■.ಆಸಿಯಾನ್ ಶೃಂಗಸಭೆ : ಒಂದು ವಿಸ್ತೃತ ನೋಟ.
(ASEAN Summit: An Broad View)
━━━━━━━━━━━━━━━━━━━━━━━━━━━
★ ಅಂತರರಾಷ್ಟ್ರೀಯ ಶೃಂಗಸಭೆಗಳು.
(International Summits)
★ ಅಂತರರಾಷ್ಟ್ರೀಯ ಸಂಬಂಧಗಳು
(International Relationship)
•► ಮಲೇಷ್ಯಾದಲ್ಲಿ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಆಸಿಯಾನ್) ಶೃಂಗಸಭೆ ನವೆಂಬರ್ 19-22ರ ತನಕ ನಡೆಯಿತು. ಈ ಶೃಂಗಸಭೆಯಲ್ಲಿ ಭಾರತ ಕೂಡ ಅತಿಥಿ ರಾಷ್ಟ್ರವಾಗಿ ಪಾಲ್ಗೊಂಡಿತ್ತು. ಶೃಂಗಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಹೂಡಿಕೆಗೆ ಭಾರತ ಪ್ರಶಸ್ತ್ಯ ತಾಣ ಎಂದು ಹೇಳಿದ್ದಾರೆ.65 ವರ್ಷಗಳ ಸಾಂಪ್ರದಾಯಿಕತೆಯಿಂದ ಹೊರಬಂದು ನಾವೀಗ ವಿದೇಶೀ ನೀತಿಗಳಿಗೆ ಸ್ವಾಗತ ನೀಡಿದ್ದೇವೆ. ನಾವೀಗ ಭಾರತವನ್ನು ಜಾಗತಿಕ ನಿರ್ಮಾಣ ತಾಣವನ್ನಾಗಿ ಮಾಡುವಲ್ಲಿ ತೊಡಗಿಸಿಕೊಂಡಿದ್ದೇವೆ ಎಂದಿದ್ದಾರೆ.
•► ನಾಲ್ಕು ದಿನಗಳ ಕಾಲ ನಡೆದ ಶೃಂಗಸಭೆಯಲ್ಲಿ 'ಆಸಿಯಾನ್- 2025 ಒಟ್ಟಾಗಿ ಮುನ್ನುಗ್ಗುವ (ASEAN 2025, forging ahead together) ಎಂಬ ಧ್ಯೇಯ ವಾಕ್ಯದಡಿ ವಿವಿಧ ನಿರ್ಣಯಗಳಿಗೆ ಹತ್ತು ದೇಶಗಳ ನಾಯಕರು ಸಹಿ ಹಾಕಿದ್ದಾರೆ. ಆರ್ಥಿಕವಾಗಿ ಸಮಗ್ರವಾಗಿರುವ, ಸಾಮಾಜಿಕ ಜವಾಬ್ದಾರಿ ಹೊಂದಿರುವ ಮತ್ತು ರಾಜಕೀಯವಾಗಿ ಸಂಘಟಿತರಾಗಿರುವ ಆಸಿಯಾನ್ ರಾಷ್ಟ್ರಗಳು ಸಮುದಾಯಕ್ಕಾಗಿ ಕೆಲಸ ಮಾಡುವ ಘೋಷಣೆ ಮಾಡಿವೆ.
•► ಪ್ರಮುಖವಾಗಿ 'ಆಸಿಯಾನ್ ಆರ್ಥಿಕ ಕೂಟ' ಸ್ಥಾಪಿಸುವುದಾಗಿ ಆಸಿಯಾನ್ ದೇಶಗಳ ನಾಯಕರು ಘೋಷಿಸಿದ್ದಾರೆ. ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಬಾನ್ ಕಿ-ಮೂನ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ವಿಶ್ವ ನಾಯಕರು ಇದಕ್ಕೆ ಸಾಕ್ಷಿಯಾದರು.
●.ಏನಿದು ಆಸಿಯಾನ್ ಆರ್ಥಿಕ ಒಕ್ಕೂಟ?
••┈┈┈┈┈┈┈┈┈┈┈┈┈┈┈┈┈┈┈┈••
•► ಇದು ಐರೋಪ್ಯ ಒಕ್ಕೂಟದ ಪ್ರಾದೇಶಿಕ ಮಾದರಿಯಲ್ಲಿಯೇ ಈ ಒಕ್ಕೂಟ ಕಾರ್ಯನಿರ್ವಹಿಸಲಿದೆ. ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಸರಕು, ಬಂಡವಾಳ ಮತ್ತು ಕೌಶಲ್ಯಯುತ ಮಾನವ ಸಂಪನ್ಮೂಲದ ಮುಕ್ತ ಹರಿವಿನ ಏಕೀಕೃತ ಮಾರುಕಟ್ಟೆ ಸೃಷ್ಟಿಗೆ ಈ ಕೂಟವು ಕಾರ್ಯ ನಿರ್ವಹಿಸಲಿದೆ.
•► ಅತ್ಯಂತ ಸ್ಪರ್ಧಾತ್ಮಕ ಆರ್ಥಿಕ ವಲಯವಾಗಿರುವ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಸರಕು, ಬಂಡವಾಳ ಮತ್ತು ಕೌಶಲ್ಯಯುತ ಮಾನವ ಸಂಪನ್ಮೂಲದ ಮುಕ್ತ ಲಭ್ಯತೆಯ ಏಕೀಕೃತ ಮಾರುಕಟ್ಟೆಯನ್ನು ಕಲ್ಪಿಸಲು ಆಸಿಯಾನ್ ಆರ್ಥಿಕ ಕೂಟ ಕೆಲಸ ಮಾಡಲಿದೆ. ವೈವಿಧ್ಯಪೂರ್ಣವಾದ ಆರ್ಥಿಕತೆ ಹೊಂದಿರುವ 620 ದಶಲಕ್ಷ ಜನಸಂಖ್ಯೆಯ ಆಸಿಯಾನ್ ವಲಯವು 2.4 ಲಕ್ಷ ಕೋಟಿ ಡಾಲರ್ ಮೌಲ್ಯದ ಸಂಯೋಜಿತ ಜಿಡಿಪಿ ಹೊಂದಿದೆ.
●.ಏನಿದು ಆಸಿಯಾನ್ ಒಕ್ಕೂಟ?
••┈┈┈┈┈┈┈┈┈┈┈┈┈┈••
•► ಆಗ್ನೇಯ ಏಷ್ಯಾದ 10 ಪುಟ್ಟ ರಾಷ್ಟ್ರಗಳು ಒಂದಾಗಿ ರಾಜಕೀಯ ಮತ್ತು ಆರ್ಥಿಕ ಅಭಿವೃದ್ಧಿ ನಿಟ್ಟಿನಲ್ಲಿ ಸ್ಥಾಪಿಸಿಕೊಂಡಿರುವ ಒಕ್ಕೂಟವೇ ಆಸಿಯಾನ್. ವಿಶ್ವದ ಅತಿ ಪ್ರಬಲ ಒಕ್ಕೂಟಗಳಲ್ಲಿ ಒಂದು ಎಂಬ ಹೆಸರು ಗಳಿಸಿದೆ. 1967 ರ ಆಗಸ್ಟ್ 8ರಂದು ಸ್ಥಾಪನೆಯಾಯಿತು. ಆ ವೇಳೆ ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್, ಸಿಂಗಾಪುರ, ಥಾಯ್ಲೆಂಡ್ ಇದರ ಸದಸ್ಯ ರಾಷ್ಟ್ರಗಳಾಗಿದ್ದವು. ಬಳಿಕ ಬ್ರೂನಿ, ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್, ವಿಯೆಟ್ನಾಂ ಇದರ ಸದಸ್ಯರಾಷ್ಟ್ರಗಳಾಗಿವೆ. ಮಲೇಷ್ಯಾ ಈ ಸಾಲಿನ ಆಸಿಯಾನ್ ಒಕ್ಕೂಟದ ಅಧ್ಯಕ್ಷ ರಾಷ್ಟ್ರವಾಗಿತ್ತು. ಆಸಿಯಾನ್ ರಾಷ್ಟ್ರಗಳಲ್ಲಿ ಸಿಂಗಾಪುರವೇ ಅತಿ ಶ್ರೀಮಂತ ದೇಶ
●.ಆಸಿಯಾನ್ ಜನಸಂಖ್ಯೆ
••┈┈┈┈┈┈┈┈┈┈┈┈┈••
•► ಆಸಿಯಾನ್ ಒಕ್ಕೂಟ ಜಗತ್ತಿನ ಶೇ. 9ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಅಂದರೆ ಈ ಒಕ್ಕೂಟದ ರಾಷ್ಟ್ರಗಳಲ್ಲಿ ಸುಮಾರು 63 ಕೋಟಿ ಮಂದಿ ವಾಸಿಸುತ್ತಿದ್ದಾರೆ. ಇಂಡೋನೇಷ್ಯಾ ಅತಿ ಹೆಚ್ಚು ಜನಸಂಖ್ಯೆಯಿರುವ ಆಸಿಯಾನ್ ಸದಸ್ಯ ರಾಷ್ಟ್ರವಾಗಿದೆ. ಇಲ್ಲಿ 24.6 ಕೋಟಿ ಜನರಿದ್ದಾರೆ. ಹಾಗೆಯೇ ಬ್ರೂನಿಯಲ್ಲಿ ಅತಿ ಕಡಿಮೆ ಅಂದರೆ 4.12 ಲಕ್ಷ ಜನಸಂಖ್ಯೆಯಿದೆ.
●.ಆರ್ಥಿಕತೆ
••┈┈┈┈┈••
•► ಒಂದು ವೇಳೆ ಆಸಿಯಾನ್ ಒಕ್ಕೂಟ ಎಂಬುದು ಒಂದೇ ರಾಷ್ಟ್ರವಾಗಿದ್ದರೆ, ಅದರ ಆರ್ಥಿಕ ಸಾಮರ್ಥ್ಯ ಜಗತ್ತಿನಲ್ಲೇ 7 ನೇ ಅತಿ ದೊಡ್ಡ ಆರ್ಥಿಕತೆಯಾಗಿರುತ್ತಿತ್ತು. ಆಸಿಯಾನ್ ರಾಷ್ಟ್ರಗಳ ಒಟ್ಟು ರಾಷ್ಟ್ರೀಯ ಉತ್ಪನ್ನದ ಪ್ರಮಾಣ 237 ಲಕ್ಷ ಕೋಟಿ ರೂ. ಆಗಿದೆ. ಇದು 2020ರ ವೇಳೆಗೆ ದುಪ್ಪಟ್ಟಾಗಲಿದೆ ಎಂದು ಹೇಳಲಾಗಿದೆ. ಅಲ್ಲದೇ 2050ರ ವೇಳೆಗೆ ಇಲ್ಲಿನ ಆರ್ಥಿಕತೆ ವಿಶ್ವದಲ್ಲೇ ಮೂರನೇ ಸ್ಥಾನವನ್ನು ಪಡೆಯಬಹುದು ಎಂದು ಊಹಿಸಲಾಗಿದೆ.
●.ಒಕ್ಕೂಟದ ಉದ್ದೇಶ
••┈┈┈┈┈┈┈┈┈┈┈••
•► ಆಸಿಯಾನ್ ರಾಷ್ಟ್ರಗಳಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಗತಿ ಸಾಧಿಸುವುದು, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ಕಾಪಾಡುವುದು, ಸಮಾನ ಹಿತಾಸಕ್ತಿ ವಿಷಯದಲ್ಲಿ ಪರಸ್ಪರ ಸಹಕಾರ ನೀಡುವುದು, ತರಬೇತಿ ಮತ್ತು ಸಂಶೋಧನಾ ವಿಷಯಗಳಲ್ಲಿ ಆರ್ಥಿಕ ನೆರವು ಒದಗಿಸುವುದು , ಕೃಷಿ, ಕೈಗಾರಿಕೆ, ಜನರ ಜೀವನ ಮಟ್ಟ ಸುಧಾರಣೆ ಮುಂತಾದ ವಿಷಯಗಳಲ್ಲಿ ಪರಸ್ಪರ ನೆರವು ಒದಗಿಸುವುದು ಒಕ್ಕೂಟದ ಉದ್ದೇಶವಾಗಿದೆ.
(ಕೃಪೆ :ವಿಜಯ ಕರ್ನಾಟಕ)

No comments:
Post a Comment