☀(ಭಾಗ -24) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ
(General knowledge on Current Affairs (Part-24))
☆.(ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current Affairs)
★ ಸಾಮಾನ್ಯ ಜ್ಞಾನ
(General Knowledge)
- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ ಮುಖ್ಯವಾಗಿ ಇತ್ತೀಚಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಅದು ಸಾಹಿತ್ಯ, ಕಲೆ, ಸಂಸ್ಕೃತಿ, ವಿಜ್ಞಾನ, ರಾಜಕೀಯ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಅಯಾ ದಿನದ ದಿನಪತ್ರಿಕೆಗಳನ್ನು ಕಲೆಹಾಕಿ ಸಂಕ್ಷೇಪಿಸಿ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡಲು ಒಂದು ಚಿಕ್ಕ ಪ್ರಯತ್ನ.
901) ಇತ್ತೀಚೆಗೆ ಸುದ್ದಿಯಲ್ಲಿದ್ದ 'ಎತ್ತಿನಹೊಳೆ' ಇದು ಯಾವ ನದಿಯ ಉಪನದಿ?
••► ನೇತ್ರಾವತಿ
902) ಎಷ್ಟನೇ ಕಾರ್ಮಿಕ ಸಮ್ಮೇಳನದಲ್ಲಿ ಮಾಡಲಾದ ಶಿಫಾರಸುಗಳನ್ನು ಪರಿಗಣಿಸಿ ಕನಿಷ್ಠ ವೇತನವನ್ನು ನಿಗದಿಪಡಿಸಲಾಗುತ್ತದೆ?
••► 1957ರಲ್ಲಿ ನಡೆದ 15ನೇ ಕಾರ್ಮಿಕ ಸಮ್ಮೇಳನ.
903) ಇತ್ತೀಚೆಗೆ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಘೋಷಿಸಿದ 'ಐದನೇ ಮೀಸಲು ಕರೆನ್ಸಿ' (ಅಂತಾರಾಷ್ಟ್ರೀಯ ಕರೆನ್ಸಿ ಸ್ಥಾನ ಪಡೆದ) ಯಾವುದು?
••► ಚೀನಾದ ಯುವಾನ್ ಕರೆನ್ಸಿ.
( ವಿವರಣೆ : ಅಮೆರಿಕದ ಡಾಲರ್, ಯುರೋಪಿಯನ್ ಒಕ್ಕೂಟದ ಯುರೋ,ಬ್ರಿಟನ್ ನ ಪೌಂಡ್, ಜಪಾನ್ ನ ಯೆನ್ ನಂತರ ಈಗ ಚೀನಾದ ಯುವಾನ್ ಅಂತಾರಾಷ್ಟ್ರೀಯ ಕರೆನ್ಸಿ ಸ್ಥಾನಪಡೆದಂತಾಗಿದೆ.)
904) ಇತ್ತೀಚೆಗೆ ನಿಧನರಾದ ಖ್ಯಾತ ನರರೋಗ ತಜ್ಞ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಮಹಾ ಕಾರ್ಯದರ್ಶಿ ಯಾರು?
••► ಸತ್ಯಪಾಲ್ ಅಗರ್‌ವಾಲ್ (ನ.17)
905) 2000ನೆ ಇಸವಿಯಲ್ಲಿ ವಿಶ್ವ ಸಂಸ್ಥೆಯು ಜಾರಿಗೆ ತಂದಿದ್ದ ‘ಸಹಸ್ರಮಾನದ ಅಭಿವೃದ್ಧಿಯ ಗುರಿಗಳು’ (‘ಮಿಲೆನಿಯಮ್ ಡೆವೆಲಪ್‌ಮೆಂಟ್ ಗೋಲ್ಸ್’) ಈ ವರ್ಷದ ಯಾವ ತಿಂಗಳಿನಲ್ಲಿ ಅದರ ಕಾರ್ಯಯೋಜನೆಯ ಅವಧಿ ಮುಕ್ತಾಯಗೊಂಡಿತು?
••► ಸೆಪ್ಟಂಬರ್ ತಿಂಗಳು 2015.
906) ವಿಶ್ವಸಂಸ್ಥೆಯು ಜಾರಿಗೆ ತಂದಿದ್ದ ‘ಸಹಸ್ರಮಾನದ ಅಭಿವೃದ್ಧಿಯ ಗುರಿಗಳ’ ಕಾರ್ಯಯೋಜನೆಯ ಅವಧಿ ಇತ್ತೀಚೆಗೆ ಮುಕ್ತಾಯವಾಗುವುದರೊಂದಿಗೆ ಆರೋಗ್ಯ ಮತ್ತು ಸಾಮಾಜಿಕ ಬೆಳವಣಿಗೆಗೆ ತನ್ನ ಮತ್ತೊಂದು ಮಹತ್ವಾಕಾಂಕ್ಷೆಯ ಕಾರ್ಯಯೋಜನೆಯ ಗುರಿಗಳನ್ನು ತನ್ನ ಸದಸ್ಯ ದೇಶಗಳ ಒಕ್ಕೊರಲಿನ ಸಮ್ಮತಿಯ ಮೇರೆಗೆ ವಿಶ್ವದ ಮುಂದಿಟ್ಟಿದೆ. ಆ ಹೊಸ ಕಾರ್ಯಯೋಜನೆ ಗುರಿಗಳ ಹೆಸರೇನು?
••► ‘ಸುಸ್ಥಿರ ಅಭಿವೃದ್ಧಿಯ ಗುರಿಗಳು’ (‘ಸಸ್ಟೇನಬಲ್ ಡೆವೆಲಪ್‌ಮೆಂಟ್ ಗೋಲ್ಸ್’)
907) 2015 ರ ಜಗತ್ತಿನ ಅತ್ಯಂತ ಅಪಾಯಕಾರಿ ದೇಶ ಯಾವುದು?
••► ದಕ್ಷಿಣ ಸೂಡಾನ್.
908) ಇತ್ತೀಚೆಗೆ ವಿಶ್ವಸಂಸ್ಥೆಯು ಜಾರಿಗೆ ತಂದ ‘ಸುಸ್ಥಿರ ಅಭಿವೃದ್ಧಿಯ ಗುರಿಗಳು’ (‘ಸಸ್ಟೇನಬಲ್ ಡೆವೆಲಪ್‌ಮೆಂಟ್ ಗೋಲ್ಸ್’) ಎಂಬ ಹೊಸ ಕಾರ್ಯಯೋಜನೆಯ ಗುರಿಗಳು ಜಾರಿಯಲ್ಲಿರುವ ಅವಧಿ ಎಷ್ಟು?
••► 2016 ಜನವರಿ 1 ರಿಂದ 2030ನೆ ಇಸವಿ.
909) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೇಂದ್ರ ಆರೋಗ್ಯ ಗುಪ್ತಚರ ಇಲಾಖೆಯ (ಸೆಂಟ್ರಲ್ ಇಂಟೆಲಿಜೆನ್ಸ್ ಬ್ಯೂರೋ) 'ನ್ಯಾಷನಲ್ ಹೆಲ್ತ್ ಪ್ರೊಫೈಲ್ 2015'ರ ಪ್ರಕಾರ ಭಾರತದ ಇಂದಿನ 5 ವರ್ಷ ಕೆಳಗಿನ ಮಕ್ಕಳ ಸಾವಿನ ಸೂಚಕ ಪ್ರತಿ 1000ಕ್ಕೆ
ಎಷ್ಟು ಪ್ರಮಾಣ ಇರುವುದು?
••► 40ರಷ್ಟು.
910) ಜಾಗತಿಕವಾಗಿ 5 ವರ್ಷ ಕೆಳಗಿನ ಮಕ್ಕಳ ಸಾವಿನ ಪ್ರಮಾಣದ ಸೂಚಕ (ಮಾರ್ಟಾಲಿಟಿ ರೇಟ್)ದಲ್ಲಿ ನಮ್ಮ ದೇಶದ ಪ್ರತಿ 1000ಕ್ಕೆ ಎಷ್ಟು ಪ್ರಮಾಣ ಇರುವುದು?
••► 49ರಷ್ಟು.
911) ಇತ್ತೀಚೆಗೆ ಬ್ಯಾಂಕ್ ಆಫ್ ಇಂಟರ್‌ನ್ಯಾಷನಲ್ ಸೆಟಲ್‌ಮೆಂಟ್ (ಬಿಐಎಸ್) ನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಈ ಸ್ಥಾನ ಅಲಂಕರಿಸಿರುವ ಮೊಟ್ಟಮೊದಲ ಭಾರತೀಯ ಎಂಬ ಹಗ್ಗಳಿಕೆಗೆ ಪಾತ್ರರಾದವರು ಯಾರು?
••► ಆರ್‌ಬಿಐ ಗವರ್ನರ್ ರಘುರಾಂ ರಾಜನ್
(ವಿವರಣೆ : ಅವರ ಈ ಅವಧಿ ಮೂರು ವರ್ಷಗಳಾಗಿರುತ್ತವೆ. 2014ರಲ್ಲಿ ಬಿಐಎಸ್ ನಿರ್ದೇಶಕ ಮಂಡಳಿಗೆ ರಾಜನ್ ಸೇರ್ಪಡೆಯಾಗಿದ್ದರು)
912) ಇತ್ತೀಚೆಗೆ ’ಮದರ್ ತೆರೆಸಾ ಸ್ಮಾರಕ ಪ್ರಶಸ್ತಿ’ಯನ್ನು ಯಾರಿಗೆ ನೀಡಲಾಯಿತು?
••► ಡಾ. ಕೆ. ರಾಧಾಕೃಷ್ಣನ್
913) ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಸ್ವಚ್ಛ ಭಾರತ್ ಸೆಸ್ ನವೆಂಬರ್ 15ರಿಂದ ದೇಶಾದ್ಯಂತ ಜಾರಿಗೆ ಬಂದಿದ್ದು, ಎಲ್ಲಾ ಸೇವೆಗಳ ಮೇಲೆ ಶೇ. ಎಷ್ಟು ಪ್ರಮಾಣ ಸೆಸ್ ಜಾರಿಯಾಗಿದೆ?
••► ಶೇ. 0.5ರಷ್ಟು
914) ಇತ್ತೀಚೆಗೆ ಭಾರತ ಮತ್ತು ರಷ್ಯಾ ನಡುವೆ ನಡೆದ ಜಂಟಿ ಸಮರಾಭ್ಯಾಸಕ್ಕೆ ಕೊಟ್ಟ ಹೆಸರೇನು?
••► 'ಇಂದ್ರ-2015'
915) 2015 ರ ವಿಶ್ವಕಪ್ ಚೆಸ್ ಚಾಂಪಿಯನ್ ಷಿಪ್ ನ್ನು ಯಾರು ಮುಡಿಗೇರಿಸಿಕೊಂಡರು?
••► ಸೆರ್ಗಿ ಕರ್ಜಕಿನ್
916) ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು 'ಎಬೋಲಾ ಮುಕ್ತ ದೇಶ' ಎಂದು ಘೋಷಿಸಿದ ದೇಶ ಯಾವುದು?
••► ಸಿಯೋರಾ ಲಿಯೋನ್ ದೇಶ
917) ಇತ್ತೀಚೆಗೆ ಗೋವಾದಲ್ಲಿ ನಡೆದ 46ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಗೋಲ್ಡನ್ ಪಿಕಾಕ್' ಪ್ರಶಸ್ತಿ ಪಡೆದ ಸಿನಿಮಾ ಯಾವುದು?
••► 'ಎಂಬ್ರೇಸ್ ಆಫ್ ಸರ್ವೇಂಟ್' ಸಿನಿಮಾ
918) ಇತ್ತೀಚೆಗೆ ಗೋವಾದಲ್ಲಿ ನಡೆದ 46ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಗೋಲ್ಡನ್ ಪಿಕಾಕ್' ಪ್ರಶಸ್ತಿ ಪಡೆದ 'ಎಂಬ್ರೇಸ್ ಆಫ್ ಸರ್ವೇಂಟ್' ಸಿನಿಮಾದ ನಿರ್ದೇಶಕ ಯಾರು?
••► ಸಿರೋ ಗುರ‌್ರಾ
919) 'ಹ್ಯಾಂಡ್ ಇನ್ ಹ್ಯಾಂಡ್ -2015' ಹೆಸರಿನ ಜಂಟಿ ಸಮರಾಭ್ಯಾಸ ಯಾವ ಎರಡು ರಾಷ್ಟ್ರಗಳ ನಡುವೆ ನೆಡದಿದೆ?
••► ಭಾರತ-ಚೀನಾ
920) ಇತ್ತೀಚೆಗೆ ಗೋವಾದಲ್ಲಿ ನಡೆದ 46ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ''ಐಸಿಎಫ್‌ಟಿ-ಯುನೆಸ್ಕೊ ಫೆಲಿನಿ' ಪ್ರಶಸ್ತಿ ಪ್ರಶಸ್ತಿ ಪಡೆದ ಚಲನಚಿತ್ರ ಯಾವುದು?
••► ಬಂಗಾಳಿ ನಿರ್ದೇಶಕ ಕೌಶಿಕ್ ಗಂಗೂಲಿ ಅವರ 'ಸಿನಿಮಾ ವಾಲ' ಚಿತ್ರ.
To be continued....

No comments:
Post a Comment