ಇಂಡಿಯನ್ ಕಾರ್ಬನ್ ಮಾರ್ಕೆಟ್ ಪೋರ್ಟಲ್
(Indian Carbon Market - ICM):
━━━━━━━━━━━━━━━━━━━━━━━━━━━━━━━━━━
ಉದ್ದೇಶ: ಭಾರತದ ಆರ್ಥಿಕತೆಯನ್ನು ಡಿಕಾರ್ಬನೈಸ್ (ಹೊರಸೂಸುವಿಕೆ ಮುಕ್ತ) ಮಾಡಲು ಮತ್ತು ದೇಶೀಯ ಇಂಗಾಲದ ಮಾರುಕಟ್ಟೆಯನ್ನು (Domestic Carbon Market) ಸ್ಥಾಪಿಸಲು ಕೇಂದ್ರ ಸರ್ಕಾರ ರೂಪಿಸಿರುವ ಕೇಂದ್ರೀಕೃತ ಡಿಜಿಟಲ್ ವೇದಿಕೆ.
ನೋಡಲ್ ಏಜೆನ್ಸಿ: ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (BEE) ಮತ್ತು ವಿದ್ಯುತ್ ಸಚಿವಾಲಯ.
-
ಕಾರ್ಯವಿಧಾನ:
ಇದು ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್ (CCTS) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ನಿಗದಿತ ಮಿತಿಗಿಂತ ಕಡಿಮೆ ಹಸಿರುಮನೆ ಅನಿಲ (GHG) ಹೊರಸೂಸುವ ಕೈಗಾರಿಕೆಗಳು 'ಕಾರ್ಬನ್ ಕ್ರೆಡಿಟ್ ಸರ್ಟಿಫಿಕೇಟ್' (CCC) ಗಳನ್ನು ಗಳಿಸುತ್ತವೆ.
- ಈ ಪೋರ್ಟಲ್ ಮೂಲಕ ಆ ಪ್ರಮಾಣಪತ್ರಗಳನ್ನು ಹೆಚ್ಚು ಹೊರಸೂಸುವಿಕೆ ಹೊಂದಿರುವ ಇತರ ಸಂಸ್ಥೆಗಳಿಗೆ ಮಾರಾಟ ಮಾಡಲು (ಟ್ರೇಡಿಂಗ್) ಅವಕಾಶ ಕಲ್ಪಿಸಲಾಗುತ್ತದೆ.
No comments:
Post a Comment