★ ಪ್ರಸ್ತುತ ಚಾಲ್ತಿಯಲ್ಲಿರುವ 14ನೇ ಹಣಕಾಸು ಆಯೋಗದ ಕುರಿತು ಚರ್ಚಿಸಿ. (150 ಶಬ್ಧಗಳಲ್ಲಿ)
(The 14th Finance Commission)
━━━━━━━━━━━━━━━━━━━━━━━━━━━━━━━━━━━━━━━━━━━━━
★ ರಿಸರ್ವ್ ಬ್ಯಾಂಕಿನ ನಿವೃತ್ತ ಗೌರ್ನರ್ ಡಾ.ವೈ.ವಿ. ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ 14ನೇ ಹಣಕಾಸು ಆಯೋಗವನ್ನು ರಚಿಸಲಾಗಿದ್ದು, ಈ ಸಂಬಂಧವಾಗಿ ಜನವರಿ 2, 2013ರಂದು ಹಣಕಾಸು ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಈ ಆಯೋಗದ ಅವಧಿ 31.10.2014 ರವರೆಗೆ ನಿಗದಿಯಾಗಿದ್ದು, ಅಷ್ಟರೊಳಗೆ ತನ್ನ ಶಿಫಾರಸ್ಸುಗಳನ್ನು ಸಲ್ಲಿಸಬೇಕಿರುತ್ತದೆ.
★ ಕಾರ್ಯ ಯಂತ್ರ:
ಪ್ರಸ್ತುತ 14ನೇ ಯೋಜನಾ ಆಯೋಗದ ಸದಸ್ಯ ಪೊ›. ಅಭಿಜಿತ್ ಸೆನ್, ಕೇಂದ್ರ ಹಣಕಾಸು ಮಾಜಿ ಕಾರ್ಯದರ್ಶಿ ಸುಷ್ಮಾನಾಥ್, ನವದೆಹಲಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಆಂಡ್ ಪಾಲಿಸಿ ಸಂಸ್ಥೆಯ ನಿರ್ದೇಶಕ ಡಾ.ಎಂ. ಗೋವಿಂದ ರಾವ್, ರಾಷ್ಟ್ರೀಯ ಅಂಕಿ ಅಂಶ ಆಯೋಗದ ಮಾಜಿ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಸುದೀಪೊ ಮುಂಡ್ಲೆ ಅವರು ಈ ಹಣಕಾಸು ಆಯೋಗದ ಸದಸ್ಯರುಗಳಾಗಿದ್ದು, ಅಜಯ್ ನಾರಾಯಣ್ ಝಾ ಅವರು ಆಯೋಗದ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.
★ ಕಾರ್ಯಗಳು:
ಕೇಂದ್ರ ಮತ್ತು ರಾಜ್ಯಗಳ ನಡುವಿನ ಹಣಕಾಸು ಸಂಗತಿಗಳನ್ನು ಅಧ್ಯಯನ, ವಿತ್ತೀಯ ಸಂಗ್ರಹಣೆ, ನಿರ್ವಹಣೆ ಮತ್ತು ವಿತರಣೆ, ಸಹಾಯಧನ, ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನದ ಜವಾಬ್ದಾರಿ ಈ ಆಯೋಗದ್ದಾಗಿರುತ್ತದೆ. 13ನೇ ಹಣಕಾಸು ಆಯೋಗ ಮಾಡಿರುವ ಶಿಫಾರಸ್ಸುಗಳ ಅನುಷ್ಠಾನದಲ್ಲಿ ಉಂಟಾಗಿರಬಹುದಾದ ಸುಧಾರಣೆ ಅಥವಾ ನ್ಯೂನತೆಗಳನ್ನು ಸರಿದೂಗಿಸಿ 2015ರ ಏಪ್ರಿಲ್‌ನಿಂದ ಮುಂದಿನ ಐದು ವರ್ಷಗಳವರೆಗೆ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಂತಹ ಶಿಫಾರಸ್ಸುಗಳನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದು ಈ ಆಯೋಗದ ಮುಖ್ಯ ಕೆಲಸ.
***
No comments:
Post a Comment