"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 22 November 2015

☀ ಇಂಗ್ಲಿಷ್ ಗ್ರಾಮರ್ ಹಾಗು ವ್ಯಕ್ತಿ ವಿಕಸನಕ್ಕಾಗಿ ಇಂಗ್ಲಿಷ್— ಭಾಗ-3. (English Grammar for Personality Development-Part 3) (ಸಂಕ್ಷಿಪ್ತವಾಗಿ ವಿವರಿಸಲಾಗಿದೆ)

☀ ಇಂಗ್ಲಿಷ್ ಗ್ರಾಮರ್ ಹಾಗು ವ್ಯಕ್ತಿ ವಿಕಸನಕ್ಕಾಗಿ ಇಂಗ್ಲಿಷ್—  ಭಾಗ-3.
(English Grammar for Personality Development-Part 3)
(ಸಂಕ್ಷಿಪ್ತವಾಗಿ ವಿವರಿಸಲಾಗಿದೆ)
 ━━━━━━━━━━━━━━━━━━━━━━━━━━━━━━━━━━━━━━━━━━━━━
★ಇಂಗ್ಲಿಷ್ ಗ್ರಾಮರ್ 
(English Grammar)


■. ಸಂಭಾಷಣೆಯಲ್ಲಾಗಲೀ ಬರವಣಿಗೆಯಲ್ಲಾಗಲೀ ಸತ್ವಯುತ ವಾಕ್ಯಗಳು ವಿಭಿನ್ನ ರೀತಿಯ ವಿನ್ಯಾಸಗಳನ್ನು (structures) ಹೊಂದಿರುತ್ತವೆ. ಸ್ಥೂಲವಾಗಿ, ಭಾಷೆ ವಿವಿಧ ಘಟಕಗಳನ್ನು (units) ಹೊಂದಿರುತ್ತವೆ.
ಅವುಗಳೆಂದರೆ,
●. sentencee (ವಾಕ್ಯ),
●. clausee (ವಾಕ್ಯಾಂಶ),
●. phrasee(ಪದಪುಂಜ),
●. phonemee (ಧ್ವನಿಕಣ).


■. ಈ ಘಟಕಗಳ ಅಂತರ್‌ ಸಂಬಂಧವನ್ನು ಅನುಸರಿಸಿ, ಇಂಗ್ಲಿಷ್ ವಾಕ್ಯಗಳನ್ನು simple sentence, complex sentence ಮತ್ತು compound sentence ಎಂದು ವಿಂಗಡಿಸಬಹುದು.

■. ಈ ವಿಂಗಡಣೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ನಾವು clause ಎಂದರೇನು ಎಂದು ತಿಳಿದುಕೊಳ್ಳಬೇಕು.
●. Main clause use ಮತ್ತು
●. sub-ordinate clause  ಎಂಬ ಎರಡು ವಿಧವಾದ ವಾಕ್ಯಾಂಶಗಳನ್ನು ಇಂಗ್ಲಿಷ್ ಭಾಷೆ ಗುರುತಿಸುತ್ತದೆ.
ಈ ಉದಾಹರಣೆಯನ್ನು ಗಮನಿಸಿ: When it started raining, she opened her umbrella.

■. ಈ ವಾಕ್ಯದಲ್ಲಿ, ‘she opened her umbrella’ ಎಂಬುದನ್ನು main clause ಎನ್ನುತ್ತೇವೆ. ಏಕೆಂದರೆ, ವಾಕ್ಯದ ಈ ಭಾಗ, ಸ್ವತಂತ್ರವಾಗಿ ಅರ್ಥಪೂರ್ಣವಾಗಿದೆ. ಅಂದರೆ, ತನ್ನ ಅರ್ಥವಂತಿಕೆಗೆ ಅದು ವಾಕ್ಯದ ಇತರ ಭಾಗಗಳ ಮೇಲೆ ಅವಲಂಬಿತವಾಗಿಲ್ಲ. ಇದೇ ಕಾರಣಕ್ಕಾಗಿ, ಈ main clause ಅನ್ನು independent clausese ಎಂದೂ ಕರೆಯುತ್ತೇವೆ.

■. ವಾಕ್ಯದ ಉಳಿದ ಭಾಗವನ್ನು  (when it started raining), sub-ordinate clause ಎಂದು ಕರೆಯುತ್ತೇವೆ. ಅದು ತನ್ನ ಅರ್ಥವಂತಿಕೆಗಾಗಿ main clause ಮೇಲೆ ಅವಲಂಬಿತವಾಗಿರುವುದರಿಂದ ಇದನ್ನು dependent clause ಎಂದೂ ಕರೆಯುತ್ತೇವೆ.
ಈ ಪರಿಕಲ್ಪನೆಗಳನ್ನು ಅನುಸರಿಸಿ, ಮೇಲೆ ಹೇಳಿದಂತೆ ಮೂರು ವಿಧವಾದ ವಾಕ್ಯ ವಿನ್ಯಾಸಗಳು ಕಾಣಸಿಗುತ್ತವೆ.


■. ಮೊದಲಿಗೆ simple sentence ಎಂದರೇನು ಎಂದು ತಿಳಿದುಕೊಳ್ಳೋಣ.
 ಈ ವಾಕ್ಯಗಳನ್ನು ಗಮನಿಸಿ:
1.She goes to college regularly.
2. The sun-set is beautiful.

■. ಒಂದೇ main clause ಇರುವಂತಹ ಈ ರೀತಿಯ ವಾಕ್ಯಗಳನ್ನು simple sentence ಎನ್ನುತ್ತೇವೆ.
ಈಗ complex sentence ಗಳನ್ನು ನೋಡಿ.
1. He continued walking, even though he was very tired.
2. You will succeed, if you work hard.

■. ಈ ವಾಕ್ಯಗಳಲ್ಲಿ ‘He continued walking’ ‘You will succeed’ ಎಂಬ ಒಂದೊಂದು mmain clause  ಹಾಗೂ ‘even though he was very tired’ ‘if you work hard’ ಎನ್ನುವಂತಹ sub-ordinate clause ಗಳು ಇರುತ್ತವೆ.

■. ಗಮನಿಸಬೇಕಾದ ವಿಷಯವೆಂದರೆ, complex sentence ನಲ್ಲಿ ಎಷ್ಟೇ sub-ordinate clause ಗಳಿದ್ದರೂ, main clause ಮಾತ್ರ ಒಂದೇ ಇರುತ್ತದೆ. ಹಾಗೂ ಈ clause ಗಳನ್ನು ಬೆಸೆಯುವಂತಹ conjunctionಗಳೆಂದರೆ,wh-words, if, that, though, although ಮುಂತಾದವುಗಳು.

■. ಎರಡು main clauseಗಳನ್ನು, and, or, but, yet ಮುಂತಾದ  conjunction ಗಳು ಬೆಸೆದಾಗ, ಅದು compound sentence e ಎನ್ನಿಸಿಕೊಳ್ಳುತ್ತದೆ.

ಉದಾ: She is a professional dancer and an amateur singer.
ನಾವು ಈ ವಿವಿಧ ವಾಕ್ಯ ವಿನ್ಯಾಸಗಳನ್ನು ಸರಿಯಾಗಿ ಅರ್ಥಮಾಡಿಕೊಂಡು, ನಮ್ಮ ಬರವಣಿಗೆಯಲ್ಲಿ ರೂಢಿಸಿಕೊಂಡಾಗ, ನಮ್ಮ ಭಾಷೆಗೆ ವೈವಿಧ್ಯಮಯ ಜೀವಂತಿಕೆ ಒದಗುತ್ತದೆ.

■. ಭಾಷೆ ನಿರಂತರವಾಗಿ ಚಲಿಸುತ್ತಿರುವ, ನಮ್ಮ ಅಗತ್ಯಗಳಿಗೆ ಸ್ಪಂದಿಸಿ ಮಾರ್ಪಾಟಾಗುತ್ತಿರುವ ಒಂದು ವಿದ್ಯಮಾನ. ನಮ್ಮ ದಿನನಿತ್ಯದ ಸಂಭಾಷಣೆಯೂ ಇದಕ್ಕೆ ಅಪವಾದವಲ್ಲ. ಆದ್ದರಿಂದ, ಹಲವು ವರ್ಷಗಳ ಹಿಂದೆ ಉಪಯೋಗಿಸುತ್ತಿದ್ದ ಇಂಗ್ಲಿಷ್‌ಗೂ, ಈಗ ಉಪಯೋಗಿಸುತ್ತಿರುವ ಇಂಗ್ಲಿಷ್‌ಗೂ ಸಾಕಷ್ಟು ವ್ಯತ್ಯಾಸಗಳನ್ನು ಕಾಣಬಹುದು.


■. ಈ ಬದಲಾವಣೆಗಳನ್ನು ನಾವು ಅರಿತು ಮೈಗೂಡಿಸಿಕೊಂಡಾಗ ಮಾತ್ರ ನಮ್ಮ ಭಾಷೆಗೆ ತಾಜಾತನವಿರುತ್ತದೆ. ಹಾಗಾಗಿ, ವಿವಿಧ ಸಂದರ್ಭಗಳಲ್ಲಿ ಉಪಯೋಗಿಸ ಬಹುದಾದ ಕೆಲವು ಉಪಯುಕ್ತ ಆಧುನಿಕ Englishh ಪದಗಳು/ವಾಕ್ಯಗಳನ್ನು ಇಲ್ಲಿ ನೋಡೋಣ.    
         
■. ಇನ್ನೊಬ್ಬರಿಂದ ಸಹಾಯ ಪಡೆದ ಮೇಲೆ, ಸಾಮಾನ್ಯವಾಗಿ thank you very much ಅಥವಾ thanks a lot  ಎನ್ನುತ್ತೇವೆ. ಅವುಗಳಿಗೆ ಬದಲಾಗಿ thanks a ton / thanks a million / thanks so much ಎಂದು ಕೂಡ ಹೇಳಬಹುದು.
ಇತರರು ನಮ್ಮ ssಸಹಾಯ ಪಡೆದ ಮೇಲೆ, ನಮಗೆ thank you ಹೇಳಿದಾಗ, ನಾವು mmention not / you are welcomee ಎಂದು ಹೇಳುವ ವಾಡಿಕೆ ಇದೆ. ಇವಕ್ಕೆ ಬದಲಾಗಿ mmy pleasure / its nothing at all  ಎಂಬುದನ್ನೂ ಹೇಳಬಹುದು.

■. ನಾವು ಯಾರನ್ನಾದರೂ ಸಂಧಿಸಬೇಕಾದ ಸಂದರ್ಭದಲ್ಲಿ, ’ನಿಮ್ಮನ್ನು ನಂತರ ಸಂಧಿಸುತ್ತೇನೆ’ ಎಂದು ಹೇಳುವಾಗ sI shall meet you latter  ಎಂದು ಹೇಳುವುದು ಸಾಮಾನ್ಯವಾದ ರೀತಿ. ಇದಕ್ಕೆ ಬದಲಾಗಿ so long / catch you later /  looking forward to meeting you again  ಎಂತಲೂ ಹೇಳಬಹುದು.

■. ಚೆನ್ನಾಗಿ ಕೆಲಸ ಮಾಡುವವರನ್ನು ನೋಡಿದಾಗ  vvery good / keep it up  ಎಂದು ಹೇಳುವ ಬದಲು good job / great job / that was amazingg ಎಂದು ನಮ್ಮ ಮೆಚ್ಚುಗೆ ಯನ್ನು ವ್ಯಕ್ತಪಡಿಸಬಹುದು. Coolಎನ್ನುವ ಪದವನ್ನು ತಾಪಮಾನಸೂಚಕವಾದ ಪದವನ್ನಾಗಿ ಮಾತ್ರವಲ್ಲದೆ ಇನ್ನೂ ಹಲವಾರು ಸಂದರ್ಭಗಳಲ್ಲಿ ಬಳಸಬಹುದು.

■. ಯಾರಾದರೂ  how are you?  ಎಂದು ಕೇಳಿದಾಗ finee ಎನ್ನುವ ಬದಲಾಗಿ cool ಎನ್ನಬಹುದು. ಎಲ್ಲೆಲ್ಲಿ good ಎಂದು ಬಳಸುತ್ತೇವೆಯೋ ಅಲ್ಲೆಲ್ಲಾ  cool ಎನ್ನುವ ಪದವನ್ನು ಸಾಮಾನ್ಯವಾಗಿ ಬಳಸಬಹುದು. ’ತುಂಬಾ ಚೆನ್ನಾಗಿದೆ’ ಎನ್ನುವುದನ್ನು that`s cool ಎಂದೂ ಸೂಚಿಸಬಹುದು.

■. ಅದೇ ರೀತಿ chill ಎನ್ನುವ ಪದಕ್ಕೆ ಚಳಿ ಎಂದಷ್ಟೇ ಅರ್ಥವಲ್ಲ. ಈ ಪದವನ್ನು    don’t worry /  enjoy / relax ಎನ್ನುವುದಕ್ಕೂ ಪರ್ಯಾಯವಾಗಿ ಬಳಸಬಹುದು.

■. ನಮ್ಮ ಸ್ನೇಹಿತರಿಗೆ ಅಥವಾ ನಮಗಿಂತ ಕಿರಿಯರಿಗೆ ನಮ್ಮ phone number  ಅನ್ನು ಕೊಟ್ಟು ’ನನ್ನನ್ನು contact ಮಾಡಬೇಕಾದರೆ ಈ ನಂಬರ್‌ಗೆ ಕರೆ ನೀಡಿ’ ಎಂದು ಹೇಳುವಾಗ ’‘contact me at this number’ ’ ಎಂದು ಹೇಳುವ ಬದಲು you can reach me at this number / give me a buzz / give me a tinkle    ಎಂಬುವುವು ಈಗ ಬಳಕೆಯಲ್ಲಿರುವ ವಾಕ್ಯಗಳು.  ಆದರೆ, ನಮಗಿಂತ ಹಿರಿಯರ ಬಳಿ ಮಾತನಾಡುವಾಗcontact  ಎನ್ನುವ ಪದವೇ ಅತ್ಯುತ್ತಮ ಆಯ್ಕೆ.

■. ಈ ಹೊಸ ರೀತಿಯ ವಾಕ್ಯಗಳನ್ನೂ, ಅವುಗಳ ಉಪಯೋಗ ಸಂದರ್ಭಗಳನ್ನೂ ನಾವು ಕರಗತ ಮಾಡಿಕೊಂಡಾಗ ಭಾಷೆಯ ಮೇಲಿನ ನಮ್ಮ ಹಿಡಿತ ಹೆಚ್ಚುತ್ತದೆ.
To be Continued....


(ಕೃಪೆ: ಪ್ರಜಾವಾಣಿ)

No comments:

Post a Comment