶೇ 5 ರಿಂದ ಶೇ 5.5ರ ಒಳಗೆ ಸ್ಥಿರಗೊಳ್ಳುವ ಅಂದಾಜು

●. 2013–14ರಲ್ಲಿ ರೂ 1.39 ಲಕ್ಷ ಕೋಟಿಯಷ್ಟಿದ್ದ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ ನಷ್ಟ 2014–15ರಲ್ಲಿ ರೂ 74,664 ಕೋಟಿಗೆ ಇಳಿಕೆ

●. ರೈಲ್ವೆ ಕಾರ್ಯವಿಧಾನದಲ್ಲಿ ಬದಲಾವಣೆ.

●. ಸರಕು ಸಾಗಣೆ ಸೇರಿದಂತೆ ವಾಣಿಜ್ಯ ವ್ಯವಹಾರಗಳಲ್ಲಿ ತಂತ್ರಜ್ಞಾನ ಅಳವಡಿಕೆ.

●. ಜನ್‌ ಧನ್‌ ಯೋಜನಾ, ಆಧಾರ್‌ ಮೂಲಕ ಬಡವರಿಗೆ ಸೋರಿಕೆ ಇಲ್ಲದೆ ಹಣ ವರ್ಗಾವಣೆ

●. ಹೂಡಿಕೆಗಾಗಿ ಮಾತ್ರ ಸಾಲ ಪಡೆಯಲು ಸಲಹೆ

●. ಏಪ್ರಿಲ್‌–ಜನವರಿ ಅವಧಿಯಲ್ಲಿ ಆಹಾರ ಸಬ್ಸಿಡಿ ಮೊತ್ತದಲ್ಲಿ ಶೇ 20 ರಷ್ಟು ಹೆಚ್ಚಳ. 1.08 ಲಕ್ಷ ಕೋಟಿಗೆ ಏರಿಕೆ

☀ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು) : ✧.3) 2014 ರ ಜಾಗತಿಕ ಇ–ತ್ಯಾಜ್ಯದ ಪ್ರಮಾಣ: ವಿಶೇಷ ವರದಿ: (Special Reports-figures on World E-Waste)

☀ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು) :
✧.3) 2014 ರ ಜಾಗತಿಕ ಇ–ತ್ಯಾಜ್ಯದ ಪ್ರಮಾಣ: ವಿಶೇಷ ವರದಿ:
(Special Reports-figures on World E-Waste)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು)
(Current useful surveys and special reports-figures)

★ ಪ್ರಚಲಿತ ಘಟನೆಗಳು.
(Current Affairs)


●. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಇ–ತ್ಯಾಜ್ಯ ಉತ್ಪಾದನೆ ಮಾಡುವ ರಾಷ್ಟ್ರಗಳ ಪಟ್ಟಿ ಯ ಲ್ಲಿ ಭಾರತ ಐದನೇ ಸ್ಥಾನದಲ್ಲಿದೆ.

●. 2014ರಲ್ಲಿ 17 ಲಕ್ಷ ಟನ್‌ಗಳಷ್ಟು ಎಲೆಕ್ಟ್ರಾನಿಕ್‌ ಮತ್ತು ಎಲೆಕ್ಟ್ರಾನಿಕ್‌ ಉಪಕರಣಗಳ ತ್ಯಾಜ್ಯಗಳನ್ನು ಉತ್ಪಾದಿಸಿದೆ.

●. ಜಾಗತಿಕ ಇ–ತ್ಯಾಜ್ಯದ ಪ್ರಮಾಣವು ಮುಂದಿನ ಮೂರು ವರ್ಷಗಳಲ್ಲಿ ಶೇ 21ರಷ್ಟು ಹೆಚ್ಚುವ ಸಾಧ್ಯತೆ ಇದ್ದು, 500 ಲಕ್ಷ ಟನ್‌ಗಳಿಗೆ ಏರಿಕೆಯಾಗಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

●. 2014ರಲ್ಲಿ ಅಮೆರಿಕ ಮತ್ತು ಚೀನಾ ಶೇ 36ರಷ್ಟು ಇ–ತ್ಯಾಜ್ಯ ಉತ್ಪಾದಿಸಿವೆ ಎಂದು ವಿಶ್ವಸಂಸ್ಥೆಯ ‘ಜಾಗತಿಕ ಇ–ತ್ಯಾಜ್ಯ ಮೇಲ್ವಿಚಾರಣೆ–2014ರಲ್ಲಿ ವಿವರಿಸಲಾಗಿದೆ.

●. ಅಮೆರಿಕ, ಚೀನಾ, ಜಪಾನ್‌ ಮತ್ತು ಜರ್ಮನಿ ನಂತರದ ಸ್ಥಾನದಲ್ಲಿ ಭಾರತ ಇದೆ.

●. ಜಾಗತಿಕ ಮಟ್ಟದಲ್ಲೇ ಏಷ್ಯಾದಲ್ಲಿ ಅತಿ ಹೆಚ್ಚು ಅಂದರೆ 160 ಲಕ್ಷ ಟನ್‌ ಅಥವಾ ಪ್ರತಿ ವ್ಯಕ್ತಿಗೆ 3.7 ಕೆ.ಜಿಯಷ್ಟು ಇ–ತ್ಯಾಜ್ಯ ಉತ್ಪಾದನೆಯಾಗಿದೆ. ಇದರಲ್ಲಿ ಚೀನಾ, ಜಪಾನ್‌ ಮತ್ತು ಭಾರತ ಮುಂಚೂಣಿ ಯಲ್ಲಿವೆ.

●. ಆಫ್ರಿಕಾ ದೇಶದಲ್ಲಿ ಪ್ರತಿ ವ್ಯಕ್ತಿಗೆ ಕೇವಲ 1.7ಕಿ.ಗ್ರಾಂನಷ್ಟು ಮಾತ್ರ ಇ–ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಈ ದೃಷ್ಟಿಯಂದ ಅತಿ ಕಡಿಮೆ ಇ–ತ್ಯಾಜ್ಯ ಉತ್ಪಾದಿಸುವ ದೇಶ ಎನಿಸಿಕೊಂಡಿದೆ.

●. ಒಟ್ಟು ಇ–ತ್ಯಾಜ್ಯದಲ್ಲಿ ಶೇ 60ರಷ್ಟು ಅತಿ ಹೆಚ್ಚಿನ ಇ–ತ್ಯಾಜ್ಯವು ಗೃಹ ಬಳಕೆ ಮತ್ತು ವ್ಯಾಪಾರ ಉದ್ದೇಶಗಳಿಗೆ ಬಳಸಿರುವ ಎಲೆಕ್ಟ್ರಾನಿಕ್‌ ಉಪಕರಣ ಗಳಿಂದ ಸೃಷ್ಟಿಯಾಗಿವೆ.

●. 2014ರಲ್ಲಿ ಉತ್ಪಾದನೆಯಾಗಿರುವ ಇ–ತ್ಯಾಜ್ಯದಲ್ಲಿ 16,500 ಕಿ.ಟನ್‌ಗಳಷ್ಟು ಕಬ್ಬಿಣ, 1,900 ಕಿ.ಟನ್‌ಗಳಷ್ಟು ತಾಮ್ರ ಮತ್ತು 300 ಟನ್‌ಗಳಷ್ಟು ಚಿನ್ನ ಒಳಗೊಂಡಿದೆ. ಇಷ್ಟೇ ಅಲ್ಲದೆ, ಬೆಳ್ಳಿ, ಪ್ಲಾಸ್ಟಿಕ್‌, ಅಲ್ಯುಮಿನಿಯಂ ತ್ಯಾಜ್ಯ ಗಳೂ ಸೇರಿಕೊಂಡಿವೆ.

☀ಎಸ್ ಡಿ ಎ ಮತ್ತು ಎಫ್ ಡಿ ಎ ಎಕ್ಸಾಂ ಗಾಗಿ ಸಾಮಾನ್ಯ ಜ್ಞಾನ (ಭಾಗ - 21) (General knowledge for SDA and FDA Exam (Part-21))  ☆.. ಎಸ್ ಡಿ ಎ ಮತ್ತು ಎಫ್ ಡಿ ಎ ವಿಶೇಷಾಂಕ. ...

☀ಎಸ್ ಡಿ ಎ ಮತ್ತು ಎಫ್ ಡಿ ಎ ಎಕ್ಸಾಂ ಗಾಗಿ ಸಾಮಾನ್ಯ ಜ್ಞಾನ (ಭಾಗ - 21)
(General knowledge for SDA and FDA Exam (Part-21))
☆.. ಎಸ್ ಡಿ ಎ ಮತ್ತು ಎಫ್ ಡಿ ಎ ವಿಶೇಷಾಂಕ. ...
━━━━━━━━━━━━━━━━━━━━━━━━━━━━━━━━━━━━━━━━━━━━━

★ ಎಸ್ ಡಿ ಎ ಮತ್ತು ಎಫ್ ಡಿ ಎ ವಿಶೇಷಾಂಕ
(SDA and FDA Special)

★ ಸಾಮಾನ್ಯ ಜ್ಞಾನ
(General Knowledge)


811. ಭಾರತದ ಹೊರಗಡೆ ಶಾಖೆಗಳನ್ನು ತೆರೆದ ಮೊದಲ ಬ್ಯಾಂಕ್ ಯಾವುದು?

●.ಉತ್ತರ :- ಬ್ಯಾಂಕ್ ಆಫ್ ಇಂಡಿಯಾ.


812. ಸಾಮಾನ್ಯ ಮನುಷ್ಯನ ದೇಹದಲ್ಲಿರುವ ಕ್ರೋಮೊಸೋಮ್'ಗಳ ಸಂಖ್ಯೆ ಎಷ್ಟು?

●.ಉತ್ತರ :- 46


813. ಭಾರತದ ಯಾವ ರಾಜ್ಯದಲ್ಲಿ ಹೆಚ್ಚಾಗಿ 'ಗ್ರೇಟ್ ಇಂಡಿಯನ್ ಬಸ್ಟರ್ಡ್' ಪಕ್ಷಿಗಳು ಕಂಡು ಬರುತ್ತವೆ?

●.ಉತ್ತರ :- ರಾಜಸ್ಥಾನ


814. ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು?

●.ಉತ್ತರ :- ಕಬ್ಬಡ್ಡಿ


815. ಯಾವ ಸ್ಮಾರಕದಲ್ಲಿ ಮುಖ್ಯ ದ್ವಾರದಲ್ಲಿನ ಚಪ್ಪಾಳೆ ಶಬ್ದವು 30 ರಿಂದ 40 ಮೀಟರಿನ ಒಳಗೆ ಎಲ್ಲಿಯಾದರೂ ಕೇಳಿಸುವಂತೆ ವಿನ್ಯಾಸಪಡಿಸಲಾಗಿರುವ ಸಂಜ್ಞೆ ಸಾಧನವನ್ನು ಹೊಂದಿದೆ?

●.ಉತ್ತರ :- ಗೋಲ್ಕೊಂಡಾ ಫೋರ್ಟ್


816. ಯಾವುದರಿಂದ ಉಂಟಾಗುವ ಪರಿಸರ ಮಾಲಿನ್ಯ ಆಮ್ಲ ಮಳೆಗೆ ಕಾರಣವಾಗುತ್ತದೆ?

●.ಉತ್ತರ :- ನೈಟ್ರಸ್ ಆಕ್ಸೈಡ ಮತ್ತು ಗಂಧಕದ ಡೈಯಾಕ್ಸೈಡ.


817. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2015 ನೇ ಇಸವಿಯನ್ನು ಈ ಕೆಳಕಂಡ ಯಾವ ವರ್ಷವನ್ನಾಗಿ ಘೋಷಿಸಿದೆ ?

●.ಉತ್ತರ :- ಅಂತರಾಷ್ಟ್ರೀಯ ಮಣ್ಣಿನ ವರ್ಷ


818. ಭಾರತದ ಗಗನ್ ಜಿತ್ ಬುಲ್ಲರ್ ಅವರು ಯಾವ ಕ್ರೀಡೆಯಲ್ಲಿ ಪ್ರಸಿದ್ದಿ ಹೊಂದಿದ್ದಾರೆ?

 ●.ಉತ್ತರ :- ಗಾಲ್ಪ್.


819. ಕರ್ನಾಟಕ ರತ್ನ ಪ್ರಶಸ್ತಿಯನ್ನು ಯಾವ ವರ್ಷದಲ್ಲಿ ಆರಂಭಿಸಲಾಯಿತು?

●.ಉತ್ತರ :- 1992.


820. 2014 ನೇ ಸಾಲಿನ ನೃಪತುಂಗ ಪ್ರಶಸ್ತಿಯನ್ನು ಯಾರು ಪಡೆದಿದ್ದಾರೆ?

●.ಉತ್ತರ :- ಕುಂ. ವೀರಭದ್ರಪ್ಪ.


821. ಪರಿಸರ ಸಮತೋಲನ ಕಾಪಾಡಲು ಪ್ರತಿಶತ ಎಷ್ಟು ಪ್ರಮಾಣದ ಅರಣ್ಯ ಪ್ರದೇಶವನ್ನು ಹೊಂದಿರಬೇಕು ?

●.ಉತ್ತರ :- 33%


822. ಅಸ್ಸಾಂನಲ್ಲಿನ ಸೋನೋವಾಲ್ ಕಚಾರಿಸ್ ಪಂಗಡದ ಮುಖ್ಯ ಕಸುಬು ಯಾವುದು?

●.ಉತ್ತರ :- ನದಿಗಳಲ್ಲಿ ಚಿನ್ನವನ್ನು ತೊಳೆಯುವುದು.


823. ಸ್ವಾತಂತ್ರ್ಯ, ಸಮಾನತೆ ಮತ್ತು ಬ್ರಾತೃತ್ವ' ಇದು ಯಾವ ದೇಶದ ಕ್ರಾಂತಿಕಾರಕ ಘೋಷಣೆಯಾಗಿತ್ತು?

●.ಉತ್ತರ :- ಪ್ರಾನ್ಸ್


824."ಸಂಜೆ ಐದರ ಮಳೆ " ಕವನ ಸಂಕಲನವನ್ನು ಬರೆದವರು ಯಾರು ?

●.ಉತ್ತರ :- ಕೆ.ಎಸ್.ನಿಸಾರ್ ಅಹಮದ್


825. ರಾಜ್ಯ ಸಭೆಯ ಸದಸ್ಯರು ತಮ್ಮ ರಾಜಿನಾಮೆಯನ್ನು ಯಾರಿಗೆ ಸಲ್ಲಿಸುತ್ತಾರೆ?

●.ಉತ್ತರ :- ಉಪರಾಷ್ಟ್ರಪತಿಗಳು.


826. ಆಗ್ನೇಯ ಏಷಿಯಾದಲ್ಲಿ ವಸಾಹತು ಆಡಳಿತದಿಂದ ತಪ್ಪಿಸಿಕೊಂಡು ಏಕಮಾತ್ರ ರಾಷ್ಟ್ರ ಯಾವುದು?

●.ಉತ್ತರ :- ಥಾಯ್ಲೆಂಡ್


827. 2015 ರ 41 ನೇ ಜಿ - 7 ಸಮ್ಮೇಳನ ಎಲ್ಲಿ ನಡೆಯಿತು?

●.ಉತ್ತರ :- ಜರ್ಮನಿ


828. ಮದನಮೋಹನ ಮಾಳವೀಯರವರು ಇತ್ತೀಚಿಗೆ ಮರೋಣತ್ತರವಾಗಿ ಭಾರತ ರತ್ನ ಪ್ರಶಸ್ತಿ ಪುರಸ್ಕ್ರತರಾದರು, ಇಲ್ಲಿಯವರೆಗೆ ಎಷ್ಟು ವ್ಯಕ್ತಿಗಳಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ?

●.ಉತ್ತರ :- 12.


829. ಭಾರತದ ಯಾವ ರಾಜ್ಯದಲ್ಲಿ ಅತೀ ಉದ್ದದ ಫ್ಲೈ ಓವರ್ ರಸ್ತೆ ಮಾರ್ಗವಿದೆ?

●.ಉತ್ತರ :- ಆಂಧ್ರಪ್ರದೇಶ


830. ಯಾವ ಹಿರಿಯ ಬಾಲಿವುಡ್ ನಟ 2014ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.?

●.ಉತ್ತರ :- ಶಶಿ ಕಪೂರ್


831. ನಳಂದ ವಿಶ್ವವಿದ್ಯಾಲಯವನ್ನು ಸಂಪೂರ್ಣ ನಾಶಮಾಡಿದ ವ್ಯಕ್ತಿ (ದೊರೆ ಯಾರು)?

●.ಉತ್ತರ :- ಭಕ್ತಿಯಾರ್ ಖಿಲ್ಜಿ


832. ಸಿಬಿಐ ನೂತನ ನೂತನ ನಿರ್ದೇಶಕರಾಗಿ ಯಾರು ಆಯ್ಕೆಯಾದರು?

●.ಉತ್ತರ :- ಅನಿಲ್ ಸಿನ್ಹಾ


833. "ತಮಿಳು ತಲೆಗಳ ನಡುವೆ" ಯನ್ನು ಬರೆದವರು?

●.ಉತ್ತರ :- ಬಿ. ಜಿ. ಎಲ್. ಸ್ವಾಮಿ


834. ದೇಶದಲ್ಲಿ ಮೊಟ್ಟಮೊದಲ ರಕ್ಷಣಾ ಕೈಗಾರಿಕೆ ಪಾರ್ಕ್ ಹೊಂದಿರುವ ರಾಜ್ಯ ಯಾವುದು?

●.ಉತ್ತರ :- ಕೇರಳ


835. “ದಿ ಲೊಲ್ಯಾಂಡ್ (The Lowland)” ಕೃತಿಯ ಲೇಖಕರು ಯಾರು?

●.ಉತ್ತರ :- ಜುಂಪಾ ಲಹರಿ.


836. ಪ್ರತಿಷ್ಠಿತ ಆಸ್ಕರ್ ಮತ್ತು ಬೂಕರ್ ಪ್ರಶಸ್ತಿ ಪಡೆದ ಪ್ರಪಂಚದ ಏಕೈಕ ಪ್ರತಿಭೆ ಯಾರು?

●.ಉತ್ತರ :- ಜರ್ಮನಿಯ ರುಥ್ ಪ್ರಾವರ್ ಝಬ್ ವಾಲ.


837. ಪ್ರಥಮ ಏಷ್ಯನ್ ಕ್ರೀಡಾಕೂಟಗಳು ಎಲ್ಲಿ ಜರುಗಿದವು?.

●.ಉತ್ತರ :- ದೆಹಲಿ.


838. ಎಡ್ಗರ್ ಲುಂಗು ಇತ್ತೀಚೆಗೆ ಯಾವ ರಾಷ್ಟ್ರದ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ?

●.ಉತ್ತರ :- ಝಾಂಬಿಯಾ


839. ಡಾ. ಬಿ.ಆರ್. ಅಂಬೇಡ್ಕರ್ ರವರನ್ನು ’ಸಂವಿಧಾನಶಿಲ್ಪಿ’ ಎಂದು ಕರೆದವರು ಯಾರು?

●.ಉತ್ತರ :- ಎಂ.ವಿ. ಪೈಲಿ


840. ಹಣಕಾಸು ಕ್ಷೇತ್ರದಲ್ಲಿ ಬಳಸುವ 'G.D.R'ನ ವಿಸ್ತೃತ ರೂಪವೇನು?

●.ಉತ್ತರ :- Global Depositary Receipts.

...To be Continued..

Friday, 4 September 2015

☀ಎಸ್ ಡಿ ಎ ಮತ್ತು ಎಫ್ ಡಿ ಎ ಎಕ್ಸಾಂ ಗಾಗಿ ಸಾಮಾನ್ಯ ಜ್ಞಾನ (ಭಾಗ - 20) (General knowledge for SDA and FDA Exam (Part-20))  ☆.. ಎಸ್ ಡಿ ಎ ಮತ್ತು ಎಫ್ ಡಿ ಎ ವಿಶೇಷಾಂಕ. ...

☀ಎಸ್ ಡಿ ಎ ಮತ್ತು ಎಫ್ ಡಿ ಎ ಎಕ್ಸಾಂ ಗಾಗಿ ಸಾಮಾನ್ಯ ಜ್ಞಾನ (ಭಾಗ - 20)
(General knowledge for SDA and FDA Exam (Part-20))
☆.. ಎಸ್ ಡಿ ಎ ಮತ್ತು ಎಫ್ ಡಿ ಎ ವಿಶೇಷಾಂಕ. ...
━━━━━━━━━━━━━━━━━━━━━━━━━━━━━━━━━━━━━━━━━━━━━

★ ಎಸ್ ಡಿ ಎ ಮತ್ತು ಎಫ್ ಡಿ ಎ ವಿಶೇಷಾಂಕ
(SDA and FDA Special)

★ ಸಾಮಾನ್ಯ ಜ್ಞಾನ
(General Knowledge)


781. ನರೇಂದ್ರ ಮೋದಿಯವರು ಜಾರಿಗೆ ತಂದ 'ದೀನ ದಯಾಳು ಉಪಾದ್ಯಾಯ ಗ್ರಾಮ ಜ್ಯೋತಿ ಯೋಜನೆ' ಯ ಮುಖ್ಯ ಉದ್ದೇಶ?

●.ಉತ್ತರ :- 24 ತಾಸು ವಿದ್ಯುತ ಪೂರೈಕೆ


782. ಯಾವ ದೇಶದ ಸಂವಿಧಾನದಿಂದ 'ರಾಷ್ಟ್ರಪತಿ ದೋಷಾರೋಪಣ ಪದ್ದತಿ'ಯನ್ನು ಭಾರತದ ಸಂವಿಧಾನವು ಎರವಲು ಪಡೆದುಕೊಂಡಿದೆ ?

●.ಉತ್ತರ :- ಐರ್ಲೆಂಡ್ ಸಂವಿಧಾನ


783. 2015 ನೇ ಸಾಲಿನ ಮ್ಯಾಗ್ಸೆಸ್ಸ ಪ್ರಶಸ್ತಿ ವೀಜೆತರಾದ ಭಾರತಿಯ ಯಾರು?

●.ಉತ್ತರ :- ಅಂಶು ಗುಪ್ತಾ


784. ಯಾವ ಅನುಚ್ಚೇದದ ಪ್ರಕಾರ ಸಂಸತ್ತು ವಿದಾನ ಪರಿಷತ್ ನ್ನು ರಚಿಸಬಹುದು ಅಥವಾ ರದ್ದುಪಡಿಸಬಹುದು?

●.ಉತ್ತರ :- 169ನೇ ವಿಧಿ.


785. ಕೇಂದ್ರೀಯ ಜಾಗ್ರತ ಆಯೋಗವನ್ನು (ಸೆಂಟ್ರಲ್ ವಿಜಿಲೆನ್ಸ್ ಕಮಿಷನ್) ಕೇಂದ್ರ ಸರ್ಕಾರವು ಯಾವಾಗ ರಚಿಸಿತು?

●.ಉತ್ತರ :- 1964ರಲ್ಲಿ.


786. ಇತ್ತೀಚೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನೂತನ ಅದ್ಯಕ್ಷರು ಯಾರು?

●.ಉತ್ತರ :- ಕೃಪಾ ಆಳ್ವಾ


787. ಮೃತದೇಹವನ್ನು ಕೆಡದಂತೆ ಇರಿಸಲು ಬಳಸುವ ರಾಸಾಯನಿಕ ಯಾವುದು?

●.ಉತ್ತರ :- ಫಾರ್ಮಲ್ಡಿಹೈಡ.


788. ವಿಸ್ತೀರ್ಣದಲ್ಲಿ ಭಾರತದ ಅತೀ ದೊಡ್ಡ ದ್ವೀಪ ಯಾವುದು?

●.ಉತ್ತರ :- ಅಂಡಮಾನ್


789. ಇಪ್ಪತ್ತನೆಯ ಕಾನೂನು ಆಯೋಗದ ಮುಖ್ಯಸ್ಥರು ಯಾರು ?

●.ಉತ್ತರ :- ನ್ಯಾ. ಎ ಪಿ ಶಹಾ.


790. ಭಾರತ ಸರ್ಕಾರವು ಯಾವಾಗ 'ಕ್ಯೋಟೊ ಪ್ರೋಟೊಕಾಲ್' ಅನ್ನು ಅನುಮೋದಿಸಿತು?

●.ಉತ್ತರ :- 2002


791. ರಾಮಾಯಣದ ರಾಮನ ತಾಯಿಯ ಹೆಸರೇನು?

 ●.ಉತ್ತರ :- ಕೌಸಲ್ಯೆ.


792. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕುರಿತು ಅಧ್ಯಯನ ಮಾಡಲು ನೇಮಕವಾಗಿದ್ದ ಆಯೋಗ ಯಾವುದು?

●.ಉತ್ತರ :- ಹಂಟರ್ ಆಯೋಗ.


793. 'ಹೈಡ್ರಾಲಿಕ್ ಬ್ರೇಕ್'ಗಳು ಯಾವ ನಿಯಮದ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತದೆ?

●.ಉತ್ತರ :- ಫಾಸ್ಕಲ್ ನಿಯಮ


794. ಶಕ ಪಂಚಾಂಗದ ಪ್ರಕಾರ ಭಾರತದ ಪ್ರಸ್ತುತ ವರ್ಷ (ಇಸ್ವಿ) ಯಾವುದು?

●.ಉತ್ತರ :- 1936


795. ಇತ್ತೀಚೆಗೆ ಅತ್ಯಂತ ಆರೋಗ್ಯಕರ ಚಹಾ ಎಂದು ಪರಿಗಣಿತವಾಗಿರುವ 'ಪರ್ಪಲ್ ಟೀ' ಯನ್ನು ಉತ್ಪಾದಿಸುವ ವಿಶ್ವದ ಏಕೈಕ ರಾಷ್ಟ್ರ ಯಾವುದು ?

●.ಉತ್ತರ :- ಕೀನ್ಯಾ


796. ಇರಾಕಿನ ಹಳೆಯ ಹೆಸರೇನು?

●.ಉತ್ತರ :- ಮೆಸಪಟೋಮಿಯಾ.


797. 2015 ನೇ ಸಾಲಿನ ಚಾವುಂಡರಾಯ ಪ್ರಸಶ್ತಿಗೆ ಪಾತ್ರರಾದವರು ಯಾರು?

●.ಉತ್ತರ :- ಎಸ ಪಿ ಪದ್ಮಪ್ರಸಾದ


798. ಕನ್ನಡದ ಎರಡನೇ ಕವಿಚಕ್ರವರ್ತಿ ಎಂದು ಯಾರು ಪ್ರಸಿದ್ದಿ ಹೊಂದಿದ್ದಾರೆ?

●.ಉತ್ತರ :- ಜನ್ನ


799. ಯುರೋಪ ಒಕ್ಕೂಟದಲ್ಲಿರುವ ಒಟ್ಟು ರಾಷ್ಟ್ರಗಳೆಷ್ಟು?

●.ಉತ್ತರ :- 28.


800. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಇತ್ತೀಚೆಗೆ ಯಾವ ದಿನದಂದು ಆಚರಿಸಲಾಯಿತು ?

●.ಉತ್ತರ :- ಜನೆವರಿ 24


801. ಕರ್ನಾಟಕದಲ್ಲಿ ಅತಿ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ರಕ್ಷಣಾ ಧಾಮಗಳನ್ನು ಹೊಂದಿರುವ ಜಿಲ್ಲೆ ಯಾವುದು?

●.ಉತ್ತರ :- ಮೈಸೂರು.


802. ಪೋಂಗ್ ಅಣೆಕಟ್ಟನ್ನು ಯಾವ ಹೆಸರಿನಿಂದ ಈಗ ಕರೆಯಲಾಗುತ್ತದೆ?

●.ಉತ್ತರ :- ಮಹಾರಾಣಾ ಪ್ರತಾಪ್ ಸಾಗರ್ ಲೇಕ್


803. ಭಾರತದ ಮೊಟ್ಟ ಮೊದಲ ದೇಶೀಯ ಬ್ಯಾಂಕ್ ಯಾವುದು?

●.ಉತ್ತರ :- ಪಂಜಾಬ್ ನ್ಯಾಷನಲ್ ಬ್ಯಾಂಕ್


804. ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿಮೊದಲ ಬಾರಿಗೆ 6 ಏಸೆತಗಳಿಗೆ 6 ಸಿಕ್ಸರ್ ಸಿಡಿಸಿದ ಆಟಗಾರ ಯಾರು?

●.ಉತ್ತರ :- ಹರ್ಷಲ್ ಗಿಬ್ಸ್.


805. ಮಿರ್ ಖಾಸಿಮ್‌ನ ನಂತರ ಬಂಗಾಳದ ಸಿಂಹಾಸಕ್ಕೆ ಯಾರನ್ನು ನೇಮಿಸಲಾಯಿತು?

 ●.ಉತ್ತರ :- ಮಿರ್ ಜಾಫರ್


806. ಭೂಮಿ ಮತ್ತು ಚಂದ್ರನ ನಡುವೆ ಇರುವ ಅಂತರವನ್ನು ನಿಖರವಾಗಿ ಯಾವ ವಿಧಾನ/ಸಾಧನದಿಂದ ಅಳೆಯಲಾಗಿದೆ?

●.ಉತ್ತರ :- ರಿಟ್ರೋ ರಿಫ್ಲೆಕ್ಟರ್.


807. ಯಾವ ನದಿಗೆ ಅಣೆಕಟ್ಟು ಕಟ್ಟುವ ಮೂಲಕ ದೇಬರ್ ಸರೋವರವನ್ನು ರಚಿಸಲಾಗಿದೆ?

●.ಉತ್ತರ :- ಗೋಮತಿ


808. ತೆಲಂಗಾಣ ರಾಜ್ಯ ಎಂದು ಉದಯವಾಯಿತು ?.

●.ಉತ್ತರ :- ಜೂನ್ 02, 2014


809. ಜೀವಿಗಳ ಕುರಿತಂತೆ 'ಉಳಿವಿಗಾಗಿ ಹೋರಾಟ' (struggle for existence) ಇದು ಯಾರ ಪ್ರಸಿದ್ದ ಹೇಳಿಕೆಯಾಗಿದೆ.?

●.ಉತ್ತರ :- ಚಾರ್ಲ್ಸ ಡಾರ್ವಿನ್.


810. ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಏಕೈಕ ವಿಜ್ಞಾನಿ ಯಾರು?

●.ಉತ್ತರ :- ನಾರ್ಮನ್ ಬೊಲಾರ್ಗ.

...To be continued. 

☀ಈ ದಿನದ (KAS/IAS) ಪ್ರಶ್ನೆ: "ವಿಶ್ವ ಪರಂಪರೆಯ ತಾಣವಾಗಿ ಪಶ್ಚಿಮ ಘಟ್ಟಗಳು-ಜೀವ ವೈವಿಧ್ಯ ಸುಸ್ಥಿರ ಬಳಕೆ ". -(Sustainable use of the Biodiversity of the Western Ghats-As a World Heritage Site.)

☀ಈ ದಿನದ (KAS/IAS) ಪ್ರಶ್ನೆ:
-"ವಿಶ್ವ ಪರಂಪರೆಯ ತಾಣವಾಗಿ ಪಶ್ಚಿಮ ಘಟ್ಟಗಳು-ಜೀವ ವೈವಿಧ್ಯ ಸುಸ್ಥಿರ ಬಳಕೆ ".

-(Sustainable use of the Biodiversity of the Western Ghats-As a World Heritage Site.)
━━━━━━━━━━━━━━━━━━━━━━━━━━━━━━━━━━━━━━━━━━━━━

★ ವಿವರಣಾತ್ಮಕ ಸಾಮಾನ್ಯ ಅಧ್ಯಯನ.
(General Studies notes in Kannada Medium)

★ ಐಎಎಸ್ / ಕೆಎಎಸ್ ಪರೀಕ್ಷಾ ವಿಶೇಷಾಂಕ
(KAS/IAS Examination Special)


— ಇತ್ತೀಚೆಗಷ್ಟೇ ಯುನೆಸ್ಕೋದಿಂದ ವಿಶ್ವಪರಂಪರೆಯ ಪಟ್ಟಿಗೆ ಪಶ್ಚಿಮ ಘಟ್ಟಗಳ 39 ನೆಲೆಗಳು ಸೇರಿವೆ. ಪ್ರಪಂಚದ ಅತ್ಯಂತ ಮಹತ್ವಪೂರ್ಣವಾದ ಎಂಟು ಜೈವಿಕ ವೈವಿಧ್ಯ `ಅತೀ ಅಗ್ರ ತಾಣ' (ಬಯೋ ಡೈವರ್ಸಿಟಿ ಹಾಟೆಸ್ಟ್ ಸ್ಪಾಟ್ಸ್)ಗಳಲ್ಲಿ ಪಶ್ಚಿಮಘಟ್ಟಗಳೂ ಒಂದು.

☀ಪಶ್ಚಿಮ ಘಟ್ಟಗಳು :
•┈┈┈┈┈┈┈┈┈┈┈┈┈┈•
●.ಪಶ್ಚಿಮ ಘಟ್ಟಗಳು ಭಾರತ ಜಂಬೂದ್ವೀಪದ ಪಶ್ಚಿಮ ಭಾಗದಲ್ಲಿರುವ ಒಂದು ಪರ್ವತ ಶ್ರೇಣಿ. ಈ ಶ್ರೇಣಿಗೆ ಸಹ್ಯಾದ್ರಿ ಪರ್ವತಗಳು ಎಂಬ ಹೆಸರು ಸಹ ಇದೆ. ದಖ್ಖನ್ ಪೀಠಭೂಮಿಯ ಪಶ್ಚಿಮದ ಅಂಚಿನ ಉದ್ದಕ್ಕೂ ಹಬ್ಬಿರುವ ಪಶ್ಚಿಮ ಘಟ್ಟಗಳು ಪೀಠಭೂಮಿಯನ್ನು ಅರಬ್ಬೀ ಸಮುದ್ರದ ಕಿರಿದಾದ ಕರಾವಳಿ ಪ್ರದೇಶದಿಂದ ಬೇರ್ಪಡಿಸುತ್ತವೆ.

●.ಮಹಾರಾಷ್ಟ್ರ-ಗುಜರಾತ್‌ಗಳ ಗಡಿಪ್ರದೇಶದಲ್ಲಿ ತಾಪ್ತಿ ನದಿಯ ದಕ್ಷಿಣದಲ್ಲಿ ಆರಂಭವಾಗುವ ಈ ಶ್ರೇಣಿಯು ದಕ್ಷಿಣಾಭಿಮುಖವಾಗಿ ಹಬ್ಬಿ ಕನ್ಯಾಕುಮಾರಿಯವರೆಗೆ ಇರುವುದು.

●.ಒಟ್ಟು ಸುಮಾರು ೧೬೦೦ ಕಿ.ಮೀ. ಉದ್ದವಿರುವ ಪಶ್ಚಿಮ ಘಟ್ಟಗಳು ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿವೆ. ಒಟ್ಟು ಶ್ರೇಣಿಯ ಅರ್ಧಕ್ಕಿಂತ ಹೆಚ್ಚು ಭಾಗವು ಕರ್ಣಾಟಕದಲ್ಲಿಯೇ ಇದೆ.

●.ಪಶ್ಚಿಮ ಘಟ್ಟಗಳು ಒಟ್ಟು ೬೦೦೦೦ ಚದರ ಕಿ.ಮೀ. ಪ್ರದೇಶವನ್ನು ಆವರಿಸಿವೆ.

●.ಇಲ್ಲಿಂದ ಹೊರಡುವ ನದಿಗಳು ಭಾರತದ ಒಟ್ಟು ಜಲಾನಯನ ಪ್ರದೇಶದ ೪೦% ಭಾಗವನ್ನು ಆವರಿಸಿವೆ.

●.ಪಶ್ಚಿಮ ಘಟ್ಟಗಳ ಸರಾಸರಿ ಎತ್ತರ ಸುಮಾರು ೧೨೦೦ ಮೀಟರ್. ಈ ಪ್ರದೇಶವು ವಿಶ್ವದ ಅತ್ಯಂತ ಸಕ್ರಿಯ ಜೀವವೈವಿಧ್ಯದ ನೆಲೆಗಳಲ್ಲಿ ಒಂದಾಗಿದ್ದು ೫೦೦೦ಕ್ಕೂ ಹೆಚ್ಚಿನ ತಳಿಯ ಗಿಡಮರಗಳು, ೧೩೯ ಬಗೆಯ ಸಸ್ತನಿಗಳು, ೫೦೮ ಪ್ರಭೇದದ ಪಕ್ಷಿಗಳು ಮತ್ತು ೧೭೯ ಪ್ರಕಾರದ ದ್ವಿಚರಿಗಳಿಗೆ ನೆಲೆಯಾಗಿವೆ. ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಜೀವತಳಿಗಳ ಪೈಕಿ ೩೨೫ ತಳಿಗಳ ಜೀವಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ.


☀ಪಶ್ಚಿಮ ಘಟ್ಟಗಳು ಮತ್ತು ಜೀವ ವೈವಿಧ್ಯ :
•┈┈┈┈┈┈┈┈┈┈┈┈┈┈┈┈┈┈┈┈┈┈┈┈•
●.ಪ್ರದೇಶವೊಂದರಲ್ಲಿ ಇರುವ ಜೀವ ಪ್ರಭೇದಗಳ ಒಟ್ಟು ಮೊತ್ತವನ್ನು ಆ ಪ್ರದೇಶದ ಜೀವ ವೈವಿಧ್ಯ ಎಂದು ಕರೆಯುತ್ತಾರೆ.

●.ಜಗತ್ತಿನ ಒಟ್ಟು ಭೂಭಾಗದ ಶೇಕಡಾ 2.5 ರಷ್ಟು ಮಾತ್ರ ಇರುವ ಭಾರತದ ಜೈವಿಕ ವೈವಿಧ್ಯ ಜಾಗತಿಕ ಜೀವ ವೈವಿಧ್ಯದ ಶೇಕಡಾ 7.8 ರಷ್ಟು. ಇವುಗಳಲ್ಲಿ ಬಹುಪಾಲು ಇರುವುದು ಪಶ್ಚಿಮ ಘಟ್ಟಗಳಲ್ಲಿ.

●.ಕೇವಲ ಪಶ್ಚಿಮಘಟ್ಟಗಳಲ್ಲಿ ಮಾತ್ರ ಕಂಡು ಬರುವ ಸ್ಥಳೀಯ ಪ್ರಭೇದಗಳಲ್ಲಿ 150 ಹುಲ್ಲು, 100 ಆರ್ಕಿಡ್, 11 ತಾಳೆ, 9 ಮೆಣಸು ಮತ್ತು 7 ಸಿಸ್ಟು ಪ್ರಭೇದಗಳಿವೆ.

●.ಇಲ್ಲಿಯ ಸೂಕ್ಷ್ಮ ಪ್ರದೇಶಗಳನ್ನು ಅಧ್ಯಯನ ಮಾಡಿ, ಅದರ ಸಂರಕ್ಷಣೆಗೆ ಅಗತ್ಯವಾದ ನೀತಿ ನಿಲುವುಗಳನ್ನು ರೂಪಿಸಲು ಕೇಂದ್ರ ಸರ್ಕಾರ ರಚಿಸಿದ್ದ 14 ಪರಿಣತರ ತಂಡ ಪ್ರೊ. ಮಾಧವ ಗಾಡ್ಗೀಳ್ ಅವರ ನೇತೃತ್ವದಲ್ಲಿ ಅಧ್ಯಯನ ನಡೆಸಿ, 2011ರ ಆಗಸ್ಟ್‌ನಲ್ಲಿ ವಿವರವಾದ ವರದಿಯನ್ನು ಸಲ್ಲಿಸಿತು.ಈ ವರದಿಯಲ್ಲಿ, ಪಶ್ಚಿಮ ಘಟ್ಟಗಳನ್ನು ಜೀವ ಪರಿಸ್ಥಿತಿಯ ದೃಷ್ಟಿಯಿಂದ ಮೂರು ವಿವಿಧ ಹಂತಗಳ ಸೂಕ್ಷ್ಮ ವಲಯಗಳನ್ನಾಗಿ ವಿಭಾಗಿಸಲಾಗಿದೆ.

●.ಮೊದಲ ವರ್ಗದ ಸೂಕ್ಷ್ಮ ವಲಯದಲ್ಲಿ ಯಾವುದೇ ರೀತಿಯ ಜಲ ವಿದ್ಯುತ್ ಯೋಜನೆ ಅಥವಾ ಜಲಾಶಯಗಳ ನಿರ್ಮಾಣಕ್ಕೆ ಅವಕಾಶವಿಲ್ಲ. ಇದರಲ್ಲಿ ಒಟ್ಟು 26 ತಾಲೂಕುಗಳನ್ನು ಗುರುತಿಸಿದೆ.ಐದು ತಾಲೂಕುಗಳಲ್ಲಿ ಎರಡನೆಯ ಸೂಕ್ಷ್ಮವಲಯವನ್ನೂ, 12 ತಾಲೂಕುಗಳಲ್ಲಿ ಮೂರನೆಯ ವರ್ಗದ ಪ್ರದೇಶವನ್ನು ಗುರುತಿಸಿದೆ. ಈ ಪ್ರದೇಶಗಳಲ್ಲಿ ಯಾವ ಅಭಿವೃದ್ಧಿ ಚಟುವಟಿಕೆಗಳು ನಡೆಯಬಹುದು, ಯಾವುದು ನಡೆಯಬಾರದು ಎನ್ನುವುದನ್ನೂ ಸ್ಪಷ್ಟಪಡಿಸಿದೆ.

●.ಇದರೊಂದಿಗೆ ಪಶ್ಚಿಮ ಘಟ್ಟಗಳ ಸಂರಕ್ಷಣೆಯಲ್ಲಿ ಸ್ಥಳೀಯರ ಭಾಗವಹಿಸುವಿಕೆ, 2006ರ ಪರಿಶಿಷ್ಟ ಪಂಗಡ ಮತ್ತು ಅನುಸೂಚಿತ ಬುಡಕಟ್ಟು ಹಾಗೂ ಇತರೆ ಅರಣ್ಯವಾಸಿಗಳ ಹಕ್ಕುಗಳ ಅಧಿನಿಯಮ ನೀಡುವ ಸವಲತ್ತುಗಳನ್ನು ಅಲ್ಲಿಯ ಜನರಿಗೆ ಒದಗಿಸಬೇಕೆಂಬ ಶಿಫಾರಸು ಮಾಡಿದೆ.

●.ವಿಶ್ವಪರಂಪರೆಯ 39 ತಾಣಗಳ ಸಂರಕ್ಷಣೆ ಮಾಡುವಾಗ ಈ ವರದಿಯಲ್ಲಿರುವ ಅಂಶಗಳನ್ನು ಗಮನಿಸಬೇಕೆಂಬ ಸೂಚನೆಯನ್ನು ಯುನೆಸ್ಕೋ ಭಾರತ ಸರ್ಕಾರಕ್ಕೆ ನೀಡಿದೆ.

●.ತೀರ ಇತ್ತೀಚಿನವರೆಗೂ `ಜೀವ ವೈವಿಧ್ಯ' ಕೇವಲ ವಿಜ್ಞಾನಿಗಳ ಸಂಶೋಧಕರ ವಿಷಯವಾಗಿತ್ತು. ಆದರೆ ಮಾನವನ ಮೂಲಭೂತ ಅವಶ್ಯಕತೆಗಳಾದ ಅನ್ನ, ಆರೋಗ್ಯ, ಆವಾಸ, ಆದಾಯಗಳು ಬರುವುದೇ ಈ ಜೀವ ವೈವಿಧ್ಯದಿಂದ.

●.ಹೆಚ್ಚಾಗುತ್ತಾ ಬಂದ ಜನಸಂಖ್ಯೆ, ಮಾನವನ ಅಭಿವೃದ್ಧಿ ಪರ ಚಟುವಟಿಕೆಗಳು ಜೀವ ಪರಿಸರ ವ್ಯವಸ್ಥೆಗೆ ಉಂಟು ಮಾಡಿದ ಹಾನಿ, ಆವಾಸಗಳ ನಾಶ, ಕೃಷಿ ವಿಸ್ತರಣೆ, ಪರಿಸರ ಮಾಲಿನ್ಯ ಬದಲಾಗುತ್ತಿರುವ ಹವಾಮಾನ, ಇವೆಲ್ಲವುಗಳಿಂದ ಜೀವ ವೈವಿಧ್ಯದ ಅಳಿಯುವಿಕೆ ಹಿಂದೆಂದಿಗಿಂತಲೂ ಅಧಿಕವಾಗಿದೆ.

●.ಪ್ರತಿ ದಿನಪ್ರಭೇದಗಳ ಅಳಿಯುವಿಕೆ ನೈಸರ್ಗಿಕ ಪ್ರಮಾಣಕ್ಕಿಂತ ಸಾವಿರ ಪಟ್ಟು ಹೆಚ್ಚಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ವಿನಾಶದ ಕೊಂಡಿ ಮಾನವನನ್ನು ತಲುಪುವ ಮುಂಚೆಯೇ ಅವನ ಎಲ್ಲ ಅವಶ್ಯಕತೆಗಳನ್ನು ಪೂರೈಸುವ ಜೀವವೈವಿಧ್ಯದ ನಾಶದಿಂದ ಅವನು ಅಳಿಯುತ್ತಾನೆ.

●.ಹಾಗೆಯೇ ಇದೀಗ ಜನ ಸಾಮಾನ್ಯರೂ ಈ ಜೀವ ವೈವಿಧ್ಯ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವುದು ಅನಿವಾರ್ಯವಾಗಿದೆ. ಏಕೆಂದರೆ ಭಾರತ ಈ ನಿಟ್ಟಿನಲ್ಲಿ ಈ ವರೆಗೆ ಮಾಡಿರುವ ಪ್ರಯತ್ನ ಬಹಳ ನಿರಾಶಾದಾಯಕವಾಗಿದೆ.

●.22 ವರ್ಷಗಳ ಹಿಂದೆ ರಿಯೋ ಶೃಂಗ ಸಭೆಯಲ್ಲಿ ಶೇಕಡಾ 17 ರಷ್ಟು ಭೂಭಾಗವನ್ನು ಮನುಷ್ಯನ ಚಟುವಟಿಕೆಗಳಿಂದ ದೂರವಿಟ್ಟು ಸಂರಕ್ಷಣೆ ಮಾಡುತ್ತೇನೆಂದು ಸಹಿ ಮಾಡಿದ್ದ ಭಾರತ ಶೇಕಡಾ 4 ರಷ್ಟು ಭೂಭಾಗವನ್ನು ಮಾತ್ರ ಸಂರಕ್ಷಿತ ಪ್ರದೇಶವೆಂದು ಘೋಷಿಸಿದೆ.

●.ಸ್ವಾತಂತ್ರ್ಯ ಪೂರ್ವದಿಂದಲೂ ರೂಪಿಸಲಾಗಿದ್ದ ನಮ್ಮ ಅಪರೂಪದ ತಳಿ ಖಜಾನೆಗಳಲ್ಲಿ ಸಂಗ್ರಹವಾಗಿದ್ದ ನಾಲ್ಕು ಲಕ್ಷ ತಳಿ ಮೂಲಗಳನ್ನು ಬಹುರಾಷ್ಟ್ರೀಯ ಕಂಪೆನಿಗಳು ಪಡೆದುಕೊಂಡಿವೆ. ವಿಶಿಷ್ಠ ಪರಿಸರಗಳಲ್ಲಿ ಬದುಕಿ ಫಲ ನೀಡಬಹುದಾಗಿದ್ದ ತಳಿಗಳು ಅನ್ಯರ ಪಾಲಾಗಿವೆ. ಆಹಾರ, ಔಷಧಿಗಳ ಮೂಲವಾದ ವನ್ಯ ಪ್ರಬೇಧಗಳು ನಶಿಸಿ ಹೋಗುತ್ತಿವೆ.ಇಂತಹ ಪರಿಸ್ಥಿತಿಯಲ್ಲಿ ದೇಶದ ಭಾರತೀಯ ಜೀವ ವೈವಿಧ್ಯ ಕಾಂಗ್ರೆಸ್ ತೆಗೆದುಕೊಳ್ಳಲಿರುವ ನಿರ್ಣಯಗಳು ಮಹತ್ವಪೂರ್ಣವಾಗಲಿವೆ. ಸುಸ್ಥಿರ ಅಭಿವೃದ್ಧಿಗಾಗಿ ಜೈವಿಕ ವೈವಿಧ್ಯದ ಸಂರಕ್ಷಣೆ ಅತ್ಯವಶ್ಯಕ. ಪಶ್ಚಿಮ ಘಟ್ಟಗಳಿಗೆ ದೊರೆತಿರುವ ವಿಶ್ವಪರಂಪರೆಯ ಮಾನ್ಯತೆಯ ಬಗೆಗಿನ ಸರಿಯಾದ ತಿಳಿವಳಿಕೆ, ಸ್ಥಳೀಯರ ಭಾಗವಹಿಸುವಿಕೆ ಮತ್ತು ಜೈವಿಕ ವೈವಿಧ್ಯದ ದಾಖಲಾತಿಗೆ ಜನಪರ ಆಂದೋಲನಗಳ ಅವಶ್ಯಕತೆ ಇದೆ. ಎಳೆಯರು, ಯುವಕರು, ರೈತರು, ಮಹಿಳೆಯರು ಈ ಕ್ಷೇತ್ರಕ್ಕೆ ಕೈ ಹಾಕಿದಾಗ ಮಾತ್ರ ಜೈವಿಕ ವೈವಿಧ್ಯ ಉಳಿಯಲಿದೆ.

☀ಈ ದಿನದ ಪ್ರಚಲಿತ (KAS/IAS) ಪ್ರಶ್ನೆ:—   "ಅತ್ಯಾಧುನಿಕ ಜಿಪಿಎಸ್‌ ಆಧಾರಿತ ಪಥದರ್ಶಕ ವ್ಯವಸ್ಥೆಯಾದ ‘ಗಗನ್', ದೇಶದ ವಿಮಾನಯಾನ ಹಾಗು ರೈಲ್ವೆಯಾನಗಳಿಗೆ ವರವಾಗಿದ್ದು, ಪಥದರ್ಶಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಕಾರಕ ಹೆಜ್ಜೆಯಾಗಿದೆ. ಚರ್ಚಿಸಿ" -(The most Advanced GPS-based Navigation System 'GAGAN', is the new revolutionary step in providing navigational support to the country's Railways and aviation field. Discuss)

☀ಈ ದಿನದ ಪ್ರಚಲಿತ (KAS/IAS) ಪ್ರಶ್ನೆ:—
 "ಅತ್ಯಾಧುನಿಕ ಜಿಪಿಎಸ್‌ ಆಧಾರಿತ ಪಥದರ್ಶಕ ವ್ಯವಸ್ಥೆಯಾದ ‘ಗಗನ್', ದೇಶದ ವಿಮಾನಯಾನ ಹಾಗು ರೈಲ್ವೆಯಾನಗಳಿಗೆ ವರವಾಗಿದ್ದು, ಪಥದರ್ಶಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಕಾರಕ ಹೆಜ್ಜೆಯಾಗಿದೆ. ಚರ್ಚಿಸಿ"

-(The most Advanced GPS-based Navigation System 'GAGAN', is the new revolutionary step in providing navigational support to the country's Railways and aviation field. Discuss)
━━━━━━━━━━━━━━━━━━━━━━━━━━━━━━━━━━━━━━━━━━━━━

★ ವಿವರಣಾತ್ಮಕ ಸಾಮಾನ್ಯ ಅಧ್ಯಯನ.
(General Studies notes in Kannada Medium)

★ ಐಎಎಸ್ / ಕೆಎಎಸ್ ಪರೀಕ್ಷಾ ವಿಶೇಷಾಂಕ
(KAS/IAS Examination Special)


— ಇದು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ಅಭಿವೃದ್ಧಿಪಡಿಸಿರುವ ಗಗನ್ ಸ್ವದೇಶಿ ತಂತ್ರಜ್ಞಾನದ ನ್ಯಾವಿಗೇಶನಲ್ ವ್ಯವಸ್ಥೆಯಾಗಿದ್ದು, ಜಿಪಿಎಸ್ ತಂತ್ರಜ್ಞಾನ ಆಧಾರಿತ ಗಗನ್ ನ್ಯಾವಿಗೇಶನ್ ವ್ಯವಸ್ಥೆ ಇದಾಗಿದೆ. ಪ್ರಮುಖವಾಗಿ ದೇಶದ ರೈಲ್ವೆ ಇಲಾಖೆ ಮತ್ತು ವಿಮಾನ ಯಾನ ಗಮನದಲ್ಲಿಟ್ಟುಕೊಂಡು ನ್ಯಾವಿಗೇಶನ್ ಅನುಕೂಲವನ್ನು ಒದಗಿಸಿಕೊಡಲಿದೆ. ಈ ಮೂಲಕ 'ವಿಮಾನದ ಉಪಗ್ರಹ ಆಧಾರಿತ ಜಿಪಿಎಸ್ ವ್ಯವಸ್ಥೆ' ಹೊಂದಿರುವ ರಾಷ್ಟಗಳಾದ ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಜಪಾನ್‌ನ ಗಣ್ಯ ರಾಷ್ಟ್ರಗಳ ಸಾಲಿಗೆ ಭಾರತ ಸೇರಿದೆ.


☀ಮುಖ್ಯಾಂಶಗಳು :
•┈┈┈┈┈┈┈┈┈┈┈•

●.ಇಸ್ರೊ ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ವಿಮಾನದ ದಿಕ್ಸೂಚಿ ಅಥವಾ ಜಿಪಿಎಸ್ ವ್ಯವಸ್ಥೆಗೆ 'ಗಗನ್' (ಜಿಪಿಎಸ್ ಏಡೆಡ್ ಜಿಯೊ ಆಗ್ಮೆಂಟೆಡ್ ನ್ಯಾವಿಗೇಷನ್-ಜಿಎಜಿಎಎನ್) ಎಂದು ಹೆಸರಿಡಲಾಗಿದೆ.

●.ಸುಮಾರು 15 ವರ್ಷಗಳ ಅವಿರತ ಶ್ರಮದಿಂದ ಗಗನ್ ವ್ಯವಸ್ಥೆ ಭಾರತಕ್ಕೆ ಒಲಿದಿದ್ದು, ಇದಕ್ಕಾಗಿ ಸುಮಾರು 774 ಕೋಟಿ ರೂ. ವೆಚ್ಚ ಮಾಡಲಾಗಿದೆ.

●.ಗಗನ್ ವ್ಯವಸ್ಥೆ ಭೂಮಿ ಮೇಲಿನ 45 ಅಂತರಿಕ್ಷ ಮಾಹಿತಿ ನಿಲ್ದಾಣಗಳಿಗೆ ಏಕಕಾಲದಲ್ಲಿ ಸಂಪರ್ಕ ಹೊಂದುವ ಸಾಮರ್ಥ್ಯ ಹೊಂದಿದೆ.

●.ಯಾವುದೇ ಸಮಯದಲ್ಲಿ ಭಾರತದ ವಾಯುಮಂಡಲ ವ್ಯಾಪ್ತಿಯಲ್ಲಿ 10 ರಿಂದ 11 ಜಿಪಿಎಸ್ ಉಪಗ್ರಹಗಳು ತೇಲುತ್ತಿರುತ್ತವೆ. ಇವುಗಳಿಂದ ಭಾರತ ಪಡೆಯುತ್ತಿದ್ದ ಮಾಹಿತಿಗಳು ಉಪಯೋಗವಾಗುವಂಥವೇ; ಆದರೆ ಇವು ಯಾವಾಗಲೂ ನಿಖರವಿರುತ್ತಿರಲಿಲ್ಲ. ಈಗ ಗಗನ್ ವ್ಯವಸ್ಥೆಯು ವಿಮಾನಗಳಿಗೆ ಅತ್ಯಂತ ನಿಖರ ದಿಕ್ಕನ್ನು ತೋರಿಸಬಲ್ಲದು.

●.ವಾಯುಮಾರ್ಗ, ಸಂಚಾರ ದಟ್ಟಣೆ, ರನ್‌ವೇ ಬಗ್ಗೆ ಗಗನ್‌ ಸ್ಪಷ್ಟ ಮತ್ತು ಕರಾರುವಾಕ್ಕಾದ ಚಿತ್ರಣ ನೀಡಲಿದೆ.

●.ಕಳೆದ ಫೆಬ್ರುವರಿಯಿಂದ ಜಿಸ್ಯಾಟ್‌ 8 ಮತ್ತು ಜಿಸ್ಯಾಟ್ 10 ಉಪಗ್ರಹಗಳೊಂದಿಗೆ ಸಂಪರ್ಕ ಸಾಧಿಸಿರುವ ಗಗನ್ ವಿಮಾನಯಾನ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತರಲಿದೆ ಎಂದು ನಂಬಲಾಗಿದೆ.


☀ವಿಮಾನ ಸಂಚಾರಕ್ಕಾಗುವ ಪ್ರಯೋಜನಗಳು :
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

●.ದೇಶದ 50 ವಿಮಾನ ನಿಲ್ದಾಣಗಳು ಹೊಸ ವ್ಯವಸ್ಥೆಯ ಲಾಭ ಪಡೆಯಲಿದ್ದು, ಸುಗಮ ವಿಮಾನ ಸಂಚಾರ,  ಸುರಕ್ಷತೆ, ಇಂಧನ ಕ್ಷಮತೆ, ದರ ಕಡಿತಕ್ಕೆ ಈ ವ್ಯವಸ್ಥೆ ನೆರವಾಗಲಿದೆ.

●.ಸೇನೆ, ರಸ್ತೆ ಸಂಚಾರ, ಕೃಷಿ, ಪ್ರಕೃತಿ ವಿಕೋಪದಂಥ ಸಂದರ್ಭದಲ್ಲಿ ಗಗನ್‌ ನೆರವಿಗೆ ಬರಲಿದ್ದು,  ಪೈಲಟ್‌ ಸೇರಿದಂತೆ ವಿಮಾನದ ಸಿಬ್ಬಂದಿ ಹಾಗೂ ವಾಯು ಸಂಚಾರ ನಿಯಂತ್ರಣ ಕೇಂದ್ರದ ಸಿಬ್ಬಂದಿಯ ಕಾರ್ಯಭಾರ ಮತ್ತು ಒತ್ತಡವನ್ನು ಅರ್ಧದಷ್ಟು ಕಡಿಮೆ ಮಾಡಲಿದೆ.

●.ದೇಶೀಯ ಪಥನಿರ್ದೇಶಕ ವ್ಯವಸ್ಥೆಗಾಗಿ ಇಸ್ರೊ ಭೂ ಕಕ್ಷೆಗೆ ಸೇರಿಸಿರುವ ಮೂರು ಜಿಪಿಎಸ್ ಉಪಗ್ರಹಗಳು, ಭೂಮಿಯ ಮೇಲಿನ ಸಂದೇಶವಾಹಕ ನಿಲ್ದಾಣಗಳು ನೀಡುವ ಮಾಹಿತಿ ಆಧರಿಸಿ ಗಗನ್ ವ್ಯವಸ್ಥೆ ವಿಮಾನಗಳಿಗೆ ಮಾರ್ಗದರ್ಶನ ಮಾಡಲಿದೆ.

●.ಐರೋಪ್ಯ ಒಕ್ಕೂಟ ಮತ್ತು ಜಪಾನ್ ಹೊಂದಿರುವ ವಿಮಾನ ದಿಕ್ಸೂಚಿ ವ್ಯವಸ್ಥೆಯ ವ್ಯಾಪ್ತಿ ಮೀರಿದ ಪ್ರದೇಶಗಳಲ್ಲಿ ಗಗನ್ ಕೆಲಸ ಮಾಡಲಿದ್ದು, ಈ ಎರಡು ವ್ಯವಸ್ಥೆಗಳ ಕಂದರವನ್ನು ತುಂಬಲಿದೆ.

●.ದೇಶಕ್ಕೆ ವರವಾದ ವ್ಯವಸ್ಥೆ ಗಗನ್ ವ್ಯವಸ್ಥೆ ವಿಮಾನಗಳಿಗೆ ನಿಖರ ಮಾರ್ಗದರ್ಶನ ಮಾಡುವುದರಿಂದ ಅನಗತ್ಯ ದಾರಿ ಕ್ರಮಿಸುವುದು ತಪ್ಪಲಿದೆ.

●.ಗುಂಡು ಹೊಡೆದಂತೆ ನಿಶ್ಚಿತ ದಾರಿಯಲ್ಲಿ ಹಾರಾಟ ನಡೆಸಿ ಗುರಿ ಮುಟ್ಟಲಿವೆ.ಇದರಿಂದ ಪ್ರಯಾಣದ ಅವಧಿ ಕಡಿಮೆಯಾಗುವುದಷ್ಟೇ ಅಲ್ಲದೆ, ಇಂಧನ ವೆಚ್ಚವೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ.

●.ಉಪಗ್ರಹ ಆಧಾರಿತ ದಿಕ್ಸೂಚಿ ವ್ಯವಸ್ಥೆ (ಎಸ್‌ಬಿಎಎಸ್) ಅಳವಡಿಸಿರುವ ವಿಮಾನಗಳಲ್ಲಿ ಮಾತ್ರ ಗಗನ್ ಕೆಲಸ ಮಾಡಲಿದೆ. ಈಗ ಇರುವ ವಿಮಾನಗಳಲ್ಲಿ ಎಸ್‌ಬಿಎಎಸ್ ಸಾಧನಾ ಅಳವಡಿಕೆಯಾಗಿಲ್ಲ.

●.ಇವು ದುಬಾರಿಯಾಗಿರುವುದರಿಂದ ಹಾಗೂ ಈಗಾಗಲೇ ಭಾರತೀಯ ವಿಮಾನಯಾನ ಕ್ಷೇತ್ರ ಹಣದ ಮುಗ್ಗಟ್ಟಿನಿಂದ ನರಳುತ್ತಿರುವುದರಿಂದ ಎಸ್‌ಬಿಎಎಸ್ ಉಪಕರಣ ಅಳವಡಿಕೆ ಕಷ್ಟ ಸಾಧ್ಯ. ಹೀಗಾಗಿಯೇ, ಗಗನ್ ತಂತ್ರಜ್ಞಾನ ಬಳಸಿಕೊಳ್ಳುವುದನ್ನು ಎಲ್ಲ ವಿಮಾನ ಸಂಸ್ಥೆಗಳಿಗೆ ಕಡ್ಡಾಯ ಮಾಡುವುದಿಲ್ಲ; ಆದರೆ, ಹೊಸದಾಗಿ ಖರೀದಿಯಾಗುವ ವಿಮಾನಗಳಿಗೆ ಕಡ್ಡಾಯವಾಗಿ ಈ ಸಾಧನಾ ಅಳವಡಿಕೆಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯ ನಿರ್ಧರಿಸಿದೆ.


☀ನಿಖರ ದಿಕ್ಸೂಚಿ ಹೇಗೆ?
•┈┈┈┈┈┈┈┈┈┈┈┈┈•

●.ಈಗಲೂ ಎಲ್ಲ ವಿಮಾನಗಳು ಜಿಪಿಎಸ್ ಉಪಗ್ರಹಗಳಿಂದ ಮಾಹಿತಿ ಪಡೆದೇ ಹಾರಾಟ ನಡೆಸುತ್ತವೆ.

●.ಭಾರತವೂ ಸೇರಿ ಸಾರ್ಕ್ ದೇಶಗಳ ಆಕಾಶದಲ್ಲಿ ಮೂರು ಜಿಪಿಎಸ್ ಉಪಗ್ರಹಗಳು ಪ್ರತಿ ವಿಮಾನದ ಜಾಡು ಹಿಡಿಯುತ್ತವೆ. ಆದರೆ, ಜಿಪಿಎಸ್ ಉಪಗ್ರಹಗಳು ನೀಡುವ ವಿಮಾನಗಳ ಹಾರಾಟ ಬಿಂದು 50 ಮೀಟರ್ ಆಚೀಚೆ ಇರುತ್ತದೆ. ಈ ಅಂತರವನ್ನು ಗಗನ್ ವ್ಯವಸ್ಥೆ ಬರೀ 3.5 ಮೀಟರ್‌ಗೆ ಇಳಿಸುತ್ತದೆ. ಹೀಗಾಗಿ ಪೈಲಟ್‌ಗಳಿಗೆ ನಿಖರವಾಗಿ ಏರ್ ಕಂಟ್ರೋಲರ್‌ಗಳು ಮಾರ್ಗದರ್ಶನ ಮಾಡಲು ಅನುವಾಗಲಿದೆ.

●.ವಿಶ್ವಕ್ಕೆ ಗಗನ ವಿಸ್ಮಯ ಗಗನ್ ವ್ಯವಸ್ಥೆಯು ಬಂಗಾಳ ಕೊಲ್ಲಿ, ಆಗ್ನೇಯ ಏಷ್ಯಾ, ಹಿಂದೂ ಮಹಾಸಾಗರ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಪ್ರಾಂತ್ಯಗಳಲ್ಲಿ ಕೆಲಸ ಮಾಡಲಿದೆ. ಹೀಗಾಗಿ ದಕ್ಷಿಣ ಕೊರಿಯಾ, ಜಪಾನ್ ಮತ್ತು ಆಸಿಯಾನ್ ರಾಷ್ಟ್ರಗಳು ಗಗನ್ ವ್ಯವಸ್ಥೆಯತ್ತ ಕಣ್ಣರಳಿಸಿ ನೋಡುತ್ತಿವೆ.

●.ಗಗನ್ ವ್ಯವಸ್ಥೆಯು ಭಾರತ, ಬಂಗಾಳ ಕೊಲ್ಲಿ, ಆಗ್ನೇಯ ಏಷ್ಯಾ ಭಾಗ, ಮಧ್ಯ ಪ್ರಾಚ್ಯ ಪ್ರದೇಶ ಮತ್ತು ಆಫ್ರಿಕಾದ ಸ್ವಲ್ಪ ಭಾಗಗಳನ್ನು ಒಳಗೊಳ್ಳಲಿದೆ.


☀ರೈಲ್ವೆಗಾಗುವ ಪ್ರಯೋಜನಗಳು :
•┈┈┈┈┈┈┈┈┈┈┈┈┈┈┈┈┈┈•

●.ಉಪಗ್ರಹಗಳಿಂದ ದೊರೆಯುವ ಮಾಹಿತಿಯನ್ನು ಇಸ್ರೊ ತನ್ನ ಬಾಹ್ಯಾಕಾಶ ತಂತ್ರಜ್ಞಾನ ಸಾಧನಗಳ ನೆರವಿನಿಂದ ರೈಲ್ವೆಗೆ ನೀಡಲಿದೆ. ಇದರಿಂದ ರೈಲ್ವೆಗೆ ಗಗನ್‌ನಿಂದ ಹಲವಾರು ಪ್ರಯೋಜನಗಳು ಇವೆ.

●.ಕಾವಲು ರಹಿತ ಲೆವೆಲ್ ಕ್ರಾಸಿಂಗ್ ಇರುವ ಸ್ಥಳಗಳ ಬಗ್ಗೆ ಮುಂಚಿತವಾಗಿ ರೈಲಿಗೆ ಗಗನ್ ಮಾಹಿತಿ ಕೊಡಬಲ್ಲುದು. ಇಂತಹ ಕ್ರಾಸಿಂಗ್‌ನಲ್ಲಿ ಎಚ್ಚರಿಕೆಯ ಸಿಗ್ನಲ್ ತೋರಿಸುತ್ತದೆ. ಕೂಡಲೇ ರೈಲ್ವೆಯ ಹಾರ್ನ್ ಮೊಳಗುತ್ತದೆ. ಇದರಿಂದ ಸಂಭವನೀಯ ಅವಘಡಗಳನ್ನು ತಪ್ಪಿಸಬಹುದು.

●.ಕೆಲವು ಪ್ರದೇಶಗಳಲ್ಲಿ ರೈಲ್ವೆ ಹಳಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಗಗನ್ ಮೂಲಕ ಅಂತಹ ಹಳಿಗಳ ಬಗ್ಗೆ ಮಾಹಿತಿ ಪಡೆಯಬಹುದು.

●.ಸುರಂಗ ಮಾರ್ಗಗಳಲ್ಲಿ ಹೋಗುವಾಗ ಹೆಚ್ಚು ಸದೃಢವಾಗಿರುವ ಹಳಿಗಳನ್ನು ಗುರುತಿಸಬಹುದು.

●.‘ಗಗನ್‌ ವ್ಯವಸ್ಥೆಯು ಅಮೆರಿಕದ ಜಿಪಿಎಸ್‌ ಅನ್ನು ಆಧಾರವಾಗಿಟ್ಟು ಕೊಂಡು ಇಸ್ರೊ ಅಭಿವೃದ್ಧಿಪಡಿಸಿರುವ ಸ್ಥಾನಿಕ ಸಂಚಾರ ಮಾರ್ಗದರ್ಶಿ ಸಾಧನ.

●.‘ಗುಡ್ಡಗಾಡು ಪ್ರದೇಶಗಳಲ್ಲಿ ರೈಲ್ವೆ ಹಳಿಯನ್ನು ಸರಿಯಾಗಿ ಜೋಡಿಸುವ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಈ ವ್ಯವಸ್ಥೆ ನೀಡುತ್ತದೆ.

●.ಸುರಂಗದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಹೆಚ್ಚು ಸ್ಥಿರವಾಗಿರುವ ಹಳಿ ಯಾವುದು ಎನ್ನುವುದರ ಬಗ್ಗೆಯೂ ಇದು ಮಾಹಿತಿ ನೀಡು ತ್ತದೆ