"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 7 November 2015

●. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ☀.ಗ್ಲೋಬಲ್ ಪೊಜಿಶನಿಂಗ್ (GPS) ಸಿಸ್ಟಂ ಎಂದರೇನು? ಅದರ ಪ್ರಮುಖ ಉಪಯೋಗಗಳೊಂದಿಗೆ ಕಾರ್ಯನಿರ್ವಹಣೆಯ ಕುರಿತು ಬರೆಯಿರಿ. (Global Positioning System) :

●. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
☀.ಗ್ಲೋಬಲ್ ಪೊಜಿಶನಿಂಗ್ (GPS) ಸಿಸ್ಟಂ ಎಂದರೇನು?  ಅದರ ಪ್ರಮುಖ ಉಪಯೋಗಗಳೊಂದಿಗೆ ಕಾರ್ಯನಿರ್ವಹಣೆಯ ಕುರಿತು ಬರೆಯಿರಿ.
(Global Positioning System) :
━━━━━━━━━━━━━━━━━━━━━━━━━━━

●.ಮಾಹಿತಿ ಹಾಗೂ ತಂತ್ರಜ್ಞಾನ
(Information and Technology)

●.ಸಾಮಾನ್ಯ ಅಧ್ಯಯನ
(General Studies)


●.ಈ ವ್ಯವಸ್ಥೆಯು ಇಂದು ಅತಿ ಹೆಚ್ಚು ಉಪಯುಕ್ತತೆಯನ್ನು ಹೊಂದಿದ್ದು, ಹಲವಾರು ಕ್ಷೇತ್ರಗಳಲ್ಲಿ ಲಾಭದಾಯಕವಾಗಿ ಈ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದೆ.

●.ಜಿ.ಪಿ.ಎಸ್. ತಂತ್ರಜ್ಞಾನವು ಕೃತಕ ಉಪಗ್ರಹಗಳು ಕಳುಹಿಸುವ ಮಾಹಿತಿ ಹಾಗೂ ಭೂ ಮೇಲ್ಮೈಯಲ್ಲಿ ಯಾವುದೇ ವ್ಯಕ್ತಿಯ ಬಳಿಯಿರುವ ರಿಸೀವರ್‍ಗಳಿಂದ ಕಾರ್ಯ ನಿರ್ವಹಿಸಲ್ಪಡುವುದು.

●.ಇದರ ಮುಖ್ಯ ಕಾರ್ಯ ಭೂ ಮೇಲ್ಮೈಯಲ್ಲಿನ ಯಾವುದೇ ಒಂದು ಸ್ಥಿರವಾಗಿರುವ ಅಥವಾ ಚಲಿಸುತ್ತಿರುವ ವಸ್ತು ಅಥವಾ ವ್ಯಕ್ತಿಯ ಸ್ಥಾನವನ್ನು ಅಕ್ಷಾಂಶ ಮತ್ತು ರೇಖಾಂಶಗಳ ಮೂಲಕ ನಿಖರವಾಗಿ ಸೂಚಿಸುವುದು ಹಾಗೂ ಆ ವಸ್ತುವಿನ ಸ್ಥಾನದ ಎತ್ತರವನ್ನು ಸಹ ಸೂಚಿಸುವುದು.


☀.ಕಾರ್ಯ ನಿರ್ವಹಣೆ :
━━━━━━━━━━━━━━

●.ಜಿ.ಪಿ.ಎಸ್ ವ್ಯವಸ್ಥೆಯು 24 ಕೃತಕ ಉಪಗ್ರಹಗಳ ವ್ಯವಸ್ಥೆಯನ್ನು ಒಳಗೊಂಡಿದ್ದು, ಇದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನವು ಉಡಾಯಿಸಿ ನಿರ್ವಹಿಸುತ್ತಿದೆ. ಇವುಗಳು ಭೂಮಿಯನ್ನು ನಿರಂತರವಾಗಿ ಸುತ್ತುತ್ತಿವೆ.

●.ಪ್ರತಿಯೊಂದು ಉಪಗ್ರಹವು ಪ್ರಬಲವಾದ ಕ್ಯಾಮರಾ ಹಾಗೂ ಸೌರ ಶಾಖದಿಂದ ಚಲಿಸುವ ನಿಖರವಾದ ಗಡಿಯಾರ ಮತ್ತು ಮಾಹಿತಿ ರವಾನೆಯ ಆ್ಯಂಟೆನಾವನ್ನು ಒಳಗೊಂಡಿರುತ್ತದೆ. ಇವುಗಳಿಂದ ಕಳುಹಿಸುವ ಮಾಹಿತಿಯನ್ನು ಭೂಮಿಯಲ್ಲಿ ಯಾವುದೇ ವ್ಯಕ್ತಿಯ ಬಳಿಯಿರುವ ರಿಸ್ಸೀವರ್ ಪಡೆದು ವಿಶ್ಲೇಷಿಸಿ ಆ ವ್ಯಕ್ತಿಯು ಇರುವ ಸ್ಥಾನ ಹಾಗೂ ವ್ಯಕ್ತಿಯು ಇರುವ ಸ್ಥಳದ ಎತ್ತರವನ್ನು ಸೂಚಿಸುವುದು.

●.ಉಪಗ್ರಹಗಳಿಂದ ಪಡೆಯುವ ಮಾಹಿತಿಯ ಆಧಾರದ ಮೇಲೆ ಆ ವಸ್ತುವಿನಿಂದ ಆಯಾ ಉಪಗ್ರಹಗಳು ಎಷ್ಟು ದೂರದಲ್ಲಿವೆ ಎಂಬುದನ್ನು ಲೆಕ್ಕಾಚಾರ ಮಾಡಿ ಆ ವಸ್ತುವಿನ ಸ್ಥಾನವನ್ನು ಅಕ್ಷಾಂಶ ಮತ್ತು ರೇಖಾಂಶಗಳ ಮೂಲಕ ಸ್ಪಷ್ಟವಾಗಿ ತಿಳಿಯಪಡಿಸುವುದು. ಇದರಿಂದಾಗಿ ಜಿ.ಪಿ.ಎಸ್. ವ್ಯವಸ್ಥೆಯನ್ನು ‘ಮಾರ್ಗಸೂಚಿ’ ಅಥವಾ ಪಾತ್ ಫೈಂಡರ್ (Path finder) ಎಂದೂ ಕರೆಯುವರು.

●.ಇಂದು ಜಿಪಿಎಸ್ ವ್ಯವಸ್ಥೆಯು ರಕ್ಷಣಾ ದೃಷ್ಟಿಯಿಂದಲೂ ಅತಿಮುಖ್ಯ. ಇದರಿಂದಾಗಿ ಭಾರತವು ತನ್ನದೇ ಆದ ಪ್ರಾದೇಶಿಕ ಜಿಪಿಎಸ್ ವ್ಯವಸ್ಥೆಯನ್ನು ಹೊಂದಲು ಏಳು ಉಪಗ್ರಹಗಳನ್ನು ಉಡಾಯಿಸಿದೆ.


☀.ಉಪಯೋಗಗಳು :
━━━━━━━━━━━━━

●.ಪ್ರಾಕೃತಿಕ ವಿಕೋಪಗಳ ಸ್ಪಷ್ಟ ಭೌಗೋಳಿಕ ಸ್ಥಾನವನ್ನು ಗುರುತಿಸಿ ಪರಿಹಾರ ಕೈಗೊಳ್ಳಲು ಇವುಗಳು ಉಪಯುಕ್ತ.

●.ಅರಣ್ಯ ಹಾಗೂ ಪರ್ವತ ಚಾರಣ ಮಾಡುವವರಿಗೆ ಮಾರ್ಗ ತಿಳಿಯಲು ಉಪಯುಕ್ತವಾಗಿವೆ.

●.ಸೈನಿಕರು, ವೈಮಾನಿಕರು, ಮೀನುಗಾರರು ಹಾಗೂ ನಾವಿಕರು ಸರಿಯಾದ ಮಾರ್ಗವನ್ನು ಅನುಸರಿಸಲು ಜಿ.ಪಿ.ಎಸ್. ವ್ಯವಸ್ಥೆ ಅಗತ್ಯ ಮಾಹಿತಿಯನ್ನು ನೀಡುವುದು. ಇಂದು ಸಾರಿಗೆ ಸಿಬ್ಬಂದಿ ನಿರ್ವಹಣೆಯಲ್ಲಿಯೂ ಇದರ ಬಳಕೆ ಹೆಚ್ಚಾಗಿದೆ.

No comments:

Post a Comment