"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 30 December 2014

★ ಸಾಮಾನ್ಯ ಜ್ಞಾನ (ಭಾಗ - 11)  General Knowledge (Part-11):

★ ಸಾಮಾನ್ಯ ಜ್ಞಾನ (ಭಾಗ - 11)
General Knowledge (Part-11):

━━━━━━━━━━━━━━━━━━━━━━━━━━━━━━━━━━━━━━━━━━━━━

451) ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೊಂದಿರುವ ಸದಸ್ಯ ರಾಷ್ಟ್ರಗಳು?
—187


452) IAEA ವಿಸ್ತರಿಸಿ ?
— International Automic Energy Agency.


453) 1854-55ರಲ್ಲಿ ಲೋಕೋಪಯೋಗಿ ಇಲಾಖೆಯನ್ನು ಪ್ರಾರಂಭಿಸಿದ ಅಂದಿನ ಗವರ್ನರ್ ಜನರಲ್ ಯಾರು?
— ಲಾರ್ಡ್‌ಡಾಲ್ ಹೌಸಿ


454) ಮೂರು ಸಲ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಕೀರ್ತಿ ಯಾರಿಗೆ ಸಲ್ಲುತ್ತದೆ?
— ಎಚ್. ವಿ. ನಂಜುಂಡಯ್ಯ


455) ಭಾರತದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಯಾರು?
— ರಾಜೀವ್ ಗಾಂಧಿ


456) ಭಾರತದ ಹೊರಗೆ ಕಾಲಿಟ್ಟ ಪ್ರಥಮ ದೇಶೀಯ ದೊರೆ:
— ಕೊಡಗಿನ ದೊರೆ ಚಿಕ್ಕ ವೀರರಾಜ.


457) ಮಾನವನಲ್ಲಿರುವ ವರ್ಣತಂತುಗಳ ಸಂಖ್ಯೆ ಎಷ್ಟು?
—46


458) ಸಸ್ಯ ಪಳಿಯುಳಿಕೆಗಳನ್ನು ಸಂಗ್ರಹಿಸುವ ವಿಧಾನ ಯಾವುದು?
— ಹರ್ಬೇರಿಯಂ.


459) ಇತ್ತೀಚೆಗೆ 'ಜೈ ಸಮೈಕ್ಯ ಆಂಧ್ರ'ಎಂಬ ನೂತನ ರಾಜಕೀಯ ಪಕ್ಷವನ್ನು ಆರಂಭಿಸಿದವರು ಯಾರು?
— ಕಿರಣ ಕುಮಾರ ರೆಡ್ಡಿ


460) ನ್ಯಾಷನಲ್ ಕೆಮಿಕಲ್ ಲ್ಯಾಬರೇಟರಿ ಭಾರತದಲ್ಲಿ ಎಲ್ಲಿದೆ?
—ಪುಣೆ


461) ವಿಶ್ವ ಉದ್ದೀಪನ ನಿಗ್ರಹ ಘಟಕ (ವಾಡಾ:World Anli Doping Agenecy) ಅಸ್ತಿತ್ವಕ್ಕೆ ಬಂದದ್ದು?
—1999, ನವೆಂಬರ್ 10


462) 'ಅಂತರರಾಷ್ಟ್ರೀಯ ವ್ಯಾಪರವನ್ನು ನೋಡಿಕೊಳ್ಳುವ ನಾಯಿ' ಎಂದು ಯಾವ ಸಂಸ್ಥೆಗೆ ಕರೆಯುತ್ತಾರೆ?
— WTO.


463) ಪಾಕ್ ಬೇಹುಗಾರಿಕ ಸಂಸ್ಥೆ ಯಾವುದು?
— ಐ .ಎಸ್.ಐ.


464) ಮೆಣಸಿನಕಾಯಿಯ ಖಾರಕ್ಕೆ ಕಾರಣವಾಗಿರುವ ರಾಸಾಯನಿಕ ಯಾವುದು?
— ಕ್ಯಾಪ್ಸಿಸಿನ್.


465) 1950 ರ ಜನವರಿ 24 ರಂದು ನಡೆದ ಶಾಸನ ಸಭೆಯಲ್ಲಿ ಜನ ಗಣ ಮನ ಗೀತೆಯನ್ನು ರಾಷ್ಟ್ರಗೀತೆಯಾಗಿ ಅಧಿಕೃತವಾಗಿ ಘೋಷಿಸಲಾಯಿತು.


466) BRTF ಅಂದರೆ ಏನು?
— ಗಡಿ ರಸ್ತೆ ಕಾರ್ಯ ಪಡೆ.(Border Road T Force)


467) 'ದೇಹದ ರಸಾಯನಿಕ ಕಾರ್ಖಾನೆ' ಎಂದು ಕರೆಯಲ್ಪಡುವ ಅಂಗ ಯಾವುದು?
— ಪಿತ್ತಕೋಶ.


468) ಅಶೋಕನು ಯಾವ ಬೌದ್ಧ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ತೆರಿಗೆಯನ್ನು ಕಡಿಮೆ ಮಾಡಿಸಿದನು?
— ಲುಂಬಿನಿ


469) ಭಾರತೀಯ ರೂಪಾಯಿ ಚಿನ್ಹೆಯ ವಿನ್ಯಾಸಕಾರ ಎಂದು ಯಾರನ್ನು ಕರೆಯುತ್ತಾರೆ?
— ಶ್ರೀ. ಡಿ.ಉದಯ ಕುಮಾರ್.(ಬಾಂಬೆ ಐ.ಟಿ.ಐ. ಯ ಸ್ನಾತಕೋತ್ತರ ಪದವೀಧರ)


470) ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇಂಗ್ಲೇಡಿನ ಪ್ರಧಾನಿಯಾಗಿದ್ದವರು ಯಾರು?
—ಕ್ಲೆಮೆಂಟ್ ಅಟ್ಲಿ

    
471) ಮೌರ್ಯ ಸಾಮ್ರಾಜ್ಯದಲ್ಲಿ ಚಲಾವಣೆಯಲ್ಲಿದ್ದ ಹಣದ ಹೆಸರೇನು?
—ಪಣ


472) ಡಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಸ್ಥಾಪಿಸಿದವರು ಯಾರು?
— ರಾಸ ಬಿಹಾರಿ ಬೋಸ್


473) ಪೋರ್ಚುಗೀಸರು ಭಾರತದ ಪಶ್ಚಿಮ ಕರಾವಳಿಗೆ ಕಾಲಿಟ್ಟಿದ್ದು ಯಾವಾಗ?
—1510 ರಲ್ಲಿ .


474) ಇತ್ತೀಚೆಗೆ ನಿಗೂಢವಾಗಿ ನಾಪತ್ತೆಯಾಗಿದ್ದ ಮಲೆಷ್ಯಾದ ಪ್ರಯಾಣಿಕರ ವಿಮಾನ 'MH370' ಪತನಗೊಂಡ ಸ್ಥಳ ಯಾವುದು?
— ಹಿಂದೂ ಮಹಾಸಾಗರ.


475) ಪ್ರಸಿದ್ಧವಾದ ಬೇಲೂರು – ಹಳೇಬೀಡು ದೇವಾಲಯಗಳ ಸ್ಥಾಪನೆಗೆ ಕಾರಣಗಳಾದ ಮಹಿಳೆ ಯಾರು?
— ಶಾಂತಲೆ.


476) ನಮ್ಮ ರಾಷ್ಟ್ರಗೀತೆಯಲ್ಲಿ ಎಷ್ಟು ನದಿಗಳನ್ನು ಹೆಸರಿಸಲಾಗಿದೆ?
— 2.


477) ಗೋವಾ ವಿಮೋಚನಾ ಚಳವಳಿಯ ಪಿತಾಮಹಾ ಎಂದು ಯಾರನ್ನು ಕರೆಯುತ್ತಾರೆ?
— ಟ್ರಿಸ್ಟಾವೋ ಡಿಬ್ರೆಗಾಂಜಾ ಕುನ್ಹಾ


478) ಭಾರತದ ಸಂವಿಧಾನದ ‘ಸಮವರ್ತಿ ಪಟ್ಟಿ’ಗೆ ಮೂಲ ಆಕರವಾದ ಸಂವಿಧಾನ ಯಾವ ದೇಶದ್ದು?
— ಆಸ್ಟ್ರೇಲಿಯ


479) ಭಾರತವು 100 ಕೋಟಿ ಜನ ಸಂಖ್ಯೆಯನ್ನು ತಲುಪಿದ ದಿನ ಯಾವುದು?
— ಮೇ 11, 2000


480) ರಾಜ್ಯ ಲೋಕಸೇವಾ ಆಯೋಗವು ತನ್ನ ವರದಿಯನ್ನು ಯಾರಿಗೆ ಸಲ್ಲಿಸುತ್ತದೆ?
— ರಾಜ್ಯಪಾಲರಿಗೆ.


481) ಶ್ರೀಲಂಕಾಗೆ ಬೌಧ ಧರ್ಮಪ್ರಚಾರಕ್ಕಾಗಿ ತೆರಳಿದ ಅಶೋಕನ ಮಕ್ಕಳ ಹೆಸರೇನು?
— ಮಹೇಂದ್ರ & ಸಂಗಮಿತ್ತ್ರ


482) ಭಾರತದ ಸಂವಿಧಾನದ ಇತಿಹಾಸದಲ್ಲಿ ಎರಡು ಬಾರಿ ಹಂಗಾಮಿಯಾಗಿ ಪ್ರಧಾನಿ ಹುದ್ದೆ ಸ್ವೀಕರಿಸಿದವರು ಯಾರು?
— ಗುಲ್ಜರಿಲಾಲ ನಂದಾ


483) ಅಂಡಮಾನ್ ದ್ವೀಪಗಳಲ್ಲಿರುವ ಅತಿ ಎತ್ತರವಾದ ಶಿಖರ ಯಾವುದು?
— ಸ್ಯಾಡಲ್ ಶಿಖರ


484) ಡೆಕೊ ನದಿ ಯಾವ ರಾಜ್ಯದಲ್ಲಿ ಹರಿಯುತ್ತದೆ?
— ಅಸ್ಸಾಂ ನಲ್ಲಿ.


485) ನವ ಶಿಲಾಯುಗ ಮಾನವರ ಮೊದಲ ಸಾಕು ಪ್ರಾಣಿ ಯಾವುದು?
— ನಾಯಿ.


486) ’ಆಸ್ಕರ್’ ಪ್ರಶಸ್ತಿಗಾಗಿ ಸ್ಪರ್ಧಿಸಿದ ಮೊದಲ ಭಾರತೀಯ ಚಲನಚಿತ್ರ ಯಾವುದು?
— ಮದರ್ ಇಂಡಿಯಾ


487) ಐಹೊಳೆಯನ್ನು ‘ಭಾರತದ ದೇಗುಲಗಳ ತೊಟ್ಟಿಲು’ ಎಂದು ಬಣ್ಣಿಸಿದವರು
— ಡಾ. ಪರ್ಸಿಬ್ರಾನ್


488) ಭಾರತದ ರಾಷ್ಟ್ರ ಧ್ವಜವನ್ನು ರೂಪಿಸಿದ ಮಹಿಳೆ ಯಾರು?
—ಮೇಡಮ್ ರೂಸ್ತುಂ ಕಾಯಾ


489) ಪಂಚಲೋಹಗಳು ಯಾವುವು?
—ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ತವರ


490) ಸೌರಾಸ್ತ್ರದಲ್ಲಿ "ಸುದರ್ಶನ" ಜಲಾಶಯ ನಿರ್ಮಿಸಿದ ದೊರೆ ಯಾರು?
— ಪುಶ್ಯಗುಪ್ತ


491) ವಿಶ್ವದ ಗಡಿಯಾರಗಳ ಸಮಯವನ್ನು ಯಾವ ಖಗೋಳ ವೀಕ್ಷಣಾಲಯದ ಪ್ರಕಾರ ಹೊಂದಿಸಲಾಗಿದೆ?
—ರಾಯಲ್ ಗ್ರೀನ್‌ವಿಚ್ ವೀಕ್ಷಣಾಲಯ (UK)


492) ಬೌದ್ಧ ಧರ್ಮದ 3 ನೇ ಪಂಥ ಯಾವುದು?
— ವಜ್ರಾಯನ ಪಂಥ


493) IAEA ದ ಕೇಂದ್ರ ಕಚೇರಿ ಎಲ್ಲಿದೆ ?
— ವಿಯೆನ್ನಾ


494) ಕರ್ನಾಟಕ ರಾಜ್ಯವು ಮೊದಲ ಬಾರಿಗೆ ಮಾಹಿತಿ ತಂತ್ರಜ್ಞಾನ ನೀತಿಯನ್ನು ರೂಪಿಸಿದ್ದು ಯಾವ ವರ್ಷದಲ್ಲಿ?
— 1997


495) ದೆಹಲಿ ಸುಲ್ತಾನರ ಕಾಲದಲ್ಲಿ ಲಾಡ್ ಭಕ್ಷಯೆಂದು ಹೆಸರಾಗಿದ್ದರು ಯಾರು?
— ಕುತುಬ್ ಉದ್ದಿನ್ ಐಬಕ್


496) ಜನ ಗಣ ಮನ ಕವಿತೆಯು ಮೊಟ್ಟ ಮೊದಲ ಬಾರಿಗೆ ಪ್ರಕಟಗೊಂಡಿದ್ದ ಪತ್ರಿಕೆ ಯಾವುದು?
— ಟ್ಯಾಗೋರ್ ಅವರು ಸಂಪಾದಕರಾಗಿದ್ದ ಬ್ರಹ್ಮ ಸಮಾಜ ಪತ್ರಿಕೆ , ತತ್ವ ಭೋಧ ಪತ್ರಿಕೆ .


497) ಶಿತ ಲಾಖ್ಯ ನದಿ ಯಾವ ದೇಶದಲ್ಲಿ ಹರಿಯುತ್ತದೆ?
- ಬಾಂಗ್ಲ ದೇಶದಲ್ಲಿ.


498) ಬೋಧಗಯಾ ಮ್ಯೂಸಿಯಂ ಯಾವ ರಾಜ್ಯದಲ್ಲಿದೆ?
—ಬಿಹಾರ.


499) 'ವಿಶ್ವ ಸಂಸ್ಕೃತಿ ದಿನ' ಯಾವಾಗ ಆಚರಿಸಲಾಗುತ್ತದೆ?
— ಏಪ್ರಿಲ್ 18.


500) ಭಾರತದ ನೌಕಾದಳದ ಹಡಗುಗಳು ಎಲ್ಲಿ ತಯಾರಾಗುತ್ತವೆ?
— ಕೊಚ್ಚಿನ್.

To be continued....

☀ ಜನವರಿ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀ (Important Current Affairs of January 2014)

☀ ಜನವರಿ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀
(Important Current Affairs of January 2014)

★ಜನವರಿ 2014
(January 2014)


👉。ಭಾರತ ಸರ್ಕಾರ ಪ್ರತಿ ವರ್ಷ ಜನವರಿಯಲ್ಲಿ (7ರಿಂದ 9ರವರೆಗೆ) ‘ಪ್ರವಾಸಿ ಭಾರತೀಯ ದಿವಸ’ವನ್ನು ಆಚರಿಸುತ್ತದೆ. ಇದನ್ನು ‘ಅನಿವಾಸಿ ಭಾರತೀಯರ ದಿವಸ’ ಎಂದು ಸಹ ಕರೆಯಲಾಗುತ್ತದೆ. ವಿಶ್ವದ ನಾನಾ ಭಾಗಗಳಲ್ಲಿ ನೆಲೆಸಿರುವ ಭಾರತೀಯರು ಭಾಗವಹಿಸುತ್ತಾರೆ. ದೇಶದ ಸಂಸ್ಕೃತಿ, ಬಂಡವಾಳ ಹೂಡಿಕೆ, ಶಿಕ್ಷಣ, ಪ್ರವಾಸೋಧ್ಯಮ ಕುರಿತಂತೆ ಈ ಸಮಾವೇಶದಲ್ಲಿ ಚರ್ಚಿಸಲಾಗುವುದು. 2003ರಲ್ಲಿ ಮೊದಲ ಪ್ರವಾಸಿ ಭಾರತೀಯ ದಿವಸವನ್ನು ಆಚರಿಸಲಾಯಿತು.


👉。80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2014ರ ಜನವರಿ 7, 8 ಮತ್ತು 9ರಂದು ಮಡಿಕೇರಿಯಲ್ಲಿ ನಡೆಯಿತು. ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ನಾ.ಡಿಸೋಜ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇದು ಮಡಿಕೇರಿಯಲ್ಲಿ ನಡೆದ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನವಾಗಿದೆ.


👉。ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್‌ ಎಂಜಿನ್‌ ಅಭಿವೃದ್ಧಿಪಡಿಸುವ ಮೂಲಕ ಭಾರತವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೊಸ ದಾಖಲೆ ಬರೆದಿದೆ. ಈ ರಾಕೆಟ್‌ ಮೂಲಕ ಜನವರಿ 5ರಂದು ಜಿಎಸ್‌ಎಲ್‌ವಿ–ಡಿ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಕ್ರಯೋಜಿನಿಕ್‌ ತಂತ್ರಜ್ಞಾನದಲ್ಲಿ ತಂಪಾಗಿರುವ ದ್ರವ ಇಂಧನ (cold liquid fuel) ಬಳಸಲಾಗುತ್ತದೆ. ಇದರಿಂದ ಭಾರೀ ತೂಕದ ಉಪಕರಣಗಳನ್ನು ಬ್ಯಾಹ್ಯಾಕಾಶಕ್ಕೆ ಸುಲಭವಾಗಿ ರವಾನಿಸಬಹುದು.


👉。ಭಾರತದಲ್ಲಿ ಬಾರೀ ಸಂಚಲನ ಉಂಟುಮಾಡಿದ್ದ ಜನ ಲೋಕಪಾಲ ಮಸೂದೆಗೆ ಜನವರಿ 1ರಂದು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅಂಕಿತ ಹಾಕಿದರು. ಜನ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರು ಹೋರಾಟ ನಡೆಸಿದ್ದರು. 1968ರಿಂದ 2001ರ ನಡುವೆ ವಿವಿಧ ಸರ್ಕಾರಗಳು ಲೋಕಪಾಲ ಮಸೂದೆಯನ್ನು 8 ಸಲ ಮಂಡನೆ ಮಾಡಿದ್ದವು ಆದರೆ ಈ ಮಸೂದೆ ಅಂಗೀಕಾರ ಪಡೆದಿರಲಿಲ್ಲ.


👉。ಜೈಪುರ ಸಾಹಿತ್ಯ ಉತ್ಸವ ಜನವರಿ 17 ರಿಂದ 21ರವರೆಗೆ ಜೈಪುರದಲ್ಲಿ ನಡೆಯಿತು. ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ಈ ಸಾಹಿತ್ಯ ಉತ್ಸವವನ್ನು ಉದ್ಘಾಟಿಸಿದರು. ಈ ಉತ್ಸವದಲ್ಲಿ ಸೈರಸ್‌ ಮಿಸ್ತ್ರಿ ಅವರು ಬರೆದ ‘ಕ್ರಾನಿಕಲ್‌ ಆಫ್‌ ಎ ಕಾರ್ಫ್‌ ಬೇರರ್‌ (ಅನುವಾದಿತ) ಕೃತಿ 30 ಲಕ್ಷ ರೂಪಾಯಿ ಬಹುಮಾನ ಪಡೆಯಿತು.


👉。ಮಿ.ಸೆಕ್ಯೂರಿಟಿ ಎಂದೇ ಗುರುತಿಸಿಕೊಂಡಿದ್ದ ಇಸ್ರೇಲ್‌ನ ಮಾಜಿ ಪ್ರಧಾನಿ ಏರಿಯಲ್‌ ಶೆರೂನ್‌ (82)  ಜನವರಿ 11ರಂದು ನಿಧನರಾದರು. ಶೆರೂನ್‌ ಲೆಬನಾನ್‌ ಮತ್ತು ಇಸ್ರೇಲ್‌ ದೇಶಗಳ ಮೇಲೆ ದಾಳಿ ಮಾಡಿದ್ದರು. ಅವರು ಎಂಟು ತಿಂಗಳಿನಿಂದ ಕೋಮಾದಲ್ಲಿದ್ದರು.


👉。ಜನವರಿ 7ರಂದು ಭಾರತದ ಅತಿ ದೊಡ್ಡ ವಿಮಾನ ವಾಹಕ ನೌಕೆ ‘ಐಎನ್‌ಎಸ್‌ ವಿಕ್ರಮಾದಿತ್ಯ’ ಕಾರವಾರ ಬಂದರು ನೆಲೆಗೆ ಬಂದಿತು. ರಷ್ಯಾ ನಿರ್ಮಾಣದ ಈ ನೌಕೆಯನ್ನು ಭಾರತ ಸರ್ಕಾರ 14,260 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಸ್ವದೇಶಿ ನಿರ್ಮಿತ ಇಂತಹದ್ದೇ ನೌಕೆ ಕೊಚ್ಚಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು ಅದು 2018ರ ವೇಳೆಗೆ ನೌಕಪಡೆಗೆ ಸೇರಲಿದೆ.


👉。ರಾಜ್ಯದ ಖ್ಯಾತ ಪಕ್ಷಿ ತಜ್ಞ ಮತ್ತು ಪರಿಸರ ಹೋರಾಟಗಾರ ಡಾ.ಜೆಮ್ಸ್‌ ಚೆನ್ನಪ್ಪ ಉತ್ತಂಗಿ (98) ಅವರು ಜನವರಿ *ರಂದು ನಿಧನರಾದರು. ಇವರು ಪಕ್ಷಿಗಳು ಮತ್ತು ಪರಿಸರ ಕುರಿತಂತೆ ಹಲವಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಉತ್ತರ ಕರ್ನಾಟಕ ಮತ್ತು ‘ಉತ್ತರ ಗುಜರಾತಿನ ಕಪ್ಪೆಗಳು’, ‘ಅವಿಭಜಿತ ಧಾರವಾಡ ಜಿಲ್ಲೆಯಲ್ಲಿನ ಪಕ್ಷಿಗಳು’ ಪ್ರಮುಖ ಸಂಶೋಧನಾ ಪ್ರಬಂಧಗಳು. ಇವರು ಸಾಹಿತಿ ಉತ್ತಂಗಿ ಚೆನ್ನಪ್ಪ ಅವರ ಮಗ.


👉。ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗಳನ್ನು 127 ಸಾಧಕರಿಗೆ ನೀಡಲಾಗಿದೆ. ಪದ್ಮ ಪ್ರಶಸ್ತಿಗಳಲ್ಲಿ 101 ಪದ್ಮ ಪ್ರಶಸ್ತಿ, 24  ಪದ್ಮಭೂಷಣ ಮತ್ತು ಎರಡು ಪದ್ಮವಿಭೂಷಣ ಪ್ರಶಸ್ತಿಗಳು ಸೇರಿವೆ. ಪ್ರಸೂತಿ ತಜ್ಞೆ ಕಾಮಿನಿ ರಾವ್‌, ಯೋಗ ಗುರು ಬಿ.ಕೆ.ಎಸ್‌ ಅಯ್ಯಂಗಾರ್‌ ಅವರು ಸೇರಿದಂತೆ ರಾಜ್ಯದ ಏಳು ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ.


👉。ಜನವರಿಯಲ್ಲಿ ನಡೆದ ‘2014ರ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯಲ್ಲಿ ಚೀನಾದ ಲೀ ನಾ (ಮಹಿಳೆಯರ), ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕ್‌ (ಪುರುಷರ) ಸಿಂಗಲ್ಸ್‌ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು. ಲೀ ನಾ 16.69 ಕೋಟಿ ರೂಪಾಯಿ ಮತ್ತು ವಾವ್ರಿಂಕಾ 14.57 ಕೋಟಿ ರೂಪಾಯಿ ಬಹುಮಾನ ಗೆದ್ದರು. ಇದೇ ಟೂರ್ನಿಯ ಮಿಶ್ರ ಡಬಲ್ಸ್‌ ಫೈನಲ್‌ ಪಂದ್ಯದಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ರುಮೇನಿಯಾದ ಹೊರಿಯ ಟಿಕಾವ್‌ ಅವರು ಪರಾಭವಗೊಂಡರು.


👉。ಜಪಾನ್‌ ಪ್ರಧಾನಿ ಶಿಂಜೋ ಅಬೆ ಅವರು ಭಾರತದ 65ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಮುಖ ಎಂಟು ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿದವು. 2013ರ ಡಿಸೆಂಬರ್‌ ತಿಂಗಳಲ್ಲಿ ಜಪಾನ್‌ ರಾಜ ಅಕಿ ಹಿಟೊ ಅವರು ಭಾರತಕ್ಕೆ ಭೇಟಿ ನೀಡಿದ್ದರು.


👉。ಯಾವುದೇ ಕಾರಣಗಳಿಲ್ಲದೆ ರಾಷ್ಟ್ರಪತಿ ಕ್ಷಮಾದಾನ ಅರ್ಜಿಯನ್ನು ಇತ್ಯರ್ಥ ಪಡಿಸಲು ವಿಳಂಬ ಮಾಡಿದರೆ ಅಂತಹ ಅಪರಾಧಿಗಳ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಬಹುದು ಎಂದು ಸುಪ್ರೀಂ ಕೋರ್ಟ್‌ ಜನವರಿ 21ರಂದು ಮಹತ್ವದ ತೀರ್ಪು ಪ್ರಕಟಿಸಿತು.


👉。ರಾಜ್ಯ ಸರ್ಕಾರ ಜನವರಿ 22ರಂದು ‘ಕನ್ನಡ ಯೂನಿಕೋಡ್‌’ ಅನ್ನು ಬಿಡುಗಡೆ ಮಾಡಿತು. ಇದನ್ನು ಹಾಸನದ ಮಾರುತಿ ತಂತ್ರಾಂಶ ಸಂಸ್ಥೆ ಅಭಿವೃದ್ಧಿಪಡಿಸಿದೆ. ಇದರಲ್ಲಿ 12 ಬಗೆಯ ಅಕ್ಷರ ವಿನ್ಯಾಸಗಳು, 12 ಪರಿವರ್ತಕಗಳು ಸೇರಿದಂತೆ ಮೊಬೈಲ್‌ ಮತ್ತು ಬ್ರೈಲ್‌ ಲಿಪಿ ಅಪ್ಲಿಕೇಶಗಳು ಸೇರಿವೆ.


👉。ರಾಜ್ಯ ಸರ್ಕಾರ ಜನವರಿಯಲ್ಲಿ ‘ಜ್ಯೋತಿ ಸಂಜೀವಿನಿ’ ಎಂಬ ಹೊಸ ಯೋಜನೆಯನ್ನು ಪರಿಚಯಿಸಿತು. ಈ ಆರೋಗ್ಯ ಯೋಜನೆಯನ್ನು ಸರ್ಕಾರಿ ನೌಕರರು ಮಾತ್ರ ಪಡೆಯಬಹುದು. ಇದರ ಅನ್ವಯ ನೌಕರರ ಅಥವಾ ಅವರ ಕುಟುಂಬದವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.


👉。ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯ ಮೊದಲ ಮಹಿಳಾ ಮುಖ್ಯಸ್ಥರಾಗಿ ಅರುಣಾ ಬಹುಗುಣ ನೇಮಕ­ಗೊಂಡಿದ್ದಾರೆ. ಇವರು ಆಂಧ್ರ ಪ್ರದೇಶದ 1979ರ ಐಪಿಎಸ್‌  ಬ್ಯಾಚ್‌ನ  ಅಧಿಕಾರಿ.

(ಕೃಪೆ: ಪ್ರಜಾವಾಣಿ)

Sunday, 28 December 2014

★ ವಿಟಾಮಿನ್ (ಜೀವಸತ್ವಗಳು) ಕುರಿತು ಒಂದಿಷ್ಟು ಮಾಹಿತಿ: (Vitamins):

★ ವಿಟಾಮಿನ್ (ಜೀವಸತ್ವಗಳು) ಕುರಿತು ಒಂದಿಷ್ಟು ಮಾಹಿತಿ:
(Vitamins):

━━━━━━━━━━━━━━━━━━━━━━━━━━━━━━━━━━━━━━━━━━━━━

♦.ಸಾಮಾನ್ಯ ವಿಜ್ಞಾನ (ಜೀವಶಾಸ್ತ್ರ):
♦.general science



★ ವಿಟಾಮಿನ್ (ಜೀವಸತ್ವಗಳು) (Vitamins):
— ಇವುಗಳು ದೇಹಕ್ಕೆ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಬೇಕಾಗಿರುವಂತಹ ಕಾರ್ಬಾನಿಕ್ ಸಂಯುಕ್ತಗಳು. ಇವು ದೇಹದ ಕ್ರಮಬದ್ಧವಾದ ಬೆಳವಣಿಗೆ ಮತ್ತು ಸಂವರ್ಧನೆಗಳಿಗೆ ಜೀವಾಳವಾಗಿವೆ.

*.ವಿಟಾಮಿನ್ ಪದವನ್ನು ಮೊದಲು ಬಳಸಿದ ವಿಜ್ಞಾನಿ: ಫಂಕ್.

★ ಇದರಲ್ಲಿ ಎರಡು ವಿಧ
*ನೀರಿನಲ್ಲಿ ಕರಗುವ ವಿಟಮಿನಗಳು ಬಿ ಮತ್ತು ಸಿ.
*ಕೊಬ್ಬಿನಲ್ಲಿ ಕರಗುವ ವಿಟಾಮಿನ್ ಗಳು ಎ.ಡಿ.ಇ.ಕೆ

★ ವಿಟಾಮಿನ್ ಎ....
*ಇದರ ವೈಙ್ಙಾನಿಕ ಹೆಸರು ರೆಟಿನಾಲ್.
*ಇದರ ಕೊರತೆಯಿಂದ 'ಇರುಳು ಗುರುಡು'(ಕ್ಷೀರಾಪ್ಥಾಲ್ಮಿಯಾ)(ನಿಶಾಂಧತೆ) ರೋಗ ಬರುತ್ತದೆ.
*ವಿಟಾಮಿನ್ ಎ ಹೊಂದಿರುವ ಭತ್ತದ ಬೆಳೆ ಗೋಲ್ಡನ್ ರೈಸ್.
*ವರ್ಣಾಂಧತೆ ರೋಗವು ಸ್ತ್ರೀ ಯರಲ್ಲಿ ಕಂಡು ಬರುವ ಪ್ರಮಾಣ 0%
*ಇರುಳುಗುರುಡುತನ ಅನುವಂಶೀಯ ರೋಗವಾಗಿದೆ.
*ವಿಟಾಮಿನ ಎ ಹೆಚ್ಚು ಕಂಡು ಬರುವ ಆಹಾರ ಗಳು ಹಾಲು.ಗಜ್ಜರಿ.ಮೊಟ್ಟೆ.ಬಾಳೆಹಣ್ಣು.
*ವಿಟಾಮಿನ್ ಎ ಯಿಂದ ಬರುವ ಮತ್ತೊಂದು ರೋಗ ಡರ್ಮಾಸೊಸಿಸ್.

★ ವಿಟಾಮಿನ್ ಸಿ..
*ಇದರ ವೈಙ್ಙಾನಿಕ ಹೆಸರು ಅಸ್ಕ್ಯಾರ್ಬಿಕ್ ಆಯ್ಸಿಡ್.
*ಇದರ ಕೊರತೆಯಿಂದ ಬರುವ ರೋಗ ಸ್ಕರ್ವಿ. ರಕ್ತಹೀನತೆ. ದಂತ, ಮೂಳೆ ಮತ್ತು ಪಸಡುಗಳ ನ್ಯೂನ ರಚನೆ. ಊದಿದ ಕಾಲುಗಳು.
*ಈ ರೋಗದಲ್ಲಿ ನಾಲಿಗೆ ಮತ್ತು ತುಟಿ ಭಾಗದಲ್ಲಿ ಗಾಯಗಳಾಗುತ್ತವೆ.
*ಇದು ಹೆಚ್ಚಾಗಿ ಸಿಟ್ರಸ್ ಹಣ್ಣುಗಳಲ್ಲಿ ಕಂಡು ಬರುತ್ತೆ

★ ವಿಟಾಮಿನ್ ಡಿ.
*ವೈಙ್ಙಾನಿಕ ಹೆಸರು ಕ್ಯಾಲ್ಸಿಫೆರಾಲ್.
*ಕೊರತೆಯಿಂದ ಬರುವ ರೋಗ
~ಚಿಕ್ಕಮಕ್ಕಳಲ್ಲಿ ರಿಕೆಟ್ಸ
~ವಯಸ್ಕರಲ್ಲಿ ಆಸ್ಟ್ಯಿಯೋ ಮಲೇಶಿಯಾಅ
*ಇದು ಸೂರ್ಯನ ಬೆಳಕಿನ ಕಿರಣ ದಲ್ಲಿ ದೊರೆಯುತ್ತೆ.
*ವಿಟಾಮಿನ್ ಡಿ ಯನ್ನು ನೇರಳಾತೀತ ಕಿರಣ ಗಳಿಂದ ತಯಾರಿಸುತ್ತಾರೆ.

★ ವಿಟಾಮಿನ್ ಇ.
*ವೈಙ್ಙಾನಿಕ ಹೆಸರು ಟೋಕೊ ಫೆರಾಲ್.
*ಕೊರತೆಯಿಂದ ಬರುವ ರೋಗ ಇನ್ ಪಟರ್ ಟೀಟಿ ಅರ್ ಬಂಜೆತನ. ಸ್ನಾಯು ಕ್ಷೀಣಿಕೆ.
*ಉತ್ಕರ್ಷಣ ನಿರೋಧಿ, A,C,D & K ಜೀವಸತ್ವಗಳನ್ನು ರಕ್ಷಿಸುತ್ತದೆ.
*ಇದು ಹೆಚ್ಚಾಗಿ ಎಣ್ಣೆಕಾಳು ಮತ್ತು ಹಸಿರು ತರಕಾರಿ ಯಲ್ಲಿ ಇದೆ.

★ ವಿಟಾಮಿನ್ ಎಚ್.
*ವೈಙ್ಙಾನಿಕ ಹೆಸರು ಬಯೋಟಿನ್
*ಕೊರತೆಯಿಂದ ಬರುವ ರೋಗ ಕೆಂಪು ರಕ್ತ ಕಣಗಳು ಕಡಿಮೆಯಾಗುತ್ತವೆ..

★ ವಿಟಾಮಿನ್ ಕೆ.
*ವೈಙ್ಙಾನಿಕ ಹೆಸರು ಪಿಲ್ಲೊ ಕಿನ್ವನ್, ಆಂಟಿಡಿಮೋ ರೇಜಿಕ್.
*ಕೊರತೆಯಿಂದ ಬರುವ ರೋಗ ಕುಸುಮ ರೋಗ ಅರ್ ಹಿಮೋಪಿಲಿಯಾ
*ಇದು ಹೆಚ್ಚಾಗಿ ಬೆಳೆಕಾಳು ಮತ್ತು ಹಸಿರು ತರಕಾರಿ ಯಲ್ಲಿ ಇದೆ.
*ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ.

★ ವಿಟಾಮಿನ್ ಬಿ1:
*ವೈಙ್ಙಾನಿಕ ಹೆಸರು ಥೈಮಿನ್
*ಕೊರತೆಯಿಂದ ಬರುವ ರೋಗ ಬೆರಿ ಬೆರಿ
*ಈ ರೋಗದಲ್ಲಿ ಚರ್ಮರೋಗ ಬರುತ್ತವೆ ಮತ್ತು ನರದೌರ್ಬಲ್ಯ ಕಂಡು ಬರುತ್ತೆ.
*ಹೆಚ್ಚಾಗಿ ಹಸಿರು ತರಕಾರಿ ,ಹಾಲು,ಬಾಳೆಹಣ್ಣು ,ಮೊಟ್ಟೆ ಯಲ್ಲಿ ಇದು ಸಿಗುತ್ತದೆ.

★ ವಿಟಾಮಿನ್ ಬಿ2:
*ವೈಙ್ಙಾನಿಕ ಹೆಸರು ರೈಬೋಪ್ಲೆವಿನ್
*ಕೊರತೆಯಿಂದ ಬರುವ ರೋಗ ಪೊಟೊಪೊಬಿಯ ಅರ್ ಬಿಳುಪು ರೋಗ.
*ಹಸುವಿನ ಹಾಲು ಕಾಯಿಸಿದಾಗ ಹಲದಿ ಬಣ್ಣಕ್ಕೆ ಬರಲು ಕಾರಣ ಕ್ಯಾಂಥೋಪಿಲ್ ಅರ್ ರೈಬೋಪ್ಲೇವಿನ್

★ ವಿಟಾಮಿನ್ ಬಿ3:
*ವೈಙ್ಙಾನಿಕ ಹೆಸರು ನಿಯಾಸಿನ್
*ಕೊರತೆಯಿಂದ ಬರುವ ರೋಗ ಪೆಲ್ಲಾಗ್ರ
*ಇದರ ಕೊರತೆಯಿಂದ ಸಣ್ಣ ಮಕ್ಕಳಲ್ಲಿ ಚರ್ಮ ರೋಗ ಕಂಡು ಬರುತ್ತವೆ.

★ ವಿಟಾಮಿನ್ ಬಿ6:
*ವಙ್ಙಾನಿಕ ಹೆಸರು ಫೆರಿಡಾಕ್ಸಿನ್
*ಕೊರತೆಯಿಂದ ಬರುವ ರೋಗ ಡಿ.ತ್ರಿ ಸಿಂಡ್ರೋಮ್ಸ್. ಮತ್ತು ಡಿ ಒನ್ ಚರ್ಮರೋಗ.ಮತ್ತು ಡಿ ಟು ಮಾನಸಿಕ ರೊಗ ಮತ್ತು ಡಿ ಟು ಅತಿಸಾರಭೇದಿ.

★ ವಿಟಾಮಿನ್ ಬಿ 12..
*ವೈಙ್ಙಾನಿಕ ಹೆಸರು ಸೈನೋಕೊಬಾಲ್ ಅಮೈನ್.
*ಇದರಲ್ಲಿ ಇರುವ ಮೂಲ ವಸ್ತು ಕೋಬಾಲ್ಟ್
*ಕೊರತೆಯಿಂದ ಬರುವ ರೋಗ ರಕ್ತಹೀನತೆ ಅರ್ ಅನಿಮಿಯ
*ರಕ್ತ ಕೆಂಪಾಗಿರಲು ಕಾರಣ ಎಪ್ ಇ (ಕಬ್ಬಿಣ) ಹಿಮೋಗ್ಲೊಬಿನ್
*ಎಲೆಗಳು ಹಸಿರಾಗಿರಲು ಕಾರಣ ಮೆಗ್ನೀಷಿಯಂ
*ಇನ್ಸುಲಿನ್ ತಯ್ಯರಿಸಲು ಬಳಸುವ ಮತ್ತು ಕಬ್ಬಿಣ ತುಕ್ಕು ಹಿಡಿಯದಂತೆ ಬಳಸುವ ಮೂಲವಸ್ತು ಜಿಂಕ್.

Thursday, 25 December 2014

★ ಪ್ರಪಂಚದ ಭೌಗೋಳಿಕ ಅನ್ವರ್ಥಕ ನಾಮಗಳು: (World Geographic Nicknames)


☀ಪ್ರಪಂಚದ ಭೌಗೋಳಿಕ ಅನ್ವರ್ಥಕ ನಾಮಗಳು:
(World Geographic NickNames)

━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಪಂಚದ ಭೂಗೋಳ:
(World Geography)


* ಯುರೋಪಿನ ಕದನ ಮೈದಾನ ———————— > ಬೆಲ್ಜಿಯಂ

*ಬಂಗಾಲದ ಶೋಕ ನದಿ———————— > ದಾಮೋದರನದಿ

*ದಕ್ಷಿಣ ಬ್ರಿಟನ್ ———————— > ನ್ಯೂಜಿಲ್ಯಾಂಡ್

*ಹಳದಿ ನದಿ-----ಹ್ಯಾಂಗ್ ಹೋ(ಚೀನಾ)

 *ಮಧ್ಯರಾತ್ರಿ ಸೂರ್ಯನ ನಾಡು-----ನಾರ್ವೆ

*ಸಾವಿರ ಸರೋವರಗಳ ನಾಡು-----ಪಿನ್ ಲ್ಯಾಂಡ್

*ಸಿಡಿಲುಗಳ ನಾಡು-----ಭೂತಾನ್

*ಬಿಳಿ ಆನೆಗಳ ನಾಡು-----ಥೈಲ್ಯಾಂಡ್

*ಭಾರತದ ಮ್ಯಾಂಚೆಸ್ಟರ್ ------ಮುಂಬೈ

*ಯುರೋಪಿನ ಅತ್ತೆ -----ಡೆನ್ಮಾರ್ಕ್

*ಆಧುನಿಕ ಬ್ಯಾಬಿಲೋನ್ ---- ಲಂಡನ್

*ಅಂಟೆಲ್ಲಾ ದ್ವೀಪಗಳ ಮುತ್ತು ----- ಕ್ಯೂಬಾ

*ಯೂರೋಪಿನ ಆಟದ ಮೈದಾನ ----ಸ್ವಿಟ್ಜರ್ ಲ್ಯಾಂಡ್

*ಯುರೋಪಿನ ಹಿಟ್ಟಿನ ಪೀಪಾಯಿ ---- ಬಾಲ್ಕನ್ಸ್

*ಏಡ್ರಿಯಾಟಿರ್ ಸಮುದ್ರದ ರಾಣಿ ----- ವೆನಿಸ್(ಇಟಲಿ)

 *ಶ್ರೀಮಂತ ಕರಾವಳಿ ---- ಕೋಸ್ಟರಿಕ

*ಶ್ರೀಮಂತ ಬಂದರು ---- ಪ್ಯೂರ್ಟೊರಿಕೊ

*ಪ್ರಪಂಚದ ಮೇಲ್ಛಾವಣಿ ---- ಟಿಬೆಟ್

*ಯೂರೋಪಿನ ಸಾಮಿಲ್ ----- ಸ್ವೀಡನ್

*ಯುರೋಪಿನ ರೋಗಿ ಮನುಷ್ಯ ----- ಟರ್ಕಿ

*ಚೀನಾದ ಶೋಕ ನದಿ ---- ಹ್ಯಾಂಗ್ ಹೋ

*ಭಾರತದ ಸಾಂಬಾರ್ ತೋಟ ---- ಕೇರಳ

*ಪ್ರಪಂಚದ ಸಕ್ಕರೆ ತೋಟ ----- ಕ್ಯೂಬಾ

*ಶ್ವೇತ ನಗರ ---- ಬೆಲ್ಗೆಡ್

*ಬಿಳಿಜನರ ಗೋರಿ ---- ಜಿನಿವಾ ಕರಾವಳಿ

*ಜೋರಾಗಿ ಗಾಳಿ ಬೀಸುವ ನಗರ ---- ಚಿಕಾಗೋ

*ಯುರೋಪಿನ ಯಂತ್ರಗಾರ ---- ಬೆಲ್ಜಿಯಂ

*ಪ್ರಪಂಚದ ಬ್ರೆಡ್ ಬ್ಯಾಸ್ಕೆಟ್ ---- ಉತ್ತರ ಅಮೇರಿಕಾದ ಮೈದಾನ

*ಪ್ರಪಂಚದ ಏಕಾಂತ ದ್ವೀಪ ---- ಅಟ್ಲಾಂಟಿಕ್ ಸಾಗರ

*ಕಣಿವೆಗಳ ರಾಜ ----- ಥೇಬ್ಸ್

*ಗ್ರೀಕ್ ನ ಕಣ್ಣು ---- ಅಥೆನ್ಸ್

*ಚಿನ್ನದ ಉಣ್ಣೆಯ ನಾಡು ----- ಆಸ್ಟ್ರೇಲಿಯ

*ಪೋಪ್ ಗಳ ನಗರ ---- ರೋಮ್

*ಹಾಲು&ಜೇನುತುಪ್ಪದ ನಾಡು ---- ಕೆನಡ

*ನೈದಿಲೆಗಳ ನಗರ ----- ಕೆನಡಾ

*ಪ್ರಶಾಂತ ಬೆಳಗಿನ ನಾಡು ---- ಕೊರಿಯಾ

*ಕಾಂಗರೂಗಳ ನಾಡು ---- ಆಸ್ಟ್ರೇಲಿಯಾ

*ಸ್ವರ್ಣದ್ವಾರ್ ನಗರ ---- ಸ್ಯಾನ್ ಪ್ರಾನ್ಸಿಸ್ಕೋ

*ಸ್ವರ್ಣಮಂದಿರದ ನಗರ ---- ಅಮೃತಸರ

*ಕನಸಿನ ಗೋಪುರ ನಗರ ----- ಆಕ್ಸಫರ್ಡ್ ಇಂಗ್ಲೆಂಡ್

*ಏಳು ಬೆಟ್ಟಗಳ ನಗರ ---- ರೋಮ್

*ಆಕಾಶ ಚುಂಬಿ ಕಟ್ಟಡಗಳ ನಗರ ---- ನ್ಯೂಯರ್ಕ್

*ಕಗ್ಗತ್ತಲ ಖಂಡ ---- ಆಫ್ರಿಕಾ

*ಶಾಶ್ವತ ನಗರ ---- ರೋಮ್

*ಇಂಗ್ಲೆಂಡಿನ ಉದ್ಯಾನವನ ---- ಕೆಂಟ್

*ಕಣ್ಣೀರಿನ ದ್ವಾರ ----- ಬಾಬಾ ಎನ್ ಮಾಂಡಟ್

* ನೈಲ್ ನದಿಯ ಕೊಡುಗೆ ----- ಜೆರುಸೆಲಂ

*ಗ್ರಾನೈಟ್ ನಗರ ---- ಈಜಿಪ್ಟ್

*ಪವಿತ್ರ ಭೂಮಿ ---- ಪ್ಯಾಲೆಸ್ಟೈನ್

*ಲವಂಗ ದ್ವೀಪ ---- ಮಡಗಾಸ್ಕರ್

*ಮುತ್ತುಗಳ ದ್ವೀಪ ---- ಬೆಹರಿನ್

*ಚಿನ್ನದ ಪಗೋಡಗಳ ನಾಡು ----- ಮಯನ್ಮಾರ್(ಬರ್ಮಾ)

(Courtesy: Adesh MH)

★ ಬೇರೆ ದೇಶಗಳ ಸಂವಿಧಾನಗಳಿಂದ ಭಾರತದ ಸಂವಿಧಾನದಲ್ಲಿ ಅಳವಡಿಸಿಗೊಂಡ ತತ್ವಗಳು: (Indian Constitution)


★ ಭಾರತದ ಸಂವಿಧಾನ (Indian Constitution)

━━━━━━━━━━━━━━━━━━━━━━━━━━━━━━━━━━━━━━━━━━━━━

★ ಬೇರೆ ದೇಶಗಳ ಸಂವಿಧಾನಗಳಿಂದ ಅಳವಡಿಸಿಗೊಂಡ ತತ್ವಗಳು:

ಸಂವಿಧಾನದ ಅಂತಿಮ ರೂಪವು ಅನೇಕ ಇತರ ಸಮಕಾಲೀನ ಸಂವಿಧಾನಗಳ ಬೇರೆಬೇರೆ ತತ್ವಗಳಿಗೆ ಋಣಿಯಾಗಿದೆ.

I] ಬ್ರಿಟನ್ನಿನ ಸಂವಿಧಾನ:

1) ಸರಕಾರದ ಸಂಸದೀಯ ಸ್ವರೂಪ
2) ಏಕಸ್ವಾಮ್ಯ ಪೌರತ್ವ
3) ನ್ಯಾಯದ ಪ್ರಭುತ್ವ
4) ಲೋಕಸಭಾಧ್ಯಕ್ಷ ಮತ್ತವರ ಪಾತ್ರ
5) ಶಾಸನೆ ರಚನೆಯ ವಿಧಾನ
6) ನ್ಯಾಯ ನಿರ್ಧರಿಸುವ ಕಾರ್ಯವಿಧಾನ (ಕಲಂ 13)

————————————————————————————————

II] ಅಮೇರಿಕ ಸಂಯುಕ್ತ ಸಂಸ್ಥಾನದ ಸಂವಿಧಾನ:

1) ಮೂಲಭೂತ ಹಕ್ಕುಗಳು
2) ರಾಜ್ಯಗಳ ಒಕ್ಕೂಟದ ಸರ್ಕಾರದ ಮಾದರಿ
3) ನ್ಯಾಯಾಂಗದ ಸ್ವಾತಂತ್ರ್ಯತೆ ಮತ್ತು ಶಾಸಕಾಂಗದ ನಿರ್ಧಾರಗಳನ್ನು ಪರಿಶೀಲಿಸುವ ಅಧಿಕಾರ.
4) ರಾಷ್ಟ್ರಪತಿಗೆ ಮಹಾಸೇನಾಧಿಪತಿಯ ಪಟ್ಟ (ಕಲಂ 52)
5) ನ್ಯಾಯ ನಿರ್ಧರಿಸುವ ಕಾರ್ಯವಿಧಾನ (ಕಲಂ 13)

————————————————————————————————

III] ಐರ್ಲೆಂಡ್ ದೇಶದ ಸಂವಿಧಾನ

1) ಸರ್ಕಾರಿ ಕಾರ್ಯನೀತಿಯ ಸಾಂವಿಧಾನಿಕ ತಾಕೀತು

————————————————————————————————

IV] ಫ್ರಾನ್ಸ್ ದೇಶದ ಸಂವಿಧಾನ

1) ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃ‍ತ್ವ ಆದರ್ಶಗಳು

————————————————————————————————

V] ಕೆನಡಾ ದೇಶದ ಸಂವಿಧಾನ

1) ರಾಜ್ಯಗಳ ಒಕ್ಕೂಟದೊಂದಿಗೆ ಪ್ರಬಲ ಕೇಂದ್ರ ಸರ್ಕಾರದ ಮಾದರಿ
2) ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಮೇಲುಳಿದ ಶಕ್ತಿಗಳು

————————————————————————————————

VI] ಆಸ್ಟ್ರೇಲಿಯ ದೇಶದ ಸಂವಿಧಾನ

1) ಪ್ರಸ್ತುತ ವಿಷಯಗಳ ಪಟ್ಟಿ
2) ರಾಜ್ಯಗಳ ಮಧ್ಯ ಅನಿರ್ಭಂದಿತ ವ್ಯಾಪರ - ವಹಿವಾಟಿಗೆ ಸ್ವಾತಂತ್ರ್ಯ

————————————————————————————————

VII] ಸೋವಿಯಟ್ ಒಕ್ಕೂಟದ ಸಂವಿಧಾನ

1) ಮೂಲಭೂತ ಹಕ್ಕುಗಳು
2) ಸರ್ಕಾರಿ ಕಾರ್ಯನೀತಿಯ ತಾಕೀತುಗಳು

————————————————————————————————

VIII] ಜಪಾನ್ ದೇಶದ ಸಂವಿಧಾನ

1) ಮೂಲಭೂತ ಕರ್ತವ್ಯಗಳು
(ಕಲಂ 51-ಎ)

————————————————————————————————

IX] ಜರ್ಮನಿ ದೇಶದ ಸಂವಿಧಾನ

1) ತುರ್ತು ಪರಿಸ್ಥಿತಿಯ ಎರ್ಪಾಡು
(ಕಲಂ 368)

————————————————————————————————
(Courtesy :Wikipedia )

Thursday, 18 December 2014

★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು: (Scientific equipments(tools) and their Uses)


★ ಸಾಮಾನ್ಯ ವಿಜ್ಞಾನ.
(General Science)


★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು:
(Scientific equipments(tools) and their Uses)

━━━━━━━━━━━━━━━━━━━━━━━━━━━━━━━━━━━━━━━━━━━━━


1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ.


2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ.


3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ.


4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ.


5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ.


6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ.


7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ.


8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು     ಅಳೆಯುವ ಸಾಧನ.


9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ.


10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ.


11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು    ಅಳೆಯುವ ಸಾಧನ.


12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ.


13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ.


14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ.


15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ.


16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು  ಅಳೆಯುವ ಸಾಧನ.


17) ಆಡಿಯೋಮೀಟರ್ —————> ಶಬ್ದದ ತೀವ್ರತೆಯನ್ನು ಅಳೆಯುವ ಸಾಧನ.


18) ಬೈನಾಕ್ಯೂಲರ್ —————> ದೂರದಲ್ಲಿರುವ ವಸ್ತುಗಳನ್ನು ಹತ್ತಿರದಲ್ಲಿ ನೋಡಲು ಬಳಸುವ ಸಾಧನ.


19) ಬ್ಯಾರೋಗ್ರಾಫ್ —————> ನಿರಂತರ ವಾಯುವಿನ ಒತ್ತಡವನ್ನು ಅಳೆಯುವ ಸಾಧನ.


20) ಕಂಪಾಸ್ —————> ಹಡಗಿನ ದಿಕ್ಕನ್ನು ಸೂಚಿಸುವ ಸಾಧನ.


21) ರೈನ್ ಗೇಜ್ —————> ಬಿದ್ದ ಮಳೆಯನ್ನು ಅಳೆಯುವ ಸಾಧನ.


22) ಸ್ಟೆತೋಸ್ಕೋಪ್ —————> ಹೃದಯ ಬಡಿತವನ್ನು ಅಳೆಯುವ ಸಾಧನ.


23) ಥರ್ಮೋಕೊಪಲ್ —————>  ಸಣ್ಣ ಉಷ್ಣತೆಯನ್ನು ಅಳೆಯುವ ಸಾಧನ.


24) ರಿಕ್ಟರ್ ಮಾಪಕ —————> ಭೂಕಂಪನದ ತೀವ್ರತೆಯನ್ನು ಅಳೆಯುವ ಸಾಧನ.


25) ರೇಡಾರ್ —————> ರೇಡಿಯೊ ತರಂಗಗಳನ್ನು ಉಪಯೋಗಿಸಿ ದೂರದ ವಸ್ತುಗಳನ್ನು ಪತ್ತೆ ಮಾಡುವ ಮತ್ತು ಅದರ ದೂರವನ್ನು ನಿಖರವಾಗಿ ಕಂಡು ಹಿಡಿಯಲು ಉಪಯೋಗಿಸುವ ಸಾಧನ.


26) ಸೋನಾರ್ —————>  ಶೃವಣಾತೀತ ಧ್ವನಿಯನ್ನು ಉಪಯೋಗಿಸಿ ನೀರಿನೊಳಗಿನ ವಸ್ತುಗಳನ್ನು ಪತ್ತೆ ಹಚ್ಚಲು ಬಳಸುವ ಸಾಧನ.


27) ಕ್ಯಾಲೋರಿ —————>  ಶಾಖವನ್ನು ಅಳೆಯುವ ಸಾಧನ.


28) ಮೈಕ್ರೋಸ್ಕೋಪ್ —————> ಸಣ್ಣ ವಸ್ತುಗಳನ್ನು ದೊಡ್ಡದಾಗಿ ಅವಲೋಕಿಸುವ ಸಾಧನ.

Friday, 12 December 2014

★ ಸಾಮಾನ್ಯ ಜ್ಞಾನ (ಭಾಗ - 10) General Knowledge (Part-10):



★ ಸಾಮಾನ್ಯ ಜ್ಞಾನ (ಭಾಗ - 10) General Knowledge (Part-10):


401) ಬ್ರಾಡ್ ಗೇಜ್ ಹಳಿಯ ದೂರ ಎಷ್ಟು?
— 1676 mm.


402) ಒಂದನೇ ಪಾಣಿಪಟ್ ಕದನದಲ್ಲಿ ಇಬ್ರಾಹೀಂ ಲೂದಿಯನ್ನು ಸೋಲಿಸಿದ ದೊರೆ ಯಾರು?
— ಬಾಬರ್


403) ಭಾರತದ ಸಂವಿಧಾನವನ್ನು ಮೊದಲ ಬಾರಿಗೆ ತಿದ್ದುಪಡಿ ಮಾಡಿದ ವರ್ಷ ಯಾವುದು?
—1951 ರಲ್ಲಿ.


404) 'ಮಾನವನ ಜೈವಿಕ ರಸಾಯನಿಕ ಪ್ರಯೋಗಾಲಯ' ಎಂದು ಕರೆಯಲ್ಪಡುವ ಅಂಗ ಯಾವುದು?
— ಲೀವರ್.


405) ಅಕ್ಬರನು ತನ್ನ ಸೇನಾವ್ಯವಸ್ಥೆಯಲ್ಲಿ ಅಳವಡಿಸಿಕೊಂಡ 'ಮನ್ಸಬ್ ದಾರಿ ಪದ್ಧತಿ'ಯು ಯಾವ ದೇಶದಿಂದ ಪಡೆಯಲಾಗಿತ್ತು?
— ಮಂಗೋಲಿಯಾ.


406) ಸತಿ ಕುಂಡವಿರುವ ಸ್ಥಳದ ಹೆಸರೇನು?
— ದಕ್ಷಬ್ರಹ್ಮ ಮಂದಿರ.


407) ಭಾರತಕ್ಕೆ ಅರೇಬಿಕ್ ಮಾದರಿಯ ನಾಣ್ಯಗಳನ್ನು ಪರಿಚಯಿಸಿದವರು ಯಾರು?
— ಇಲ್ತಮಶ್.


408) ಭಾರತದ ಮೊದಲ ಮಹಿಳಾ ಕೇಂದ್ರ ಸಚಿವೆ ಯಾರು?
-ರಾಜಕುಮಾರಿ ಅಮೃತ್ ಕೌರ್.


409) ಇರಾನ್ ದೇಶದ ರಾಮಸರ್ (Ramsar Convention) ಸಮ್ಮೇಳನ ಯಾವುದಕ್ಕೆ ಸಂಬಂಧಿಸಿದೆ?
— ತೇವಾಂಶವುಳ್ಳ ಭೂ ಪ್ರದೇಶ (Wetland)


410) ತಾಂತ್ರಿಕ ಸೂತ್ರಗಳನ್ನು ಒಳಗೊಂಡ ವೇದ ಯಾವುದು?
— ಅಥರ್ವಣ ವೇದ


411) ಮದರ್ ತೆರೆಸಾರವರು ಮೂಲತಃ ಯಾವ ದೇಶದವರು ?
—ಆಲ್ಬೇನಿಯಾ


412) ಹಿಮಾಲಯ ಪರ್ವತ ಪ್ರದೇಶಗಳಲ್ಲಿನ ಹುಲ್ಲುಗಾವಲುಗಳ ಹೆಸರೇನು?
— ತರೈ.


413) ಡಿಸೆಂಬರ್ : 10 ವಿಶ್ವ ಮಾನವ ಹಕ್ಕುಗಳ ದಿನ


414) MOM ಮಂಗಳಯಾನದ ವಿಸ್ತೃತ ರೂಪ?
— The Mars Orbiter Mission.


415) ವೃತ್ತದ ಮಧ್ಯ ಬಿಂದುವಿನಿಂದ ಹಾದು ಹೋಗುವ ಜ್ಯಾ ಗೆ ಇರುವ ಹೆಸರು?
— ವ್ಯಾಸ.


416) ಜಗತ್ತಿನಲ್ಲಿಯೇ ಅತಿ ಹೆಚ್ಚು ಶಬ್ಧ ಮಾಡುವ ಪ್ರಾಣಿ ಯಾವುದು?
— ನೀಲಿ ತಿಮಿಂಗಲ (830 ಕಿ.ಮೀ ವರೆಗೆ ಇದರ ಶಬ್ಧ ಹರಡುತ್ತದೆ).


417) ಒಂದು ದಿನದಲ್ಲಿ ಒಟ್ಟು ಎಷ್ಟು ಸೆಕೆಂಡ್ ಗಳು ಇರುತ್ತವೆ?
— 24X60X60 = 86,400 ಸೆಕೆಂಡ್ ಗಳು


418) ಥೈನ್ (Thein Hydro electric project) ಜಲ ವಿದ್ಯುತ್ ಶಕ್ತಿ ಯೋಜನೆ ಯಾವ ನದಿಗೆ ಸಂಬಂಧಿಸಿದೆ?
— ರಾವಿ ನದಿ.


419) ಭಾರತದ ಮೊದಲ ವಕೀಲೆ ಯಾರು?
-ಕೊರ್ನೆಲಿಯಾ ಸೋರಾಬ್ಜಿ.


420) ನೂತನ ತೆಲಂಗಾಣ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದವರು ಯಾರು?
— ಕೆ.ಚಂದ್ರಶೇಖರ್ ರಾವ್.


421) ಭಾರತದ ಪ್ರಥಮ ಮಹಿಳಾ ರಾಷ್ಟ್ರ ಪತಿ ಯಾರು?
-ಪ್ರತಿಭಾ ಪಾಟೀಲ.


422) ಗಾಯತ್ರಿ ಮಂತ್ರ ಯಾವ ವೇದದಲ್ಲಿದೆ?
— ಋಗ್ವೇದ.


423) ಹಾವಿನ ವಿಷದಲ್ಲಿರುವ ರಾಸಾಯನಿಕ ವಸ್ತು ಯಾವುದು?
— ಟಾಕ್ಸಿನ್.


424) ಪುಲಿಟ್ಜರ್ ಪ್ರಶಸ್ತಿಯನ್ನು ಯಾವ ವಿಶ್ವವಿದ್ಯಾಲಯ ನೀಡುತ್ತದೆ?
— ಅಮೆರಿಕಾದ ಕೊಲಂಬಿಯಾ ವಿ.ವಿ.

425) ಕರ್ನಾಟಕದಿಂದ ಪ್ರಥಮವಾಗಿ ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆಗೊಂಡ ತಾಣ ಯಾವುದು?
— ಹಂಪಿ.


426) ದೇಶದ ಮೊಟ್ಟಮೊದಲ ಅಟಾರ್ನಿ ಜನರಲ್ ಯಾರು?
— ಎಂ,ಸಿ, ಸೆಟ್ಲವಾಡ.


427) ಸೇನಾ ಗೌರವ 'ಕೀರ್ತಿ ಚಕ್ರ' ಪಡೆದ ದೇಶದ ಪ್ರಥಮ ಪೊಲೀಸ್ ಅಧಿಕಾರಿ ಯಾರು?
— ಈಗಿನ (2014) ಪ್ರಸ್ತುತ ಪ್ರಧಾನಮಂತ್ರಿಯ ರಾಷ್ಟ್ರೀಯ ಭದ್ರತಾ ಸಲಹೆಗಾರ 'ಅಜಿತ್ ಕುಮಾರ್ ದೋವಲ್


428) ಲಾರ್ಡ್ ಡಾಲ್‌ಹೌಸಿಯಿಂದ ಮೊದಲ ಬಾರಿಗೆ ದೂರವಾಣಿ ಸಂಪರ್ಕ ಪಡೆದ ಭಾರತದ ಎರಡು ಸ್ಥಳಗಳು ಯಾವುವು?
—ಕಲ್ಕತ್ತಾ ಮತ್ತು ಆಗ್ರಾ


429) ಭಾರತದ ಸಂವಿಧಾನ ರಚನಾ ಸಮಿತಿಯಲ್ಲಿ ಕರ್ನಾಟಕದಿಂದ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸಿದವರು ಯಾರು?
— ಎಸ್. ನಿಜಲಿಂಗಪ್ಪ.


430) ರಾಜ್ಯದ ಮೊದಲ 'ಜಾಗರಿ ಪಾರ್ಕ್' ನಿರ್ಮಾಣಗೊಂಡಿದ್ದು ಎಲ್ಲಿ?
— ಮುಧೋಳ.


431) ಭಾರತದ ಮೊದಲ ಪ್ರನಾಳ ಶಿಶು ಯಾರು?
— ದುರ್ಗಾ (ಅನುಪ್ರಿಯಾ ಅಗರವಾಲ್).(ಮುಂಬೈ)


432) ಭಾರತದ ಮೊದಲ ಮಹಿಳಾ ಆಡಳಿತಗಾರಳು ಯಾರು?
-ರಜಿಯಾ ಬೇಗಂ.


433) ಪ್ರಪಂಚದ ಮೊದಲ ಪ್ರನಾಳ ಶಿಶು ಯಾರು?
— ಲೂಯಿಸ್ ಜಾಯ್ ಬ್ರೌನ್ (1978).


434) ವರ್ಗ ಸಮೀಕರಣದ ಆದರ್ಶ ರೂಪ ಯಾವುದು?
— ax²+bx+c=0.


435) ಮತದಾನದ ವಯಸ್ಸನ್ನು ೨೧ ವರ್ಷದಿಂದ ೧೮ ವರ್ಷಕ್ಕೆ ಯಾವ ವರ್ಷದಲ್ಲಿ ಇಳಿಸಲಾಯಿತು?
—1986 ರಲ್ಲಿ.


436) ರಾತ್ರಿ ವೇಳೆ ಅರಳುವ ಅಪರೂಪದ ಹೂವು ಯಾವುದು?
— ಬ್ರಹ್ಮ ಕಮಲ


437) ನುಂಗುವ ಆಹಾರವನ್ನು ಶ್ವಾಸನಾಳವನ್ನು ಪ್ರವೇಶಿಸದಂತೆ ತಡೆಯುವ ರಚನೆ ಯಾವುದು?
— ಎಪಿಗ್ಲಾಟಿಸ್.


438) ವಿಶ್ವ ವನ್ಯಜೀವಿ ನಿಧಿ (WWF) ಎಲ್ಲಿ ನೆಲೆಗೊಂಡಿದೆ?
— ಸ್ವಿಟ್ಜರ್ಲೆಂಡ್.


439) ಭಾರತದ ಸಂವಿಧಾನದ ರಚನಾ ಸಭೆಯಲ್ಲಿ ಭಾಗವಹಿಸಿದ ಏಕೈಕ ಮುಸ್ಲಿಂ ಮಹಿಳೆ ಯಾರು?
—ಅಜುಲ್ಲಾರಸುಲ್ಲಾ.


440) ಎಲ್ಲೋರಾದ ಕೈಲಾಸ ದೇವಾಲಯಗಳನ್ನು ಕಟ್ಟಿಸಿದ ರಾಷ್ಟ್ರಕೂಟರ ದೊರೆ ಯಾರು?
—ಒಂದನೇಯ ಕೃಷ್ಣ


441) ಭಾರತದ ರಿಸರ್ವ ಬ್ಯಾಂಕಿನ ಪ್ರಧಾನ ಕಛೇರಿ ಎಲ್ಲಿದೆ?
—ಮುಂಬೈ


442) ಸುವರ್ಣGolden) ಕ್ರಾಂತಿ ಯಾವುದಕ್ಕೆ ಸಂಬಂಧಿಸಿದ್ದಾಗಿದೆ?
— ಸೇಬು ಹಣ್ಣಿನ ಉತ್ಪಾದನೆಗೆ.


443) ಸಂವಿಧಾನಕ್ಕೆ 73 ನೇ ತಿದ್ದುಪಡಿ ತಂದು ಎಷ್ಟನೇ ಪರಿಚ್ಛೇದದಲ್ಲಿ 'ಪಂಚಾಯತ್ ರಾಜ್ ಅಧಿನಿಯಮ' ಸೇರಿಸಲಾಯಿತು?
— 243 ನೇ ಪರಿಚ್ಛೇದ.


444) 1919 ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ರೂವಾರಿಯಾದ ಜನರಲ್ ಡಯರ್ ನನ್ನು ಕೊಲೆ ಮಾಡಿ ಸೇಡು ತೀರಿಸಿಕೊಂಡ ಕ್ರಾಂತಿಕಾರಿ ಯಾರು?
— ಉಧಾಮ್ ಸಿಂಗ್.


445) ಭಾರತದ ಮೊದಲ ಮಹಿಳಾ ಮುಖ್ಯ ಮಂತ್ರಿ ಯಾರು?
-ಸುಚೇತಾ ಕ್ರುಪಲಾನಿ.


446) ರಾತ್ರಿಯ ಅವಧಿಯಲ್ಲಿಯ ಅತಿ ಹೆಚ್ಚು ಉಷ್ಣ ಇರುವ ಪ್ರದೇಶ ಯಾವುದು?
— ಇಥಿಯೋಪಿಯಾದ 'ಡಾಲ್ಲರ್' (ರಾತ್ರಿ 34⁰C ಉಷ್ಣ ಇರುವುದು)


447) ಕೊಹಿನೂರು ವಜ್ರವನ್ನು ಭಾರತದಿಂದ ಒಯ್ದವರು ಯಾರು?
— ನಾದಿರ್ ಷಾ.


448) ಒಂದು ಕಿ.ಮೀ/ಗಂ. ಇದನ್ನು ಮೀ.ಸೆ.ನಲ್ಲಿ ಹೇಗೆ ಬರೆಯಬಹುದು?
— 1000/60 ಮೀ.ಸೆ.


449) ಎರಡನೇ ಏಷ್ಯನ್‌ ಪ್ಯಾರಾ ಕ್ರೀಡಾಕೂಟ 2014 ಎಲ್ಲಿ ನಡೆಯಿತು?
— ದಕ್ಷಿಣ ಕೊರಿಯದ ಇಂಚೆನ್‌ ನಲ್ಲಿ.


450)  ಪ್ರಾಚೀನ ಭಾರತದ ಮೊದಲ ಪ್ರನಾಳ ಶಿಶು ಯಾರು?
— ದ್ರೋಣಾಚಾರ್ಯ

To be continued...

Wednesday, 3 December 2014

★ ಪ್ರಸ್ತುತ ಇರುವ ಸಾರ್ವನಿಕ ವಿತರಣಾ ವ್ಯವಸ್ಥೆಯ ಲೋಪ ದೋಷಗಳನ್ನು ಸರಿಪಡಿಸಲು ನೀವು ಸರ್ಕಾರಕ್ಕೆ ಯಾವ ಸಲಹೆಗಳನ್ನು ನೀಡುವಿರಿ? (150 ಶಬ್ದಗಳಲ್ಲಿ) (Current public distribution system in India)


★ ಪ್ರಸ್ತುತ ಇರುವ ಸಾರ್ವನಿಕ ವಿತರಣಾ ವ್ಯವಸ್ಥೆಯ ಲೋಪ ದೋಷಗಳನ್ನು ಸರಿಪಡಿಸಲು ನೀವು ಸರ್ಕಾರಕ್ಕೆ ಯಾವ  ಸಲಹೆಗಳನ್ನು ನೀಡುವಿರಿ?
(150 ಶಬ್ದಗಳಲ್ಲಿ)
(Current public distribution system in India)

━━━━━━━━━━━━━━━━━━━━━━━━━━━━━━━━━━━━━━━━━━━━━


1. ಆಹಾರ ಧಾನ್ಯಗಳ ಉತ್ಪಾದನೆ ಬಳಸಿಸಲ್ಪಡುವ ಭೂ ವಿಸ್ತೀರ್ಣವು ವ್ಯತ್ಯಾಸಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಮತ್ತು ಅವುಗಳ ಉತ್ಪಾದನೆಯನ್ನು ಹೆಚ್ಚಿಸಲು ಆಧುನಿಕ ಕೃಷಿ ವಿಧಾನವನ್ನು ಅನುಸರಿಸುವುದು.

2. ಭಾರತೀಯ ಆಹಾರ ನಿಗಮ ಮತ್ತು ಇತರೇ ದಾಸ್ತನುಗಳಲ್ಲಿ ಸಂಗ್ರಹಿಸಿರುವ ಆಹಾರಾಧಾನ್ಯಗಳು ವಿವಿಧ ಕಾರಣಗಳಿಂದ ವ್ಯರ್ಥವಾಗುತ್ತಾ ಇವೆ. (ಭಾರತೀಯ ಆಹಾರ ನಿಗಮವು ಬೆಂಬಲ ಬೆಲೆಯ ಮೂಲಕ ಖರೀದಿಸಿದ ಸುಮಾರು ಶೇ.10 ರಷ್ಟು) ಆದ್ದರಿಂದ ಪಡಿತರ ಚೀಟಿದಾರರ ವ್ಯಾಪ್ತಿಗೆ ಸೇರ್ಪಡೆದೇ ಇರುವ ಅರ್ಹ ಪಲಾನುಭವಿಗಳನ್ನು ಇದರ ವ್ಯಾಪ್ತಿಗೆ ಸೇರ್ಪಡಿಸಲು  ಸರ್ಕಾರ ಕ್ರಮ ಕೈಗೊಳ್ಳುವ ಮೂಲಕ ವ್ಯರ್ಥವಾಗುವ ಆಹಾರ ಧಾನ್ಯಗಳನ್ನು ಬಡಕುಟುಂಬದವರಿಗೆ ಸಿಗುವಂತೆ ನೋಡಿಕೊಳ್ಳಬೇಕು.

3. ಕರ್ನಾಟಕ ರಾಜ್ಯದ ನಗರ ಪ್ರದೇಶಗಳಲ್ಲಿ ಬಡತನವು ಇನ್ನೂ ಕೂಡ ಶೇ 32.ರಷ್ಟು ಇರುವುದು ಅಧ್ಯಾಯನದಿಂದ ತಿಳಿಯುತ್ತದೆ. ಆದರೆ ಈ ಪ್ರದೇಶಗಳಲ್ಲಿ ನ್ಯಾಯ ಬೆಲೆ ಅಂಗಡಿಗಳ ಪ್ರಮಾಣ ಶೇ.28 ರಷ್ಟಿದೆ ಆದುದರಿಂದ ನಗರಭಾಗದ ಬಡಜನರ ಆಹಾರ ಭದ್ರತೆಯನ್ನು ಕಾಯ್ದುಕೊಳ್ಳಲು ಆ ಪ್ರದೇಶಗಳಲ್ಲಿ ಹಾಲಿ ಇರುವ ನ್ಯಾಯ ಬೆಲೆ ಅಂಗಡಿಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಕ್ರಮ
ಕೈಗೊಳ್ಳಬೇಕು.

4. ಬಿ.ಪಿ.ಎಲ್ ಕುಟುಂಬಗಳನ್ನು ಪರಿಣಾಮ ಕಾರಿಯಾಗಿ ಉದ್ಯೋಗಖಾತರಿ ಯೋಜನೆಗಳ ಜೊತೆ ಸಂಪರ್ಕಿಸಿ, ಅವರ ಕೊಂಡುಕೊಳ್ಳುವ ಶಕ್ತಿ ಹೆಚ್ಚುವಂತೆ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು.

5. ಪ್ರಸ್ತುತದಲ್ಲಿ ವಿತರಿಸುತ್ತಿರುವ ಆಹಾರ ಧಾನ್ಯ ಬಡಕುಟುಂಬಗಳ ಅಗತ್ಯಕ್ಕಿಂತ ತೀರ ಕಡಿಮೆ ಇದೆ. ಆದುದರಿಂದ ಸರ್ಕಾರ ಆಹಾರ ಧಾನ್ಯಗಳನ್ನು ನಿಗಧಿ ಪಡಿಸುವ ಮುಂಚೆ ಅವರ ಅಗತ್ಯತೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.

6. ಬಡಕುಟುಂಬಗಳು ಆಹಾರ ಧಾನ್ಯಗಳನ್ನು ಸರಿಯಾದ ಸಮಯದಲ್ಲಿ ಕೊಂಡುಕೊಳ್ಳಲು ಅಸಮರ್ಥರಿರುತ್ತಾರೆ. ಆದ ಕಾರಣ ಸರ್ಕಾರ ಈ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ಕೊಳ್ಳಲು ಸಾಲದ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಬೇಕು.

(ಕೃಪೆ: ಯೋಜನಾ ಮಾಸ ಪತ್ರಿಕೆ) 

★ 'ವಿಶ್ವ ಅರಣ್ಯ ದಿನ'ದ ಆಚರಣೆಯ ಕುರಿತು ವಿಶ್ಲೇಷಿಸಿ. (100 ಶಬ್ಧಗಳಲ್ಲಿ). (Analyze the celebration of the World Forest Day)


★ 'ವಿಶ್ವ ಅರಣ್ಯ ದಿನ'ದ ಆಚರಣೆಯ ಕುರಿತು ವಿಶ್ಲೇಷಿಸಿ. (100 ಶಬ್ಧಗಳಲ್ಲಿ).
  (Analyze the celebration of the World Forest Day)

━━━━━━━━━━━━━━━━━━━━━━━━━━━━━━━━━━━━━━━━━━━━━


★ ಪ್ರತಿ ವರ್ಷ ಮಾರ್ಚ್ 22 ನ್ನು ವಿಶ್ವ ಅರಣ್ಯ ದಿನವನ್ನಾಗಿ ಪ್ರಪಂಚದಲ್ಲೆಡೆ ಆಚರಿಸಲಾಗುತ್ತಿದೆ. ದೈನಂದಿನ ಜೀವನದಲ್ಲಿ ಅರಣ್ಯ ಸಂಪನ್ಮೂಲದ ಪಾತ್ರ ಮತ್ತು ಅದರ ವಿನಾಶದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವುಮೂಡಿಸುವ ಸಲುವಾಗಿ ಈ ದಿನವನ್ನು ಅರಣ್ಯ ದಿನವನ್ನಾಗಿ ಆಚರಿಸಲಾಗುವುದು. ಜಾಗತಿಕ ಮಟ್ಟದಲ್ಲಿ ಇಂದು ಮಾನವನ ಅತಿ ಆಸೆಯಿಂದ ಅರಣ್ಯ ಸಂಪನ್ಮೂಲ ಬರಿದಾಗುತ್ತಿರುವುದು ನೋವಿನ ಸಂಗತಿ.

★ ಪ್ರಮುಖ ಅಂಶಗಳು:
*.ಜಾಗತಿಕ ಮಟ್ಟದಲ್ಲಿ ಅರಣ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ದಿನದಂದು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

*.2011 ರ ಅರಣ್ಯ ವರದಿಯ ಪ್ರಕಾರ ಭಾರತ 78.29 ಮಿಲಿಯನ್ ಹೆಕ್ಟೇರ್ ನಷ್ಟು ಅರಣ್ಯವನ್ನು ಹೊಂದಿದೆ. ದೇಶದ ಓಟ್ಟು ಭೌಗೋಳಿಕ ಪ್ರದೇಶದಲ್ಲಿ ಅರಣ್ಯ ಪ್ರದೇಶದ ಪಾಲು ಶೇ.23.81 ರಷ್ಟಿದೆ.

*.ಭಾರತದ ರಾಜ್ಯಗಳ ಪೈಕಿ ಮಧ್ಯ ಪ್ರದೇಶ 77700 ಚದರ ಕೀ.ಮೀ ಅರಣ್ಯ ಪ್ರದೇಶವನ್ನು ಹೊಂದುವ ಮೂಲಕ ಅತಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದೆ. ಮಧ್ಯಪ್ರದೇಶದ ನಂತರ ಅರುಣಾಚಲ ಪ್ರದೇಶ ಎರಡನೇ ಸ್ಥಾನದಲ್ಲಿದೆ. ಅರುಣಾಚಲ ಪ್ರದೇಶದಲ್ಲಿ 67410 ಚದರ ಕೀ.ಮೀ ವಿಸ್ತೀರ್ಣ ಅರಣ್ಯದಿಂದ ಕೂಡಿದೆ.

★ ಪ್ರಸ್ತುತ ಚಾಲ್ತಿಯಲ್ಲಿರುವ 14ನೇ ಹಣಕಾಸು ಆಯೋಗದ ಕುರಿತು ಚರ್ಚಿಸಿ. (150 ಶಬ್ಧಗಳಲ್ಲಿ) (The 14th Finance Commission)


★ ಪ್ರಸ್ತುತ ಚಾಲ್ತಿಯಲ್ಲಿರುವ 14ನೇ ಹಣಕಾಸು ಆಯೋಗದ ಕುರಿತು ಚರ್ಚಿಸಿ. (150 ಶಬ್ಧಗಳಲ್ಲಿ)
(The 14th Finance Commission)

━━━━━━━━━━━━━━━━━━━━━━━━━━━━━━━━━━━━━━━━━━━━━

★ ರಿಸರ್ವ್‌ ಬ್ಯಾಂಕಿನ ನಿವೃತ್ತ ಗೌರ್ನರ್‌ ಡಾ.ವೈ.ವಿ. ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ 14ನೇ ಹಣಕಾಸು ಆಯೋಗವನ್ನು ರಚಿಸಲಾಗಿದ್ದು, ಈ ಸಂಬಂಧವಾಗಿ ಜನವರಿ 2, 2013ರಂದು ಹಣಕಾಸು ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಈ ಆಯೋಗದ ಅವಧಿ 31.10.2014 ರವರೆಗೆ ನಿಗದಿಯಾಗಿದ್ದು, ಅಷ್ಟರೊಳಗೆ ತನ್ನ ಶಿಫಾರಸ್ಸುಗಳನ್ನು ಸಲ್ಲಿಸಬೇಕಿರುತ್ತದೆ.


★ ಕಾರ್ಯ ಯಂತ್ರ:
ಪ್ರಸ್ತುತ 14ನೇ ಯೋಜನಾ ಆಯೋಗದ ಸದಸ್ಯ ಪೊ›. ಅಭಿಜಿತ್‌ ಸೆನ್‌, ಕೇಂದ್ರ ಹಣಕಾಸು ಮಾಜಿ ಕಾರ್ಯದರ್ಶಿ ಸುಷ್ಮಾನಾಥ್‌, ನವದೆಹಲಿಯ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್ ಪಬ್ಲಿಕ್‌ ಫೈನಾನ್ಸ್‌ ಆಂಡ್‌ ಪಾಲಿಸಿ ಸಂಸ್ಥೆಯ ನಿರ್ದೇಶಕ ಡಾ.ಎಂ. ಗೋವಿಂದ ರಾವ್‌, ರಾಷ್ಟ್ರೀಯ ಅಂಕಿ ಅಂಶ ಆಯೋಗದ ಮಾಜಿ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಸುದೀಪೊ ಮುಂಡ್ಲೆ ಅವರು ಈ ಹಣಕಾಸು ಆಯೋಗದ ಸದಸ್ಯರುಗಳಾಗಿದ್ದು, ಅಜಯ್‌ ನಾರಾಯಣ್‌ ಝಾ ಅವರು ಆಯೋಗದ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.


★ ಕಾರ್ಯಗಳು:
ಕೇಂದ್ರ ಮತ್ತು ರಾಜ್ಯಗಳ ನಡುವಿನ ಹಣಕಾಸು ಸಂಗತಿಗಳನ್ನು ಅಧ್ಯಯನ, ವಿತ್ತೀಯ ಸಂಗ್ರಹಣೆ, ನಿರ್ವಹಣೆ ಮತ್ತು ವಿತರಣೆ, ಸಹಾಯಧನ, ಪಂಚಾಯತ್‌ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನದ ಜವಾಬ್ದಾರಿ ಈ ಆಯೋಗದ್ದಾಗಿರುತ್ತದೆ. 13ನೇ ಹಣಕಾಸು ಆಯೋಗ ಮಾಡಿರುವ ಶಿಫಾರಸ್ಸುಗಳ ಅನುಷ್ಠಾನದಲ್ಲಿ ಉಂಟಾಗಿರಬಹುದಾದ ಸುಧಾರಣೆ ಅಥವಾ ನ್ಯೂನತೆಗಳನ್ನು ಸರಿದೂಗಿಸಿ 2015ರ ಏಪ್ರಿಲ್‌ನಿಂದ ಮುಂದಿನ ಐದು ವರ್ಷಗಳವರೆಗೆ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಂತಹ ಶಿಫಾರಸ್ಸುಗಳನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದು ಈ ಆಯೋಗದ ಮುಖ್ಯ ಕೆಲಸ.
***

Tuesday, 2 December 2014

★ ರಾಷ್ಟೀಯ ಆದಾಯ ಮತ್ತು ರಾಷ್ಟೀಯ ಆದಾಯದ ಮೂಲ ಪರಿಕಲ್ಪನೆಗಳು: (National Income and Concepts of National Income)


☀ರಾಷ್ಟೀಯ ಆದಾಯ ಮತ್ತು ರಾಷ್ಟೀಯ ಆದಾಯದ ಮೂಲ ಪರಿಕಲ್ಪನೆಗಳು:
(National Income and Concepts of National Income)


━━━━━━━━━━━━━━━━━━━━━━━━━━━━━━━━━━━━━━━━━━━━━

★ ಅರ್ಥಶಾಸ್ತ್ರ
(Economics)


★ 'ರಾಷ್ಟೀಯ ಆದಾಯ' ಎಂದರೇನು?
— ' ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್ಯವಾಗಿದೆ. ಅದು ಒಂದು ವರ್ಷದ ಅವಧಿಯಲ್ಲಿ ದೇಶವೊಂದು ಗಳಿಸುವ ಸಮಗ್ರ ಆದಾಯವಾಗಿರುತ್ತದೆ.'

— 'ರಾಷ್ಟೀಯ ಆದಾಯ' ವನ್ನು 'ರಾಷ್ಟೀಯ ಭಾಜ್ಯಾಂಶ'(National dividend), 'ರಾಷ್ಟೀಯ ಉತ್ಪನ್ನ'(National Output) , 'ರಾಷ್ಟೀಯ ವೆಚ್ಚ' (National Expenditure) ಎಂಬ ಪದಗಳಿಗೆ ಪರ್ಯಾಯ ಪದವನ್ನಾಗಿ ಬಳಸಲಾಗುತ್ತಿದೆ.

━━━━━━━━━━━━━━━━━━━━━━━━━━━━━━━━━━━━━━━━━━━━━


                                ★ ರಾಷ್ಟೀಯ ಆದಾಯದ ಮೂಲ ಪರಿಕಲ್ಪನೆಗಳು ★
                                        (Concepts of National Income):


1) ಒಟ್ಟು ರಾಷ್ಟೀಯ ಉತ್ಪನ್ನ (Gross National Product—GNP) ಎಂದರೇನು?
★ ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶವೊಂದು ಉತ್ಪಾದಿಸುವ ಸರಕು ಮತ್ತು ಸೇವೆಗಳ ಸಮಗ್ರ ಮೌಲ್ಯವೇ ಒಟ್ಟು ರಾಷ್ಟೀಯ ಉತ್ಪನ್ನ.

—> ಒಟ್ಟು ರಾಷ್ಟೀಯ ಉತ್ಪನ್ನ = ನಿವ್ವಳ ರಾಷ್ಟೀಯ ಉತ್ಪನ್ನ + ಸವಕಳಿ ವೆಚ್ಚ (Depreciation Cost)

━━━━━━━━━━━━━━━━━━━━━━━━━━━━━━━━━━━━━━━━━━━━━


2)  ನಿವ್ವಳ ರಾಷ್ಟೀಯ ಉತ್ಪನ್ನ (Net National Product—NNP) ಎಂದರೇನು?
★ ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಮಾಡಲಾದ ನಿವ್ವಳ ಉತ್ಪಾದನೆಯ ಮಾರುಕಟ್ಟೆಯ ಮೌಲ್ಯವನ್ನು 'ನಿವ್ವಳ ರಾಷ್ಟೀಯ ಉತ್ಪನ್ನ' ಎನ್ನಲಾಗುತ್ತದೆ.

—>  ನಿವ್ವಳ ರಾಷ್ಟೀಯ ಉತ್ಪನ್ನ =  ಒಟ್ಟು ರಾಷ್ಟೀಯ ಉತ್ಪನ್ನ -ಸವಕಳಿ ವೆಚ್ಚ.

━━━━━━━━━━━━━━━━━━━━━━━━━━━━━━━━━━━━━━━━━━━━━


3) ಒಟ್ಟು ದೇಶಿಯ ಉತ್ಪನ್ನ (Gross Domestic Product—GDP) ಎಂದರೇನು?
★ ಒಟ್ಟು ದೇಶಿಯ ಉತ್ಪನ್ನವು ಆರ್ಥಿಕತೆಯೊಂದು ಒಂದು ವರ್ಷದಲ್ಲಿ ಉತ್ಪಾದಿಸಿದ ಸರಕು ಮತ್ತು ಸೇವೆಗಳ ಪರಿಚಲನೆಯ ಮಾಪನವಾಗಿದೆ.

★ ಅದು ಸರಕು ಮತ್ತು ಸೇವೆಗಳ ಉತ್ಪಾದನೆಯನ್ನು ಮಾರುಕಟ್ಟೆ ಬೆಲೆಗಳಲ್ಲಿ ಮೌಲ್ಯದ ಅಂದಾಜು ಮಾಡಿ ಒಟ್ಟುಗೂಡಿಸುವ ಮೂಲಕ ಪಡೆಯಲಾಗುತ್ತದೆ.

━━━━━━━━━━━━━━━━━━━━━━━━━━━━━━━━━━━━━━━━━━━━━


4) ನಿವ್ವಳ ದೇಶಿಯ ಉತ್ಪನ್ನ (Net Domestic Product—NDP) ಎಂದರೇನು?

★ ಮಾರುಕಟ್ಟೆ ಬೆಲೆಯಲ್ಲಿ ನಿವ್ವಳ ದೇಶಿಯ ಉತ್ಪನ್ನ ಎಂದರೆ ದೇಶದೊಳಗಡೆ ಉತ್ಪಾದಿಸಲಾದ ಸರಕು ಮತ್ತು ಸೇವೆಗಳ ಸವಕಳಿ ವೆಚ್ಚವನ್ನು ಹೊರತುಪಡಿಸಿದ ನಿವ್ವಳ ಮಾರುಕಟ್ಟೆ ಮೌಲ್ಯವಾಗಿದೆ.

★ ಉತ್ಪಾದನಾಂಗ ವೆಚ್ಚದಲ್ಲಿನ ನಿವ್ವಳ ದೇಶಿಯ ಉತ್ಪನ್ನ ಎಂದರೆ ಉತ್ಪಾದನಾಂಗಗಳು ಪಡೆಯುವ ಆದಾಯಗಳ ಮೊತ್ತವನ್ನು ಪ್ರತಿನಿಧಿಸುವ ದೇಶದೊಳಗಡೆ ಉತ್ಪಾದಿಸಿದ ಸರಕು ಮತ್ತು ಸೇವೆಗಳ ನಿವ್ವಳ ಮೌಲ್ಯವಾಗಿದೆ.

★  ನಿವ್ವಳ ದೇಶಿಯ ಉತ್ಪನ್ನವನ್ನು ಕಂಡು ಹಿಡಿಯಲು ಈ ಕೆಳಗಿನ ಸೂತ್ರವನ್ನು ಬಳಸಲಾಗುತ್ತದೆ.

—>  ಮಾರುಕಟ್ಟೆ ಬೆಲೆಯಲ್ಲಿ NDP = ಮಾರುಕಟ್ಟೆ ಬೆಲೆಯಲ್ಲಿ GDP - ಸವಕಳಿ ವೆಚ್ಚ.

—>  ಉತ್ಪಾದನಾಂಗ ವೆಚ್ಚದಲ್ಲಿ NDP = ಮಾರುಕಟ್ಟೆ ಬೆಲೆಯಲ್ಲಿ NDP - ಪರೋಕ್ಷ ತೆರಿಗೆ + ಸಹಾಯಧನ.

━━━━━━━━━━━━━━━━━━━━━━━━━━━━━━━━━━━━━━━━━━━━━


5) ನಾಮರೂಪಿ(ಹಣರೂಪಿ) ಆದಾಯ (Nominal National Income) ಎಂದರೇನು?
★ ಪ್ರಸ್ತುತ ಬೆಲೆಗಳಲ್ಲಿ ಅಂದಾಜು ಮಾಡಲಾದ ರಾಷ್ಟೀಯ ಆದಾಯವನ್ನು ನಾಮರೂಪಿ(ಹಣರೂಪಿ) ಆದಾಯ ಎನ್ನಲಾಗುತ್ತದೆ.

━━━━━━━━━━━━━━━━━━━━━━━━━━━━━━━━━━━━━━━━━━━━━


6) ನೈಜ ರಾಷ್ಟೀಯ ಆದಾಯ (Real National Income) ಎಂದರೇನು?
★ ಆಧಾರ ವರ್ಷವನ್ನಾಗಿ ತೆಗೆದುಕೊಂಡ ವರ್ಷದ ಸಾಮಾನ್ಯ ಬೆಲೆಯ ಮಟ್ಟದ ಮುಖೇನ ವ್ಯಕ್ತಪಡಿಸಲಾಗುವ ರಾಷ್ಟೀಯ ಆದಾಯವನ್ನು ನೈಜ ರಾಷ್ಟೀಯ ಆದಾಯ ಎನ್ನಲಾಗುತ್ತದೆ.

━━━━━━━━━━━━━━━━━━━━━━━━━━━━━━━━━━━━━━━━━━━━━


7) ತಲಾ ಆದಾಯ (Percapita Income) ಎಂದರೇನು?
★ ಒಂದು  ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯ ಒಂದು ವರ್ಷದ ಸರಾಸರಿ ಆದಾಯವನ್ನು ತಲಾ ಆದಾಯ ಎನ್ನಲಾಗುತ್ತದೆ.

★ ತಲಾ ಆದಾಯವನ್ನು ಕಂಡು ಹಿಡಿಯಲು ಈ ಕೆಳಗಿನ ಸೂತ್ರವನ್ನು ಬಳಸಲಾಗುತ್ತದೆ.

                 ರಾಷ್ಟೀಯ ಆದಾಯ
—> ತಲಾ ಆದಾಯ =    —————————
                   ಒಟ್ಟು ಜನಸಂಖ್ಯೆ

★ ನ್ಯೂಟನ್ ಚಲನೆಯ ಮೂರು (3) ನಿಯಮಗಳು: (Newton's Three Laws of Motion)


★ ನ್ಯೂಟನ್ ಚಲನೆಯ ಮೂರು (3) ನಿಯಮಗಳು:
(Newton's Three Laws of Motion)

━━━━━━━━━━━━━━━━━━━━━━━━━━━━━━━━━━━━━━━━━━━━━


1) ನ್ಯೂಟನ್ ನ ಮೊದಲನೆಯ ನಿಯಮ:
★ ಒಂದು ಕಾಯದ ಮೇಲೆ ಬಲ ಪ್ರಯೋಗವಾದಾಗ ಮಾತ್ರ ಅದು ತನ್ನ ಸ್ಥಾನವನ್ನು ಬದಲಿಸುತ್ತದೆ. ಇಲ್ಲದಿದ್ದರೆ, ಅದು ತಾನಿದ್ದ ಸ್ಥಾನದಲ್ಲಿಯೂ ಇರುತ್ತದೆ.
— ಅನ್ವಯಗಳು:
*.ರತ್ನಗಂಬಳಿಯನ್ನು ತೂರಿದಾಗ ಧೂಳಿನ ಕಣಗಳು ಹೊರ ಬರುವದು.
*.ಚಲಿಸುತ್ತಿರುವ ಬಸ್ಸಲ್ಲಿ ಕುಳಿತಾಗ ಬ್ರೇಕ್ ಹಾಕಿದಾಗ, ಮುಂದಕ್ಕೆ ಚಲಿಸುವುದು.

★ ನ್ಯೂಟನ್ ನ ಮೊದಲನೆಯ ನಿಯಮವನ್ನು 'ಜಡತ್ವ ನಿಯಮ' ಎಂದು ಕರೆಯಲಾಗುತ್ತದೆ.


2) ನ್ಯೂಟನ್ ನ ಎರಡನೇಯ ನಿಯಮ:
★ ಒಂದು ಕಾಯದ ವೇಗೋತ್ಕರ್ಷವು ಬಲಕ್ಕೆ ನೇರ ಅನುಪಾತದಲ್ಲಿ ಹಾಗೂ ರಾಶಿಗೆ ವಿಲೋಮ ಅನುಪಾತದಲ್ಲಿ ಇರುತ್ತದೆ.
— ಅನ್ವಯಗಳು:
*.ಗ್ರಹಗಳ ಚಲನೆಯಲ್ಲಿ, ಕ್ರಿಕೇಟ್ ಆಟದಲ್ಲಿ, ಬಾವಿಯಿಂದ ನೀರು ಎತ್ತುವಾಗ.


3) ನ್ಯೂಟನ್ ನ ಮೂರನೇಯ ನಿಯಮ:
★ ಪ್ರತಿಯೊಂದು ಕ್ರಿಯೆಗೆ ಅದಕ್ಕ ಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ.
— ಅನ್ವಯಗಳು:
ರಾಕೆಟ್ ಉಡಾವಣೆಯಲ್ಲಿ, ಮಾನವನ ಚಲನೆಯಲ್ಲಿ, ದೋಣಿಗಳ ಚಲನೆಯಲ್ಲಿ.

Monday, 17 November 2014

★ ಸಿವಿಲ್ ಪೊಲೀಸ್ ನೇಮಕಾತಿ ಪರೀಕ್ಷೆ 2014 ರ ಉತ್ತರಗಳು: (CIVIL POLICE CET KEY ANSWERS 2014)


POLCET-2014  

★ ಸಿವಿಲ್ ಪೊಲೀಸ್ ನೇಮಕಾತಿ ಪರೀಕ್ಷೆ 2014 ರ ಉತ್ತರಗಳು:                    
(CIVIL POLICE CET KEY ANSWERS 2014)                                                            

1. ಬಾದಾಮಿಯಲ್ಲಿ ಬೃಹತ್ ಗುಡ್ಡವನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು ಯಾರು?
— ಚಾಲುಕ್ಯರು

2. ಹೊಯ್ಸಳರ ರಾಜಧಾನಿ ಯಾವುದು?
— ದ್ವಾರಸಮುದ್ರ

3. ಮಧ್ಯಕಾಲೀನ ಭಾರತದ ಮೊದಲ ಮುಸ್ಲಿಂ ಮಹಿಳಾ ಸಾಮ್ರಾಜ್ಞಿ ಯಾರು?
— ರಜಿಯಾ ಬೇಗಂ

4. ಮಧ್ಯಕಾಲೀನ ಚಕ್ರವರ್ತಿಯಾದ ಅಕ್ಬರನ ಮೂಲ ಹೆಸರು ಯಾವುದು?
— ಜಲಾಲ್-ಉದ್-ದೀನ್ ಮಹಮದ್

5. ಯಾರನ್ನು ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ ಎಂದು ಪರಿಗಣಿಸಲಾಗಿದೆ?
— ಸರ್ ಎಂ ವಿಶ್ವೇಶ್ವರಯ್ಯ
6. ______________ ನು ಬರೆದ ಕವಿರಾಜಮಾರ್ಗದಲ್ಲಿ ಕರ್ನಾಟಕವು ದಕ್ಷಿಣದಲ್ಲಿ ಕಾವೇರಿ ನದಿಯಿಂದ ಉತ್ತರದಲ್ಲಿ ಗೋದಾವರಿಯವರೆಗೂ ವಿಸ್ತರಿಸಿದ್ದ ಬಗ್ಗೆ ಉಲ್ಲೇಖವಿದೆ.
— ಶ್ರೀ ವಿಜಯ

7. ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ ಪಳೆಯುಳಿಕೆಗಳನ್ನು ಯಾವ ವಿಧಾನಗಳಿಂದ ವೆಜ್ನಾನಿಕ ಪರಿಕ್ಷೆಗೊಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ.?
— ಕಾರ್ಬನ್ 14 ಮತ್ತು ಪೊಟ್ಯಾಷಿಯಂ                                                                  
8.ಪಂಚಾಕ್ಷರಿ ಗವಾಯಿರವರು ಯಾವ ಸಂಗೀತ ಪರಂಪರೆಗೆ ಸೇರಿದವರು ?
— ಹಿಂದೂಸ್ಥಾನಿ ಸಂಗೀತ                                                                              
9.ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ :
ಎ) ಚಾಂದ್ ಬರ್ದಾಯಿ     1. ವಿಕ್ರಮಾಂಕದೇವಚರಿತ
ಬಿ) ಬಿಲ್ಹಣ                    2. ಅರ್ಥಶಾಸ್ತ್ರ
ಸಿ) ಕಲ್ಹಣ                    3. ಪೃಥ್ವಿರಾಜರಾಸೋ
ಡಿ) ಕೌಟಿಲ್ಯ                  4. ರಾಜತರಂಗಿಣಿ
ಉತ್ತರ:    ಎ-3, ಬಿ-1, ಸಿ-4, ಡಿ-2                                                                    
10. ಈ ಕೆಳಗೆ ಹೆಸರಿಸಿರುವ ಯಾವ ಪ್ರದೇಶವು ಕರ್ನಾಟಕದ ನವಶಿಲಾಯುಗ ತಾಣವಾಗಿರುವುದಿಲ್ಲ?
— ಬಾದಾಮಿ

11. ಭಾರತ ಸಂವಿಧಾನದ 24ನೇ ವಿಧಿಯ ಪ್ರಕಾರ ಎಷ್ಟು ವರ್ಷಕ್ಕಿಂತ ಕಿರಿಯ ವಯಸ್ಸಿನ ಮಕ್ಕಳನ್ನು ದುಡಿಮೆಗೆ ನೇಮಿಸುವುದನ್ನು ನಿಷೇಧಿಸಲಾಗಿದೆ?    
— 14 ವರ್ಷ

12. ನಮ್ಮ ಸಂವಿಧಾನದ ಯಾವ ವಿಧಿಯು ಅಸ್ಪೃಷ್ಯತಾ ಆಚರಣೆಯನ್ನು ತೊಡೆದು ಹಾಕಿದೆ?
— 17 ನೇ ವಿಧಿ

13. ಕೆಳಗಿನ ರಾಷ್ಟ್ರಗಳ ಪೈಕಿ ಯಾವ ರಾಷ್ಟ್ರವು ಭಾರತದೊಂದಿಗೆ ಅತ್ಯಂತ ಉದ್ದನೆಯ ಗಡಿ ಹೊಂದಿದೆ?
— ಬಾಂಗ್ಲಾದೇಶ

14. ಹಿಮಾಲಯ ಪರ್ವತ ಶ್ರೇಣಿಯು ಪಶ್ಚಿಮದಲ್ಲಿ __________ ದಿಂದ ಪ್ರಾರಂಭವಾಗುತ್ತದೆ?
— ಪಾಮಿರ್ ಗ್ರಂಥಿ

15. ಭಾರತದ ಪಶ್ಚಿಮ ಕರಾವಳಿ ತೀರದಲ್ಲಿ _______________ ಇದೆ.
— ಅರಬ್ಬೀ ಸಮುದ್ರ

16. ಸಿಂಧೂ ನಾಗರೀಕತೆಯ ವಿಶಿಷ್ಟ ಲಕ್ಷಣ ಯಾವುದು?
— ನಗರ ಯೋಜನೆ

17. ಜೈನ ಧರ್ಮದ ಮೊತ್ತಮೊದಲ ತೀರ್ಥಂಕರ ಯಾರು?
— ವೃಷಭನಾಥ

18. ಬೌದ್ಧ ಧರ್ಮವನ್ನು ಹರಡಲು ಅಫಘಾನಿಸ್ಥಾನ, ಬರ್ಮಾ, ಶ್ರೀಲಂಕಾ ಮತ್ತು ಯೂರೋಪಿಗೆ ನಿಯೋಗಗಳನ್ನು ಕಳುಹಿಸಿದ ದೊರೆ ಯಾರು?
— ಅಶೋಕ

19. ಪ್ರಾಚೀನ ಭಾರತದ ಶ್ರೇಷ್ಠ ಗಣಿತಶಾಸ್ತ್ರಜ್ಞ ಮತ್ತು ಖಗೋಳ ವಿಜ್ಞಾನಿ ಯಾರು?
— ಆರ್ಯಭಟ

20. _________ ರವರು ವೃತ್ತಿ ರಂಗಭೂಮಿ ಕ್ಷೇತ್ರದಲ್ಲಿ ಖ್ಯಾತನಾಮರಾಗಿದ್ದಾರೆ?
— ಮಾಸ್ಟರ್ ಹಿರಣ್ಣಯ್ಯ

21. ಈ ಕೆಳಗಿನವುಗಳಲ್ಲಿ ಯಾವುದು ವಾಣಿಜ್ಯ ಬೆಳೆ?
— ರಬ್ಬರ್

22. ಈ ಕೆಳಗಿನವುಗಳಲ್ಲಿ ಯಾವುದು ಅಣು ಖನಿಜ?
— ಯುರೇನಿಯಂ

23. ಮರ್ಮಗೋವಾ ಬಂದರು ಯಾವ ರಾಜ್ಯದಲ್ಲಿದೆ?
— ಗೋವಾ

24. ಪ್ರಪಂಚದ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ ಯಾವುದು?
— ಬ್ರೆಜಿಲ್

25. 2011 ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ
— 121 ಕೋಟಿ

26. ಈ ಕೆಳಕಂಡವರಲ್ಲಿ ಯಾರು ಕನ್ನಡದ ಖ್ಯಾತ ಸಿನಿಮಾ ನಿರ್ದೇಶಕರಗಿರುತ್ತಾರೆ?
— ನಾಗಾಭರಣ                                                                            

27.ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಭಂದಿಸಿದಂತೆ ಈ ಕೆಳಕಂಡ ಯಾವ ವ್ಯಕ್ತಿಯೂ ಕ್ರಾಂತಿಕಾರಿ ಆಗಿರಲಿಲ್ಲ?
— ದಾದಾಭಾಯ್ ನವರೋಜಿ

28.ಗಾಂಧೀಜಿಯವರ ಪ್ರಸಿದ್ದ ‘ ಉಪ್ಪಿನ ಸತ್ಯಾಗ್ರಹ ‘ ಅಥವಾ ‘ ದಂಡಿ ಸತ್ತಯಾಗ್ರಹ ‘ವು ಯಾವ ವರ್ಷ ಆರಂಭವಾಯಿತು?
— 1930

29.ಸುಭಾಷ್ ಚಂದ್ರಬೋಸ್ ರವರು-----ಎಂದು ಪ್ರಖ್ಯಾತರಾಗಿದ್ದರು?
— ನೇತಾಜಿ

30.ಬಾಂಬೆ ಶಾಸನಸಭೆಗೆ ರಾಜೀನಾಮೆ ನೀಡಿ,ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣವನ್ನು ಒತ್ತಾಯಿಸಿ ಆಮರಣಾಂತ ಉಪವಾಸವನ್ನು ಆರಂಭಿಸಿದವರು ಯಾರು?
— ಅಂದಾನಪ್ಪ ದೊಡ್ಡಮೇಟಿ

31. A x B = C ಆಗಿದ್ದು A=7  ಮತ್ತು C=0 ಆದರೆ, B=?
— 0

32. ಈ ಸರಣಿಯ ಮುಂದಿನ ಸಂಖ್ಯೆಯನ್ನು ಬರೆಯಿರಿ.                
5, 12, 4, 13, 3, 14,  -
— 2

33. ಪೋಕ್ರಾನ್ ಯಾವ ರಾಜ್ಯದಲ್ಲಿದೆ?
— ರಾಜಸ್ಥಾನ

34. ನವೆಂಬರ್ 2013 ನೇ ಸಾಲಿನಲ್ಲಿ ಖ್ಯಾತ ವಿಜ್ಞಾನಿ ಪ್ರೊಫೆಸರ್ ಸಿ.ಎನ್.ಆರ್. ರಾವ್ ಅವರಿಗೆ ಯಾವ ಪ್ರಶಸ್ತಿ ಲಭಿಸಿತು?
— ಭಾರತರತ್ನ

35. ಬಯೋಕಾನ್ ಸಂಸ್ಥೆಯ ಸಂಸ್ಥಾಪಕರು ಯಾರು?
— ಕಿರಣ್ ಮಜುಂದಾರ್ ಷಾ

36. ನೈರುತ್ಯ ಮಾನ್ಸೂನ್ ಮಳೆಗಾಲ ________ ಅವಧಿಯಲ್ಲಿ ಬರುತ್ತದೆ.
— ಜೂನ್ ನಿಂದ ಸೆಪ್ಟೆಂಬರ್

37. ಯಾವ ಮಣ್ಣು ಹತ್ತಿ ಬೆಳೆಗೆ ಬಹು ಸೂಕ್ತವಾಗಿರುತ್ತದೆ?
— ಕಪ್ಪು ಮಣ್ಣು

38. ಕರ್ನಾಟಕದ ಯಾವ ಪ್ರದೇಶವನ್ನು ‘ಯುನೆಸ್ಕೋ’ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲಾಗಿದೆ?
— ಪಶ್ಚಿಮ ಘಟ್ಟಗಳು

39. ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ.
ಎ) ಕಾಂಜಿರಂಗ ನ್ಯಾಷನಲ್ ಪಾರ್ಕ್           1) ಪಶ್ಚಿಮ ಬಂಗಾಳ
ಬಿ) ಸುಂದರಬನ                               2) ಗುಜರಾತ್
ಸಿ) ಹಜಾರಿಬಾಗ್ ನ್ಯಾಷನಲ್ ಪಾರ್ಕ್         3) ಅಸ್ಸಾಂ
ಡಿ) ಗಿರ್ ನ್ಯಾಷನಲ್ ಪಾರ್ಕ್                   4) ಬಿಹಾರ
— ಉತ್ತರ:  ಎ-3, ಬಿ-1, ಸಿ-4, ಡಿ-2

40. ವಿವಿಧೋದ್ದೇಶ ನದಿಕಣಿವೆ ಯೋಜನೆಯ ಉದ್ದೇಶ
— ಮೇಲ್ಕಂಡ ಎಲ್ಲವೂ


41. ಸುನೀತಾ ವಿಲಿಯಮ್ಸ್ ರವರು ಯಾವ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿದ್ದಾರೆ?
— ನಾಸಾ

42.UNESCO ವನ್ನು ಬಿಡಿಸಿ ಬರೆಯಿರಿ.
— ಯುನೈಟೆಡ್ ನೇಷನ್ಸ್ ಎಜುಕೇಷನಲ್ ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಜೇಷನ್

43.ವಿಮಾನಗಳಲ್ಲಿ ಕಂಡುಬರುವ ‘ಬ್ಲಾಕ್ ಬಾಕ್ಸ್‘ ನ ನಿಜವಾದ ಬಣ್ಣ ಯಾವುದು?
— ಕಿತ್ತಳೆ ಬಣ್ಣ

44. ಚೀನಾ ದೇಶದ ಅಧಿಕೃತ ಭಾಷೆ ಯಾವುದು?
— ಮಂಡಾರಿನ್

45. ರಾಫೆಲ್ ನಡಾಲ್ ಯಾವ ಕ್ರೀಡೆಗೆ ಸಂಬಂಧಪಟ್ಟಿದ್ದಾರೆ?
— ಟೆನಿಸ್

46.        9           18         27
              8           16         ?
— 24

47. 10 ಜನರು 20 ಮನೆಗಳನ್ನು 30 ದಿನಗಳಲ್ಲಿ ಪೂರೈಸಿದರೆ, 5 ಜನರು 10 ಮನೆಗಳನ್ನು ನಿರ್ಮಿಸಲು ಎಷ್ಟುದಿನ ಬೇಕಾಗುವುದು?
— 30 ದಿನಗಳು

48. X ಎಂಬಾತನು ಗಣಿತದಲ್ಲಿ ಪಡೆದ ಅಂಕಗಳ ಮೂರನೇ ಒಂದು ಭಾಗದಷ್ಟು ಅಂಕಗಳನ್ನು ಹಿಂದಿ ಭಾಷೆಯಲ್ಲಿ ಪಡೆದಿರುತ್ತಾನೆ. ಅವನು ಈ ಎರಡೂ ವಿಷಯಗಳನ್ನು ಸೇರಿಸಿ ಗಳಿಸಿದ ಒಟ್ಟು ಅಂಕಗಳು 120 ಆಗಿದ್ದಲ್ಲಿ ಆತನು ಹಿಂದಿ ಭಾಷೆಯಲ್ಲಿ ಪಡೆದ ಅಂಕಗಳೆಷ್ಟು?
— 30

49. ಬಿಟ್ಟ ಸ್ಥಳ ಭರ್ತಿ ಮಾಡಿ. 3x3=18, 4x4=32, 5x5=50 ಆದರೆ 6x6=?
— 72

50. ಸಾಂಕೇತಿಕ ಭಾಷೆಯಲ್ಲಿ A ಯು C, C ಯು E ಮತ್ತು D ಯು F ಆದರೆ X ಯು
— Z

51. ವಾತಾವರಣದ ತಾಪದ ಬದಲಾವಣೆಗೆ ಅನುಗುಣವಾಗಿ ತಮ್ಮ ದೇಹದ ತಾಪವನ್ನು ಬದಲಾಯಿಸಿಕೊಳ್ಳುವ ಶೀತರಕ್ತ ಪ್ರಾಣಿಗಳ ವರ್ಗವನ್ನು ಏನೆಂದು ಕರೆಯುತ್ತಾರೆ?
— ಪೈಸಿಸ್ (Pisces)

52. ಈ ಕೆಳಗಿನವುಗಳಲ್ಲಿ ಯಾವುದು ಹಾರಬಲ್ಲ ಸಸ್ತನಿಯಾಗಿರುತ್ತದೆ?
— ಬಾವಲಿ

53. ಬಿದಿರು ಅತ್ಯಂತ ಎತ್ತರದ
— ಹುಲ್ಲು

54. ಎಬೋಲಾ ಸೋಂಕು ಯಾವುದರಿಂದ ಉಂಟಾಗುತ್ತದೆ?
— ವೈರಾಣು

55. ಯಾವುದು ಬಣ್ಣವಿಲ್ಲದ, ವಾಸನೆ ಇಲ್ಲದ ವಿಷಕಾರಿ ಅನಿಲ?
— ಕಾರ್ಬನ್ ಮೊನಾಕ್ಸೈಡ್

56. ವಿಶ್ವ ಸಂಸ್ಥೆಯ ಕೇಂದ್ರ ಸ್ಥಾನ ಎಲ್ಲಿದೆ?
— ನ್ಯೂಯಾರ್ಕ್ (ಯು.ಎಸ್.ಎ.)

57. ಭಾರತದ ಉಪರಾಷ್ಟ್ರಪತಿಯವರು ____________ ರವರಿಂದ ಆರಿಸಲ್ಪಡುತ್ತಾರೆ.
— ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು

58. ಯಾರು ರಾಜ್ಯಸಭೆ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾರೆ?
— ಉಪ ರಾಷ್ಟ್ರಪತಿ

59. ಲೋಕಸಭೆಗೆ ಆಯ್ಕೆಯಾಗಲು ಇರುವ ಕನಿಷ್ಠ ವಯೋಮಾನ ________ ವರ್ಷಗಳು.
— 25

60. ಈ ಕೆಳಗಿನ ಯಾವ ಹಕ್ಕು ಮೂಲಭೂತ ಹಕ್ಕಾಗಿರುವುದಿಲ್ಲ?
— ನೌಕರಿಯ ಹಕ್ಕು

61. ಇಸ್ರೋ ಸಂಸ್ಥೆಯ ಪ್ರಸಕ್ತ  ಮುಖ್ಯಸ್ಥರು ಯಾರು?
— ಕೆ. ರಾಧಾಕೃಷ್ಣನ್

62. 2014 ನೇ ಸಾಲಿನ ಏಷ್ಯನ್ ಗೇಮ್ಸ್ ನಲ್ಲಿ ಪುರುಷರ ವಿಭಾಗದ 50 ಮೀ. ಪಿಸ್ತೂಲು ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪಡೆದವರು ಯಾರು?
— ಜೀತು ರಾಯ್

63. ‘ಭಾರತ ರತ್ನ’ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು?
— ಸಿ. ರಾಜಗೋಪಾಲಾಚಾರಿ

64. ಇತ್ತೀಚೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಕವಿ ಯಾರು?
— ಚಂದ್ರಶೇಖರ ಪಾಟೀಲ

65. ‘ಸಂಸ್ಕಾರ’ ಪುಸ್ತಕವನ್ನು ಬರೆದ ಲೇಖಕರು ಯಾರು?
— ಯು.ಆರ್.ಅನಂತಮೂರ್ತಿ

66. ಗಡಿ ಭದ್ರತಾ ಪಡೆ (BSF) ಇದೊಂದು,
— ಯಾವುದೂ ಅಲ್ಲ

67. ಗ್ರಾಮೀಣ ಪ್ರದೇಶಗಳಲ್ಲಿ _________ ಒಂದು ಸ್ವಚ್ಛ, ಮಾಲಿನ್ಯ ರಹಿತ ಮತ್ತು ಅಗ್ಗವಾದ ಶಕ್ತಿಯ ಆಕರವಾಗಿದೆ.
— ಬಯೋಗ್ಯಾಸ್

68. ಶಬ್ದವನ್ನು ಅಳೆಯುವ ಮಾನಕ್ಕೆ ಏನೆಮದು ಕರೆಯುತ್ತಾರೆ?
— ಡೆಸಿಬಲ್

69. ಈ ಕೆಳಗಿನವುಗಳಲ್ಲಿ ಯಾವುದು ಹಸಿರು ಮನೆಯ ಅನಿಲ ಆಗಿರುವುದಿಲ್ಲ.
— ಆಮ್ಲಜನಕ

70. ಅತಿಹೆಚ್ಚು ಕಾಲ ಬದುಕಬಲ್ಲ ಪ್ರಾಣಿ ಯಾವುದು?
— ಆಮೆ

71. ಭಾರತದ ಸರ್ವೋಚ್ಚ ನ್ಯಾಯಾಲಯದ ಇಂದಿನ ಮುಖ್ಯ ನ್ಯಾಯಮೂರ್ತಿಗಳು ಯಾರು?
— ಹೆಚ್.ಎಲ್.ದತ್ತು

72. ಭಾರತ ಸರ್ಕಾರದ ಇಂದಿನ ಹಣಕಾಸು ಸಚಿವರು ಯಾರು?
— ಅರುಣ್ ಜೇಟ್ಲಿ

73. ಈ ಕೆಳಗೆ ಹೆಸರಿಸಿರುವ ಯಾವ ಕ್ರೀಡಾಪಟುವಿಗೆ 2014ನೇ ಸಾಲಿನಲ್ಲಿ ‘ಅರ್ಜುನ ಪ್ರಶಸ್ತಿ’ ಬಂದಿರುತ್ತದೆ?
— ಗಿರೀಶ್ ಹೆಚ್.ಎನ್.

74. ‘ಲುಫ್ತಾನ್ಸಾ ಏರ್ ಲೈನ್ಸ್’ ಯಾವ ದೇಶದ ವಿಮಾನಯಾನ ಸಂಸ್ಥೆ?
— ಜರ್ಮನಿ

75. ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ಮೂರ್ತಿಯನ್ನು ಸ್ಥಾಪಿಸಿದವರು ಯಾರು?
— ಚಾವುಂಡರಾಯ

76. ಹೊಂದಿಸಿ ಬರೆಯಿರಿ:
ಎ) ಅಲ್ಯುಮಿನಿಯಂ                 1) ಬಳ್ಳಾರಿ
ಬಿ) ಕಬ್ಬಿಣ                          2) ಹಾಸನ
ಸಿ) ಚಿನ್ನ                            3) ಬೆಳಗಾವಿ
ಡಿ) ಕ್ರೋಮಿಯಂ                   4) ರಾಯಚೂರು
— ಡಿ) ಎ-3, ಬಿ-1, ಸಿ-4, ಡಿ-2

77. ಆಹಾರದಲ್ಲಿ ಅಯೋಡಿನ್ ಕೊರತೆಯಿಂದ ಯಾವ ಸಮಸ್ಯೆ ಉಂಟಾಗುತ್ತದೆ.
— ಸರಳ ಗಾಯಿಟರ್

78. ಪಿಟ್ಯೂಟರಿ ಗ್ರಂಥಿಯು ಮಾನವ ದೇಹದ ಯಾವ ಭಾಗದ ಒಳಗೆ ಇರುತ್ತದೆ?
— ತಲೆ

79. ಜೀವ ವಿಕಾಸದ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದಕ್ಕೆ ಅತ್ಯಂತ ಸಮ್ಮತ ವಿವರಣೆಯನ್ನು ನೀಡಿದ ವಿಜ್ಞಾನಿ ಯಾರು?
— ಚಾರ್ಲ್ಸ್ ಡಾರ್ವಿನ್

80. ಭಾರತೀಯ ರಿಸರ್ವ್ ಬ್ಯಾಂಕ್ ನ ಈಗಿನ ಮುಖ್ಯಸ್ಥರು ಯಾರು?
— ಡಾ. ರಘುರಾಮ್ ಜಿ. ರಾಜನ್

81. ಕರ್ನಾಟಕದ ಇಂದಿನ ರಾಜ್ಯಪಾಲರು ಯಾರು?
— ವಜುಭಾಯ್ ವಾಲ

82. ರಮೇಶನು ತನ್ನ ಕಾರಿನಲ್ಲಿ ‘ಎ’ ನಗರದಿಂದ ‘ಬಿ’ ನಗರಕ್ಕೆ ಗಂಟೆಗೆ ಸರಾಸರಿ 40 ಕಿ.ಮೀ. ವೇಗದಲ್ಲಿ ಪ್ರಯಾಣಿಸಿದ್ದು, ‘ಎ’ ನಗರದಿಂದ ‘ಬಿ’ ನಗರಕ್ಕಿರುವ ದೂರ 60 ಕಿ.ಮೀ. ಆಗಿರುತ್ತದೆ. ಹಾಗಾದರೆ ರಮೇಶನು ತನ್ನ ಕಾರಿನಲ್ಲಿ ‘ಎ’ ನಗರದಿಂದ ‘ಬಿ’ ನಗರಕ್ಕೆ ತಲುಪಲು ತೆಗೆದುಕೊಂಡ ಸಮಯ
— 90 ನಿಮಿಷಗಳು

83. ಈ ಸರಣಿಯ ಮುಂದಿನ ಸರಣಿಯನ್ನು ಬರೆಯಿರಿ, ACE, BDF, CEG, _____
— DFH

84. ಪೈಥಾಗೊರಾಸ್ ಪ್ರಮೇಯದ ವ್ಯಾಖ್ಯಾನ,
— ಒಂದು ಲಂಬಕೋನ ತ್ರಿಭುಜದಲ್ಲಿ, ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ಮೇಲಿನ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ.

85. ಕರ್ನಾಟಕದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ ಎಷ್ಟು?
— 30

86. ದ.ರಾ.ಬೇಂದ್ರೆಯವರ ಯಾವ ಕೃತಿಗೆ ‘ಜ್ಞಾನಪೀಠ ಪ್ರಶಸ್ತಿ’ ಲಭಿಸಿದೆ?
— ನಾಕುತಂತಿ

87. 2014 ನೇ ಸಾಲಿನ ಏಷ್ಯನ್ ಗೇಮ್ಸ್ ಎಲ್ಲಿ ನಡೆಯಿತು?
— ಇಂಚಿಯಾನ್ (ದಕ್ಷಿಣ ಕೊರಿಯಾ)

88. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪರವರ ಕಾವ್ಯನಾಮ ಯಾವುದು?
— ಕುವೆಂಪು

89. ಈ ಕೆಳಗೆ ಹೆಸರಿಸಿರುವ ಯಾರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಲಭಿಸಿದೆ?
— ಡಾ. ರಾಜ್ ಕುಮಾರ್

90. ಈ ಕೆಳಕಂಡ ಯಾವ ದೇಶಗಳಲ್ಲಿ 2015 ನೇ ಸಾಲಿನ ವಿಶ್ವಕಪ್ ಕ್ರಿಕೆಟ್ ನಡೆಯಲಿದೆ?
— ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್

91. ಕರ್ನಾಟಕ ಏಕೀಕರಣಗೊಂಡ ಬಳಿಕ ಅಧಿಕಾರಕ್ಕೆ ಬಂದ ಮೊದಲ ಮುಖ್ಯಮಂತ್ರಿ ಯಾರು?
— ಎಸ್. ನಿಜಲಿಂಗಪ್ಪ

92. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಏನೆಂದು ಮರುನಾಂಕರಣ ಮಾಡಲಾಗಿದೆ?
— ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

93. ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಸ್ಥಾನ ಎಲ್ಲಿದೆ?
— ಜಿನೆವಾ (ಸ್ವಿಡ್ಜರ್ ಲ್ಯಾಂಡ್)

94. ರಕ್ತದ ಒತ್ತಡವನ್ನ ಅಳೆಯುವ ಉಪಕರಣ ಯಾವುದು?
— ಸಿಗ್ಮೋಮಾನೋಮೀಟರ್

95. 1843 ರಲ್ಲಿ ಪ್ರಾರಂಭವಾದ ಕನ್ನಡ ಪತ್ರಿಕೋದ್ಯಮದ ಪ್ರಥಮ ಪತ್ರಿಕೆ ಯಾವುದು?
— ಮಂಗಳೂರು ಸಮಾಚಾರ

96. ಕನೌಜದ ರಾಜ ಹರ್ಷವರ್ಧನನನ್ನು ಸೋಲಿಸಿದ ರಾಜ ಯಾರು?
— ಇಮ್ಮಡಿ ಪುಲಕೇಶಿ

97. ‘ರಾಜೀವ್ ಗಾಂಧಿ ಖೇಲ್ ರತ್ನ’ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ಪಡೆದವರು ಯಾರು?
— ವಿಶ್ವನಾಥನ್ ಆನಂದ್

98. ಟಿಪ್ಪು ಸುಲ್ತಾನನು ಬ್ರಿಟಿಷರೊಂದಿಗೆ ಯುದ್ಧದಲ್ಲಿ ಹೋರಾಡುತ್ತಾ ಮೃತಪಟ್ಟ ವರ್ಷ ಯಾವುದು?
— 1799

99. ‘ಮೈಸೂರು ಸಂಸ್ಥಾನ’ವನ್ನು ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲ್ಪಟ್ಟ ವರ್ಷ ಯಾವುದು?
— 1973

100. ‘ಗೋಲ್ಡನ್ ಚಾರಿಯೇಟ್’ ಎಂದು ______________ ನ್ನು ಹೆಸರಿಸಲಾಗಿದೆ.
— ರೈಲು

( ಕೃಪೆ:  ಸಾಧನಾ ಕೋಚಿಂಗ್ ಸೆಂಟರ್,  ಶಿಕಾರಿಪುರ)

Tuesday, 4 November 2014

★ ಪ್ರಸ್ತುತ ಭಾರತದ ಹಳ್ಳಿಗಳ ಸ್ಥಿತಿಗತಿ - ಆವುಗಳ ಸರ್ವಾಂಗೀಣ ಅಭಿವೃದ್ದಿಗೆ ಇರುವ ಸವಾಲುಗಳು, ಪರಿಹಾರಗಳು.


★ ಪ್ರಸ್ತುತ ಭಾರತದ ಹಳ್ಳಿಗಳ ಸ್ಥಿತಿಗತಿ - ಆವುಗಳ ಸರ್ವಾಂಗೀಣ ಅಭಿವೃದ್ದಿಗೆ ಇರುವ ಸವಾಲುಗಳು,  ಪರಿಹಾರಗಳು.

ಭಾರತ ಹಳ್ಳಿಗಳ ದೇಶ, ಇದಕ್ಕೆ ಇಂಬು ಕೊಡಲೆಂದೇ ಇಂದಿಗೂ ಸುಮಾರು 70 ಕೋಟಿಯಷ್ಟು ಜನರು 6 ಲಕ್ಷಕ್ಕಿಂತ ಹೆಚ್ಚಿನ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ದೇಶದ ಅಭಿವೃದ್ದಿ ಬಹುವಾಗಿ ಈ ಭಾಗದ ಜನರ ಏಳ್ಗೆಯ ಮೇಲೆ ನಿಂತಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಅಲ್ಲಿನ ಜನರ ಬದುಕನ್ನು ಹೊಳಹೊಕ್ಕಿ ನೋಡಿದಾಗ ಕಂಡುಬರುವುದು ಹಸಿವು, ಬಾಯಾರಿಕೆ, ಕಿತ್ತು ತಿನ್ನುವ ಬಡತನ, ರೋಗ ಬಾಧೆಗಳಿಂದ ಸೊರಗಿದ ದೇಹ, ಮುಂದುವರಿದ ವರ್ಗದವರ ಅಮಾನವೀಯ ಶೋಷಣೆ, ಮತೀಯ ಗಲಭೆಗಳು, ಅವುಗಳಿಂದಲೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಸಮಾಜಘಾತಕ ಶಕ್ತಿಗಳು, ಭ್ರಷ್ಟ ಅಧಿಕಾರಿಗಳು ಜೊತೆಗೆ ಅವರ ನೆರಳಾಗಿ ನಿಂತಿರುವ ಹೊಲಸು ರಾಜಕೀಯ.

 21 ನೇ ಶತಮಾನದಲ್ಲೂ ಅನಕ್ಷರತೆ, ಅಸ್ಪೃಶ್ಯತೆ, ಅಂಧಕಾರ, ಹಾಗು ಗೊತ್ತು ಗುರಿಯಿಲ್ಲದ ಮೂಢನಂಬಿಕೆಗಳೇ ಮನೆಮಾಡಿವೆ. ಹೀಗಿರುವಾಗ ದೇಶದ ಅಭಿವೃದ್ದಿಯ ಕನಸು ಕಾಣುವುದಾದರೂ ಹೇಗೆ. ಕಳೆದೆರಡು ದಶಕಗಳ ಆರ್ಥಿಕ ಸುದಾರಣೆಯಿಂದ ದೇಶದ ಜನರ ಜೀವನ ಮಟ್ಟ ಗಮನಾರ್ಹ ರೀತಿಯಲ್ಲಿ ಸುದಾರಿಸುತ್ತಿದ್ದರೂ, ಗ್ರಾಮೀಣ ಜನರ ಬದುಕನ್ನು ನಗರವಾಸಿಗಳಿಗೆ ಹೋಲಿಸಿದಾಗ ಚಿಂತಾಜನಕವಾದ ಸ್ಥಿತಿ ಕಂಡು ಬರುವುದು ಸಾಮಾನ್ಯವಾಗಿದೆ.

ಸ್ವಾತಂತ್ರ್ಯ ಬಂದು 65 ವರ್ಷ ಕಳೆದರೂ ಅಲ್ಲಿನ ಬದುಕನ್ನು ಹಸನುಗೊಳಿಸಲು ಸಾಧ್ಯವಾಗದಿರುವುದು ನಮ್ಮನ್ನಾಳಿದ ಜನಪ್ರತಿನಿಧಿಗಳ ಯೋಜನೆಗಳು ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುವ ಅಧಿಕಾರಿಗಳ ಕರ್ತವ್ಯ ನಿಷ್ಠೆಯನ್ನು ಪ್ರತಿನಿಧಿಸುತ್ತದೆ. ಈ ನಾಗಾಲೋಟದಿಂದ ಓಡುತ್ತಿರುವ ಆಧುನಿಕ ಯುಗದಲ್ಲೂ ಹಳ್ಳಿಗಳ ಶೇ. ೫೦ ರಷ್ಟು ಮಂದಿ ಕೇವಲ ೨೦-೩೦ ರೂಪಾಯಿಗಳಲ್ಲಿ ತಮ್ಮ ದಿನವನ್ನು ದೂಡುತ್ತಿದ್ದಾರೆ ಎಂದರೆ ಅವರ ಜೀವನ ಮಟ್ಟವನ್ನು ಊಹಿಸಿಕೊಳ್ಳಲು ಕಷ್ಟವಾಗುತ್ತದೆ ಹಾಗೂ ಇದು ಸತ್ಯದ ಸಂಗತಿಯೆಂದು ತಿಳಿದಾಗ ಸಮಾಜದ ನಾಗರೀಕರಿಗೆ ನೋವಾಗುವುದು ಸಹಜ ವಿಚಾರ.

 ದಿನನಿತ್ಯದ ಬವಣೆಯನ್ನು ಎದುರಿಸುವ ಮಾರ್ಗೊಪಾಯಗಳಿಲ್ಲದೆ ಹುಟ್ಟಿ ಬೆಳೆದ ಪರಿಸರವನ್ನು ಬಿಟ್ಟು ಬದುಕುವ ದಾರಿಯನ್ನು ಹುಡುಕಿಕೊಂಡು ನಗರಗಳಿಗೆ ಹಾಗು ಇತರೆ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇವುಗಳನ್ನು ಹತ್ತಿಕ್ಕಲು ಗ್ರಾಮೀಣ ಪ್ರದೇಶಗಳ ಅಗತ್ಯಕ್ಕೆ ಅನುಗುಣವಾಗಿ ಮಾನಸಿಕ, ಭೌತಿಕ, ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಒದಗಿಸುವುದು ಮತ್ತು ಅವುಗಳನ್ನು ಸಮರ್ಪಕವಾಗಿ ಉಪಯೋಗಿಸುವ ಜವಾಬ್ದಾರಿಯನ್ನು ಬೆಳೆಸಬೇಕಾಗಿದೆ. ಪ್ರಾದೇಶಿಕ ಅಸಮತೋಲನ ಹೋಗಲಾಡಿಸಿ ಗ್ರಾಮೀಣ ಜನರಲ್ಲಿ ಬದುಕುವ ಧೈರ್ಯ ಹಾಗು ಉತ್ಸಾಹ ತುಂಬಿ ಸ್ವಾಭಿಮಾನಿ ಹಾಗು ಸ್ವಾವಲಂಭಿಗಳಾಗಿ ಬದುಕಲು ಆಸರೆಯಾಗಬೇಕಾಗಿದೆ. ಹೀಗಿರುವಾಗ ಇಂದಿನ ಆಡಳಿತರೂಡ ಸರ್ಕಾರಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳು, ತಂತ್ರಜ್ಞರು, ವಿಜ್ಞಾನಿಗಳು, ಚಿಂತನಶೀಲರು ಹಳ್ಳಿಗಳ ಬೆಳವಣಿಗೆಗೆ ಗಮನ ಹರಿಸಬೇಕಾಗಿರುವುದು ಒಂದು ಮುಖ್ಯ ವಿಚಾರವೇ ಸರಿ.

ಹಸಿರು ಕ್ರಾಂತಿಯು ಹಳ್ಳಿಗಳ ಅಭಿವೃದ್ಧಿಗೆ ಭಾರತದ ಬಹು ದೊಡ್ಡ ಕೊಡುಗೆ. ಇದು ದೇಶ ಆಹಾರ ತಯಾರಿಕೆಯಲ್ಲಿ ಸ್ವಾವಲಂಭಿಯಾಗಿ ನಿಲ್ಲಲು ಮತ್ತು ಗ್ರಾಮೀಣ ಜನರ ಜೀವನ ಮಟ್ಟ ಸುದಾರಿಸಲು ಸ್ವಲ್ಪ ಮಟ್ಟಿಗೆ ಸಹಕಾರಿಯಾಗಿದೆ, ಹಾಗು ಈ ನಿಟ್ಟಿನಲ್ಲಿ ಇತರ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ಕಣ್ಣು ತೆರೆಸುವಲ್ಲಿಯೂ ಯಶಸ್ಸನ್ನು ಕಂಡಿದೆ. ಹಾಗಿದ್ದರೂ ದೇಶದಲ್ಲಿ ೬೦ ದಶಲಕ್ಷ ಜನರು ಅತಿ ಮುಖ್ಯ ಜೀವನಾವಶ್ಯಕ ವಸ್ತುಗಳಾದ, ಮನೆ, ಪೌಷ್ಟಿಕಾಂಶ ಆಹಾರ, ಶುಚಿಯಾದ ಕುಡಿಯುವ ನೀರು, ನೈರ್ಮಲೀಕರಣ, ಆರೋಗ್ಯ, ಶಿಕ್ಷಣ, ಮತ್ತು ಉದ್ಯೋಗದಿಂದ ವಂಚಿತರಾಗಿದ್ದಾರೆ. ಹಳ್ಳಿಗಳಲ್ಲಿ ಬಡತನದಿಂದ ಜನರು ತತ್ತರಿಸಿದ್ದಾರೆ. ಗ್ರಾಮೀಣ ಜನರು, ಅದರಲ್ಲಿಯೂ ರೈತರು ಬದುಕಲು ಸಮಾನ ಅವಕಾಶಗಳಿಲ್ಲದೆ ಉಳಿವಿಗಾಗಿ ಹೋರಾಟ ಮಾಡಬೇಕಾದ ಪರಿಸ್ತಿತಿ ಏರ್ಪಟ್ಟಿದೆ. ದೇಶದ ಅನ್ನದಾತನ ಹೊಟ್ಟೆಯೇ ಬೆನ್ನಿಗೊಕ್ಕರೆ ಆಹಾರ ಸಮಸ್ಯೆಯನ್ನು ಬಗೆಹರಿಸುವುದಾದರು ಹೇಗೆ? ಬರುವ ದುಡಿಮೆಯ ಹಣ ದಿನ ನಿತ್ಯದ ಅಗತ್ಯತೆಗಳನ್ನು ಪೂರೈಸಲು ಸಾಕಾಗದೆ ಅವರ ಜೀವನ ಹೈರಾಣಾಗಿದೆ ಮತ್ತು ಅನೇಕ ಭಯಾನಕ ರೋಗ ರುಜಿನಗಳಿಂದ ನಳಲುತ್ತಿದ್ದಾರೆ.

ಶೇಕಡ ೬೦ ರಷ್ಟಿರುವ ಯುವಕರೇ ಭಾರತದ ಅತಿ ದೊಡ್ಡ ಸಂಪನ್ಮೂಲ.ಯುವಕರಿಂದ ಹೇರಳವಾಗಿ ದೊರೆಯುವ ನೈಸರ್ಗಿಕ ಹಾಗು ಇತರ ಸಂಪತ್ತನ್ನು ಬಳಸಿಕೊಂಡು ಶೈಕ್ಷಣಿಕ, ತಾಂತ್ರಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ ಗ್ರಾಮೀಣ ಭಾರತದ ಶಾಶ್ವತ ಅಭ್ಯುದಯಕ್ಕೆ ಸಹಕಾರಿಯಾಗಬೇಕಿದೆ. ಇಂತಹ ಯೋಜನೆಗಳನ್ನು ಸರ್ಕಾರ ಸಮರೋಪಾದಿಯಲ್ಲಿ ಹಮ್ಮಿಕೊಳ್ಳಬೇಕಾಗಿದೆ. ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮಬಾಳು ಎನ್ನುವುದು ಬರೀ ಮರೀಚಿಕೆಯಾಗಿದೆ.

ಪಾಶ್ಚಿಮಾತ್ಯ ದೇಶಗಳಲ್ಲಿರುವ ಹಾಗೆ ಹಳ್ಳಿ ಮತ್ತು ನಗರಗಳ ಮೂಲ ವ್ಯವಸ್ಥೆಗಳಲ್ಲಿನ ತಾರತಮ್ಯ ಹೋಗಲಾಡಿಸಿ, ಅಶಕ್ತರಿಗೆ (ಜಾತಿ ಧರ್ಮಗಳನ್ನು ಪರಿಗಣಿಸದೆ) ಜೀವನಾಗತ್ಯ ವಸ್ತುಗಳನ್ನು ದೊರಕಿಸಿಕೊಡಬೇಕು. ಅಧಿಕಾರಿಗಳ ಹಾಗು ಮೇಲ್ವರ್ಗದವರ ದುರಾಚಾರ, ದಬ್ಬಾಳಿಕೆ ಕೊನೆಗಾಣಬೇಕು. ಸರ್ಕಾರದಿಂದ ದೊರಕಬೇಕಾದ ಸಣ್ಣ ಪುಟ್ಟ ಕೆಲಸಗಳಿಗೂ ಲಂಚ ಕೊಟ್ಟು ಕೈಚಾಚಿ ನಿಲ್ಲುವುದು ದೂರವಾಗಬೇಕು.

ರೈತರು ದೇಶದ ಬೆನ್ನೆಲುಬು ಎನ್ನುವ ಸರ್ಕಾರಗಳೇ ಇತ್ತೀಚಿನ ದಿನಗಳಲ್ಲಿ ಅವನ ಬೆನ್ನೆಲುಬು ಮುರಿಯುತ್ತಿರುವುದನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿವೆ. ತನ್ನ ಬೆನ್ನೆಲುಬನ್ನು ಮುರಿದುಕೊಂದವನಿಗೆ ಇನ್ನಾರದೋ ಬೆನ್ನೆಲುಬಾಗಿ ನಿಲ್ಲುವ ಶಕ್ತಿಯು ಬರುವುದಾದರೂ ಹೇಗೆ? ಸರ್ಕಾರಿ ನೌಕರರಿಗಿರುವಂತೆ ಅವನಿಗೂ ವೇತನ ಆಯೋಗವೇಕಿರಬಾರದು? ಪ್ರಜಾಪ್ರಭುತ್ವ ದೇಶದಲ್ಲಿ ಇರಬೇಕಾದ ಸ್ಥಿತಿಗತಿಗಳು ನಿಜವಾಗಿಯೂ ನಮ್ಮ ಹಳ್ಳಿಗಳಲ್ಲಿ ಇದೆಯೇ?

★ ಆರೋಗ್ಯ:
ಗ್ರಾಮೀಣ ಜನರ ಆರೋಗ್ಯ ಸ್ಥಿತಿ ಚಿಂತಾಜನಕ. ಇದಕ್ಕೆ ಕಾರಗಳು ಅನೆಕ, ಬಡತನ, ಮನೆಯ ಸುತ್ತಲಿರುವ ಅವರೇ ನಿರ್ಮಿಸಿಕೊಂಡ ಪರಿಸರ, ಅವರಲ್ಲಿರುವ ಮೂಡನಂಭಿಕೆ, ಅನಕ್ಷರತೆ, ಆರೋಗ್ಯದ ಬಗ್ಗೆ ಕೊಡುವ ನಿರ್ಲಕ್ಷ್ಯ, ಹಾಗು ಸೂಕ್ತ ಕಾಲದಲ್ಲಿ ಸಿಗದಿರುವ ಆರೋಗ್ಯ ಸೇವೆ ಮುಖ್ಯವಾದವು. ದೇಶದಲ್ಲಿ ಭೀಕರ ಕಾಯಿಲೆಗಳಿಂದ ಮೃತಪಟ್ಟವರಲ್ಲಿ ಸುಮಾರು ೮೦ ರಷ್ಟು ಜನರು ಗ್ರಾಮೀಣ ಭಾಗದ ಅತೀ ಕಡು ಬಡವರಾಗಿದ್ದಾರೆ. ಕೆಮ್ಮು, ದಢಾರ, ಕ್ಷಯ, ಕಾಲರ, ಮಲೇರಿಯಾ, ನ್ಯುಮೋನಿಯಾ ಮುಂತಾದ ರೋಗಗಳನ್ನು ಅಗತ್ಯ ಶುಚಿತ್ವ ಕಾಪಾಡುವುದರಿಂದಲೂ ಮತ್ತು ರೋಗ ಉಲ್ಬಣ ಗೊಳ್ಳಲು ಅವಕಾಶ ಕೊಡದೆ ಅಗತ್ಯ ಔಷಧಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವುದರಿಂದಲೂ ತಡೆಗಟ್ಟಬಹುದು. ವೈದ್ಯರು, ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಅನೇಕ ಆರೋಗ್ಯ ಯೋಜನೆಗಳು ಗ್ರಾಮೀಣ ಪ್ರದೇಶಗಳಿಗೆ ತಲುಪಲು ವಿಪಲವಾಗಿದೆ.

• ನಿಯಮಿತ ಪೌಷ್ಟಿಕ ಆಹಾರ ಹಾಗು ವ್ಯಾಯಾಮಗಳ ಅಗತ್ಯತೆ ಬಗ್ಗೆ ಗಮನ
• ಎಲ್ಲ ಹಳ್ಳಿಗಳಿಗೂ ಆರೋಗ್ಯ ಕೇಂದ್ರ ಮತ್ತು ಅಗತ್ಯ ಸೇವೆಗಳ ಲಬ್ಯತೆ
• ಹೋಬಳಿ ಮತ್ತು ತಾಲ್ಲೂಕು ಮಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆಗಳಿರಬೇಕು
• ಮಹಿಳೆಯರು ಹಾಗು ಮಕ್ಕಳು ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಅಗತ್ಯ ಸೇವೆ
• ಆರೋಗ್ಯ ವಿಮೆಯನ್ನು ವಿನಾಯಿತಿ ದರದಲ್ಲಿ ದೊರಕಿಸಿಕೊಡಬೇಕು
• ಏಡ್ಸ್ ನಂತಹ ಭಯಾನಕ ರೋಗಗಳ ಬಗ್ಗೆ ಮಾಹಿತಿ
• ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು
• ಅಶುಚಿತ್ವದಿಂದ ತಗಲುವ ಸೋಂಕು ರೋಗಗಳ ಬಗ್ಗೆ ಎಚ್ಚರಿಕೆ
• ಧೂಮಪಾನ, ಮದ್ಯಪಾನಗಳಂತಹ ಕೆಟ್ಟ ಚಟಗಳು ಮತ್ತು ಅವುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅಗತ್ಯ ಮಾಹಿತಿ

★ ವಸತಿ :
ಹಳ್ಳಿಗಳಲ್ಲಿ ಶೇಕಡ ೨೦ ರಷ್ಟು ಜನರು ಈಗಲೂ ಗುಡಿಸಲು ಹಾಗು ಜೋಪಡಿಗಳಲ್ಲಿ ವಾಸಿಸುತ್ತಿದ್ದಾರೆ. ಇನ್ನಷ್ಟು ಮಂದಿಗೆ ಮನೆಗಳಿದ್ದರೆ ಅವು ನೆಪಮಾತ್ರಕ್ಕೆ, ಮಳೆಗಾಲದಲ್ಲಿ ಅವುಗಳ ಸ್ಥಿತಿ ದೇವರಿಗೆ ತೃಪ್ತಿಯಾಗಬೇಕು. ಮಳೆಗಾಲ ಕಳೆದು ಬದುಕುಳಿದರೆ ಸಾಕು ಎನ್ನುವ ಜೀವ ಭಯದಲ್ಲಿ ದಿನಗಳನ್ನು ಕಳೆಯಬೇಕಾಗಿದೆ. ಸರ್ಕಾರಗಳು ಪ್ರತಿ ವರ್ಷ ಗೃಹ ಯೋಜನೆಯಡಿಯಲ್ಲಿ ಅನೇಕ ಮನೆಗಳನ್ನು ನಿರ್ಮಿಸಿಕೊಡುತ್ತಿವೆಯಾದರೂ , ಕಳಪೆ ಮಟ್ಟದ ಕಾಮಗಾರಿಗಳಿಂದ ಉದ್ಗಾಟನೆಗೆ ಮುಂಚೆಯೇ ಅವುಗಳಲ್ಲಿ ಅರ್ಧ ಮನೆಗಳು ಅಂತ್ಯ ಕಾಣುತ್ತವೆ ಇನ್ನುಳಿದ ಮನೆಗಳಲ್ಲಿ ವಾಸಿಸುವವರು ತಮ್ಮ ಜೀವವನ್ನು ಕೈಯಲ್ಲಿಡಿದು ಯಾವಾಗಲೂ ಜೀವ ಭಯದಲ್ಲಿ ದಿನ ಕಳೆಯಬೇಕಾದ ಭಾಗ್ಯ ಪಡೆಯುತ್ತಾರೆ.
• ಪ್ರತಿಯೊಂದು ಕುಟುಂಬಕ್ಕೂ ಮನೆಗಳನ್ನು ನಿರ್ಮಿಸಿಕೊಡಬೇಕು
• ಅವುಗಳ ಗುಣಮಟ್ಟದಲ್ಲಿ ಯಾವುದೇ ರೀತಿಯ ಲೋಪವಿರಬಾರದು
• ಅವುಗಳಿಗೆ ಶೌಚಾಲಯ ಸ್ನಾನಗೃಹ, ಗಾಳಿ ಮತ್ತು ಬೆಳಕಿನ ವ್ಯವಸ್ಥೆಯಿರಬೇಕು

★ ಪರಿಶುದ್ಧ ನೀರು :
ಭಾರತದ ಬಹುತೇಕ ರಾಜ್ಯಗಳಲ್ಲಿ ನೀರಿನ ಸಮಸ್ಯೆ ಇದೆ, ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು ಸಿಗುವುದೇ ದುರ್ಲಭವಾಗಿದೆ. ಉತ್ತರದಲ್ಲಿ ಸಮಸ್ಯೆ ಅಷ್ಟಿಲ್ಲದಿದ್ದರೂ, ದೊರೆಯುವ ನೀರು ಕಲುಷಿತವಾಗಿರುತ್ತದೆ. ಇನ್ನು ದಕ್ಷಿಣ ರಾಜ್ಯಗಳಲ್ಲಿ ಎಷ್ಟೋ ಗ್ರಾಮಗಳಲ್ಲಿ ೨-೩ ದಿನಗಳಿಗೊಮ್ಮೆ ಕುಡಿಯುವ ನೀರು ಬರುವುದು ಸಾಮಾನ್ಯ. ಕೆಲವು ಪ್ರದೇಶಗಳಲ್ಲಿ ವಾರಕ್ಕೊಮ್ಮೆಯೂ ಕುಡಿಯುವ ನೀರು ಲಭ್ಯವಿರುವುದಿಲ್ಲ. ಹಾಗೊಮ್ಮೆ ನೀರು ಬಂದರೂ ಕುಡಿಯಲು ಯೋಗ್ಯವಿರುವುದಿಲ್ಲ.

 ದಿನಂಪ್ರತಿ ಎಲ್ಲಾದರೂ ಒಂದು ಕಡೆ ಕಲುಷಿತ ನೀರು ಸೇವಿಸಿ ಶಾಲಾಮಕ್ಕಳು, ಗ್ರಾಮೀಣ ಪ್ರದೇಶದವರು ಅಥವಾ ಸಾಮನ್ಯ ನಾಗರಿಕರು ಅಸ್ವಸ್ಥ ಎನ್ನುವ ಸುದ್ದಿಯನ್ನು ದಿನಪತ್ರಿಕೆಗೆಳಲ್ಲಿ ನೋಡುತ್ತಿದ್ದೇವೆ. ಕುಡಿಯುವ ನೀರನ್ನೇ ಪೂರೈಸಲಾಗದಿದ್ದರೆ ಇತರ ಕೆಲಸಗಳಿಗೆ ನೀರನ್ನು ಒದಗಿಸುವುದಾದರು ಹೇಗೆ ಎನ್ನುವ ಸಮಸ್ಯೆ ಇದೆ. ನೀರಿನ ಸಮಸ್ಯೆ ತಲೆದೋರಿದರೆ ಶುಚಿತ್ವ ಕಾಪಾಡುವುದು ಕಷ್ಟದ ಕೆಲಸ. ಶುಚಿತ್ವ ಇಲ್ಲದಿದ್ದರೆ ಅನೇಕ ಭೀಕರ ಸಾಂಕ್ರಾಮಿಕ ರೋಗಗಳಿಗೆ ಜನರು ತುತ್ತಾಗುತ್ತಾರೆ. ಇದು ಒಂದು ಕಡೆ ತಲೆದೋರಿದರೆ ಬಹು ಬೇಗ ದೇಶವ್ಯಾಪಿಯಗುತ್ತದೆ.

ಮಹತ್ತರ ಯೋಜನೆಗಳನ್ನು ರೂಪಿಸಿ ಉತ್ತರದ ಗಂಗಾ ಯಮುನಾ ನದಿಗಳನ್ನು ದಕ್ಷಿಣದ ನದಿಗಳೊಂದಿಗೆ ಜೋಡಿಸಿದರೆ ಅನೇಕ ರಾಜ್ಯಗಳ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು. ಜನರ ಅಗತ್ಯಕ್ಕೆ ತಕ್ಕಂತೆ ಪ್ರತಿ ಹಳ್ಳಿಗಳಿಗೂ ಶುದ್ಧ ನೀರು ದೊರಕಿಸಿಕೊಡುವ ಪ್ರಮುಖ ಕೆಲಸ ಶೀಘ್ರವಾಗಿ ಆಗಬೇಕಾಗಿದೆ.

★ ನೈರ್ಮಲೀಕರಣ:
ಭಾರತದ ಹಳ್ಳಿಗಳ ನೈರ್ಮಲೀಕರಣದ ಬಗೆಗೆ ಹೇಳಲು ಹೊರಟರೆ ಮನಸ್ಸಿಗೆ ಬೇಸರವಾಗುವುದು ಸಹಜ. ಅಲ್ಲಿನ ಜನರು ಬದುಕುತ್ತಿರುವ ವಾತಾವರಣದಲ್ಲಿ ಬಹುಷಃ ಪ್ರಾಣಿಗಳು ಇರಲು ಹೇಸಿಗೆಪಡಬಹುದೇನೂ . ಗ್ರಾಮೀಣ ಪ್ರದೇಶಗಳು ತಿಪ್ಪೆಗಳಾಗಿವೆ. ಎಲ್ಲೆಂದರಲ್ಲಿ ಕಸ ಕಡ್ಡಿಗಳು, ಮನೆಯ ಸುತ್ತಮುತ್ತ ಕೊಳೆತು ನಾರುವ ವಸ್ತುಗಳು, ಎಷ್ಟೋ ಹಳ್ಳಿಗಳಲ್ಲಿ ಕನಿಷ್ಠ ಚರಂಡಿಗಳ ವ್ಯವಸ್ಥೆಯೇ ಇಲ್ಲದಿರುವುದು ಕಂಡುಬರುವ ವಿಚಾರ. ಸ್ನಾನಗೃಹವಾಗಲಿ, ಶೌಚಾಲಯಗಳಾಗಲಿ ಹಳ್ಳಿಗಳಲ್ಲಿ ಇರುವುದು ದುರ್ಲಬವೆ ಸರಿ. ಹೀಗಿರುವಾಗ ಅವರ ಆರೋಗ್ಯದ ಪರಿಸ್ತಿತಿಯಾದರು ಏನು, ಅಲ್ಲಿ ಹುಟ್ಟುವ ಮಕ್ಕಳು ಭೂಮಿಗೆ ಬರುವಾಗಲೇ ಅದೆಷ್ಟು ರೋಗಗಳನ್ನು ಹೊತ್ತು ತರುವುದಿಲ್ಲ. ಮುಂದೆ ಅವರ ಬದುಕು ಹಸನಗೊಳ್ಳುವುದಾದರು ಹೇಗೆ. ಇದನ್ನೆಲ್ಲಾ ನೋಡಿದರೆ ದೇಶದ ಬೆಳವಣಿಗೆ ಯಾವ ದಿಕ್ಕಿನಲ್ಲಿದೆ ಎಂಬ ಅರಿವಾಗುತ್ತದೆ.

• ನಗರದ ಮೂಲ ಸೌಲಭ್ಯಗಳು ಹಳ್ಳಿಗಳಿಗೂ ದೊರೆಯಬೇಕು
• ಎಲ್ಲ ಮನೆಗಳಿಗೂ ಶೌಚಾಲಯ ಮತ್ತು ಸ್ನಾನಗೃಹಗಳಿಗೆ ಅವಕಾಶ
• ಸಾರ್ವಜನಿಕ ಪ್ರದೇಶಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಬೇಕು
• ಜನರಲ್ಲಿ ಶುಚಿತ್ವದ ಬಗೆಗೆ ಕಾಳಜಿ ರೂಪಿಸಬೇಕು

★ ಶಿಕ್ಷಣ :
ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕೆ ಅತ್ಯಂತ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಅಲ್ಲಿ ವಿದ್ಯಾಭ್ಯಾಸ ಎನ್ನುವುದು ಕೇವಲ ಉದ್ಯೋಗಕ್ಕಾಗಿ ಎನ್ನುವ ನಂಬಿಕೆಯಿದೆ. ನಮ್ಮ ಮಕ್ಕಳು ಕಲಿತು ಯಾವ ಅಧಿಕಾರಿ ಹಾಗಬೇಕು ಅಥವಾ ರಾಜ್ಯಭಾರ ಮಾಡಬೇಕು ಎನ್ನುವ ಅನಿಸಿಕೆಯನ್ನು ವ್ಯಕ್ತಪಡಿಸುವ ಪೋಷಕರು ಹಾಗು ತಂದೆ ತಾಯಿಗಳೇ ಸಾಮಾನ್ಯವಾಗಿ ಕಾಣಸಿಗುತ್ತಾರೆ. ಇದಕ್ಕೆ ಬಹುಮಟ್ಟಿನ ಕಾರಣ ಅವರ ಶೈಕ್ಷಣಿಕ, ಸಾಮಾಜಿಕ, ಹಾಗು ಕೌಟುಂಬಿಕ ಹಿನ್ನೆಲೆ, ಇದರ ಜೊತೆಗೆ ಇಲ್ಲಿಯವರೆಗೂ ಅಧಿಕಾರ ನಡೆಸಿದವರು ಮತ್ತು ಅವರ ಚಿಂತನೆಗಳೂ ಸಹ.

ಗ್ರಾಮೀಣ ಜನರಿಗೆ ದಿನನಿತ್ಯದ ಬದುಕಿಗೆ ಸಹಕಾರಿಯಾಗುವ, ಪ್ರಪಂಚದ ಹಾಗು ಹೋಗುಗಳನ್ನು ಅರಿಯುವ, ಹಾಗು ಶಾಂತಿ ಮತ್ತು ಸಹಬಾಳ್ವೆಯನ್ನು ಪ್ರತಿನಿಧಿಸುವ ಶಿಕ್ಷಣ ಅಗತ್ಯವಾಗಿ ದೊರೆಯಬೇಕು. ವಿದ್ಯೆಯಿಂದ ತಮ್ಮ ಮೂಲಭೂತ ಹಕ್ಕುಗಳನ್ನು ಮತ್ತು ಜವಾಬ್ದಾರಿಗಳನ್ನು ಅರಿತು ಸರ್ಕಾರ ಹಾಗು ಇತರ ಸಂಘ ಸಂಸ್ಥೆಗಳಿಂದ ದೊರೆಯುವ ಅನುಕೂಲಗಳನ್ನು ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ ತಮ್ಮ ಸ್ವಂತ ಹಾಗು ಸುತ್ತಮುತ್ತಲಿರುವವರ ಆರೋಗ್ಯದ ಬಗೆಗೆ ಕಾಳಜಿ ವಹಿಸಲು, ಪರಿಸರವನ್ನು ಶುಚಿಯಾಗಿಡಲು ದಾರಿಯಾಗುತ್ತದೆ.

ತಂದೆ ತಾಯಂದಿರು ಹಾಗು ಮನೆಯ ಹಿರಿಯರು ವಿದ್ಯಾವಂತರಾದರೆ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ಅನುವಾಗುವುದಷ್ಟೇ ಅಲ್ಲದೆ ಅವರ ವ್ಯಕ್ತಿತ್ವ ವಿಕಸನದ ಜೊತೆಗೆ ಇಡೀ ಪ್ರದೇಶದ ಅಬಿವೃದ್ದಿಗೆ ನಾಂದಿಯಾಗುತ್ತದೆ. ಮಕ್ಕಳಿಗೆ ಮನೆಯಲ್ಲಿ ತಾಯಿಯ ಜೋಗುಳದಿಂದ ಪ್ರಾರಂಭವಾಗುವ ಶಿಕ್ಷಣ, ಅಷ್ಟೇ ಪ್ರೀತಿ ವಾತ್ಸಲ್ಯದಿಂದ ಪ್ರೌಢಾವಸ್ಥೆಯವರೆಗೂ ದೊರಕಬೇಕು. ಶಿಕ್ಷಣದಿಂದ ಅವರಲ್ಲಿ ಚಿಂತನಾ ಶಕ್ತಿ ವೃದ್ದಿಸುವುದರ ಜೊತೆಗೆ, ಜೀವನದ ಗುರಿ ಮುಟ್ಟಲು, ಮತ್ತು ಅದರಿಂದ ಬಾಳನ್ನು ಬೆಳಕಾಗಿಸಿಕೊಳ್ಳಲು ಸಹಕಾರಿಯಾಗುವುದು. ಆದುದರಿಂದ ಸಮಾಜದ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಣ ಬಹು ಮುಖ್ಯ ಎನ್ನುವುದನ್ನು ಪ್ರತಿಯೊಬ್ಬರಿಗೂ ಮನದಟ್ಟು ಮಾಡಿಸಿ ಅವರನ್ನು ಶಿಕ್ಷಣದ ದಾರಿಗೆ ಕರೆತರುವ ಕೆಲಸವಾಗಬೇಕು.

• ಎಲ್ಲ ಹಳ್ಳಿಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡುವ ಶಾಲೆಗಳಿರಬೇಕು
• ಶಿಕ್ಷಕರಲ್ಲಿ ಪ್ರೀತಿ ವಾತ್ಸಲ್ಯದಿಂದ ಕೂಡಿದ ಕರ್ತವ್ಯ ನಿಷ್ಠೆಯಿರಬೇಕು
• ಶಿಕ್ಷಕರು ಮಕ್ಕಳ ಪ್ರತಿಭೆಗೆ, ಅಭಿರುಚಿಗೆ ಅನುಸಾರ ಪಾಠ ಪ್ರವಚನಗಳನ್ನು ಹೇಳಿಕೊಡಬೇಕು
• ಮಕ್ಕಳಿಗೆ ಸಾಂಸ್ಕೃತಿಕ ಮತ್ತು ಅಟೋಟಗಳ ಬಗ್ಗೆ ಲಕ್ಷ್ಯ ಬೆಳೆಸಬೇಕು
• ವಯಸ್ಕರಿಗೆ ಅಗತ್ಯವಾದ ಶಿಕ್ಷಣ ದೊರೆಯಬೇಕು
• ಹಳ್ಳಿಗಳಲ್ಲಿ ವೃತ್ತಿಶಿಕ್ಷಣ ಕಾಲೇಜುಗಳನ್ನು, ವಿಶ್ವವಿದ್ಯಾಲಯಗಳನ್ನು ತೆರೆಯಬೇಕು ಇದರಿಂದ ದ್ವಿಮುಖ ವಲಸೆಗೆ ಅನುಕೂಲವಾಗುತ್ತದೆ

★ ವ್ಯವಸಾಯ :
ಗ್ರಾಮೀಣ ಜನರ ಬದುಕು ಮುಖ್ಯವಾಗಿ ಕೃಷಿಯನ್ನವಲಂಬಿಸಿದೆ. ದಕ್ಷಿಣ ಭಾಗದಲ್ಲಿ ಹೆಚ್ಚಿನವರು ಮಳೆಯಾದಾರಿತ ಬೆಸಾಯವನ್ನವಲಂಬಿಸಿದ್ದರೆ, ಉತ್ತರದಲ್ಲಿ ನೀರಾವರಿಯುಕ್ತ ಕೃಷಿ ಮುಖ್ಯವಾಗಿದೆ. ಹವಾಮಾನ ಹಾಗು ದೊರೆಯುವ ಸೌಲಭ್ಯಗಳಿಗನುಗುಣವಾಗಿ ವಿವಿಧ ರೀತಿಯ ಆಹಾರ (ಭತ್ತ, ರಾಗಿ, ಜೋಳ, ಗೋದಿ, ಇತ್ಯಾದಿ) ಮತ್ತು ಹಣಕಾಸಿನ (ಕಾಫಿ, ಟೀ, ನೆಲಗಡಲೆ, ಸೂರ್ಯಕಾಂತಿ, ಕಬ್ಬು, ಮಸಾಲ ಪದಾರ್ಥಗಳು) ಬೆಳೆಗಳನ್ನು ಹಾಗು ಅನೇಕ ಹಣ್ಣುಗಳನ್ನು ಬೆಳೆಯುತ್ತಾರೆ.

ಪುರಾತನ ವ್ಯವಸಾಯ ಪದ್ಧತಿಗಳು ಮತ್ತು ಚೆಲ್ಲಾಟವಾಡುವ ಮಳೆಯನ್ನು ನಂಬಿದ ಕೃಷಿಕರು, ಕಾಲಕ್ಕೆ ಸರಿಯಾಗಿ ಬಿತ್ತನೆ ಅಥವಾ ನಾಟಿ ಮಾಡದೆ, ಅಥವಾ ನಂತರ ಕೈಕೊಡುವ ಮಳೆಯಿಂದ ಹಾಗು ಬಿತ್ತಿದ ಬೆಳೆ ಅನೇಕ ರೋಗಗಳಿಗೆ ತುತ್ತಾಗುವುದರಿಂದ, ಜೊತೆಗೆ ಕೊನೆಯಲ್ಲಿ ಕಾಡು ಪ್ರಾಣಿ ಪಕ್ಷಿಗಳಿಗೆ ಈಡಾಗುವುದರಿಂದ ಬೆಳೆ ನಾಶವಾಗಿ ಸಾಲ ಮಾಡಿ ಹಾಕಿದ ಬೀಜ ಗೊಬ್ಬರ ಮತ್ತು ಪಟ್ಟ ಶ್ರಮ ಎಲ್ಲವೂ ವ್ಯರ್ಥವಾಗಿ ಕೈ ಚೆಲ್ಲಿ ಕುಳಿತುಕೊಳ್ಳುವ ಸಂದಿಗ್ದತೆ ಎದುರಾಗುತ್ತದೆ. ಉತ್ತರ ಭಾರತದ ರೈತರು ಮಳೆಯಾದಾರಿತ ವ್ಯವಸಾಯವನ್ನು ಅವಲಂಬಿಸಿಲ್ಲವಾದರೂ, ಅತಿವೃಷ್ಟಿ ಹಾಗು ಅನಾವೃಷ್ಟಿ ಹಾಗು ಇತರ ಸಮಸ್ಯೆಗಳು ಇದ್ದೆ ಇರುತ್ತವೆ. ಇಂತಹ ಕ್ಲಿಷ್ಟ ಪರಿಸ್ತಿತಿಗಳು ಪುನರಾವರ್ತನೆಯಾದಾಗ, ತೀರಿಸಲಾಗದಷ್ಟು ಮಾಡಿದ ಸಾಲಗಳು ಚಿಂತೆಗೆ ತಳ್ಳುವುದರ ಜೊತೆಗೆ , ಹಸಿವು, ಆರೋಗ್ಯವಿಲ್ಲದ ಜೀವನ ಅವರದ್ದಾಗುತ್ತದೆ. ಬೀಜ, ರಸಗೊಬ್ಬರ, ವ್ಯವಸಾಯೋತ್ಪನ್ನಗಳು ಹಾಗು ವೈಜ್ಞಾನಿಕ ಯಂತ್ರೋಪಕರಣಗಳ ಮೇಲೆ ಸರ್ಕಾರವು ಕೊಡುವ ತೆರಿಗೆ ವಿನಾಯಿತಿಗಳು ಸಣ್ಣ ಹಾಗು ಅತಿ ಸಣ್ಣ ಹಿಡುವಳಿ ರೈತರಿಗೆ ತಲುಪುವ ಬದಲು, ಯಾವುದೊ ಕಂಪನಿಯ ಅಥವಾ ಎಜೆಂಟುಗಳ ಸ್ವಾರ್ಥಕ್ಕಾಗುತ್ತವೆ.

 ಕಳೆದ ವರ್ಷಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಹಾಗು ಕೇರಳ ರಾಜ್ಯಗಳಲ್ಲಿ ತಮ್ಮ ಅವಸ್ಥೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವುದು ಕಂಡು ಬಂದಿರುವ ವಿಚಾರ. ಕಷ್ಟಕಾಲದಲ್ಲಿ ರೈತರಿಗೆ ಮಾನಸಿಕವಾಗಿ ಹಾಗು ಆರ್ಥಿಕವಾಗಿ ಸಹಾಯ ದೊರಕಿಸಿಕೊಡಲು ಸರ್ಕಾರ ಹಾಗು ಸಂಘ ಸಂಸ್ಥೆಗಳು ಶ್ರಮಿಸಬೇಕು.

• ನೀರನ್ನು ಶೇಕರಿಸಿಡುವುದು, ಇದಕ್ಕಾಗಿ ಸಣ್ಣ ಕೆರೆಗಳನ್ನು ಇಂಗು ಗುಂಡಿಗಳನ್ನು ನಿರ್ಮಿಸುವುದು
• ಹೆಚ್ಚಿನ ಮಳೆಯ ನೀರು ಪೋಲಾಗದೆ ಹಣೆಕಟ್ಟುಗಳನ್ನೂ ಕಟ್ಟಿ ನೀರನ್ನು ಶೇಕರಿಸಿ ವ್ಯವಸಾಯಕ್ಕೆ ಬಳಸಿಕೊಳ್ಳಲು ಸಹಕರಿಸುವುದು
• ಮಣ್ಣನ್ನು ಪಳವತ್ತುಗೊಳಿಸಲು ಅಗತ್ಯ ಮಾರ್ಗದರ್ಶನ
• ನೈಸರ್ಗಿಕ ಹಾಗು ಜೈವಿಕ ಗೊಬ್ಬರಗಳನ್ನು ಉಪಯೋಗಿಸಲು ಉತ್ತೇಜನ
• ವೈಜ್ಞಾನಿಕ ಪದ್ಧತಿ ಅಳವಡಿಕೆ ಹಾಗು ಯಂತ್ರೋಪಕರಣಗಳ ಬಳಕೆ
• ಅವರ ವೃತ್ತಿಗೆ ಅಗತ್ಯವಾದ ಮಾಹಿತಿ ಒದಗಿಸುವುದು
• ಉತ್ತಮ ಗುಣಮಟ್ಟದ ಬೀಜಗಳನ್ನು ನೀಡುವುದು
• ಹವಾಮಾನಕ್ಕನುಗುಣವಾಗಿ ಆಹಾರ ಮತ್ತು ಆರ್ಥಿಕ ಬೆಳೆ ಬೆಳೆಯಲು ಅವಕಾಶ ಕಲ್ಪಿಸುವುದು
• ಸಾಂಪ್ರದಾಯಿಕ ನಾಟಿ ಬೆಳೆಗಳ ಜೊತೆಗೆ ಮಿಶ್ರತಳಿ ಹಾಗು ತಳಿ ಪರಿವರ್ತನೆ ಮಾಡಿದ ಬೆಳೆ ಬೆಳೆಯಲು ಉತ್ತೇಜನ
• ಆಹಾರ ಸಂಸ್ಕರಣ ಕೇಂದ್ರಗಳು ಮತ್ತು ಗೋದಾಮುಗಳ ಅವಶ್ಯಕತೆ
• ತೋಟಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ
• ಸಂಪನ್ಮೂಲಗಳ ಕ್ರೋಡೀಕರಣ ಮತ್ತು ಸದ್ಬಳಕೆ
• ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳುವುದು
• ಎಲ್ಲಾ ಗ್ರಾಮಗಳಿಗೆ ವ್ಯವಸಾಯೋತ್ಪನ್ನ ಸಹಕಾರ ಸಂಘಗಳಿರಬೇಕು ಹಾಗು ಇವುಗಳ ಮೂಲಕ ರೈತರಿಗೆ ಬೇಕಾಗುವ ಗೊಬ್ಬರ, ಬೀಜ, ಹಾಗು ಇತರ ಸಲಕರಣೆಗಳು ನಿಯಮಿತ ದರಗಳಲ್ಲಿ ದೊರಕುವಂತಿರಬೇಕು
• ಬ್ಯಾಂಕ್ ಹಾಗು ಇತರ ವಾಣಿಜ್ಯ ಸೇವೆಗಳು ಎಲ್ಲ ಗ್ರಾಮಗಳಿಗೂ ದೊರಕಬೇಕು
• ಹಳ್ಳಿಗಳ ಮತ್ತು ನಗರ ಯೋಜನೆಗಳಿಗೆ ವ್ಯತ್ಯಾಸವಿರದಂತೆ ಎಚ್ಚರವಹಿಸುವುದು
• ಉತ್ತಮ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಿ ಭಂಡವಾಳಶಾಹಿಗಳನ್ನು ವಿಕೇಂದ್ರಿಕರಣಗೊಳಿಸಬೆಕು
• ದಿನನಿತ್ಯ ಜೀವನಕ್ಕೆ ಬೇಕಾಗುವ ವಸ್ತುಗಳು, ಸಲಕರಣೆಗಳು ಹೇರಳವಾಗಿ ದೊರೆಯಬೇಕು
• ಹಳ್ಳಿಗಳಿಂದ ನಗರಗಳಿಗೆ ಬರುವ ವಲಸೆ ತಡೆಯಲು ಅಗತ್ಯ ಕಾರ್ಖಾನೆಗಳನ್ನು ತೆರೆಯಬೇಕು
• ಸಾಮಾಜಿಕ, ವಾಣಿಜ್ಯ, ಹಾಗು ಖಾಸಗಿ ಉದ್ಯಮಗಳಲ್ಲಿ ಹಣ ಹೂಡಿಕೆ

★ ಪಶುಪಾಲನೆ :
ಗ್ರಾಮೀಣ ಪ್ರದೇಶಗಳಲ್ಲಿ ವ್ಯವಸಾಯದ ನಂತರ ಪಶುಪಾಲನೆ ಬಹು ಮುಖ್ಯ ಉದ್ಯೋಗ. ಅನೇಕ ರೈತರು ವ್ಯವಸಾಯದ ಜೊತೆಗೆ ಪಶುಪಾಲನೆಯನ್ನು ಉಪ ಕಸುಬನ್ನಾಗಿಯೂ ಅವಲಂಭಿಸಿದ್ದಾರೆ. ಪ್ರಾಚೀನ ಕಾಲದಿಂದಲೂ ಜನರು ಇದರ ಮೇಲೆ ಅವಲಂಬಿತವಾಗಿದ್ದರೂ ಅದರ ಏಳ್ಗೆ ಮಾತ್ರ ತೃಪ್ತಿದಾಯಕವಾಗಿಲ್ಲ. ಆರ್ಥಿಕವಾಗಿ ಸಬಲರಲ್ಲದವರು, ಸಣ್ಣಬೇಸಾಯಗಾರರು ಅನೇಕ ಸಾಕು ಪ್ರಾಣಿಗಳನ್ನು ವ್ಯವಸಾಯಕ್ಕಾಗಿಯೂ ಬಳಸುತ್ತಾರೆ. ಹಸು, ಎಮ್ಮೆಗಳನ್ನು ಹಾಲು ಮತ್ತು ಹಾಲಿನ ಉತ್ಪನ್ನಗಳಿಗಾಗಿ, ದನಗಳು ಮತ್ತು ಕೋಣಗಳನ್ನು ಭೂಮಿಯನ್ನು ಉಳಲು ಹಾಗು ಕುರಿ, ಮೇಕೆ, ಕೋಳಿ ಮುಂತಾದವುಗಳನ್ನು ಮಾಂಸಕ್ಕಾಗಿಯೂ ಸಾಕುತ್ತಾರೆ. ಆದರೆ ದುರದೃಷ್ಟವಾಗಿ ಪಶುಪಾಲನೆಯನ್ನು ಒಂದು ಲಾಭದಾಯಕ ಉದ್ದಿಮೆಯನ್ನಗಿ ಪರಿವರ್ತಿಸಲು ಇಲ್ಲಿಯವರೆಗೂ ಸಾಧ್ಯವಾಗದಿರುವುದು ವಿಷಾದನೀಯ.

• ಅಗತ್ಯ ಒಳ್ಳೆಯ ತಳಿಗಳಗಳನ್ನೂ ಒದಗಿಸುವುದು
• ಮೇವು ಮತ್ತು ಇತರ ಅಗತ್ಯ ಆಹಾರ ಮತ್ತು ಔಷಧಿಗಳ ಪೂರೈಕೆ
• ಗೋಧಾಮುಗಳ ನಿರ್ಮಾಣ
• ಪಶುಗಳ ಆಸ್ಪತ್ರೆಗಳ ನಿರ್ಮಾಣ ಮತ್ತು ಉತ್ತಮ ಚಿಕಿತ್ಸೆ ದೊರೆಯುವಂತೆ ಗಮನ
• ಹಾಲು ಸಂಸ್ಕರಣೆ ಮತ್ತು ಅದರ ಇತರ ಉತ್ಪನ್ನಗಳ ತಯಾರಿಕಾ ಗಟಕಗಳನ್ನು ತೆರೆಯುವುದು

★ ಮೀನುಸಾಕಣೆ :
ಹೊರ ಪ್ರಪಂಚಕ್ಕೆ ಮೀನುಸಾಕಣೆ ಹೆಚ್ಚಿನ ಲಾಭದಾಯಕ ಗ್ರಾಮೀಣ ಕಸುಬುಗಳಲ್ಲಿ ಒಂದು. ಆದರೆ ಇದಕ್ಕೆ ಸಿಗುತ್ತಿರುವ ಪ್ರೋತ್ಸಾಹ ಅತ್ಯಲ್ಪ ಆದ್ದರಿಂದ ಇದು ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದೆ. ಇದು ಕೇವಲ ಕರಾವಳಿ ಪ್ರದೇಶಗಳ, ನದಿತೀರ ಪ್ರದೇಶಗಳ ಜನರ ಕಸುಬಾಗದೆ ಒಳನಾಡಿಗೂ ವೃದ್ದಿಸಬೇಕು. ಉದ್ದಿಮೆಗೆ ಹೆಚ್ಚಿನ ಸಹಕಾರ ಮತ್ತು ಅಗತ್ಯ ಮೂಲ ವ್ಯವಸ್ಥೆಗಳನ್ನು ಕಲ್ಪಿಸುವುದರಿಂದ ರೈತರನ್ನು ಆಕರ್ಷಿಸಬಹುದು ಮತ್ತು ಇದರಿಂದ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬಹುದು.

• ಕೆರೆ ಕುಂಟೆಗಳು, ಹೊಂಡಗಳನ್ನು ನಿರ್ಮಿಸಿ ಮಿನುಸಾಕಣೆಗೆ ವಿಪುಲ ಅವಕಾಶಗಳನ್ನು ಕಲ್ಪಿಸುವುದು
• ರೈತರಿಗೆ ಉತ್ತಮ ತರಬೇತಿ ಕೊಡುವುದು
• ಸ್ವಚ್ಛತೆ ಹಾಗು ಸುರಕ್ಷತೆಗೆ ಆಧ್ಯತೆ ನೀಡುವುದು
• ವಿವಿದ ರೀತಿಯ ಲಾಭದಾಯಕ ತಳಿಗಳನ್ನು ಒದಗಿಸುವುದು
• ಆಹಾರ ಮತ್ತು ಔಷಧಿಗಳ ಪೂರೈಕೆ
• ವಾತಾವರಣ, ಅವುಗಳ ಆಹಾರ ಮತ್ತು ತಗಲುವ ರೋಗಗಳ ಬಗ್ಗೆ ಮತ್ತು ನಿವಾರಣೆಯ ಬಗ್ಗೆ ಅಗತ್ಯ ಮಾಹಿತಿ ಒದಗಿಸುವುದು

★ ಕಾಡು ಬೆಳೆಸುವುದು :
ಹಿಂದೊಮ್ಮೆ ನಮ್ಮ ಹಳ್ಳಿಗೆ ಅರಣ್ಯದ ಮದ್ಯೆ ಹೋಗಬೇಕೆಂದರೆ ಸಂತಸವಾಗುತ್ತಿತ್ತು. ಅದರಲ್ಲೂ ಪಕ್ಕದೂರಿನ ಶಾಲೆಗೆ ನಡೆದೇ ಹೋಗಬೇಕಾಗಿದ್ದರಿಂದ ಗಿಡ ಮರಗಳ ನಡುವೆ ಆಟವಾಡಿಕೊಂಡು ಹೋಗುವಾಗಿನ ಮಜವೇ ಬೇರೆ. ಆದರೆ ಈಗ ಬೆಂಗಾಡು, ಸುಡುವ ಬಿಸಿಲನ ಜೊತೆ ನಡೆಯಬೇಕಾದ ಪರಿಸ್ಥಿತಿ. ಹೇಗೆ ನಾಶವಾಯಿತು ಎಂದು ಹೇಳಬೇಕಾದ ಅವಶ್ಯಕತೆಯಿಲ್ಲ. ಇದು ನಮ್ಮೂರಿಗಷ್ಟೇ ಒದಗಿಲ್ಲ, ದೇಶದ ಎಲ್ಲ ಭಾಗಗಳಲ್ಲಿ ಕಂಡು ಬರುವ ಸಾಮಾನ್ಯ ಸನ್ನಿವೇಶ. ಆದರೆ ಇದರಿಂದ ಹಾಗುವ ಅಡ್ಡ ಪರಿಣಾಮಗಳನ್ನು ಹಾಗು ಕಾಡು ಬೆಳೆಸುವುದರಿಂದ ಹಾಗುವ ಪ್ರಯೋಜನಗಳನ್ನು ಸಾಮಾನ್ಯಜನರಿಗೆ ತಿಳಿಸಿ, ಅನೇಕ ಸಾಲುಮರದ ತಿಮ್ಮಕ್ಕನಂತಹವರನ್ನು ಸೃಷ್ಟಿಸಬೇಕಾಗಿದೆ.

★ ಸಾರಿಗೆ :
ಗ್ರಾಮೀಣ ಪ್ರದೇಶಗಳ ಸಾರಿಗೆ ಮತ್ತು ಸಂಪರ್ಕದ ಸ್ಥಿತಿ ಶೋಚನೀಯ. ೨೧ ನೇ ಶತಮಾನದಲ್ಲೂ ಅನೇಕ ಹಳ್ಳಿಗಳಿಗೆ ರಸ್ತೆಗಳಿಲ್ಲದೆ ಇಂದಿಗೂ ಕಾಲು ದಾರಿಯಲ್ಲೇ ತಲುಪಬೇಕೆಂಬುದು ಅಚ್ಚರಿಯೆನಿಸಿದರೂ ಸತ್ಯ ಸಂಗತಿ ಮತ್ತು ನಾಚಿಕೆ ತರಿಸುವಂತ ವಿಷಯ. ಇನ್ನು ಕೆಲವು ಪ್ರದೇಶಗಳಲ್ಲಿ ಇರುವ ರಸ್ತೆಗಳಲ್ಲಿ ಪ್ರಯಾಣಿಸಲು ಪೂರ್ವ ತಯಾರಿ ಮತ್ತು ಧೈರ್ಯ ಇರಲೇಬೇಕು. ಕೆಲ ಊರುಗಳಿಗೆ ಹೊಸದಾಗಿ ರಸ್ತೆ ಭಾಗ್ಯ ಲಭಿಸಿದರೆ ಮೂರು ತಿಂಗಳುಗಳಲ್ಲಿ ಅಲ್ಲಿದ್ದ ರಸ್ತೆ ಮಾಯವಾಗಿ ಹಳ್ಳ ಗುಂಡಿಗಳನ್ನು ಕಾಣಬಹುದು. ಹೀಗಿರುವಾಗ ರೈತರು ತಾವು ಬೆಳೆದ ದವಸ ದಾನ್ಯಗಳನ್ನು ನಗರದ ಮಾರುಕಟ್ಟೆಯಲ್ಲಿ ಮಾರಲು ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಅಲ್ಲಿಂದ ತರಬೇಕಾದ ಬವಣೆ ಹೇಳತೀರದು. ಸರ್ಕಾರಗಳು ಎಲ್ಲ ಗ್ರಾಮಗಳಿಗೆ ಗುಣಮಟ್ಟದ ರಸ್ತೆ ಮತ್ತು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು.

• ಸುತ್ತಮುತ್ತಲಿನ ಹಳ್ಳಿಗಳು ಹಾಗು ನಗರಗಳ ಜೋಡಣೆ ಹಾಗು ಹೆಚ್ಚಿನ ಸಂಪರ್ಕ
• ವಿಶಾಲವಾದ ಮತ್ತು ಗುಣಮಟ್ಟದ ರಸ್ತೆಗಳ ಅವಶ್ಯಕತೆ

★ ಉತ್ತಮ ಮಾರುಕಟ್ಟೆ
ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕೊಳ್ಳುವವರಿಲ್ಲದೆ ಎಷ್ಟೋ ಬಾರಿ ದಾರಿಯಲ್ಲಿ ಅಥವಾ ಚರಂಡಿಗೆ ಸುರಿದು ಪ್ರತಿಭಟಿಸಿರುವ ಅನೇಕ ಘಟನೆಗಳನ್ನು ದಿನ ನಿತ್ಯ ಕಾಣುತ್ತೇವೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಲು ದೂರದ ನಗರಗಳ ಮಾರುಕಟ್ಟೆಯನ್ನು ಅವಲಂಭಿಸುವುದು ಲಾಭಕರವಲ್ಲ ಹಾಗಾಗಿ ಹೋದಷ್ಟಕ್ಕೆ ಮಾರುವುದು ವಾಡಿಕೆ.  ಗ್ರಾಮೀಣ ಪ್ರದೇಶಗಳಲ್ಲಿ ರೈತರಿಗೆ ಅತ್ಯುತ್ತಮ ಮಾರುಕಟ್ಟೆಯ ಅಗತ್ಯ ಪ್ರಶ್ನಾತೀತವಾದದ್ದು. ಇದರಿಂದ ತಾವು ಬೆಳೆದ ಬೆಳೆಗಳನ್ನು ಸ್ಪರ್ಧಾತ್ಮಕ ಬೆಲೆಗೆ ಮಾರಲು ಮತ್ತು ಅಗತ್ಯ ವಸ್ತುಗಳನ್ನು ಸೂಕ್ತ ಬೆಲೆಗೆ ಕರೀದಿಸಲು ಅನುಕೂಲವಾಗುತ್ತದೆ.

• ಗ್ರಾಮೀಣ ಮಾರುಕಟ್ಟೆಗಳ ಸೌಲಭ್ಯ ಒದಗಿಸುವುದು
• ರೈತರ ಬೆಳೆಗೆ ಸ್ಪರ್ಧಾತ್ಮಕ ಬೆಲೆ ಸಿಗುವಂತೆ ಎಚ್ಚರ
• ದಲ್ಲಾಳಿಗಳ ಮತ್ತು ವರ್ತಕರ ಮೋಸ ವಂಚನೆಗಳಿಂದ ಮುಕ್ತಿ
• ತೆರಿಗೆಗಳಿಂದ ವಿನಾಯಿತಿ
• ಮುಕ್ತ ವ್ಯಾಪಾರಕ್ಕೆ ಅನುಮತಿ ಕೊಡಬೇಕು

★ ಪ್ರವಾಸೋದ್ಯಮ:
ಪ್ರಪಂಚದ ಕೆಲವು ದೇಶಗಳ ಆರ್ಥಿಕತೆ ಬಹುವಾಗಿ ಪ್ರವಾಸೋದ್ಯಮದ ಮೇಲೆಯೇ ನಿಂತಿದೆ ಎಂದರೆ ಅಚ್ಚರಿಯಾಗಬಹುದು, ಆದರೂ ಇದು ಸತ್ಯವೆಂದು ಒಪ್ಪಿಕೊಳ್ಳಬೇಕಾಗಿದೆ. ದೇಶದಲ್ಲಿ ಪ್ರವಾಸೋದ್ಯಮ ವೇಗವಾಗಿ ಬೆಳೆಯುತ್ತಿದ್ದರೂ ಅವುಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಸಿಗುತ್ತಿಲ್ಲ. ನಮ್ಮ ದೇಶದಲ್ಲಿರುವ ಅನೇಕ ನೈಸರ್ಗಿಕ ಪ್ರೇಕ್ಷಣೀಯ ಸ್ಥಳಗಳನ್ನು ಪುರಾತತ್ವ ಗುಡಿ ಗೋಪುರಗಳನ್ನು ಅಭಿವೃದ್ದಿಪಡಿಸಿ, ಅಗತ್ಯ ರಕ್ಷಣೆ ಮತ್ತು ಸೂಕ್ತ ಸೌಲಭ್ಯಗಳನ್ನು ಒದಗಿಸಿದರೆ ಪ್ರಪಂಚದ ಮೂಲೆ ಮೂಲೆಗಳಿಂದ ಯಾತ್ರಿಕರನ್ನು ಆಕರ್ಷಿಸಬಹುದು.

• ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರೇಕ್ಷಣೀಯ ಸ್ಥಳಗಳನ್ನು ಗುರುತಿಸಿ ಅಭಿವೃದ್ದಿಪಡಿಸಿದರೆ ಪ್ರದೇಶಾಭಿವೃದ್ದಿಯ ಜೊತೆಗೆ ಆರ್ಥಿಕವಾಗಿಯೂ ಪ್ರಗತಿ ಸಾದಿಸಬಹುದು

* ಉದ್ಯೋಗ
ದೇಶದ ಹಳ್ಳಿಗಳಲ್ಲಿ ಉದ್ಯೋಗವೆಂದರೆ ಕೇವಲ ಹೊಟ್ಟೆಪಾಡಿಗೆ ಮಾಡುವ ಒಂದು ಕೆಲಸವಾಗಿದೆ. ಆದರೆ ವಾಸ್ತವದಲ್ಲಿ ಅದಕ್ಕೂ ಕುತ್ತು. ಕುಟುಂಬ ಪಾರಂಪರ್ಯವಾಗಿ ಬಂದಿರುವ ಕೆಲಸಗಳನ್ನು ಅನೇಕ ಕಾರಣಗಳಿಂದ ಮುಂದುವರಿಸಲಾಗದೆ, ಹಾಗೆ ಒಮ್ಮೆ ಮಾಡಿದರೂ ಅದರಿಂದ ಸೂಕ್ತ ಪ್ರಯೋಜನವಿಲ್ಲದೆ ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ನಮ್ಮ ಹಳ್ಳಿಯ ಜನರದ್ದು. ಬೇರೆ ಉದ್ಯೋಗಗಳನ್ನು ಮಾಡಲು ಅಗತ್ಯ ತರಬೇತಿ, ಹಾಗು ಅದಕ್ಕೆ ಬೇಕಾದ ಅವಕಾಶಗಳಿಲ್ಲದಿರುವುದು ಜನರನ್ನು ಒಂದೆಡೆ ನಗರ ಪ್ರದೇಶಗಳಿಗೆ ವಲಸೆ ಹೋಗಲು ಪ್ರಚೋದಿಸುವುದರ ಜೊತೆಗೆ ಮತ್ತೊಂದೆಡೆ ಸೋಮರಿಗಳನ್ನಾಗಿಯೂ, ಹಾಗು ಇತರ ಆತಂಕಕಾರಿ ಕೆಲಸಗಳಿಗೆ ಮಾರು ಹೋಗಲು ಅವಕಾಶವಾಗಿಸಿದೆ. ಹಳ್ಳಿಗಳಲ್ಲಿ ದೊರೆಯುವ ಸಂಪನ್ಮೂಲಗಳಿಗನುಗುಣವಾಗಿ ಅಲ್ಲಿ ಉಪಯುಕ್ತ ಕಾರ್ಖಾನೆಗಳನ್ನು ನಿರ್ಮಿಸಿ ಹೆಚ್ಚಿನ ಉದ್ಯೋಗ ಸೃಷ್ಟಿಸಬಹುದಾಗಿದೆ.

• ಗುಡಿ ಕೈಗಾರಿಕೆ ಮತ್ತು ಗ್ರಾಮೀಣ ಉದ್ದಿಮೆಗಳಿಗೆ ಉತ್ತೇಜನ ಮತ್ತು ಅಗತ್ಯ ತರಬೇತಿ
• ಕರ ಕುಶಲ ವಸ್ತುಗಳ ತಯಾರಿಕೆಗೆ ಪ್ರೋತ್ಸಾಹ
• ಸ್ವಂತ ಉದ್ಯೋಗ ಮಾಡುವವರಿಗೆ ಪ್ರೋತ್ಸಾಹ
• ವಿವಿಧ ವಲಯಗಳಲ್ಲಿ ಉದ್ಯೋಗ ಸೃಷ್ಟಿ
• ಕೈಗಾರಿಕಾ ವಲಯಗಳನ್ನು ಸ್ಥಾಪಿಸಿ, ಅಗತ್ಯ ಮೂಲಭೂತ ವ್ಯವಸ್ಥೆಗಳನ್ನು ನಿರ್ಮಿಸಿ ಬಂದವಾಳಶಾಹಿಗಳನ್ನು ಆಕರ್ಷಿಸಬೇಕು

★ ವಿದ್ಯುತ್ ಮತ್ತು ಇಂದನ : ಶಕ್ತಿಯನ್ನು ಬಳಸುವಿಕೆ
ದೇಶ ಇಂಧನದ ಕೊರತೆಯನ್ನು ಅನುಭವಿಸುತ್ತಿರುವುದು ತಿಳಿದ ವಿಷಯ. ಇದನ್ನು ಸರಿದೂಗಿಸಲು ಸರ್ಕಾರ ಅನೇಕ ತೊಡರುಗಳ ನಡುವೆಯೂ ಅಮೆರಿಕದೊಂದಿಗೆ ಅಣು ಒಪ್ಪಂದಕ್ಕೆ ಸಹಿ ಮಾಡಿದೆ, ಇದರಿಂದ ದೇಶದ ಹಿತಕ್ಕೆ ದಕ್ಕೆ ಬಾರದಿರಲಿ. ವಾಸ್ತವಿಕವಾಗಿ ಹಲವು ರಾಜ್ಯಗಳ ಹಳ್ಳಿಗಳಲ್ಲಿ ದಿನಕ್ಕೆ ೪ ರಿಂದ ೫ ಘಂಟೆ ವಿದ್ಯುತ್ ಸಿಗುವುದೂ ಕಷ್ಟಕರ. ಹೀಗಿರುವಾಗ ಇಂಧನವನ್ನು ಹಿತ ಮಿತವಾಗಿ ಬಳಸುವುದು ಶ್ರೇಯಸ್ಕರ. ಇದರ ಬಗ್ಗೆ ಜನರಲ್ಲಿ ತಿಳುವಳಿಕೆ ಹಾಗು ಅರಿವು ಮೂಡಿಸುವುದು ಅತ್ಯಗತ್ಯ. ಜೊತೆಗೆ ಸೌರಶಕ್ತಿ ಮತ್ತು ಸಾವಯವ ಶಕ್ತಿಗಳ ಉತ್ಪಾದನೆ ಮತ್ತು ಬಳಸುವ ಬಗೆಗೆ ತರಬೇತಿ ನೀಡುವುದರಿಂದ ಬಹು ಮಟ್ಟಿನ ತೊಂದರೆಯನ್ನು ನಿವಾರಿಸಿಕೊಳ್ಳಬಹುದು.
• ಸೌರ ಶಕ್ತಿ ಮತ್ತು ಸಾವಯವ ಶಕ್ತಿಗಳ ಬಳಕೆ
• ಇಂಧನದ ಮಿತ ಬಳಕೆಯ ಬಗ್ಗೆ ಅಗತ್ಯ ಮಾಹಿತಿ

★ ಸ್ತ್ರೀ ಸಭಲೀಕರಣ :
ದೇಶದಲ್ಲಿ ಸ್ತ್ರೀಯರು ಬಹುತೇಕ ಎಲ್ಲ ರಂಗಗಳಲ್ಲಿ, ಪುರುಷನಿಗೆ ಸರಿ ಸಮಾನವಾಗಿ ನಿಲ್ಲಲು ದಾಪುಗಾಲಿಡುತ್ತಿದ್ದಾರೆಂಬುದು ಸಂತೋಷದ ವಿಷಯ. ಆದರೆ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮಹಿಳೆಯರು ಪುರುಷರ ಆಣತಿಯ ಮೇರೆಗೆ ಜೀವನ ಸಾಗಿಸಬೇಕಾಗಿದೆ. ಪುರುಷರ ಲೈಂಗಿಕ ಶೋಷಣೆ, ದಬ್ಬಾಳಿಕೆ ಮಾನಸಿಕ ಹಾಗು ದೈಹಿಕ ಹಿಂಸೆಗಳು ಅವರನ್ನು ಅಬಲಳನ್ನಾಗಿಸಿವೆ. ಅನೇಕ ರೋಗ ರುಜಿನಗಳಿಂದ ನರಳುತ್ತಿದ್ದರೂ ಮುಚ್ಚಿಡುವ ಪರಿಸ್ತಿತಿಯನ್ನೂ ಎದುರಿಸುತ್ತಾರೆ. ಪುರುಷ ಪ್ರಧಾನ ಸಮಾಜಕ್ಕೆ ಹೆದರಿ ತಾನೆಷ್ಟೇ ಸಬಲಳಿದ್ದರೂ, ಕೈ ಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿಯಿದೆ. ಇದಕ್ಕೆ ಕಾರಣಗಳು ಅನೇಕ, ಅಂದಕಾರ, ಅನಕ್ಷರತೆ ಹಾಗು ಕೆಲಸಕ್ಕೆ ಬಾರದ ಸಾಮಾಜಿಕ ಕಟ್ಟಳೆಗಳು.

 ಒಬ್ಬ ಸ್ತ್ರೀ ಶಿಕ್ಷಣ ಪಡೆದರೆ ತನ್ನ ಇಡೀ ಕುಟುಂಬಕ್ಕೆ ಶಿಕ್ಷಣ ನೀಡಬಲ್ಲಳು. ಒಂದು ಕುಟುಂಬದವರು ವಿದ್ಯಾವಂತರಾದರೆ ಕೊನೆಯ ಪಕ್ಷ ನೆರೆ ಹೊರೆಯವರ ಕಣ್ಣನ್ನಾದರು ತೆರೆಸಲು ಸಹಾಯವಾಗುತ್ತದೆ. ಮುಂದೆ ಅದು ದೇಶದ ಉದ್ದಾರಕ್ಕೆ ಸಹಾಯವಾಗುತ್ತದೆ. ಆದ್ದರಿಂದ ಮಹಿಳೆಯರಿಗೆ ಅಗತ್ಯ ಶಿಕ್ಷಣ ಮತ್ತು ಸಹಾಯ ನೀಡಿ ಆಧುನಿಕ ಸಮಾಜದ ಬಾಗಿಲಿಗೆ ಕರೆತರಬೇಕಾಗಿದೆ.

• ಅವರಲ್ಲಿ ಧೈರ್ಯ ಹಾಗು ಭರವಸೆ ಮೂಡಿಸುವ ಕಡ್ಡಾಯ ಶಿಕ್ಷಣದ ಅಗತ್ಯ
• ಅಗತ್ಯ ಆರೋಗ್ಯ ಸೇವೆ
• ವೃತ್ತಿ ಶಿಕ್ಷಣ ತರಬೇತಿ ಮತ್ತು ಪ್ರೋತ್ಸಾಹ
• ಸ್ತ್ರೀ ಸಹಾಯ ಗುಂಪುಗಳನ್ನ ರಚಿಸಿ ಅವುಗಳಿಂದ ಸ್ತ್ರೀಯರ ಏಳ್ಗೆಗೆ ಅವಕಾಶ

★ ಬಾಲಕಾರ್ಮಿಕ ಪದ್ಧತಿ :
ತಂದೆ ತಾಯಿಗಳ ಬದತನದಿಂದಲೂ ಅಥವಾ ಅವರಿಗೆ ಬೇಡವಾಗಿಯೋ ಅನೇಕ ಮಕ್ಕಳು ಆಟ ಪಾಠ ಗಳನ್ನು ಕಲಿಯುವ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ. ಇದರಿಂದ ಮುಂದೆ ದೇಶದ ಭವಿಷ್ಯ ಬರೆಯುವ ಕೈಗಳು ತಮ್ಮ ಜೀವನವನ್ನೇ ಕತ್ತಲೆಯ ಗೂಡಾಗಿಸಿಕೊಳ್ಳುತ್ತವೆ. ಅರಳಬೇಕಾದ ಹೂವುಗಳು ವಯಸ್ಸಿಗೆ ಮೀರಿದ ಮಾನಸಿಕ ಹಾಗು ದೈಹಿಕ ಹಿಂಸೆಯಿಂದ ಮುರುಟಿ ಹೋಗುತ್ತವೆ. ತನ್ನ ಒಡೆಯ ಕೊಡುವ ಒಪ್ಪೊತ್ತಿನ ಊಟಕ್ಕಾಗಿ ತಮ್ಮ ಬದುಕನ್ನೇ ಬಲಿಕೊಡುತ್ತಾರೆ. ಕೆಲವರು ನರಕಯಾತನೆಯನ್ನು ತಾಳಲಾರದೆ ಅಡ್ಡದಾರಿ ಹಿಡಿದು ಸಮಾಜಕ್ಕೆ ಮಾರಕವಾಗುವುದೂ ಉಂಟು. ಇವರನ್ನು ಇಂತಹ ಸಂಕಷ್ಟದಿಂದ ರಕ್ಷಿಸಿ ಪೌಷ್ಟಿಕ ಆಹಾರ, ಬಟ್ಟೆ ಹಾಗು ಇತರ ಸೌಲಭ್ಯಗಳನ್ನು ಒದಗಿಸಿ ಪ್ರೀತಿ ವಾತ್ಸಲ್ಯದಿಂದ ಶಿಕ್ಷಣವನ್ನು ನೀಡಿ ಉತ್ತಮ ನಾಗರೀಕರನ್ನಾಗಿಸುವುದು ಎಲ್ಲರ ಹೊಣೆಯಾಗಬೇಕು.

ಹಳ್ಳಿಗಳು ವ್ರುದ್ದಾಶ್ರಮವಾಗುವುದನ್ನು ತಪ್ಪಿಸಿ
ಹಳ್ಳಿಗಳಲ್ಲಿನ ಜನರು ಬಡತನದ ಜೀವನದಲ್ಲಿ ಬೆಂದು ನೊಂದು, ತಮ್ಮ ಒಪ್ಪತ್ತಿನ ಗಂಜಿಗೂ ತತ್ವಾರವಿರುವುದನ್ನರಿತು ಇಲ್ಲಿ ಇದ್ದು ತಮ್ಮ ಬದುಕನ್ನು ರೂಪಿಸಿಕೊಳ್ಳುವುದು ದುಸ್ಸಾಧ್ಯವೆಂದು ಬಗೆದು ನಗರಗಳ ಕಡೆ ಗುಳೇ ಹೊರಟಿದ್ದಾರೆ. ಅದರಲ್ಲಿಯೂ ಯುವ ಜನಾಂಗ ತಮ್ಮ ವಂಶ ಪಾರಂಪರ್ಯವಾಗಿ ಮಾಡುತ್ತಿದ್ದ ವ್ಯವಸಾಯ ಹಾಗು ಇನ್ನಿತರ ಕುಲ ಕಸುಬುಗಳನ್ನು ತೊರೆದು ನಗರಗಳಲ್ಲಿ ದೊರೆಯುವ ಕಾರ್ಖಾನೆಗಳಲ್ಲಿನ ಕೆಲಸ, ಬಟ್ಟೆ ಉದ್ಯಮಗಳಲ್ಲಿನ ಕೆಲಸ, ಹಾಗು ಇತರ ಕೂಲಿ ಕೆಲಸಗಳನ್ನರಸಿ, ತಮ್ಮ ಹುಟ್ಟಿದ  ಊರುಗಳನ್ನೂ ತೊರೆಯುತ್ತಿದ್ದಾರೆ. ಇದರಿಂದ ಅನೇಕ ಹಳ್ಳಿಗಳಲ್ಲಿ ಇಂದು ವೃದ್ದಾಪ್ಯ ತಂದೆ ತಾಯಿಗಳು ತಮ್ಮ ಬದುಕಿನ ಕೊನೆಯ ದಿನಗಳನ್ನು ಆತಂಕದಿಂದ ಕಳೆಯಬೇಕಾಗಿದೆ.

★ ಸಂಘಜೀವನ :
ನಗರಗಳಿಗೆ ಹೋಲಿಸಿದರೆ ಹಳ್ಳಿಗಳಲ್ಲಿ ಸಂಘ ಜೀವನ ಇನ್ನೂ ಉಳಿದಿದೆ. ಅಜ್ಜ-ಅಜ್ಜಿ, ತಾಯಿ-ತಂದೆ, ಮಕ್ಕಳು ಒಂದೇ ಮನೆಯಲ್ಲಿ ಇರುವುದನ್ನೂ ಇಂದಿಗೂ ನೋಡಬಹುದು. ಇದರಿಂದಲೇ ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿಗಳ ಅಬ್ಬರದ ನಡುವೆಯೂ ದೇಶ ತನ್ನ ಭಿನ್ನತೆಯನ್ನು ಉಳಿಸಿಕೊಂಡಿದೆ. ಭಾರತದ ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸಲು ಪರಸ್ಪರ ಸ್ನೇಹ, ಸಹಕಾರ, ಸೌಹಾರ್ಧತೆಯನ್ನು ಬೆಳೆಸಿ, ಎಲ್ಲ ಜಾತಿ ದರ್ಮಗಳ ನಡುವೆ ಒಮ್ಮತ ಮೂಡಿಸಿ, ಜನರಲ್ಲಿ ಭಾವೈಕ್ಯತೆಯನ್ನು ಬೆಳೆಸಬೇಕಾಗಿದೆ. ದೇಶದ ಉಜ್ವಲ ಭವಿಷ್ಯಕ್ಕಾಗಿ ಸಹಬಾಳ್ವೆಯನ್ನು ಪ್ರೋತ್ಸಹಿಸಬೇಕಾಗಿದೆ.
ಸಾಂಸ್ಕೃತಿಕ ಚಟುವಟಿಕೆಗಳು
ದುಡಿದು ದಣಿದ ಮನಸ್ಸಿಗೆ ಮುದ ನೀಡಲು, ಸಾಂಸ್ಕೃತಿಕ ಚಟುವಟಿಕೆಗಳು ಅತ್ಯವಶ್ಯಕ. ಗ್ರಾಮೀಣ ಪ್ರದೇಶದ ಜನರು ತಮ್ಮ ಬಿಡುವಿನ ವೇಳೆಯಲ್ಲಿ, ಹಬ್ಬ ಹರಿದಿನಗಳಲ್ಲಿ ಅತ್ಯುತ್ಸಾಹದಿಂದ ಪ್ರಾದೇಶಿಕವಾದ ನಾಟಕಗಳು, ಬಯಲಾಟಗಳು, ಕೋಲಾಟ ಹಾಗು ವಿವಿಧ ರೀತಿಯ ಹಾಡು ಭಜನೆ ಮುಂತಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.

ಇತ್ತೀಚಿನ ದಿನಗಳಲ್ಲಿ ದೂರದರ್ಶನ, ಸಿನಿಮಾ ಮತ್ತು ಇತರ ಮಾದ್ಯಮಗಳ ಹೊಡೆತದಿಂದ ಅವುಗಳಲ್ಲಿ ಭಾಗಿಯಾಗುವವರೂ ಇಲ್ಲ ಹಾಗು ಒಂದು ವೇಳೆ ಯಾರಾದರು ಆ ದಿಕ್ಕಿನಲ್ಲಿ ಮನಸ್ಸು ಮಾಡಿದರೆ ಅದಕ್ಕೆ ಸಿಗುವ ಬೆಲೆ ಒತ್ತಟ್ಟಿಗಿರಲಿ ನೋಡುವವರೂ ಇರುವುದಿಲ್ಲ. ಇದರಿಂದ ದೇಶದ ನೈಜ ಸಾಂಸ್ಕೃತಿಕ ಕಲೆ ಅಳಿಯುವುದು ಸಹಜ. ಸಾಂಸ್ಕೃತಿಕ ಕಲೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಅನೇಕ ಮಂದಿಗೆ ಬದುಕನ್ನೂ ನೀಡಬಹುದು.

ಯೋಜನೆಗಳನ್ನು ಸಾಕಾರಗೊಳಿಸಲು ಸರ್ಕಾರ ಮತ್ತು ಸಂಘ ಸಂಸ್ಥೆಗಳು ಗ್ರಾಮೀಣ ಜನರ ಸಹಬಾಗಿತ್ವದಲ್ಲಿ ಅಭಿವೃದ್ದಿ ಸಂಸ್ಥೆಗಳನ್ನು ನಿರ್ಮಿಸಿ ಅದಕ್ಕೆ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಹಾಗು ಜನಪ್ರತಿನಿಧಿಗಳನ್ನು ನಿಯಮಿಸಿ ಅವರಿಗೆ ಅವಶ್ಯಕ ತರಬೇತಿಯನ್ನು ಕಲ್ಪಿಸಬೆಕು. ವಿಕಲಾಂಗರು, ಬಡವರು, ಅನಕ್ಷರಸ್ಥರು ಮತ್ತು ಸಮಾಜದ ಸೌಲಭ್ಯಗಳು ವಂಚಿತರಾದವರಿಗೆ ಸರ್ಕಾರಗಳಿಂದ ಮತ್ತು ಇತರ ಸಂಘ ಸಂಸ್ಥೆಗಳಿಂದ ಒದಗುವ ಸಹಾಯಗಳ ಬಗೆಗೆ ಮಾಹಿತಿ ನೀಡುವುದು ಮತ್ತು ಅವರಿಗೆ ಲಭ್ಯವಾಗುವ ರೀತಿಯಲ್ಲಿ ಕ್ರಿಯಾತ್ಮಕ ಸಹಾಯಹಸ್ತ ನೀಡುವುದು. ಇಲ್ಲಿಯವರೆಗೂ ಸರ್ಕಾರದ ಯೋಜನೆಗಳು ಸೌಲಭ್ಯಗಳು ತಲುಪದೇ ಇರುವ ಪ್ರದೇಶಗಳಿಗೆ ಹೆಚ್ಚಿನ ಗಮನ ನೀಡುವುದು. ದಲಿತರು ಅಲೆಮಾರಿಗಳು, ಆದಿವಾಸಿಗಳು, ಹಾಗು ಗುಡ್ಡಗಾಡು ಪ್ರದೇಶದ ಕಾಡುಜನರ ಉದ್ದಾರಕ್ಕೆ ಶ್ರಮಿಸುವುದು.
ಬಡವರ ಅತಿ ಮುಖ್ಯ ಆರ್ಥಿಕ ಮತ್ತು ಸಾಮಾಜಿಕ ಅವಶ್ಯಕತೆಗಳನ್ನು ಪೂರೈಸಲು ಸಹಕಾರಿ ಸಂಘಗಳನ್ನು ನಿರ್ಮಿಸಿ ಅದು ಸೂಕ್ತವಾಗಿ ಕಾರ್ಯರೂಪಿಸುವಂತೆ ಕ್ರಮ ಕೈಗೊಳ್ಳುವುದು. ಭಯ ಮತ್ತು ದುಗುಡತೆಯನ್ನು ನಿವಾರಿಸಲು ಗ್ರಾಮೀಣ ಜನರ ಅಗತ್ಯ ವಸ್ತುಗಳು ಹೇರಳವಾಗಿ ದೊರೆಯುವಂತೆ ನೋಡಿಕೊಳ್ಳುವುದು. ಹಸಿದವನಿಗೆ ಒಂದು ಹೊತ್ತಿನ ಊಟ ಬಡಿಸುವುದು ತಪ್ಪಲ್ಲದಿದ್ದರೂ, ಅಂತಹ ತಾತ್ಕಾಲಿಕ ಯೋಜನೆಗಳನ್ನು ಜಾರಿಗೊಳಿಸಿ ಜವಾಬ್ಧಾರಿಯಿಂದ ತಪ್ಪಿಸಿಕೊಳ್ಳುವ ಬದಲು, ಗ್ರಾಮೀಣ ಜನರೇ ದುಡಿದು ಜೀವನ ನಡೆಸಲು ಸಹಕಾರಿಯಾಗುವಂತಹ ಶಾಶ್ವತ ಯೋಜನೆಗಳನ್ನು ರೂಪಿಸಿ ಅವುಗಳನ್ನು ಪ್ರಾದೆಶಿಕ್ಕನುಗುಣವಾಗಿ ಅನುಷ್ಟಾನಗೊಳಿಸಿದರೆ ಸಪಲತೆಯನ್ನು ನಿರೀಕ್ಷಿಸಲು ಸಾಧ್ಯವಾಗುವುದು. ಒಟ್ಟಿನಲ್ಲಿ ಸ್ವಾವಲಂಭಿಯಾಗಿ, ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಲ್ಲುವಂತಹ ಗ್ರಾಮೀಣ ಸಮಾಜವನ್ನು ಸೃಷ್ಟಿಸಿದರೆ ಅದು ದೇಶದ ಸರ್ವತೋಮುಖ ಅಭಿವೃದ್ಧಿಗೆ ನಾಂದಿಯಾಗುವುದರಲ್ಲಿ ಅನುಮಾನವಿಲ್ಲ.

ಮೂಲ:  ( ಲೇಖಕರು: ಜಿ. ಆರ್. ವಸಂತಕುಮಾರ್ )

Sunday, 2 November 2014

★ ಸಾಮಾನ್ಯ ಜ್ಞಾನ (ಭಾಗ - 9) General Knowledge (Part-9):


 ★ ಸಾಮಾನ್ಯ ಜ್ಞಾನ (ಭಾಗ - 9) General Knowledge (Part-9):


★ ಕರ್ನಾಟಕದ ಮೊದಲ ಮಹಿಳೆಯರು

300) ಕರ್ನಾಟಕದ ಪ್ರಥಮ ವಚನಗಾರ್ತಿ ಯಾರು?
- ಅಕ್ಕಮಹಾದೇವಿ


301) ಕರ್ನಾಟಕದ ಪ್ರಥಮ ಪತ್ರಕರ್ತೆ / ಪ್ರಕಾಶಕಿ ಯಾರು?
- ನಂಜನಗೂಡು ತಿರುಮಲಾಂಬಾ


302) ನಾಟಕ ರಂಗದ ಮೇಲೆ ಏರಿದ ಕನ್ನಡದ ಮೊದಲ ಸ್ತ್ರೀ ಯಾರು?
- ಗಂಗೂಬಾಯಿ ಗುಳೇದಗುಡ್ಡ


303) ಕರ್ನಾಟಕದ ಪ್ರಥಮ ಮಹಿಳಾ ಮಂತ್ರಿ ಯಾರು?
- ಗ್ರೇಸ್ ಠಕ್ಕರ್


304) ಅಖಿಲ ಭಾರತದ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷರು ಯಾರು?
- ಜಯದೇವಿ ತಾಯಿ ಲಿಗಾಡೆ


305) ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡಿತಿ ಯಾರು?
- ಅನುಪಮಾ ನಿರಂಜನ


306) ಕನ್ನಡದ ಪ್ರಥಮ ನವೋದಯ ಕವಯಿತ್ರಿ ಯಾರು?
- ಬೆಳಗೆರೆ ಜಾನಕಮ್ಮ


★'''''★'''''★


★ ಪತ್ರಿಕಾ ಲೋಕದ ಪ್ರಥಮರು ★

307) ಕರ್ನಾಟಕದ ಪ್ರಥಮ ಪತ್ರಿಕೆ ಯಾವುದು?
- ಮಂಗಳೂರು ಸಮಾಚಾರ (೧೮೪೮)


308) ಕರ್ನಾಟಕದ ಪ್ರಥಮ ದಿನಪತ್ರಿಕೆ ಯಾವುದು?
- ಸೂರ್ಯೋದಯ ಪ್ರಕಾಶಿಕ (೧೮೭೦)


309) ಕರ್ನಾಟಕದ ಪ್ರಥಮ ಕನ್ನಡ e-ಪತ್ರಿಕೆ ಯಾವುದು?
- ವಿಶ್ವಕನ್ನಡ


310) ಕರ್ನಾಟಕದ ಪ್ರಥಮ ವಾರ ಪತ್ರಿಕೆ ಯಾವುದು?
- ಸುಬುದ್ಧಿ ಪ್ರಕಾಶ (೧೮೫೦)


311) ಕರ್ನಾಟಕದ ಪ್ರಥಮ ವಿಜ್ಞಾನ ಪತ್ರಿಕೆ ಯಾವುದು?
- ವಿಜ್ಞಾನ


312) ಕರ್ನಾಟಕದ ಪ್ರಥಮ ವಿಡಿಯೋ ಪತ್ರಿಕೆ ಯಾವುದು?
- ಬೆಳ್ಳಿಚುಕ್ಕಿ


313) ಕರ್ನಾಟಕದ ಪ್ರಥಮ ಮಕ್ಕಳ ಪತ್ರಿಕೆ ಯಾವುದು?
- ಮಕ್ಕಳ ಪುಸ್ತಕ


314) ಕರ್ನಾಟಕದ ಪ್ರಥಮ ಮಹಿಳಾ ಪತ್ರಿಕೆ ಯಾವುದು?
- ಕರ್ನಾಟಕ ನಂದಿನಿ (೧೯೧೩)


315) ಕರ್ನಾಟಕದ ಪ್ರಥಮ ಸಾಹಿತ್ಯಿಕ ವೈಜ್ಞಾನಿಕ ಪತ್ರಿಕೆ ಯಾವುದು?
- ಕರ್ನಾಟಕ ಜ್ಞಾನ ಮಂಜರಿ (೧೮೭೮)


316) ಕರ್ನಾಟಕದ ಪ್ರಥಮ ಶಿಕ್ಷಣ ಪತ್ರಿಕೆ ಯಾವುದು?
- ಕನ್ನಡ ಜ್ಞಾನ ಬೋಧಿನಿ (೧೮೬೨)


317) ಕರ್ನಾಟಕದ ಪ್ರಥಮ ಜಿಲ್ಲಾ ಪತ್ರಿಕೆ ಯಾವುದು?
- ಜ್ಞಾನೋದಯ (ಶಿವಮೊಗ್ಗ)


318) ಕನ್ನಡದಲ್ಲಿ ಪ್ರಾರಂಭವಾದ ಮೊದಲ ಕಾಮಶಾಸ್ತ್ರ ಪತ್ರಿಕೆ ಯಾವುದು?
- ಪ್ರೇಮ


319) ಕರ್ನಾಟಕದ ಮೊಟ್ಟಮೊದಲ ಕಾನೂನು ಪತ್ರಿಕೆ ಯಾವುದು?
- ನ್ಯಾಯ ಸಂಗ್ರಹ


320) ಕರ್ನಾಟಕದ ಮೊಟ್ಟಮೊದಲ ಚಲನಚಿತ್ರ ಪತ್ರಿಕೆ ಯಾವುದು?
- ಸಿನಿಮಾ


321) ಕನ್ನಡದಲ್ಲಿ ಆರಂಭಗೊಂಡ ಮೊದಲ ಹಾಸ್ಯ ಪತ್ರಿಕೆ ಯಾವುದು?
- ವಿಕಟ ಪ್ರತಾಪ


322) ಅತಿ ಹೆಚ್ಚು ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಕನ್ನಡದ ಮೊದಲ ಪತ್ರಿಕೆ ಯಾವುದು?
- ಉದಯವಾಣಿ



★'''''★'''''★



★ ಕರ್ನಾಟಕದ ಸಾಹಿತ್ಯ ಲೋಕ  ಪ್ರಥಮರು ★


323) ಕನ್ನಡದ ಮೊದಲ ಕೃತಿ ಯಾವುದು?
- ಕವಿರಾಜಮಾರ್ಗ


324) ಕನ್ನಡದಲ್ಲಿ ರಚನೆಗೊಂಡ ಮೊದಲ ಕಾವ್ಯ ಯಾವುದು?
- ಆದಿಪುರಾಣ


325) ಕನ್ನಡದ ಮೊದಲ ಗದ್ಯ ಕೃತಿ ಯಾವುದು?
- ವಡ್ಡಾರಾಧನೆ


326) ಕನ್ನಡದಲ್ಲಿ ರಚನೆಗೊಂಡ ಮೊದಲ ನಾಟಕ ಯಾವುದು?
- ಮಿತ್ರಾವಿಂದಾ ಗೋವಿಂದಾ


327) ಕನ್ನಡದ ಮೊದಲ ಗೀತ ನಾಟಕ ಯಾವುದು?
- ಮುಕ್ತದ್ವಾರ


328) ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ ಯಾವುದು?
- ಜಾತಕ ತಿಲಕ ( ಶ್ರೀಧರಾಚಾರ್ಯ )


329) ಕನ್ನಡದ ಮೊದಲ ಸ್ವತಂತ್ರ ಪೌರಾಣಿಕ ನಾಟಕ ಯಾವುದು?
- ಪೃಥು ವಿಜಯ


330) ಕನ್ನಡದಲ್ಲಿ ರಚನೆಗೊಂಡ ಮೊದಲ ಗಾದೆಗಳ ಸಂಕಲನ ಯಾವುದು?
- ಕನ್ನಡ ಗಾದೆಗಳು


331) ಕನ್ನಡದಲ್ಲಿ ರಚನೆಗೊಂಡ ಮೊದಲ ಒಗಟುಗಳ ಸಂಗ್ರಹ ಯಾವುದು?
- ಮಕ್ಕಳ ಒಡಪುಗಳು


332) ಕನ್ನಡದಲ್ಲಿ ರಚನೆಗೊಂಡ ಮೊದಲ ಪ್ರಬಂಧ ಸಂಕಲನ ಯಾವುದು?
- ಲೋಕರಹಸ್ಯ


333) ಕನ್ನಡದ ಮೊದಲ ಛಂದಶಾಸ್ತ್ರ ಗ್ರಂಥ ಯಾವುದು?
- ಛಂದೋಂಬುಧಿ


334) ಕನ್ನಡದ ಮೊದಲ ವೈದ್ಯ ಗ್ರಂಥ ಯಾವುದು?
- ಗೋವೈದ್ಯ ( ಕೀರ್ತಿವರ್ಮ )


335) ಕನ್ನಡದ ಮೊದಲ ವಿಷಯ ವಿಶ್ವಕೋಶ ಯಾವುದು?
- ವಿವೇಕ ಚಿಂತಾಮಣಿ


336) ಕನ್ನಡದ ಮೊದಲ ವಿಶ್ವಕೋಶ ಯಾವುದು?
- ಲೋಕೋಪಕಾರ


337) ಕನ್ನಡದಲ್ಲಿ ರಚನೆಗೊಂಡ ಮೊದಲ ಮಕ್ಕಳ ವಿಶ್ವಕೋಶ ಯಾವುದು?
- ಬಾಲ ಪ್ರಪಂಚ


338) ಕನ್ನಡದ ಮೊದಲ ನವ್ಯತೆಯನ್ನೊಳಗೊಂಡ ಕಾದಂಬರಿ ಯಾವುದು?
- ವಿಶ್ವಾಮಿತ್ರನ ಸೃಷ್ಟಿ (ಶ್ರೀರಂಗ)


339) ಕನ್ನಡದಲ್ಲಿ ರಚನೆಗೊಂಡ ಮೊದಲ ಮನೋವೈಜ್ಞಾನಿಕ ಕಾದಂಬರಿ ಯಾವುದು?
- ಅಂತರಂಗ ( ದೇವುಡು )


340) ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು?
- ಶಬ್ದಮಣಿ ದರ್ಪಣ


341) ಕನ್ನಡದ ಮೊದಲ ಲಾಕ್ಷಣಿಕ ಗ್ರಂಥ ಯಾವುದು?
- ಕವಿರಾಜ ಮಾರ್ಗ


342) ಮೊಟ್ಟಮೊದಲು ಬೈಬಲ್ ನ್ನು ಕನ್ನಡೀಕರಣಗೊಳಿಸಿದವರು ಯಾರು?
 - ಜಾನ್ ಹ್ಯಾಂಡ್ಸ್


343) ಕನ್ನಡದ ಮೊದಲ ಐತಿಹಾಸಿಕ ನಾಟಕಕಾರ ಯಾರು?
- ಸಂಸ


344) ಕನ್ನಡದಲ್ಲಿ ರಚನೆಗೊಂಡ ಮೊದಲ ಪ್ರವಾಸ ಕಥನ ಯಾವುದು?
 - ದಕ್ಷಿಣ ಭಾರತ ಯಾತ್ರೆ


345) ಕನ್ನಡದಲ್ಲಿ ರಚನೆಗೊಂಡ ಮೊದಲ ಪತ್ತೇದಾರಿ ಕಾದಂಬರಿ ಯಾವುದು?
- ಚೋರಗ್ರಹಣ ತಂತ್ರ


346) ಕನ್ನಡದ ಮೊದಲ ಆಯುರ್ವೇದ ಗ್ರಂಥ ಯಾವುದು?
- ಕರ್ಣಾಟಕ ಕಲ್ಯಾಣಕಾರಕ


347) ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ ಯಾವುದು?
- ಇಂದಿರಾಬಾಯಿ


348) ಕನ್ನಡದಲ್ಲಿ ರಚನೆಗೊಂಡ ಮೊದಲ ಐತಿಹಾಸಿಕ ಕಾದಂಬರಿ ಯಾವುದು?
- ಮುದ್ರಾಮಂಜೂಷ


349) ಕನ್ನಡದಲ್ಲಿ ರಚನೆಗೊಂಡ ಮೊದಲ ಜೀವನಚರಿತ್ರೆ ಯಾವುದು?
- ಕುಣಿಗಲ್ ರಾಮಾಶಾಸ್ತ್ರಿಗಳ ಜೀವನ ಚರಿತ್ರೆ


350) ಕನ್ನಡದ ಮೊದಲ ಅಭಿನಂದನಾ ಗ್ರಂಥ ಯಾವುದು?
- ಸಂಭಾವನೆ ( ಬಿ.ಎಂ.ಶ್ರೀ.ಯವರಿಗೆ )


351) ಕನ್ನಡದಲ್ಲಿ ರಚನೆಗೊಂಡ ಮೊದಲ ಇಂಗ್ಲೀಷ್ - ಕನ್ನಡ ನಿಘಂಟುಕಾರ ಯಾರು?
- ವಿಲಿಯಮ್ ರೀವ್ಸ್


352) ಕನ್ನಡದ ಮೊದಲ ತಾಂತ್ರಿಕ ಪದಕೋಶ ಯಾವುದು?
- ಔದ್ಯಮಿಕ ನಿಘಂಟು


353) ಕನ್ನಡದ ಮೊದಲ ಕಾವ್ಯ ನಿಘಂಟು ಯಾವುದು?
- ರನ್ನಕಂದ


354) ಕನ್ನಡದ ಮೊದಲ ಗದ್ಯ ನಿಘಂಟು ಯಾವುದು?
- ಕರ್ಣಾಟಕ ಶಬ್ದಸಾರ


355) ಕನ್ನಡದಲ್ಲಿ ರಚನೆಗೊಂಡ ಮೊದಲ ವೈದ್ಯಕೀಯ ನಿಘಂಟು ಯಾವುದು?
- ವೈದ್ಯ ಪದಕೋಶ


★'''''★'''''★



★ ಬಣ್ಣದ ಲೋಕದ ಪ್ರಥಮರು ★


356) ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ಮೊದಲ ಚಿತ್ರ ಯಾವುದು?
- ಬೇಡರ ಕಣ್ಣಪ್ಪ


357) ಕನ್ನಡದ ಮೊದಲ ಐತಿಹಾಸಿಕ ಚಿತ್ರ ಯಾವುದು?
- ರಣಧೀರ ಕಂಠೀರವ


358) ಕನ್ನಡದ ಮೊದಲ ಮೂಕಿ ಚಿತ್ರ ಯಾವುದು?
- ಮೃಚ್ಛಕಟಿಕ


359) ಕನ್ನಡದ ಮೊದಲ ವರ್ಣ ಚಲನಚಿತ್ರ ಯಾವುದು?
- ಅಮರಶಿಲ್ಪಿ ಜಕಣಾಚಾರಿ


360) ಕರ್ನಾಟಕದ ಮೊಟ್ಟಮೊದಲ ಚಿತ್ರಮಂದಿರ ಯಾವುದು?
- ಪ್ಯಾರಾಮೌಂಟ್ ( ೧೯೦೫ )


361) ಕನ್ನಡದ ಮೊದಲ ಕಾದಂಬರಿ ಆಧಾರಿತ ಚಲನಚಿತ್ರ ಯಾವುದು?
- ಕರುಣೆಯೇ ಕುಟುಂಬದ ಕಣ್ಣು


362) ಕನ್ನಡದ ಮೊದಲ ರಿಯಾಯಿತಿ (ಸಬ್ಸಿಡಿ ) ಪಡೆದ ಚಿತ್ರ ಯಾವುದು?
- ನಕ್ಕರೆ ಅದೇ ಸ್ವರ್ಗ


363) ಕನ್ನಡದ ಮೊದಲ ಸಾಮಾಜಿಕ ಚಲನಚಿತ್ರ ಯಾವುದು?
- ಸಂಸಾರ ನೌಕೆ (೧೯೩೬)


364) ಚಲನಚಿತ್ರ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಕನ್ನಡದ ಮೊದಲಿಗರು ಯಾರು?
- ಶಿವಮೊಗ್ಗ ಸುಬ್ಬಣ್ಣ


365) ಚಿತ್ರ ಸಂಗೀತಕ್ಕೆ ೨ ಬಾರಿ ರಾಷ್ಟ್ರ ಪ್ರಶಸ್ತಿ ಕನ್ನಡದ ಮೊದಲಿಗರು ಯಾರು?
- ಬಿ.ವಿ.ಕಾರಂತ್


366) ಕನ್ನಡದ ಮೊದಲ ಭಾವಗೀತೆ ಧ್ವನಿಸುರುಳಿ ಯಾವುದು?
- ನಿತ್ಯೋತ್ಸವ


367) ಕರ್ನಾಟಕದ ಮೊಟ್ಟಮೊದಲ ವೃತ್ತಿನಾಟಕ ಕಂಪೆನಿ ಯಾವುದು?
- ಶ್ರೀ ವೀರನಾರಾಯಣ ಪ್ರಾಸಾದಿತ ಕೃತಪುರ ನಾಟಕ ಮಂಡಳಿ


368) ಕರ್ನಾಟಕದ ಮೊಟ್ಟಮೊದಲ ಬೀದಿ ನಾಟಕ ಪ್ರಯೋಗ ಯಾವುದು?
-  ಕಟ್ಟು


369) ಕನ್ನಡದ ಮೊಟ್ಟಮೊದಲ ಹವ್ಯಾಸಿ ನಾಟಕ ತಂಡ ಯಾವುದು?
- ಭಾರತ ಕಲೋತ್ತೇಜಕ ಸಂಗೀತ ಸಮಾಜ


370) ಕನ್ನಡದ ಮೊಟ್ಟಮೊದಲ ರೇಡಿಯೋ ನಾಟಕ ಯಾವುದು?
- ನೀರಗಂಟಿ ಮಾರ ( ವಿ.ಕೆ.ಶ್ರೀನಿವಾಸನ್ )


371) ಕರ್ನಾಟಕದಲ್ಲಿ ಪ್ರದರ್ಶನಗೊಂಡ ಮೊದಲ ಅಸಂಗತ ನಾಟಕ ಯಾವುದು?
- ಬೊಕ್ಕತಲೆಯ ನರ್ತಕಿ ( ಸುಮತೀಂದ್ರ ನಾಡಿಗ್ )



★'''''★'''''★



★ನಾಡಿನ ಮೊದಲುಗಳು ★

372) ಕರ್ನಾಟಕದ ಮೊಟ್ಟಮೊದಲ ರಾಜವಂಶ ಯಾವುದು?
- ಕದಂಬ


373) ಕರ್ನಾಟಕದಲ್ಲಿ ಕಟ್ಟಲಾದ ಮೊಟ್ಟಮೊದಲ ಕೆರೆ ಯಾವುದು?
- ಚಂದ್ರವಳ್ಳಿ


374) ಕರ್ನಾಟಕದಲ್ಲಿ ನಿರ್ಮಿಸಲಾದ ಮೊದಲ ಶಿಲ್ಪ ಯಾವುದು?
- ನಾಗಶಿಲ್ಪ


375) ಕರ್ನಾಟಕದ ಮೊಟ್ಟಮೊದಲ ಶಾಸನ ಯಾವುದು?
- ಹಲ್ಮಿಡಿ


376) ಕರ್ನಾಟಕದಲ್ಲಿ ನಿರ್ಮಿಸಲಾದ ಮೊಟ್ಟಮೊದಲ ಕೋಟೆ ಯಾವುದು?
- ಬಾದಾಮಿ ಕೋಟೆ


377) ಕರ್ನಾಟಕದಲ್ಲಿ ನಿರ್ಮಿಸಲಾದ ಮೊಟ್ಟಮೊದಲ ಜೈನ ದೇವಾಲಯ ಯಾವುದು?
- ಪ್ರಣವೇಶ್ವರ ದೇವಾಲಯ, ತಾಳಗುಂದ


378) ಕರ್ನಾಟಕದಲ್ಲಿ ಕಟ್ಟಲಾದ ಮೊಟ್ಟಮೊದಲ ಬೌದ್ಧ ವಿಹಾರ ಯಾವುದು?
- ಬನವಾಸಿ


379) ಕರ್ನಾಟಕದ ಅತಿ ಪ್ರಾಚೀನ ಕಲ್ಲಿನ ನಿರ್ಮಿತ ಕಟ್ಟಡ ಯಾವುದು?
- ಹಲಸಿಯ ಜೈನ ಬಸದಿ


380) ಕರ್ನಾಟಕದ ಮೊಟ್ಟಮೊದಲ ವಿಶ್ವವಿದ್ಯಾಲಯ ಯಾವುದು?
- ಮೈಸೂರು ವಿ.ವಿ.


381) ಕರ್ನಾಟಕದ ಮೊಟ್ಟಮೊದಲ ಕಾಲೇಜು ಯಾವುದು?
- ಸೆಂಟ್ರಲ್ ಕಾಲೇಜು, ಬೆಂಗಳೂರು.


382) ಕರ್ನಾಟಕದ ಮೊಟ್ಟಮೊದಲ ವೈದ್ಯಕೀಯ ಕಾಲೇಜು ಯಾವುದು?
- ಮೈಸೂರು.


383) ಕರ್ನಾಟಕದ ಮೊಟ್ಟಮೊದಲ ಪಾಲಿಟೆಕ್ನಿಕ್ ಕಾಲೇಜು ಯಾವುದು?
- ಶ್ರೀ ಜಯಚಾಮರಾಜೇಂದ್ರ ಪಾಲಿಟೆ.



★'''''★'''''★



★ ಖಂಡವಾರು ಅತಿ ದೊಡ್ಡ  ನದಿಗಳು ★


384) ಏಷ್ಯಾ ಖಂಡದ ಅತಿ ದೊಡ್ಡ  ನದಿ ಯಾವುದು?
-ಯಾಂಗ್ ಶಿಕಿಯಾಂಗ.


385) ಆಫ್ರಿಕಾ ಖಂಡದ ಅತಿ ದೊಡ್ಡ  ನದಿ ಯಾವುದು?
-ನೈಲ್.


386) ಉತ್ತರ ಅಮೇರಿಕಾ ಖಂಡದ ಅತಿ ದೊಡ್ಡ  ನದಿ ಯಾವುದು?
-ಮಿಸಿಸಿಪ್ಪಿ.


387) ದಕ್ಷಿಣ ಅಮೇರಿಕಾ ಖಂಡದ ಅತಿ ದೊಡ್ಡ  ನದಿ ಯಾವುದು?
-ಅಮೆಜಾನ್.


388) ಯುರೋಪ ಖಂಡದ ಅತಿ ದೊಡ್ಡ  ನದಿ ಯಾವುದು?
-ಓಲ್ಗಾ.


389) ಆಸ್ಟ್ರೇಲಿಯಾ ಖಂಡದ ಅತಿ ದೊಡ್ಡ  ನದಿ ಯಾವುದು?
-ಮುರ್ರೆ.


★ ಭಾರತದ ಮೊದಲ ಮಹಿಳೆಯರು:


390) ಭಾರತದ ರಾಷ್ಟ್ರೀಯ ಕಾಂಗ್ರೆಸನ  ಪ್ರಥಮ ಮಹಿಳಾ ಅಧ್ಯಕ್ಷೆ ಯಾರು?
-ಸರೋಜಿನಿ ನಾಯ್ಡು


391) ಯು.ಎಸ್.ಜನರಲ್ ಅಸೆಂಬ್ಲಿಯ ಅಧ್ಯಕ್ಷರಾದ ಪ್ರಥಮ ಮಹಿಳೆ
-ವಿಜಯಲಕ್ಷ್ಮಿ ಪಂಡಿತ್ .


392) ಇಂಡಿಯನ್ ಏರ್ ಲೈನ್ಸ್ ನ ಪ್ರಥಮ ವಿಮಾನಚಾಲಕಿ ಯಾರು?
-ದರ್ಬಾ ಬ್ಯಾನರ್ಜಿ.


393) ಇಂಗ್ಲಿಷ್ ಕಾಲುಮೆಯನ್ನು ಈಜಿಕೊಂಡು ದಾಟಿದ ಪ್ರಥಮ ಮಹಿಳೆ ಯಾರು?
-ಆರತಿಸಹ.

394) ದಕ್ಷಿಣ ಭಾರತದಿಂದ ವೈದ್ಯಕೀಯ ಪದವಿ ಪಡೆದ ಪ್ರಥಮ ಮಹಿಳೆ ಯಾರು?
-ಡಾ|| ಮುತ್ತುಲಕ್ಷ್ಮಿ ರೆಡ್ಡಿ.


395) ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಆಯ್ಕೆಯಾದ ಪ್ರಥಮ ಮಹಿಳೆ ಯಾರು?
-ಲೈಲಾ ಸೇಠ್.


396) ಎವರೆಸ್ಟ್ ಶಿಖರವನ್ನು ಏರಿದ ಪ್ರಥಮ ಭಾರತೀಯ ಮಹಿಳೆ ಯಾರು?
-ಬಚೇಂದ್ರಿ ಪಾಲ್.


397) ಸೇನಾಪದಕ ಪಡೆದ ಮೊದಲ ಮಹಿಳೆ ಯಾರು?
-ಬಿನ್ ಲಾದೇವಿ.


398) ವಿಶ್ವಸುಂದರಿಯಾಗಿ ಆಯ್ಕೆಯಾದ ಪ್ರಥಮ ಭಾರತೀಯ ಸುಂದರಿ ಯಾರು?
-ರೀಟಾ ಫೆರಿಯಾ.


399) ಭಾರತದ ಮೊದಲ ಮಹಿಳಾ ಇಂಜಿನಿಯರ್ ಯಾರು?
ಪಿ.ಕೆ. ಥ್ರೇಸಿಯಾ.


400) ಭಾರತದ ಪ್ರಥಮ ಮಹಿಳಾ ಗಗನಯಾತ್ರಿ ಯಾರು?
-ಕಲ್ಪನಾ ಚಾವ್ಲಾ


(ಕೃಪೆ: gklights)

Thursday, 30 October 2014

★ ಕೇಂದ್ರ ಬಜೆಟ್ ಗೆ ಸಂಬಂಧಿಸಿದ ಕೆಲವು ಮಹತ್ವದ ಅಂಶಗಳು:  


★ ಕೇಂದ್ರ ಬಜೆಟ್ ಗೆ ಸಂಬಂಧಿಸಿದ ಕೆಲವು ಮಹತ್ವದ ಅಂಶಗಳು:


ಕೇಂದ್ರ ಬಜೆಟ್ ನ ಕುರಿತು ಸಂಕ್ಷಿಪ್ತ ವಿವರಣೆ:

*. ಬಜೆಟ್ ಎಂಬ ಶಬ್ದವು ಮಧ್ಯ ಫ್ರಾನ್ಸ್‌ನ bougette ಎಂಬ ಶಬ್ದದಿಂದ ಬಂದಿದೆ. ಇದರ ಅರ್ಥ 'ಚರ್ಮದ ಬ್ಯಾಗ್‌'.

*. ರಾಷ್ಟ್ರಪತಿ ನಿಗದಿಪಡಿಸಿದ ದಿನದಂದೇ ಭಾರತದಲ್ಲಿ ಬಜೆಟ್ ಮಂಡಿಸಲಾಗುತ್ತದೆ.

*. ವಿತ್ತ ಸಚಿವರ ಬಜೆಟ್ ಭಾಷಣವು 2 ಭಾಗಗಳಾಗಿ ವಿಂಗಡಿಸಲಾಗಿರುತ್ತದೆ.
- ಒಂದನೇ ಭಾಗವು ದೇಶದ ಸಾಮಾನ್ಯ ಆರ್ಥಿಕ ಸಮೀಕ್ಷೆಯನ್ನೂ,
- ಎರಡನೇ ಭಾಗವು ತೆರಿಗೆ ಪ್ರಸ್ತಾಪವನ್ನು ಹೊಂದಿರುತ್ತದೆ.

*. ಬಜೆಟ್ ಪೇಪರ್‌ಗಳನ್ನು ಮುದ್ರಿಸುವ ನೌಕರರನ್ನು ಬಜೆಟ್ ಮಂಡನೆಗೆ ಒಂದು ವಾರ ಮುಂಚೆಯೇ ಸಂಪೂರ್ಣವಾಗಿ ಯಾರ ಜತೆಗೂ ಸಂಪರ್ಕವಿಲ್ಲದಂತೆ ಪ್ರತ್ಯೇಕವಾಗಿಡಲಾಗುತ್ತದೆ.

*. ಸಾಮಾನ್ಯವಾಗಿ ಫೆಬ್ರವರಿ ತಿಂಗಳ ಕೊನೇ ಕೆಲಸದ ದಿನದಂದು ಬಜೆಟ್ ಮಂಡನೆ ಆಗುತ್ತದೆ.

*. ಕೇಂದ್ರ ಬಜೆಟ್‌ನ ಘೋಷಣೆಯಲ್ಲಿ ಹಣಕಾಸು ಸಚಿವಾಲಯ, ಯೋಜನಾ ಆಯೋಗ, ಆಡಳಿತಾತ್ಮಕ ಸಚಿವಾಲಯಗಳು ಹಾಗೂ ಮಹಾಲೇಖಪಾಲರು ಪ್ರಮುಖ ಪಾತ್ರ ವಹಿಸುತ್ತಾರೆ

*. ಪ್ರಪ್ರಥಮ ಬಾರಿಗೆ ದೇಶದಲ್ಲಿ ಬಜೆಟ್ ಮಂಡನೆಯಾಗಿದ್ದು 1860ರ ಏಪ್ರಿಲ್ 7ರಂದು.ಈಸ್ಟ್ ಇಂಡಿಯಾ ಕಂಪನಿಯಿಂದ.

*. ಭಾರತದ ಮೊದಲ ಬಜೆಟ್ ಅನ್ನು ಮಂಡಿಸಿದವರು ಜೇಮ್ಸ್ ವಿಲ್ಸನ್.

*. ಸ್ವಾತಂತ್ರ್ಯಾನಂತರ, ಭಾರತದ ಪ್ರಥಮ ಹಣಕಾಸು ಸಚಿವ ಆರ್.ಕೆ. ಷಣ್ಮುಗಂ ಚೆಟ್ಟಿ ಅವರು 1947ರ ನವೆಂಬರ್ 26ರಂದು ಸಂಜೆ 5 ಗಂಟೆಗೆ ಬಜೆಟ್ ಮಂಡಿಸಿದರು.

*. ಸಂಜೆ 5ಕ್ಕೆ ಬಜೆಟ್ ಮಂಡಿಸುವ ಸಂಪ್ರದಾಯವನ್ನು ಆರಂಭಿಸಿದ್ದು ಸರ್ ಬೇಸಿಲ್ ಬ್ಲಾಕೆಟ್.

*. ಆಯವ್ಯಯ ರಚನೆ ವೇಳೆ ರಾತ್ರಿಯಿಡೀ ಕೆಲಸ ಮಾಡಿದ ಅಧಿಕಾರಿಗಳಿಗೆ ಸ್ವಲ್ಪ ವಿಶ್ರಾಂತಿ ಸಿಗಲಿ ಎಂಬ ಕಾರಣಕ್ಕಾಗಿ ಸಂಜೆ ಬಜೆಟ್ ಮಂಡಿಸುವ ಪದ್ಧತಿ ಜಾರಿಗೆ ಬಂತು.

*. ಸ್ವತಂತ್ರ ಭಾರತದ ಮೊದಲ ಬಜೆಟ್‌ನ ಅವಧಿ ಕೇವಲ ಏಳೂವರೆ ತಿಂಗಳದ್ದಾಗಿತ್ತು. ಅಂದರೆ, ಆಗಸ್ಟ್ 15, 1947ರಿಂದ ಮಾರ್ಚ್ 31, 1948.

*. 'ಮಧ್ಯಂತರ ಬಜೆಟ್‌' ಎಂಬುದನ್ನು ಮೊದಲು ಆರಂಭಿಸಿದವರು ಆರ್.ಕೆ. ಷಣ್ಮುಗಂ ಚೆಟ್ಟಿ (1948-49).

*. ಗಣರಾಜ್ಯ ಭಾರತದ ಮೊದಲ ಬಜೆಟ್ ಮಂಡಿಸಿದ್ದು ಜಾನ್ ಮಥಾಯ್. (1950ರ ಫೆ.28)

*. 1950-51ರ ಬಜೆಟ್ ಮಂಡಿಸುವಾಗಲೇ ಯೋಜನಾ ಆಯೋಗ ಜಾರಿಗೆ ಬಂತು

*. 1955-56ರಿಂದ ಬಜೆಟ್ ಪೇಪರ್‌ಗಳನ್ನು ಹಿಂದಿಯಲ್ಲೂ ಮುದ್ರಿಸಲು ಆರಂಭಿಸಲಾಯಿತು

*. ಬಜೆಟ್ ಮಂಡಿಸಿದ ಮೊದಲ ಪ್ರಧಾನಿಯೆಂದರೆ ಜವಾಹರ್‌ಲಾಲ್ ನೆಹರೂ.1958-59ರಲ್ಲಿ ಅವರು ಕೇಂದ್ರವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

*. ಅತ್ಯಧಿಕ ಬಜೆಟ್‌ಗಳನ್ನು ಮಂಡಿಸಿದ ಏಕೈಕ ಸಚಿವರೆಂದರೆ ಮೊರಾರ್ಜಿ ದೇಸಾಯಿ. ಇವರು ಒಟ್ಟು 10 ಬಜೆಟ್ ಮಂಡಿಸಿದ್ದಾರೆ.

*. 1973-74ರ ಬಜೆಟ್ ಅನ್ನು 'ಬ್ಲ್ಯಾಕ್ ಬಜೆಟ್‌' ಎನ್ನಲಾಗುತ್ತದೆ. ಏಕೆಂದರೆ,ಈ ಅವಧಿಯಲ್ಲಿ ಬಜೆಟ್ ಕೊರತೆ 550 ಕೋಟಿ ಆಗಿತ್ತು

*. ತನ್ನ ಹುಟ್ಟುಹಬ್ಬದ ದಿನದಂದೇ 2 ಬಜೆಟ್ ಮಂಡಿಸಿದ ಕೀರ್ತಿ ಮೊರಾರ್ಜಿ ದೇಸಾಯಿ ಅವರಿಗೆ ಸಲ್ಲುತ್ತದೆ. ಅವೆಂದರೆ, 1964 ಮತ್ತು 1968 ಫೆ. 29.

*. 2000ನೇ ಇಸವಿವರೆಗೆ ಬಜೆಟ್ ಅನ್ನು ಸಂಜೆ 5ಕ್ಕೆ ಮಂಡಿಸಲಾಗುತ್ತಿತ್ತು.

*. 2001ರ ಬಳಿಕ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಸಂಪ್ರದಾಯಕ್ಕೆ ಯಶವಂತ್ ಸಿನ್ಹಾ ನಾಂದಿ ಹಾಡಿದರು.

Monday, 27 October 2014

★ ಸಾರ್ವಜನಿಕ ಸಾಲ ನಿರ್ವಹಣೆ (Public debt management) ಎಂದರೇನು? ಅದರ ಪ್ರಮುಖ ಉದ್ದೇಶ ಹಾಗು ಮಹತ್ವದ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಿ. (150 ಶಬ್ದಗಳಲ್ಲಿ)



★ ಅರ್ಥಶಾಸ್ತ್ರ (Economics)

★ ಸಾರ್ವಜನಿಕ ಸಾಲ ನಿರ್ವಹಣೆ (Public debt management) ಎಂದರೇನು? ಅದರ ಪ್ರಮುಖ ಉದ್ದೇಶ ಹಾಗು ಮಹತ್ವದ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಿ.
(150 ಶಬ್ದಗಳಲ್ಲಿ)

ಸರ್ಕಾರಕ್ಕೆ ಅಗತ್ಯವಿರುವ ಸಾಲದ ಎತ್ತುವಳಿ ಮತ್ತು ನಿರ್ವಹಣೆಗೆ ಕಾರ್ಯತಂತ್ರ ರೂಪಿಸಿ, ಕಾರ್ಯನ್ವಯಗೊಳಿಸುವ ಪ್ರಕ್ರಿಯೆಗೆ ಸ್ಥೂಲವಾಗಿ ಸಾರ್ವಜನಿಕ ಸಾಲ ನಿರ್ವಹಣೆ ಎನ್ನಲಾಗುತ್ತದೆ.
ಸಾರ್ವಜನಿಕ ನೀತಿಯಂತೆ ಸರ್ಕಾರದ, ಸಾಲದ ಮಟ್ಟ ಹಾಗೂ ಬೆಳವಣಿಗೆ ದರ ಎರಡೂ ಸುಸ್ಥಿರವಾಗಿರುವಂತೆ ಕಾಯ್ದುಕೊಳ್ಳಬೇಕಾಗುತ್ತದೆ.


* ಸಾಲ ನಿರ್ವಹಣೆಯ ಉದ್ದೇಶಗಳು:

ಸರ್ಕಾರದ ಹಣಕಾಸು ಅಗತ್ಯಗಳನ್ನು ಖಾತರಿಪಡಿಸುವುದು ಹಾಗೂ ಸರ್ಕಾರದ ಮಧ್ಯಮಾವಧಿಯಿಂದ ಹಿಡಿದು ಧೀರ್ಘಾವಧಿವರೆಗಿನ ಸಾಲ ಅತ್ಯಂತ ಕಡಿಮೆ ವೆಚ್ಚದಲ್ಲಿ ಪಾವತಿಯಲ್ಲಿರುವಂತೆ ನೋಡಿಕೊಳ್ಳುವುದು ಹಾಗೂ ಸವಾಲಿನ ಸಂದರ್ಭಗಳಲ್ಲಿ ವಿವೇಕಯುತವಾಗಿರುವಂತೆ ನಿರ್ವಹಿಸುವುದು ಇದರ ಉದ್ದೇಶವಾಗಿದೆ.

* ಸಾರ್ವಜನಿಕ ಸಾಲ ನಿರ್ವಹಣೆಯ ಮಹತ್ವ:

ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ಅನೇಕ ದೇಶಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ, ವ್ಯವಸ್ಥಿತ ವಿನ್ಯಾಸವಿರದ ಸಾಲ ಸಂರಚನೆ ಬಡ್ಡಿದರ ನಿರೂಪಣೆ, ಸಂಗ್ರಹವಿರದ ತುರ್ತು ಹೊಣೆಗಾರಿಕೆಗಳೇ ಕಾರಣವೆಂದು ವ್ಯಕ್ತವಾಗಿದೆ.

ಉದಾಹರಣೆಗೆ ವಿನಿಮಯ ದರ ಅಥವಾ ದೇಶಿ ಅಥವಾ ವಿದೇಶಿ ಸಾಲ ವ್ಯವಸ್ಥೆಯ ಹೊರತಾಗಿಯೂ, ಸರ್ಕಾರ ಅಲ್ಪಾವಧಿ ಅಥವಾ ಸಂಚಲಿತ ಸಾಲ ದರದಿಂದಾಗಿ ಉಳಿತಾಯ ದರದೊಂದಿಗೆ ಸಾಧ್ಯ ವೆಚ್ಚ ಉಳಿತಾಯಕ್ಕೆ ಗಮನಹರಿಸುವುದರಿಂದ ಇಂತಹ ಬಿಕ್ಕಟ್ಟು ತಲೆದೋರಿವೆ.

ಇವುಗಳು ಆರ್ಥಿಕ ನಿರ್ವಹಣೆಯ ಕೊರತೆಯನ್ನು ತೋರಿಸುತ್ತವೆ. ಸರ್ಕಾರದ ವಿದೇಶಿ - ಕರೆನ್ಸಿ ಸಾಲ ವಿಷಯದಲ್ಲಿ ಬಂಡವಾಳ ಹೂಡಿಕೆದಾರರು ಹಿಂದೇಟು ಹಾಕಿದರೆ, ವಿದೇಶಿ ಸಾಲವನ್ನೇ ಅವಲಂಬಿಸುವುದು ಮಾರಕವೆನಿಸುತ್ತದೆ. ವಿವೇಚನಾಯುಕ್ತ ಸಾಲ ನಿರ್ವಹಣೆ ಇಲ್ಲಿ ಅತಿಮುಖ್ಯ.

Sunday, 26 October 2014

★ ಐಜಿಎಲ್ ಸುರಕ್ಷಾ (IGL Suraksha) ಯೋಜನೆ ಕುರಿತು ಚರ್ಚಿಸಿ. ( (100 ಶಬ್ಧಗಳಲ್ಲಿ) 


★ ಐಜಿಎಲ್ ಸುರಕ್ಷಾ (IGL Suraksha) ಯೋಜನೆ ಕುರಿತು ಚರ್ಚಿಸಿ. ( (100 ಶಬ್ಧಗಳಲ್ಲಿ)


*. ಐಜಿಎಲ್ ಸುರಕ್ಷಾ (IGL Suraksha) ಯೋಜನೆ :
ಸಂಕುಚಿತ ನೈಸರ್ಗಿಕ ಅನಿಲ (Compressed Natural Gas) ಆಧಾರಿತ ದೆಹಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಚಾಲಕರಿಗಾಗಿ ಗುಂಪು ವಿಮೆ ಕಲ್ಪಿಸುವ ಐಜಿಎಲ್ ಸುರಕ್ಷಾ ಯೋಜನೆಗೆ 2013 ರಲ್ಲಿ ದೆಹಲಿಯಲ್ಲಿ ಚಾಲನೆ ನೀಡಲಾಯಿತು. ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ಮತ್ತು ದೆಹಲಿ ಸಾರಿಗೆ ಸಂಸ್ಥೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.


★ ಯೋಜನೆಯ ಬಗ್ಗೆ:

*.ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ತನ್ನ ಸಿಎಸ್ಆರ್ ಕಾರ್ಯಕ್ರಮದಡಿ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ.

*.ಅಪಘಾತ ದುರಂತದಲ್ಲಿ ಮಡಿದ ಚಾಲಕರ ಕುಟುಂಬಕ್ಕೆ ಈ ಯೋಜನೆಯಡಿ
1.5 ಲಕ್ಷ ರೂಗಳನ್ನು ನೀಡಲಾಗುತ್ತದೆ. ಜತೆಗೆ ಚಾಲಕನ ಮಕ್ಕಳ ವಿದ್ಯಾಭ್ಯಾಸಕ್ಕೆಂದು ರೂ 25, 000 ಗಳನ್ನು ನೀಡಲಾಗುತ್ತದೆ. ಗರಿಷ್ಠ ಎರಡು ಮಕ್ಕಳಿಗೆ ಈ ಯೋಜನೆಯಡಿ ಸಹಾಯ ದೊರೆಯಲಿದೆ. ಅಂದರೆ 50,000 ರೂಗಳು.

*.ಒಂದು ವೇಳೆ ಅಪಘಾತದಲ್ಲಿ ಮೂಳೆ ಮುರಿತಕ್ಕೊಳಗಾದರೆ ಅಥವಾ ತೀವ್ರ ತರನಾದ ಗಾಯಗಳಾದರೆ ಕನಿಷ್ಠ 10, 000 ರೂಗಳಿಂದ 75,000 ರೂಗಳ ವರೆಗೆ ಚಿಕಿತ್ಸೆ ಭತ್ಯೆಯನ್ನು ನೀಡಲಾಗುವುದು. ಅಪಘಾತದ ವೇಳೆ ಶಾಶ್ವತ ಊನ ಸ್ಥಿತಿಗೆ ಒಳಗಾಗಿ ಉದ್ಯೋಗ ಕಳೆದುಕೊಂಡರೆ ಗರಿಷ್ಠ ಮೊತ್ತವನ್ನು ಪರಿಹಾರ ಧನವನ್ನಾಗಿನೀಡಲಾಗುವುದು.

*.ವಿಮೆಯ ಪ್ರಿಮಿಯಂ ಖರ್ಚನ್ನು ಐಜಿಎಲ್ ಭರಿಸಲಿದೆ. ಯೋಜನೆಯ ಅನುಷ್ಟಾನವನ್ನು ಓರಿಯಂಟಲ್ ಇನ್ ಶ್ಯೂರೆನ್ಸ್ ಸಂಸ್ಥೆಗೆ ನೀಡಲಾಗಿದೆ. ಇದೊಂದು ಸಂಪೂರ್ಣ ಉಚಿತ ಮತ್ತು ಸರಳ ವಿಮಾ ವ್ಯವಸ್ಥೆ ಎನ್ನಲಾಗಿದೆ.

★ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಕುರಿತು ಸಂಕ್ಷಿಪ್ತ ವಿವರಣೆ:


★ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಕುರಿತು ಸಂಕ್ಷಿಪ್ತ ವಿವರಣೆ:


*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಯಾದ ವರ್ಷ:
— 1885 ಡಿ 28.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಯಾದ ಸ್ಥಳ:
— ಮುಂಬೈ.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಯಾಗುವಾಗ ಇದ್ದ ವೈಸರಾಯ್:
— ಲಾರ್ಡ್ ಡಫರಿನ್.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಗೆ ಕಾರಣರಾದ ವ್ಯಕ್ತಿ:
— ಸ್ವಿಜರ್ಲೆಂಡ್ ನ ಎ.ಓ. ಹ್ಯೂಮ್.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಮೊದಲ ಅಧ್ಯಕ್ಷ:
— W.C.ಬ್ಯಾನರ್ಜಿ.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಮೊದಲ ಮುಸ್ಲಿಂ ಅಧ್ಯಕ್ಷ:
— ಬದ್ರುದ್ದೀನ್ ತ್ಯಾಬಜಿ.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಮೊದಲ ಬ್ರಿಟೀಷ್ ಅಧ್ಯಕ್ಷ:
— ಜಾರ್ಜ್ ಎಲ್ಲೋ.

*. ಕ್ರಿ.ಶ.1906 ರ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧಿವೇಶನದಲ್ಲಿ 'ಸ್ವರಾಜ್ಯ' ಎನ್ನುವ ಪದದ ಬಳಕೆಯಾಯಿತು.

*. ಕ್ರಿ.ಶ.1916 ರ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧಿವೇಶನದಲ್ಲಿ 'ಮುಸ್ಲಿಂ ಲೀಗ್ ಮತ್ತು ಕಾಂಗ್ರೇಸ್' ಒಂದುಗೂಡಿದವು.

*. ಕ್ರಿ.ಶ.1917 ರ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧಿವೇಶನದಲ್ಲಿ 'ಮಂದಗಾಮಿಗಳು ಮತ್ತು ತೀವ್ರಗಾಮಿಗಳು' ಒಂದುಗೂಡಿದರು.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಮೊದಲ ಮಹಿಳಾ ಅಧ್ಯಕ್ಷೆ:
— ಆನಿಬೆಸೆಂಟ್.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಮೊದಲ ಭಾರತೀಯ ಮಹಿಳಾ ಅಧ್ಯಕ್ಷೆ:
— ಸರೋಜಿನಿ ನಾಯ್ಡು.

*.  ಕ್ರಿ.ಶ.1929 ರ ಲಾಹೋರ್ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧಿವೇಶನದಲ್ಲಿ 'ಸಂಪೂರ್ಣ ಸ್ವರಾಜ್ಯ' ಘೋಷಿಸಲಾಯಿತು. ಮತ್ತು ಕಾನೂನು ಭಂಗ ಚಳುವಳಿಯ ನಿರ್ಣಯ ಕೈಗೊಳ್ಳಲಾಯಿತು.

*. 1938 ರ ಹರಿಪುರ ಮತ್ತು 1939 ರ ತ್ರಿಪುರ  ಕಾಂಗ್ರೇಸ್ ನ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದವರು:
— ಸುಭಾಸ್ ಚಂದ್ರ ಭೋಸ್.

*. ಸ್ವಾತಂತ್ರ್ಯ ಪಡೆದ ಸಂಧರ್ಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧ್ಯಕ್ಷತೆಯನ್ನು ವಹಿಸಿದವರು:
— ಜೆ.ಬಿ. ಕೃಪಲಾನಿ.

*. ಇದರ ಧೀರ್ಘಾವಧಿಯ ಅಧ್ಯಕ್ಷರು:
— ಸೋನಿಯಾ ಗಾಂಧಿ.

Sunday, 19 October 2014

★ ಗುಪ್ತರ ಕಾಲದ ಶ್ರೇಷ್ಟ ವಿಜ್ಞಾನಿಗಳ ಕುರಿತು ಚರ್ಚಿಸಿರಿ. (150 ಶಬ್ಧಗಳಲ್ಲಿ) ( Famous Scientists of Gupta Period)


★ ಗುಪ್ತರ ಕಾಲದ ಶ್ರೇಷ್ಟ ವಿಜ್ಞಾನಿಗಳ ಕುರಿತು ಚರ್ಚಿಸಿರಿ. (150 ಶಬ್ಧಗಳಲ್ಲಿ)


ಎರಡು ಶತಮಾನಗಳ ಕಾಲ ರಾಜ್ಯವನ್ನಾಳಿದ ಗುಪ್ತರ ಸಾಮ್ರಾಜ್ಯವು ಅನೇಕ ಶ್ರೇಷ್ಟ ವಿಜ್ಞಾನಿಗಳನ್ನು ಜಗತ್ತಿಗೆ ನೀಡಿತು.


1) ಆರ್ಯಭಟ:

ಆರ್ಯಭಟನು ಕ್ರಿ.ಶ 499 ರಲ್ಲಿ ಖಗೋಳ ವಿಜ್ಞಾನದ ಪ್ರಮುಖ ಮೂಲಭೂತ ಸಮಸ್ಯೆಗಳನ್ನು ಮುಂದಿಟ್ಟ ಪ್ರಥಮ ಖಗೋಳ ವಿಜ್ಞಾನಿ. ಇವನು ತನ್ನ ಗ್ರಂಥಗಳಾದ 'ಆರ್ಯಭಟೀಯಂ' ಮತ್ತು 'ಸೂರ್ಯ ಸಿದ್ಧಾಂತ' ಗಳಲ್ಲಿ ಬೀಜಗಣಿತ, ರೇಖಾಗಣಿತ ಮತ್ತು ಖಗೋಳ ಶಾಸ್ತ್ರಗಳ ಬಗ್ಗೆ ಬರೆದಿದ್ದಾನೆ.
'ಭೂಮಿಯು ಎಲ್ಲಾ ದಿಕ್ಕುಗಳಲ್ಲೂ ಗುಂಡಾಗಿಯೇ ಇದೆ ಎಂಬ ವೈಜ್ಞಾನಿಕ ಸತ್ಯವನ್ನು ಬಹುಶಃ ಪ್ರಪಂಚದಲ್ಲೇ ಮೊಟ್ಟಮೊದಲಿಗೆ ಸಾರಿದ ಕೀರ್ತಿ ಆರ್ಯಭಟನದು. ಇವನು ಸೊನ್ನೆಯನ್ನು ಕಂಡುಹಿಡಿದನೆಂದು ಅಭಿಪ್ರಾಯಪಡಲಾಗಿದೆ.


2) ವರಾಹಮಿಹಿರ:

ಆರ್ಯಭಟನ ಸಮಕಾಲೀನನಾದ ವರಾಹಮಿಹಿರನು ಖಗೋಳ ವಿಜ್ಞಾನವನ್ನು ಖಗೋಳ ವಿಜ್ಞಾನ, ಗಣಿತ ಶಾಸ್ತ್ರ, ಜಾತಕ ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರ ಎಂದು ವಿಭಜಿಸಿದನು. ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಪ್ರಮಾಣ ಗ್ರಂಥವಾದ ಈತನ 'ಬ್ರಹತ್ ಸಂಹಿತಾ' ಕೃತಿಯು ವಿಶ್ವಕೋಶವೆಂದು ಪರಿಗಣಿತವಾಗಿದೆ. ಅಲ್ಲದೇ ಈತನು ರಚಿಸಿದ ಇನ್ನೊಂದು 'ಪಂಚ ಸಿದ್ದಾಂತಿಕಾ' ಎಂಬ ಖಗೋಳ ಶಾಸ್ತ್ರ ಗ್ರಂಥವನ್ನು 'ಖಗೋಳ ಶಾಸ್ತ್ರದ ಬೈಬಲ್' ಎಂದು ಕರೆಯುವರು.


3) ಧನ್ವಂತರಿ:

ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸಿದ್ದ ವಿದ್ವಾಂಸನಾಗಿದ್ದನು. ಆಯುರ್ವೇದ ಶಾಸ್ತ್ರದ ತಜ್ಞನಾಗಿದ್ದನು. 'ಆಯುರ್ವೇದ ನಿಘಂಟನ್ನು' ರಚಿಸಿದ ಈತನನ್ನು 'ಭಾರತದ ಆಯುರ್ವೇದ ಶಾಸ್ತ್ರದ ಪಿತಾಮಹನೆಂದು ಕರೆಯುವರು.


4) ಬ್ರಹ್ಮಗುಪ್ತ:

ಖ್ಯಾತ ಗಣಿತ ಶಾಸ್ತ್ರಜ್ಞನಾದ ಈತನು 'ಶೂನ್ಯ ಸಿದ್ದಾಂತ' ವನ್ನು ಹಾಗೂ ಬಿಂದುವಿನ ಬಳಕೆಯನ್ನು ಜಾರಿಗೆ ತಂದನು. ಈತನ ಎರಡು ಪ್ರಮುಖ ಖಗೋಳ ಗ್ರಂಥಗಳೆಂದರೆ 'ಬ್ರಹ್ಮ ಸ್ಪುಟ ಸಿದ್ಧಾಂತ' ಮತ್ತು 'ಖಂಡ ಖಾದ್ಯಕ'


5) ವಾಗ್ಭಟ:

ಈತನು ಆಯುರ್ವೇದ ವೈದ್ಯಕೀಯ ಬಗ್ಗೆ 'ಅಷ್ಟಾಂಗ ಸಂಗ್ರಹ' ವೆಂಬ ಕೃತಿಯನ್ನು ರಚಿಸಿರುವನು.

Tuesday, 14 October 2014

★ 'ಝಿರೊ ಗಿರಿಧಾಮ' ದ ಕುರಿತು ಟಿಪ್ಪಣಿ ಬರೆಯಿರಿ.(50 ಶಬ್ಧಗಳಲ್ಲಿ) 


★ 'ಝಿರೊ ಗಿರಿಧಾಮ' ದ ಕುರಿತು ಟಿಪ್ಪಣಿ ಬರೆಯಿರಿ.(50 ಶಬ್ಧಗಳಲ್ಲಿ)

★ ಝಿರೊ ಗಿರಿಧಾಮ : (ಟಿಪ್ಪಣಿ ಬರಹ)
ಈಶಾನ್ಯ ಭಾರತದ ಅರುಣಾಚಲ ಪ್ರದೇಶದ ಲೋವರ್ ಸುಬಾನ್ಸಿರಿ ಜಿಲ್ಲೆಯಲ್ಲಿರುವ ಝಿರೊ ಒಂದು ಚಿಕ್ಕ ಹಾಗೂ ಅಷ್ಟೆ ಪ್ರಭಾವಿಯಾದ ಗಿರಿಧಾಮ ಪಟ್ಟಣ. ಕಳೆದ ಕೆಲ ವರ್ಷಗಳಿಂದ ವಿಶ್ವ ಪಾರಂಪರಿಕ ತಾಣದ ಸ್ಥಾನಕ್ಕೆ ಅತಿ ನೆಚ್ಚಿನ ಪಟ್ಟಣವಾಗಿ ತನ್ನ ಸ್ಥಾನ ಇದು ಕಾಯ್ದುಕೊಂಡಿದೆ. ರಾಜ್ಯದ ರಾಜಧಾನಿ ಇಟಾ ನಗರದಿಂದ ಸುಮಾರು 150 ಕಿ.ಮೀ ದೂರದಲ್ಲಿ ಈ ಗಿರಿಧಾಮವಿದೆ.

Monday, 13 October 2014

★ ಭಾರತದ ವಿವಿಧ ಮಣ್ಣು ಸಂರಕ್ಷಣಾ ಯೋಜನೆಗಳ ಬಗ್ಗೆ ಚರ್ಚಿಸಿ (100-120 ಶಬ್ಧಗಳಲ್ಲಿ)


★ ಭಾರತದ ಭೂಗೋಳ

★ ಭಾರತದ ವಿವಿಧ ಮಣ್ಣು ಸಂರಕ್ಷಣಾ ಯೋಜನೆಗಳ ಬಗ್ಗೆ ಚರ್ಚಿಸಿ (100-120 ಶಬ್ಧಗಳಲ್ಲಿ)

ಮಣ್ಣಿನ ಸಂರಕ್ಷಣೆಯ ಉದ್ದೇಶವು ಮಣ್ಣಿನ ಸವೆತವನ್ನು ತಡೆಗಟ್ಟುವುದು, ತನ್ಮೂಲಕ ಮಣ್ಣಿನ ಫಲವತ್ತತೆಯನ್ನು ಹಾಗೂ ಬೆಳೆಗಳ ಇಳುವರಿಯನ್ನು ಕಾಪಾಡುವುದೇ ಆಗಿದೆ. ಭಾರತದಾದ್ಯಂತ ಮಣ್ಣಿನ ಗುಣಲಕ್ಷಣಗಳು, ಅವುಗಳ ಬಳಕೆಯ ವಿಧಾನ, ಹಾಗು ಮಣ್ಣಿನ ಸವೆತದ ಕಾರಣ ಮತ್ತು ತೀವ್ರತೆಗಳು ವಿವಿಧ ರೀತಿಯಲ್ಲಿರುವುದರಿಂದ ಮಣ್ಣಿನ ಸಂರಕ್ಷಣೆಯ ವಿಧಾನಗಳು, ಯೋಜನಾ ಕಾರ್ಯಕ್ರಮಗಳೂ ಕೂಡಾ ವಿವಿಧ ರೀತಿಯಲ್ಲಿವೆ.

ಇವುಗಳನ್ನು ಪ್ರಮುಖವಾಗಿ ಎರಡು ವಿಧಗಳಾಗಿ ವಿಂಗಡಿಸಬಹುದು.

ಅವುಗಳೆಂದರೆ ಸಣ್ಣ ಹಾಗು ದೊಡ್ಡ ಯೋಜನೆಗಳು.

*. ಸಣ್ಣ ಯೋಜನೆಗಳು ವ್ಯಕ್ತಿಗತ. ಚಿಕ್ಕ ಭೂಪ್ರದೇಶಗಳಲ್ಲಿ ಇಳಿಜಾರಿನ ಅಡ್ಡಲಾಗಿ ಬದು ಅಥವಾ ಅಡ್ಡಗಟ್ಟೆಗಳನ್ನು ನಿರ್ಮಿಸುವುದು, ಹಂತಹಂತವಾಗಿ ವ್ಯವಸಾಯ ಕ್ಷೇತ್ರಗಳನ್ನು ರೂಪಿಸುವುದು, ಭೂಪ್ರದೇಶಗಳನ್ನು ಮಟ್ಟಗೊಳಿಸುವುದು, ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು, ಮರಗಿಡಗಳನ್ನು ಬೆಳೆಯುವುದು  ಮುಖ್ಯವಾದವುಗಳಾಗಿವೆ.

ಮಣ್ಣಿನ ಸವೆತಕ್ಕೀಡಾಗುವ ವಿಸ್ತಾರವಾದ ಪ್ರದೇಶಗಳಲ್ಲಿ ಸರ್ಕಾರವು ದೊಡ್ಡ ಪ್ರಮಾಣದ ಯೋಜನೆಗಳನ್ನು ಜಾರಿಯಲ್ಲಿ ತರುತ್ತದೆ. ಇದಕ್ಕಾಗಿ ಶಾಸನಬದ್ಧ ಕಾಯಿದೆಗಳನ್ನು ರೂಪಿಸಿದೆ.

ಈ ಶಾಸನಬದ್ಧ ಕಾರ್ಯಯೋಜನೆಗಳಲ್ಲಿ ಮುಖ್ಯವಾದವುಗಳೆಂದರೆ
*. ಎತ್ತರವಾದ ಪ್ರದೇಶಗಳಲ್ಲಿನ ಅರಣ್ಯನಾಶ ತಡೆಗಟ್ಟುವುದು.
*. ಅರಣ್ಯಗಳು ನಾಶವಾಗಿರುವ ಜಲಾನಯನ ಪ್ರದೇಶಗಳಲ್ಲಿ ಅರಣ್ಯಗಳನ್ನು ಪುನಃ ಬೆಳೆಸುವುದು.
*. ನೀರಾವರಿ ಪ್ರದೇಶಗಳಲ್ಲಿ ನೀರಿನ ಬಳಕೆಯನ್ನು ನಿಯಂತ್ರಿಸಿ ಜೌಗು ಪ್ರದೇಶಗಳ ನಿರ್ಮಾಣವನ್ನು ತಡೆಗಟ್ಟುವುದು.
*. ರಾಷ್ಟ್ರೀಯ ಭೂ ಬಳಕೆ ಮತ್ತು ಸಂರಕ್ಷಣಾ ಮಂಡಳಿಯು ರೂಪಿಸಿದ ವೈಜ್ಞಾನಿಕ ಮಾದರಿಯಲ್ಲಿ ಭೂಮಿಯನ್ನು ಬಳಸುವ ಯೋಜನೆಗಳನ್ನು ಅನುಷ್ಟಾನದಲ್ಲಿ ತರುವುದು.
*. ಸ್ಥಳಾಂತರ ಬೇಸಾಯ ನಿಯಂತ್ರಣ ಯೋಜನೆಯೊಂದಿಗೆ ಮಣ್ಣಿನ ಸವೆತದ ನಿಯಂತ್ರಣ ಹಾಗು ಆ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ 'ಜಲಾನಯನ ಪ್ರದೇಶ ಯೋಜನೆಯನ್ನು ಕೈಗೊಳ್ಳುವುದು.
*. ಸಮಗ್ರ ಬಂಜರು ಭೂಮಿ ಅಭಿವೃದ್ಧಿ ಯೋಜನೆ (IWDP) ಯನ್ನು 1990ರಲ್ಲಿ ಜಾರಿಗೆ ಬಂದಿದ್ದು ಬಂಜರು ಭೂಮಿಯ ಅಭಿವೃದ್ಧಿಯನ್ನು ಸಾಧಿಸುವುದು. ಆ ಮೂಲಕ ಅನುಪಯುಕ್ತವಾಗಿರುವ ಪ್ರದೇಶಗಳನ್ನು ಉಪಯೋಗಿಸಿಕೊಳ್ಳಲು ಸರ್ಕಾರವು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದೆ.

Thursday, 9 October 2014

ಈ ಬಾರಿ (2015) ಯ ರಸಾಯನ­ಶಾಸ್ತ್ರ ನೊಬೆಲ್‌ ಪ್ರಶಸ್ತಿಗೆ ಆಯ್ಕೆ­ಯಾದ ಮೂವರು ವಿಜ್ಞಾನಿಗಳು

★ ಈ ಬಾರಿ (2015) ಯ ರಸಾಯನ­ಶಾಸ್ತ್ರ ನೊಬೆಲ್‌ ಪ್ರಶಸ್ತಿಗೆ ಆಯ್ಕೆ­ಯಾದ ಮೂವರು ವಿಜ್ಞಾನಿಗಳು

—‘ಸೂಕ್ಷ್ಮದರ್ಶಕದ ದೃಷ್ಟಿಯನ್ನು ತೀಕ್ಷ್ಣ’ಗೊಳಿಸಿದ ಮೂವರು ವಿಜ್ಞಾನಿ­ಗಳು ಈ ಬಾರಿಯ ರಸಾಯನ­ಶಾಸ್ತ್ರ ನೊಬೆಲ್‌ ಪ್ರಶಸ್ತಿಗೆ ಆಯ್ಕೆ­ಯಾಗಿದ್ದಾರೆ.ಅಮೆರಿಕದ ಎರಿಕ್‌ ಬೆಟ್ಜಿಗ್‌ ಮತ್ತು ವಿಲಿಯಂ ಮೊಯೆರ್ನರ್‌ ಹಾಗೂ ಜರ್ಮನಿಯ ಸ್ಟಿಫನ್‌ ಹೆಲ್‌ ಈ ಗೌರ­ವಕ್ಕೆ ಪಾತ್ರರಾದವರು.ಈ ವಿನಿಗಳು ಅಭಿವೃದ್ಧಿಪಡಿಸಿದ ಸೂಕ್ಷ್ಮ­­­ದರ್ಶಕವು ಸಾಂಪ್ರದಾಯಿಕ ದ್ಯುತಿ­ಸೂಕ್ಷ್ಮ­ದರ್ಶಕದ ದೃಷ್ಟಿ ಸಾಮರ್ಥ್ಯದ ಮಿತಿಯನ್ನು ವಿಸ್ತರಿಸಿದೆ ಎಂದು ದಿ ರಾಯಲ್‌ ಸ್ವೀಡಿಸ್‌ ಅಕಾ­ಡೆಮಿ ಹೇಳಿದೆ.

‘ಸಾಂಪ್ರದಾಯಿಕ ದ್ಯುತಿ ಸೂಕ್ಷ್ಮ­ದರ್ಶ­ಕ­ದಿಂದ ಸೂಕ್ಷ್ಮಾತಿಸೂಕ್ಷ್ಮ ಕಣಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ವಿಜ್ಞಾನಿಗಳ ಆವಿಷ್ಕಾರದಿಂದಾಗಿ ಇದೇ ಸೂಕ್ಷ್ಮದರ್ಶಕಗಳನ್ನು ಬಳಸಿ ನ್ಯಾನೊ ಕಣಗಳನ್ನೂ ನೋಡಲು ಸಾಧ್ಯ­ವಾಗಿದೆ’ ಎಂದು ಸ್ವೀಡಿಸ್‌ ಅಕಾಡೆಮಿ ತಿಳಿಸಿದೆ.
(ಕೃಪೆ: ಪ್ರಜಾವಾಣಿ) 

Tuesday, 7 October 2014

★ ನೋಟಾ (NOTA- None Of The Above) : ಚುನಾವಣೆ ಸುಧಾರಣೆಯ ಪ್ರಮುಖ ಅಸ್ತ್ರ? :

★ ನೋಟಾ (NOTA- None Of The Above) : ಚುನಾವಣೆ ಸುಧಾರಣೆಯ ಪ್ರಮುಖ ಅಸ್ತ್ರ? :

 ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ದೇಶದ ಆಡಳಿತ ವ್ಯವಸ್ಥೆ ಬದಲಿಸುವ ಸಾಮರ್ಥ್ಯ ಈ ಮತಕ್ಕಿದೆ. ಚುನಾವಣೆಗೆ ಸ್ಪರ್ಧಿಸಿರುವ ಯಾವೊಬ್ಬ ಅಭ್ಯರ್ಥಿ ತನಗೆ ಸೂಕ್ತ ಎನಿಸದಿದ್ದಲ್ಲಿ ಮತದಾರ ಈ 'ನೋಟಾ ' ಬಳಕೆ ಮಾಡಬಹುದು.


★ ನೋಟಾ (NOTA) ಎಂದರೇನು?
 -What do you mean by NOTA ?

 *. ನೋಟಾ ಅಂದರೆ ಮತದಾನ ಪಟ್ಟಿಯಲ್ಲಿರುವ ಯಾರೂ ನನ್ನ ಮತಕ್ಕೆ ಅರ್ಹರಲ್ಲ ಎಂದರ್ಥ.

*. (NOTA- None Of The Above) ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಸುಧಾರಣೆಯ ಪ್ರಮುಖ ಅಂಗವಾಗಿ ನೋಟಾ ಜಾರಿಗೆ ನಿರ್ಧರಿಸಿ 2009 ರಲ್ಲಿ ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಗೆ ಇಂತಹದೊಂದು ಪ್ರಸ್ತಾವನೆಯನ್ನು ಸಲ್ಲಿಸಿತು. ಆದರೆ ಇದಕ್ಕೆ ಬಹುತೇಕ ರಾಜಕೀಯ ಪಕ್ಷಗಳು ಪ್ರತಿರೋಧ ವ್ಯಕ್ತಪಡಿಸಿದ್ದವು.


 ★ ಸಂಘಟನೆ ಒತ್ತಾ,ಸೆ:
*.  'Peoples Union for Civic Liberties' ಎಂಬ ಸರ್ಕಾರೇತರ ಸಂಸ್ಥೆ ನೋಟಾ ಜಾರಿಗೆ ಬೆಂಬಲಿಸಿ ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿತ್ತು.

*. ಈ ಬಗ್ಗೆ ಸುಧೀರ್ಘವಾದ ಪ್ರತಿವಾದ ನಡೆದ ಬಳಿಕ ಅಂತಿಮವಾಗಿ 2013 ಸೆಪ್ಟಂಬರ್ 27 ರಂದು ಸುಪ್ರೀಂಕೋರ್ಟ್ 'ನೋಟಾ ' ಜಾರಿಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತು.

*.  ಜೊತೆಗೆ ರಾಜಕೀಯ ಪಕ್ಷಗಳಿಗೆ ಚುನಾವಣೆಯಲ್ಲಿ ಕೆಲವು ಬದಲಾವಣೆ ಅನಿವಾರ್ಯ ಮತ್ತು ರಾಜಕೀಯ ಶುದ್ಧೀಕರಣಕ್ಕೆ ಸಚ್ಚಾರಿತ್ರ್ಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಎಂಬ ಪರೋಕ್ಷ ಸೂಚನೆಯನ್ನು ಕೊಟ್ಟಿತು.

*.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನಿಗೆ ಆಯ್ಕೆ ಸ್ವಾತಂತ್ರ್ಯವಿದೆ ಎಂದು ಪ್ರತಿಪಾದಿಸಿತ್ತು.



★ 'ನೋಟಾ'ದ ಮೊದಲ ಬಳಕೆ ಎಲ್ಲಿ?
- (Where the NOTA was used first time?)

 *. ಮುಂಬೈ ಮಹಾನಗರ ಪಾಲಿಕೆಯ 48ನೇ ವಾರ್ಡ್ ಗೆ (ವಿಶಾ) ನಡೆದ ಉಪಚುನಾವಣೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ನೋಟಾ ಬಳಸಲಾಯಿತು.

*. 2548 ಮತಗಳಲ್ಲಿ 48 ಮತಗಳು ನೋಟಾದಡಿ ದಾಖಲಾಗಿದ್ದವು. ಕೆಲವು ವಿದ್ಯಾವಂತ ಮತದಾರರು ತಾವು ಅಭ್ಯರ್ಥಿಗಳನ್ನು ತಿರಸ್ಕರಿಸಿ ನೋಟಾ ಬಳಸಿದ್ದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಅಷ್ಟರಮಟ್ಟಿಗೆ ನೋಟಾಗೆ ಚೊಚ್ಚಲ ಚುನಾವಣೆಯಲ್ಲಿಯೇ ಉತ್ತಮ ಸ್ಪಂದನೆ ಸಿಕ್ಕಿತ್ತು.

 *. ಮತದಾನ ತಿರಸ್ಕರಿಸುವ ಹಕ್ಕು ಜಗತ್ತಿನ 13 ದೇಶಗಳಲ್ಲಿ ಜಾರಿಯಲ್ಲಿದೆ.



 ★ 'ನೋಟಾ'ದ ಬಳಕೆ ಹೇಗೆ?
- How NOTA to be Used?

 *. ವಿದ್ಯುನ್ಮಾನ ಮತಯಂತ್ರದಲ್ಲಿ (EVM - Electronic Voter Machine) ನಮೂದಾಗಿರುವ ಅಭ್ಯರ್ಥಿಗಳ ಸಾಲಿನಲ್ಲಿ ಅತ್ಯಂತ ಕೆಳಭಾಗದಲ್ಲಿ ಈ ನೋಟಾ ಬಟನ್ ಇರುತ್ತದೆ.

*. ಉದಾ: 15 ಮಂದಿ ಅಭ್ಯರ್ಥಿಗಳಿದ್ದಲ್ಲಿ 16ನೇ ಸಂಖ್ಯೆಯಲ್ಲಿ ನೋಟಾ ಇರುತ್ತದೆ. ಪಟ್ಟಿಯಲ್ಲಿ ಯಾವೊಬ್ಬ ಅಭ್ಯರ್ಥಿಯೂ ತನ್ನ ಮತಕ್ಕೆ ಅನರ್ಹ ಎನಿಸಿದರೆ 'ನೋಟಾ'ಮೂಲಕವೇ ನಮ್ಮ ಮತದಾನದ ಹಕ್ಕು ಚಲಾಯಿಸಬಹುದು. ಇದು ಅಧಿಕೃತವಾಗಿ ದಾಖಲಾಗುತ್ತದೆ. ಜೊತೆಗೆ ಅನರ್ಹ ಅಭ್ಯರ್ಥಿಗಳನ್ನು ತಿರಸ್ಕರಿಸಿದ ಸಂದೇಶ ರವಾನೆಯಾಗುತ್ತದೆ.



 ★ ಮತದಾನ ಪ್ರಕ್ರಿಯೆಯಲ್ಲಿ 'ನೋಟಾ' ಪರಿಣಾಮಕಾರಿ ಯಾಗಬಲ್ಲುದೇ?
 - Can NOTA be affected in Election Procedure?

 *. ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕುಮತದಾನ ಪ್ರಕ್ರಿಯೆಯ ಮೇಲೆ ಯಾವುದೇ ಗಾಢವಾದ ಪರಿಣಾಮ ವೇನೂ ಬೀರುವುದಿಲ್ಲ. ಏಕೆಂದರೆ ತಿರಸ್ಕೃತ ಮತಗಳನ್ನು ರದ್ದಾದ ಮತಗಳೆಂದು ಚುನಾವಣಾ ಆಯೋಗವು ಪರಿಗಣಿಸಲ್ಪಡುವುದರಿಂದ ಫಲಿತಾಂಶದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ.

 *. ಬಹುಮತದ ಜನರು ಇದನ್ನು ಬಳಸಿದರೂ ಅಥವಾ ಯಾವುದೇ ಒಬ್ಬ ವಿಜೇತ ಅಭ್ಯರ್ಥಿ ಗಳಿಸುವ ಮತಕ್ಕಿಂತಲೂ 'ನೋಟಾ'ದಡಿ ಹೆಚ್ಚು ದಾಖಲಾಗಿದ್ದರೂ ಒಟ್ಟಾರೆ ಅಭ್ಯರ್ಥಿಗಳನ್ನು ತಿರಸ್ಕರಿಸುವ ಅವಕಾಶ ಇದರಲ್ಲಿಲ್ಲ. ವಿಶೇಷವೆಂದರೆ ನೋಟಾ'ದಡಿ ದಾಖಲಾದ ಮತಗಳ ಸನಿಹದಲ್ಲಿರುವ ಅಭ್ಯರ್ಥಿಯು ಜಯಶಾಲಿ ಎಂದು ಘೋಷಿಸಲಾಗುತ್ತದೆ.

 *. ಈ ಮೂಲಕ ಕೇವಲ ಜನತೆಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ನೀಡಿದಂತಾಗಿದೆ. * ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಮತದಾರನಿಂದ ಅಭ್ಯರ್ಥಿ ತಿರಸ್ಕರಗೊಳ್ಳುವ ಮೂಲಕ ಆತನ ನೈತಿಕ ಸ್ಥೈರ್ಯ ಕುಗ್ಗಿಸಿದ ತೃಪ್ತಿ ಮಾತ್ರ ಮತದಾರನದು.

Saturday, 4 October 2014

★ ಭಾರತದ ಭೂಗೋಳ: UNIT: IV] ಭಾರತದ ದ್ವೀಪಗಳು: (Indian Islands)


★ ಭಾರತದ ಭೂಗೋಳ:
(Indian Geography)


UNIT: IV] ಭಾರತದ ದ್ವೀಪಗಳು:
(Indian Islands)

★ ಮುಖಜಭೂಮಿಯ ದ್ವೀಪಗಳು:

*. ಗಂಗಾ, ಕೃಷ್ಣಾ ಮತ್ತು ಮಹಾನದಿ ದ್ವೀಪಗಳು:

*. ಗಂಗಾ ನದಿಯ ಮುಖಜಭೂಮಿಯಲ್ಲಿರುವ ದ್ವೀಪಗಳು: 'ನ್ಯೂಮರ್ ದ್ವೀಪಗಳು'

*. ಮುಖಜಭೂಮಿಯ ದ್ವೀಪಗಳಲ್ಲಿಯೇ ಅತೀ ದೊಡ್ಡ ದ್ವೀಪ: ನರ್ಮದಾ ನದಿ ಅಳಿವೆಯಲ್ಲಿರುವ 'ಆಲಿಯಾಬೆಟ್' (16 ಕಿ.ಮೀ.)

*. ಜಗತ್ತಿನ ದೊಡ್ಡದಾದ ನದಿ ದ್ವೀಪ:  ಆಸ್ಸಾಂನಲ್ಲಿ ಹರಿಯುವ ಬ್ರಹ್ಮಪುತ್ರ ನದಿಯಲ್ಲಿರುವ 'ಮಂಜೂಲಿ ದ್ವೀಪ'


★ ಸಾಗರಿಕ ದ್ವೀಪಗಳು:
*. ಭಾರತದಲ್ಲಿ ಎರಡು ಪ್ರಮುಖ ಸಾಗರಿಕ ದ್ವೀಪಸ್ತೋಮಗಳಿವೆ.

1) ಬಂಗಾಳಕೊಲ್ಲಿಯಲ್ಲಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು.

2) ಅರಬ್ಬೀ ಸಮುದ್ರದಲ್ಲಿರುವ ಲಕ್ಷದ್ವೀಪಗಳು.

*. ಭಾರತದಲ್ಲಿ ಒಟ್ಟು 247 ದ್ವೀಪಗಳಿವೆ. ಅರಬ್ಬಿ ಸಮುದ್ರದಲ್ಲಿ 43 ಹಾಗೂ ಬಂಗಾಳಕೊಲ್ಲಿಯಲ್ಲಿ 204 ದ್ವೀಪಗಳಿವೆ.



★ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು:

*. ವಿಸ್ತೀರ್ಣ: 8,236,85 ಚ.ಕಿ.ಮೀ.

*. ಪೂರ್ವ-ಪಶ್ಚಿಮವಾಗಿ 58 ಕಿ.ಮೀ ಹಾಗೂ ಉತ್ತರ-ದಕ್ಷಿಣವಾಗಿ 590 ಕಿ.ಮೀ. ವಿಸ್ತರಿಸಿದೆ.

*. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು 10⁰ ಕಾಲುವೆ (10⁰ Channel) ಯು ಪ್ರತ್ಯೇಕಿಸುವುದು.



★ ಅಂಡಮಾನ್ ದ್ವೀಪಗಳು:

*. ಈ ದ್ವೀಪಗಳು ಜ್ವಾಲಾಮುಖಿ ನಿರ್ಮಿತ ಗಟ್ಟಿಶಿಲೆಗಳಿಂದ ಕೂಡಿವೆ.

*. ನಾರ್ಕೊಂಡಂ ಮತ್ತು ಬ್ಯಾರನ್ ದ್ವೀಪಗಳು ಇಲ್ಲಿನ ಪ್ರಮುಖ ಜ್ವಾಲಾಮುಖಿ ದ್ವೀಪಗಳು.

*. ಬ್ಯಾರನ್ ದ್ವೀಪವು ಪೋರ್ಟ್ ಬ್ಲೇರ್ ನಿಂದ ಈಶಾನ್ಯದಲ್ಲಿದ್ದು 'ಭಾರತದ ಏಕಮೇವ ಸಜೀವ ಜ್ವಾಲಾಮುಖಿ ದ್ವೀಪ'ವಾಗಿದೆ.

*. ಅಂಡಮಾನ್ ದ್ವೀಪಗಳಲ್ಲಿನ 'ಮಧ್ಯ ಅಂಡಮಾನ್ ದ್ವೀಪವು 'ಭಾರತದಲ್ಲಿನ ಅತಿದೊಡ್ಡ ದ್ವೀಪವಾಗಿದೆ.

*. ದಕ್ಷಿಣ ಅಂಡಮಾನ್ ನಲ್ಲಿ ಪೋರ್ಟ್ ಬ್ಲೇರ್ ಇರುವುದರಿಂದ ದಕ್ಷಿಣ ಅಂಡಮಾನ್ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ದ್ವೀಪವಾಗಿದೆ.

*. ದಕ್ಷಿಣ ಅಂಡಮಾನ್ ಮತ್ತು ಚಿಕ್ಕ ಅಂಡಮಾನ್ ಗಳನ್ನು ಪ್ರತ್ಯೇಕಿಸುವ ಕಾಲುವೆ: ಡಂಕನ್ ಕಾಲುವೆ(Duncan Channel).

*. ಅಂಡಮಾನ್ ದ್ವೀಪಗಳಲ್ಲಿ ಅತಿ ಎತ್ತರದ ಶಿಖರ: 'ಸ್ಯಾಡಲ್ ಶಿಖರ'(738 ಮೀ.)

*. ಅಂಡಮಾನ್ ದ್ವೀಪಗಳಲ್ಲಿನ ಪ್ರಮುಖ ನದಿ: 'ರಾಂಗೋ ನದಿ'.



★ ನಿಕೋಬಾರ್ ದ್ವೀಪಗಳು:

*. ನಿಕೋಬಾರ್ ದ್ವೀಪಗಳು ಅಂಡಮಾನ್ ದ ದಕ್ಷಿಣಭಾಗದಲ್ಲಿವೆ.

*. ನಿಕೋಬಾರ್ ದ್ವೀಪಗಳಲ್ಲಿನ ಅತಿದೊಡ್ಡ ದ್ವೀಪ: 'ಗ್ರೇಟ್ ನಿಕೋಬಾರ್' (862 ಚ.ಕಿ.ಮೀ).

*. ಭಾರತದ ಭೂಪ್ರದೇಶದ ಅತ್ಯ೦ತ ದಕ್ಷಿಣದ ತುತ್ತತುದಿ 'ಇಂದಿರಾ ಪಾಯಿಂಟ್' ಇರುವುದು: 'ಗ್ರೇಟ್ ನಿಕೋಬಾರ್' ದ್ವೀಪದ ದಕ್ಷಿಣದ ತುದಿಯಲ್ಲಿನ 6⁰.45¹ ಉ.ಅಕ್ಷಾಂಶದಲ್ಲಿ.

*. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿ: ಪೋರ್ಟ್ ಬ್ಲೇರ್ ,ದಕ್ಷಿಣ ಅಂಡಮಾನ್ ನಲ್ಲಿದೆ.



★ ಲಕ್ಷ ದ್ವೀಪಗಳು:

*. ರಾಜಧಾನಿ: ಕವರತ್ತಿ, ಕಣ್ಣಾನೂರು ದ್ವೀಪದಲ್ಲಿದೆ.

*.  ಇವು ಅರಬ್ಬೀ ಸಮುದ್ರದಲ್ಲಿರುವ ಹವಳದ ದಿಬ್ಬಗಳಾಗಿವೆ.

*. ಇವು 25 ದ್ವೀಪಗಳ ಸಮೂಹವಾಗಿದೆ.

*. ಭೂ ಮೇಲ್ಮೈ ಸಂಪೂರ್ಣವಾಗಿ ಸಮತಟ್ಟಾಗಿದ್ದು ಯಾವುದೇ ಬಗೆಯ ಬೆಟ್ಟಗುಡ್ಡಗಳು, ಝರಿಗಳು ಕಂಡುಬರುವುದಿಲ್ಲ.

*. ಪ್ರಮುಖವಾಗಿ ಎರಡು ದ್ವೀಪಸಮೂಹಗಳಿದ್ದು 1) ಉತ್ತರಕ್ಕೆ ಅಮಿನ್ ಡಿವಿ ದ್ವೀಪಗಳು ಮತ್ತು ದಕ್ಷಿಣಕ್ಕೆ ಕಣ್ಣಾನೂರು ದ್ವೀಪಗಳು.

*. ಲಕ್ಷ ದ್ವೀಪಗಳಲ್ಲಿನ ಅತಿದೊಡ್ಡ ದ್ವೀಪ: ಮಿನಿಕಾಯ್ (4.53 ಚ.ಕಿ.ಮೀ).

*. ಮಿನಿಕಾಯ್ ದ್ವೀಪಸಮೂಹವನ್ನು ಇತರ ಲಕ್ಷ ದ್ವೀಪಗಳಿಂದ ಪ್ರತ್ಯೇಕಿಸುವ ಕಾಲುವೆ: 9⁰ ಕಡಲ್ಗಾಲುವೆ (9⁰ Channel).

*. ಲಕ್ಷ ದ್ವೀಪಕ್ಕೆ ಸಮೀಪವಿರುವ ದೇಶ: ಮಾಲ್ಡೀವ್ಸ್(140 ಕಿ.ಮೀ).

to be continued...