•► "ಕೆಎಎಸ್ ಸಂದರ್ಶನ / ಇಂಟರ್‌ವ್ಯೂ ತಯಾರಿ"— ಮಾದರಿ ಪ್ರಶ್ನೆಗಳು (PART : II)
(KAS INTERVIEW PREPARATION)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಕೆಎಎಸ್ ಸಂದರ್ಶನ ತಯಾರಿ
(KAS Interview Preparation)
★ ಸಾಮಾನ್ಯ ಅಧ್ಯಯನ ತಯಾರಿ
(General Studies Preparation)
"ಕೆಎಎಸ್ ಇಂಟರ್‌ವ್ಯೂ (KAS INTERVIEW PREPARATION) ತಯಾರಿ"ಗಾಗಿ ನನ್ನ ಅಭಿಪ್ರಾಯ ಪ್ರಕಾರ ಸ್ಪರ್ಧಾರ್ಥಿಗಳು ಈ ಕೆಳಗೆ ನೀಡಲಾದ ವಿಷಯಗಳನ್ನು ಪರಿಗಣಿಸಬಹುದು. ಇವು ಪ್ರಚಲಿತ ಘಟನೆಗಳನ್ನಾಧರಿಸಿ ಆಯ್ದುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಸಂಗ್ರಹಿಸಿದ್ದು ಆದಾಗ್ಯೂ ಇವೇ ಅಂತಿಮವಲ್ಲ. ಉಳಿದ ವಿಷಯಗಳನ್ನು ಶೀಘ್ರದಲ್ಲೇ ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡುವೆ. ಏನಾದರೂ ತಪ್ಪಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತನ್ನಿ (Gmail : yaseen7ash@gmail.com)
• ವಿಷಯವಸ್ತು :
21.ಸಾಲ ಮನ್ನಾ- ಇದು ಕಾಯಂ ಪರಿಹಾರವೇ ? ದೇಶದ/ರಾಜ್ಯದ ಆರ್ಥಿಕ ವ್ಯವಸ್ಥೆಯ ಮೇಲೆ ಇದರ ಪರಿಣಾಮಗಳು.
22.ಯಾಕೆ ಪಶ್ಚಿಮ ಕರಾವಳಿಯ ರಾಜ್ಯಗಳು ಪೂರ್ವ ಕರಾವಳಿಯ ರಾಜ್ಯಗಳಿಗಿಂತ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಿವೆ?
23.ಮಾನವ ಹಕ್ಕುಗಳ ರಕ್ಷಣೆ (ತಿದ್ದುಪಡಿ)-2018 ಮಸೂದೆ - ಲಕ್ಷಣಗಳು - ಆದ ಬದಲಾವಣೆಗಳು
24.ಐಎಂಎಫ್ ಎಸ್ಡಿಆರ್ಗೆ ಯುವಾನ್ ಸೇರ್ಪಡೆ ಆಗಿರುವುದರಿಂದ ಚೀನಾ ದೇಶಕ್ಕೆ ಏನು ಲಾಭ?
25.ಪ್ರಯಾಣಿಕರ ಸಂಖ್ಯೆಯ ದೃಷ್ಟಿಯಿಂದ ವಿಶ್ವದ ಮೂರನೇ ಅತಿ ದೊಡ್ಡ ಉದ್ಯಮ ಎನ್ನುವ ಹೆಗ್ಗಳಿಕೆ ಹೊಂದಿದ್ದರೂ ನಾಗರಿಕ ವಿಮಾನಯಾನ ಕ್ಷೇತ್ರವು ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಏಕೆ?
26.ಪ್ರಸ್ತುತ ಭಾರತದ ಮಾನವ ಅಭಿವೃದ್ಧಿ ಸ್ಥಿತಿಗತಿ - UNDPಯ ಮಾನವ ಅಭಿವೃದ್ಧಿ ಸೂಚ್ಯಂಕದ ಮೇಲೆ ಇದರ ಪರಿಣಾಮ.
27. ಭಾರತದ HDI ಮೇಲೆ ಪ್ರಭಾವ ಬೀರುವ ಅಂಶಗಳು.
28. ಜಾಗತಿಕ ಹಸಿವು ಸೂಚ್ಯಂಕ (GHI-Global Hunger Index)) ವರದಿ & ಭಾರತ.
29. ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲಿಯೂ ಈಗಲೂ ಪುರುಷರ ಸಾಕ್ಷರತೆಯ ಪ್ರಮಾಣವು ಮಹಿಳಾ ಸಾಕ್ಷರತೆಯ ಪ್ರಮಾಣಕ್ಕಿಂತ ಅಧಿಕವಾಗಿದೆ ಏಕೆ? ಸಾಕ್ಷರತೆಯ ಪ್ರಮಾಣದಲ್ಲಿರುವ ತಾರತಮ್ಯ ಇನ್ನೂ ಯಾಕೆ ಕಡಿಮೆಯಾಗುತ್ತಿಲ್ಲ?
30. ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ಯೋಜನೆ - ಇದು ವಾಡಿಕೆಯ ಸಾಮಾಜಿಕ ಯೋಜನೆಗಳಿಗಿಂತ ಹೇಗೆ ಭಿನ್ನ?
31. ಮಾನವ ಸಾಗಣೆ (ತಡೆ, ಸಂರಕ್ಷಣೆ ಮತ್ತು ಪುನರ್ವಸತಿ) ಮಸೂದೆ 2018 ( Trafficking of Persons (Prevention, Protection & Rehabilitation Bill, 2018) - ಈ ಮಸೂದೆಯ ಪ್ರಮುಖ ಅಂಶಗಳು.
32.ಮಾನವ ಕಳ್ಳಸಾಗಣೆಯು ಜಾಗತಿಕ ಸಮಸ್ಯೆಯಾದರೂ ದಕ್ಷಿಣ ಏಷ್ಯಾದಲ್ಲಿ ಭಾರಿ ಪ್ರಮಾಣದಲ್ಲಿ ನಡೆಯುತ್ತಿದೆ. ಯಾಕೆ?
33.ಭಾರತದಲ್ಲಿ ಸಾರ್ವಜನಿಕ ವಿತರಣೆ ಕಾರ್ಯಕ್ರಮದಲ್ಲಿ ನೀವು ಸೂಚಿಸಬಹುದಾದ ಬದಲಾವಣಾ ಕ್ರಮಗಳು.
34.ಪ್ರಸ್ತುತ ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ "ದೇಶದಲ್ಲಿ ಬಡತನ ಕಡಿಮೆಯಾಗಿದೆ ಆದರೆ ಹಸಿದವರ ಸಂಖ್ಯೆ ಕಡಿಮೆಯಾಗಿಲ್ಲ" ಎಂದರೆ ಏನರ್ಥ? ಜಾಗತಿಕ ಹಸಿವು ಸೂಚ್ಯಂಕ ಎದುರಿಡುತ್ತಿರುವ ಪ್ರಶ್ನೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉತ್ತರವೇನು?
35. ನೋಟು ಅಮಾನ್ಯೀಕರಣ (ಅಪನಗದೀಕರಣ) ಮತ್ತು ಜಿಎಸ್‍ಟಿ ಜಾರಿಯಾದ ನಂತರದ ದೇಶದ ಅರ್ಥ ವ್ಯವಸ್ಥೆ
36. ಕೇಂದ್ರ ಸರ್ಕಾರವು ಆರ್ಥಿಕ ಹಿಂದುಳಿದಿರುವಿಕೆಯ ಮಾನದಂಡಕ್ಕೆ ಅನುಗುಣವಾಗಿ ಶೇಕಡ ಹತ್ತರಷ್ಟು 'ಆರ್ಥಿಕ ದುರ್ಬಲರಿಗೆ ಮೀಸಲಾತಿ’ಗೆ ಕೈಗೊಂಡ ಕ್ರಮ ಸರಿಯೇ?
37. ದೇಶದಲ್ಲಿ ಉದ್ಯೋಗಾವಕಾಶದ ಸೃಷ್ಟಿ & ಪ್ರತಿಭಾ ಪಲಾಯನ
38. ಪೌರತ್ವ ತಿದ್ದುಪಡಿ ವಿಧೇಯಕ (The Citizenship (Amendment) Bill, 2016)
39. ಜಗತ್ತಿನ ಬೇರಾವುದೇ ದೇಶಕ್ಕೆ ಸಮೀಕರಿಸಲಾಗದಷ್ಟು ಮಹಿಳಾ ಕಾನೂನುಗಳು, ಭಾರತೀಯ ಸ್ತ್ರೀಯರ ಪಾಲಿಗಿವೆ. ಆದಾಗ್ಯೂ ಮಹಿಳೆಯರ ಮೇಲೆ ದಿನಾಲೂ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿವೆ ಏಕೆ?
40.ತಾಪಮಾನ ಏರಿಕೆ ನಿಯಂತ್ರಣಕ್ಕೆ ತಾವು ಹೊಸದಾಗಿ ಸೂಚಿಸಬಹುದಾದ ಕ್ರಮಗಳು.
…ಮುಂದುವರೆಯುವುದು.

No comments:
Post a Comment