"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 19 October 2014

★ ಗುಪ್ತರ ಕಾಲದ ಶ್ರೇಷ್ಟ ವಿಜ್ಞಾನಿಗಳ ಕುರಿತು ಚರ್ಚಿಸಿರಿ. (150 ಶಬ್ಧಗಳಲ್ಲಿ) ( Famous Scientists of Gupta Period)


★ ಗುಪ್ತರ ಕಾಲದ ಶ್ರೇಷ್ಟ ವಿಜ್ಞಾನಿಗಳ ಕುರಿತು ಚರ್ಚಿಸಿರಿ. (150 ಶಬ್ಧಗಳಲ್ಲಿ)


ಎರಡು ಶತಮಾನಗಳ ಕಾಲ ರಾಜ್ಯವನ್ನಾಳಿದ ಗುಪ್ತರ ಸಾಮ್ರಾಜ್ಯವು ಅನೇಕ ಶ್ರೇಷ್ಟ ವಿಜ್ಞಾನಿಗಳನ್ನು ಜಗತ್ತಿಗೆ ನೀಡಿತು.


1) ಆರ್ಯಭಟ:

ಆರ್ಯಭಟನು ಕ್ರಿ.ಶ 499 ರಲ್ಲಿ ಖಗೋಳ ವಿಜ್ಞಾನದ ಪ್ರಮುಖ ಮೂಲಭೂತ ಸಮಸ್ಯೆಗಳನ್ನು ಮುಂದಿಟ್ಟ ಪ್ರಥಮ ಖಗೋಳ ವಿಜ್ಞಾನಿ. ಇವನು ತನ್ನ ಗ್ರಂಥಗಳಾದ 'ಆರ್ಯಭಟೀಯಂ' ಮತ್ತು 'ಸೂರ್ಯ ಸಿದ್ಧಾಂತ' ಗಳಲ್ಲಿ ಬೀಜಗಣಿತ, ರೇಖಾಗಣಿತ ಮತ್ತು ಖಗೋಳ ಶಾಸ್ತ್ರಗಳ ಬಗ್ಗೆ ಬರೆದಿದ್ದಾನೆ.
'ಭೂಮಿಯು ಎಲ್ಲಾ ದಿಕ್ಕುಗಳಲ್ಲೂ ಗುಂಡಾಗಿಯೇ ಇದೆ ಎಂಬ ವೈಜ್ಞಾನಿಕ ಸತ್ಯವನ್ನು ಬಹುಶಃ ಪ್ರಪಂಚದಲ್ಲೇ ಮೊಟ್ಟಮೊದಲಿಗೆ ಸಾರಿದ ಕೀರ್ತಿ ಆರ್ಯಭಟನದು. ಇವನು ಸೊನ್ನೆಯನ್ನು ಕಂಡುಹಿಡಿದನೆಂದು ಅಭಿಪ್ರಾಯಪಡಲಾಗಿದೆ.


2) ವರಾಹಮಿಹಿರ:

ಆರ್ಯಭಟನ ಸಮಕಾಲೀನನಾದ ವರಾಹಮಿಹಿರನು ಖಗೋಳ ವಿಜ್ಞಾನವನ್ನು ಖಗೋಳ ವಿಜ್ಞಾನ, ಗಣಿತ ಶಾಸ್ತ್ರ, ಜಾತಕ ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರ ಎಂದು ವಿಭಜಿಸಿದನು. ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಪ್ರಮಾಣ ಗ್ರಂಥವಾದ ಈತನ 'ಬ್ರಹತ್ ಸಂಹಿತಾ' ಕೃತಿಯು ವಿಶ್ವಕೋಶವೆಂದು ಪರಿಗಣಿತವಾಗಿದೆ. ಅಲ್ಲದೇ ಈತನು ರಚಿಸಿದ ಇನ್ನೊಂದು 'ಪಂಚ ಸಿದ್ದಾಂತಿಕಾ' ಎಂಬ ಖಗೋಳ ಶಾಸ್ತ್ರ ಗ್ರಂಥವನ್ನು 'ಖಗೋಳ ಶಾಸ್ತ್ರದ ಬೈಬಲ್' ಎಂದು ಕರೆಯುವರು.


3) ಧನ್ವಂತರಿ:

ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸಿದ್ದ ವಿದ್ವಾಂಸನಾಗಿದ್ದನು. ಆಯುರ್ವೇದ ಶಾಸ್ತ್ರದ ತಜ್ಞನಾಗಿದ್ದನು. 'ಆಯುರ್ವೇದ ನಿಘಂಟನ್ನು' ರಚಿಸಿದ ಈತನನ್ನು 'ಭಾರತದ ಆಯುರ್ವೇದ ಶಾಸ್ತ್ರದ ಪಿತಾಮಹನೆಂದು ಕರೆಯುವರು.


4) ಬ್ರಹ್ಮಗುಪ್ತ:

ಖ್ಯಾತ ಗಣಿತ ಶಾಸ್ತ್ರಜ್ಞನಾದ ಈತನು 'ಶೂನ್ಯ ಸಿದ್ದಾಂತ' ವನ್ನು ಹಾಗೂ ಬಿಂದುವಿನ ಬಳಕೆಯನ್ನು ಜಾರಿಗೆ ತಂದನು. ಈತನ ಎರಡು ಪ್ರಮುಖ ಖಗೋಳ ಗ್ರಂಥಗಳೆಂದರೆ 'ಬ್ರಹ್ಮ ಸ್ಪುಟ ಸಿದ್ಧಾಂತ' ಮತ್ತು 'ಖಂಡ ಖಾದ್ಯಕ'


5) ವಾಗ್ಭಟ:

ಈತನು ಆಯುರ್ವೇದ ವೈದ್ಯಕೀಯ ಬಗ್ಗೆ 'ಅಷ್ಟಾಂಗ ಸಂಗ್ರಹ' ವೆಂಬ ಕೃತಿಯನ್ನು ರಚಿಸಿರುವನು.

No comments:

Post a Comment