"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 26 November 2015

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ■.'ಬಿಮ್‌ಸ್ಟೆಕ್ ಅಂತರರಾಷ್ಟ್ರೀಯ ಸಂಘಟನೆ'ಯ ಕುರಿತು ವಿವರಿಸಿ. (BIMSTEC-The International Association) :

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
■.'ಬಿಮ್‌ಸ್ಟೆಕ್ ಅಂತರರಾಷ್ಟ್ರೀಯ ಸಂಘಟನೆ'ಯ ಕುರಿತು ವಿವರಿಸಿ.
(BIMSTEC-The International Association)  :
━━━━━━━━━━━━━━━━━━━━━━━━━━━━━━━━━━━━━━━━━━
★ಅಂತರರಾಷ್ಟ್ರೀಯ ಸಂಘಟನೆಗಳು.
(International Associations)

★ಅಂತರರಾಷ್ಟ್ರೀಯ ಅರ್ಥಶಾಸ್ತ್ರ
(International Economics)


●.ಬಿಮ್‌ಸ್ಟೆಕ್ (BIMSTEC) ಎಂದರೆ :
•┈┈┈┈┈┈┈┈┈┈┈┈┈┈┈┈┈┈┈┈┈┈┈•
✧. ‘ದ ಬೇ ಆಫ್ ಬೆಂಗಾಲ್ ಇನಿಶಿಯೇಟಿವ್ ಫಾರ್ ಮಲ್ಟಿ-ಸೆಕ್ಟೋರಲ್ ಟೆಕ್ನಿಕಲ್ ಆ್ಯಂಡ್ ಇಕಾನಮಿಕ್ ಕೋ-ಆಪರೇಶನ್’ (ಬಹುಕ್ಷೇತ್ರ ತಾಂತ್ರಿಕ ಹಾಗೂ ಆರ್ಥಿಕ ಸಹಕಾರಕ್ಕಾಗಿ ಬಂಗಾಳ ತೀರ ಸುಧಾರಣಾ ಶೃಂಗಸಭೆ)


●. ಸ್ಥಾಪನೆ :
•┈┈┈┈┈┈•
✧. 1997ರಲ್ಲಿ ಬ್ಯಾಂಕಾಕ್‌ನಲ್ಲಿ ಸ್ಥಾಪಿಸಲಾಯಿತು.


●. ಬಿಮ್‌ಸ್ಟೆಕ್ ಸಂಘಟನೆಯಲ್ಲಿ ಇರುವ ರಾಷ್ಟ್ರಗಳು:
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
✧.ಏಳು ಸದಸ್ಯ ರಾಷ್ಟ್ರಗಳು- ಬಾಂಗ್ಲಾದೇಶ, ಭೂತಾನ್, ಭಾರತ, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ ಹಾಗೂ ಥಾಯ್ಲೆಂಡ್ .


●. ಬಿಮ್‌ಸ್ಟೆಕ್ ಸಂಘಟನೆಯ ವೈಶಿಷ್ಟ್ಯಗಳು :
•┈┈┈┈┈┈┈┈┈┈┈┈┈┈┈┈┈┈┈┈┈┈•
✧.ಬಿಮ್‌ಸ್ಟೆಕ್ ಸಂಘಟನೆಯ ಏಳು ಸದಸ್ಯ ರಾಷ್ಟ್ರಗಳಾದ ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಥಾಯ್ಲೆಂಡ್, ಮ್ಯಾನ್ಮಾರ್, ಭೂತಾನ್ ಹಾಗೂ ನೇಪಾಳ ಜೊತೆಗೂಡಿದಲ್ಲಿ ಜಗತ್ತಿನ ಶೇಕಡ 20ರಷ್ಟು ಜನಸಂಖ್ಯೆಯನ್ನು ಹೊಂದಿದೆ
✧.ಏಳು ಸದಸ್ಯ ರಾಷ್ಟ್ರಗಳು ಸೇರಿದಂತೆ ದಕ್ಷಿಣ ಏಶ್ಯ ಹಾಗೂ ಆಗ್ನೇಯ ಏಶ್ಯ ರಾಷ್ಟ್ರಗಳ ನಡುವೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಬಿಮ್‌ಸ್ಟೆಕ್ ಮಹತ್ವದ ಪಾತ್ರ ವಹಿಸಲಿದೆ.


●. ಬಿಮ್‌ಸ್ಟೆಕ್ ನ ಪ್ರಮುಖ ಆದ್ಯತಾ ವಲಯಗಳು:
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
✧. ಭಯೋತ್ಪಾದನೆ ಹಾಗೂ ಅಪರಾಧಗಳ ತಡೆ, ವ್ಯಾಪಾರ ಹಾಗೂ ಹೂಡಿಕೆ, ಸಾರಿಗೆ ಮತ್ತು ಸಂಪರ್ಕ ಹಾಗೂ ಬಡತನ ನಿರ್ಮೂಲನೆಯಂತಹ ಪ್ರಮುಖ ಆದ್ಯತಾ ವಲಯಗಳನ್ನು ಒಳಗೊಂಡಿದೆ.


●. ಬಿಮ್‌ಸ್ಟೆಕ್ ನ ಶಾಶ್ವತ ಕಾರ್ಯಾಲಯ:
•┈┈┈┈┈┈┈┈┈┈┈┈┈┈┈┈┈┈┈┈┈•
✧.ಸೆಪ್ಟೆಂಬರ್ 13, 2014 ರಲ್ಲಿ ಬಿಮ್‌ಸ್ಟೆಕ್‌ನ ಶಾಶ್ವತ ಕಾರ್ಯಾಲಯವನ್ನು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಢಾಕಾದಲ್ಲಿ ಉದ್ಘಾಟಿಸಿದರು. ಬಿಮ್‌ಸ್ಟೆಕ್‌ನ ಶಾಶ್ವತ ಕಾರ್ಯಾಲಯವನ್ನು ಸ್ಥಾಪಿಸಲು 2011ರಲ್ಲಿ ಅದರ ಸದಸ್ಯರು ನಿರ್ಧರಿಸಿದ್ದು, ಢಾಕಾವನ್ನು ಕಚೇರಿ ತಾಣವಾಗಿ ಅಂತಿಮಗೊಳಿಸಿದ್ದರು.


●. ಬಿಮ್‌ಸ್ಟೆಕ್ ನ ಇತ್ತೀಚಿನ ಶೃಂಗಸಭೆಗಳು:
•┈┈┈┈┈┈┈┈┈┈┈┈┈┈┈┈┈┈┈┈┈┈┈•
✧.2014ರಲ್ಲಿ ಬಿಮ್‌ಸ್ಟೆಕ್ ನ ಮೂರನೇ ಶೃಂಗಸಭೆಯು ಮ್ಯಾನ್ಮಾರ್ ನ ನಯ್‌ ಪೈ ತಾವ್‌ ನಗರದಲ್ಲಿ ನಡೆಯಿತು.
✧.ಬೆಳೆಯುತ್ತಿರುವ ಭಯೋತ್ಪಾದನಾ ಆತಂಕ, ಸಾಗರಾತೀತ ಅಪರಾಧಗಳು ಹಾಗೂ ಮಾದಕ ವಸ್ತು ಕಳ್ಳಸಾಗಣೆಯ ವಿರುದ್ಧ ‘ಜಂಟಿ ಹೋರಾಟ’ ನಡೆಸುವ ತೀರ್ಮಾನ ಬಿಮ್‌ಸ್ಟೆಕ್‌ ಶೃಂಗ ಸಭೆಯಲ್ಲಿ ಏಳು ರಾಷ್ಟ್ರಗಳ ನಾಯಕರು ಕೈಗೊಂಡರು.
✧.ಎಲ್ಲಾ ವಿಧದ ಭಯೋತ್ಪಾದನೆ ಹಾಗೂ ರಾಷ್ಟ್ರಾತೀತ ಅಪರಾಧಗಳ ಕಾರ್ಯಾಚರಣೆಯಲ್ಲಿ ಸಂಪೂರ್ಣ ಸಹಕಾರ ನೀಡಲು ಪರಸ್ಪರ ಒಪ್ಪಿಕೊಂಡರು.

No comments:

Post a Comment