☀ರಾಷ್ಟೀಯ ಆದಾಯ ಮತ್ತು ರಾಷ್ಟೀಯ ಆದಾಯದ ಮೂಲ ಪರಿಕಲ್ಪನೆಗಳು:
(National Income and Concepts of National Income)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಅರ್ಥಶಾಸ್ತ್ರ
(Economics)
★ 'ರಾಷ್ಟೀಯ ಆದಾಯ' ಎಂದರೇನು?
— ' ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್ಯವಾಗಿದೆ. ಅದು ಒಂದು ವರ್ಷದ ಅವಧಿಯಲ್ಲಿ ದೇಶವೊಂದು ಗಳಿಸುವ ಸಮಗ್ರ ಆದಾಯವಾಗಿರುತ್ತದೆ.'
— 'ರಾಷ್ಟೀಯ ಆದಾಯ' ವನ್ನು 'ರಾಷ್ಟೀಯ ಭಾಜ್ಯಾಂಶ'(National dividend), 'ರಾಷ್ಟೀಯ ಉತ್ಪನ್ನ'(National Output) , 'ರಾಷ್ಟೀಯ ವೆಚ್ಚ' (National Expenditure) ಎಂಬ ಪದಗಳಿಗೆ ಪರ್ಯಾಯ ಪದವನ್ನಾಗಿ ಬಳಸಲಾಗುತ್ತಿದೆ.
━━━━━━━━━━━━━━━━━━━━━━━━━━━━━━━━━━━━━━━━━━━━━
★ ರಾಷ್ಟೀಯ ಆದಾಯದ ಮೂಲ ಪರಿಕಲ್ಪನೆಗಳು ★
(Concepts of National Income):
1) ಒಟ್ಟು ರಾಷ್ಟೀಯ ಉತ್ಪನ್ನ (Gross National Product—GNP) ಎಂದರೇನು?
★ ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶವೊಂದು ಉತ್ಪಾದಿಸುವ ಸರಕು ಮತ್ತು ಸೇವೆಗಳ ಸಮಗ್ರ ಮೌಲ್ಯವೇ ಒಟ್ಟು ರಾಷ್ಟೀಯ ಉತ್ಪನ್ನ.
—> ಒಟ್ಟು ರಾಷ್ಟೀಯ ಉತ್ಪನ್ನ = ನಿವ್ವಳ ರಾಷ್ಟೀಯ ಉತ್ಪನ್ನ + ಸವಕಳಿ ವೆಚ್ಚ (Depreciation Cost)
━━━━━━━━━━━━━━━━━━━━━━━━━━━━━━━━━━━━━━━━━━━━━
2) ನಿವ್ವಳ ರಾಷ್ಟೀಯ ಉತ್ಪನ್ನ (Net National Product—NNP) ಎಂದರೇನು?
★ ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಮಾಡಲಾದ ನಿವ್ವಳ ಉತ್ಪಾದನೆಯ ಮಾರುಕಟ್ಟೆಯ ಮೌಲ್ಯವನ್ನು 'ನಿವ್ವಳ ರಾಷ್ಟೀಯ ಉತ್ಪನ್ನ' ಎನ್ನಲಾಗುತ್ತದೆ.
—> ನಿವ್ವಳ ರಾಷ್ಟೀಯ ಉತ್ಪನ್ನ = ಒಟ್ಟು ರಾಷ್ಟೀಯ ಉತ್ಪನ್ನ -ಸವಕಳಿ ವೆಚ್ಚ.
━━━━━━━━━━━━━━━━━━━━━━━━━━━━━━━━━━━━━━━━━━━━━
3) ಒಟ್ಟು ದೇಶಿಯ ಉತ್ಪನ್ನ (Gross Domestic Product—GDP) ಎಂದರೇನು?
★ ಒಟ್ಟು ದೇಶಿಯ ಉತ್ಪನ್ನವು ಆರ್ಥಿಕತೆಯೊಂದು ಒಂದು ವರ್ಷದಲ್ಲಿ ಉತ್ಪಾದಿಸಿದ ಸರಕು ಮತ್ತು ಸೇವೆಗಳ ಪರಿಚಲನೆಯ ಮಾಪನವಾಗಿದೆ.
★ ಅದು ಸರಕು ಮತ್ತು ಸೇವೆಗಳ ಉತ್ಪಾದನೆಯನ್ನು ಮಾರುಕಟ್ಟೆ ಬೆಲೆಗಳಲ್ಲಿ ಮೌಲ್ಯದ ಅಂದಾಜು ಮಾಡಿ ಒಟ್ಟುಗೂಡಿಸುವ ಮೂಲಕ ಪಡೆಯಲಾಗುತ್ತದೆ.
━━━━━━━━━━━━━━━━━━━━━━━━━━━━━━━━━━━━━━━━━━━━━
4) ನಿವ್ವಳ ದೇಶಿಯ ಉತ್ಪನ್ನ (Net Domestic Product—NDP) ಎಂದರೇನು?
★ ಮಾರುಕಟ್ಟೆ ಬೆಲೆಯಲ್ಲಿ ನಿವ್ವಳ ದೇಶಿಯ ಉತ್ಪನ್ನ ಎಂದರೆ ದೇಶದೊಳಗಡೆ ಉತ್ಪಾದಿಸಲಾದ ಸರಕು ಮತ್ತು ಸೇವೆಗಳ ಸವಕಳಿ ವೆಚ್ಚವನ್ನು ಹೊರತುಪಡಿಸಿದ ನಿವ್ವಳ ಮಾರುಕಟ್ಟೆ ಮೌಲ್ಯವಾಗಿದೆ.
★ ಉತ್ಪಾದನಾಂಗ ವೆಚ್ಚದಲ್ಲಿನ ನಿವ್ವಳ ದೇಶಿಯ ಉತ್ಪನ್ನ ಎಂದರೆ ಉತ್ಪಾದನಾಂಗಗಳು ಪಡೆಯುವ ಆದಾಯಗಳ ಮೊತ್ತವನ್ನು ಪ್ರತಿನಿಧಿಸುವ ದೇಶದೊಳಗಡೆ ಉತ್ಪಾದಿಸಿದ ಸರಕು ಮತ್ತು ಸೇವೆಗಳ ನಿವ್ವಳ ಮೌಲ್ಯವಾಗಿದೆ.
★ ನಿವ್ವಳ ದೇಶಿಯ ಉತ್ಪನ್ನವನ್ನು ಕಂಡು ಹಿಡಿಯಲು ಈ ಕೆಳಗಿನ ಸೂತ್ರವನ್ನು ಬಳಸಲಾಗುತ್ತದೆ.
—> ಮಾರುಕಟ್ಟೆ ಬೆಲೆಯಲ್ಲಿ NDP = ಮಾರುಕಟ್ಟೆ ಬೆಲೆಯಲ್ಲಿ GDP - ಸವಕಳಿ ವೆಚ್ಚ.
—> ಉತ್ಪಾದನಾಂಗ ವೆಚ್ಚದಲ್ಲಿ NDP = ಮಾರುಕಟ್ಟೆ ಬೆಲೆಯಲ್ಲಿ NDP - ಪರೋಕ್ಷ ತೆರಿಗೆ + ಸಹಾಯಧನ.
━━━━━━━━━━━━━━━━━━━━━━━━━━━━━━━━━━━━━━━━━━━━━
5) ನಾಮರೂಪಿ(ಹಣರೂಪಿ) ಆದಾಯ (Nominal National Income) ಎಂದರೇನು?
★ ಪ್ರಸ್ತುತ ಬೆಲೆಗಳಲ್ಲಿ ಅಂದಾಜು ಮಾಡಲಾದ ರಾಷ್ಟೀಯ ಆದಾಯವನ್ನು ನಾಮರೂಪಿ(ಹಣರೂಪಿ) ಆದಾಯ ಎನ್ನಲಾಗುತ್ತದೆ.
━━━━━━━━━━━━━━━━━━━━━━━━━━━━━━━━━━━━━━━━━━━━━
6) ನೈಜ ರಾಷ್ಟೀಯ ಆದಾಯ (Real National Income) ಎಂದರೇನು?
★ ಆಧಾರ ವರ್ಷವನ್ನಾಗಿ ತೆಗೆದುಕೊಂಡ ವರ್ಷದ ಸಾಮಾನ್ಯ ಬೆಲೆಯ ಮಟ್ಟದ ಮುಖೇನ ವ್ಯಕ್ತಪಡಿಸಲಾಗುವ ರಾಷ್ಟೀಯ ಆದಾಯವನ್ನು ನೈಜ ರಾಷ್ಟೀಯ ಆದಾಯ ಎನ್ನಲಾಗುತ್ತದೆ.
━━━━━━━━━━━━━━━━━━━━━━━━━━━━━━━━━━━━━━━━━━━━━
7) ತಲಾ ಆದಾಯ (Percapita Income) ಎಂದರೇನು?
★ ಒಂದು ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯ ಒಂದು ವರ್ಷದ ಸರಾಸರಿ ಆದಾಯವನ್ನು ತಲಾ ಆದಾಯ ಎನ್ನಲಾಗುತ್ತದೆ.
★ ತಲಾ ಆದಾಯವನ್ನು ಕಂಡು ಹಿಡಿಯಲು ಈ ಕೆಳಗಿನ ಸೂತ್ರವನ್ನು ಬಳಸಲಾಗುತ್ತದೆ.
ರಾಷ್ಟೀಯ ಆದಾಯ
—> ತಲಾ ಆದಾಯ = —————————
ಒಟ್ಟು ಜನಸಂಖ್ಯೆ
ಧನ್ಯವಾದಗಳು
ReplyDelete