■.ಭಾರತದಲ್ಲಿ ಸೈಬರ್ ಅಪರಾಧ ಕುರಿತ ಅಧ್ಯಯನ ವರದಿ -2015.
(The Recent Study Report on Cyber Crime in India)
━━━━━━━━━━━━━━━━━━━━━━━━━━━━━━━━━━━━━━━━━━
★ಸಂವಹನ ಮತ್ತು ತಂತ್ರಜ್ಞಾನ
(Information and Technology)
★ವಿಶೇಷ ವರದಿಗಳು
(Special Reports)
•► ತಂತ್ರಜ್ಞಾನದ ಬಳಕೆ ಬದುಕಿನ ಭಾಗವಾಗಿ ಹೋಗಿದೆ. ಸಂವಹನ ಸೇರಿದಂತೆ ನಿತ್ಯದ ಕೆಲಸಗಳಿಗೆ ನಾವೆಲ್ಲರೂ ಅತಿ ಎನ್ನುವಷ್ಟು ತಂತ್ರಜ್ಞಾನ, ಅದರಲ್ಲೂ ಅಂತರ್ಜಾಲವನ್ನು ಅವಲಂಬಿಸಿದ್ದೇವೆ! ಅದು ತಿಳಿದೊ, ತಿಳಿಯದೆಯೋ ಎಲ್ಲರನ್ನೂ ಸೈಬರ್ ಹ್ಯಾಕರ್‌ಗಳ ಎದುರು ‘ಅದೃಷ್ಟ’ (ದುರದೃಷ್ಟ) ಪರೀಕ್ಷೆಗೆ ನೂಕುತ್ತಿದೆ. ಜಾಗತಿಕ ಸವಾಲಿನ ಎದುರು ಅಸಹಾಯಕ ಸೋಲು ಸಾಮಾನ್ಯವಾಗಿದೆ.
•► ವರ್ಷಂ ಪ್ರತಿ ಸೈಬರ್ ಅಪರಾಧಗಳ ಪ್ರಮಾಣ, ವ್ಯಾಪ್ತಿ ವಿಸ್ತರಿಸುತ್ತಲೇ ಇದೆ. ದೇಶ–ಗಡಿಗಳ ಹಂಗಿಲ್ಲದೇ ಏಕಮುಖವಾಗಿ ಆವರಿಸುತ್ತಿದೆ. ಸೈಬರ್ ಕ್ರೈಮನ್ನು ನಿಯಂತ್ರಿಸಲು ವಿಶ್ವದ ಹಲವು ರಾಷ್ಟ್ರಗಳು ಕೋಟಿಗಟ್ಟಲೆ ಹಣವನ್ನು ವೆಚ್ಚ ಮಾಡಿ ಸತತವಾಗಿ ಶ್ರಮಿಸುತ್ತಲೇ ಇವೆ. ದಿನದ 24 ಗಂಟೆ, ವರ್ಷದ ಎಲ್ಲಾ ದಿನವೂ ಹದ್ದಿನ ಕಣ್ಣಿಟ್ಟು ಕಾಯುವ ಕೆಲಸವೂ ಜತೆಯಲ್ಲೇ ನಡೆಯುತ್ತಿದೆ. ಆದರೂ, ‘ಇವರು’ ಚಾಪೆ ಕೆಳಗೆ ತೂರಿದರೆ, ‘ಅವರು’ ರಂಗೋಲಿ ಕೆಳಗೆ ನುಸುಳುವಂತಹ ಚಾಣಾಕ್ಷರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸೈಬರ್ ಕ್ಷೇತ್ರದಲ್ಲಿ ಶೇ 100ರಷ್ಟು ಸುರಕ್ಷತೆ ಎಂಬುದು ಮಿಥ್ಯೆಯೇ ಸರಿ!
•► ಅಧ್ಯಯನ ವರದಿಯ ಪ್ರಕಾರ 2011ರಲ್ಲಿ 13,301 ಸೈಬರ್ ಸಂಬಂಧಿತ ಪ್ರಕರಣಗಳು ದಾಖಲಾಗಿದ್ದವು. 2012 ಹಾಗೂ 2013ರಲ್ಲಿ ಕ್ರಮವಾಗಿ ಈ ಸಂಖ್ಯೆ 22,060 ಹಾಗೂ 71,780.
●. ಸೈಬರ್ ಅಪರಾಧಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳ ಸಿಂಹಪಾಲು :
━━━━━━━━━━━━━━━━━━━━━━━━━━━━━━━━━━━━
•► ವಿಶ್ವದ ಮೂರನೇ ಎರಡರಷ್ಟು ಅಂತರ್ಜಾಲ ಬಳಕೆದಾರರು ಸೈಬರ್ ಕ್ರೈಂ ಬಲೆಯಲ್ಲಿ ಸಿಲುಕಿದ್ದಾರೆ ಎಂಬ ವರದಿಗಳಿವೆ. ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರದಲ್ಲಿ ಅಗ್ರಪಂಕ್ತಿಗೆ ಸೇರಿ ಬೀಗುತ್ತಿರುವ ಭಾರತದಲ್ಲೂ ಸೈಬರ್ ಅಪರಾಧಗಳು ಗಣನೀಯವಾಗಿ ಹೆಚ್ಚುತ್ತಿವೆ. ದೇಶದ ಒಟ್ಟಾರೆ ಪ್ರಕರಣಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳ ಪಾಲು ಶೇಕಡ 70 ರಷ್ಟಿದೆ ಎನ್ನುತ್ತದೆ ಇತ್ತೀಚಿನ ಅಧ್ಯಯನ ವರದಿ.
•► ಕರ್ನಾಟಕ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ 2013ರಲ್ಲಿ ಸೈಬರ್ ಅಪರಾಧಗಳ ಸಂಖ್ಯೆಯಲ್ಲಿ ಶೇಕಡ 117ರಷ್ಟು ಭಾರಿ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ ಎಂದು ಅಸೋಚಾಂ–ಮಹೀಂದ್ರಾ ಎಸ್‌ಎಸ್‌ಜಿ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಅಧ್ಯಯನ ವರದಿ ಹೇಳಿದೆ.
●. ಮಹಾರಾಷ್ಟ್ರ ಅಗ್ರಸ್ಥಾನ :
━━━━━━━━━━━━━━━
•► ನೆರೆಯ ಮಹಾರಾಷ್ಟ್ರದಲ್ಲಿ 681 ಪ್ರಕರಣಗಳು ದಾಖಲಾಗಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 2012ಕ್ಕೆ ಹೋಲಿಸಿದರೆ 2013ರಲ್ಲಿ ಶೇ 44.6ರಷ್ಟು ಏರಿಕೆಯಾಗಿದೆ.
●. ಆಂಧ್ರಪ್ರದೇಶ. ಎರಡನೇ ಸ್ಥಾನ:
━━━━━━━━━━━━━━━━━━
ಮತ್ತೊಂದು ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ 635 ಪ್ರಕರಣಗಳು ದಾಖಲಾಗಿದ್ದು, ಎರಡನೇ ಸ್ಥಾನದಲ್ಲಿದೆ. 2012ಕ್ಕೆ ಹೋಲಿಸಿದರೆ ಆಂಧ್ರದಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆಯಲ್ಲಿ ಶೇ 48ರಷ್ಟು ಏರಿಕೆಯಾಗಿದೆ.
●. ಕರ್ನಾಟಕ ಮೂರನೇ ಸ್ಥಾನ :
━━━━━━━━━━━━━━━━
•► ಐ.ಟಿ ಕ್ಷೇತ್ರದ ಪ್ರಮುಖ ಕೇಂದ್ರಗಳಲ್ಲೊಂದಾಗಿ ಬೆಳೆದಿರುವ ಬೆಂಗಳೂರನ್ನೇ ರಾಜಧಾನಿಯಾಗಿಸಿ ಕೊಂಡಿರುವ ಕರ್ನಾಟಕ ರಾಜ್ಯವು, ಸೈಬರ್ ಅಪರಾಧ ಪ್ರಕರಣಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ!
•► ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ 2013ರಲ್ಲಿ 513 ಪ್ರಕರಣಗಳು ದಾಖಲಾಗಿದ್ದವು. 2012ಕ್ಕೆ ಹೋಲಿಸಿದರೆ ಶೇಕಡ 24.50ರಷ್ಟು ಹೆಚ್ಚಳ ಕಂಡು ಬಂದಿತ್ತು ಎಂದು ‘ಸೈಬರ್ ಅಂಡ್ ನೆಟ್‌ವರ್ಕ್ ಸೆಕ್ಯೂರಿಟಿ ಫ್ರೇಮ್‌ವರ್ಕ್’ ಮೇಲೆ ನಡೆಸಲಾದ ಜಂಟಿ ಅಧ್ಯಯನ ವರದಿ ಬೆಳಕು ಚೆಲ್ಲಿದೆ.
●. ಉತ್ತರ ಪ್ರದೇಶ ನಾಲ್ಕನೇ ಸ್ಥಾನ:
━━━━━━━━━━━━━━━━━━
•► 372 ಪ್ರಕರಣಗಳ ಮೂಲಕ ಉತ್ತರ ಪ್ರದೇಶ ನಾಲ್ಕನೇ ಸ್ಥಾನದಲ್ಲಿದ್ದರೂ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದೆ. 2012ಕ್ಕೆ ಹೋಲಿಸಿದ್ದರೆ 81.5ರಷ್ಟು ಆಘಾತಕಾರಿ ಬೆಳವಣಿಗೆ ದಾಖಲಿಸಿದೆ.
●. ಕೇರಳ ಐದನೇ ಸ್ಥಾನ :
━━━━━━━━━━━━━
•► ಕೇರಳದಲ್ಲಿ 349 ಪ್ರಕರಣಗಳು ದಾಖಲಾಗಿದ್ದು, ಐದನೇ ಸ್ಥಾನದಲ್ಲಿದೆ.
•► ಕೇಂದ್ರಾಡಳಿತ ಪ್ರದೇಶಗಳ ಪೈಕಿ ರಾಷ್ಟ್ರೀಯ ರಾಜಧಾನಿ ನವದೆಹಲಿಯಲ್ಲಿ 2013ರಲ್ಲಿ 131 ಪ್ರಕರಣಗಳು ದಾಖಲಾಗಿದ್ದು, 2012ಕ್ಕೆ ತುಲನೆ ಮಾಡಿದರೆ ಶೇ 72.4 ರಷ್ಟು ಏರಿಕೆಯಾಗಿದೆ.
•► ಬೃಹತ್ ರಾಜ್ಯಗಳ ಸಾಲಿಗೆ ಸೇರುವ ತಮಿಳುನಾಡು ಹಾಗೂ ಬಿಹಾರದಲ್ಲಿ ಕ್ರಮವಾಗಿ 61 ಹಾಗೂ 63 ಪ್ರಕರಣಗಳು ದಾಖಲಾಗಿವೆ.
●. ಬೆಳೆಯುತ್ತಿರುವ ಅಂತರ್ಜಾಲ ಹಾಗು ಆನ್‌ಲೈನ್ ಬ್ಯಾಂಕಿಂಗ್ :
━━━━━━━━━━━━━━━━━━━━━━━━━━━━━━━━━
•► ಬೆಳೆಯುತ್ತಿರುವ ಅಂತರ್ಜಾಲ ಹಾಗೂ ಹೆಚ್ಚುತ್ತಿರುವ ಆನ್‌ಲೈನ್ ಬ್ಯಾಂಕಿಂಗ್ ಜನಪ್ರಿಯತೆಯಿಂದಾಗಿ ಹ್ಯಾಕರ್‌ಗಳಿಗೆ ಭಾರತ ನೆಚ್ಚಿನ ತಾಣ ಎನಿಸಿದೆ.
2014ರಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಮಾಲ್‌ವೇರ್‌ಗೆ ತುತ್ತಾಗಿ ಅತಿಹೆಚ್ಚು ಹಾನಿ ಅನುಭವಿಸಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಜಪಾನ್ ಹಾಗೂ ಅಮೆರಿಕದ ಬಳಿಕದ ಮೂರನೇ ಸ್ಥಾನದಲ್ಲಿದೆಯಂತೆ.
•► ‘ಆನ್‌ಲೈನ್ ಬ್ಯಾಂಕಿಂಗ್ ಖಾತೆಗಳ ಫಿಶಿಂಗ್ ಅಥವಾ ಎಟಿಎಂ/ಡೆಬಿಟ್ ಕಾರ್ಡ್‌ಗಳ ಕ್ಲೋನಿಂಗ್ ಪದೇಪದೇ ನಡೆಯುತ್ತಿದೆ. ಆನ್‌ಲೈನ್ ಬ್ಯಾಂಕಿಂಗ್/ ಹಣಕಾಸು ವಹಿವಾಟಿಗಾಗಿ ಹೆಚ್ಚುತ್ತಿರುವ ಮೊಬೈಲ್/ ಸ್ಮಾರ್ಟ್‌ಫೋನ್/ ಟ್ಯಾಬ್ಲೆಟ್‌ಗಳ ಬಳಕೆಯೂ ದಾಳಿಗೆ ತುತ್ತಾಗುವ ಸಾಧ್ಯತೆಗಳನ್ನು ಹೆಚ್ಚಿಸಿದೆ’ ಎಂದಿದೆ ವರದಿ.
•► ‘ಸೈಬರ್ ಪ್ರಕರಣ ಸಂಖ್ಯೆಗಳ ಹೆಚ್ಚಳ ಆತಂಕಕಾರಿ. ಆದರೆ ಕದಿಯುತ್ತಿರುವವರ ಮೂಲ ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಲ್ಜಿರಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿರುವುದು ಇನ್ನೂ ಆತಂಕಕಾರಿ ವಿಷಯ’ ಎನ್ನುತ್ತಾರೆ ಅಸೋಚಾಂ ಪ್ರಧಾನ ಕಾರ್ಯದರ್ಶಿ ಡಿ.ಎಸ್.ರಾವತ್.
•► ಭಾರತದಲ್ಲಿ ಸದ್ಯ ಪ್ರತಿ ತಿಂಗಳೂ ಸರಾಸರಿ 12,456 ಸೈಬರ್ ಅಪರಾಧ ಸಂಬಂಧಿತ ಪ್ರಕರಣಗಳು ದಾಖಲಾಗುತ್ತಿವೆ. ವಾರ್ಷಿಕ ಸುಮಾರು 1.50 ಲಕ್ಷದಷ್ಟಿರುವ ಸೈಬರ್ ಸಂಬಂಧಿತ ಪ್ರಕರಣ ಸಂಖ್ಯೆ ಪ್ರಸಕ್ತ ವರ್ಷ (2015) ಮೂರು ಲಕ್ಷ ದಾಟುವ ಅಂದಾಜಿದೆ ಎಂದೂ ವರದಿ ಎಚ್ಚರಿಸಿದೆ.
•► ಇನ್ನೊಂದೆಡೆ, 2011ರಲ್ಲಿ 21,699 ಭಾರತೀಯ ವೈಬ್‌ಸೈಟ್‌ಗಳಿಗೆ ಕನ್ನಹಾಕಲಾಗಿದೆ. 2012ರಲ್ಲಿ 27,605 ವೈಬ್‌ಸೈಟ್‌ಗಳಿಗೆ, 2013 ಹಾಗೂ 2014ರಲ್ಲಿ (ಮೇ ತಿಂಗಳವರೆಗೂ) ಕ್ರಮವಾಗಿ 28,481 ಹಾಗೂ 9,174 ಭಾರತೀಯ ವೈಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲಾಗಿದೆ.
•► 2013ರಲ್ಲಿನ ಸೈಬರ್ ಕ್ರೈಂ ಪ್ರಕರಣ ಗಳಿಂದಾಗಿ ಭಾರತವು ₨24,630 ಕೋಟಿ ಗಳಷ್ಟು ಭಾರಿ ಹಾನಿ ಅನುಭವಿಸಿದೆ ಎಂದು ಅಂಕಿ ಅಂಶ ನೀಡುತ್ತದೆ ಮತ್ತೊಂದು ವರದಿ.
(Courtesy :Prajawani Newspaper)

No comments:
Post a Comment