■.ಏಳನೇ ವೇತನ ಆಯೋಗ: ಒಂದು ಅವಲೋಕನ :
(Seventh Pay Commission of India : an Overview)
━━━━━━━━━━━━━━━━━━━━━━━━━━━━━━━━━━━━━━
★ಪ್ರಚಲಿತ ಸಾಮಾನ್ಯ ಅಧ್ಯಯನ
(current general studies)
★ಭಾರತದ ಆರ್ಥಿಕ ಅಭಿವೃದ್ಧಿ
(Indian Economic Development)
•► ಕೇಂದ್ರ ಸರಕಾರಿ ನೌಕರರ ವೇತನ ಪರಿಷ್ಕರಣೆ ಮಾಡಲು ಹಾಗೂ ಪರಿಹಾರ ಪ್ಯಾಕೇಜ್‌ನ ವಿವಿಧ ಅಂಶಗಳನ್ನು ಪರಿಶೀಲಿಸಲು ಕೇಂದ್ರ ಸರಕಾರ ಕಾಲಕಾಲಕ್ಕೆ ವೇತನ ಆಯೋಗವನ್ನು ನೇಮಕ ಮಾಡುತ್ತದೆ.
•► ಇದುವರೆಗೆ ಇಂತಹ ಏಳು ಆಯೋಗಗಳನ್ನು ರಚಿಸಲಾಗಿದೆ. ಮೊದಲ ವೇತನ ಆಯೋಗವನ್ನು 1946ರಲ್ಲಿ ರಚಿಸಲಾಯಿತು. ನಂತರ 1957, 1970, 1983, 1994, 2006 ಮತ್ತು 2014ರಲ್ಲಿ ಕ್ರಮವಾಗಿ ವೇತನ ಆಯೋಗಗಳು ರಚನೆಯಾದವು.
●. ಪರಿಗಣಿಸುವ ಅಂಶಗಳು
••┈┈┈┈┈┈┈┈┈┈┈┈••
•► ಹೊಸ ನೌಕರರ ನೇಮಕ ಹಾಗೂ ತರಬೇತಿ ಪ್ರಕ್ರಿಯೆಯು ದುಬಾರಿಯಾಗುವ ಕಾರಣ ಹಾಲಿ ಇರುವ ಕೇಂದ್ರ ಸರಕಾರಿ ನೌಕರರಿಗೆ ನೀಡುವ ವೇತನವು ಅವರು ಕೆಲಸದಲ್ಲೇ ಉಳಿದುಕೊಳ್ಳಲು ಹಾಗೂ ಕೆಲಸವನ್ನು ಚೆನ್ನಾಗಿ ನಿರ್ವಹಿಸುವಂತೆ ಮಾಡಲು ಪ್ರೇರೇಪಿಸುವಂತಿರಬೇಕು. ಜತೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತಿರಬೇಕು ಎಂದು 7ನೇ ವೇತನ ಆಯೋಗವು ತನ್ನ ವರದಿಯಲ್ಲಿ ತಿಳಿಸಿದೆ.
●. ಕನಿಷ್ಠ ವೇತನ ನಿಗದಿ ಹೇಗೆ ?
••┈┈┈┈┈┈┈┈┈┈┈┈┈┈••
•► 1957ರಲ್ಲಿ ನಡೆದ 15ನೇ ಕಾರ್ಮಿಕ ಸಮ್ಮೇಳನದಲ್ಲಿ ಮಾಡಲಾದ ಶಿಫಾರಸುಗಳನ್ನು ಪರಿಗಣಿಸಿ ಕನಿಷ್ಠ ವೇತನವನ್ನು ನಿಗದಿಪಡಿಸಲಾಗುತ್ತದೆ. ಉದ್ಯೋಗಿ ಕುಟುಂಬದ ಎಲ್ಲ ಅಗತ್ಯವನ್ನು ಸರಿದೂಗಿಸುವುದನ್ನು ಕನಿಷ್ಠ ವೇತನ ಒಳಗೊಂಡಿರುತ್ತದೆ.
•► ಡಾ.ವಾಲ್ಸೆ ಅಕ್ರಾಯ್ಡ್ ಅವರು , ಪತಿ, ಪತ್ನಿ ಮತ್ತು 14 ವರ್ಷದೊಳಗಿನ ಇಬ್ಬರು ಮಕ್ಕಳುನ್ನು ಒಳಗೊಂಡ ಕುಟುಂಬಕ್ಕೆ ಕನಿಷ್ಠ 2,700 ಕ್ಯಾಲೋರಿ ಮತ್ತು ನಿರ್ದಿಷ್ಟ ಪ್ರಮಾಣದ ಪ್ರೋಟಿನ್, ಕೊಬ್ಬು ಮತ್ತು ಇತರೆ ಆಹಾರ ಪದಾರ್ಥಗಳನ್ನು ನೀಡಬೇಕು ಎಂದು ಶಿಫಾರಸು ಮಾಡಿದ್ದರು. ಕನಿಷ್ಠ ವೇತನ ನಿಗದಿಪಡಿಸುವಾಗ ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
•► ಜತೆಗೆ 1991ರ ಸುಪ್ರಿಂಕೋರ್ಟ್ ತೀರ್ಪಿನ ಪ್ರಕಾರ ಮಕ್ಕಳ ಶಿಕ್ಷಣ, ವೈದ್ಯ ವೆಚ್ಚ, ಮನರಂಜನೆ, ಸಮಾರಂಭಗಳ ವೆಚ್ಚ ಇಂತಹ ಎಲ್ಲ ಅಂಶಗಳನ್ನೂ ಪರಿಗಣಿಸಲಾಗುತ್ತದೆ. 7ನೇ ವೇತನ ಆಯೋಗವು ಕನಿಷ್ಠ ವೇತನವನ್ನು 18 ಸಾವಿರ ರೂ.ಗೆ ನಿಗದಿಪಡಿಸಿದೆ.
●. ಗರಿಷ್ಠ ಮಟ್ಟದ ವೇತನ ನಿಗದಿ ಹೇಗೆ?
••┈┈┈┈┈┈┈┈┈┈┈┈┈┈┈┈┈┈┈┈••
•► ವಿವಿಧ ಸರಕಾರಿ ಹುದ್ದೆಗಳ ಸ್ಟಾರ್ಟಿಂಗ್ ಪಾಯಿಂಟ್‌ಗೆ 18 ಸಮಾನಾಂತರ ಹಂತಗಳಿರುತ್ತವೆ. ನಂತರ ಪ್ರತಿಯೊಂದು ಹಂತಕ್ಕೂ ಮೇಲ್ಮುಖವಾಗಿ ವೇತನ ಹೆಚ್ಚಾಗುತ್ತ ಹೋಗುತ್ತದೆ.
•► ಒಬ್ಬ ಉದ್ಯೋಗಿ ಉದ್ಯೋಗದಲ್ಲಿ ನಿರ್ದಿಷ್ಟ ಹಂತ ತಲುಪಿದನೆಂದರೆ ಆತನ ವೇತನವೂ ಆತನ ಸ್ಥಾನಕ್ಕೆ ತಕ್ಕಂತೆ ಹೆಚ್ಚಾಗುತ್ತದೆ. ಅಂದರೆ ಆತನ ವೇತನವೂ ವಾರ್ಷಿಕ ಆಧಾರದ ಮೇಲೆ ಹಾಗೂ ಆತನಿಗೆ ಬಡ್ತಿ ಸಿಗುವವರೆಗೆ ದೊರೆಯುವ ಏರಿಕೆಯನ್ನು ಆಧರಿಸಿ ವೇತನವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಪರಿಹಾರವನ್ನು ಎಲ್ಲ ಹಂತಗಳಲ್ಲಿಯೂ ನಿಗದಿಪಡಿಸಲಾಗುತ್ತದೆ.
●. ನೌಕರರ ಸಂಬಳದಲ್ಲಿ ಭಾರೀ ವ್ಯತ್ಯಾಸ
••┈┈┈┈┈┈┈┈┈┈┈┈┈┈┈┈┈┈┈••
•► ಮೊದಲ ವೇತನ ಆಯೋಗದಲ್ಲಿ ಗರಿಷ್ಠ ಮತ್ತು ಕನಿಷ್ಠ ವೇತನ ಪಡೆಯುವ ಸರಕಾರಿ ನೌಕರರ ಸಂಬಳದಲ್ಲಿ ಭಾರಿ ವ್ಯತ್ಯಾಸವಿತ್ತು. 1948ರಲ್ಲಿ ಸರಕಾರಿ ಅಧಿಕಾರಿಯೊಬ್ಬನ ಗರಿಷ್ಠ ವೇತನವು 2 ಸಾವಿರವಾಗಿದ್ದರೆ, ಕನಿಷ್ಠ ವೇತನ ಪಡೆಯುವ ನೌಕರನ ಸಂಬಳ 55 ರೂ.ಗಳಾಗಿತ್ತು. ಅಂದರೆ 37 ಪಟ್ಟು ಹೆಚ್ಚು ವೇತನವನ್ನು ಸರಕಾರಿ ಅಧಿಕಾರಿಯು ತನ್ನ ಕೆಳ ನೌಕರನಿಗಿಂತ ಪಡೆಯುತ್ತಿದ್ದ.
●. ಕೇಂದ್ರದಲ್ಲಿ ಭರ್ತಿಯಾಗಬೇಕಾದ 7.29 ಲಕ್ಷ ಹುದ್ದೆಗಳು
••┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈••
•► ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 7.29 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಏಳನೇ ವೇತನ ಆಯೋಗದ ವರದಿಯಲ್ಲಿ ಹೇಳಲಾಗಿದೆ. 2015ರ ಜನವರಿ ತನಕದ ದಾಖಲೆಗಳ ಪ್ರಕಾರ 56 ಸಚಿವಾಲಯ ಮತ್ತು ಇಲಾಖೆಗಳ ಅನುಮೋದಿತ 38,90,112 ಹುದ್ದೆಗಳ ಪೈಕಿ 31,61,242 ಹುದ್ದೆಗಳನ್ನಷ್ಟೇ ತುಂಬಲಾಗಿದೆ.
•► 8 ಸಚಿವಾಲಯಗಳು ಶೇ.40ರಷ್ಟು ಮತ್ತು 21 ಸಚಿವಾಲಯಗಳು ಶೇ.30ರಷ್ಟು ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಹಣಕಾಸು ಸಚಿವಾಲಯದಲ್ಲಿ 80,387 ಹುದ್ದೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಲ್ಲಿ 5,823 ಹುದ್ದೆಗಳು, ರೈಲ್ವೆಯಲ್ಲಿ 2,35,527 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ ಎಂದು ವರದಿ ತಿಳಿಸಿದೆ.
(ಕೃಪೆ :ವಿಜಯ ಕರ್ನಾಟಕ)

No comments:
Post a Comment