"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 7 October 2014

★ ನೋಟಾ (NOTA- None Of The Above) : ಚುನಾವಣೆ ಸುಧಾರಣೆಯ ಪ್ರಮುಖ ಅಸ್ತ್ರ? :

★ ನೋಟಾ (NOTA- None Of The Above) : ಚುನಾವಣೆ ಸುಧಾರಣೆಯ ಪ್ರಮುಖ ಅಸ್ತ್ರ? :

 ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ದೇಶದ ಆಡಳಿತ ವ್ಯವಸ್ಥೆ ಬದಲಿಸುವ ಸಾಮರ್ಥ್ಯ ಈ ಮತಕ್ಕಿದೆ. ಚುನಾವಣೆಗೆ ಸ್ಪರ್ಧಿಸಿರುವ ಯಾವೊಬ್ಬ ಅಭ್ಯರ್ಥಿ ತನಗೆ ಸೂಕ್ತ ಎನಿಸದಿದ್ದಲ್ಲಿ ಮತದಾರ ಈ 'ನೋಟಾ ' ಬಳಕೆ ಮಾಡಬಹುದು.


★ ನೋಟಾ (NOTA) ಎಂದರೇನು?
 -What do you mean by NOTA ?

 *. ನೋಟಾ ಅಂದರೆ ಮತದಾನ ಪಟ್ಟಿಯಲ್ಲಿರುವ ಯಾರೂ ನನ್ನ ಮತಕ್ಕೆ ಅರ್ಹರಲ್ಲ ಎಂದರ್ಥ.

*. (NOTA- None Of The Above) ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಸುಧಾರಣೆಯ ಪ್ರಮುಖ ಅಂಗವಾಗಿ ನೋಟಾ ಜಾರಿಗೆ ನಿರ್ಧರಿಸಿ 2009 ರಲ್ಲಿ ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಗೆ ಇಂತಹದೊಂದು ಪ್ರಸ್ತಾವನೆಯನ್ನು ಸಲ್ಲಿಸಿತು. ಆದರೆ ಇದಕ್ಕೆ ಬಹುತೇಕ ರಾಜಕೀಯ ಪಕ್ಷಗಳು ಪ್ರತಿರೋಧ ವ್ಯಕ್ತಪಡಿಸಿದ್ದವು.


 ★ ಸಂಘಟನೆ ಒತ್ತಾ,ಸೆ:
*.  'Peoples Union for Civic Liberties' ಎಂಬ ಸರ್ಕಾರೇತರ ಸಂಸ್ಥೆ ನೋಟಾ ಜಾರಿಗೆ ಬೆಂಬಲಿಸಿ ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿತ್ತು.

*. ಈ ಬಗ್ಗೆ ಸುಧೀರ್ಘವಾದ ಪ್ರತಿವಾದ ನಡೆದ ಬಳಿಕ ಅಂತಿಮವಾಗಿ 2013 ಸೆಪ್ಟಂಬರ್ 27 ರಂದು ಸುಪ್ರೀಂಕೋರ್ಟ್ 'ನೋಟಾ ' ಜಾರಿಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತು.

*.  ಜೊತೆಗೆ ರಾಜಕೀಯ ಪಕ್ಷಗಳಿಗೆ ಚುನಾವಣೆಯಲ್ಲಿ ಕೆಲವು ಬದಲಾವಣೆ ಅನಿವಾರ್ಯ ಮತ್ತು ರಾಜಕೀಯ ಶುದ್ಧೀಕರಣಕ್ಕೆ ಸಚ್ಚಾರಿತ್ರ್ಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಎಂಬ ಪರೋಕ್ಷ ಸೂಚನೆಯನ್ನು ಕೊಟ್ಟಿತು.

*.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನಿಗೆ ಆಯ್ಕೆ ಸ್ವಾತಂತ್ರ್ಯವಿದೆ ಎಂದು ಪ್ರತಿಪಾದಿಸಿತ್ತು.



★ 'ನೋಟಾ'ದ ಮೊದಲ ಬಳಕೆ ಎಲ್ಲಿ?
- (Where the NOTA was used first time?)

 *. ಮುಂಬೈ ಮಹಾನಗರ ಪಾಲಿಕೆಯ 48ನೇ ವಾರ್ಡ್ ಗೆ (ವಿಶಾ) ನಡೆದ ಉಪಚುನಾವಣೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ನೋಟಾ ಬಳಸಲಾಯಿತು.

*. 2548 ಮತಗಳಲ್ಲಿ 48 ಮತಗಳು ನೋಟಾದಡಿ ದಾಖಲಾಗಿದ್ದವು. ಕೆಲವು ವಿದ್ಯಾವಂತ ಮತದಾರರು ತಾವು ಅಭ್ಯರ್ಥಿಗಳನ್ನು ತಿರಸ್ಕರಿಸಿ ನೋಟಾ ಬಳಸಿದ್ದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಅಷ್ಟರಮಟ್ಟಿಗೆ ನೋಟಾಗೆ ಚೊಚ್ಚಲ ಚುನಾವಣೆಯಲ್ಲಿಯೇ ಉತ್ತಮ ಸ್ಪಂದನೆ ಸಿಕ್ಕಿತ್ತು.

 *. ಮತದಾನ ತಿರಸ್ಕರಿಸುವ ಹಕ್ಕು ಜಗತ್ತಿನ 13 ದೇಶಗಳಲ್ಲಿ ಜಾರಿಯಲ್ಲಿದೆ.



 ★ 'ನೋಟಾ'ದ ಬಳಕೆ ಹೇಗೆ?
- How NOTA to be Used?

 *. ವಿದ್ಯುನ್ಮಾನ ಮತಯಂತ್ರದಲ್ಲಿ (EVM - Electronic Voter Machine) ನಮೂದಾಗಿರುವ ಅಭ್ಯರ್ಥಿಗಳ ಸಾಲಿನಲ್ಲಿ ಅತ್ಯಂತ ಕೆಳಭಾಗದಲ್ಲಿ ಈ ನೋಟಾ ಬಟನ್ ಇರುತ್ತದೆ.

*. ಉದಾ: 15 ಮಂದಿ ಅಭ್ಯರ್ಥಿಗಳಿದ್ದಲ್ಲಿ 16ನೇ ಸಂಖ್ಯೆಯಲ್ಲಿ ನೋಟಾ ಇರುತ್ತದೆ. ಪಟ್ಟಿಯಲ್ಲಿ ಯಾವೊಬ್ಬ ಅಭ್ಯರ್ಥಿಯೂ ತನ್ನ ಮತಕ್ಕೆ ಅನರ್ಹ ಎನಿಸಿದರೆ 'ನೋಟಾ'ಮೂಲಕವೇ ನಮ್ಮ ಮತದಾನದ ಹಕ್ಕು ಚಲಾಯಿಸಬಹುದು. ಇದು ಅಧಿಕೃತವಾಗಿ ದಾಖಲಾಗುತ್ತದೆ. ಜೊತೆಗೆ ಅನರ್ಹ ಅಭ್ಯರ್ಥಿಗಳನ್ನು ತಿರಸ್ಕರಿಸಿದ ಸಂದೇಶ ರವಾನೆಯಾಗುತ್ತದೆ.



 ★ ಮತದಾನ ಪ್ರಕ್ರಿಯೆಯಲ್ಲಿ 'ನೋಟಾ' ಪರಿಣಾಮಕಾರಿ ಯಾಗಬಲ್ಲುದೇ?
 - Can NOTA be affected in Election Procedure?

 *. ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕುಮತದಾನ ಪ್ರಕ್ರಿಯೆಯ ಮೇಲೆ ಯಾವುದೇ ಗಾಢವಾದ ಪರಿಣಾಮ ವೇನೂ ಬೀರುವುದಿಲ್ಲ. ಏಕೆಂದರೆ ತಿರಸ್ಕೃತ ಮತಗಳನ್ನು ರದ್ದಾದ ಮತಗಳೆಂದು ಚುನಾವಣಾ ಆಯೋಗವು ಪರಿಗಣಿಸಲ್ಪಡುವುದರಿಂದ ಫಲಿತಾಂಶದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ.

 *. ಬಹುಮತದ ಜನರು ಇದನ್ನು ಬಳಸಿದರೂ ಅಥವಾ ಯಾವುದೇ ಒಬ್ಬ ವಿಜೇತ ಅಭ್ಯರ್ಥಿ ಗಳಿಸುವ ಮತಕ್ಕಿಂತಲೂ 'ನೋಟಾ'ದಡಿ ಹೆಚ್ಚು ದಾಖಲಾಗಿದ್ದರೂ ಒಟ್ಟಾರೆ ಅಭ್ಯರ್ಥಿಗಳನ್ನು ತಿರಸ್ಕರಿಸುವ ಅವಕಾಶ ಇದರಲ್ಲಿಲ್ಲ. ವಿಶೇಷವೆಂದರೆ ನೋಟಾ'ದಡಿ ದಾಖಲಾದ ಮತಗಳ ಸನಿಹದಲ್ಲಿರುವ ಅಭ್ಯರ್ಥಿಯು ಜಯಶಾಲಿ ಎಂದು ಘೋಷಿಸಲಾಗುತ್ತದೆ.

 *. ಈ ಮೂಲಕ ಕೇವಲ ಜನತೆಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ನೀಡಿದಂತಾಗಿದೆ. * ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಮತದಾರನಿಂದ ಅಭ್ಯರ್ಥಿ ತಿರಸ್ಕರಗೊಳ್ಳುವ ಮೂಲಕ ಆತನ ನೈತಿಕ ಸ್ಥೈರ್ಯ ಕುಗ್ಗಿಸಿದ ತೃಪ್ತಿ ಮಾತ್ರ ಮತದಾರನದು.

No comments:

Post a Comment