★ ಪ್ರಸ್ತುತ ಇರುವ ಸಾರ್ವನಿಕ ವಿತರಣಾ ವ್ಯವಸ್ಥೆಯ ಲೋಪ ದೋಷಗಳನ್ನು ಸರಿಪಡಿಸಲು ನೀವು ಸರ್ಕಾರಕ್ಕೆ ಯಾವ ಸಲಹೆಗಳನ್ನು ನೀಡುವಿರಿ?
(150 ಶಬ್ದಗಳಲ್ಲಿ)
(Current public distribution system in India)
━━━━━━━━━━━━━━━━━━━━━━━━━━━━━━━━━━━━━━━━━━━━━
1. ಆಹಾರ ಧಾನ್ಯಗಳ ಉತ್ಪಾದನೆ ಬಳಸಿಸಲ್ಪಡುವ ಭೂ ವಿಸ್ತೀರ್ಣವು ವ್ಯತ್ಯಾಸಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಮತ್ತು ಅವುಗಳ ಉತ್ಪಾದನೆಯನ್ನು ಹೆಚ್ಚಿಸಲು ಆಧುನಿಕ ಕೃಷಿ ವಿಧಾನವನ್ನು ಅನುಸರಿಸುವುದು.
2. ಭಾರತೀಯ ಆಹಾರ ನಿಗಮ ಮತ್ತು ಇತರೇ ದಾಸ್ತನುಗಳಲ್ಲಿ ಸಂಗ್ರಹಿಸಿರುವ ಆಹಾರಾಧಾನ್ಯಗಳು ವಿವಿಧ ಕಾರಣಗಳಿಂದ ವ್ಯರ್ಥವಾಗುತ್ತಾ ಇವೆ. (ಭಾರತೀಯ ಆಹಾರ ನಿಗಮವು ಬೆಂಬಲ ಬೆಲೆಯ ಮೂಲಕ ಖರೀದಿಸಿದ ಸುಮಾರು ಶೇ.10 ರಷ್ಟು) ಆದ್ದರಿಂದ ಪಡಿತರ ಚೀಟಿದಾರರ ವ್ಯಾಪ್ತಿಗೆ ಸೇರ್ಪಡೆದೇ ಇರುವ ಅರ್ಹ ಪಲಾನುಭವಿಗಳನ್ನು ಇದರ ವ್ಯಾಪ್ತಿಗೆ ಸೇರ್ಪಡಿಸಲು ಸರ್ಕಾರ ಕ್ರಮ ಕೈಗೊಳ್ಳುವ ಮೂಲಕ ವ್ಯರ್ಥವಾಗುವ ಆಹಾರ ಧಾನ್ಯಗಳನ್ನು ಬಡಕುಟುಂಬದವರಿಗೆ ಸಿಗುವಂತೆ ನೋಡಿಕೊಳ್ಳಬೇಕು.
3. ಕರ್ನಾಟಕ ರಾಜ್ಯದ ನಗರ ಪ್ರದೇಶಗಳಲ್ಲಿ ಬಡತನವು ಇನ್ನೂ ಕೂಡ ಶೇ 32.ರಷ್ಟು ಇರುವುದು ಅಧ್ಯಾಯನದಿಂದ ತಿಳಿಯುತ್ತದೆ. ಆದರೆ ಈ ಪ್ರದೇಶಗಳಲ್ಲಿ ನ್ಯಾಯ ಬೆಲೆ ಅಂಗಡಿಗಳ ಪ್ರಮಾಣ ಶೇ.28 ರಷ್ಟಿದೆ ಆದುದರಿಂದ ನಗರಭಾಗದ ಬಡಜನರ ಆಹಾರ ಭದ್ರತೆಯನ್ನು ಕಾಯ್ದುಕೊಳ್ಳಲು ಆ ಪ್ರದೇಶಗಳಲ್ಲಿ ಹಾಲಿ ಇರುವ ನ್ಯಾಯ ಬೆಲೆ ಅಂಗಡಿಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಕ್ರಮ
ಕೈಗೊಳ್ಳಬೇಕು.
4. ಬಿ.ಪಿ.ಎಲ್ ಕುಟುಂಬಗಳನ್ನು ಪರಿಣಾಮ ಕಾರಿಯಾಗಿ ಉದ್ಯೋಗಖಾತರಿ ಯೋಜನೆಗಳ ಜೊತೆ ಸಂಪರ್ಕಿಸಿ, ಅವರ ಕೊಂಡುಕೊಳ್ಳುವ ಶಕ್ತಿ ಹೆಚ್ಚುವಂತೆ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು.
5. ಪ್ರಸ್ತುತದಲ್ಲಿ ವಿತರಿಸುತ್ತಿರುವ ಆಹಾರ ಧಾನ್ಯ ಬಡಕುಟುಂಬಗಳ ಅಗತ್ಯಕ್ಕಿಂತ ತೀರ ಕಡಿಮೆ ಇದೆ. ಆದುದರಿಂದ ಸರ್ಕಾರ ಆಹಾರ ಧಾನ್ಯಗಳನ್ನು ನಿಗಧಿ ಪಡಿಸುವ ಮುಂಚೆ ಅವರ ಅಗತ್ಯತೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
6. ಬಡಕುಟುಂಬಗಳು ಆಹಾರ ಧಾನ್ಯಗಳನ್ನು ಸರಿಯಾದ ಸಮಯದಲ್ಲಿ ಕೊಂಡುಕೊಳ್ಳಲು ಅಸಮರ್ಥರಿರುತ್ತಾರೆ. ಆದ ಕಾರಣ ಸರ್ಕಾರ ಈ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ಕೊಳ್ಳಲು ಸಾಲದ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಬೇಕು.
(ಕೃಪೆ: ಯೋಜನಾ ಮಾಸ ಪತ್ರಿಕೆ)
No comments:
Post a Comment