"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 9 December 2015

☀(ಭಾಗ-23) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (General knowledge on Current Affairs (Part-23)) ☆.(ಪ್ರಚಲಿತ ಘಟನೆಗಳ ಕ್ವಿಜ್)

☀(ಭಾಗ-23) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ
(General knowledge on Current Affairs (Part-23))
☆.(ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)
 

- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ ಮುಖ್ಯವಾಗಿ ಇತ್ತೀಚಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಅದು ಸಾಹಿತ್ಯ, ಕಲೆ, ಸಂಸ್ಕೃತಿ, ವಿಜ್ಞಾನ, ರಾಜಕೀಯ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಅಯಾ ದಿನದ ದಿನಪತ್ರಿಕೆಗಳನ್ನು ಕಲೆಹಾಕಿ ಸಂಕ್ಷೇಪಿಸಿ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡಲು ಒಂದು ಚಿಕ್ಕ ಪ್ರಯತ್ನ ಮಾಡಲಾಗಿದೆ.


861) ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ 43ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದವರು ಯಾರು?
••► ಹಿರಿಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್(63)‌
(ವಿವರಣೆ : ಠಾಕೂರ್‌ ಅವರ ಅಧಿಕಾರಾವಧಿಯು ಒಂದು ವರ್ಷವಿದ್ದು, ಅವರು 2017 ಜನವರಿ 4ಕ್ಕೆ ನಿವೃತ್ತರಾಗಲಿದ್ದಾರೆ.)


862) ಇತ್ತೀಚೆಗೆ ಸುದ್ದಿಯಲ್ಲಿದ್ದ 'ಅಡ್ಯಾರ್‌ ನದಿ' ಯಾವ ರಾಜ್ಯದಲ್ಲಿ ಹರಿಯುತ್ತದೆ?
••► ತಮಿಳುನಾಡು


863) ಪ್ರಸ್ತುತ ದೇಶದ ನೂತನ ಅಣುಶಕ್ತಿ ಆಯೋಗದ ಅಧ್ಯಕ್ಷರಾಗಿ ಯಾರು ಆಯ್ಕೆಗೊಂಡಿದ್ದಾರೆ?
••► ಶಿಖರ್ ಬಸು


864) ಸೌರ ವಿದ್ಯುತ್ ಉತ್ಪಾದನೆ ಮಾಡುತ್ತಿರುವ ಜಗತ್ತಿನ ದೇಶಗಳಲ್ಲಿ ಭಾರತವು ಎಷ್ಟನೇ  ಸ್ಥಾನದಲ್ಲಿದೆ?
••► 11ನೇ ಸ್ಥಾನ.


865) ಇತ್ತೀಚೆಗೆ 'ಜಿ-20' ಶೃಂಗಸಭೆ ಹಾಗೂ 'ಬ್ರಿಕ್ಸ್' ಶೃಂಗಸಭೆಗಳೆರಡೂ ಯಾವ ದೇಶದ ನೇಪಥ್ಯದಲ್ಲಿ ಜರುಗಿದವು?
••► ಅಂತಾಲ್ಯ (ಟರ್ಕಿ)


866) ಇತ್ತೀಚೆಗೆ ಭಾರತದ ಪ್ರಥಮ ಹೊಗೆರಹಿತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾದ ರಾಜ್ಯದ ಜಿಲ್ಲೆ ಯಾವುದು?
••► ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಚುಕರ ಹಳ್ಳಿ.
( ವಿವರಣೆ : ಭಾರತೀಯ ತೈಲ ನಿಗಮ ಕೈಗೊಂಡ ಮಿಷನ್ ಸ್ಮೋಕ್‌ಲೆಸ್ ವಿಲೇಜ್ ಯೋಜನೆ ಮೂಲಕ ಈ ಗ್ರಾಮದ 275 ಮನೆಗಳಲ್ಲಿ ಎಲ್‌ಪಿಜಿ ಗ್ಯಾಸ್‌ಗಳನ್ನು ಬಳಸಲಾಗುತ್ತಿದೆ.)


867) ಇತ್ತೀಚೆಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ನೀಡುವ ‘ಅತ್ಯುತ್ತಮ ಉದ್ಯೋಗದಾತ’ ಪ್ರಶಸ್ತಿಗೆ ಆಯ್ಕೆಯಾದ ರಾಜ್ಯದ ಇಲಾಖೆ ಯಾವುದು?
••► ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
( ವಿವರಣೆ : ಕುಟುಂಬ ಕಲ್ಯಾಣ ಇಲಾಖೆಯಡಿ 2014ರಲ್ಲಿ ಕುಷ್ಠರೋಗದಿಂದ ಗುಣಮುಖರಾದ 100 ಮಂದಿಗೆ ಉದ್ಯೋಗ ನೀಡಲಾಗಿತ್ತು. ಈ ಸೇವೆಯನ್ನು ಪರಿಗಣಿಸಿ   ಕೇಂದ್ರ ಸರ್ಕಾರ ಪ್ರಶಸ್ತಿ ಘೋಷಿಸಿದೆ. ಪ್ರಶಸ್ತಿಯು ₹1ಲಕ್ಷ ನಗದು ಒಳಗೊಂಡಿದೆ.3 Dec, 2015)


868) 'ವಿಶ್ವ ಅಂಗವಿಕಲರ ದಿನಾಚರಣೆ' ಯಾವ ದಿನದಂದು ಆಚರಿಸಲಾಗುತ್ತದೆ?
••► ಡಿಸೆಂಬರ್‌ 3


869) ಇತ್ತೀಚೆಗೆ ‘ಎಕ್ಸ್‌ಪೊ ಮಿಲಾನೊ 2015’ ಹೆಸರಿನ ಅಂತರರಾಷ್ಟ್ರೀಯ ಆಹಾರ ಮಹಾಮೇಳ ಎಲ್ಲಿ ಜರುಗಿತು ?
••► ಇಟಲಿ ದೇಶದ ಮಿಲಾನ್ ನಗರದಲ್ಲಿ.(4 Jun, 2015)


870) ಯಾರ ನೇತೃತ್ವದ ಆಯೋಗವು 7ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ?
••► ನ್ಯಾಯಮೂರ್ತಿ ಎ.ಕೆ. ಮಾಥುರ್


871) ಪರಿಸರಕ್ಕೆ ಹಾನಿ ಇಲ್ಲದಂತಹ ಯೋಜನೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆಯನ್ನು (ಕ್ರೆಡೆಲ್‌) ಯಾವಾಗ ಸ್ಥಾಪಿಸಲಾಯಿತು?
••► 1996ರಲ್ಲಿ.


872) ಇತ್ತೀಚಿಗೆ G-4 ಶೃಂಗಸಭೆ ಎಲ್ಲಿ ಜರುಗಿತು?
••► ನ್ಯೂಯಾರ್ಕ್


873) ಕೇಂದ್ರ ಸರ್ಕಾರ ಆದಾಯ ತೆರಿಗೆ ನಿಯಮಗಳನ್ನು ಸರಳಗೊಳಿಸಲು, ತೆರಿಗೆದಾರರ ಗೊಂದಲಗಳನ್ನು ನಿವಾರಿಸಲು ಹಾಗೂ ದೇಶದಲ್ಲಿ ಸುಗಮ ವ್ಯಾಪಾರ–ವಹಿವಾಟು ನಡೆಸಲು ಅನುಕೂಲವಾಗುವಂತೆ ನಿಯಮದಲ್ಲಿ ಬದಲಾವಣೆ ತರುವ ಬಗೆಗೂ ಅಧ್ಯಯನ ನಡೆಸಿ ವರದಿ ನೀಡಲು ಇತ್ತೀಚೆಗೆ ಯಾರ ನೇತೃತ್ವದ ಸಮಿತಿಯನ್ನು ರಚಿಸಲಾಗಿದೆ?
••► ದೆಹಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಆರ್‌.ವಿ.ಈಶ್ವರ್(28 Oct, 2015)


874) ದೇಶದಲ್ಲಿಯೇ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ರಾಜ್ಯ ?
••► ಮಹಾರಾಷ್ಟ್ರ


875) ಪ್ರಸ್ತುತ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಅಧ್ಯಕ್ಷೆ ಯಾರು?
••► ಅರುಂಧತಿ ಭಟ್ಟಾಚಾರ್ಯ


876) ಪ್ರಸ್ತುತ ಸರ್ಕಾರದ ಮುಖ್ಯ ಹಣಕಾಸು ಸಲಹೆಗಾರ ಯಾರು?
••► ಅರವಿಂದ ಸುಬ್ರಹ್ಮಣಿಯನ್‌


877) ಇತ್ತೀಚೆಗೆ 'ವಿಶ್ವಸಂಸ್ಥೆಯ 21ನೇ ಹವಾಮಾನ ವೈಪರೀತ್ಯ ಶೃಂಗಸಭೆ' (COP-21) ಎಲ್ಲಿ ಜರುಗಿತು?
••► ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ  (30 Nov, 2015)


878) ಇತ್ತೀಚೆಗೆ ' 2015ರ 46ನೆಯ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ' ಎಲ್ಲಿ ಜರುಗಿತು?
••► ಪಣಜಿ (ಗೋವಾ)


879) 2015-16 ನೇ ಸಾಲಿನ ವಾಲ್ಮೀಕಿ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?
••► ಕೆ. ನಾಗರತ್ನಮ್ಮ


880) ಪ್ರಸ್ತುತ ಆಸ್ಟ್ರೇಲಿಯಾ ಪ್ರಧಾನಿ ಯಾರು?
••► ಮಾಲ್ಕಮ್ ಟರ್ನ್‌ಬುಲ್


881) ಇತ್ತೀಚೆಗೆ ಭಾರತ ಮತ್ತು ಆಫ್ರಿಕದ ದೇಶಗಳ ಮೂರನೇ ಶೃಂಗ ಸಭೆಯು ಎಲ್ಲಿ ಜರುಗಿತು?
••► ದೆಹಲಿಯಲ್ಲಿ (Nov, 2015)


882) ‘ಕರ್ನಾಟಕ ಲೋಕಾಯುಕ್ತ ಕಾಯ್ದೆ ಜಾರಿಯಾಗಿದ್ದು ಯಾವಾಗ?
••► 1986ರಲ್ಲಿ.


883) ವಿಶ್ವಸಂಸ್ಥೆಗೆ ಭಾರತದ ಖಾಯಂ ಸಹಾಯಕ ಪ್ರತಿನಿಧಿಯಾಗಿರುವ ನೇಮಕಗೊಂಡಿರುವರು ಯಾರು?
••► ಭಗವಂತ್ ಬಿಷ್ಣೋಯ್


884) ಭ್ರಷ್ಟಾಚಾರ ತಡೆ ಕಾಯ್ದೆ ರೂಪಿಸಿದ್ದು ಯಾವಾಗ?
••► 1988ರಲ್ಲಿ.


885) 'ವಿಶ್ವ ಪರಿಸರ ದಿನಾಚರಣೆ' ಯಾವ ದಿನದಂದು ಆಚರಿಸಲಾಗುತ್ತದೆ?
••► ಜೂನ್ 5


886) ಇತ್ತೀಚೆಗೆ ‘ವಿಶ್ವ ಪರಿಸರ ದಿನಾಚರಣೆ' ಅಂಗವಾಗಿ ವಿಶ್ವಸಂಸ್ಥೆಯು ಹೊರಡಿಸಿದ ಈ ವರ್ಷದ ಘೋಷ ವಾಕ್ಯ ಯಾವುದು?
••► ‘ಏಳು ಶತಕೋಟಿ ಕನಸುಗಳು, ಒಂದೇ ಗ್ರಹ: ಹುಷಾರಾಗಿ ಬಳಕೆ ಮಾಡಿ’


887) ಇತ್ತೀಚೆಗೆ ನೂತನ ನಳಂದಾ ವಿಶ್ವವಿದ್ಯಾನಿಲಯದ ಚಾನ್ಸಲರ್ ಆಗಿ ನೇಮಕಗೊಂಡವರು ಯಾರು?
••► ಜಾರ್ಜ್ ಯಾಹೋ


888) ಇತ್ತೀಚಿನ 'ಜಾಗತಿಕ ಮಾನವ ಅಭಿವೃದ್ಧಿ ಸೂಚ್ಯಂಕ'ದಲ್ಲಿ ಭಾರತದ ಶ್ರೇಯಾಂಕ ಎಷ್ಟು?
••► 135ನೇ ಸ್ಥಾನ.


889)  ಒಟ್ಟೂ 78 ದೇಶಗಳ ‘ಜಾಗತಿಕ ಹಸಿವೆ ಸೂಚ್ಯಂಕ’ದಲ್ಲಿ ಭಾರತದ ಶ್ರೇಯಾಂಕ ಎಷ್ಟು?
••► 57ರಷ್ಟು
( ವಿವರಣೆ : ಒಟ್ಟೂ 78 ದೇಶಗಳ ‘ಜಾಗತಿಕ ಹಸಿವೆ ಸೂಚ್ಯಂಕ’ದಲ್ಲಿ ಇಥಿಯೋಪಿಯಾ, ಘಾನಾ, ರುವಾಂಡಾಗಳಿಗಿಂತ ಕೆಳಗಿನ ಸ್ಥಾನದಲ್ಲಿ ನಾವಿದ್ದೇವೆ. ಆದರೂ ಜಿಡಿಪಿಯ ಏರಿಕೆಯನ್ನಷ್ಟೇ ನಮ್ಮ ರಾಷ್ಟ್ರೀಯ ವಕ್ತಾರರು ಹೆಮ್ಮೆಯಿಂದ ಠೇಂಕರಿಸುತ್ತಾರೆ. ಅರ್ಥತಜ್ಞರ ವಿಶ್ಲೇಷಣೆಯಲ್ಲಿ ಇಂಥ ವಿರೋಧಾಭಾಸ ಇರುವುದರಿಂದಲೇ ತುಂಬ ಹಿಂದೆ ಥಾಮಸ್ ಕಾರ್ಲೈಲ್ ಎಂಬಾತ ಅರ್ಥಶಾಸ್ತ್ರವನ್ನು ‘ವಿಷಣ್ಣ ವಿಜ್ಞಾನ’ (ಡಿಸ್ಮಲ್ ಸೈನ್ಸ್) ಎಂದು ಕರೆದಿದ್ದನೆಂದು ಕಾಣುತ್ತದೆ.)


900) ಇತ್ತೀಚೆಗೆ ಯಾರ ನೇತೃತ್ವದಲ್ಲಿನ ಸಮಿತಿಯು ‘ಜಿಎಸ್‌ಟಿ’ ಕಾಯ್ದೆಯ ಜಾರಿ ವಿಷಯಕ್ಕೆ ಸಂಬಂಧಿಸಿದಂತೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಒಪ್ಪಿಸಿದೆ?
••► ಅರವಿಂದ ಸುಬ್ರಹ್ಮಣಿಯನ್‌

To be continued....

No comments:

Post a Comment