★ ಭಾರತದ ಭೂಗೋಳ ★
UNIT: I] ಭೌಗೋಳಿಕ ಪರಿಚಯ:
★ ಭಾರತವು ಹಿಂದೂಮಹಾಸಾಗರದಲ್ಲಿ ಚಾಚಿಕೊಂಡಿರುವ ಪರ್ಯಾಯ ದ್ವೀಪ.
*. ಇದು ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿ ನೆಲೆಗೊಂಡ ಅತೀ ದೊಡ್ಡ ಪರ್ಯಾಯ ದ್ವೀಪ.
*. ಭೂಖಂಡದ ಉತ್ತರಾರ್ಧ ಗೋಳದ ಪೂರ್ವಭಾಗದಲ್ಲಿದೆ.
★ ಭಾರತವು 32,87,263 ಚ.ಕಿ.ಮೀ. ವಿಸ್ತೀರ್ಣ (ಇದು ಕಾಶ್ಮೀರದ ಪಾಕ್ ಆಕ್ರಮಿತ ಪ್ರದೇಶ (Pok) ಹಾಗೂ ಚೀನಾದಿಂದ ಆಕ್ರಮಿತವಾಗಿರುವ ಅಕ್ ಸಾಯ್ ಚೀನ್ (Aksai Chin) ಪ್ರದೇಶಗಳನ್ನು ಸೇರಿ) ಹೊಂದಿದೆ.
— ಜಗತ್ತಿನ 7ನೇ ದೊಡ್ಡ ರಾಷ್ಟ್ರವಾಗಿದೆ.
— ಒಟ್ಟು ಭೂಭಾಗದಲ್ಲಿ ಭಾರತದ ಪಾಲು 2.47ರಷ್ಟು.
★ ಇದು ಉತ್ತರ ದಕ್ಷಿಣವಾಗಿ 3214 ಕಿ.ಮೀ ಇದೆ.
— ಉತ್ತರದ ಕೊನೆಯ ತುದಿ: ಇಂದಿರಾ ಕೋಲ್ (ಜಮ್ಮು ಕಾಶ್ಮೀರ).
— ದಕ್ಷಿಣದ ಕೊನೆಯ ಭೂ ತುದಿ: ಕನ್ಯಾಕುಮಾರಿ (ತಮಿಳುನಾಡು).
★ ಪೂರ್ವ ಪಶ್ಚಿಮವಾಗಿ 2933 ಕಿ.ಮೀ ಇದೆ.
— ಪೂರ್ವದ ಕೊನೆಯ ತುದಿ: ಕಿಬಟಿ (ಅರುಣಾಚಲ ಪ್ರದೇಶ).
— ಪಶ್ಚಿಮದ ಕೊನೆಯ ತುದಿ: ಗುಹಾರಮೋತಿ (ಗುಜರಾತ್).
★ ಭಾರತದ ಅತ್ಯಂತ ಎತ್ತರವಾದ ಪ್ರದೇಶ: K2.
— ಭಾರತದ ಅತ್ಯಂತ ತಗ್ಗಾದ ಪ್ರದೇಶ: ಕೇರಳದ ಕುಟ್ಟನಾಡ.
— ಭಾರತದ ದೊಡ್ದ ಸರೋವರ: ಚಿಲ್ಕಾ ಸರೋವರ.
★ ಭಾರತವು ರಾಜಕೀಯವಾಗಿ 29 ರಾಜ್ಯಗಳು, 6 ಕೇಂದ್ರಾಡಳಿತ ಪ್ರದೇಶಗಳು, 1 ದೇಶದ ರಾಜಧಾನಿ ಪ್ರದೇಶಗಳನ್ನು ಹೊಂದಿದೆ.
*. ಭೌಗೋಳಿಕವಾಗಿ ಅತೀ ದೊಡ್ದ ರಾಜ್ಯಗಳು:
ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ.
*. ಭೌಗೋಳಿಕವಾಗಿ ಚಿಕ್ಕ ರಾಜ್ಯಗಳು:
ಗೋವಾ, ಸಿಕ್ಕಿಂ, ತ್ರಿಪುರಾ, ನಾಗಾಲ್ಯಾಂಡ್.
*. ಜನಸಂಖ್ಯೆಯಲ್ಲಿ ಅತೀ ದೊಡ್ದ ರಾಜ್ಯ:
ಉತ್ತರಪ್ರದೇಶ.
*. ಜನಸಂಖ್ಯೆಯಲ್ಲಿ ಅತೀ ಚಿಕ್ಕ ರಾಜ್ಯ:
ಸಿಕ್ಕಿಂ.
*. ಜನಸಾಂದ್ರತೆಯಲ್ಲಿ ದೊಡ್ದ ರಾಜ್ಯ:
ಬಿಹಾರ.
*. ಜನಸಾಂದ್ರತೆಯಲ್ಲಿ ಚಿಕ್ಕ ರಾಜ್ಯ:
ಅರುಣಾಚಲ ಪ್ರದೇಶ.
*. ಭೌಗೋಳಿಕವಾಗಿ ದೇಶದ ಅತೀ ದೊಡ್ದ ಕೇಂದ್ರಾಡಳಿತ ಪ್ರದೇಶ:
ಅಂಡಮಾನ್ ಮತ್ತು ನಿಕೋಬಾರ್.
*. ಭೌಗೋಳಿಕವಾಗಿ ದೇಶದ ಅತೀ ಚಿಕ್ಕ ಕೇಂದ್ರಾಡಳಿತ ಪ್ರದೇಶ:
ಲಕ್ಷದ್ವೀಪ.
*. ದೇಶದ 7 ಕೇಂದ್ರಾಡಳಿತ ಪ್ರದೇಶಗಳಲ್ಲಿ 'ರಾಜ್ಯದ ಸ್ಥಾನಮಾನ'(Statehood) ಪಡೆದ ಕೇವಲ ಎರಡು ಕೇಂದ್ರಾಡಳಿತ ಪ್ರದೇಶಗಳು:
1) ದೆಹಲಿ 2) ಪಾಂಡಿಚೇರಿ.
*. ಪ್ರಸ್ತುತ ಭಾರತದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ:
640 (2011 ರ ಜನಗಣತಿಯ ಪ್ರಕಾರ)
*. ಅತಿ ಹೆಚ್ಚು ಜಿಲ್ಲೆಗಳನ್ನು ಹೊಂದಿರುವ ರಾಜ್ಯ:
ಉತ್ತರ ಪ್ರದೇಶ (71),
*. ಅತಿ ಕಡಿಮೆ ಜಿಲ್ಲೆಗಳನ್ನು ಹೊಂದಿರುವ ರಾಜ್ಯ:
ಗೋವಾ (2).
*. ಭೌಗೋಳಿಕ ವಿಸ್ತಾರದಲ್ಲಿ ದೇಶದ ಅತೀ ದೊಡ್ದ ಜಿಲ್ಲೆ:
ಗುಜರಾತ್ ರಾಜ್ಯದ ಕಚ್ (Kachchh) ( 46,000 ಚ.ಕಿ.ಮೀ).
*. ಭೌಗೋಳಿಕ ವಿಸ್ತಾರದಲ್ಲಿ ದೇಶದ ಅತೀ ಚಿಕ್ಕ ಜಿಲ್ಲೆ:
ಪಾಂಡಿಚೇರಿಯ 'ಮಾಹೆ'(Mahe) (9 ಚ.ಕಿ.ಮೀ)
....Continued.
No comments:
Post a Comment