"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 27 October 2014

★ ಸಾರ್ವಜನಿಕ ಸಾಲ ನಿರ್ವಹಣೆ (Public debt management) ಎಂದರೇನು? ಅದರ ಪ್ರಮುಖ ಉದ್ದೇಶ ಹಾಗು ಮಹತ್ವದ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಿ. (150 ಶಬ್ದಗಳಲ್ಲಿ)



★ ಅರ್ಥಶಾಸ್ತ್ರ (Economics)

★ ಸಾರ್ವಜನಿಕ ಸಾಲ ನಿರ್ವಹಣೆ (Public debt management) ಎಂದರೇನು? ಅದರ ಪ್ರಮುಖ ಉದ್ದೇಶ ಹಾಗು ಮಹತ್ವದ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಿ.
(150 ಶಬ್ದಗಳಲ್ಲಿ)

ಸರ್ಕಾರಕ್ಕೆ ಅಗತ್ಯವಿರುವ ಸಾಲದ ಎತ್ತುವಳಿ ಮತ್ತು ನಿರ್ವಹಣೆಗೆ ಕಾರ್ಯತಂತ್ರ ರೂಪಿಸಿ, ಕಾರ್ಯನ್ವಯಗೊಳಿಸುವ ಪ್ರಕ್ರಿಯೆಗೆ ಸ್ಥೂಲವಾಗಿ ಸಾರ್ವಜನಿಕ ಸಾಲ ನಿರ್ವಹಣೆ ಎನ್ನಲಾಗುತ್ತದೆ.
ಸಾರ್ವಜನಿಕ ನೀತಿಯಂತೆ ಸರ್ಕಾರದ, ಸಾಲದ ಮಟ್ಟ ಹಾಗೂ ಬೆಳವಣಿಗೆ ದರ ಎರಡೂ ಸುಸ್ಥಿರವಾಗಿರುವಂತೆ ಕಾಯ್ದುಕೊಳ್ಳಬೇಕಾಗುತ್ತದೆ.


* ಸಾಲ ನಿರ್ವಹಣೆಯ ಉದ್ದೇಶಗಳು:

ಸರ್ಕಾರದ ಹಣಕಾಸು ಅಗತ್ಯಗಳನ್ನು ಖಾತರಿಪಡಿಸುವುದು ಹಾಗೂ ಸರ್ಕಾರದ ಮಧ್ಯಮಾವಧಿಯಿಂದ ಹಿಡಿದು ಧೀರ್ಘಾವಧಿವರೆಗಿನ ಸಾಲ ಅತ್ಯಂತ ಕಡಿಮೆ ವೆಚ್ಚದಲ್ಲಿ ಪಾವತಿಯಲ್ಲಿರುವಂತೆ ನೋಡಿಕೊಳ್ಳುವುದು ಹಾಗೂ ಸವಾಲಿನ ಸಂದರ್ಭಗಳಲ್ಲಿ ವಿವೇಕಯುತವಾಗಿರುವಂತೆ ನಿರ್ವಹಿಸುವುದು ಇದರ ಉದ್ದೇಶವಾಗಿದೆ.

* ಸಾರ್ವಜನಿಕ ಸಾಲ ನಿರ್ವಹಣೆಯ ಮಹತ್ವ:

ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ಅನೇಕ ದೇಶಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ, ವ್ಯವಸ್ಥಿತ ವಿನ್ಯಾಸವಿರದ ಸಾಲ ಸಂರಚನೆ ಬಡ್ಡಿದರ ನಿರೂಪಣೆ, ಸಂಗ್ರಹವಿರದ ತುರ್ತು ಹೊಣೆಗಾರಿಕೆಗಳೇ ಕಾರಣವೆಂದು ವ್ಯಕ್ತವಾಗಿದೆ.

ಉದಾಹರಣೆಗೆ ವಿನಿಮಯ ದರ ಅಥವಾ ದೇಶಿ ಅಥವಾ ವಿದೇಶಿ ಸಾಲ ವ್ಯವಸ್ಥೆಯ ಹೊರತಾಗಿಯೂ, ಸರ್ಕಾರ ಅಲ್ಪಾವಧಿ ಅಥವಾ ಸಂಚಲಿತ ಸಾಲ ದರದಿಂದಾಗಿ ಉಳಿತಾಯ ದರದೊಂದಿಗೆ ಸಾಧ್ಯ ವೆಚ್ಚ ಉಳಿತಾಯಕ್ಕೆ ಗಮನಹರಿಸುವುದರಿಂದ ಇಂತಹ ಬಿಕ್ಕಟ್ಟು ತಲೆದೋರಿವೆ.

ಇವುಗಳು ಆರ್ಥಿಕ ನಿರ್ವಹಣೆಯ ಕೊರತೆಯನ್ನು ತೋರಿಸುತ್ತವೆ. ಸರ್ಕಾರದ ವಿದೇಶಿ - ಕರೆನ್ಸಿ ಸಾಲ ವಿಷಯದಲ್ಲಿ ಬಂಡವಾಳ ಹೂಡಿಕೆದಾರರು ಹಿಂದೇಟು ಹಾಕಿದರೆ, ವಿದೇಶಿ ಸಾಲವನ್ನೇ ಅವಲಂಬಿಸುವುದು ಮಾರಕವೆನಿಸುತ್ತದೆ. ವಿವೇಚನಾಯುಕ್ತ ಸಾಲ ನಿರ್ವಹಣೆ ಇಲ್ಲಿ ಅತಿಮುಖ್ಯ.

No comments:

Post a Comment