"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 26 November 2015

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ■. 'ಆಸಿಯಾನ್‌ ಅಂತರರಾಷ್ಟ್ರೀಯ ಸಂಘಟನೆ'ಯ ಕುರಿತು ವಿವರಿಸಿ. : (ASEAN Summit-The International Association)

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
■. 'ಆಸಿಯಾನ್‌ ಅಂತರರಾಷ್ಟ್ರೀಯ ಸಂಘಟನೆ'ಯ ಕುರಿತು ವಿವರಿಸಿ. :
(ASEAN Summit-The International Association)  :
━━━━━━━━━━━━━━━━━━━━━━━━━━━━━━━━━━━━━━━━━━
★ಅಂತರರಾಷ್ಟ್ರೀಯ ಸಂಘಟನೆಗಳು.
(International Associations)

★ಅಂತರರಾಷ್ಟ್ರೀಯ ಅರ್ಥಶಾಸ್ತ್ರ
(International Economics)


●. ಆಸಿಯಾನ್ ಎಂಬುದು ಆಗ್ನೇಯ ಏಷ್ಯಾ ಭೂ ಭಾಗದ ಹತ್ತು ದೇಶಗಳ ಭೌಗೋಳಿಕ-ರಾಜಕೀಯ-ಆರ್ಥಿಕ ಸಂಘಟನೆ. ಇಂಡೋನೇಷ್ಯಾ, ಮಲೇಶಿಯಾ, ಫಿಲಿಪ್ಪೀನ್ಸ್, ಸಿಂಗಾಪುರ ಹಾಗೂ ಥಾಯ್ಲೆಂಡ್ ರಾಷ್ಟ್ರಗಳು ಸ್ಥಾಪಿಸಿದವು. ಆ ನಂತರ ಸದಸ್ಯತ್ವವನ್ನು ಬ್ರನೈ, ಮಯನ್ಮಾರ್, ಕಾಂಬೋಡಿಯಾ, ಲಾವೋಸ್ ಹಾಗೂ ವಿಯೆಟ್ನಾಮ್ ದೇಶಗಳಿಗೆ ವಿಸ್ತರಿಸಲಾಯಿತು.


●. ಸ್ಥಾಪನೆ :
•┈┈┈┈┈┈•
✧. ಈ ಸಂಘಟನೆಯನ್ನು 1987ರಲ್ಲಿ ಸ್ಥಾಪಿಸಲಾಯಿತು.


●. ಸಂಘಟನೆಯಲ್ಲಿ ಇರುವ ರಾಷ್ಟ್ರಗಳು:
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
✧.ಹತ್ತು ರಾಷ್ಟ್ರಗಳ ಆಸಿಯಾನ್ ಕೂಟದಲ್ಲಿ ಬ್ರೂನಿ, ಕಾಂಬೋಡಿಯ, ಇಂಡೋನೇಶ್ಯ, ಲಾವೊಸ್, ಮಲೇಶ್ಯ, ಮ್ಯಾನ್ಮಾರ್, ಫಿಲಿಪ್ಪೀನ್ಸ್, ಸಿಂಗಾಪುರ,ಥಾಯ್ಲೆಂಡ್ ಹಾಗೂ ವಿಯೆಟ್ನಾಂ ಒಳಗೊಂಡಿವೆ.


●. ಕೇಂದ್ರ ಕಚೇರಿ :
•┈┈┈┈┈┈┈┈┈┈┈•
✧.ಜಕಾರ್ತ(ಇಂಡೋನೇಷ್ಯಾ) ದೇಶದಲ್ಲಿದೆ.


●. ಈ ಸಂಘಟನೆಯ ಉದ್ದೇಶ ಹಾಗೂ ವೈಶಿಷ್ಟ್ಯಗಳು :
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
✧.ಜಾಗತಿಕ ಜನಸಂಖ್ಯೆಯ ಶೇ 50ಕ್ಕಿಂತ ಹೆಚ್ಚಿನ ಪ್ರಮಾಣದ ಮಾರುಕಟ್ಟೆ ಪಾಲು ಹೊಂದಿರುವ ಈ ಸಮೂಹದ ಭೂಪ್ರದೇಶದಲ್ಲಿ ಶಾಂತಿ, ಸ್ಥಿರತೆಯ ರಕ್ಷಣೆ, ತನ್ನ ಸದಸ್ಯರಲ್ಲಿ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿ ಸಾಧನೆ, ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಸದಸ್ಯ ರಾಷ್ಟ್ರಗಳಿಗೆ ಅವಕಾಶಗಳನ್ನು ಕಲ್ಪಿಸುವುದು ಈ ಸಂಘಟನೆಯ ಗುರಿ.
✧.ಭಾರತ ಈ ಸಂಘಟನೆಯ ಸದಸ್ಯ ದೇಶ ಅಲ್ಲ. ಆದರೆ ಈ ಹತ್ತು ದೇಶಗಳ ಜೊತೆಗೆ ಪ್ಲಸ್ ಒನ್ ಸಂಬಂಧವನ್ನು ಭಾರತಕ್ಕೆ ಆಸಿಯಾನ್ ನೀಡಿದೆ.


●. ಇತ್ತೀಚಿನ ಶೃಂಗಸಭೆಗಳು:
•┈┈┈┈┈┈┈┈┈┈┈┈┈┈┈┈•
✧. 24 Dec, 2012 ನವದೆಹಲಿಯಲ್ಲಿ (ಆಸಿಯಾನ್) ಮತ್ತು ಭಾರತ ಶೃಂಗಸಭೆ ನಡೆಯಿತು.
✧. 2013ರಲ್ಲಿ ಬ್ರುನೈ ದರುಸ್ಸಲಾಂನಲ್ಲಿ (ಆಸಿಯಾನ್) ಮತ್ತು ಭಾರತ ಶೃಂಗಸಭೆ ನಡೆಯಿತು.
✧. ನವೆಂಬರ್ 12 ಹಾಗೂ 13 2014ರಲ್ಲಿ 12ನೇ ಆಸಿಯಾನ್-ಭಾರತ ಶೃಂಗಸಭೆಯು ಮ್ಯಾನ್ಮಾರ್‌ನ ನೆ ಪೈ ತಾವ್‌ನಲ್ಲಿ ನಡೆಯಿತು.
✧. ಆರ್ಥಿಕ ಅಭಿವೃದ್ಧಿ ಹಾಗೂ ಶಾಂತಿಯುತ ಜಗತ್ತಿನ ತನ್ನ ಮಹತ್ವಾಕಾಂಕ್ಷೆಗಳಿಗೆ ಪೂರಕ ಜಾಗತಿಕ ವಾತಾವರಣವನ್ನು ಭಾರತ ಕೋರಿತು.
✧. ಭಾರತದ ‘ಪೂರ್ವಾಭಿಮುಖ’ ನೀತಿಯ ಭಾಗ ವಾಗಿ ಆಗ್ನೇಯ ಏಶ್ಯ ರಾಷ್ಟ್ರಗಳ ಒಕ್ಕೂಟ (ಆಸಿಯಾನ್)ದ ಪ್ರತಿಯೊಂದು ದೇಶದ ಜೊತೆಗೂ ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಆಸಿಯಾನ್ ಮುಖಂಡ ರೊಂದಿಗೆ ಚರ್ಚಿಸಲಾಯಿತು.
✧. ಭಾರತದಲ್ಲಿ ಬಂಡವಾಳ ಹೂಡಿ ‘ಮೇಕ್ ಇನ್ ಇಂಡಿಯಾ’ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಅವರು ಆಸಿಯಾನ್ ರಾಷ್ಟ್ರಗಳಿಗೆ ಕರೆ ನೀಡಿದರು.

No comments:

Post a Comment