"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 28 November 2015

■. 2014ರ ಕೆಎಎಸ್ ಪರೀಕ್ಷಾ ಪ್ರಶ್ನೆ : (ಸಾಮಾನ್ಯ ಅಧ್ಯಯನ -ಪತ್ರಿಕೆ -I) ☀.ಪ್ರಾದೇಶಿಕ ಅಸಮತೋಲನಗಳು ಕಡಿಮೆಯಾಗುವುದಕ್ಕಾಗಿ ಕರ್ನಾಟಕ ಸರ್ಕಾರವು ಜಾರಿಗೆ ತಂದ ವಿಶೇಷ ಅಭಿವೃದ್ಧಿ ಯೋಜನೆ (SDP) ಯ ಪ್ರಧಾನ ಧ್ಯೇಯಗಳೇನು? ಎಸ್.ಡಿ.ಪಿ.ಯ ಅನುಷ್ಠಾನ ಕುರಿತು ವಿಮರ್ಶಾತ್ಮಕವಾಗಿ ಪರಿಶೀಲಿಸಿ.(12½) (What are the major objectives of Special Development Plan (SDP) introduced by Government of Karnataka to reduce regional Imbalances? Critically examine the implementation is SDP.)

■. 2014ರ  ಕೆಎಎಸ್ ಪರೀಕ್ಷಾ ಪ್ರಶ್ನೆ : (ಸಾಮಾನ್ಯ ಅಧ್ಯಯನ -ಪತ್ರಿಕೆ -I)
☀.ಪ್ರಾದೇಶಿಕ ಅಸಮತೋಲನಗಳು ಕಡಿಮೆಯಾಗುವುದಕ್ಕಾಗಿ ಕರ್ನಾಟಕ ಸರ್ಕಾರವು ಜಾರಿಗೆ ತಂದ ವಿಶೇಷ ಅಭಿವೃದ್ಧಿ ಯೋಜನೆ (SDP) ಯ ಪ್ರಧಾನ ಧ್ಯೇಯಗಳೇನು? ಎಸ್.ಡಿ.ಪಿ.ಯ ಅನುಷ್ಠಾನ ಕುರಿತು ವಿಮರ್ಶಾತ್ಮಕವಾಗಿ ಪರಿಶೀಲಿಸಿ.(12½)

(What are the major objectives of Special Development Plan (SDP) introduced by Government of Karnataka to reduce regional Imbalances? Critically examine the implementation is SDP.)
━━━━━━━━━━━━━━━━━━━━━━━━━━━━━━━━━━━━━━━━━━
 ★2014 ರ ಕೆಎಎಸ್ ಪರೀಕ್ಷೆ ಪ್ರಶ್ನೋತ್ತರ
(2014 KAS question paper solutions)


— ಪ್ರಾದೇಶಿಕ ಅಸಮಾನತೆಯು 1956 ರಲ್ಲಿ ರಾಜ್ಯದ ಪುನರ್ವಿಂಗಡನೆಯಾದ ಕಾಲದಿಂದಲೂ ಇದೆ. ರಾಜ್ಯಕ್ಕೆ ಹೊಸದಾಗಿ ಸೇರಲ್ಪಟ್ಟ ಅಂದಿನ ಹೈದ್ರಾಬಾದ್ ಮತ್ತು ಬಾಂಬೆ ರಾಜ್ಯದ ಪ್ರದೇಶಗಳು, ಹಳೆಯ ಮೈಸೂರು ರಾಜ್ಯದ ಪ್ರದೇಶಕ್ಕಿಂತ ಕಡಿಮೆ ಅಭಿವೃದ್ಧಿ ಹೊಂದಿದ್ದವು.ಈ ಎರಡೂ ಪ್ರದೇಶಗಳಿಂದ ರಾಜ್ಯದ ಉತ್ತರದ ಭಾಗವು ರಚಿಸಲ್ಪಟ್ಟಿದೆ. ಈ ಮೊದಲಿನ ಗಮನಾರ್ಹ ಪ್ರಯತ್ನಗಳಲ್ಲಿನ ಅನುಪಸ್ಥಿತಿಯಿಂದಾಗಿ ಅಭಿವೃದ್ಧಿಯ ಅಂತರವು ಕಾಲಕ್ರಮೇಣ ಹೆಚ್ಚುತ್ತಾ ಸಾಗಿ ಈ ಪ್ರದೇಶದ ಜನರನ್ನು ಅಭಿವೃದ್ಧಿಯ ಮುಖ್ಯವಾಹಿನಿಯಿಂದ ಅಮುಖ್ಯೀಕರಣ  (Marginalization) ಮತ್ತು ಹೊರಗಿಡುವಿಕೆ (Exclusion)ಗೆ ಕಾರಣವಾಯಿತು. ಇದೆಲ್ಲದರ ನಡುವೆ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಕರ್ನಾಟಕ ಸರ್ಕಾರದಿಂದ ರಚಿಸಲ್ಪಟ್ಟ ಉನ್ನತಾಧಿಕಾರ ಸಮಿತಿಯ ಶಾಸ್ತ್ರೀಯ ಅಧ್ಯಯನದಿಂದ ಕಂಡುಕೊಂಡ ಅಭಿವೃದ್ಧಿ ನಡುವಿನ ಅಂತರವನ್ನು ಮುಕ್ತಾಯ ಮಾಡುವ ಪ್ರಕ್ರಿಯೆಯನ್ನು ಸರ್ಕಾರವು ಇತ್ತೀಚಿನ ವರ್ಷಗಳಲ್ಲಿ ತೀವ್ರಗೊಳಿಸಿದೆ.

■. ವಿಶೇಷ ಅಭಿವೃದ್ಧಿ ಯೋಜನೆ (SDP) ಯ ಪ್ರಧಾನ ಧ್ಯೇಯಗಳು:
━━━━━━━━━━━━━━━━━━━━━━━━━━━━━━━━━━━━━━

— ರಾಜ್ಯದಲ್ಲಿನ ಪ್ರಾದೇಶಿಕ ಅಸಮತೋಲನೆಯನ್ನು ಅಧ್ಯಯಿಸಿ ಅವುಗಳ ನಿವಾರಣೆಗೆ ಕಾರ್ಯತಂತ್ರವನ್ನು ಶಿಫಾರಸ್ಸು ಮಾಡಲು ಪ್ರೊ ನಂಜುಂಡಪ್ಪ ಅವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರವು ಒಂದು ಉನ್ನತ ಅಧಿಕಾರ ಸಮಿತಿಯನ್ನು ರಚಿಸಿತು. ವಿಶೇಷ ಅಭಿವೃದ್ಧಿ ಯೋಜನೆಯು ಡಾ.ನಂಜುಂಡಪ್ಪ ಸಮಿತಿಯ ಮುಖ್ಯ ಶಿಫಾರಸ್ಸಾಗಿರುತ್ತದೆ. ಈ ಸಮಿತಿಯು ರಾಜ್ಯದಲ್ಲಿ ಹಿಂದುಳಿದ 114 ತಾಲ್ಲೂಕುಗಳ ಮಟ್ಟವನ್ನು ಇತರ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳ ಮಟ್ಟಕ್ಕೇರಿಸಲು ಬೇಕಾದ ಸಂಪನ್ಮೂಲಗಳನ್ನು ಅಂದಾಜಿಸಿದೆ.

●. ಒಟ್ಟಾರೆ ರಾಜ್ಯದಲ್ಲಿನ ಸಮತೋಲಿತ ಅಭಿವೃದ್ಧಿಯನ್ನು ಸಾಧಿಸುವ ದಿಸೆಯಲ್ಲಿ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳ ಮಟ್ಟಕ್ಕೆ ಹಿಂದುಳಿದ 114 ತಾಲೂಕುಗಳನ್ನು ತರುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುವುದು.

●. ವಿವಿಧ ವಲಯ ಮತ್ತು ಪ್ರದೇಶಗಳಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಮುಖಾಂತರ ಹಿಂದುಳಿದ ತಾಲ್ಲೂಕುಗಳನ್ನು ಅಭಿವೃದ್ಧಿ ಪಡಿಸುವುದು.

●. ಹಿಂದುಳಿದ ತಾಲ್ಲೂಕುಗಳಲ್ಲಿ ಗುರುತಿಸಲಾದ ವಲಯಗಳಲ್ಲಿ ಬಾಕಿ ಇರುವ ಮೂಲ ಸೌಲಭ್ಯಗಳನ್ನು ಒದಗಿಸುವುದು.

●. ಹಿಂದುಳಿದ ತಾಲ್ಲೂಕುಗಳಿಗೆ ಅಗತ್ಯ ವಲಯಗಳಲ್ಲಿ ಅವಶ್ಯವಾದ ಸಂಘ-ಸಂಸ್ಥೆಗಳ ಸ್ಥಾಪನೆ ಮೂಲಕ ಅಸಮತೋಲನಮನ್ನು ನಿವಾರಿಸುವುದು.

●. ಹಿಂದುಳಿದ ತಾಲ್ಲೂಕುಗಳಲ್ಲಿ ಸ್ಥಳೀಯ ಅಗತ್ಯತೆಗಳನ್ನು ಗುಣವಾಗಿ ಕಾರ್ಯಕ್ರಮವನ್ನು ರೂಪಿಸುವ ಮೂಲಕ ಸಂಬಂಧಿಸಿದ ವಲಯಗಳಲ್ಲಿ ಸೇವೆಗಳ ಪ್ರಮಾಣವನ್ನು ರಾಜ್ಯದ ಸರಾಸರಿ ಮಟ್ಟಕ್ಕೆ ತರುವುದು.

●. ಈ ಕೆಳಗಿನ ಮೂರು ಆದ್ಯತೆಗಳನ್ನು ಒಳಗೊಂಡಂತೆ ಕ್ರಿಯಾ ಯೋಜನೆಯನ್ನು ತಯಾರಿಸಲು ಯೋಜನಾ ಪ್ರಾಧಿಕಾರಕ್ಕೆ ಸಹಕಾರ ನೀಡುವುದು. ಮೊದಲನೇಯ ಆದ್ಯತೆಯೆಂದರೆ ಮೊದಲ ಎರಡು ವರ್ಷಗಳಲ್ಲಿ ಅತ್ಯಂತ ಹಿಂದುಳಿದ ತಾಲೂಕುಗಳನ್ನು ಅಭಿವೃದ್ಧಿಗೊಳಿಸುವುದು;


■. ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಠಾನ :
━━━━━━━━━━━━━━━━━━━━━━━━━━
— ವಿಶೇಷ ಅಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ತಾಲ್ಲೂಕುಗಳು ಸಲ್ಲಿಸಿದ ಬೇಡಿಕೆಯನ್ನಾಧರಿಸಿ ರೂಪಿಸಲಾಗುತ್ತದೆ. ವಿಶೇಷ ಅಭಿವೃದ್ಧಿ ಯೋಜನೆಯಡಿ ಕೈಗೊಂಡ ಕಾರ್ಯಕ್ರಮಗಳ ಪ್ರಗತಿಯನ್ನು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕೆ.ಡಿ.ಪಿ. ಸಭೆಗಳಲ್ಲಿ ಪರಿಶೀಲನೆ ಮಾಡಲಾಗುತ್ತದೆ. ವಿಶೇಷ ಅಭಿವೃದ್ಧಿ ಯೋಜನೆಯಡಿ ಕೈಗೊಂಡ ಕಾರ್ಯಕ್ರಮಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯ ಮಾಹಿತಿಯನ್ನು ಆನ್ ಲೈನ್‍ನಲ್ಲಿ ದೊರಕಿಸುವ ಸಲುವಾಗಿ ಮಾಹಿತಿ ನಿರ್ವಹಣಾ ವ್ಯವಸ್ಥೆ (ಎಂಐಎಸ್) ಯನ್ನು ಅಭಿವೃದ್ಧಿ ಪಡಿಸಲಾಗಿದೆ. ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಠಾನ ಮತ್ತು ಉಸ್ತುವಾರಿಗಾಗಿ ಯೋಜನಾ ಇಲಾಖೆಯಲ್ಲಿ ಒಂದು ವಿಶೇಷ ಕೋಶವನ್ನು ರಚಿಸಲಾಗಿದೆ.

●. ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ಪ್ರದೇಶಗಳ ಮಟ್ಟಕ್ಕೆ ಹಿಂದುಳಿದ ಪ್ರದೇಶಗಳನ್ನು ಅಭಿವೃದ್ಧಿಗೊಳಿಸಲು ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದ್ದಾಗ್ಯೂ ಮಾನವ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಸೂಚಿಗಳಲ್ಲಿ ಅಂತರಗಳು ಇನ್ನೂ ಹಾಗೆಯೇ ಉಳಿದಿವೆ.

●. ಅಭಿವೃದ್ಧಿ ಪಥದಲ್ಲಿ ನೆಲೆಯೂರಿರುವ ಕಂಟಕಪ್ರಾಯಗಳು ಇನ್ನೂ ಕೂಡಾ ಬಲಶಾಲಿಯಾಗಿವೆ.

●. ತ್ವರಿತಗತಿಯ, ಅಧಿಕ ವ್ಯಾಪ್ತಿತ್ವ ಹಾಗೂ ಸುಸ್ಥಿರ ಅಭಿವೃದ್ಧಿ - ಇವುಗಳು ಬೆಳವಣಿಗೆಯ ಪ್ರಮುಖ ಅಂಶವಾಗಿದ್ದು ಈ ನಿಟ್ಟಿನಲ್ಲಿ ಅಭಿವೃದ್ಧಿಯಲ್ಲಿನ ಅಂತರಗಳನ್ನು ಕಡಿಮೆ ಮಾಡಲು ಹಾಗೂ ರಾಜ್ಯದ ಎಲ್ಲಾ ಪ್ರದೇಶದ ಜನರಿಗೆ ಅಭಿವೃದ್ಧಿಯ ಪ್ರಯೋಜನಗಳು ಸಮನಾಗಿ ತಲಪುವಂತೆ ಮಾಡುವ ತೀವ್ರ ಯತ್ನಗಳ ಅವಶ್ಯಕತೆಯಿರುತ್ತದೆ.

●. ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳೊಂದಿಗೆ ಶಿಕ್ಷಣ, ಆರೋಗ್ಯ, ಪೌಷ್ಟಿಕಆಹಾರ, ಕೌಶಲ್ಯ ಅಭಿವೃದ್ದಿ ಮುಂತಾದ ಚಟುವಟಿಕೆಗಳನ್ನೂ ಕೇಂದ್ರೀಕರಿಸುವ ಅವಶ್ಯಕತೆ ಇರುತ್ತದೆ. ಆದುದರಿಂದ ಪ್ರದೇಶದ ಸವಾಲುಗಳನ್ನು ಸ್ಪಂದಿಸಿ ಬೇಡಿಕೆಗಳಿಗನುಸಾರ ಯೋಜನೆಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಿಸಬೇಕಾಗುತ್ತದೆ.

No comments:

Post a Comment