☀️. ಸರಿಯುತ್ತರಗಳೋಂದಿಗೆ... ಕರ್ನಾಟಕ ಪೋಲೀಸ್ ಸಬ್ ಇನ್ ಸಪೆಕ್ಟರ್ (K-PSI) - ಸಾಮಾನ್ಯ ಅಧ್ಯಯನ ಮಾದರಿ ಪ್ರಶ್ನೆ ಪತ್ರಿಕೆ -1-2015
(Karnataka Police Sub-Inspector General Studies Model Question Paper-1-2015)
━━━━━━━━━━━━━━━━━━━━━━━━━━━━━━━━━━━━━━━━━━━━━━━━
●.ಸೂಚನೆಗಳು :
★ ಇಲ್ಲಿ ತಯಾರಿಸಲಾದ ಪೋಲೀಸ್ ಸಬ್ ಇನ್ ಸಪೆಕ್ಟರ್ (K-PSI) - 2015 ಸಾಮಾನ್ಯ ಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ 1 ಯು ಈ ಪರೀಕ್ಷೆಗಷ್ಟೇ ಸೀಮಿತಗೊಳಪಡಿಸದೇ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುವ ದೃಷ್ಟಿಯಿಂದ ತಯಾರಿಸಲಾಗಿದೆ.
★ ಹಿಂದೆ ನಡೆಸಲ್ಪಟ್ಟ ಪ್ರಶ್ನೆ ಪತ್ರಿಕೆಯನ್ನುಗಮನದಲ್ಲಿಡ್ಟುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಈ ಮಾದರಿ ಪ್ರಶ್ನೆ ಪತ್ರಿಕೆ 1ಯನ್ನು ತಯಾರಿಸಲಾಗಿದ್ದು, ಏನಾದರೂ ಪ್ರಮಾದ ಕಂಡುಬಂದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿಸಿಕೊಳ್ಳುವೆ.
★ ನಿಮ್ಮ ಕೌಶಲ್ಯಕ್ಕಾಗಿಯೇ ನಾನು ಉತ್ತರಗಳನ್ನು ಇಲ್ಲಿ ಪ್ರಕಟಿಸಿಲ್ಲ. ಶೀಘ್ರದಲ್ಲಿಯೇ ಉತ್ತರಗಳನ್ನೂ ನಿಮ್ಮ ಮುಂದಿಡುವೆ.
★ ತಾವು ನಿಮ್ಮ ಸರಿ ಉತ್ತರಗಳನ್ನು ನನಗೆ ಕಮೆಂಟ್ ಮೂಲಕ ತಿಳಿಸಿ.
★ ಹೆಚ್ಚಿನ ಮಾಹಿತಿಗಾಗಿ ಈ ಮೊದಲು ಪ್ರಕಟಿಸಿದ ಎಸ್.ಡಿ.ಎ (SDA) ಮತ್ತು ಎಫ್.ಡಿ.ಎ (FDA) -2015 ಮಾದರಿ ಪ್ರಶ್ನೆ ಪತ್ರಿಕೆಯನ್ನು ಕೂಡಾ ಅವಲೋಕಿಸಿ. ಇದರಲ್ಲಿರವ ಕೆಲವು ಪ್ರಶ್ನೆಗಳು ಕೂಡಾ ಮುಂಬರುವ ಪರೀಕ್ಷೆಗಳಿಗೆ ಸಂಭವನೀಯ.
★ ಅತೀ ಶೀಘ್ರದಲ್ಲಿಯೇ---- "ಪೋಲೀಸ್ ಸಬ್ ಇನ್ ಸಪೆಕ್ಟರ್ (K-PSI) - 2015 ಸಾಮಾನ್ಯ ಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ 2"
— ನಿಮ್ಮ ಸಲಹೆಗಳು ನನಗೆ ಅತ್ಯಮೂಲ್ಯವಾದವುಗಳು.
••━━━━━━━━━━━━━━━━━━━━━━━━━━━━━━━━━━━━━━━━━━━━━••
ಪ್ರಶ್ನೆ ನಂ: 1) ಆಧುನಿಕ ಪೇಷವರ ಎಂದು ಕರೆಯಲ್ಪಡುತ್ತಿದ್ದ ಪ್ರದೇಶ ಯಾವುದು?
A] ಉಜ್ಜಯಿನಿ
B] ಗಾಂಧಾರ√
C] ವಿಕ್ರಮಶಿಲಾ
D] ತಕ್ಷಶಿಲಾ
ಪ್ರಶ್ನೆ ನಂ: 2) ರಕ್ತಹೀನತೆ ಹಾಗೂ ಬಿಳಿ ರಕ್ತ ಕಣಗಳ (RBC) ಯ ಹಾನಿಯು ಯಾವ ವಿಟಾಮಿನ್ ಕೊರತೆಯಿಂದ ಉಂಟಾಗುತ್ತದೆ?
A] ಜೀವಸತ್ವ B1
B] ಜೀವಸತ್ವ C
C] ಜೀವಸತ್ವ B12 √
D] ಜೀವಸತ್ವ K
ಪ್ರಶ್ನೆ ನಂ: 3) ಪ್ರಸ್ತುತ ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡವರು ಯಾರು?
A] ಓಂ ಪ್ರಕಾಶ್√
B] ಕೃಷ್ಣನ್ ಪಾಲ್
C] ಕಲ್ ರಾಜ್ ಮಿಶ್ರಾ
D] ಸುರ್ಜಿತ್ ಪ್ರಕಾಶ್
ಪ್ರಶ್ನೆ ನಂ: 4) ಉಭಯ ಕವಿ ಚಕ್ರವರ್ತಿ ಬಿರುದುಳ್ಳ ಕವಿ ಯಾರು?
A] ಪಂಪ
B] ಪೊನ್ನ√
C] ರನ್ನ
D] ರಾಘವಾಂಕ
ಪ್ರಶ್ನೆ ನಂ: 5) ಅರಣ್ಯ ಸ್ಥಿತಿಗತಿ ವರದಿ 2011 ರ ಪ್ರಕಾರ ಭಾರತದ ವಿಸ್ತೀರ್ಣವನ್ನು ಆವರಿಸಿರುವ ಅರಣ್ಯ ಪ್ರಮಾಣ ಎಷ್ಟು?
A] 16.5%
B] 17.18%
C] 18.48%
D] 21.05%√
ಪ್ರಶ್ನೆ ನಂ: 6) 2015 ರಲ್ಲಿ ಅಂತರಾಷ್ಟ್ರೀಯ ಒಲಂಪಿಕ್ಸ ಸಮೀತಿಗೆ ಸೇರ್ಪಡೆಗೊಂಡ 206ನೇ ರಾಷ್ಟ್ರ ಯಾವುದು?
A] ಲಾಟ್ವಿಯಾ
B] ದಕ್ಷಿಣ ಸೂಡನ್√
C] ಥೈಲ್ಯಾಂಡ್
D] ಲಿಥುವೇನಿಯಾ
ಪ್ರಶ್ನೆ ನಂ: 7) ಅತಿ ಹೆಚ್ಚು ಬಾರಿ ರಾಷ್ಟ್ರಪತಿ ಆಡಳಿತಕ್ಕೆ ಒಳಪಟ್ಟ ರಾಜ್ಯ ಯಾವುದು?
A] ಕರ್ನಾಟಕ
B] ಪಂಜಾಬ್
C] ಉತ್ತರ ಪ್ರದೇಶ√
D] ತಮಿಳುನಾಡು
ಪ್ರಶ್ನೆ ನಂ: 8) 'ನೀಲ ದರ್ಪಣ್ ಮಿತ್ರ' ಎಂಬ ಕೃತಿ ರಚಿಸಿದವರು ಯಾರು?
A] ವಿಷ್ಣು ಬಿಸ್ವಾಸ್
B] ದೀನ ಬಂಧುಮಿತ್ರ √
C] ಕೇಸಬ್ ಚಂದ್ರ ಸೇನ್
D] ಅರವಿಂದೋ ಘೋಷ್
ಪ್ರಶ್ನೆ ನಂ: 9) 'ಹಮ್ಮುರಬಿ ಕೋಡ್' ಗಳಿಂದ ಪ್ರಸಿದ್ಧನಾದ ಹಮ್ಮುರಬಿಯು ಯಾವ ಜನಾಂಗದ ನಾಗರಿಕತೆಗೆ ಸಂಬಂಧಿಸಿದ ಪ್ರಸಿದ್ದ ಅರಸನಾಗಿದ್ದನು ?
A] ಸುಮೇರಿಯನ್ನರು
B] ಬಾಬಿಲೋನಿಯನ್ನರು√
C] ಅಸ್ಸೀರಿಯನ್ನರು
D] ಚಾಲ್ಡಿಯನ್ನರು
ಪ್ರಶ್ನೆ ನಂ: 10) ಭಾರತ ಸರ್ಕಾರದ ಕೆಳಕಂಡ ಯಾವ ಯೋಜನೆ ಅತಿದೊಡ್ಠ ನೇರ ನಗದು ವರ್ಗಾವಣೆ ಎಂಬ ಖ್ಯಾತಿಯ ಮೂಲಕ ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ನಮೂದಾಯಿತು?
A] ಪಹಲ್√
B] ಅಟಲ್ ಪೆನ್ಶನ್ ಯೋಜನೆ
C] ಮನರೇಗಾ
D] ಜನಧನ್ ಯೋಜನೆ
ಪ್ರಶ್ನೆ ನಂ: 11) ಹ್ಯಾಂಡ್ ಇನ್ ಹ್ಯಾಂಡ್ -2015' ಹೆಸರಿನ ಜಂಟಿ ಸಮರಾಭ್ಯಾಸ ಯಾವ ಎರಡು ರಾಷ್ಟ್ರಗಳ ನಡುವೆ ನೆಡದಿದೆ?
ಭಾರತ-ಚೀನಾ√
ಭಾರತ-ಶ್ರೀಲಂಕಾ
ಚೀನಾ-ಶ್ರೀಲಂಕಾ
ಪಾಕಿಸ್ತಾನ-ಚೀನಾ
ಪ್ರಶ್ನೆ ನಂ: 12) ಕರ್ನಾಟಕವನ್ನಾಳಿದ ಮನೆತನಗಳಲ್ಲಿಯೇ ದೀರ್ಘಕಾಲ ಆಳ್ವಿಕೆ ನಡೆಸಿದ ಮನೆತನ ಯಾವುದು?
A] ಶಾತವಾಹನರು
B] ತಲಕಾಡಿನ ಗಂಗರು √
C] ಕದಂಬರು
D] ಬಾದಾಮಿ ಚಾಲುಕ್ಯರು
ಪ್ರಶ್ನೆ ನಂ: 13) ಈ ಕೆಳಕಂಡ ಯಾವುದಕ್ಕೆ "ಪ್ಲಾನಿಮೀಟರ್" ಅನ್ನು ಬಳಸಲಾಗುತ್ತದೆ ?
A] ನಕಾಶೆಯಲ್ಲಿನ ವಿಸ್ತೀರ್ಣ ಅಳೆಯಲು
B] ನಕಾಶೆಯಲ್ಲಿನ ದೂರ ಮತ್ತು ಅಂತರ ಅಳೆಯಲು√
C] ನಕಾಶೆಯಲ್ಲಿನ ದಿಕ್ಕು ಅಳೆಯಲು
D] ನಕ್ಷೆಯಲ್ಲಿನ ಅಕ್ಷಾಂಶ ಮತ್ತು ರೇಖಾಂಶಗಳನ್ನು ಅಳೆಯಲು
ಪ್ರಶ್ನೆ ನಂ: 14) ದೇಶದ ಮೊದಲ ಡಿಜಿಟಲ್ ಗ್ರಾಮ ಎಂದು ಪ್ರಸಿದ್ಧಿಗೆ ಕಾರಣವಾಗುತ್ತಿರುವ ರಾಜ್ಯದ ಗ್ರಾಮ ಯಾವುದು?
A] ಬಾನೂರು
B] ರಾಮಪೂರ
C] ಬೀಳಗಿ
D] ಬಾಡಗಂಡಿ √
ಪ್ರಶ್ನೆ ನಂ: 15) 2014ನೇ ಸಾಲಿನ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಪ್ರಬಂಧ ಕೃತಿ 'ಉತ್ತರಾರ್ಧ' ದ ಲೇಖಕರು ಯಾರು?
A] ಪ್ರೊ.ಚಂದ್ರಶೇಖರ್ ಪಾಟೀಲ
B] ಡಾ. ಜಿ. ಎಚ್. ನಾಯಕ √
C] ಡಾ. ಎಂ. ಎಂ. ಕಲಬುರ್ಗಿ
D] ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ
ಪ್ರಶ್ನೆ ನಂ: 16) ಯಾವ ಕಾಯ್ದೆಯ ವಿರುದ್ಧ ಪ್ರತಿಭಟಿಸಿ ರವೀಂದ್ರನಾಥ ಟ್ಯಾಗೂರರು ತಮಗೆ ನೀಡಿದ್ದ ನೈಟ್ ಹುಡ್ ಪ್ರಶಸ್ತಿಯನ್ನು ಹಿಂತಿರುಗಿಸಿದರು?
A] ಪಿಟ್ ಇಂಡಿಯಾ ಕಾಯ್ದೆ
B] ರೌಲತ್ ಕಾಯ್ದೆ√
C] ಮಾರ್ಲೆ-ಮಿಂಟೋ ಕಾಯ್ದೆ
D] ಸೈಮನ್ ಕಮಿಷನ್
ಪ್ರಶ್ನೆ ನಂ: 17) ಇತ್ತೀಚೆಗೆ ವಿಶ್ವಬ್ಯಾಂಕ್ ಪ್ರಕಟಿಸಿರುವ ವಾರ್ಷಿಕ ವರದಿಯಲ್ಲಿ ಸುಗಮ ವ್ಯಾಪಾರ–ವಹಿವಾಟಿಗೆ ಅನುವು ಮಾಡಿಕೊಡುವ 189 ದೇಶಗಳ ಪಟ್ಟಿಯಲ್ಲಿ ಭಾರತವು ಏಷ್ಟನೇ ಸ್ಥಾನ ಪಡೆದಿದೆ?
A] 130ನೇ ಸ್ಥಾನ√
B] 135ನೇ ಸ್ಥಾನ
C] 140ನೇ ಸ್ಥಾನ
D] 142ನೇ ಸ್ಥಾನ
ಪ್ರಶ್ನೆ ನಂ: 18) ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳಲ್ಲಿದ್ದ ಆಸ್ತಿಯ ಹಕ್ಕನ್ನು (Right to property) ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು ?
A] 42 ನೇ ತಿದ್ದುಪಡಿ
B] 69 ನೇ ತಿದ್ದುಪಡಿ
C] 44 ನೇ ತಿದ್ದುಪಡಿ √
D] 61 ನೇ ತಿದ್ದುಪಡಿ
ಪ್ರಶ್ನೆ ನಂ: 19) ಕುಶಾನರ ಪ್ರಸಿದ್ದ ಅರಸನಾದ ಕಾನಿಷ್ಕನ ಕಾಲದಲ್ಲಿ ಸಂಭವಿಸಿದ ಘಟನಾವಳಿಗಳ ಕುರಿತು ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ?
1.ನಾಲ್ಕನೇ ಬೌದ್ಧ ಸಮ್ಮೇಳನ ನಡೆಯಿತು
2.ಹೀನಾಯಾನ ಮತ್ತು ಮಹಾಯಾನಗಳೆಂದು ಬೌದ್ಧಧರ್ಮ ಇಬ್ಭಾಗವಾಯಿತು.
3.ಪ್ರಥಮ ಬಾರಿಗೆ ಬುದ್ದನ ವಿಗ್ರಹರಾಧನೆ ಪ್ರಾರಂಭಗೊಂಡಿದ್ದು ಈ ರಾಜನ ಕಾಲದಲ್ಲಿ
4.ಕ್ರಿ.ಶ.78 ಹೊಸ ಶಕ ವರ್ಷವನ್ನು ಆರಂಭಿಸಿದ
-ಸಂಕೇತಗಳು
A] 1, 2 ಮತ್ತು 3 ಮಾತ್ರ
B] 2 ಮತ್ತು 3 ಮಾತ್ರ
C] 1 ಮತ್ತು 4 ಮಾತ್ರ
D] ಎಲ್ಲವೂ ಸರಿ.√
ಪ್ರಶ್ನೆ ನಂ: 20) ಇತ್ತಿಚೆಗೆ ಕರ್ನಾಟಕ ರಾಜ್ಯದ ಅಡ್ವೊಕೇಟ್ ಜನರಲ್ ಆಗಿ ನೇಮಕವಾದವರು ಯಾರು?
A] ರವಿವರ್ಮ ಕುಮಾರ್
B] ಮನೋಹರ್ ನಾಯಕ್
C] ಎಚ್.ಆರ್.ನಾಯಕ್
D] ಮಧುಸೂದನ್ ನಾಯಕ್√
ಪ್ರಶ್ನೆ ನಂ: 21) ಮಂಜಿನ ಮೂಲಕ ಏನೂ ಕಾಣಿಸುವುದಿಲ್ಲ. ಏಕೆಂದರೆ..
A] ಮಂಜಿನಲ್ಲಿರುವ ಹನಿಬಿಂದುಗಳು ಬೆಳಕನ್ನು ಚದುರಿಸುತ್ತವೆ
B] ಮಂಜಿನ ವಕ್ರೀಭವನ ಸೂಚಿಯು ಅಪರಿಮಿತ
C] ಮಂಜಿನಲ್ಲಿರುವ ಹನಿಬಿಂದುಗಳಲ್ಲಿ ಬೆಳಕು ಸಂಪೂರ್ಣ ಪ್ರತಿಫಲನಕ್ಕೆ ಗುರಿಯಾಗುತ್ತದೆ
D] ಮಂಜು ಬೆಳಕನ್ನು ಹೀರಿಕೊಳ್ಳುತ್ತದೆ√
ಪ್ರಶ್ನೆ ನಂ: 22) ಹೊಂದಿಸಿ ಬರೆಯಿರಿ.
ರಾಷ್ಟ್ರೀಯ ಟ್ರೋಫಿಗಳು ಆಟಗಳು
ಎ) ಅಗಾ ಖಾನ್ ಕಪ್ 1) ಕ್ರಿಕೆಟ್
ಬಿ) ದುಲೀಪ್ ಟ್ರೋಫಿ 2) ರೋಯಿಂಗ್
ಸಿ) ಡ್ಯುರಾಂಡ್ ಕಪ್ 3) ಫುಟ್ಬಾಲ್
ಡಿ) ನೆಹರು ಕಪ್ 4) ಹಾಕಿ
ಇ) ವೆಲ್ಲಿಂಗ್ಟನ್ ಟ್ರೋಫಿ 5) ಫುಟ್ಬಾಲ್
— ಸಂಕೇತಗಳು
A] ಎ-1. ಬಿ-2. ಸಿ -3. ಡಿ-5. ಇ-4
B] ಎ-4. ಬಿ-1. ಸಿ-5. ಡಿ-3. ಇ-2√
C] ಎ -2. ಬಿ-4. ಸಿ -1. ಡಿ-3. ಇ-5
D] ಎ-1. ಬಿ-5. ಸಿ -2. ಡಿ-4. ಇ-3
ಪ್ರಶ್ನೆ ನಂ: 23) ಜಮೀನ್ದಾರಿ ವ್ಯವಸ್ಥೆ : ಕಾರ್ನ್ ವಾಲೀಸ್ : : ರಾಯತ್ವಾರಿ ವ್ಯವಸ್ಥೆ _?
A] ಥಾಮಸ್ ಮುನ್ರೋ√
B] ಲಾರ್ಡ್ ವೆಲ್ಲೇಸ್ಲಿ
C] ವಾರನ್ ಹೇಸ್ಟಿಂಗ್ಸ್
D] ಲಾರ್ಡ್ ಹೇಸ್ಟಿಂಗ್
ಪ್ರಶ್ನೆ ನಂ: 24) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಸಮ್ಮೇಳನವು ಯಾವ ವೈಸರಾಯ್ ನ ಕಾಲದಲ್ಲಿ ನಡೆಯಿತು?
A] ಲಾರ್ಡ್ ಡರ್ಫಿನ್√
B] ಲಾರ್ಡ್ ಕ್ಯಾನಿಂಗ್
C] ಲಾರ್ಡ್ ಮಿಂಟೋ
D] ಲಾರ್ಡ್ ಲಿಲಿಂತ್ಸೋ
ಪ್ರಶ್ನೆ ನಂ: 25) ಕಾವೇರಿ ನದಿಯ ಹರಿವು ಒಟ್ಟು ಎಷ್ಟು ಕಿ.ಮೀ. ಹರಡಿದೆ?
A] 705ಕಿ.ಮೀ
B] 785ಕಿ.ಮೀ
C] 805ಕಿ.ಮೀ √
D] 858ಕಿ.ಮೀ
ಪ್ರಶ್ನೆ ನಂ: 26) ಪ್ರಸ್ತುತ ಏಷ್ಯಾ ಅಭಿವೃದ್ಧಿ ಬ್ಯಾಂಕ್ (ADB) ಅಧ್ಯಕ್ಷರು ಯಾರು?
A] ಕ್ಸಿಯಾನ್ ನಕಾವೊ
B] ನಕಾವೊ ಚಾಂಗ್
C] ಲಿಯಾತ್ ನಕಾವೊ
D] ಟಕೆಹಿಕೊ ನಕಾವೊ√
ಪ್ರಶ್ನೆ ನಂ: 27) ಭೂಮಿಯ ಒಳಗಡೆ ಯಾವುದೇ ಒಂದು ಬಿಂದುವಿನಲ್ಲಿ ಗುರುತ್ವಾಕರ್ಷಣೆಯು,
A] ಭೂ ಕೇಂದ್ರದಿಂದ ಇರುವ ದೂರದ ವರ್ಗದ ವಿಲೋಮಾನುಪಾತದಲ್ಲಿ ಬದಲಾಗುತ್ತದೆ√
B] ಭೂ ಕೇಂದ್ರದಿಂದ ಇರುವ ದೂರವನ್ನು ಅವಲಂಬಿಸಿರುವುದಿಲ್ಲ
C] ಭೂ ಕೇಂದ್ರದಿಂದ ಇರುವ ದೂರ ಹೆಚ್ಚಾದಂತೆ ಹೆಚ್ಚುತ್ತದೆ
D] ಭೂ ಕೇಂದ್ರದಿಂದ ಇರುವ ದೂರದ ವಿಲೋಮಾನುಪಾತದಲ್ಲಿ ಬದಲಾಗುತ್ತದೆ
ಪ್ರಶ್ನೆ ನಂ: 28) ಈ ಕೆಳಗಿನವುಗಳಲ್ಲಿ ಸರಿಯಾದುದನ್ನು ಆಯ್ಕೆಮಾಡಿ
1.ವೇದಗಳನ್ನು ಸಂಹಿತೆಗಳು ಎಂದೂ ಕರೆಯುವರು
2.ಆರ್ಯರು ಕರ್ಮಸಿದ್ದಾಂತದಲ್ಲಿ ನಂಬಿಕೆ ಹೊಂದಿದ್ದರು
— ಸಂಕೇತಗಳು
A. 1 ಮಾತ್ರ
B. 2 ಮಾತ್ರ
C. 1 ಮತ್ತು 2√
D. ಯಾವುದು ಸರಿ ಅಲ್ಲ
ಪ್ರಶ್ನೆ ನಂ: 29) ಮಣ್ಣಿನ ಮಡಿಕೆ ತಯಾರಿಕೆ ಪ್ರಾರಂಭವಾದದ್ದು ಯಾವ ಯುಗದಲ್ಲಿ?
A] ನವ ಶಿಲಾಯುಗ√
B] ಮಧ್ಯ ಶಿಲಾಯುಗ
C] ಹಳೆಶಿಲಾಯುಗ
D] ಕಂಚಿನ ಯುಗ
ಪ್ರಶ್ನೆ ನಂ: 30) ಭಾರತದಲ್ಲಿ ಹಣದುಬ್ಬರವನ್ನು ಅಳೆಯಲು ಬಳಸುವ ಅಳತೆಗೋಲು ?
A] ಚಿಲ್ಲರೆ ಮಾರಾಟ
B] ಗ್ರಾಹಕರ (ಕೊಳ್ಳುವ ಸೂಚ್ಯಂಕ) ಬೆಲೆಸೂಚಿ
C] ಸಗಟು (ಮಾರಾಟ ಸೂಚ್ಯಂಕ) ಬೆಲೆಸೂಚಿ√
D] ಉತ್ಪಾದಕರ ಬೆಲೆಸೂಚಿ
ಪ್ರಶ್ನೆ ನಂ: 31) ಹೊಸದಾಗಿ ಜಾರಿಗೆ ಬರಲಿರುವ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಯ ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1.ಇಡೀ ವಿಶ್ವದಲ್ಲೇ ಪ್ರಪ್ರಥಮವಾಗಿ ಈ ಪದ್ಧತಿಯನ್ನು ಅಳವಡಿಸಿಕೊಂಡಿದ್ದು ಫ್ರಾನ್ಸ್.
2.ಸದ್ಯಕ್ಕೆ 119 ಮಾದರಿ ಸೇವಾ ಚಟುವಟಿಕೆಗಳು ಈ ಹೊಸ ತೆರಿಗೆ ಪದ್ಧತಿಯ ವ್ಯಾಪ್ತಿಗೆ ಒಳಪಟ್ಟಿವೆ.
3.ಸೇವೆಗಳಿಗೆ ವಿಧಿಸಲಾಗುವ ತೆರಿಗೆ ದರ ಶೇ 12 ಮತ್ತು ಸೆಸ್ ಒಳಗೊಂಡಿರುತ್ತದೆ.
4.18 ವಿಧದ ಸೇವಾ ಚಟುವಟಿಕೆಗಳು ಈ ತೆರಿಗೆ ಪದ್ಧತಿಯಿಂದ ವಿನಾಯ್ತಿ ಪಡೆದಿವೆ.
ಈ ಮೇಲಿನವುಗಳಲ್ಲಿ ಯಾವುದು ಸರಿಯಾದುದು?
— ಸಂಕೇತಗಳು
A] 1, 2 ಮತ್ತು 4 ಮಾತ್ರ
B] 1,3 ಮತ್ತು 4 ಮಾತ್ರ
C] 1 ಮತ್ತು 3 ಮಾತ್ರ
D] ಎಲ್ಲವೂ ಸರಿ.√
ಪ್ರಶ್ನೆ ನಂ: 32) ಈ ಕೆಳಗಿನವುಗಳಲ್ಲಿ ಸರಿಯಾದುದನ್ನು ಆಯ್ಕೆಮಾಡಿ.
1.ಪಶ್ಚಿಮದಿಂದ ಪೂರ್ವಕ್ಕೆ ಎಳೆಯಲಾದ ಅಡ್ದರೇಖೆಗಳನ್ನು ಅಕ್ಷಾಂಶಗಳೆಂದು ಕರೆಯುತ್ತಾರೆ.
2.ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೆ ಎಳೆಯಲಾಗಿರುವ ಉದ್ದದ ರೇಖೆಗಳನ್ನು ರೇಖಾಂಶಗಳೆಂದು ಕರೆಯುವರು.
— ಸಂಕೇತಗಳು
A. 1 ಮಾತ್ರ
B. 2 ಮಾತ್ರ
C. 1 ಮತ್ತು 2√
D. ಯಾವುದು ಸರಿ ಅಲ್ಲ
ಪ್ರಶ್ನೆ ನಂ: 33) ಸಂವಿಧಾನದ ಯಾವ ವಿಧಿಯು 14 ವರ್ಷದ ಕೆಳಗಿನ ಎಲ್ಲಾ ಮಕ್ಕಳಿಗೆ 'ಉಚಿತ ಹಾಗೂ ಕಡ್ಡಾಯ ಶಿಕ್ಷಣ' ವನ್ನು ಒದಗಿಸುವ ಕುರಿತು ತಿಳಿಸುತ್ತದೆ?
A] 42 ನೇ ವಿಧಿ.
B] 45 ನೇ ವಿಧಿ.√
C] 69 ನೇ ವಿಧಿ.
D] 86 ನೇ ವಿಧಿ.
ಪ್ರಶ್ನೆ ನಂ: 34) ಹೊಂದಿಸಿ ಬರೆಯಿರಿ.
ದೇಶ ಗುಪ್ತಚರ ಸಂಸ್ಥೆಗಳು
ಎ) ಪಾಕಿಸ್ತಾನ 1) ಇಂಟರ್ ಸರ್ವಿಸಸ್ ಇಂಟಲಿಜೆನ್ಸ್ (ISI)
ಬಿ) ಇರಾಕ್ 2) ಡಿ.ಜಿ.ಎಸ್.ಇ (DGSE)
ಸಿ) ಫ್ರಾನ್ಸ್ 3) ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (FBI).
ಡಿ) ಜಪಾನ್ 4) ನೈಕೊ
ಇ) ಯು.ಎಸ್.ಎ 5) ಎಐ ಮುಕ್ಬರಾತ್.
—ಸಂಕೇತಗಳು
A] ಎ-1. ಬಿ-2. ಸಿ -3. ಡಿ-5. ಇ-4
B] ಎ-1. ಬಿ-4. ಸಿ-5. ಡಿ-3. ಇ-2
C] ಎ -2. ಬಿ-4. ಸಿ -1. ಡಿ-3. ಇ-5
D] ಎ-1. ಬಿ-5. ಸಿ -2. ಡಿ-4. ಇ-3√
ಪ್ರಶ್ನೆ ನಂ: 35) ಗರ್ಭಿಣಿ ಸ್ತ್ರೀಯರನ್ನು ಪರೀಕ್ಷೆ ಮಾಡಲು ಉಪಯೋಗಿಸುವ ಶ್ರವಣಾತೀತ ಶಬ್ದದ ಆವೃತ್ತಿ ಎಷ್ಟು ಇರುತ್ತದೆ.?
A] 19KHZ
B] 20 HZ
C] 30HZ
D] 30KHZ√
ಪ್ರಶ್ನೆ ನಂ: 36) ಗ್ರೀಕ್ ನ ಪ್ರಸಿದ್ದ ಮಹಾ ಕಾವ್ಯಗಳಾದ 'ಇಲಿಯಡ್ ಮತ್ತು ಒಡಿಸ್ಸಿ' ಕೃತಿಗಳನ್ನು ರಚಿಸಿದ ಪ್ರಸಿದ್ದ
ಕವಿ ಯಾರು?
A] ಪ್ಲೇಟೋ
B] ಅರಿಸ್ಟಾಟಲ್
C] ಹೋಮರ್√
D] ಪೆರಿಕ್ಲಿಸ್
ಪ್ರಶ್ನೆ ನಂ: 37) ಹೊಂದಿಸಿ ಬರೆಯಿರಿ.
ಕ್ರೀಡೆಗಳು ಕ್ರೀಡಾ ಶಬ್ಧಗಳು
ಎ) ಬ್ಯಾಡ್ಮಿಂಟನ್ 1) ಡ್ಯೂಸ್
ಬಿ) ಬಿಲಿಯರ್ಡ್ಸ್ 2) ಜಿಗ್ಗರ್
ಸಿ) ಬಾಕ್ಸಿಂಗ್ 3) ಹುಕ್
ಡಿ) ಫುಟ್ಬಾಲ್ 4) ಸಡನ್ ಡೆತ್
ಇ) ಹಾಕಿ 5) ಡ್ರಿಬ್ಬಲ್
— ಸಂಕೇತಗಳು
A] ಎ-1. ಬಿ-2. ಸಿ -3. ಡಿ-5. ಇ-4√
B] ಎ-4. ಬಿ-1. ಸಿ-5. ಡಿ-3. ಇ-2
C] ಎ -2. ಬಿ-4. ಸಿ -1. ಡಿ-3. ಇ-5
D] ಎ-1. ಬಿ-5. ಸಿ -2. ಡಿ-4. ಇ-3
ಪ್ರಶ್ನೆ ನಂ: 38) ಮೌರ್ಯರ ಪ್ರಸಿದ್ಧ ಅರಸ ಅಶೋಕನ ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಶಾಸನ ಯಾವುದು?
A] ಮಸ್ಕಿ ಶಾಸನ
B]13 ನೇ ಶಿಲಾ ಶಾಸನ√
C] ಗಿರ್ನಾರ್ ಶಾಸನ
D] ಬಬ್ರುಶಾಸನ
ಪ್ರಶ್ನೆ ನಂ: 39) ಯುನೆಸ್ಕೊದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಪೂರ್ವೇತಿಹಾಸದ ನಿವೇಶನ ಯಾವುದು?
A] ಆಡಮ್ ಪುರ್
B] ಬುರ್ಜಾಹಾಮ್
C] ಭೀಮಬೆಟ್ಕಾ √
D] ಜೋಪಾನಿಮಂಡಡು
ಪ್ರಶ್ನೆ ನಂ: 40) ಇತ್ತೀಚೆಗೆ ಭಾರತದ ಅಣುಶಕ್ತಿ ಆಯೋಗದ ಮುಖ್ಯಸ್ಥರಾಗಿ ನೇಮಕಗೊಂಡವರು ಯಾರು ?
A] ಶೇಖರ್ ಬಸು√
B] ಅರವಿಂದ್ ಛಬ್ರಿಯಾ
C] ವಸುಮತಿ ಉಡುಪ
D] ನಾರಾಯಣ್ ಶಿಂಧೆ
ಪ್ರಶ್ನೆ ನಂ: 41) 'ತ್ರೈ ಸಮುದ್ರ ತೋಯಾ ಪಿತಾವಾಹನ' ಎಂಬ ಬಿರುದು ಹೊಂದಿದ ಅರಸ ಯಾರು?
A] ಪುಲುಮಾವಿ
B] ಗೌತಮೀಪುತ್ರ ಶಾತಕರ್ಣಿ √
C] ಸಿಮುಖ
D] ಒಂದನೇ ಶಾತಕರ್ಣಿ
ಪ್ರಶ್ನೆ ನಂ: 42) ಈ ಕೆಳಕಂಡವರಲ್ಲಿ ಮೈಸೂರಿನ ಕೊನೆಯ ದಿವಾನರಾಗಿದ್ದವರು ಯಾರು?
A] ಅರ್ಕಾಟ ರಾಮಸ್ವಾಮಿ ಮೊದಲಿಯಾರ್√
B] ಸರ್ ಮಿರ್ಜಾ ಇಸ್ಮಾಯಿಲ್
C] ಶೇಷಾದ್ರಿ ಅಯ್ಯರ್
D] ಸಿ. ರಂಗಾಚಾರ್ಯ
ಪ್ರಶ್ನೆ ನಂ: 43) ರೆಫ಼್ರಿಜರೇಟರ್ ಯಾವ ತತ್ವದ ಮೇಲೆ ಕೆಲಸ ಮಾಡುತ್ತದೆ?
A] ಉಷ್ಣಬಲ ಕ್ರಿಯಾ ಶಾಸ್ತ್ರದ 1 ನೇ ನಿಯಮ
B] ಉಷ್ಣಬಲ ಕ್ರಿಯಾ ಶಾಸ್ತ್ರದ 2 ನೇ ನಿಯಮ √
C] ಚೌಲ್ಸ್ ನ ನಿಯಮ
D] ಕೊಲಂಬ್ ನ ನಿಯಮ
ಪ್ರಶ್ನೆ ನಂ: 44) ಪೂರ್ಣಸ್ವರಾಜ್ಯ ಘೋಷಣೆಮಾಡಿ, ಮೊದಲ ಬಾರಿಗೆ ತ್ರಿಮರ್ಣ ಧ್ವಜ ಹಾರಿಸಿ ಸ್ವತಂತ್ರದಿನ ಎಂದು ಘೋಷಿಸಿದ ಸಮಾವೇಶ ಯಾವುದು?
A] ಬನಾರಸ್ ಅಧಿವೇಶನ
B] ತ್ರಿಪುರ ಅಧಿವೇಶನ
C] ಕರಾಚಿ ಅಧಿವೇಶನ
D] ಲಾಹೋರ್ ಅಧಿವೇಶನ√
ಪ್ರಶ್ನೆ ನಂ: 45) ಇತ್ತೀಚೆಗೆ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(UNDP) ಯು ಬಿಡುಗಡೆ ಮಾಡಿದ 2014ನೇ ಸಾಲಿನ ಜಾಗತಿಕ ಮಾನವ ಅಭಿವೃದ್ಧಿ ಸೂಚ್ಯಂಕ ವರದಿಯಲ್ಲಿ ಭಾರತವು ಎಷ್ಟನೇ ಸ್ಥಾನವನ್ನು ಪಡೆದಿದೆ?
A] 130 ನೇ ಸ್ಥಾನ √
B] 131 ನೇ ಸ್ಥಾನ
C] 142 ನೇ ಸ್ಥಾನ
D] 140 ನೇ ಸ್ಥಾನ
ಪ್ರಶ್ನೆ ನಂ: 46) ಭಾರತ ದೇಶದ ಭೂವಿಸ್ತೀರ್ಣ ಪ್ರಪಂಚದ ಭೂಭಾಗದಲ್ಲಿ ಶೇಕಡಾ ಎಷ್ಟಿದೆ?
A] 3.2%
B] 3.4%
C] 2.4%√
D] 3.4%
ಪ್ರಶ್ನೆ ನಂ: 47) ಜೆಟ್ ಇಂಜಿನ್ ಯಾವ ತತ್ವದ ಮೇಲೆ ಕೆಲಸ ಮಾಡುತ್ತದೆ?
A] ಐನ್ ಸ್ಟೈನ್ ಸಂಬಂದ (E=me2)
B] ದ್ರವ್ಯರಾಶಿಯ ಸಂರಕ್ಷಣೆ
C] ಶಕ್ತಿಯ ಸಂರಕ್ಷಣೆ
D] ರೇಖೀಯ ಸಂವೇಗದ ಸಂರಕ್ಷಣೆ √
ಪ್ರಶ್ನೆ ನಂ: 48) ಕುಶಾನರ ಪ್ರಸಿದ್ದ ಅರಸನಾದ ಕಾನಿಷ್ಕನ ಕಾಲದಲ್ಲಿ ಸಂಭವಿಸಿದ ಘಟನಾವಳಿಗಳ ಕುರಿತು ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ?
1.ನಾಲ್ಕನೇ ಬೌದ್ಧ ಸಮ್ಮೇಳನ ನಡೆಯಿತು
2.ಹೀನಾಯಾನ ಮತ್ತು ಮಹಾಯಾನಗಳೆಂದು ಬೌದ್ಧಧರ್ಮ ಇಬ್ಭಾಗವಾಯಿತು.
3.ಪ್ರಥಮ ಬಾರಿಗೆ ಬುದ್ದನ ವಿಗ್ರಹರಾಧನೆ ಪ್ರಾರಂಭಗೊಂಡಿದ್ದು ಈ ರಾಜನ ಕಾಲದಲ್ಲೇ.
4.ಕ್ರಿ.ಶ.78 ಹೊಸ ಶಕ ವರ್ಷವನ್ನು ಆರಂಭಿಸಿದ
-ಸಂಕೇತಗಳು
A] 1, 2 ಮತ್ತು 3 ಮಾತ್ರ
B] 2 ಮತ್ತು 3 ಮಾತ್ರ
C] 1 ಮತ್ತು 4 ಮಾತ್ರ
D] ಎಲ್ಲವೂ ಸರಿ.√
ಪ್ರಶ್ನೆ ನಂ: 49) ಹೊಂದಿಸಿ ಬರೆಯಿರಿ.
ವಸ್ತುಗಳು ಕಾರ್ಬೋಹೈಡ್ರೈಟ್ ಗಳು
ಎ) ಹಣ್ಣು 1) ಸುಕ್ರೋಸ್
ಬಿ) ಗೋಧಿ 2) ಪ್ರುಕ್ಟೋಸ್
ಸಿ) ಕಬ್ಬು 3) ಸೆಲ್ಯೊಲೋಸ್
ಡಿ) ಸಸ್ಯಗಳು 4) ಮಾಲ್ಟೋಸ್
ಇ) ಹಾಲು 5) ಲ್ಯಾಕ್ಟೋಸ್
ಸಂಕೇತಗಳು
A] ಎ-1. ಬಿ-2. ಸಿ -3. ಡಿ-4. ಇ-5
B] ಎ-4. ಬಿ-1. ಸಿ-5. ಡಿ-3. ಇ-2
C] ಎ -2. ಬಿ-4. ಸಿ -1. ಡಿ-3. ಇ-5 √
D] ಎ-1. ಬಿ-5. ಸಿ -2. ಡಿ-4. ಇ-3
ಪ್ರಶ್ನೆ ನಂ: 50) ಮಕರ ಸಂಕ್ರಾಂತಿ ವೃತ್ತ ಮತ್ತು ಕರ್ಕಾಟಕ ಸಂಕ್ರಾಂತಿ ವೃತ್ತದ ನಡುವೆ ಇರುವ ವಲಯಕ್ಕೆ ಏನೆಂದು ಕರೆಯಲಾಗುತ್ತದೆ ?
A] ಉಷ್ಣವಲಯ√
B] ಸಮಶೀತೋಷ್ಣವಲಯ
C] ಶೀತವಲಯ
D] ಟಂಡ್ರಾ
ಪ್ರಶ್ನೆ ನಂ: 51) ಜಮೈಕಾದ ಲೇಖಕ ಮರ್ಲೊನ್ ಜೇಮ್ಸ್ ಅವರ ಯಾವ ಕಾದಂಬರಿಗೆ 2015ನೇ ಸಾಲಿನ ಮ್ಯಾನ್ ಬುಕರ್ ಪುರಸ್ಕಾರ ಸಂದಿದೆ?
A] ಎ ಬ್ರೀಫ್ ಹಿಸ್ಟರಿ ಆಫ್ ಸೆವೆನ್ ಕಿಲ್ಲಿಂಗ್ಸ್√
B] ದ ಇಯರ್ ಆಫ್ ರನ್ ಅವೇಸ್’
C] ಸ್ಯಾಟಿನ್ ಐಲೆಂಡ್
D] ಎ ಲಿಟಲ್ ಲೈಫ್
ಪ್ರಶ್ನೆ ನಂ: 52) ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಚೀನಿಯಾತ್ರಿಕ ಯಾರು?
A] ಹ್ಯೂಯನ್ ತ್ಸಾಂಗ್
B] ಮೆಗಸ್ತಾನಿಸ್
C] ಮೆಗಾಸ್ತಾನಿಸ್
D] ಫಾಹಿಯಾನ್√
ಪ್ರಶ್ನೆ ನಂ: 53) ಭಾರತದ ಸಂವಿಧಾನದ ಯಾವ ಅನುಚ್ಚೇದವು ತಿದ್ದುಪಡಿಗೆ ಸಂಬಂಧಿಸಿದಂತೆ ಉಪಬಂಧಗಳೊಂದಿಗೆ ವ್ಯವಹರಿಸುತ್ತದೆ?
A] 137 ನೇ ಅನುಚ್ಛೇದ
B] 320 ನೇ ಅನುಚ್ಛೇದ
C] 210 ನೇ ಅನುಚ್ಛೇದ
D] 368ನೇ ಅನುಚ್ಛೇದ√
ಪ್ರಶ್ನೆ ನಂ: 54) ಇತ್ತೀಚಿಗೆ 24ನೇ ವ್ಯಾಸ್ ಸಮ್ಮಾನ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?
A] ಡಾ|| ಎಸ್.ಎಲ್. ಭೈರಪ್ಪ
B] ಸಂಜೀವ್ ಗಲಾಂಡೆ
C] ಕಮಲ್ ಕಿಶೋರ್ ಗೋಯಂಕ್√
D] ವೀರಪ್ಪ ಮೊಯ್ಲಿ
ಪ್ರಶ್ನೆ ನಂ: 55) 1) ಇತ್ತೀಚೆಗೆ ಜಿ-20 ಶೃಂಗಸಭೆ ನಡೆದ ಸ್ಥಳ ಯಾವುದು?
A] ಪ್ಯಾರಿಸ್, ಫ್ರಾನ್ಸ್
B] ಟರ್ಕಿ, ಅಂಟಾಲ್ಯಾ.√
C] ನೈರೋಬಿ , ಕಿನ್ಯಾ.
D] ಮೆಲ್ಬರ್ನ್ನ್, ಆಸ್ಟ್ರೇಲಿಯಾ
ಪ್ರಶ್ನೆ ನಂ: 56) ಸೌರಾಷ್ಟ್ರದಲ್ಲಿ ಸುದರ್ಶನ ಎಂಬ ಸರೋವರವನ್ನು ನಿರ್ಮಿಸಿದ ಚಂದ್ರಗುಪ್ತ ಮೌರ್ಯನ ಅಧಿಕಾರಿಯ ಹೆಸರೇನು?
A] ಪುಷ್ಯಗುಪ್ತ√
B] ರಾಧಗುಪ್ತ
C] ಬಿಲ್ಲಾಟಕ
D] ರುದ್ರದಾಮನ್
ಪ್ರಶ್ನೆ ನಂ: 57) ಈ ಕೆಳಗಿನವುಗಳಲ್ಲಿ ಸರಿಯಾದುದನ್ನು ಆಯ್ಕೆಮಾಡಿ.
1.ಜೂನ್ ತಿಂಗಳಲ್ಲಿ ಉತ್ತರ ಧ್ರುವ ಆರ್ಕಿಟಕನಲ್ಲಿ ಸೂರ್ಯ ಮುಳುಗುವದೇ ಇಲ್ಲ.
2.ಡಿಸೆಂಬರ್ ತಿಂಗಳಲ್ಲಿ ದಕ್ಷಿಣ ಧ್ರುವ ಅಂಟಾರ್ಟಿಕ್ ದಲ್ಲಿ ಸೂರ್ಯ ಮುಳುಗುವದೇ ಇಲ್ಲ.
— ಸಂಕೇತಗಳು
A. 1 ಮತ್ತು 2√
B.1 ಮಾತ್ರ
C. 2 ಮಾತ್ರ
D. ಯಾವುದು ಸರಿ ಅಲ್ಲ.
ಪ್ರಶ್ನೆ ನಂ: 58) ದೇಶದ ಕೇಂದ್ರೀಯ ಚರ್ಮ ಸಂಶೋಧನಾ ಸಂಸ್ಥೆ ( CLRI) ಎಲ್ಲಿದೆ?
A] ಹೈದ್ರಾಬಾದ್
B] ಕಲ್ಕತ್ತಾ
C] ಚೆನ್ನೈ √
D] ಗಾಂಧಿನಗರ.
ಪ್ರಶ್ನೆ ನಂ: 59) ಅಜಂತಾ ಗುಹಾಂತರ ದೇವಾಲಯ ಇವರ ಕಾಲದಿಂದ ಆರಂಭಗೊಂಡಿತು.
A] ಪಲ್ಲವರು
B] ಹೊಯ್ಸಳರು
C] ರಾಷ್ಟ್ರಕೂಟರು
D] ಶಾತವಾಹನರು√
ಪ್ರಶ್ನೆ ನಂ: 60) ರಾಜ್ಯಸಭೆಯು ಹಣಕಾಸು ಮಸೂದೆಯನ್ನು ಎಷ್ಟು ಕಾಲದವರೆಗೆ ತಡೆಹಿಡಿಯಬಹುದು ?
A] 20 ದಿನಗಳು
B] 3 ತಿಂಗಳು
C] 6 ತಿಂಗಳು
D] 14 ದಿನಗಳು√
ಪ್ರಶ್ನೆ ನಂ: 61) ಇತ್ತೀಚೆಗೆ ಸುದ್ದಿಯಲ್ಲಿದ್ದ 'ಎತ್ತಿನ ಹೊಳೆ' ಇದು ಯಾವ ನದಿಯ ಉಪನದಿ?
A] ನೇತ್ರಾವತಿ√
B] ಶರಾವತಿ
C] ಶಿಂಷಾ
D] ಕಾವೇರಿ
ಪ್ರಶ್ನೆ ನಂ: 62) 'ಲೀಗ್ ಆಫ್ ಇಂಡಿಯನ್ ನ್ಯಾಷನಲ್ ಆರ್ಮಿ' ಸ್ಥಾಪನೆಯಾದದ್ದು ಎಲ್ಲಿ?
A] ಟೋಕಿಯೋ√
B] ರಂಗೂನ್
C] ಸಿಂಗಪೂರ
D] ಲಂಡನ್
ಪ್ರಶ್ನೆ ನಂ: 63) ಈ ಕೆಳಗಿನವುಗಳಲ್ಲಿ ಯಾವ ರಾಜ್ಯವು ಮಯನ್ಮಾರ್ ಮತ್ತು ಬಾಂಗ್ಲಾದೇಶದೊಂದಿಗೆ ಅಂತರ್ರಾಷ್ಟ್ರೀಯ ಗಡಿರೇಖೆಯನ್ನು ಹೊಂದಿದೆ?
A] ತ್ರಿಪುರ
B] ಮಿಜೋರಾಂ √
C] ಓಡಿಸ್ಸಾ
D] ಮಣಿಪುರ
ಪ್ರಶ್ನೆ ನಂ: 64) "ಮೂಲಭೂತ ಹಕ್ಕುಗಳಿಗಿಂತ ರಾಜ್ಯ ನಿರ್ದೇಶಕ ತತ್ವಗಳು ಶ್ರೇಷ್ಟವಾಗಿವೆ" ಎಂದು ಸಾರಿದ ಸಂವಿಧಾನದ ತಿದ್ದುಪಡಿ ಯಾವದು?
A] 42ನೇ ತಿದ್ದುಪಡಿ
B] 40ನೇ ತಿದ್ದುಪಡಿ
C] 44ನೇ ತಿದ್ದುಪಡಿ√
D] 32ನೇ ತಿದ್ದುಪಡಿ
ಪ್ರಶ್ನೆ ನಂ: 65) ಹೊಂದಿಸಿ ಬರೆಯಿರಿ.
ಬೆಳೆ ವೈಜ್ಞಾನಿಕ ಹೆಸರು
ಎ) ಭತ್ತ 1) ಒರೈಜಾ ಸಟೈವಾ
ಬಿ) ಜೋಳಾ 2) ಸಖ್ಯಾರಮ್ ಆಫಿಸಿನೇರಮ್
ಸಿ) ಕಬ್ಬು 3) ಟ್ರಿಟಿಕಂ
ಡಿ) ಹತ್ತಿ 4) ಗಾಸಿಪಿಯುಮ್
ಇ) ಗೋಧಿ 5) ಸೋರ್ಗಾಮ್ ವಲ್ಗರೆ
ಸಂಕೇತಗಳು
A] ಎ-1. ಬಿ-2. ಸಿ -3. ಡಿ-5. ಇ-4
B] ಎ-4. ಬಿ-1. ಸಿ-5. ಡಿ-3. ಇ-2
C] ಎ -2. ಬಿ-4. ಸಿ -1. ಡಿ-3. ಇ-5
D] ಎ-1. ಬಿ-5. ಸಿ -2. ಡಿ-4. ಇ-3√
ಪ್ರಶ್ನೆ ನಂ: 66) ಬೌದ್ಧ ಧರ್ಮದ ಶಿಲಾವಾಸ್ತುಶಿಲ್ಪಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1.ಚೈತ್ಯ ಎಂದರೆ - ಪ್ರಾರ್ಥನಾ ಗೃಹ .
2.ವಿಹಾರ ಎಂದರೆ - ಬೌದ್ಧ ಬಿಕ್ಷುಗಳ ನಿವಾಸ .
3.ಸ್ಥೂಪ ಎಂದರೆ - ಬುದ್ಧನ ಯಾವುದಾದರೊಂದು ಅವಶೇಷಗಳ ಮೇಲೆ ನಿರ್ಮಾಣವಾದ ವೃತ್ತಾಕಾರದ ನಿರ್ಮಾಣ .
ಈ ಮೇಲಿನವುಗಳಲ್ಲಿ ಯಾವುದು ಸರಿಯಾದುದು?
— ಸಂಕೇತಗಳು
A] 1 ಮತ್ತು 2 ಮಾತ್ರ
B] 2 ಮತ್ತು 3 ಮಾತ್ರ
C] 3 ಮಾತ್ರ
D] ಎಲ್ಲವೂ ಸರಿ √
ಪ್ರಶ್ನೆ ನಂ: 67) ಇತ್ತೀಚೆಗೆ ನೂತನ ನಳಂದಾ ವಿಶ್ವವಿದ್ಯಾನಿಲಯದ ಉಪಕುಲಪತಿ (ಚಾನ್ಸಲರ್) ಆಗಿ ನೇಮಕಗೊಂಡವರು ಯಾರು?
A] ಕುಂಗ್ ಲೀ
B] ಅಮರ್ತ್ಯಸೇನ್
C] ಜಾರ್ಜ್ ಯೋ√
D] ಅನೂಪ್ ಭಟ್ನಾಕರ
ಪ್ರಶ್ನೆ ನಂ: 68) ಹಾಲಿನ ಸಾಂದ್ರತೆಯನ್ನು ಲ್ಯಾಕ್ಟೋಮೀಟರ್ ಗಳಲ್ಲಿ ಅಳೆಯುವರು. ಹಾಗಾದರೆ ಆ ಅಳತೆ ಮಾಪಕದಲ್ಲಿ ಶುದ್ಧ ಹಾಲಿನ ಪ್ರಮಾಣ ಎಷ್ಟು?
A] 1.036 ಗ್ರಾಂ/ಪ್ರತಿ ಮಿಲಿ ಲೀಟರ್
B] 1.016 ಗ್ರಾಂ/ಪ್ರತಿ ಮಿಲಿ ಲೀಟರ್
C] 1.001 ಗ್ರಾಂ/ಪ್ರತಿ ಮಿಲಿ ಲೀಟರ್
D] 1.026 ಗ್ರಾಂ/ಪ್ರತಿ ಮಿಲಿ ಲೀಟರ್√
ಪ್ರಶ್ನೆ ನಂ: 69) ನೀಲಿ ಬೆಳೆಗಾರರ ದಂಗೆ ಯಾವ ರಾಜ್ಯದಲ್ಲಿ ನೆಡೆಯಿತು?
A] ಬಂಗಾಳ √
B] ತಮಿಳುನಾಡು
C] ಉತ್ತರ ಪ್ರದೇಶ
D] ಪಂಜಾಬ್
ಪ್ರಶ್ನೆ ನಂ: 70) 2011ರ ಜನಗಣತಿಯ ಪ್ರಕಾರ ಕರ್ನಾಟಕದ ಸಾಕ್ಷರತಾ ಪ್ರಮಾಣ ಎಷ್ಟು?
A] 68.80%
B] 72.67%
C] 75.60%√
D] 78.79%
ಪ್ರಶ್ನೆ ನಂ: 71) ಕರ್ನಾಟಕದಲ್ಲಿ ಸ್ಥಾಪನೆಗೊಂಡ ಪ್ರಪ್ರಥಮ ಕನ್ನಡ ಸಾಮ್ರಾಜ್ಯ ಯಾವುದು?
A] ಶಾತವಾಹನರು
B] ಹೊಯ್ಸಳರು
C] ಕದಂಬರು√
D] ಗಂಗರು
ಪ್ರಶ್ನೆ ನಂ: 72) ರಾಜ್ಯದಲ್ಲಿನ ಪ್ರಾದೇಶಿಕ ಅಸಮತೋಲನೆಯ ಅಧ್ಯಯನಕ್ಕಾಗಿ ನೇಮಿಸಿದ ಡಾ.ನಂಜುಂಡಪ್ಪ ಸಮಿತಿಯ ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1.ವಿಶೇಷ ಅಭಿವೃದ್ಧಿ ಯೋಜನೆಯು ಈ ಸಮಿತಿಯ ಮುಖ್ಯ ಶಿಫಾರಸ್ಸಾಗಿರುತ್ತದೆ.
2.ವಿಶೇಷವಾಗಿ ರಾಜ್ಯದಲ್ಲಿ ಹಿಂದುಳಿದ 114 ತಾಲ್ಲೂಕುಗಳ ಅಭಿವೃದ್ಧಿಗಾಗಿ ಹೆಚ್ಚು ಒತ್ತು ನೀಡಿದೆ.
ಈ ಮೇಲಿನವುಗಳಲ್ಲಿ ಯಾವುದು ಸರಿಯಾದುದು?
— ಸಂಕೇತಗಳು
A] 1 ಮಾತ್ರ
B] 2 ಮಾತ್ರ
C] ಎರಡೂ ತಪ್ಪು
D] ಎರಡೂ ಸರಿ √
ಪ್ರಶ್ನೆ ನಂ: 73) ಇತ್ತೀಚೆಗೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ASEAN Summit) ದ ಶೃಂಗಸಭೆ ಎಲ್ಲಿ ಜರುಗಿತು?
A] ಮಲೇಷ್ಯಾ √
B] ಫ್ರಾನ್ಸ್
C] ಟರ್ಕಿ
D] ಮ್ಯಾನ್ಮಾರ್
ಪ್ರಶ್ನೆ ನಂ: 74) ಇತ್ತೀಚಿನ ಜರ್ಮನಿ ಮೂಲದ "ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್' ಬಿಡುಗಡೆ ಮಾಡಿರುವ ಭ್ರಷ್ಟಾಚಾರ ಕುರಿತು ವಾರ್ಷಿಕ ಸಮೀಕ್ಷಾ ವರದಿ ಅನ್ವಯ 175 ರಾಷ್ಟ್ರಗಳ ಪೈಕಿ ಭಾರತ ಎಷ್ಟನೆಯ ಸ್ಥಾನ ಪಡೆದುಕೊಂಡಿದೆ?
A] 80ನೇ ಸ್ಥಾನ
B] 85ನೇ ಸ್ಥಾನ √
C] 95ನೇ ಸ್ಥಾನ
D] 100ನೇ ಸ್ಥಾನ
ಪ್ರಶ್ನೆ ನಂ: 75) ಸಂವಿಧಾನದ ಯಾವ ವಿಧಿಯು 'ಚುನಾವಣಾ ಆಯೋಗ ' (Election commission) ದ ಸ್ಥಾಪನೆಗೆ ಸಂಬಂಧಿಸಿದೆ ?
A] 280ನೇ ವಿಧಿ.
B] 124ನೇ ವಿಧಿ.
C] 79ನೇ ವಿಧಿ.
D] 324ನೇ ವಿಧಿ.√
ಪ್ರಶ್ನೆ ನಂ: 76) ಪ್ರಸ್ತುತ ಭಾರತದ ದೇಶದ ಸಾಲಿಟರ್ ಜನರಲ್ ಯಾರು?
A] ಮುಕುಲ್ ರೋಹಿಟಗಿ
B] ರಂಜಿತ್ ಕುಮಾರ್√
C] ಅರೂಪಾ ರಹಾ
D] ದೋವಲ್ ಆರ್.ಕೆ
ಪ್ರಶ್ನೆ ನಂ: 77) “ಗಂಗೈಕೊಂಡ ಚೋಳ ಪುರಂ“ ಎಂಬ ಹೊಸ ಚೋಳರ ರಾಜಧಾನಿಯ ನಿರ್ಮಾತೃ -
A] ರಾಜೇಂದ್ರ ಚೋಳ √
B] ರಾಜರಜ ಚೋಳ
C] ವಿಜಯಾಲ
D] ಕರಿಕಾಲ ಚೋಳ
ಪ್ರಶ್ನೆ ನಂ: 78) ಲಾಲಾರಸದ ಯಾವ ಕಿಣ್ವವು ಪಿಷ್ಟವನ್ನು ಮಾಲ್ಟೋಸ್ ಆಗಿ ಪರಿವರ್ತಿಸುತ್ತದೆ?
A] ಬೋಲಸ್
B] ಮಾಲ್ಟೇಸ್√
C] ಅಮೈಲೇಸ್
D] ಲೈಪೇಸ್
ಪ್ರಶ್ನೆ ನಂ: 79) ಪ್ರಸ್ತುತ ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (AIIB) ನ ಪ್ರಧಾನ ಕಾರ್ಯದರ್ಶಿ ಯಾರು?
A] ಟಾಕೆಹಿಕೊ ನಕಾವೊ
B] ಯುಕಿಯಾ ಅಮಾನೊ
C] ಜಿನ್ ಲಿಕಿನ್√
D] ಥಾಮಸ್ ಬಾಚ್
ಪ್ರಶ್ನೆ ನಂ: 80) ಭಾರತದಲ್ಲಿ ಜನಗಣತಿಯನ್ನು ಯಾವ ವಿಧಿಯ ಅನುಸಾರವಾಗಿ ನಡೆಸುತ್ತಾರೆ?
A] 286 ನೇ ವಿಧಿ.
B] 187 ನೇ ವಿಧಿ.
C] 246 ನೇ ವಿಧಿ.√
D] 305 ನೇ ವಿಧಿ.
ಪ್ರಶ್ನೆ ನಂ: 81) ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1.ಅಮೀಬಾ ಚಲನಾಂಗಕ್ಕೆ ಮಿಥ್ಯಪಾದಿ ಎನ್ನುವರು.
2.ಬಾವಲಿಯ ಚಲನಾಂಗಕ್ಕೆ ಪಟೇಜಿಯಂ ಎನ್ನುವರು.
ಈ ಮೇಲಿನವುಗಳಲ್ಲಿ ಯಾವುದು ಸರಿಯಾದುದು?
— ಸಂಕೇತಗಳು
A] 1 ಮಾತ್ರ
B] 2 ಮಾತ್ರ
C] ಎರಡೂ ತಪ್ಪು
D] ಎರಡೂ ಸರಿ √
ಪ್ರಶ್ನೆ ನಂ: 82) ಅಂತರರಾಷ್ಟ್ರೀಯ ನ್ಯಾಯಾಲಯದ ಪ್ರಸ್ತುತ ಅಧ್ಯಕ್ಷರು ಯಾರು ?
A] ಗೈ ರೈಡರ್
B] ರಾನ್ನಿ ಅಬ್ರಹಾಂ√
C] ಥಾಮಸ್ ಬಾಕ್
[D] ಕ್ರಿಶ್ಚಿಯನ್ ಲಿಗಾಡೆ
ಪ್ರಶ್ನೆ ನಂ: 83) ನಮ್ಮ ದೇಹದ ಉಷ್ಣಾಂಶವನ್ನು ನಿಯಂತ್ರಿಸುವ ಗ್ರಂಥಿ ಯಾವುದು?
A] ಪಿಟ್ಯುಟರಿ
B] ಹೈಪೊಥಲಾಮಸ್√
C] ಆಡ್ರಿನಲ್
D] ಲ್ಯಾಂಗರ್ ಹಾನ್ಸ್
ಪ್ರಶ್ನೆ ನಂ: 84) 'ಕರ್ನಾಟಕದ ಪ್ರಥಮ ಚಕ್ರವರ್ತಿ' ಎಂಬ ಹೆಗ್ಗಳಿಕೆಗೆ ಪಾತ್ರನಾದ ಅರಸ ಯಾರು?
A] ಸಿಮುಖ
B] ಮಯೂರವರ್ಮ√
C] ಕಾಕುಸ್ಥವರ್ಮ
D] ಶ್ರೀಪುರಷ
ಪ್ರಶ್ನೆ ನಂ: 85) ಕೆಳಕಂಡ ಯಾವ ಪ್ರದೇಶದಲ್ಲಿ ಗುರುತ್ವಾಕರ್ಷಣೆಯಿಂದ ಉಂಟಾದ ವೇಗೋತ್ಕರ್ಷವು ಸೊನ್ನೆಯಾಗಿರುತ್ತದೆ ?
A] ಭೂಮಧ್ಯೆ ರೇಖೆ√
B] ಉತ್ತರ ಮತ್ತು ದಕ್ಷಿಣ ಧ್ರುವಗಳು
C] ಸಮುದ್ರಮಟ್ಟ
D] ಭೂಕೇಂದ್ರ
ಪ್ರಶ್ನೆ ನಂ: 86) ಹೊಂದಿಸಿ ಬರೆಯಿರಿ.
ಬೌದ್ಧ ಮಹಾಸಭೆಗಳು ನಡೆದ ಸ್ಥಳ
ಎ) ಮೊದಲನೆಯ ಬೌದ್ಧ ಮಹಾಸಭೆ 1) ವೈಶಾಲಿ
ಬಿ) ಎರಡನೆಯ ಬೌದ್ಧ ಮಹಾಸಭೆ 2) ಕುಂಡಲಿವನ
ಸಿ) ಮೂರನೆಯ ಬೌದ್ಧ ಮಹಾಸಭೆ 3) ಪಾಟಲಿಪುತ್ರ
ಡಿ) ನಾಲ್ಕನೆಯ ಬೌದ್ಧ ಮಹಾಸಭೆ 4) ರಾಜಗೃಹ
— ಸಂಕೇತಗಳು
ಎ)ಎ-1. ಬಿ-2. ಸಿ -4. ಡಿ-3.
ಬಿ)ಎ-4. ಬಿ-1. ಸಿ-3. ಡಿ-2.*
ಸಿ)ಎ -2. ಬಿ-4. ಸಿ -1. ಡಿ-3.
ಡಿ)ಎ-4. ಬಿ-3. ಸಿ -1. ಡಿ-2.
ಪ್ರಶ್ನೆ ನಂ: 87) ಈ ಕೆಳಕಂಡ ಯಾವ ನದಿ ಉತ್ತರ ಮತ್ತು ದಕ್ಷಿಣ ಭಾರತವನ್ನು ವಿಭಾಗಿಸುತ್ತದೆ?
A] ಕೃಷ್ಣಾ
B] ನಮ೯ದಾ √
C] ಕಾವೇರಿ
D] ಮಹಾನದಿ
ಪ್ರಶ್ನೆ ನಂ: 88) ಪ್ರಸ್ತುತ ಅಂತರರಾಷ್ಟ್ರೀಯ ಓಲಿಂಪಿಕ್ ಸಂಘಟನೆ(IOA) ಯ ಮುಖ್ಯಸ್ಥರು ಯಾರು?
A] ಥಾಮಸ್ ಬಾಚ್√
B] ಸೆಬಾಸ್ಟಿಯನ್ ಸೊಯಿ
C] ಟಾಕೆಹಿಕೊ ನಕಾವೊ
D] ಯುಕಿಯಾ ಅಮಾನೊ
ಪ್ರಶ್ನೆ ನಂ: 89) ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ಎಂಬ ಸಂಸ್ಥೆ ಇರುವುದು…
A] ಜಿನೇವಾ
B] ನೈರೋಬಿ √
C] ಬರ್ನ್
D] ನ್ಯೂಯಾರ್ಕ್
ಪ್ರಶ್ನೆ ನಂ: 90) ಸಂವಿಧಾನದ ಎಷ್ಟನೇ ತಿದ್ದುಪಡಿ ಮಸೂದೆ ಪ್ರಕಾರ ಕರ್ನಾಟಕದ ಹೈದರಾಬಾದ-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ ?
A] 106ನೇ
B] 102ನೇ
C] 117ನೇ
D] 118ನೇ√
ಪ್ರಶ್ನೆ ನಂ: 91) ಧನುರ್ವಾಯು ( ಟೆಟಾನಸ್) ರೋಗಕ್ಕೆ ಕಾರಣವಾದ ಬ್ಯಾಕ್ಟೀರಿಯಾ ಯಾವುದು?
A] ಕ್ಲಾಸ್ಟ್ರೀಡಿಯಂ ಟಿಟನಿ ನೋಟೆಟಂ√
B] ಬೋರ್ಡೆಲ್ಲ ಪರ್ಟುಸ್
C] ಬ್ಯಾಸಿಲಸ್ ಬ್ಯಾಕ್ಟೀರಿಯಾ
D] ಮೈಕ್ರೋಬ್ಯಾಕ್ಟೀರಿಯಂ ಲೆಪೆ
ಪ್ರಶ್ನೆ ನಂ: 92) ತಂಜಾವೂರಿನ 'ಬೃಹದೀಶ್ವರ ದೇವಾಲಯ'ದ ನಿರ್ಮಾತೃರು ಯಾರು?
A] ಚೋಳರು√
A] ಹೊಯ್ಸಳರು
A] ಕದಂಬರು
A] ಚಾಲುಕ್ಯರು
ಪ್ರಶ್ನೆ ನಂ: 93) ಪ್ರಪಂಚದ ಭೂಪಟವನ್ನು ಭೂಮಧ್ಯೆ ರೇಖೆಯ ವ್ಯಾಸಕ್ಕನುಗುಣವಾಗಿ ಕ್ರಮಬದ್ದಗೊಳಿಸಿದ ಪ್ರಪ್ರಥಮ ವ್ಯಕ್ತಿ ಯಾರು?
A] ಎರಟೋಥೇನ್ಸ್√
B] ಹಿಪೋಕ್ರೇಟ್ಸ್
C] ಅರಿಸ್ಟಾಕಸ್
D] ಥಿಯೋಪ್ರಾಸ್ಟರ್
ಪ್ರಶ್ನೆ ನಂ: 94) ಪಡುವಲಪಾಯ & ಮೂಡಲಪಾಯ ಇವು ಯಾವ ನೃತ್ಯ ಪ್ರಕಾರದ ರೂಪಗಳು?
A] ಡೊಳ್ಳು ಕುಣಿತ
B] ಕರಗ
C] ಯಕ್ಷಗಾನ√
D] ಕೂಚಿಪುಡಿ
ಪ್ರಶ್ನೆ ನಂ: 95) ನವೆಂಬರ್ 15ರಿಂದ ಶೇಕಡಾ ಎಷ್ಟು 'ಸ್ವಚ್ಛ ಭಾರತ್ ಸೆಸ್'ನ್ನು ಜಾರಿಗೆ ತರಲಾಯಿತು?
A] 0.25%
B] 0.50%√
C] 1.00%
D] 2.00%
ಪ್ರಶ್ನೆ ನಂ: 96) ಭಾರತೀಯ ಸೇನೆಯು 'ಆಪರೇಷನ್ ಆಲ್ ಕ್ಲಿಯರ್' ನಡೆಸಿದ್ದು ಎಲ್ಲಿ ?
A] ಜಮ್ಮು ಮತ್ತು ಕಾಶ್ಮೀರ
B] ಶ್ರೀಲಂಕಾ
C] ಪಂಜಾಬ್
D] ಅಸ್ಸಾಂ√
ಪ್ರಶ್ನೆ ನಂ: 97) ಭಾರತೀಯರು ಪ್ರಪ್ರಥಮವಾಗಿ ಭಾರತದ ಆಡಳಿತದಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಿದ ಕಾಯಿದೆ ಯಾವುದು?
A] ಭಾರತದ ಸರ್ಕಾರ ಕಾಯಿದೆ, 1858.
B] 1861ರ ಭಾರತ ಕೌನ್ಸಿಲ್ ಕಾಯಿದೆ. √
C] 1892ರ ಭಾರತ ಕೌನ್ಸಿಲ್ ಕಾಯಿದೆ.
D] 1909ರ ಭಾರತ ಕೌನ್ಸಿಲ್ ಕಾಯಿದೆ.
ಪ್ರಶ್ನೆ ನಂ: 98) ದಕ್ಷಿಣ ಭಾರತದಲ್ಲಿಯೆ ಮೊಟ್ಟ ಮೊದಲನೆಯ ಪ್ರಾಚೀನ ದೇವಾಲಯಗಳ ಕಲಾಕೃತಿ ಎಂದು ಯಾವ ದೇವಾಲಯವನ್ನು ಕರೆಯಲಾಗುತ್ತದೆ?
A] ಶೈವ ಗುಹಾಂತರ ದೇವಾಲಯ
B] ಬೇಲೂರಿನ ಚೆನ್ನಕೇಶವ ದೇವಾಲಯ
C] ತಾಳಗುಂದದ ಪ್ರಣವೇಶ್ವರ ದೇವಾಲಯ .√
D] ತಂಜಾವೂರಿನ ಬೃಹದೀಶ್ವರ ದೇವಾಲಯ
ಪ್ರಶ್ನೆ ನಂ: 99) ಇತ್ತೀಚೆಗೆ ಭಾರತದ ಮಾಹಿತಿ ಆಯೋಗದ ಮುಖ್ಯ ಕಮೀಷನರ್ ಆಗಿ ಯಾರು ನೇಮಕಗೊಂಡಿದ್ದಾರೆ?
A] ಸಿಂಧು ಸಿಂಗ್
B] ಸುಷ್ಮಾ ಸಿಂಗ್√️
C] ರಶ್ಮಿ ಚಂದ್ರ
D] ಪದ್ಮಿನಿ ನಾಯಕ್
ಪ್ರಶ್ನೆ ನಂ: 100) ಯಾರ ಕಾಲದ ಕಲೆ ಮತ್ತು ವಾಸ್ತುಶಿಲ್ಪವನ್ನು ದಖನ್ನಿನ್ನ ನವೋದಯ ಕಾಲ ಹಾಗೂ ಸುವರ್ಣಯುಗ ಎಂದು ಕರೆಯಲಾಗಿದೆ.?
A] ಶಾತವಾಹನರು
B] ಹೊಯ್ಸಳರು
C] ರಾಷ್ಟ್ರಕೂಟರು
D] ಬಾದಾಮಿ ಚಾಲುಕ್ಯರು√