"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 26 November 2015

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ●. ಜಿ–20 ಅಂತರರಾಷ್ಟ್ರೀಯ ಸಂಘಟನೆ'ಯ ಕುರಿತು ವಿವರಿಸಿ. (G-20 Summit-The International Association) :

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
●. ಜಿ–20 ಅಂತರರಾಷ್ಟ್ರೀಯ ಸಂಘಟನೆ'ಯ ಕುರಿತು ವಿವರಿಸಿ.
(G-20 Summit-The International Association)  :
━━━━━━━━━━━━━━━━━━━━━━━━━━━━━━━━━━━━━━━━━━
ಅಂತರರಾಷ್ಟ್ರೀಯ ಸಂಘಟನೆಗಳು.
(International Associations)

ಅಂತರರಾಷ್ಟ್ರೀಯ ಅರ್ಥಶಾಸ್ತ್ರ
(International Economics)


●. ಜಿ-20 (G-20) ಸಮೂಹ ಎಂದರೆ :
•┈┈┈┈┈┈┈┈┈┈┈┈┈┈┈┈┈┈┈┈┈┈•
✧.ಜಿ-20ಯು ಅರ್ಜಂಟೀನ, ಆಸ್ಟ್ರೇಲಿಯ, ಬ್ರೆಝಿಲ್, ಕೆನಡ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಶ್ಯ, ಇಟಲಿ, ಜಪಾನ್, ದಕ್ಷಿಣ ಕೊರಿಯ, ಮೆಕ್ಸಿಕೊ, ರಶ್ಯ, ಸೌದಿ ಅರೇಬಿಯ, ದಕ್ಷಿಣ ಆಫ್ರಿಕ, ಟರ್ಕಿ, ಬ್ರಿಟನ್ ಹಾಗೂ ಅಮೆರಿಕ ಸೇರಿದಂತೆ 19 ಪ್ರತ್ಯೇಕ ರಾಷ್ಟ್ರಗಳು ಮತ್ತು ಐರೋಪ್ಯ ಒಕ್ಕೂಟ(ಇಯು) ಸೇರಿ ರಚಿತವಾದ ಒಂದು ಸಮೂಹ.


●. ಸ್ಥಾಪನೆ :
•┈┈┈┈┈┈•
✧. ಜಿ-20 ಸಮೂಹವನ್ನು 2008ರಲ್ಲಿ ಅಮೆರಿಕದಲ್ಲಿ ಪ್ರಾರಂಭಿಸಲಾಯಿತು.


■.ಜಿ-20 ಸಮೂಹದ ಇತ್ತೀಚಿನ ಶೃಂಗಸಭೆಗಳು:
•┈┈┈┈┈┈┈┈┈┈┈┈┈┈┈┈┈┈┈┈┈┈┈•
✧.2008ರಲ್ಲಿ ಅಮೇರಿಕದ ವಾಷಿಂಗ್‌ಟನ್ ನಲ್ಲಿ ಪ್ರಥಮ ಶೃಂಗಸಭೆಯು ನಡೆಯಿತು.
✧.2014 ನವೆಂಬರ್ 15 ಹಾಗೂ 16ರಂದು ಆಸ್ಟ್ರೇಲಿಯದ ಬ್ರಿಸ್ಬೇನ್‌ನಲ್ಲಿ ಜಿ-20 ಶೃಂಗಸಭೆಯು ನಡೆಯಿತು.
✧.ಇತ್ತೀಚೆಗೆ ನ.15, 2015 ರಂದು ಟರ್ಕಿಯ ಅಂತಾಲ್ಯಾ ನಗರದಲ್ಲಿ 9ನೆ ಜಿ–20 ರಾಷ್ಟ್ರಗಳ ಶೃಂಗಸಭೆಯು ನಡೆಯಿತು.
✧.ಯುರೋಪ್ ರಾಷ್ಟ್ರಗಳ ವಲಸೆ ಸಮಸ್ಯೆ ಸೇರಿದಂತೆ ಭಯೋತ್ಪಾದನೆ, ಹವಾಮಾನ ವೈಪರೀತ್ಯ, ಕಪ್ಪು ಹಣ ವಾಪಸಿಗೆ ಜಾಗತಿಕ ಸಹಕಾರ ಇವೇ ಮೊದಲಾದ ವಿಷಯಗಳನ್ನು ಚರ್ಚಿಸಲಾಯಿತು. .
✧.ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ , ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್, ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಮತ್ತು ಚೀನಾ ಅಧ್ಯಕ್ಷ  ಕ್ಸಿ ಜಿನ್‌ಪಿಂಗ್ ಸೇರಿದಂತೆ ಪ್ರಮುಖ ನಾಯಕರು ಪಾಲ್ಗೊಂಡಿದ್ದರು.
✧.2015ರ ಡಿಸೆಂಬರ್‌ನಲ್ಲಿ ಜಿ-20 ಅಧ್ಯಕ್ಷತೆಯನ್ನು ಚೀನಾ ವಹಿಸಿಕೊಳ್ಳುತ್ತಿರುವುದು.
ಇಲ್ಲಿಯವರೆಗೆ 6 ಜಿ-20 ಶೃಂಗಸಭೆಗಳು ನಡೆದಿವೆ.

No comments:

Post a Comment