"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 7 November 2015

☀.ಭೌಗೋಳಿಕ ಮಾಹಿತಿ ವ್ಯವಸ್ಥೆ (GIS): (Geographical Information System) :

☀.ಭೌಗೋಳಿಕ ಮಾಹಿತಿ ವ್ಯವಸ್ಥೆ (GIS):
(Geographical Information System) :
━━━━━━━━━━━━━━━━━━━━━━━━━━━━━

●.ಮಾಹಿತಿ ಹಾಗೂ ತಂತ್ರಜ್ಞಾನ
(Information and Technology)

●.ಸಾಮಾನ್ಯ ಅಧ್ಯಯನ
(General Studies)


●.ಪೃಥ್ವಿಯ ಮೇಲ್ಮೈನ ಅಂಕಿ-ಅಂಶ ಅಥವಾ ಮಾಹಿತಿಯನ್ನು ಕಲೆಹಾಕುವ, ಸಂಗ್ರಹಿಸುವ, ಅಗತ್ಯವಿದ್ದಾಗ ಬಳಕೆ ಮಾಡುವ, ಮಾರ್ಪಡಿಸುವ ಹಾಗೂ ತೋರಿಸುವ ಪ್ರಬಲ ಸಲಕರಣೆಯ ಸಮೂಹವನ್ನು ಭೌಗೋಳಿಕ ಮಾಹಿತಿ (GIS) ವ್ಯವಸ್ಥೆ ಎಂದು ಕರೆಯಲಾಗಿದೆ.

●.1960 ರಲ್ಲಿ ಕೆನಡಾದಲ್ಲಿ ಆರಂಭಗೊಂಡು ಇಂದು ಇದರ ಬಳಕೆ ವಿಶ್ವವ್ಯಾಪಿಯಾಗಿದೆ.

●.ಭೂ ಮೇಲ್ಮೈ ವಿವಿಧ ಬಗೆಯ ಪ್ರಾಕೃತಿಕ ಹಾಗೂ ಸಾಂಸ್ಕ್ರತಿಕ ಲಕ್ಷಣಗಳೆರಡನ್ನು ಸಹ ಒಳಗೊಂಡಿರುವುದು. ಇದರಲ್ಲಿ ಜಿಲ್ಲೆಗಳು, ಭೂಸ್ವರೂಪಗಳು, ನದಿ ವ್ಯವಸ್ಥೆ, ವಸತಿಗಳ ಹಂಚಿಕೆ, ಭೂ ಸ್ವರೂಪ, ಭೂ ಬಳಕೆ, ಮಣ್ಣು-ಬೆಳೆಗಳ ಹಂಚಿಕೆ ಮೊದಲಾದವುಗಳನ್ನು ಒಂದರ ಮೇಲೊಂದರಂತೆ ಇರಿಸಿ ಅವುಗಳ ಸಂಬಂಧವನ್ನು ಸುಲಭವಾಗಿ ವಿಶ್ಲೇಷಿಸಬಹುದು. ಹೀಗೆ “ಜಿ.ಐ.ಎಸ್. ಕಂಪ್ಯೂಟರ್ ಆಧಾರಿತ ಭೂಮೇಲ್ಮೈನ ವೈವಿಧ್ಯಮಯ ಅಂಕಿ-ಅಂಶಗಳನ್ನು ಸಂಸ್ಕರಿಸುವ ಮತ್ತು ವಿಶ್ಲೇಷಿಸುವ ಒಂದು ವ್ಯವಸ್ಥೆ”ಯಾಗಿದೆ.


☀.ಉಪಯೋಗಗಳು :
━━━━━━━━━━━━━

●.ಜಿ.ಐ.ಎಸ್ ತಂತ್ರಜ್ಞಾನ ಆಧಾರಿತ ನಕ್ಷೆಗಳು ಹೆಚ್ಚು ಆಕರ್ಷಕ ಹಾಗೂ ಮಾಹಿತಿಯನ್ನು ಸ್ಪಷ್ಟವಾಗಿ ನೀಡುತ್ತವೆ.

●.ವಿವಿಧ ಬಗೆಯ ಭೌಗೋಳಿಕ ಸಾಮಾಜಿಕ, ಆರ್ಥಿಕ ಭೂಮೇಲ್ಮೈ ಮಾಹಿತಿಯನ್ನು ಸುಲಭವಾಗಿ ವಿಶ್ಲೇಷಿಸಬಹುದು ಹಾಗೂ ಅವುಗಳ ಮಾದರಿಯನ್ನು ರಚಿಸಬಹುದು.

●.ಪ್ರಾಕೃತಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಜಿಐಎಸ್ ತಂತ್ರಜ್ಞಾನದ ಪ್ರಾಮುಖ್ಯತೆ ಹೆಚ್ಚು ಕಂಡು ಬರುತ್ತದೆ.

●.ಇದು ಕಂಪ್ಯೂಟರ್ ಆಧಾರಿತ ವಿಶ್ಲೇಷಣೆಯಾಗಿದ್ದು, ನಕ್ಷೆಗಳನ್ನು ಅತಿ ಶೀಘ್ರವಾಗಿ, ಅಗತ್ಯಕ್ಕೆ ತಕ್ಕಂತೆ ನಕ್ಷಾ ಶಾಸ್ತ್ರಜ್ಞರ ನೆರವಿಲ್ಲದೆ ಅತಿ ಕಡಿಮೆ ಅವಧಿಯಲ್ಲಿ ಪಡೆಯಬಹುದು ಹಾಗೂ ನಕ್ಷೆಗಳನ್ನು ಮಾರ್ಪಡಿಸಬಹುದು.

— ಪ್ರಸ್ತುತ ಬಳಕೆಯಾಗುತ್ತಿರುವ ಭೌಗೋಳಿಕ ಮಾಹಿತಿ ವ್ಯವಸ್ಥೆ ಹಾಗೂ ನಕ್ಷೆಗಳ ರಚನೆಯ ತಂತ್ರಾಂಶದಲ್ಲಿ ಆ್ಯಪಲ್, ಆರ್ಕ್ ಇನ್ ಫೋ, ಆ್ಯಟೋಕ್ಯಾಡ್, ಮ್ಯಾಪ್ ಇನ್ ಫೋ, ಆಕ್‍ವ್ಯೂ ಮೊದಲಾದವುಗಳು ಅತಿ ಮುಖ್ಯವಾಗಿವೆ.

No comments:

Post a Comment