"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 31 December 2015

☀ ಸ್ವತಂತ್ರ ಪೂರ್ವದಲ್ಲಿ ಸ್ಥಾಪನೆಗೊಂಡ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸುಧಾರಣಾ ಸಂಸ್ಥೆಗಳು, ಚಳುವಳಿಗಳು : (The Major Socio-Religious and Cultural Reform Institutions, movements established during the Pre-Independent in India)

☀ ಸ್ವತಂತ್ರ ಪೂರ್ವದಲ್ಲಿ ಸ್ಥಾಪನೆಗೊಂಡ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸುಧಾರಣಾ ಸಂಸ್ಥೆಗಳು, ಚಳುವಳಿಗಳು :
(The Major Socio-Religious and Cultural Reform Institutions, movements established during the Pre-Independent in India)
━━━━━━━━━━━━━━━━━━━━━━━━━━━━━━━━━━━━━━━━━━
★ ಆಧುನಿಕ ಭಾರತದ ಇತಿಹಾಸ
(Modern Indian History)


— ಸ್ವತಂತ್ರ ಪೂರ್ವದಲ್ಲಿನ ಸಮಾಜದಲ್ಲಿ ಗಾಢವಾಗಿ ಬೇರೂರಿದ ಅನಿಷ್ಟ ಕಂದಾಚಾರದ, ಸಂಪ್ರದಾಯ, ಮೂಢನಂಬಿಕೆಗಳ ವಿರುದ್ಧ, ಪ್ರಬಲ ಕಟ್ಟುನಿಟ್ಟಿನ ಜಾತಿ-ಧರ್ಮ ವ್ಯವಸ್ಥೆಯ ವಿರುದ್ಧ ಹಾಗೂ ಹಿಂದುಳಿದ ಮತ್ತು ಕೆಳವರ್ಗಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ಅವರ ಹಕ್ಕುಗಳನ್ನು ಎತ್ತಿಹಿಡಿಯುವ ಸಲುವಾಗಿ, ಆಡಳಿತದಲ್ಲಿ ಮತ್ತು ಸಮಾಜದಲ್ಲಿ ಪಾಶ್ಚಾತ್ಯ ಮತ್ತು ಉನ್ನತ ಶಿಕ್ಷಣ ನೀಡುವ ಪ್ರಮುಖ ಗುರಿಯೊಂದಿಗೆ ದೇಶದ ಅನೇಕ ಮಹಾನ್ ವ್ಯಕ್ತಿಗಳು ಬದಲಾವಣೆಯ ಧ್ವನಿಯಾಗಿ ಹಲವು ಸುಧಾರಣಾ ಸಂಸ್ಥೆಗಳನ್ನು, ಚಳುವಳಿಗಳನ್ನು ಸ್ಥಾಪಿಸಿ ಸುಧಾರಣೆಯ ಹರಿಕಾರರಾದರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ನಿಟ್ಟಿನಲ್ಲಿ ಸ್ಪರ್ಧಾಳುಗಳಿಗೆ ಉಪಯುಕ್ತವಾಗಬಲ್ಲದೆಂಬ ಆಶಯದೊಂದಿಗೆ 'ಸ್ಪರ್ಧಾಲೋಕ ' ಅಂತಹ ಪ್ರಮುಖ ಸುಧಾರಣಾ ಸಂಸ್ಥೆಗಳನ್ನು, ಚಳುವಳಿಗಳನ್ನು ಇಲ್ಲಿ ವಿವರಿಸಲು ಮಾಡಿರುವ ಒಂದು ಚಿಕ್ಕ ಪ್ರಯತ್ನ.



★ ಸ್ವತಂತ್ರ ಪೂರ್ವದ ಸುಧಾರಣಾ ಸಂಸ್ಥೆಗಳು ಮತ್ತು ಚಳುವಳಿಗಳು :
(Reform organizations, and movements of the Pre-Independent in India)
━━━━━━━━━━━━━━━━━━━━━━━━━━━━━━━━━━━━━━━━━━━━━l

1) ಆತ್ಮೀಯ ಸಭಾ (1815) ••┈┈┈┈• ರಾಜ ರಾಮ್ ಮೋಹನ್ ರಾಯ್.

2) ಬ್ರಹ್ಮ ಸಮಾಜ (1828) ••┈┈┈┈• ರಾಜ ರಾಮ್ ಮೋಹನ್ ರಾಯ್.

3) ಸಾಧಾರಣ ಬ್ರಹ್ಮಸಮಾಜ ••┈┈┈┈• ಆನಂದ್ ಮೋಹನ್ ಬೋಸ್

4) ಇಂಡಿಯನ್ ನ್ಯಾಷನಲ್ ಸೋಷಿಯಲ್ ಕಾನ್ಫರೇನ್ಸ್ ••┈┈┈┈• ಎಮ್.ಜಿ ರಾನಡೆ.

5) ತತ್ವಭೋಧಿನಿ ಸಭಾ (1839) (ನಂತರ 1842ರಲ್ಲಿ ಬ್ರಹ್ಮ ಸಮಾಜದಲ್ಲಿ ವಿಲೀನಗೊಂಡಿತು) ••┈┈┈┈• ಮಹರ್ಷಿ ದೇವೇಂದ್ರನಾಥ ಟ್ಯಾಗೋರ್.

6) ಸತ್ಯ ಶೋಧಕ ಸಮಾಜ (1873) ••┈┈┈┈• ಜ್ಯೋತಿರಾವ್ ಫುಲೆ (ಜಾತಿ ಶೋಷಣೆಯ ವಿರುದ್ಧ ಹೋರಾಟ).

7) ಶ್ರೀ ನಾರಾಯಣ ಧರ್ಮ ಪ್ರತಿಫಲನ ••┈┈┈┈• ಯೋಗಮಾ ಶ್ರೀ ನಾರಾಯಣ ಗುರು (ಜಾತಿ ಶೋಷಣೆಯ ವಿರುದ್ಧ ಹೋರಾಟ)

8) ಸೌಥ್ ಇಂಡಿಯನ್ ಲಿಬರಲ್ ಫೆಡರೇಷನ್ (ನಂತರ ಜಸ್ಟೀಸ್ ಪಾರ್ಟಿ & ದ್ರಾವಿಡ ಕಳಗಂ ಆಯಿತು) ••┈┈┈┈• ಟಿ ತ್ಯಾಗರಾಜ & ಟಿ.ಎಮ್ ನಾಯರ್ (ಆತ್ಮ ಗೌರವ).

9) ಹರಿಜನ ಸೇವಕ್ ಸಂಘ್ ••┈┈┈┈• ಮಹಾತ್ಮ ಗಾಂಧಿ.

10) ಪ್ರಾರ್ಥನಾ ಸಮಾಜ (1867) ••┈┈┈┈• ಆತ್ಮ ರಾಮ್ ಪಾಂಡುರಂಗ.

11) ಆರ್ಯ ಸಮಾಜ (1875) ••┈┈┈┈• ಸ್ವಾಮಿ ದಯಾನಂದ.

12) ಹಿಂದೂ ಧರ್ಮ ಸಂಗ್ರಕ್ಷಣಿ  ಸಭಾ (1893 ನಾಸಿಕ್ ನಲ್ಲಿ) ಚಾಪೆಕರ್ ಸಹೋದರರು ••┈┈┈┈• ದಾಮೋದರ & ಬಾಲಕೃಷ್ಣ.

13) ಅಭಿನವ ಭಾರತ ••┈┈┈┈• ವಿ.ಡಿ. ಸಾವರ್ಕರ್.

14) ನ್ಯೂ ಇಂಡಿಯಾ ಅಸೋಸಿಯೇಶನ್ ••┈┈┈┈• ವಿ.ಡಿ. ಸಾವರ್ಕರ್.

15) ಅನುಶೀಲನ ಸಮಿತಿ  ••┈┈┈┈• ಅರಬಿಂದೋ ಘೋಷ್ ಬರೀಂದ್ರ ಕುಮಾರ್ ಘೋಷ್, ಬಿ.ಪಿ ಮಿತ್ರ, ಅಭಿನಾಷ್ ಭಟ್ಟಾಚಾರ್ಯ & ಭೂಪೇಂದ್ರ ದತ್ತ.

16) ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿ (1905) ••┈┈┈┈• ಗೋಪಾಲ ಕೃಷ್ಣ ಗೋಖಲೆ (ನೈಟ್ ಹುಡ್ ಗೌರವವನ್ನು ತಿರಸ್ಕರಿಸಿದ್ದರು).

17) ಆಂಗ್ಲೊ-ಒರಿಯಂಟಲ್ ಡಿಫೆನ್ಸ್ ಅಸೋಸಿಯೇಶನ್  ••┈┈┈┈• ಸಯ್ಯಿದ್ ಅಹ್ಮದ್ ಖಾನ್

18) ಬಹಿಷ್ಕ್ರಿತ ಹಿತಕರ್ಣಿ ಸಭಾ (1924), ಬಹಿಷ್ಕೃತ ಭಾರತ ಮತ್ತು ಸಮಾಜ ಸಮತಾ ಸಭ  ••┈┈┈┈• ಬಿ ಅಂಬೇಡ್ಕರ್.

19) ಅಖಿಲ ಭಾರತೀಯ ದಲಿತ ವರ್ಗ ಸಭಾ ••┈┈┈┈• ಬಿ.ಆರ್ ಅಂಬೇಡ್ಕರ್.

20) ಪೆಟ್ರೋಯಿಟಿಕ್  ಅಸೋಸಿಯೇಶನ್  ••┈┈┈┈• ಸಯ್ಯಿದ್ ಅಹ್ಮದ್ ಖಾನ್ ಮುಹಮ್ಮದ್.

21) ರಾಮಕೃಷ್ಣ ಆಶ್ರಮ  ••┈┈┈┈• ಸ್ವಾಮಿ ವಿವೇಕಾನಂದ (1897)

22) ವೇದಸಮಾಜ ••┈┈┈┈• ಶ್ರೀಧರಲು ನಾಯ್ಡು

23) ಧರ್ಮಸಭಾ  ••┈┈┈┈• ರಾಧಾಕಾಂತ ದೇವ

24) ದೇವಸಮಾಜ. ••┈┈┈┈• ಶಿವ ನಾರಾಯಣ್ ಅಗ್ನಿಹೋರ್ತಿ

25) ಥಿಯಾಸಫಿಕಲ್ ••┈┈┈┈• ಸೊಸೈಟಿ ಆನಿಬೆಸೆಂಟ್ (1882)

26) ಅಲಿಘರ್ ಚಳುವಳಿ  ••┈┈┈┈• ಸಯ್ಯದ್ ಅಹಮದ್ ಖಾನ್

27) ಸೆಲ್ಫ್ ರೆಸ್ಪೆಕ್ಟ್ ಮೂಮೆಂಟ್  ••┈┈┈┈• (1925) ಇ.ವಿ.ರಾಮಸ್ವಾಮಿ ನಾಯ್ಕರ್


----» ತಪ್ಪು - ತಿದ್ದುಪಡಿಗಳಿದ್ದಲ್ಲಿ, ಹೊಸ ಸೇರ್ಪಡೆಗಳಾಗಬೇಕಿದ್ದಲ್ಲಿ ದಯವಿಟ್ಟು ಕಮೆಂಟ್ ಗಳ ಮೂಲಕ ನನ್ನ ಗಮನಕ್ಕೆ ತರಬೇಕೆಂದು ವಿನಂತಿ.      

3 comments:

  1. Theosophical society is established by col Olcott and madam blovodtky n new York and thereafter shifted to adyar.

    ReplyDelete
  2. Theosophical society is established by col Olcott and madam blovodtky n new York and thereafter shifted to adyar.

    ReplyDelete
  3. This comment has been removed by the author.

    ReplyDelete