"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 31 December 2015

☀ಕರ್ನಾಟಕ ಸರ್ಕಾರದ ಪ್ರಮುಖ ಆಯೋಗಗಳು / ವರದಿಗಳು : (Karnataka Government major commissions and Reports)

☀ಕರ್ನಾಟಕ ಸರ್ಕಾರದ ಪ್ರಮುಖ ಆಯೋಗಗಳು / ವರದಿಗಳು :
(Karnataka Government major commissions and Reports)
 ━━━━━━━━━━━━━━━━━━━━━━━━━━━━━━━━━━━━━━━━━━
★ ಕರ್ನಾಟಕದ ಆರ್ಥಿಕತೆ
(Karnataka Economics)


— ಕರ್ನಾಟಕ ರಾಜ್ಯವು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ರಾಜ್ಯ ಸರ್ಕಾರವು ಹಲವು ಸಮಿತಿ / ಆಯೋಗಗಳನ್ನು ರಚಿಸಿದೆ. ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಮರುಕಳಿಸಬಾರದೆಂಬ ಆಲೋಚನೆ ಈ ಸಮಿತಿ / ಆಯೋಗಗಳಿಗಿರುತ್ತದೆ.ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಕುರಿತಾಗಿ ಹಲವು ಪ್ರಶ್ನೆಗಳು ಬಂದಿವೆ. 'ಸ್ಪರ್ಧಾಲೋಕ 'ವು ಈ ನಿಟ್ಟಿನಲ್ಲಿ ಸ್ಪರ್ಧಾಳುಗಳಿಗೆ ಉಪ
ಯುಕ್ತವಾಗಬಲ್ಲದೆಂಬ ಆಶಯದೊಂದಿಗೆ ಗೆಳೆಯರ ಸಹಾಯದಿಂದ ಕೆಲವೊಂದು ಪ್ರಮುಖ ಸಮಿತಿ / ಆಯೋಗಗಳನ್ನು ಇಲ್ಲಿ ವಿವರಿಸಲು ಪ್ರಯತ್ನಿಸಲಾಗಿದೆ.


★ಪ್ರಮುಖ ಆಯೋಗಗಳು / ವರದಿಗಳು :
━━━━━━━━━━━━━━━━━━━━━━

■. ಆಯೋಗ : ••┈┈┈┈• ಗೋಕಾಕ್ ವರದಿ
■. ಉದ್ದೇಶ : ••┈┈┈┈• ಶಾಲಾ ಶಿಕ್ಷಣದಲ್ಲಿ ಕನ್ನಡದ ಸ್ಥಾನಮಾನ
■. ಅಧ್ಯಕ್ಷರು  ••┈┈┈┈• ವಿ.ಕೃ.ಗೋಕಾಕ್


■. ಆಯೋಗ : ••┈┈┈┈• ಎಚ್ಚೆನ್(AHN) ವರದಿ
■. ಉದ್ದೇಶ : ••┈┈┈┈• ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಕಡ್ಡಾಯ
■. ಅಧ್ಯಕ್ಷರು  ••┈┈┈┈• ಎಚ್.ನರಸಿಂಹಯ್ಯ


■. ಆಯೋಗ : ••┈┈┈┈• ನಾರಾಯಣಸ್ವಾಮಿ ವರದಿ
■. ಉದ್ದೇಶ : ••┈┈┈┈• ಆಡಳಿತದಲ್ಲಿ ಕನ್ನಡ ಅನುಷ್ಠಾನ ರೀತಿ


■. ಆಯೋಗ : ••┈┈┈┈• ಮಹಿಷಿ ವರದಿ
■. ಉದ್ದೇಶ : ••┈┈┈┈• ಕನ್ನಡಿಗರಿಗೆ ಉದ್ಯೋಗಾವಕಾಶ
■. ಅಧ್ಯಕ್ಷರು  ••┈┈┈┈• ಸರೋಜಿನಿ ಮಹಿಷಿ


■. ಆಯೋಗ : ••┈┈┈┈• ಉದ್ಯೋಗ ಸಮಿತಿ ವರದಿ
■. ಉದ್ದೇಶ : ••┈┈┈┈• ಮಹಿಷಿ ವರದಿ ಪರಿಷ್ಕರಣೆ


■. ಆಯೋಗ : ••┈┈┈┈• ಒಡೆಯರ್ ವರದಿ
■. ಉದ್ದೇಶ : ••┈┈┈┈• ಕನ್ನಡ ವಿ.ವಿ. ಸ್ವರೂಪ ನಿರ್ಧಾರ


■. ಆಯೋಗ : ••┈┈┈┈• ಅಹುಜಾ ಸಮಿತಿ
■. ಉದ್ದೇಶ : ••┈┈┈┈• ಕಾವೇರಿ ನದಿ ನೀರಿನ ಬಳಕೆ


■. ಆಯೋಗ : ••┈┈┈┈• ಬಚಾವತ್ ವರದಿ
■. ಉದ್ದೇಶ : ••┈┈┈┈• ಕೃಷ್ಣಾ ನದಿ ನೀರಿನ ಹಂಚಿಕೆ


■. ಆಯೋಗ : ••┈┈┈┈• ನಂಜುಂಡಪ್ಪ ವರದಿ
■. ಉದ್ದೇಶ : ••┈┈┈┈• ಪ್ರಾದೇಶಿಕ ಅಸಮಾನತೆ ನಿವಾರಣೆ


■. ಆಯೋಗ : ••┈┈┈┈• ವೀರಪ್ಪ ಮೊಯಿಲಿ ವರದಿ
■. ಉದ್ದೇಶ : ••┈┈┈┈• ಕರ್ನಾಟಕರಾಜ್ಯ ತೆರಿಗೆ ಸುಧಾರಣೆ
■. ಅಧ್ಯಕ್ಷರು  ••┈┈┈┈• ವೀರಪ್ಪ ಮೊಯಿಲಿ


■. ಆಯೋಗ : ••┈┈┈┈• ನಾರಾಯಣಮೂರ್ತಿ ವರದಿ
■. ಉದ್ದೇಶ : ••┈┈┈┈• ಮಾಹಿತಿ ತಂತ್ರಜ್ಞಾನ ಕಾರ್ಯಪಡೆ
■. ಅಧ್ಯಕ್ಷರು  ••┈┈┈┈• ನಾರಾಯಣ ಮೂರ್ತಿ


■. ಆಯೋಗ : ••┈┈┈┈• ಕಿರಣ್ ಮಜುಂದಾರ್ ವರದಿ
■. ಉದ್ದೇಶ : ••┈┈┈┈• ಜೈವಿಕ ತಂತ್ರಜ್ಞಾನ ಕಾರ್ಯಪಡೆ
■. ಅಧ್ಯಕ್ಷರು  ••┈┈┈┈• ಕಿರಣ್ ಮಜುಂದಾರ್ ಷಾ


■. ಆಯೋಗ : ••┈┈┈┈• ಹಾರನಹಳ್ಳಿರಾಮಸ್ವಾಮಿ ವರದಿ
■. ಉದ್ದೇಶ : ••┈┈┈┈• ರಾಜ್ಯ ಆಡಳಿತ ಸುಧಾರಣೆ
■. ಅಧ್ಯಕ್ಷರು  ••┈┈┈┈• ಹಾರನಹಳ್ಳಿ ರಾಮಸ್ವಾಮಿ


■. ಆಯೋಗ : ••┈┈┈┈• L.G.ಹಾವನೂರು ವರದಿ
■. ಉದ್ದೇಶ : ••┈┈┈┈• ಹಿಂದುಳಿದ ವರ್ಗ ಅಭಿವೃದ್ಧಿ
■. ಅಧ್ಯಕ್ಷರು  ••┈┈┈┈• L.G.ಹಾವನೂರು


■. ಆಯೋಗ : ••┈┈┈┈• ವೆಂಕಟಸ್ವಾಮಿ ಆಯೋಗ (1985)
■. ಉದ್ದೇಶ : ••┈┈┈┈• ಹಿಂದುಳಿದ ವರ್ಗ ಪಟ್ಟಿ ಪುನರ್ ಪರಿಶೀಲನೆ


■. ಆಯೋಗ : ••┈┈┈┈• ಕರ್ನಾಟಕ ಭೂಸುಧಾರಣಾ ಆಯೋಗ
■. ಅಧ್ಯಕ್ಷರು : ••┈┈┈┈• ಬಿ.ಡಿ.ಜತ್ತಿ


■. ಆಯೋಗ : ••┈┈┈┈• ಲೆಸ್ಲಿ ಮಿಲ್ಲರ್ ಆಯೋಗ (1918)
■. ಉದ್ದೇಶ : ••┈┈┈┈• ಹಿಂದುಳಿದವರಿಗೆ ಮೀಸಲಾತಿ
■. ಅಧ್ಯಕ್ಷರು : ••┈┈┈┈• ಲೆಸ್ಲಿ ಮಿಲ್ಲರ್


■. ಆಯೋಗ : ••┈┈┈┈• ಚನ್ನಪ್ಪ ರೆಡ್ಡಿ ಆಯೋಗ (1990)
■. ಉದ್ದೇಶ : ••┈┈┈┈• ಹಿಂದುಳಿದವರಿಗೆ ಮೀಸಲಾತಿ
■. ಅಧ್ಯಕ್ಷರು  ••┈┈┈┈• ಚನ್ನಪ್ಪ ರೆಡ್ಡಿ


■. ಆಯೋಗ : ••┈┈┈┈• R.ನಾಗಣ್ಣ ಆಯೋಗ (1961)
■. ಉದ್ದೇಶ : ••┈┈┈┈• ಹಿಂದುಳಿದವರಿಗೆ ಮೀಸಲಾತಿ
■. ಅಧ್ಯಕ್ಷರು  ••┈┈┈┈• R.ನಾಗಣ್ಣ


■. ಆಯೋಗ : ••┈┈┈┈• A.D.ಗೊರವಾಲ ಸಮಿತಿ
■. ಉದ್ದೇಶ : ••┈┈┈┈• ಆಡಳಿತ ಸುಧಾರಣೆ.

— ಮತ್ತಿನ್ನೇನಾದರೂ ಇವುಗಳಲ್ಲಿ ಸೇರ್ಪಡೆಗೆ ತಾವುಗಳು ಇಚ್ಛಿಸಿದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂಬ ವಿನಂತಿ.

No comments:

Post a Comment