"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 26 November 2015

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ●.'ಬ್ರಿಕ್ಸ್ ಅಂತರರಾಷ್ಟ್ರೀಯ ಸಂಘಟನೆ'ಯ ಕುರಿತು ವಿವರಿಸಿ. (BRICS Summit-The International Association) :

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
●.'ಬ್ರಿಕ್ಸ್ ಅಂತರರಾಷ್ಟ್ರೀಯ ಸಂಘಟನೆ'ಯ ಕುರಿತು ವಿವರಿಸಿ.
(BRICS Summit-The International Association)  :
━━━━━━━━━━━━━━━━━━━━━━━━━━━━━━━━━━━━━━━━━━
ಅಂತರರಾಷ್ಟ್ರೀಯ ಸಂಘಟನೆಗಳು.
(International Associations)

ಅಂತರರಾಷ್ಟ್ರೀಯ ಅರ್ಥಶಾಸ್ತ್ರ
(International Economics)


■.ಬ್ರಿಕ್ಸ್ (BRICS) ಎಂದರೆ :
•┈┈┈┈┈┈┈┈┈┈┈•
✧. ‘ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳನ್ನು ಒಳಗೊಂಡ `ಬ್ರಿಕ್ಸ್ ಗುಂಪು,  ಈ ಹೊಸ ಆರ್ಥಿಕ ವ್ಯವಸ್ಥೆಯ ರೂಪದಲ್ಲಿ ವಿಶ್ವದ ಗಮನ ಸೆಳೆಯುತ್ತಿದೆ.ವಿಶ್ವದ ಅತಿದೊಡ್ಡ ಹಣಕಾಸು ಸೇವಾ ಸಂಸ್ಥೆ ಗೋಲ್ಡ್‌ಮನ್ಸ್ ಸ್ಯಾಕ್ಸ್ ಸಿದ್ಧಪಡಿಸಿರುವ ವರದಿಯಲ್ಲಿ,  ಈ ಸಮೂಹವು ಜಾಗತಿಕ ಮಹತ್ವ ಪಡೆಯುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

✧. ವಿಶ್ವದ ಐದು ಪ್ರಮುಖ ಅಭಿವೃದ್ಧಿ ಹೊಂದುತ್ತಿರುವ (ಬ್ರಿಕ್ಸ್) ದೇಶಗಳ ಪ್ರಮುಖ ನಗರಗಳು ಹಾಗೂ ಸ್ಥಳೀಯ ಸರ್ಕಾರಗಳ ನಡುವೆ ಸಂಪರ್ಕ ಹಾಗೂ ಸಹಕಾರದ ಒಪ್ಪಂದ ಏರ್ಪಡಿಸುವ ನಿಟ್ಟಿನಲ್ಲಿ ಈ ಸಮಾವೇಶ ಮಹತ್ವ ಪಡೆದುಕೊಂಡಿದೆ.


●. ಸ್ಥಾಪನೆ :
•┈┈┈┈┈┈•
✧. ಜಗತ್ತಿನಲ್ಲಿ ಉದಯಿಸುತ್ತಿರುವ ಹೊಸ ಆರ್ಥಿಕ ಶಕ್ತಿಗಳಾದ ಬ್ರಿಕ್ಸ್ ಗುಂಪನ್ನು 2009ರಲ್ಲಿ ಸ್ಥಾಪಿಸಲಾಯಿತು.
✧. `ಬ್ರಿಕ್ಸ್ ದೇಶಗಳ ಮೊದಲ ಶೃಂಗಸಭೆಯು ರಷ್ಯಾದ ಎಕಟೇರಿಯನ್‌ಬರ್ಗ್‌ನಲ್ಲಿ 2009ರಲ್ಲಿ ನಡೆದಿತ್ತು. ಸಮಾನ, ಪ್ರಜಾಸತ್ತಾತ್ಮಕ ಮತ್ತು ಬಹು ಉದ್ದೇಶದ ಜಾಗತಿಕ ವ್ಯವಸ್ಥೆಯಾಗಿ ಈ ಗುಂಪು ರೂಪು ತಳೆದು, ಬೆಳೆಯಬೇಕು ಎಂದು ಮೊದಲ ಸಭೆಯಲ್ಲಿಯೇ ನಿರ್ಧರಿಸಲಾಗಿತ್ತು.


●. ಬ್ರಿಕ್ಸ್ ಸಂಘಟನೆಯ ವೈಶಿಷ್ಟ್ಯಗಳು :
•┈┈┈┈┈┈┈┈┈┈┈┈┈┈┈┈┈┈┈┈┈•
✧.ಜಾಗತಿಕ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಈ ಐದೂ ದೇಶಗಳ ಸಾಮಾನ್ಯ ಕೊಡುಗೆ ಶೇ 22ರಷ್ಟಿದ್ದರೆ,ಸರ್ಕಾರಿ ಖಾಸಗಿ ಪಾಲುದಾರಿಕೆಯಡಿಯ (ಪಿಪಿಪಿ) ಕೊಡುಗೆ ಶೇ 35ರಷ್ಟಿದೆ.ಈ ದೇಶಗಳ ಒಟ್ಟು ಜನಸಂಖ್ಯೆ ವಿಶ್ವದ ಜನಸಂಖ್ಯೆಯಲ್ಲಿ ಶೇ 43ರಷ್ಟಿದೆ.
✧.ಎಲ್ಲ ಆರು ಖಂಡಗಳಲ್ಲಿ ವ್ಯಾಪಿಸಿರುವುದು ಈ ಗುಂಪಿನ ಇನ್ನೊಂದು ವೈಶಿಷ್ಟ್ಯವಾಗಿದೆ. ಹೀಗಾಗಿ ಈ ಗುಂಪು ಖಂಡಾಂತರದ ಗುಣಲಕ್ಷಣಗಳನ್ನು ಮೈಗೂಡಿಸಿಕೊಂಡಂತಾಗಿದೆ. ಇತರ ಇಂತಹಗುಂಪುಗಳು ಈ ವಿಶೇಷ ವ್ಯಾಪಕತೆಯ ಸ್ವರೂಪ  ಹೊಂದಿಲ್ಲ.
✧.2040ರ ಹೊತ್ತಿಗೆ ಐದು ದೇಶಗಳ ಪೈಕಿ ನಾಲ್ಕು ದೇಶಗಳು ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ), ವಿಶ್ವದ 6 ಮುಂಚೂಣಿ ದೇಶಗಳಲ್ಲಿ ಸ್ಥಾನ ಗಿಟ್ಟಿಸಿರುತ್ತವೆ ಎಂದೂ `ಗೋಲ್ಡ್‌ಮನ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.


●. ಬ್ರಿಕ್ಸ್ ಶೃಂಗಸಭೆಯ ಇತ್ತೀಚಿನ ಶೃಂಗಸಭೆಗಳು:
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
✧.2012 ರಲ್ಲಿ ನಡೆದಿರುವ ಬ್ರಿಕ್ಸ್ ಒಕ್ಕೂಟದ ನಾಲ್ಕನೇ ಶೃಂಗಸಭೆಯು ನವದೆಹಲಿಯಲ್ಲಿ ನಡೆದಿತ್ತು.  ಇದರಲ್ಲಿ ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಡಾಲರ್ ಬದಲು ಸ್ಥಳೀಯ ಕರೆನ್ಸಿಯಲ್ಲಿಯೇ ವ್ಯಾಪಾರ, ವಹಿವಾಟು ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಉದ್ಯಮಿಗಳಿಗೆ ಸಾಲ ನೀಡುವ ವ್ಯವಸ್ಥೆ ಮತ್ತು `ಬ್ರಿಕ್ಸ್ ಅಭಿವೃದ್ಧಿ ಬ್ಯಾಂಕ್ ಸ್ಥಾಪನೆ ಪ್ರಸ್ತಾಪವನ್ನು ಈ ಶೃಂಗಸಭೆಯಲ್ಲಿ ಕೈಗೊಳ್ಳಲಾಯಿತು.
✧.ಬ್ರಿಕ್ಸ್​ನ ಏಳನೇ ಸಮಾವೇಶ ರಷ್ಯಾದ ಉಫದಲ್ಲಿ ಜು.8 ಮತ್ತು 9ರಂದು ನಡೆಯಿತು.
✧.2016ರಲ್ಲಿ ಫೆಬ್ರವರಿಯಲ್ಲಿ ಬ್ರಿಕ್ ರಾಷ್ಟ್ರಗಳ ಅಧ್ಯಕ್ಷತೆಯು ಸರದಿಯಂತೆ ರಷ್ಯಾದಿಂದ ಭಾರತಕ್ಕೆ ಹಸ್ತಾಂತರವಾಗಲಿದೆ
✧.ಬ್ರಿಕ್ಸ್ ಎಂದರೆ 'ಬಿಲ್ಡಿಂಗ್ ರೆಸ್ಪಾನ್ಸಿವ್, ಇನ್‌ಕ್ಲೂಸಿವ್ ಆ್ಯಂಡ್ ಕಲೆಕ್ಟೀವ್ ಸಲ್ಯೂಷನ್ಸ್'(ಸಂವೇದನಾಶೀಲ, ಎಲ್ಲರನ್ನೂ ಒಳಗೊಂಡ ಮತ್ತು ಸಾಮೂಹಿಕ ಪರಿಹಾರಗಳನ್ನು ಹುಡುಕಿಕೊಳ್ಳುವುದು) ಎಂದು ಪ್ರಧಾನಿ ವ್ಯಾಖ್ಯಾನಿಸಿದ್ದಾರೆ.
✧.'2016ರಲ್ಲಿ ಭಾರತ ಬ್ರಿಕ್ಸ್ ನೇತೃತ್ವ ವಹಿಸಿಕೊಳ್ಳಲಿರುವ ಭಾರತ, ಒಕ್ಕೂಟದ ವಿಷಯದಲ್ಲಿ ಇದನ್ನೇ ಮೂಲ ಧ್ಯೇಯವನ್ನಾಗಿಸಿಕೊಳ್ಳಲಿದೆ,' ಎಂದು ಪ್ರಧಾನಿ ಅವರು ವಿವರಿಸಿದ್ದಾರೆ.


●. ನ್ಯೂ ಡೆವಲಫ್‌ಮೆಂಟ್‌ ಬ್ಯಾಂಕ್ ‘‌ (ಎನ್‌ಡಿಬಿ) ಬ್ರಿಕ್ಸ್‌’ ಬ್ಯಾಂಕ್ ನ ಕಾರ್ಯಾರಂಭ :
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
✧. ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ (ಬ್ರಿಕ್ಸ್‌) ಅಭಿವೃದ್ಧಿ ಬ್ಯಾಂಕ್‌ (ಬ್ರಿಕ್ಸ್‌ ಬ್ಯಾಂಕ್‌) ( 07/21/2015 ) ಚೀನಾದಲ್ಲಿ ಕಾರ್ಯಾರಂಭ ಮಾಡಿದೆ.
✧. ಭಾರತವೂ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಹಣಕಾಸಿನ ನೆರವು ಒದಗಿಸಲಿರುವ ಈ ನ್ಯೂ ಡೆವಲಫ್‌ಮೆಂಟ್‌ ಬ್ಯಾಂಕ್‌ (ಎನ್‌ಡಿಬಿ) ಐದು ಸಾವಿರ ಕೋಟಿ ಡಾಲರ್‌ (ಅಂದಾಜು ರೂ3 ಲಕ್ಷ ಕೋಟಿ) ಮೂಲ ಬಂಡವಾಳದೊಂದಿಗೆ ಅಸ್ತಿತ್ವಕ್ಕೆ ಬಂದಿದೆ.
✧. ಕೆ.ವಿ.ಕಾಮತ್‌ (67) ಎಂದೇ ಪರಿಚಿತರಾಗಿರುವ, ಕನ್ನಡಿಗ, ಮಂಗಳೂರಿನ ಕುಂದಾಪುರದ ವಾಮನ ಕಾಮತ್‌ ಅವರು  ‘ಬ್ರಿಕ್ಸ್‌’ ಬ್ಯಾಂಕ್‌ನ ಮೊದಲ ಅಧ್ಯಕ್ಷರು. ಮುಂದಿನ 5 ವರ್ಷಗಳ ಕಾಲ ಅವರ ಅಧಿಕಾರ ಅವಧಿ ಇರಲಿದೆ.
✧. ಬ್ರಿಕ್ಸ್‌ ಅಭಿವೃದ್ಧಿ ಬ್ಯಾಂಕನ್ನು ವಿಶ್ವಬ್ಯಾಂಕ್‌ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಗೆ (ಐಎಂಎಫ್‌) ಪರ್ಯಾಯ ಎಂದೇ ವಿಶ್ಲೇಷಿಸಲಾಗುತ್ತಿದೆ.
✧. ಚೀನಾದ ಹಣಕಾಸು ರಾಜಧಾನಿ ಎಂದೇ ಕರೆಯುವ ಶಾಂಘೈನಲ್ಲಿ, ಕೆ.ವಿ ಕಾಮತ್‌ ಅವರ ಜತೆಗೂಡಿ ಚೀನಾದ ವಾಣಿಜ್ಯ ಸಚಿವ ಲೂ ಜಿವಿ ಅವರು ಬ್ರಿಕ್ಸ್‌ ಬ್ಯಾಂಕ್‌ ಉದ್ಘಾಟಿಸಿದರು.


●. ಈ ಹಿಂದಿನ ಬ್ರಿಕ್ಸ್ ಸಮಾವೇಶಗಳು.
•┈┈┈┈┈┈┈┈┈┈┈┈┈┈┈┈┈┈┈┈┈•
✧. ರಷ್ಯಾದ ಯೆಕಟೆರಿನ್​ಬರ್ಗ್ ಮೊದಲ ಬ್ರಿಕ್ ಸಮಾವೇಶ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ) ಸಭೆ (2009ರ ಜೂ.16)
✧. ಬ್ರೆಜಿಲ್​ನ ಬ್ರಸಿಲಿಯದಲ್ಲಿ 2ನೇ ಬ್ರಿಕ್ ಸಮಾವೇಶ (2010 ಏ.16)
✧. ಚೀನಾದ ಸನ್ಯಾದಲ್ಲಿ 3ನೇ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ದ.ಆಫ್ರಿಕಾ) ಸಭೆ (2011ರ ಏ.14).
✧. ನವದೆಹಲಿಯಲ್ಲಿ 4ನೇ ಸಮಾವೇಶ (2012ರ ಮಾ.29).
✧. ದ.ಆಫ್ರಿಕಾದ ಡರ್ಬನ್​ನಲ್ಲಿ 5ನೇ ಸಮಾವೇಶ (2013ರ ಮಾ.26-27).
✧. ಬ್ರೆಜಿಲ್​ನ ಫೋರ್ಟಾಲೆಜದಲ್ಲಿ 6ನೇ ಸಮಾವೇಶ (2014ರ ಜು.15-17).

No comments:

Post a Comment