"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 22 February 2017

☀.ಕೆ.ಎ.ಎಸ್. ಮುಖ್ಯ ಪರೀಕ್ಷೆಯ ಪಠ್ಯಕ್ರಮ : (PART-III) (KAS Mains Paper's Syllabus)

☀.ಕೆ.ಎ.ಎಸ್. ಮುಖ್ಯ ಪರೀಕ್ಷೆಯ ಪಠ್ಯಕ್ರಮ : (PART-III)
(KAS Mains Paper's Syllabus)
•─━━━━━═══════════━━━━━─••─━━━━━═══════════━━━━━─•

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)

... ಮುಂದುವರೆದ ಭಾಗ.


ಮುಖ್ಯ ಪರೀಕ್ಷೆಯು ಲಿಖಿತ ಪರೀಕ್ಷೆ ಮತ್ತು ವ್ಯಕ್ತತ್ವ ಪರೀಕ್ಷೆಯನ್ನು ಒಳಗೊಂಡಿರತಕ್ಕದ್ದು.



  • ಲಿಖಿತ ಪರೀಕ್ಷೆ:


●.ಅರ್ಹತಾ ಪತ್ರಿಕೆಗಳು

1.ಕನ್ನಡ.                150 ಅಂಕಗಳು                2 ಗಂಟೆಗಳು

2.ಇಂಗ್ಲೀಷ್                 150 ಅಂಕಗಳು                2 ಗಂಟೆಗಳು


●.ಕಡ್ಡಾಯ ಪತ್ರಿಕೆಗಳು

ಪತ್ರಿಕೆ-1                 ಪ್ರಬಂಧ.                250 ಅಂಕಗಳು                3 ಗಂಟೆಗಳು

ಪತ್ರಿಕೆ-2                 ಸಾಮಾನ್ಯ ಅಧ್ಯಯನ-1                250 ಅಂಕಗಳು                3 ಗಂಟೆಗಳು

ಪತ್ರಿಕೆ-3                 ಸಾಮಾನ್ಯ ಅಧ್ಯಯನ-2                250 ಅಂಕಗಳು                3 ಗಂಟೆಗಳು

ಪತ್ರಿಕೆ-4                 ಸಾಮಾನ್ಯ ಅಧ್ಯಯನ-3                250 ಅಂಕಗಳು                3 ಗಂಟೆಗಳು

ಪತ್ರಿಕೆ-5                 ಸಾಮಾನ್ಯ ಅಧ್ಯಯನ-4                250 ಅಂಕಗಳು                3 ಗಂಟೆಗಳು

ಪತ್ರಿಕೆ-6                 ಐಚ್ಛೆಕ ವಿಷಯ (ಪತ್ರಿಕೆ-1)               250 ಅಂಕಗಳು                3 ಗಂಟೆಗಳು

ಪತ್ರಿಕೆ-7                 ಐಚ್ಛಿಕ ವಿಷಯ (ಪತ್ರಿಕೆ-2)               250 ಅಂಕಗಳು                 3 ಗಂಟೆಗಳು

●.ಲಿಖಿತ ಪರೀಕ್ಷೆಗೆ ಒಟ್ಟು ಅಂಕಗಳು                 1750 ಅಂಕಗಳು  


●.ಸೂಚನೆ:

1. ಅರ್ಹತಾ ಪತ್ರಿಕೆಗಳು ಎಂದರೆ, ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಅರ್ಹತಾ ಪತ್ರಿಕೆಗಳಲ್ಲಿ ಪಡೆದ ಅಂಕಗಳು ಅರ್ಹತಾ ಸ್ವರೂಪದ್ದಾಗಿರತಕ್ಕದ್ದು. ಈ ಪತ್ರಿಕೆಗಳಲ್ಲಿ ಅರ್ಹತೆಗಾಗಿ ಪ್ರತಿಯೊಂದು ಪತ್ರಿಯೊಂದು ಪತ್ರಿಕೆಯಲ್ಲಿ ಕನಿಷ್ಠ 35% ಎಂದು ನಿಗಧಿಪಡಿಸಿದೆ. ಈ ಎರಡು ಪತ್ರಿಕೆಗಳಲ್ಲಿ ಪಡೆದ ಅಂಕಗಳನ್ನು ಆಯ್ಕೆಗಾಗಿ ಮೆರಿಟ್ಟನ್ನು ನಿರ್ಧರಿಸುವುದಕ್ಕಾಗಿ ಪರಿಗಣಿಸತಕ್ಕದ್ದಲ್ಲ. ಅರ್ಹತಾ ಪರೀಕ್ಷೆಗಳು ಎಂದರೆ, ಕನ್ನಡ ಮತ್ತು ಇಂಗ್ಲೀಷ್ನಲ್ಲಿ ನಿಗದಿಪಡಿಸಿದ ಕನಿಷ್ಠ ಅಂಕಗಳನ್ನು ಪಡೆಯದೆ ಇರುವಂಥ ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಗೆ ಮತ್ತು ಆಯ್ಕೆಗೆ ಅರ್ಹರಾಗತಕ್ಕದ್ದಲ್ಲ.

2. ಪರೀಕ್ಷೆಯು, ಸಾಂಪ್ರಾದಾಯಿಕವಾದ ವಿವರಣಾತ್ಮಕ ರೀತಿಯ ಸ್ವರೂಪದ್ದಾಗಿರತಕ್ಕದ್ದು ಮತ್ತು ಎಲ್ಲಾ ಪತ್ರಿಕೆಗಳು ಕಡ್ಡಾಯವಾಗಿರತಕ್ಕದ್ದು.

3. ಪ್ರಶ್ನೆಪತ್ರಿಕೆಗಳು ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿ ಸಿದ್ಧ ಗೊಂಡಿರುತ್ತವೆ. ಅಭ್ಯರ್ಥಿಯು ಪತ್ರಿಕೆಯನ್ನು ಸಂಪೂರ್ಣವಾಗಿ ಕನ್ನಡದಲ್ಲಾಗಲಿ ಮತ್ತು ಇಂಗ್ಲೀಷ್ನಲ್ಲಾಗಲಿ ಉತ್ತರಿಸಬಹುದು.

4. ಮುಖ್ಯಪರೀಕ್ಷೆಯ ಪತ್ರಿಕೆ-1 ಕನ್ನಡ ಮತ್ತು ಪತ್ರಿಕೆ-2 ಇಂಗ್ಲೀಷ್ನ್ನು ಹೊರತುಪಡಿಸಿ ಮುಖ್ಯ ಪರೀಕ್ಷೆಯ ಮಟ್ಟವು ಪದವಿಯ ಹಂತದಲ್ಲಿರುತ್ತದೆ. ಪತ್ರಿಕೆ-1 ಕನ್ನಡ ಮತ್ತು ಪತ್ರಿಕೆ-2 ಇಂಗ್ಲೀಷ್ ಮಟ್ಟವು ಮೊದಲ ಭಾಷೆ ಕನ್ನಡ ಮತ್ತು ಮೊದಲ ಭಾಷೆ ಇಂಗ್ಲೀಷ್ ಅನುಕ್ರಮವಾಗಿ ಎಸ್.ಎಸ್.ಎಲ್.ಸಿ ಹಂತದಲ್ಲಿರುತ್ತವೆ.

5. ಎಲ್ಲಾ ಏಳು ಪತ್ರಿಕೆಗಳು ಕಡ್ಡಾಯವಾಗಿರುವವು ಪತ್ರಿಕೆ-2 ರಿಂದ 5 ನೇ ಪತ್ರಿಕೆ ಮೂರು ವಿಭಾಗಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಪತ್ರಿಕೆ ಗರಿಷ್ಠ 250 ಅಂಕಗಳನ್ನು ಒಳಗೊಮಡಿರುವುದು ಮತ್ತು ಮೂರು ಗಂಟೆಗಳ ಕಾಲಾವಧಿ ಮಾತ್ರ ಇರುತ್ತದೆ.

6. ಲಿಖಿತ ಮತ್ತು ಮೌಖಿಕ ಪರೀಕ್ಷೆ ಅಂಕಗಳನ್ನು ಆಯ್ಕೆ ಪಟ್ಟಿಯೊಂದಿಗೆ ಪ್ರಕಟಿಸಲಾಗುವುದು.


●.ವ್ಯಕ್ತಿತ್ವ ಪರೀಕ್ಷೆ:

ಆತ/ಆಕೆಯು ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಹೊರತುಪಡಿಸಿ, ಅವರ ಮುಂದೆ ದಾಖಲೆಗಳನ್ನು ಹಾಜರುಪಡಿಸಲಾಗುವ ಆ ಅಭ್ಯರ್ಥಿಯನ್ನು ಮಂಡಳಿಯು ಸಂದರ್ಶನ ನಡೆಸುತ್ತದೆ. ಆತ/ಆಕೆಯನ್ನು ಸಾಮಾನ್ಯ ಆಸಕ್ತಿಗಳ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುವುದು.

ಸಂದರ್ಶನ ಉದ್ದೇಶ ಸಕ್ಷಮ ಮಂಡಳಿಯು ಮತ್ತು ವೀಕ್ಷಕರು, ನಿಷ್ಪಕ್ಷಪಾತವಾಗಿ ಸಾರ್ವಜನಿಕ ಸೇವೆಗಳ ನಿರ್ವಹಣೆಗೆ ಅಭ್ಯರ್ಥಿಯ ವೈಯಕ್ತಿಕ ಅರ್ಹತೆಯನ್ನು ನಿರ್ವಹಿಸುವುದಾಗಿದೆ, ಪರೀಕ್ಷೆಯು, ಅಭ್ಯರ್ಥಿಯ ಮಾನಸಿಕ ಸಾಮಥ್ರ್ಯವನ್ನು ನಿರ್ಣಯಿಸಲು ಉದ್ದೇಶಿಸಲಾಗಿದೆ.

ಸ್ಥೂಲವಾಗಿ ಆತ/ಆಕೆಯ ಬೌದ್ಧಿಕ ಅರ್ಹತೆಗಳನ್ನು ಮಾತ್ರವಲ್ಲದೆ ವಾಸ್ತವಿಕತೆಯನ್ನು ನಿರ್ಧರಿಸುವುದಾಗಿದೆ, ನಿರ್ಧರಿಸುವ ಕೆಲವು ಅರ್ಹತೆಗಳು ಮಾನಸಿಕವಾಗಿ ಜಾಗರೂಕತೆ, ಹೊಂದಾಣಿಕೆಯ ಸಂಧಿಗ್ಧ ಅಧಿಕಾರಗಳು, ಸ್ಪಷ್ಟತೆ ಮತ್ತು ತಾರ್ಕಿಕ ನಿರೂಪಣೆ, ಸರಿ ಹೊಂದುವ ನಿರ್ಣಯಗಳು ವಿಭಿನ್ನ ಆಸಕ್ತಿ, ಗಾಢತೆ, ಸಾಮಾಜಿಕ ಒಗ್ಗಟ್ಟು ಮತ್ತು ನಾಯಕತ್ವ, ಬೌದ್ಧಕ ಹಾಗೂ ನೈತಿಕ ದೃಢ ನಿಷ್ಠೆಯಾಗಿರುವುದು, ಸಂದರ್ಶನ ಕೌಶಲವು ಕಟ್ಟುನಿಟ್ಟಾದ ಪಾಟೀ ಸವಾಲು ಆಗಿರುವುದಿಲ್ಲ. ಆದರೆ, ಸಹಜವಾದುದಾಗಿರುತ್ತದೆ. ಪ್ರತ್ಯಕ್ಷವಾಗಿ ಮತ್ತು ಉದ್ದೇಶಿತ ಚರ್ಚೆ ಇದ್ದಾಗ್ಯೂ ಅಭ್ಯರ್ಥಿಯ ಮಾನಸಿಕ ಸಾಮಥ್ರ್ಯವನ್ನು ವ್ಯಕ್ತಪಡಿಸುವ ಉದ್ದೇಶವಾಗಿದೆ.

 ಸಂದರ್ಶನ ಪರೀಕ್ಷೆಯು ಅಭ್ಯರ್ಥಿಯ ವಿಶಿಷ್ಟತೆ ಅಥವಾ ಸಾಮಾನ್ಯ ಜ್ಞಾನವನ್ನಾಗಲಿ ಪರೀಕ್ಷಿಸುವ ಉದ್ದೇಶವಲ್ಲ. ಅದನ್ನು ಈಗಾಗಲೇ ಲಿಖಿತ ಪರೀಕ್ಷೆಗಳ ಮೂಲಕ ಪರೀಕ್ಷಿಸಿರುವುದಾಗಿರುತ್ತದೆ. ಅಭ್ಯರ್ಥಿಗಳು ಅವರ ಶೈಕ್ಷಣಿಕ ಅಧ್ಯಯನಕ್ಕೆ ಸಂಬಂಧಿಸಿದಂತೆ ವಿಶೇಷ ವಿಷಯಗಳಲ್ಲಿ ಆಸಕ್ತಿವಹಿಸುವುದು ಮಾತ್ರವಲ್ಲದೆ ಉತ್ತಮ ಶಿಕ್ಷಣ ಯುವಕರ ಕೌತುಕವನ್ನು ಕೆರಳಿಸುವಂತಹ ಘಟನೆಗಳು, ಅವರ ಸುತ್ತಮುತ್ತ ನಡೆಯುತ್ತಿರುವ ರಾಜ್ಯದ ಅಥವಾ ದೇಶದ ಒಳಗಿನ ಹಾಗೂ ಹೊರಗಿನ ಘಟನೆಗಳು ಬಗ್ಗೆ ಹಾಗೂ ಆಧುನಿಕ ಚಿಂತನೆಗಳು ಮತ್ತು ಹೊಸ ಅನ್ವೇಷಣೆಗಳ ಬಗ್ಗೆ ಆಸಕ್ತಿವಹಿಸಬೇಕಾಗುತ್ತದೆ.

ಆಯೋಗವು ಸಂದರ್ಭಾನುಸಾರ ಗ್ರೂಪ್-ಎ ಮತ್ತು ಗ್ರೂಪ್-ಬಿ ನ ಸೇವೆಗಳಲ್ಲಿ ಖಾಲಿ ಇರುವ ಹುದ್ದೆಗಳ ಅಭ್ಯರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೂರರಷ್ಟು ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಅಹ್ವಾನಿಸತಕ್ಕದ್ದು. ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಖಚಿತಪಡಿಸಿಕೊಂಡು, ಖಾಲಿ ಹುದ್ದೆಗಳ ಅನುಪಾತದ ಆಧಾರದಲ್ಲಿ ಮುಖ್ಯ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಮೆರಿಟ್ ಕ್ರಮಾನುಸಾರ ಅಭ್ಯರ್ಥಿಗಳನ್ನು ವ್ಯಕ್ತತ್ವ ಪರೀಕ್ಷೆಗೆ ಆಹ್ವಾನಿಸುವುದು ವ್ಯಕ್ತಿತ್ವ ಪರೀಕ್ಷೆಯನ್ನು ಗರಿಷ್ಠ 200 ಅಂಕಗಳಿಗೆ ನಡೆಸತಕ್ಕದ್ದು.

...ಮುಂದುವರೆಯುವುದು. 
(Courtesy : UCC Bangalore) 

No comments:

Post a Comment