(Major inter-state river disputes and related things)
━━━━━━━━━━━━━━━━━━━━━━━━━━━━━━━━━━
|
ನದಿ |
ಸಂಬಂಧಿತ ರಾಜ್ಯಗಳು |
ನ್ಯಾಯಾಧಿಕರಣ / ಒಪ್ಪಂದ |
ಪರೀಕ್ಷಾ ದೃಷ್ಟಿಯಿಂದ ನದಿಯ ಪ್ರಮುಖ ಅಂಶಗಳು |
|---|---|---|---|
|
01.ಕಾವೇರಿ (Cauvery) |
ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ |
• ಕಾವೇರಿ ಜಲ ವಿವಾದ ನ್ಯಾಯಾಧಿಕರಣ (1990)• ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA, 2018) |
• ಉಗಮ: ತಲಕಾವೇರಿ (ಬ್ರಹ್ಮಗಿರಿ ಬೆಟ್ಟ, ಕೊಡಗು).• ಉಪನದಿಗಳು: ಹಾರಂಗಿ, ಹೇಮಾವತಿ, ಕಬಿನಿ, ಶಿಂಷಾ, ಅರ್ಕಾವತಿ, ಭವಾನಿ, ಅಮರಾವತಿ.• ವಿವಾದದ ಕೇಂದ್ರ: ಮಳೆ ಕೊರತೆಯ ವರ್ಷಗಳಲ್ಲಿ ನೀರು ಬಿಡುಗಡೆ ಹಾಗೂ ಮೇಕೆದಾಟು ಸಮತೋಲನಾ ಅಣೆಕಟ್ಟು ಯೋಜನೆ.
|
|
02.ಕೃಷ್ಣಾ (Krishna) |
ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ |
• KWDT-I (ಬಚಾವತ್ ಆಯೋಗ, 1969)• KWDT-II (ಬ್ರಿಜೇಶ್ ಕುಮಾರ್ ಆಯೋಗ, 2004) |
• ಉಗಮ: ಮಹಾಬಲೇಶ್ವರ (ಮಹಾರಾಷ್ಟ್ರ).• ಉಪನದಿಗಳು: ಭೀಮಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಮೂಸಿ.• ವಿವಾದದ ಕೇಂದ್ರ: ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳ (524.256 ಮೀ.) ಹಾಗೂ ಆಂಧ್ರ-ತೆಲಂಗಾಣ ನಡುವಿನ ಮರುಹಂಚಿಕೆ.
|
|
03.ಮಹದಾಯಿ / ಮಾಂಡೋವಿ (Mahadayi) |
ಗೋವಾ, ಕರ್ನಾಟಕ, ಮಹಾರಾಷ್ಟ್ರ |
• ಮಹದಾಯಿ ಜಲ ವಿವಾದ ನ್ಯಾಯಾಧಿಕರಣ (2010) |
• ಉಗಮ: ಖಾನಾಪುರ (ಬೆಳಗಾವಿ ಜಿಲ್ಲೆ, ಕರ್ನಾಟಕ).• ಗೋವಾದ ಜೀವನಾಡಿ ಎಂದೇ ಪ್ರಸಿದ್ಧಿ.• ವಿವಾದದ ಕೇಂದ್ರ: ಕಳಸಾ-ಬಂಡೂರಿ ನಾಲಾ ಯೋಜನೆ (ಮಲಪ್ರಭಾ ನದಿಗೆ ನೀರು ತಿರುಗಿಸಿ ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯುವ ನೀರು ಪೂರೈಕೆ). |
|
04.ಗೋದಾವರಿ (Godavari) |
ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ, ಒಡಿಶಾ, ಪುದುಚೇರಿ |
• ಗೋದಾವರಿ ಜಲ ವಿವಾದ ನ್ಯಾಯಾಧಿಕರಣ (1969) |
• ಉಗಮ: ತ್ರಯಂಬಕೇಶ್ವರ (ನಾಸಿಕ್, ಮಹಾರಾಷ್ಟ್ರ).• ಭಾರತದ ಎರಡನೇ ಅತಿ ಉದ್ದದ ನದಿ (ದಕ್ಷಿಣ ಗಂಗಾ / ವೃದ್ಧ ಗಂಗಾ).• ಉಪನದಿಗಳು: ಪ್ರಾಣಹಿತಾ, ಇಂದ್ರಾವತಿ, ಮಂಜ್ರಾ, ಪೆನ್‌ಗಂಗಾ, ಶಬರಿ.
|
|
05.ಮಹಾನದಿ (Mahanadi) |
ಛತ್ತೀಸ್‌ಗಢ, ಒಡಿಶಾ |
• ಮಹಾನದಿ ಜಲ ವಿವಾದ ನ್ಯಾಯಾಧಿಕರಣ (2018) |
• ಉಗಮ: ಸಿಹಾವಾ ಪರ್ವತ (ಧಮ್ತರಿ, ಛತ್ತೀಸ್‌ಗಢ).• ಪ್ರಮುಖ ಅಣೆಕಟ್ಟು: ಹಿರಾಕುಡ್ (ವಿಶ್ವದ ಅತಿ ಉದ್ದದ ಮಣ್ಣಿನ ಅಣೆಕಟ್ಟುಗಳಲ್ಲಿ ಒಂದು).• ವಿವಾದದ ಕೇಂದ್ರ: ಛತ್ತೀಸ್‌ಗಢ ನಿರ್ಮಿಸಿರುವ ಬ್ಯಾರೇಜ್‌ಗಳಿಂದ ಒಡಿಶಾಗೆ ನೀರಿನ ಹರಿವು ಕಡಿಮೆಯಾಗುತ್ತಿರುವ ಆರೋಪ.
|
|
06.ರಾವಿ-ಬಿಯಾಸ್ (Ravi-Beas) |
ಪಂಜಾಬ್, ಹರಿಯಾಣ, ರಾಜಸ್ಥಾನ |
• ಇರಾಡಿ ನ್ಯಾಯಾಧಿಕರಣ (1986) |
• ಸಿಂಧೂ ನದಿ ವ್ಯವಸ್ಥೆಯ ಪ್ರಮುಖ ಪೂರ್ವ ನದಿಗಳು.• ವಿವಾದದ ಕೇಂದ್ರ: ಸಟ್ಲೇಜ್-ಯಮುನಾ ಲಿಂಕ್ (SYL) ಕಾಲುವೆ ನಿರ್ಮಾಣ ವಿವಾದ.
|
|
07.ಪೆರಿಯಾರ್ (Periyar / Mullaperiyar) |
ಕೇರಳ, ತಮಿಳುನಾಡು |
• ಸುಪ್ರೀಂ ಕೋರ್ಟ್ ನಿಗಾ ಸಮಿತಿ |
• ಉಗಮ: ಶಿವಗಿರಿ ಬೆಟ್ಟ (ಪಶ್ಚಿಮ ಘಟ್ಟ).• ಕೇರಳದ ಅತ್ಯಂತ ಉದ್ದದ ನದಿ.• ವಿವಾದದ ಕೇಂದ್ರ: ಕೇರಳದ ವ್ಯಾಪ್ತಿಯಲ್ಲಿರುವ ಮುಲ್ಲಪೆರಿಯಾರ್ ಅಣೆಕಟ್ಟಿನ ಸುರಕ್ಷತೆ ಮತ್ತು ನೀರಿನ ಮಟ್ಟ (ನಿರ್ವಹಣೆ: ತಮಿಳುನಾಡು).
|
|
08.ವಂಶಧಾರಾ (Vamsadhara) |
ಆಂಧ್ರಪ್ರದೇಶ, ಒಡಿಶಾ |
• ವಂಶಧಾರಾ ಜಲ ವಿವಾದ ನ್ಯಾಯಾಧಿಕರಣ (2010) |
• ಉಗಮ: ಕಲಹಂಡಿ ಜಿಲ್ಲೆ (ಒಡಿಶಾ).• ಬಂಗಾಳ ಕೊಲ್ಲಿಯನ್ನು ಸೇರುವ ಪೂರ್ವಕ್ಕೆ ಹರಿಯುವ ನದಿ.• ವಿವಾದದ ಕೇಂದ್ರ: ನೇರಡಿ ಬ್ಯಾರೇಜ್ ನಿರ್ಮಾಣ. |
...ಮುಂದುವರೆಯುವುದು.
No comments:
Post a Comment