"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 13 October 2014

★ ಭಾರತದ ವಿವಿಧ ಮಣ್ಣು ಸಂರಕ್ಷಣಾ ಯೋಜನೆಗಳ ಬಗ್ಗೆ ಚರ್ಚಿಸಿ (100-120 ಶಬ್ಧಗಳಲ್ಲಿ)


★ ಭಾರತದ ಭೂಗೋಳ

★ ಭಾರತದ ವಿವಿಧ ಮಣ್ಣು ಸಂರಕ್ಷಣಾ ಯೋಜನೆಗಳ ಬಗ್ಗೆ ಚರ್ಚಿಸಿ (100-120 ಶಬ್ಧಗಳಲ್ಲಿ)

ಮಣ್ಣಿನ ಸಂರಕ್ಷಣೆಯ ಉದ್ದೇಶವು ಮಣ್ಣಿನ ಸವೆತವನ್ನು ತಡೆಗಟ್ಟುವುದು, ತನ್ಮೂಲಕ ಮಣ್ಣಿನ ಫಲವತ್ತತೆಯನ್ನು ಹಾಗೂ ಬೆಳೆಗಳ ಇಳುವರಿಯನ್ನು ಕಾಪಾಡುವುದೇ ಆಗಿದೆ. ಭಾರತದಾದ್ಯಂತ ಮಣ್ಣಿನ ಗುಣಲಕ್ಷಣಗಳು, ಅವುಗಳ ಬಳಕೆಯ ವಿಧಾನ, ಹಾಗು ಮಣ್ಣಿನ ಸವೆತದ ಕಾರಣ ಮತ್ತು ತೀವ್ರತೆಗಳು ವಿವಿಧ ರೀತಿಯಲ್ಲಿರುವುದರಿಂದ ಮಣ್ಣಿನ ಸಂರಕ್ಷಣೆಯ ವಿಧಾನಗಳು, ಯೋಜನಾ ಕಾರ್ಯಕ್ರಮಗಳೂ ಕೂಡಾ ವಿವಿಧ ರೀತಿಯಲ್ಲಿವೆ.

ಇವುಗಳನ್ನು ಪ್ರಮುಖವಾಗಿ ಎರಡು ವಿಧಗಳಾಗಿ ವಿಂಗಡಿಸಬಹುದು.

ಅವುಗಳೆಂದರೆ ಸಣ್ಣ ಹಾಗು ದೊಡ್ಡ ಯೋಜನೆಗಳು.

*. ಸಣ್ಣ ಯೋಜನೆಗಳು ವ್ಯಕ್ತಿಗತ. ಚಿಕ್ಕ ಭೂಪ್ರದೇಶಗಳಲ್ಲಿ ಇಳಿಜಾರಿನ ಅಡ್ಡಲಾಗಿ ಬದು ಅಥವಾ ಅಡ್ಡಗಟ್ಟೆಗಳನ್ನು ನಿರ್ಮಿಸುವುದು, ಹಂತಹಂತವಾಗಿ ವ್ಯವಸಾಯ ಕ್ಷೇತ್ರಗಳನ್ನು ರೂಪಿಸುವುದು, ಭೂಪ್ರದೇಶಗಳನ್ನು ಮಟ್ಟಗೊಳಿಸುವುದು, ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು, ಮರಗಿಡಗಳನ್ನು ಬೆಳೆಯುವುದು  ಮುಖ್ಯವಾದವುಗಳಾಗಿವೆ.

ಮಣ್ಣಿನ ಸವೆತಕ್ಕೀಡಾಗುವ ವಿಸ್ತಾರವಾದ ಪ್ರದೇಶಗಳಲ್ಲಿ ಸರ್ಕಾರವು ದೊಡ್ಡ ಪ್ರಮಾಣದ ಯೋಜನೆಗಳನ್ನು ಜಾರಿಯಲ್ಲಿ ತರುತ್ತದೆ. ಇದಕ್ಕಾಗಿ ಶಾಸನಬದ್ಧ ಕಾಯಿದೆಗಳನ್ನು ರೂಪಿಸಿದೆ.

ಈ ಶಾಸನಬದ್ಧ ಕಾರ್ಯಯೋಜನೆಗಳಲ್ಲಿ ಮುಖ್ಯವಾದವುಗಳೆಂದರೆ
*. ಎತ್ತರವಾದ ಪ್ರದೇಶಗಳಲ್ಲಿನ ಅರಣ್ಯನಾಶ ತಡೆಗಟ್ಟುವುದು.
*. ಅರಣ್ಯಗಳು ನಾಶವಾಗಿರುವ ಜಲಾನಯನ ಪ್ರದೇಶಗಳಲ್ಲಿ ಅರಣ್ಯಗಳನ್ನು ಪುನಃ ಬೆಳೆಸುವುದು.
*. ನೀರಾವರಿ ಪ್ರದೇಶಗಳಲ್ಲಿ ನೀರಿನ ಬಳಕೆಯನ್ನು ನಿಯಂತ್ರಿಸಿ ಜೌಗು ಪ್ರದೇಶಗಳ ನಿರ್ಮಾಣವನ್ನು ತಡೆಗಟ್ಟುವುದು.
*. ರಾಷ್ಟ್ರೀಯ ಭೂ ಬಳಕೆ ಮತ್ತು ಸಂರಕ್ಷಣಾ ಮಂಡಳಿಯು ರೂಪಿಸಿದ ವೈಜ್ಞಾನಿಕ ಮಾದರಿಯಲ್ಲಿ ಭೂಮಿಯನ್ನು ಬಳಸುವ ಯೋಜನೆಗಳನ್ನು ಅನುಷ್ಟಾನದಲ್ಲಿ ತರುವುದು.
*. ಸ್ಥಳಾಂತರ ಬೇಸಾಯ ನಿಯಂತ್ರಣ ಯೋಜನೆಯೊಂದಿಗೆ ಮಣ್ಣಿನ ಸವೆತದ ನಿಯಂತ್ರಣ ಹಾಗು ಆ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ 'ಜಲಾನಯನ ಪ್ರದೇಶ ಯೋಜನೆಯನ್ನು ಕೈಗೊಳ್ಳುವುದು.
*. ಸಮಗ್ರ ಬಂಜರು ಭೂಮಿ ಅಭಿವೃದ್ಧಿ ಯೋಜನೆ (IWDP) ಯನ್ನು 1990ರಲ್ಲಿ ಜಾರಿಗೆ ಬಂದಿದ್ದು ಬಂಜರು ಭೂಮಿಯ ಅಭಿವೃದ್ಧಿಯನ್ನು ಸಾಧಿಸುವುದು. ಆ ಮೂಲಕ ಅನುಪಯುಕ್ತವಾಗಿರುವ ಪ್ರದೇಶಗಳನ್ನು ಉಪಯೋಗಿಸಿಕೊಳ್ಳಲು ಸರ್ಕಾರವು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದೆ.

No comments:

Post a Comment