"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 18 December 2019

•► "ಭಾರತದ ಸಂವಿಧಾನದಲ್ಲಿ 'ವಿಪ್'‌ನ ಪಾತ್ರ" ‌: (The Role of Whip in Indian Constitution)

•► "ಭಾರತದ ಸಂವಿಧಾನದಲ್ಲಿ 'ವಿಪ್'‌ನ ಪಾತ್ರ" ‌:
(The Role of Whip in Indian Constitution)

━━━━━━━━━━━━━━━━━━━━━
★ ಭಾರತದ ಸಂವಿಧಾನ
(Indian Constitution)

★ ಪತ್ರಿಕೆ-3 ಸಾಮಾನ್ಯ ಅಧ್ಯಯನ-2
(Paper-3 General Studies-2)



• ವಿಪ್ ಎಂಬುದು ಪಕ್ಷಗಳು ತಮ್ಮ ಜನಪ್ರತಿನಿಧಿಗಳಿಗೆ ನೀಡುವ ಸೂಚನೆಯಾಗಿದೆ. ರಾಜ್ಯಸಭಾ ಚುನಾವಣೆ, ಪರಿಷತ್ ಚುನಾವಣೆ, ಅವಿಶ್ವಾಸ ನಿರ್ಣಯ ಮೊದಲಾದ ಸಂದರ್ಭಗಳಲ್ಲಿ ಮತದಾನ ಪ್ರಕ್ರಿಯೆಯನ್ನು ಪಾಲ್ಗೊಳ್ಳಲು ತಮ್ಮ ಜನಪ್ರತಿನಿಧಿಗಳಿಗೆ ಪಕ್ಷಗಳು ವಿಪ್ ಜಾರಿ ಮಾಡುತ್ತವೆ.

• ಯಾವುದೇ ಒಂದು ಪಕ್ಷ ತನ್ನ ಶಿಸ್ತನ್ನು ಕಾಪಾಡಿಕೊಳ್ಳಲು ವಿಪ್‌ ಅನ್ನು ಅಸ್ತ್ರದಂತೆ ಬಳಸುತ್ತದೆ. ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಲು, ಪಕ್ಷದ ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲು ವಿಪ್‌ ಮೂಲಕ ಪಕ್ಷದ ಶಾಸಕರಿಗೆ ಸೂಚಿಸಲಾಗುತ್ತದೆ.

• ಪಕ್ಷದ ಮುಖ್ಯ ಸಚೇತಕರು ವಿಪ್‌ ಜಾರಿಗೊಳಿಸಿ ಆದೇಶ ಹೊರಡಿಸುತ್ತಾರೆ. ವಿಪ್‌ ಜಾರಿಯಾದ ನಂತರ ಅದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರವನ್ನು ಪಕ್ಷ ಹೊಂದಿರುತ್ತದೆ.

• ಪಕ್ಷದ 'ಬಿ' ಫಾರಂ ಪಡೆದು ಪಕ್ಷದ ಚಿಹ್ನೆಯಡಿ ಶಾಸಕ ಅಥವಾ ಸಂಸದರಾಗಿ ಆಯ್ಕೆಯಾದವರು ಇದನ್ನು ಪಾಲಿಸಬೇಕು. ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯಿದೆಯಡಿ ಸದಸ್ಯತ್ವದಿಂದ ಅನರ್ಹಗೊಳ್ಳುತ್ತಾರೆ.


★ ವಿಪ್‌ನಲ್ಲಿ ಮೂರು ವಿಧಗಳು :
ಸಿಂಗಲ್ ಲೈನ್/ ಒನ್‌ಲೈನ್, ಡಬಲ್ ಲೈನ್ ಮತ್ತು ಥ್ರೀ ಲೈನ್ ವಿಪ್​
• ಒನ್‌ಲೈನ್‌ ವಿಪ್‌:  ವಿಶ್ವಾಸ ಮತ ಸಂದರ್ಭದಲ್ಲಿ ಸರಕಾರದ ಪರ ಹಾಗೂ ಪಕ್ಷದ ಆದೇಶ ಪಾಲನೆಗೆ ನೀಡುವ ವಿಪ್‌ ಅನ್ನು ಒನ್‌ಲೈನ್‌ ವಿಪ್‌ ಎಂದು ಕರೆಯಲಾಗುತ್ತದೆ.

• ಟೂ ಲೈನ್‌ ವಿಪ್‌: ಬಜೆಟ್‌ ಅಥವಾ ಪ್ರಮುಖ ವಿಧೇಯಕ ಮಂಡನೆ ಮತ್ತು ಅನುಮೋದನೆ ಸಮಯದಲ್ಲಿ ಜಾರಿ ಮಾಡಲಾಗುವ ವಿಪ್‌ ಅನ್ನು ಟೂ ಲೈನ್‌ ವಿಪ್‌ ಎಂದು ಕರೆಯಲಾಗುತ್ತದೆ.

• ತ್ರೀ ಲೈನ್‌ ವಿಪ್‌: ಅಧಿವೇಶನದಲ್ಲಿ ಹಾಜರಾತಿ, ವಿತ್ತೀಯ ಕಾರ‍್ಯಕಲಾಪದಲ್ಲಿ ಪಾಲ್ಗೊಳ್ಳುವಿಕೆ, ಬಜೆಟ್‌, ಅನುಮೋದನೆ ಸಂದರ್ಭದಲ್ಲಿ ಸರಕಾರದ ಪರ ಮತ ಚಲಾಯಿಸುವಿಕೆಗೆ ನೀಡುವ ವಿಪ್‌.


★ ವಿಪ್‌ ಕುರಿತು ಮಹತ್ವದ ವಿಷಯಗಳು:
• ಸಿಂಗಲ್ ಲೈನ್ ವಿಪ್​ನಲ್ಲಿ ಮತದಾನದ ದಿನಾಂಕ ಮೊದಲಾದ ವಿವರವನ್ನು ನೋಟೀಸ್ ಮೂಲಕ ನೀಡಲಾಗುತ್ತದೆ. ಇದರಲ್ಲಿ ಜನಪ್ರತಿನಿಧಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವೇನೂ ಇರುವುದಿಲ್ಲ.

• ಡಬಲ್ ಲೈನ್ ವಿಪ್​ನಲ್ಲಿ ಮತದಾನ ಮಾಡಲು ಪಕ್ಷವು ಸ್ವಲ್ಪಮಟ್ಟಿಗೆ ಕಡ್ಡಾಯ ಮಾಡಿರುತ್ತದೆ. ಸರಿಯಾದ ಕಾರಣ ಕೊಟ್ಟು ಮತದಾನದಿಂದ ದೂರು ಉಳಿಯುವ ಸ್ವಾತಂತ್ರ್ಯವನ್ನ ಕೊಟ್ಟಿರಲಾಗುತ್ತದೆ.

ಇನ್ನು, ಮೂರನೇಯದಾದ ಥ್ರೀಲೈನ್ ವಿಪ್​ನಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟಿರಲಾಗುತ್ತದೆ.

• ಥ್ರೀಲೈನ್ ವಿಪ್ ಪಡೆದವರು ಮತದಾನ ಮಾಡಲಿಲ್ಲವೆಂದರೆ ಪಕ್ಷದಿಂದಲೇ ಅಮಾನತಾಗುವ ಸಾಧ್ಯತೆ ಇರುತ್ತದೆ. ಪಕ್ಷಗಳು ಕೊಡುವ ವಿಪ್ ಸಾಮಾನ್ಯವಾಗಿ ಥ್ರೀ ಲೈನ್ ವಿಪ್ ಆಗಿರುತ್ತದೆ.

- ಕಾಯಿದೆ ಪ್ರಕಾರ ಯಾವುದೇ ಶಾಸಕ, ಸಂಸದ ತನ್ನ ಪಕ್ಷದ ವಿಪ್‌ ಉಲ್ಲಂಘಿಸಿ ಮತ ಚಲಾಯಿಸಿದ ಬಳಿಕವಷ್ಟೇ ಸ್ಪೀಕರ್‌ ಕ್ರಮ ಕೈಗೊಳ್ಳಬಹುದು.


★ ವಿಪ್ ಯಾವಾಗ ಪ್ರಯೋಗಿಸಬಹುದು?
- ಇದು ಯಾವ ಸದಸ್ಯರು, ಶಾಸಕರ ಮೇಲೆ ವಿಶ್ವಾಸ ಇರೋದಿಲ್ವೋ, ಪಕ್ಷದ ವಿರುದ್ಧವಾಗಿ ಕೆಲಸ ಮಾಡ್ತಿದ್ದಾರೆ ಅಂತಾ ಕಂಡುಬರುತ್ತೋ, ಅಂತಹ ಟೈಮ್‌ನಲ್ಲಿ ವಿಪ್‌ ಜಾರಿ ಮಾಡಲಾಗುತ್ತದೆ. ಪಕ್ಷಾಂತರ ಕಾಯಿದೆ ಅಡಿ ಅವರ ಸದಸ್ಯತ್ವ ರದ್ದಾದರೆ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲಲು ಬರುವುದಿಲ್ಲ.

Wednesday, 12 June 2019

ಹಿಂದೂ ಮಹಾಸಾಗರ (ವಲಯ) ಅಂಚಿನ ಸಹಕಾರ ಸಂಘಟನೆ (Indian Ocean Rim Association(IORA)

•► ಹಿಂದೂ ಮಹಾಸಾಗರ (ವಲಯ) ಅಂಚಿನ ಸಹಕಾರ ಸಂಘಟನೆ
(Indian Ocean Rim Association(IORA))  :
━━━━━━━━━━━━━━━━━━━━━


 — ಹಿಂದೂ ಮಹಾಸಾಗರದ ಗಡಿಪ್ರದೇಶದ ಕರಾವಳಿ ದೇಶಗಳನ್ನು ಒಳಗೊಂಡಿರುವ ಒಂದು ಅಂತರರಾಷ್ಟ್ರೀಯ ಸಂಘಟನೆ.
- ಎಲ್ಲ ಸರ್ಕಾರಗಳ, ವ್ಯವಹಾರ ಮತ್ತು ಶೈಕ್ಷಣಿಕ ಪ್ರತಿನಿಧಿಗಳನ್ನು ಒಟ್ಟುಗೂಡಿಸುವ ಒಂದು ತ್ರಿಪಕ್ಷೀಯ (Trilateral) ಒಕ್ಕೂಟ
- ಮಾರಿಷಸ್ ನ ಎಬಿನ್ (Ebene, Mauritius) ನಲ್ಲಿರುವ IORA ನ ಸಚಿವಾಲಯದೊಂದಿಗೆ ಸಹಕರಿಸುವುದು.
 - ಇಂಡಿಯನ್‌ ಓಶನ್‌ ರಿಮ್‌ ಅಸೋಸಿಯೇಶನ್‌ನಲ್ಲಿ ಭಾರತ, ಆಸ್ಪ್ರೇಲಿಯ ಸೇರಿದಂತೆ 21 ದೇಶಗಳಿದ್ದು, ಈ ಪ್ರದೇಶದ ವಾಣಿಜ್ಯ ಬೆಳವಣಿಗೆ, ಮುಕ್ತ ವ್ಯಾಪಾರ ವಹಿವಾಟು, ಭದ್ರತೆಗೆ ಹೆಚ್ಚಿನ ಆದ್ಯತೆ ಕಲ್ಪಿಸಲು ಕಟಿಬದ್ಧವಾಗಿವೆ.
- ಇತ್ತೀಚೆಗೆ, ಮಾಲ್ಡೀವ್ಸ್ ಸೇರಿಕೊಂಡಿದೆ
-  ಮ್ಯಾನ್ಮಾರ್ ಮತ್ತು ಪಾಕಿಸ್ತಾನ ಇದರ ಸದಸ್ಯ ರಾಷ್ಟ್ರ ಅಲ್ಲ
- ಭಾರತ ಇದರ ಒಂದು ಸದಸ್ಯ.

Monday, 22 April 2019

•► ರಾಷ್ಟ್ರೀಯ ಹಸಿರು ನ್ಯಾಯಮಂಡಳಿ - NGT (IAS / KAS Prelims 2019) (National Green Tribunal)

•► ರಾಷ್ಟ್ರೀಯ ಹಸಿರು ನ್ಯಾಯಮಂಡಳಿ - NGT  (IAS / KAS Prelims 2019)
(National Green Tribunal)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ / ಕೆಎಎಸ್ ಪೂರ್ವಿಭಾವಿ ಪರೀಕ್ಷೆ ತಯಾರಿ
(IAS / KAS Prelims Preparation)

★ ಸಾಮಾನ್ಯ ಅಧ್ಯಯನ ತಯಾರಿ
(General Studies Preparation)




• ಇದು ಪರಿಸರವನ್ನು ರಕ್ಷಣೆಗೆ ಸಂಬಂಧಪಟ್ಟ, ಅರಣ್ಯ ಮತ್ತು ಪ್ರ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣೆಗೆ ಸಂಬಂಧಪಟ್ಟ, ಪರಿಸರದ ಬಗೆಗಿನ ಕಾನೂನಾತ್ಮಕ ಹಕ್ಕುಗಳ ಜಾರಿಗೆ ಸಂಬಂಧಪಟ್ಟ ಮತ್ತು  ಪರಿಸರ ಹಾನಿಯಿಂದಾಗಿ ಆಸ್ಥಿಪಾಸ್ತಿಗಳ ನಷ್ಟಕ್ಕೆ ಗುರಿಯಾದವರಿಗೆ ಪುನರ್‌ವಸತಿ ಮತ್ತು ಪರಿಹಾರವನ್ನು ಕೊಡುವುದಕ್ಕೆ ಸಂಬಂಧಪಟ್ಟ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸುವ ಜವಾಬ್ದಾರಿಯನ್ನು ಹೊಂದಿದೆ.
• ಪರಿಸರಕ್ಕೆ ಸಂಬಂಧಪಟ್ಟ ಪ್ರಕರಣಗಳನ್ನು ತ್ವರಿತವಾಗಿ ಮತ್ತು ಅಗತ್ಯವಿರುವಷ್ಟು ಪರಿಣಿತಿಯಿಂದ ವಿಲೇವಾರಿ ಮಾಡಲೆಂದೇ ಈ ಮಂಡಳಿಯನ್ನು ಸ್ಥಾಪಿಸಲಾಯಿತು.

• ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸ್ಥಾಪನೆಯಾದುದು 2010ರಲ್ಲಿ.
• 2010ರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯಿದೆಯನ್ವಯ ಈ ಹಸಿರು ನ್ಯಾಯಮಂಡಳಿಯು ಏರ್ಪಟ್ಟಿದೆ.

• ಇದರ ಮುಖ್ಯ ಕಚೇರಿ ದೆಹಲಿಯಲ್ಲಿ ಇದೆ.
• ಭೋಪಾಲ್, ಪುಣೆ, ಕೋಲ್ಕತ್ತ ಮತ್ತು ಚೆನ್ನೈನಲ್ಲಿ ಪ್ರಾಂತೀಯ ಕೇಂದ್ರಗಳಿವೆ.

• ಈ ನ್ಯಾಯಮಂಡಳಿಯ ಆದೇಶಗಳನ್ನು ಕೇವಲ ಸುಪ್ರೀಂ ಕೋರ್ಟು ಮಾತ್ರ ಬದಲಾಯಿಸಬಲ್ಲದು.

• ಇದರಲ್ಲಿ ಅಧ್ಯಕ್ಷರೂ ಸೇರಿದಂತೆ ಐದು ಮಂದಿ ಸದಸ್ಯರಿದ್ದಾರೆ. ಇವರೆಲ್ಲ ನ್ಯಾಯಮೂರ್ತಿಗಳಾಗಿ ಕೆಲಸ ಮಾಡಿದ ಅನುಭವ ಇರುವವರು. ಜೊತೆಗೆ ಪರಿಸರದ ಬಗ್ಗೆ ವಿಶೇಷ ಪರಿಣತಿ ಇರುವ, ಕಾನೂನು ಬಲ್ಲ ತಜ್ಞರೂ ಇದಕ್ಕೆ ನೆರವಾಗುತ್ತಿದ್ದಾರೆ.

• ಈವರೆಗೆ ಇದ್ದ ಕಾಯಿದೆಯ ಪ್ರಕಾರ ಹಸಿರು ಪೀಠದ ಮುಖ್ಯಸ್ಥರಾಗಿ ಸುಪ್ರೀಂ ಕೋರ್ಟಿನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರು ಅಥವಾ ಯಾವುದಾದರೂ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರನ್ನಷ್ಟೆ ನೇಮಿಸಬಹುದಿತ್ತು. ಅರ್ಥಾತ್ ನ್ಯಾಯಿಕ ವಿಚಾರಗಳಲ್ಲಿ ಅನುಭವ ಇರುವವರು ಮಾತ್ರ ಈ ಹುದ್ದೆಯನ್ನು ಪಡೆಯಬಹುದಾಗಿತ್ತು. ಆದರೆ ಹೊಸ ನಿಯಮಾವಳಿಗಳ ಪ್ರಕಾರ ಸುಪ್ರಿಂ ಕೋರ್ಟಿನ ನ್ಯಾಯಾಧೀಶರಾಗುವ ಅರ್ಹತೆ ಪಡೆದ ಯಾರು ಬೇಕಾದರೂ ಪೀಠದ ಮುಖ್ಯಸ್ಥರಾಗಬಹುದು. ಅಂದರೆ ಯಾವುದೇ ಹೈಕೋರ್ಟಿನಲ್ಲಿ 10 ವರ್ಷಗಳ ಕಾಲ ವಕೀಲನಾಗಿ ಸೇವೆ ಸಲ್ಲಿಸುವ ಮೂಲಕ ಸುಪ್ರಿಂ ಕೋರ್ಟಿನ ನ್ಯಾಯಾಧೀಶರಾಗಲು ತಾಂತ್ರಿಕವಾಗಿ ಅರ್ಹತೆ ಪಡೆದ ಯಾರನ್ನು ಬೇಕಾದರೂ ಹಸಿರು ಪೀಠದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಬಹುದು. ಅಲ್ಲದೆ ಈವರೆಗೆ ಹಸಿರು ನ್ಯಾಯಮಂಡಳಿಯ ಇತರ ಸದಸ್ಯರನ್ನು ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ನೇಮಕವಾದ ಸಮಿತಿಯು ಆಯ್ಕೆ ಮಾಡುತ್ತಿತ್ತು. ಆದರೆ ಇನ್ನು ಮುಂದೆ ಮಂಡಳಿಯ ಸದಸ್ಯರನ್ನು ಸರ್ಕಾರಿ ಅಧಿಕಾರಿಗಳು ಆಯ್ಕೆ ಮಾಡುತ್ತಾರೆ.

• ಪರಿಸರ ಎನ್ನುವುದು ವಿಶಾಲವ್ಯಾಪ್ತಿಯದು. ಅರಣ್ಯ ಪರಿಸರ, ಜೈವಿಕ ವೈವಿಧ್ಯ, ನೆಲ-ನೀರು-ಬಾನಿನ ಮಾಲಿನ್ಯದ ಮೇಲಿನ ನಿಗಾ, ಸಂಸ್ಥೆಗಳು ಮಾಡುವ ಪರಿಸರ ವಿರೋಧಿ ಚಟುವಟಿಕೆಗಳು- ಇವೆಲ್ಲವನ್ನೂ ನಿಭಾಯಿಸುವುದು ಸುಲಭದ ಮಾತಲ್ಲ. ಎಷ್ಟೋ ವೇಳೆ ಸರ್ಕಾರದ ಕ್ರಮದ ವಿರುದ್ಧವೇ ತೀರ್ಪು ಕೊಡಬೇಕಾಗುತ್ತದೆ. ಇಂಥ ಸಂದರ್ಭಗಳು ಅನೇಕವಿವೆ.

• ಈವರೆಗೆ 25,447 ಮೊಕದ್ದಮೆಗಳನ್ನು ಇತ್ಯರ್ಥ ಮಾಡಿರುವುದು ಈ ಸಂಸ್ಥೆಗಿರುವ ಜವಾಬ್ದಾರಿಯ ಸಂಕೇತ.

•► ವಿಶ್ವ ಪ್ರಾಕೃತಿಕ ಸಂಸ್ಥೆ (WNO): (IAS / KAS Prelims 2019) (World Nature Organization)


•► ವಿಶ್ವ ಪ್ರಾಕೃತಿಕ ಸಂಸ್ಥೆ (WNO): (IAS / KAS Prelims 2019)
(World Nature Organization)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ / ಕೆಎಎಸ್ ಪೂರ್ವಿಭಾವಿ ಪರೀಕ್ಷೆ ತಯಾರಿ
(IAS / KAS Prelims Preparation)

★ ಸಾಮಾನ್ಯ ಅಧ್ಯಯನ ತಯಾರಿ
(General Studies Preparation)


• ಇದನ್ನು 2010 ರಲ್ಲಿ ಸ್ಥಾಪಿಸಲಾಯಿತು ಆದರೆ 2014 ರಲ್ಲಿ ಅಸ್ತಿತ್ವಕ್ಕೆ ಬಂತು.
• ಇದು ಜಾಗತಿಕ ಪರಿಸರ ರಕ್ಷಣೆಗೆ ಉತ್ತೇಜನ ನೀಡುವ ಅಂತರ-ಸರ್ಕಾರಿ ಸಂಸ್ಥೆ (intergovernmental organisation)ಯಾಗಿದೆ.
 • ಹೆಚ್ಚುತ್ತಿರುವ ಸಮುದ್ರ ನೀರಿನ ಮಟ್ಟ ಮತ್ತು  ಬರಗಾಲದಂತಹ ಅಪಾಯಕಾರಿ ಹವಾಮಾನ ಬದಲಾವಣೆಗೆ ಪದೇ ಪದೇ ಒಳಗಾಗುವ ಫೆಸಿಪಿಕ್ ಸಾಗರದ ಹಾಗೂ ಕೆರಿಬಿಯನ್ ನ ಸುತ್ತಮುತ್ತಲಿನ ದೇಶಗಳಿಂದ ಮತ್ತು ಉದಯೋನ್ಮುಖ ಆಫ್ರಿಕನ್ ರಾಷ್ಟ್ರಗಳಿಂದ ಈ ಸಂಸ್ಥೆಯನ್ನು ಪ್ರಾರಂಭಿಸಲಾಯಿತು.
• ಈ ಸಂಘಟನೆಯು ಮೇ 1, 2014 ರ ಅಂತರ-ಸರ್ಕಾರಿ-WNO ಒಪ್ಪಂದದ ಅನ್ವಯ ಅಸ್ತಿತ್ವಕ್ಕೆ ಬಂತು.
•ಇದರ ಕೇಂದ್ರ ಸ್ಥಳ : ಜಿನೀವಾ.
• ಇದರ ಸದಸ್ಯತ್ವವು ಎಲ್ಲಾ ಸರ್ಕಾರಗಳು ಮತ್ತು ಅಂತರ-ಸರ್ಕಾರಿ ಸಂಸ್ಥೆಗಳಿಗೆ (IGO) ಮುಕ್ತವಾಗಿರುವುದು.
• ಪ್ರಸ್ತುತ ಭಾರತವು ಇದರ ಸದಸ್ಯತ್ವ ಹೊಂದಿಲ್ಲ.
• ಯುಕ್ತ ಕಾರ್ಯಚಟುವಟಿಕೆಗಳನ್ನು ಮತ್ತು ತಂತ್ರಜ್ಞಾನಗಳನ್ನು ಉತ್ತೇಜಿಸುವುದು ಇದರ ಧ್ಯೇಯವಾಗಿದೆ.

Monday, 25 February 2019

•► (PART : III) "ಕೆಎಎಸ್ ಸಂದರ್ಶನ / ಇಂಟರ್‌ವ್ಯೂ ತಯಾರಿ"— ಮಾದರಿ ಪ್ರಶ್ನೆಗಳು (KAS INTERVIEW PREPARATION - Model Questions)

•►  (PART : III) "ಕೆಎಎಸ್ ಸಂದರ್ಶನ / ಇಂಟರ್‌ವ್ಯೂ ತಯಾರಿ"— ಮಾದರಿ ಪ್ರಶ್ನೆಗಳು
(KAS INTERVIEW PREPARATION - Model Questions)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಸಂದರ್ಶನ ತಯಾರಿ
(KAS Interview Preparation)

★ ಸಾಮಾನ್ಯ ಅಧ್ಯಯನ ತಯಾರಿ
(General Studies Preparation)


"ಕೆಎಎಸ್ ಇಂಟರ್‌ವ್ಯೂ (KAS INTERVIEW PREPARATION) ತಯಾರಿ"ಗಾಗಿ ನನ್ನ ಅಭಿಪ್ರಾಯ ಪ್ರಕಾರ ಸ್ಪರ್ಧಾರ್ಥಿಗಳು ಈ ಕೆಳಗೆ ನೀಡಲಾದ ವಿಷಯಗಳನ್ನು ಪರಿಗಣಿಸಬಹುದು. ಇವು ಪ್ರಚಲಿತ ಘಟನೆಗಳನ್ನಾಧರಿಸಿ ಆಯ್ದುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಸಂಗ್ರಹಿಸಿದ್ದು ಆದಾಗ್ಯೂ ಇವೇ ಅಂತಿಮವಲ್ಲ. ಉಳಿದ ವಿಷಯಗಳನ್ನು ಶೀಘ್ರದಲ್ಲೇ ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡುವೆ.  ಏನಾದರೂ ತಪ್ಪಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತನ್ನಿ (Gmail : yaseen7ash@gmail.com)


• ವಿಷಯವಸ್ತು :




41. ಸುಸ್ಥಿರ ಕೃಷಿ ನಿರ್ವಹಣೆಗೆ ತಾವು ಸೂಚಿಸಬಹುದಾದ ವೈಜ್ಞಾನಿಕ ಅಂಶಗಳು.

42. ಪ್ರತ್ಯೇಕ ನಾಡಧ್ವಜ —
— 'ಒಂದು ದೇಶ- ಒಂದು ಧ್ವಜ' ಸೂತ್ರದ ನಡುವೆ ರಾಜ್ಯವೊಂದರಲ್ಲಿ ಪ್ರತ್ಯೇಕ ಧ್ವಜ ಏಕೆ?
— ಸಂವಿಧಾನದಲ್ಲಿ ಪ್ರತ್ಯೇಕ ಧ್ವಜದ ಕುರಿತು ಯಾವುದೇ ಪ್ರಸ್ತಾಪವಿಲ್ಲ. ನಮ್ಮ ಗುರುತನ್ನು ಕಾಪಾಡಿಕೊಳ್ಳಲು ಪ್ರತ್ಯೇಕ ಬಾವುಟ ಇದ್ದರೆ ತಪ್ಪೇನು?

43.ಜಯಂತಿ ವಿವಾದಗಳು :— ಐತಿಹಾಸಿಕ ಘಟನೆ, ವಿದ್ಯಮಾನಗಳನ್ನು ವರ್ತಮಾನದಲ್ಲಿ ನೋಡುವುದು ಹೇಗೆ ಎನ್ನುವ ಆಳವಾದ ಪರಾಮರ್ಶೆಯ ಕೊರತೆ ಇತ್ತೀಚಿನ ಚರ್ಚೆಗಳಲ್ಲಿ ಎದ್ದು ಕಾಣುತ್ತಿದೆಯೇ?

44. ಹೊರನಾಡ ಕನ್ನಡಿಗರ ಸಮಸ್ಯೆಗಳು — ಹೊರನಾಡ ಕನ್ನಡಿಗರಿಗೆ ಶಿಕ್ಷಣ-ಉದ್ಯೋಗ ವಲಯಗಳಲ್ಲಿ ಮೀಸಲು ಮತ್ತಿತರ ಸೌಲಭ್ಯ ಒದಗಿಸಬೇಕೇ?

45. ಮೌಢ್ಯ ನಿಷೇಧ ಕಾಯಿದೆ

46. ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ದೇಶದ ಮಹಿಳೆಯರ ಭಾಗವಹಿಸುವಿಕೆ.

47. ಸಮಾನ ನಾಗರಿಕ ಸಂಹಿತೆ & ತ್ರಿವಳಿ ತಲಾಕ್‌

48. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ( ಐಪಿಪಿಬಿ)

49. ನ್ಯಾಯಾಂಗ ನಿಂದನೆ .

50.2018ರ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪುಗಳು

51.ದೇಶದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ (ಎಂಎಸ್‌ಎಂಇ) ಪ್ರಸ್ತುತ ಸ್ಥಿತಿಗತಿ - ಇವುಗಳ ಮೇಲೆ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯ ಪ್ರಭಾವ

52.ಉದ್ಯೋಗ ಸೃಷ್ಟಿಸುವಲ್ಲಿ ಸರ್ಕಾರಗಳ ನೀತಿಯನ್ನು ಕಳೆದೆರಡು ದಶಕಗಳಿಂದ ಅವಲೋಕಿಸಿ.

53.ಪ್ರಸ್ತುತ ದೇಶದ ಆರ್ಥಿಕತೆಗೆ ಅಸಂಘಟಿತ ವಲಯದ ಕೊಡುಗೆ.

54.ದೇಶದ ಅಸಂಘಟಿತ ವಲಯದ ಮೇಲೆ ನೋಟು ಅಮಾನ್ಯೀಕರಣ & ಜಿಎಸ್‌ಟಿಯ ಪರಿಣಾಮಗಳು.

55. ನಿರುದ್ಯೋಗ ಸಮಸ್ಯೆಗೂ ಸಂಪತ್ತಿನ ಅಸಮಾನತೆಗೂ ಇರುವ ಸಂಬಂಧವನ್ನು ತಿಳಿಸಿ.

56. ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವುದು ದೇಶಕ್ಕೆ ಒಳಿತೇ?

57. ಹೆಣ್ಣುಮಕ್ಕಳ ಪ್ರವೇಶ ನಿಷೇಧ ಮಹಿಳೆಯರ ಧಾರ್ಮಿಕ ಹಕ್ಕಿನ ಉಲ್ಲಂಘನೆ ಮತ್ತು ಸಂವಿಧಾನದ ಅವಗಣನೆಯೇ?

58. ದೇಶದ ಗಣ್ಯ ತನಿಖಾ ಸಂಸ್ಥೆಯಾದ ಸಿಬಿಐನ ಸ್ವತಂತ್ರ ಕಾರ್ಯವೈಖರಿ & ಪ್ರಸ್ತುತತೆ.

59. ಆಯುಷ್ಮಾನ್ ಭಾರತ್ ಅಥವಾ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ

60. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಸ್ವಾಯತ್ತತೆ & ಕೇಂದ್ರ ಸರ್ಕಾರ
…ಮುಂದುವರೆಯುವುದು

Sunday, 24 February 2019

•► (PART : II) "ಕೆಎಎಸ್ ಸಂದರ್ಶನ / ಇಂಟರ್‌ವ್ಯೂ ತಯಾರಿ"— ಮಾದರಿ ಪ್ರಶ್ನೆಗಳು (KAS INTERVIEW PREPARATION - Model Questions)

•► "ಕೆಎಎಸ್ ಸಂದರ್ಶನ / ಇಂಟರ್‌ವ್ಯೂ ತಯಾರಿ"— ಮಾದರಿ ಪ್ರಶ್ನೆಗಳು (PART : II)
(KAS INTERVIEW PREPARATION)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಸಂದರ್ಶನ ತಯಾರಿ
(KAS Interview Preparation)

★ ಸಾಮಾನ್ಯ ಅಧ್ಯಯನ ತಯಾರಿ
(General Studies Preparation)


"ಕೆಎಎಸ್ ಇಂಟರ್‌ವ್ಯೂ (KAS INTERVIEW PREPARATION) ತಯಾರಿ"ಗಾಗಿ ನನ್ನ ಅಭಿಪ್ರಾಯ ಪ್ರಕಾರ ಸ್ಪರ್ಧಾರ್ಥಿಗಳು ಈ ಕೆಳಗೆ ನೀಡಲಾದ ವಿಷಯಗಳನ್ನು ಪರಿಗಣಿಸಬಹುದು. ಇವು ಪ್ರಚಲಿತ ಘಟನೆಗಳನ್ನಾಧರಿಸಿ ಆಯ್ದುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಸಂಗ್ರಹಿಸಿದ್ದು ಆದಾಗ್ಯೂ ಇವೇ ಅಂತಿಮವಲ್ಲ. ಉಳಿದ ವಿಷಯಗಳನ್ನು ಶೀಘ್ರದಲ್ಲೇ ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡುವೆ.  ಏನಾದರೂ ತಪ್ಪಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತನ್ನಿ (Gmail : yaseen7ash@gmail.com)


• ವಿಷಯವಸ್ತು :

21.ಸಾಲ ಮನ್ನಾ- ಇದು ಕಾಯಂ ಪರಿಹಾರವೇ ? ದೇಶದ/ರಾಜ್ಯದ ಆರ್ಥಿಕ ವ್ಯವಸ್ಥೆಯ ಮೇಲೆ ಇದರ ಪರಿಣಾಮಗಳು.

22.ಯಾಕೆ ಪಶ್ಚಿಮ ಕರಾವಳಿಯ ರಾಜ್ಯಗಳು ಪೂರ್ವ ಕರಾವಳಿಯ ರಾಜ್ಯಗಳಿಗಿಂತ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಿವೆ?

23.ಮಾನವ ಹಕ್ಕುಗಳ ರಕ್ಷಣೆ (ತಿದ್ದುಪಡಿ)-2018 ಮಸೂದೆ - ಲಕ್ಷಣಗಳು - ಆದ ಬದಲಾವಣೆಗಳು

24.ಐಎಂಎಫ್ ಎಸ್​ಡಿಆರ್​ಗೆ ಯುವಾನ್ ಸೇರ್ಪಡೆ ಆಗಿರುವುದರಿಂದ ಚೀನಾ ದೇಶಕ್ಕೆ ಏನು ಲಾಭ?

25.ಪ್ರಯಾಣಿಕರ ಸಂಖ್ಯೆಯ ದೃಷ್ಟಿಯಿಂದ ವಿಶ್ವದ ಮೂರನೇ ಅತಿ ದೊಡ್ಡ ಉದ್ಯಮ ಎನ್ನುವ ಹೆಗ್ಗಳಿಕೆ ಹೊಂದಿದ್ದರೂ ನಾಗರಿಕ ವಿಮಾನಯಾನ ಕ್ಷೇತ್ರವು ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಏಕೆ?

26.ಪ್ರಸ್ತುತ ಭಾರತದ ಮಾನವ ಅಭಿವೃದ್ಧಿ ಸ್ಥಿತಿಗತಿ  - UNDPಯ ಮಾನವ ಅಭಿವೃದ್ಧಿ ಸೂಚ್ಯಂಕದ ಮೇಲೆ ಇದರ ಪರಿಣಾಮ.

27. ಭಾರತದ HDI ಮೇಲೆ ಪ್ರಭಾವ ಬೀರುವ ಅಂಶಗಳು.

28. ಜಾಗತಿಕ ಹಸಿವು ಸೂಚ್ಯಂಕ (GHI-Global Hunger Index)) ವರದಿ & ಭಾರತ.

29. ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲಿಯೂ ಈಗಲೂ ಪುರುಷರ ಸಾಕ್ಷರತೆಯ ಪ್ರಮಾಣವು ಮಹಿಳಾ ಸಾಕ್ಷರತೆಯ ಪ್ರಮಾಣಕ್ಕಿಂತ ಅಧಿಕವಾಗಿದೆ ಏಕೆ? ಸಾಕ್ಷರತೆಯ ಪ್ರಮಾಣದಲ್ಲಿರುವ ತಾರತಮ್ಯ ಇನ್ನೂ ಯಾಕೆ ಕಡಿಮೆಯಾಗುತ್ತಿಲ್ಲ?

30. ಪ್ರಧಾನಮಂತ್ರಿ ಕಿಸಾನ್‌ ಸನ್ಮಾನ್‌ ಯೋಜನೆ - ಇದು ವಾಡಿಕೆಯ ಸಾಮಾಜಿಕ ಯೋಜನೆಗಳಿಗಿಂತ ಹೇಗೆ ಭಿನ್ನ?

31. ಮಾನವ ಸಾಗಣೆ (ತಡೆ, ಸಂರಕ್ಷಣೆ ಮತ್ತು ಪುನರ್ವಸತಿ) ಮಸೂದೆ 2018 ( Trafficking of Persons (Prevention, Protection & Rehabilitation Bill, 2018) - ಈ ಮಸೂದೆಯ ಪ್ರಮುಖ ಅಂಶಗಳು.

32.ಮಾನವ ಕಳ್ಳಸಾಗಣೆಯು ಜಾಗತಿಕ ಸಮಸ್ಯೆಯಾದರೂ ದಕ್ಷಿಣ ಏಷ್ಯಾದಲ್ಲಿ ಭಾರಿ ಪ್ರಮಾಣದಲ್ಲಿ ನಡೆಯುತ್ತಿದೆ. ಯಾಕೆ?

33.ಭಾರತದಲ್ಲಿ ಸಾರ್ವಜನಿಕ ವಿತರಣೆ ಕಾರ್ಯಕ್ರಮದಲ್ಲಿ ನೀವು ಸೂಚಿಸಬಹುದಾದ ಬದಲಾವಣಾ ಕ್ರಮಗಳು.

34.ಪ್ರಸ್ತುತ ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ "ದೇಶದಲ್ಲಿ ಬಡತನ ಕಡಿಮೆಯಾಗಿದೆ ಆದರೆ ಹಸಿದವರ ಸಂಖ್ಯೆ ಕಡಿಮೆಯಾಗಿಲ್ಲ" ಎಂದರೆ ಏನರ್ಥ? ಜಾಗತಿಕ ಹಸಿವು ಸೂಚ್ಯಂಕ ಎದುರಿಡುತ್ತಿರುವ ಪ್ರಶ್ನೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉತ್ತರವೇನು?

35. ನೋಟು ಅಮಾನ್ಯೀಕರಣ (ಅಪನಗದೀಕರಣ) ಮತ್ತು ಜಿಎಸ್‍ಟಿ ಜಾರಿಯಾದ ನಂತರದ ದೇಶದ ಅರ್ಥ ವ್ಯವಸ್ಥೆ

36. ಕೇಂದ್ರ ಸರ್ಕಾರವು ಆರ್ಥಿಕ ಹಿಂದುಳಿದಿರುವಿಕೆಯ ಮಾನದಂಡಕ್ಕೆ ಅನುಗುಣವಾಗಿ ಶೇಕಡ ಹತ್ತರಷ್ಟು 'ಆರ್ಥಿಕ ದುರ್ಬಲರಿಗೆ ಮೀಸಲಾತಿ’ಗೆ ಕೈಗೊಂಡ ಕ್ರಮ ಸರಿಯೇ?

37. ದೇಶದಲ್ಲಿ ಉದ್ಯೋಗಾವಕಾಶದ ಸೃಷ್ಟಿ & ಪ್ರತಿಭಾ ಪಲಾಯನ

38. ಪೌರತ್ವ ತಿದ್ದುಪಡಿ ವಿಧೇಯಕ (The Citizenship (Amendment) Bill, 2016)

39. ಜಗತ್ತಿನ ಬೇರಾವುದೇ ದೇಶಕ್ಕೆ ಸಮೀಕರಿಸಲಾಗದಷ್ಟು ಮಹಿಳಾ ಕಾನೂನುಗಳು, ಭಾರತೀಯ ಸ್ತ್ರೀಯರ ಪಾಲಿಗಿವೆ. ಆದಾಗ್ಯೂ ಮಹಿಳೆಯರ ಮೇಲೆ ದಿನಾಲೂ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿವೆ ಏಕೆ?

40.ತಾಪಮಾನ ಏರಿಕೆ ನಿಯಂತ್ರಣಕ್ಕೆ ತಾವು ಹೊಸದಾಗಿ ಸೂಚಿಸಬಹುದಾದ ಕ್ರಮಗಳು.
…ಮುಂದುವರೆಯುವುದು.

Tuesday, 19 February 2019

•► "ಕೆಎಎಸ್ ಸಂದರ್ಶನ / ಇಂಟರ್‌ವ್ಯೂ ತಯಾರಿ"— ಮಾದರಿ ಪ್ರಶ್ನೆಗಳು (PART : I) (KAS INTERVIEW PREPARATION)

•► "ಕೆಎಎಸ್ ಸಂದರ್ಶನ / ಇಂಟರ್‌ವ್ಯೂ ತಯಾರಿ"— ಮಾದರಿ ಪ್ರಶ್ನೆಗಳು (PART : I)
(KAS INTERVIEW PREPARATION)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಸಂದರ್ಶನ ತಯಾರಿ
(KAS Interview Preparation)

★ ಸಾಮಾನ್ಯ ಅಧ್ಯಯನ ತಯಾರಿ
(General Studies Preparation)

"ಕೆಎಎಸ್ ಇಂಟರ್‌ವ್ಯೂ (KAS INTERVIEW PREPARATION) ತಯಾರಿ"ಗಾಗಿ ನನ್ನ ಅಭಿಪ್ರಾಯ ಪ್ರಕಾರ ಸ್ಪರ್ಧಾರ್ಥಿಗಳು ಈ ಕೆಳಗೆ ನೀಡಲಾದ ವಿಷಯಗಳನ್ನು ಪರಿಗಣಿಸಬಹುದು. ಇವು ಪ್ರಚಲಿತ ಘಟನೆಗಳನ್ನಾಧರಿಸಿ ಆಯ್ದುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಸಂಗ್ರಹಿಸಿದ್ದು ಆದಾಗ್ಯೂ ಇವೇ ಅಂತಿಮವಲ್ಲ. ಉಳಿದ ವಿಷಯಗಳನ್ನು ಶೀಘ್ರದಲ್ಲೇ ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡುವೆ.  ಏನಾದರೂ ತಪ್ಪಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತನ್ನಿ (Gmail : yaseen7ash@gmail.com)


• ವಿಷಯವಸ್ತು :

1.ನೀವು ಈ ಹುದ್ದಗೆ ಅರ್ಹರು ಎಂದು ಹೇಗೆ ಸಾಬೀತುಪಡಿಸಬಲ್ಲಿರಿ?

2.ಭಾರತದ ರೂಪಾಯಿಯು ಡಾಲರ್ ಎದುರು ಕುಸಿತಗೊಳ್ಳುತ್ತಿದ್ದು ಏಕೆ?

3.ಫಸಲ್ ವಿಮಾ ಯೋಜನೆ :

4.ಪ್ರಸ್ತುತ ದೇಶದ/ರಾಜ್ಯದ ಜಿಡಿಪಿ(GDP)ಯಲ್ಲಿ ಕೃಷಿ ವಲಯ & ಸೇವಾ ವಲಯದ ಪಾಲು.

5.ಜನ್-ಧನ್ ಯೋಜನೆಯ 4 ವರ್ಷಗಳ ಅವಲೋಕನ.

6.ದೇಶದ ವಿದೇಶಾಂಗ ನೀತಿ : ಇತ್ತೀಚಿನ ಬೆಳೆವಣಿಗೆಗಳು

7.ಇತರೇ ದೇಶಗಳಿಗೆ ಹೋಲಿಸಿದ್ದಲ್ಲಿ ಭಾರತದಲ್ಲಿ ತಲಾ ಆದಾಯವೇಕೆ ಅಲ್ಪ ಪ್ರಮಾಣದಲ್ಲಿದೆ?

8.ನೀತಿ ಆಯೋಗ : ಯೋಜನಾ ಆಯೋಗಕ್ಕಿಂತ ಹೇಗೆ ಭಿನ್ನ?

9.Eco Terrorism ಎಂದರೇನು?

10.ಮಹಿಳೆಯರ ಭದ್ರತೆಯ ವಿಷಯದಲ್ಲಿ ಭಾರತ ಸೋತಿರುವುದೇ?

11.climate change : ದೇಶದ ಮೇಲೆ ಇದರ ಪರಿಣಾಮಗಳು & ಈ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿದ್ದ ಕ್ರಮಗಳು - ಅವಲೋಕನ.

12.ಸಾರ್ವತ್ರಿಕ ಮೂಲ ಆದಾಯ (Free Basic Income) - ಯಾಕೆ ಸರ್ಕಾರ ಇದನ್ನು ಜಾರಿಗೊಳಿಸುತ್ತಿಲ್ಲ?

13.ಅಂತರರಾಜ್ಯ ನದಿ ನೀರಿನ ವಿವಾದಗಳು. - ಕಾವೇರಿ ನದಿ ವಿವಾದದ ಬಗ್ಗೆ ನಿಮ್ಮ ಅಭಿಪ್ರಾಯ?

14.ದೇಶದಲ್ಲಿ ಕ್ರೀಡೆಗಳ ಉತ್ತೇಜನಕ್ಕಾಗಿ ತಾವು ಯಾವ್ಯಾವ ಉತ್ತೇಜನಾ ಕ್ರಮಗಳನ್ನು ಕೈಗೊಳ್ಳುವಿರಿ?

15 ಅಂತರರಾಜ್ಯ ನದಿ ಜೋಡಣೆಯ ಬಗ್ಗೆ ನಿಮ್ಮ ಅಭಿಪ್ರಾಯ

16.Brexit ಎಂದರೇನು? ಇದು ಸರಿಯೋ ತಪ್ಪೋ? ದೇಶದ ಮೇಲೆ ಇದರ ಪ್ರಭಾವ.

17.ಅಪೌಷ್ಟಿಕತೆ(malnutrition) ಸಮಸ್ಯೆ : ಯಾಕೆ ಉಲ್ಬಣಿಸುತ್ತಿದೆ?  ನೀವು ಇದರ ನಿರ್ಮೂಲನೆಯನ್ನು ಹೇಗೆ ನಿಭಾಯಿಸುವಿರಿ?

18.ಗ್ರಾಮೀಣಾಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿ ತಂದರೂ ಯಾಕೆ ಜನ ಗೂಳೆ ಹೋಗುವುದು ತಪ್ಪುತ್ತಿಲ್ಲ?

19.ಇತ್ತೀಚೆಗೆ ಪುನಃ ಉತ್ತರ ಕರ್ನಾಟಕ ಹೊಸ ರಾಜ್ಯ ರಚನೆ ಬಗ್ಗೆ ಕೂಗೆದ್ದಿತ್ತು, ಯಾಕೆ? ಉತ್ತರ & ದಕ್ಷಿಣ ಎಂಬ ತಾರತಮ್ಯ ನಿಮಗೆ ಕಾಣಿಸುತ್ತಿದೆಯೇ?

20.ಆಧಾರ್ ಕಾರ್ಡ್ ಮತ್ತು ಖಾಸಗಿತನದ ಹಕ್ಕು.
…ಮುಂದುವರೆಯುವುದು.

Wednesday, 23 January 2019

●. ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಜಾಗತಿಕ ಒಕ್ಕೂಟ : (IAS Prelims 2019 ರ ತಯಾರಿಗಾಗಿ) Global Alliance of National Human Rights Institutions (GANHRI)

●. ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಜಾಗತಿಕ ಒಕ್ಕೂಟ : (IAS Prelims 2019 ರ ತಯಾರಿಗಾಗಿ)
(Global Alliance of National Human Rights Institutions (GANHRI))

━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
 ★ ಸಾಮಾನ್ಯ ಅಧ್ಯಯನ
 (general studies)




• GANHRI ಯು ಯುನೈಟೆಡ್ ನೇಶನ್ಸ್ ಗೆ ಸೇರಿದ ಅಂತರರಾಷ್ಟ್ರೀಯ ಸಂಘಟನೆಯಾಗಿದ್ದು, ಜಗತ್ತಿನ ಎಲ್ಲ ಭಾಗಗಳಿಗೆ ಸೇರಿದ ರಾಷ್ಟ್ರೀಯ ಮಾನವ ಹಕ್ಕುಗಳ (NHRIs) ಸಂಸ್ಥೆಗಳನ್ನೊಳಗೊಂಡಿದೆ.

- ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಜಾಗತಿಕ ಒಕ್ಕೂಟ (GANHRI) ವನ್ನು 1993 ರಲ್ಲಿ ಸ್ಥಾಪಿಸಲಾಯಿತು, ಮತ್ತು ಈ ಹಿಂದೆ ಇದನ್ನು (ICC) ಅಂತರರಾಷ್ಟ್ರೀಯ ಸಹಕಾರ ಸಮಿತಿ ಎಂದು ಕರೆಯಲಾಗುತ್ತಿತ್ತು.

GANHRIಯು ವಿಶ್ವದಾದ್ಯಂತ ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ (NHRIs) ಪಾತ್ರವನ್ನು ಪ್ರೋತ್ಸಾಹಿಸುತ್ತದೆ. ಅಲ್ಲದೆ NHRIs ನ ಸದಸ್ಯರು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂವಹನ ನಡೆಸಲು ಮತ್ತು ಮಾಹಿತಿ ವಿನಿಮಯದ ಜೊತೆಗೆ ಪರಸ್ಪರ ಒಪ್ಪಂದ, ಸಮಾಲೋಚನೆಗಳನ್ನು ಸುಲಭಗೊಳಿಸುವ ವೇದಿಕೆಯನ್ನು ನಿರ್ಮಿಸುವುದು ಇದನ್ನು ಅಧಿಕೃತವಾಗಿ 22 ಮಾರ್ಚ್ 2016 ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಜಾಗತಿಕ ಒಕ್ಕೂಟ (GANHRI) ಎಂದು ಹೊಸದಾಗಿ  ಹೆಸರಿಡಲಾಯಿತು.


• ವಿಶ್ವದಾದ್ಯಂತ ಇರುವ ಎಲ್ಲಾ NHRI ಗಳ ಸಂಯೋಜನೆಯು ಪ್ಯಾರಿಸ್ ಒಡಂಬಡಿಕೆಯ ಮೂಲತತ್ವಗಳಿಗೆ  ಬದ್ಧವಾಗಿರುವಂತೆ ಜವಾಬ್ದಾರಿ ವಹಿಸಿಕೊಂಡು ಖಾತ್ರಿಪಡಿಸಿಕೊಳ್ಳುವುದು ಇದರ ಆದ್ಯ ಕರ್ತವ್ಯವಾಗಿದೆ.
GANHRI ಕಾಯಿದೆ ಪ್ರಕಾರ, GHHRI ನಿಂದ ಮಾನ್ಯತೆ ಪಡೆದ NHRI ಗಳನ್ನು ಮಾತ್ರ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗಕ್ಕೆ ತಮ್ಮ ದೇಶಗಳನ್ನು ಪ್ರತಿನಿಧಿಸಲು ಅನುಮತಿಸಲಾಗಿದೆ.

- ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಕಮಿಷನ್ (NHRC) ವು ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಜಾಗತಿಕ ಒಕ್ಕೂಟ (GANHRI) ದಿಂದ ನಾಲ್ಕನೆಯ ಬಾರಿಗೆ 'ಎ' ಸ್ಥಾನಮಾನದ ಮಾನ್ಯತೆಯನ್ನು ಉಳಿಸಿಕೊಂಡಿದೆ.
NHRC 1999 ರಲ್ಲಿ ಮೊದಲ ಬಾರಿಗೆ 'A' ಸ್ಥಾನಮಾನವನ್ನು ಪಡೆದುಕೊಂಡಿತು, ಇದು ಮುಂದುವರೆದು  2006 ಮತ್ತು 2011 ರ ವರದಿಗಳಲ್ಲೂ ಉಳಿಸಿಕೊಂಡಿತ್ತು.




●.ಪ್ಯಾರಿಸ್ ತತ್ವಗಳು (Paris Principles)
━━━━━━━━━━━━━━━━━━━━━━━━━━━━━━
• ಯುನೈಟೆಡ್ ನೇಷನ್ಸ್ ಸಾಮಾನ್ಯ ಸಭೆ (ಜನರಲ್ ಅಸೆಂಬ್ಲಿ)ಯಿಂದ 1993 ರಲ್ಲಿ ಅಳವಡಿಸಿಕೊಂಡ ಪ್ಯಾರಿಸ್ ತತ್ವಗಳು NHRIs ಗಳಿಗೆ ಕನಿಷ್ಠ ಅಂತರರಾಷ್ಟ್ರೀಯ ಮಾನದಂಡಗಳನ್ನು ಒದಗಿಸಿವೆ.



- ಸಂಪೂರ್ಣವಾಗಿ ಯುಎನ್ ನ ಪ್ಯಾರಿಸ್ ತತ್ತ್ವಗಳಿಗೆ ಅನುಗುಣವಾಗಿ ಸಾಧನೆ ಮಾಡಿದ ಆಯಾ ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳಿಗೆ ಪ್ರತಿ ಐದು ವರ್ಷಗಳಿಗೊಮ್ಮೆ ಕಠಿಣ ಅವಲೋಕನ ಪ್ರಕ್ರಿಯೆಯ ನಂತರ 'A' ಸ್ಥಾನಮಾನವನ್ನು ನೀಡಲಾಗುತ್ತದೆ,

 - ಪ್ಯಾರಿಸ್ ತತ್ತ್ವಗಳ ಪ್ರಕಾರ ಮಾನವ ಹಕ್ಕು ಆಯೋಗಗಳು ತಮ್ಮ ಸರಕಾರದಿಂದ, ಕಾನೂನು ಅಥವಾ ಸಂವಿಧಾನದಿಂದ, ಸಾಕಷ್ಟು ತನಿಖೆಯ ಅಧಿಕಾರಗಳಿಂದ, ಹಾಗು ಬಹುಸಂಖ್ಯಾತತೆ, ವಿಫುಲ ಸಂಪನ್ಮೂಲಗಳಿಂದ ಸ್ವಾಯತ್ತತೆಯನ್ನು ಹೊಂದಿರಬೇಕು.


●.ಆ ಅಗತ್ಯವಿರುವ ಆರು ಪ್ರಮುಖ ಮಾನದಂಡ (main criteria) ಗಳು ಹೀಗಿವೆ:
━━━━━━━━━━━━━━━━━━━━━━━━━━━━━━━━━━━━━━━━━━━━━━━
1. ಆಜ್ಞೆ (ಆದೇಶ) ಮತ್ತು ಸಾಮರ್ಥ್ಯ: ವಿಶ್ವವ್ಯಾಪಿ ಮಾನವ ಹಕ್ಕುಗಳ ಮಾನದಂಡಗಳ ಆಧಾರದ ಮೇಲೆ ವಿಶಾಲ ಆದೇಶ ಮಾನದಂಡಗಳು;
2. ಸರ್ಕಾರದಿಂದ ಸ್ವಾಯತ್ತತೆ;
3. ಕಾನೂನು ಅಥವಾ ಸಂವಿಧಾನದಿಂದ ಭರವಸೆಯ ಸ್ವಾತಂತ್ರ್ಯ;
4. ಬಹುಸಾಂಸ್ಕೃತಿಕತೆ;
5. ಸಾಕಷ್ಟು ಸಂಪನ್ಮೂಲಗಳು; ಮತ್ತು ಮುಂದಾಳುತನ
6. ತನಿಖೆಯ ಸಾಕಷ್ಟು ಅಧಿಕಾರ.


●.ಇತರೇ ಸಂಬಂಧಿತ ಅಂಶಗಳು :
━━━━━━━━━━━━━
— 1945 ಜೂ.26ರಂದು ಮೊದಲು ಮಾನವ ಹಕ್ಕಗಳ ಬಗ್ಗೆ ಪ್ರಸ್ತಾಪವಾಯಿತು. ಅಂತಿಮವಾಗಿ 1948 ಅ.10ರಂದು ಯುನೈಟೆಡ್‌ ಡಿಕ್ಲರೇಷನ್‌ ಆಯಿತು.
— ದ್ವಿತೀಯ ಮಹಾ ಯುದ್ಧದ ನಂತರ 1948ರ ಡಿಸೆಂಬರ್‌ 10ರಂದು ಸಂಯುಕ್ತ ರಾಷ್ಟ್ರ ಸಂಘದ ಸಭೆಯಲ್ಲಿ ಮಾನವ ಹಕ್ಕುಗಳ ರಕ್ಷ ಣೆ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಅಂದಿನಿಂದ ಜಗತ್ತಿನಲ್ಲಿ ವಿಶ್ವ ಮಾನವ ಹಕ್ಕುಗಳ ದಿನ ಆಚರಿಸಲಾಗುತ್ತಿದೆ. ಜತೆಗೆ 1993ರಲ್ಲಿ ಭಾರತದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ಥಾಪನೆಯಾಯಿತು.

— 1948 ರ ಈ ದಿನದಂದು ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟಣೆಯನ್ನು ಹೊರಡಿಸಿತು ಈ ಪ್ರಕಟಣೆಯ ಪ್ರಸ್ತಾವನೆಯಲ್ಲಿ  ಮಾನವ ಹಕ್ಕುಗಳ ಮಹತ್ವದ ಬಗ್ಗೆ ಪ್ರಸ್ತಾಪಿಸುತ್ತಾ "ಎಲ್ಲಾ  ಜನಗಳಿಗೂ ಎಲ್ಲಾ  ಕಾರ್ಯ ಸಿದ್ದಿಯ ಸಾಮಾನ್ಯ ಪ್ರಮಾಣವೆಂದು, ಕೊನೆಯವರೆಗೂ ಪ್ರತಿ ವ್ಯಕ್ತಿಯು, ಸಮಾಜದ ಪ್ರತಿ ಅಂಗವು  ಈ ಹಕ್ಕುಗಳನ್ನು  ಸ್ವಾತಂತ್ರ್ಯಗಳನ್ನು  ಗೌರವಿಸುವುದನ್ನು  ಅಭಿವೃದ್ದಿಗೊಳಿಸಲು ಪ್ರಯತ್ನಿಸಬೇಕೆಂದು ಸದಸ್ಯ ರಾಷ್ಟ್ರಗಳ ಪ್ರಜೆಗಳಲ್ಲಿಯೂ, ಅವುಗಳ ಅಧಿಪತ್ಯಕ್ಕೆ ಒಳಪಟ್ಟ ರಾಷ್ಟ್ರಗಳ ಪ್ರಜೆಗಳಲ್ಲಿಯೂ,  ರಾಷ್ಟ್ರದ ಮತ್ತು ಅಂತರಾಷ್ಟ್ರೀಯ ಪ್ರಗತಿಶೀಲವಾದ ಸಾಧನಗಳಿಂದ ಈ ಹಕ್ಕು ಸ್ವಾತಂತ್ರ್ಯಗಳ ಸಾರ್ವತ್ರಿಕವೂ ಫಲದಾಯಕವು ಆದ ಅಂಗಿಕಾರವನ್ನು ಅನುಷ್ಠಾನವನ್ನೂ ಪಡೆಯಬೇಕೆಂದು ಈಗ ಸಾರ್ವಜನಿಕ ಸಭೆಯು ಪ್ರಕಟಿಸುತ್ತದೆ" ಎಂದು ವಿಶ್ವಸಂಸ್ಥೆ 71 ವರ್ಷಗಳ ಹಿಂದೆ ಘೋಷಿಸಿತು.

●.ಮಾನವ ಹಕ್ಕುಗಳು ಮತ್ತು ಅವುಗಳ ಅನುಷ್ಠಾನ : (Human Rights and their Implementation)

●.ಮಾನವ ಹಕ್ಕುಗಳು ಮತ್ತು ಅವುಗಳ ಅನುಷ್ಠಾನ :
 (Human Rights and their Implementation)
━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)

★ ಭಾರತದ ಸಂವಿಧಾನ
(Indian Constitution)



• ಒಬ್ಬ ಪ್ರಜೆಗೆ ಸಂವಿಧಾನದಲ್ಲಿ ಕೊಡ ಮಾಡಲ್ಪಟ್ಟ ಬದುಕುವ ಹಕ್ಕು, ಸ್ವಾತಂತ್ರ್ಯದ ಹಕ್ಕು, ಸಮಾನತೆಯ ಹಕ್ಕು ಹಾಗೂ ಘನತೆಯ ಹಕ್ಕು ಇದಕ್ಕೆ ಮಾನವ ಹಕ್ಕು ಎನ್ನುತ್ತಾರೆ. ಉದಾಹರಣೆಗೆ ಒಬ್ಬ ಪ್ರಜೆಗೆ ಇರುವಂತಹ ವಾಕ್ ಸ್ವಾತಂತ್ರ್ಯ. ಇದು ಸಂವಿಧಾನದಲ್ಲಿ ಒಬ್ಬ ಪ್ರಜೆಗೆ ಇರುವ ಮಾನವ ಹಕ್ಕು. ಮಾನವನ ಜೀವ ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಇದು ಒಬ್ಬ ವ್ಯಕ್ತಿಯ ಸಂವಿಧಾನದ ಹಕ್ಕು.

• ಒಬ್ಬ ವ್ಯಕ್ತಿಗೆ ಬದುಕುವ ಹಕ್ಕಿರುವಾಗ ನ್ಯಾಯಯುತವಾಗಿ ಬದುಕಲು ಸಂಪಾದಿಸುವ ಹಕ್ಕು ಇರುತ್ತದೆ. ಯಾಕೆಂದರೆ ಯಾವ ವ್ಯಕ್ತಿಯೂ ಸಂಪಾದನೆ ಇಲ್ಲದೆ ಬದುಕಲು ಸಾಧ್ಯವಿಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಕಾನೂನು ನೆರವು ಹಾಗೂ ಶಿಕ್ಷಣ ಪಡೆಯುವ ಹಕ್ಕು ಇವು ಒಬ್ಬ ಪ್ರಜೆಯ ಮೂಲಭೂತ ಹಕ್ಕುಗಳು.

• ದಸ್ತಗಿರಿ ಹಾಗೂ ಬಂಧನದಿಂದ ರಕ್ಷಣೆ ಪಡೆಯುವುದು ಸಹಾ ಮಾನವನ ಮೂಲಭೂತ ಹಕ್ಕು.

• ಬಲಾತ್ಕಾರವಾಗಿ ಒಬ್ಬ ವ್ಯಕ್ತಿಯಿಂದ ಕೆಲಸ ಮಾಡಿಸುವುದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಈ ಮಾನವ ಹಕ್ಕನ್ನು ರಕ್ಷಣೆ ಮಾಡುವಂತಹ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇರುತ್ತದೆ.

• ಬಾಲ ಕಾರ್ಮಿಕರಾಗಿ 14 ವರ್ಷಕ್ಕಿಂತಲೂ ಕೆಳಗಿನ ವಯಸ್ಸಿನ ಮಕ್ಕಳನ್ನು ಕಾರ್ಖಾನೆಗಳಲ್ಲಿ, ಗಣಿಗಳಲ್ಲಿ ಮತ್ತು ಅಪಾಯಕಾರಿ ಸ್ಥಳಗಳಲ್ಲಿ ಕೆಲಸಕ್ಕೆ ತೊಡಗಿಸಿಕೊಳ್ಳುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಇದೂ ಸಹಾ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ.

• ಹಿಂದೂ, ಮುಸಲ್ಮಾನ, ಕ್ರೈಸ್ತ ಅಥವಾ ಬೇರೆ ಯಾವುದೇ ಧರ್ಮದವರಿಗೆ ತಮ್ಮ ಧರ್ಮಕ್ಕೆ ನಿಷ್ಠೆ ತೋರುವುದು ಹಾಗೂ ಅದನ್ನು ಪಾಲಿಸಿಕೊಂಡು ಹೋಗುವುದು ಅವರ ಮಾನವ ಹಕ್ಕು. ಅವರ ಈ ಸ್ವಾತಂತ್ರ್ಯವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ.

• ಒಬ್ಬ ಪ್ರಜೆಯ ಮೂಲಭೂತ ಹಕ್ಕನ್ನು ಸರಕಾರ ಅಥವಾ ಸರಕಾರಿ ನೌಕರರು ಉಲ್ಲಂಘಿಸಿದಾಗ ಮೂಲಭೂತ ಹಕ್ಕಿನಿಂದ ವಂಚಿಸಲ್ಪಟ್ಟ ವ್ಯಕ್ತಿಗೆ ನ್ಯಾಯಾಲಯ ಸರಕಾರದಿಂದ ಪರಿಹಾರ ಕೊಡಿಸಬಹುದು.

• ಇತ್ತೀಚೆಗೆ ಕಾರಾಗೃಹದ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಉದಾಹರಣೆಗೆ, ಜೈಲಿನ ಅನುಕೂಲತೆಗಿಂತಲೂ ಹೆಚ್ಚಿನ ಸಂಖ್ಯೆಯ ಖೈದಿಗಳ ಸೇರ್ಪಡೆ, ಖೈದಿಗಳ ಕೇಸುಗಳ ವಿಚಾರಣೆಯಲ್ಲಾಗುವ ವಿಳಂಬ, ಕಾರಾಗೃಹದಲ್ಲಿ ಖೈದಿಗಳು ಅನುಭವಿಸುತ್ತಿರುವ ಹಿಂಸೆ, ಕಿರುಕುಳ, ಖೈದಿಗಳ ಆರೋಗ್ಯದ ಬಗ್ಗೆ ಅಸಡ್ಡೆ, ಇತ್ಯಾದಿಗಳು ಮಾನವ ಹಕ್ಕನ್ನು ಕಸಿದುಕೊಂಡಂತೆ. ಇಂತಹ ವಿಚಾರಗಳನ್ನು ರಾಷ್ಟ್ರೀಯ ಮಾನವ ಹಕ್ಕಿನ ಆಯೋಗ (Human Rights Commission) ವಿಚಾರಣೆ ನಡೆಸಿ ಸರಕಾರಕ್ಕೆ ಸೂಕ್ತ ನಿರ್ದೇಶನ ಕೊಡಬಹುದು.

• ಒಬ್ಬ ಪ್ರಜೆಗೆ ಬದುಕಲು ಹೇಗೆ ಅಧಿಕಾರವಿರುತ್ತದೋ, ಅದೇ ರೀತಿ ತನ್ನ ಆರೋಗ್ಯವನ್ನು ಕಾಪಾಡಲು ಹಕ್ಕಿರುತ್ತದೆ. ಒಬ್ಬ ಪ್ರಜೆಯ ಆರೋಗ್ಯ ಕಾಪಾಡುವ ಸಲುವಾಗಿ ಮೂಲಭೂತ ಅನುಕೂಲತೆಗಳನ್ನು ಕಲ್ಪಿಸುವುದು ಸರಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಇಂತಹ ಅನುಕೂಲತೆಯನ್ನು ಪಡೆಯುವುದು ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿರುವುದರಿಂದ ಈ ಅನುಕೂಲದ ವಂಚನೆ ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕಿನ ವಂಚನೆ ಆಗುತ್ತದೆ. ಖೈದಿಗಳಿಗೆ, ಕಾರ್ಮಿಕರಿಗೆ ಸರಕಾರವು ಉಚಿತವಾಗಿ ಈ ಅನುಕೂಲತೆಯನ್ನು ಒದಗಿಸಬೇಕು. ಯಾಕೆಂದರೆ, ಇದು ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕು.

• ಪೋಲೀಸರ ಬಂಧನದಲ್ಲಿ ಹಿಂಸೆ, ಕಿರುಕುಳ, ಅತ್ಯಾಚಾರ, ಕೊಲೆ ಇತ್ಯಾದಿ ಸಂಭವಿಸಿದಲ್ಲಿ ಇದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಕಾರಾಗೃಹದಲ್ಲಿ ಒಬ್ಬ ವಿಚಾರಣಾ ಖೈದಿ ಅಥವಾ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯ ಜೀವ ರಕ್ಷಣೆ ಮತ್ತು ಆತನ ಆರೋಗ್ಯ ಕಾಪಾಡುವುದು ಕಾರಾಗೃಹದ ಅಧಿಕಾರಿಗಳ ಕರ್ತವ್ಯ. ಸೂಕ್ತ ಸಮಯದಲ್ಲಿ ಅಂತಹ ಖೈದಿಗಳಿಗೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸವಲತ್ತು ಒದಗಿಸದೇ ಇರುವುದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ.



●.ಮಾನವ ಹಕ್ಕು ರಕ್ಷಣಾ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲು :
━━━━━━━━━━━━━━━━━━━━━━━━━━━━━━━━━━━
ಅ) ರಾಷ್ಟ್ರೀಯ ಮಾನವ ಹಕ್ಕು ಆಯೋಗ
ಆ) ರಾಜ್ಯ ಮಾನವ ಹಕ್ಕು ಆಯೋಗ
ಅ) ಮಾನವ ಹಕ್ಕುಗಳ ನ್ಯಾಯಾಲಯಗಳು ಅಸ್ಥಿತ್ವಕ್ಕೆ ಬಂದಿರುತ್ತದೆ.


●.ರಾಷ್ಟ್ರೀಯ ಮಾನವ ಹಕ್ಕು ಆಯೋಗ
━━━━━━━━━━━━━━━━━━━━━━
• ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ
1. ಒಬ್ಬರು ಅಧ್ಯಕ್ಷರಿದ್ದು, ಅವರು ಸರ್ವೋಚ್ಛ ನ್ಯಾಯಾಲಯದ (Supreme Court) ಮುಖ್ಯ ನ್ಯಾಯಾಧೀಶರು ಅಥವಾ ನಿವೃತ್ತ ಮುಖ್ಯ ನ್ಯಾಯಾಧೀಶರಾಗಿರತಕ್ಕದ್ದು.
2. ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಅಥವಾ ನಿವೃತ್ತ ನ್ಯಾಯಾಧೀಶರು
3. ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಅಥವಾ ನಿವೃತ್ತ ಮುಖ್ಯ ನ್ಯಾಯಾಧೀಶರು ಸದಸ್ಯರುಗಳಾಗಿರುತ್ತಾರೆ.
4. ಅಲ್ಲದೇ ಇನ್ನಿಬ್ಬರು ಸದಸ್ಯರಿದ್ದು, ಅವರು ಮಾನವ ಹಕ್ಕಿನ ಬಗ್ಗೆ ಹೆಚ್ಚಿನ ಪರಿಣತಿ ಉಳ್ಳವರಾಗಿರತಕ್ಕದ್ದು.
5. ಒಬ್ಬ ಮಹಾಕಾರ್ಯದರ್ಶಿ ಇದ್ದು ಅವರು ಆಯೋಗದ ನಡವಳಿಕೆಗಳನ್ನು ನೋಡಿಕೊಳ್ಳುವವರಾಗಿರುತ್ತಾರೆ.

• ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ರಾಷ್ಟ್ರಪತಿ, ಪ್ರಧಾನ ಮಂತ್ರಿ, ಲೋಕಸಭಾ ಸ್ಪೀಕರ್, ಗೃಹಮಂತ್ರಿ, ವಿರೋಧ ಪಕ್ಷದ ನಾಯಕರು ಸಮಾಲೋಚನೆ ಮಾಡಿ ನೇಮಕ ಮಾಡುತ್ತಾರೆ.
ಆಯೋಗದ ಅವಧಿ ಐದು ವರ್ಷಗಳಿದ್ದು, ಇದರ ಮುಖ್ಯ ಕಛೇರಿ ನವದೆಹಲಿಯಲ್ಲಿರುತ್ತದೆ.


●.ರಾಜ್ಯ ಮಾನವ ಹಕ್ಕು ಆಯೋಗ:
━━━━━━━━━━━━━━━━━━━
• ಅದೇ ರೀತಿ, ರಾಜ್ಯ ಮಾನವ ಹಕ್ಕು ಆಯೋಗ ಸ್ಥಾಪನೆಯಾಗುತ್ತದೆ. ರಾಜ್ಯ ಮಟ್ಟದ ಆಯೋಗಕ್ಕೆ ಉಚ್ಛ ನ್ಯಾಯಾಲಯದ (High Court) ಮುಖ್ಯ ನ್ಯಾಯಾಧೀಶರು ಅಥವಾ ನಿವೃತ್ತ ಮುಖ್ಯ ನ್ಯಾಯಾಧೀಶರು, ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಅಥವಾ ನಿವೃತ್ತ ನ್ಯಾಯಾಧೀಶರು ಹಾಗೂ ಇತರ ಸದಸ್ಯರು ಇರುತ್ತಾರೆ.


●.ಮಾನವ ಹಕ್ಕು ನ್ಯಾಯಾಲಯ:
━━━━━━━━━━━━━━━━━━
• ಜಿಲ್ಲೆಗೊಂದರಂತೆ ರಾಜ್ಯ ಸರಕಾರವು ರಾಜ್ಯದ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಒಪ್ಪಿಗೆ ಮೇರೆಗೆ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರನ್ನು ಮಾನವ ಹಕ್ಕಿನ ಪ್ರಕರಣದ ತನಿಖೆಯ ಶೀಘ್ರ ಇತ್ಯರ್ಥಕ್ಕೆ ನೇಮಕ ಮಾಡಬಹುದು. ಮಾನವ ಹಕ್ಕಿನ ಉಲ್ಲಂಘನೆಯ ಪ್ರಕರಣಗಳನ್ನು ಈ ನ್ಯಾಯಾಲಯವು ಕಾನೂನಿನ ಚೌಕಟ್ಟಿನಲ್ಲಿ ತನಿಖೆ ನಡೆಸಿ, ಸೂಕ್ತ ಕಂಡಲ್ಲಿ ತಪ್ಪಿತಸ್ಥರನ್ನು ದಂಡಿಸಲು ಕ್ರಮ ಕೈಗೊಳ್ಳಬಹುದು ಮತ್ತು ನೊಂದವರಿಗೆ ಪರಿಹಾರ ಕೊಡಲು ಆದೇಶಿಸಬಹುದು.

• ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಮತೀಯ ಭಾವನೆಗಳನ್ನು ಕದಡಿಸುವ ಪ್ರಕರಣಗಳು ಸಹಾ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಯಾವನೇ ಒಬ್ಬ ವ್ಯಕ್ತಿ ತನ್ನ ಧರ್ಮದ ಬಗ್ಗೆ ನಿಷ್ಢೆಯಿಂದ ಇದ್ದು ಅದನ್ನು ಪಾಲಿಸಿಕೊಂಡು ಹೋಗುತ್ತಿರುವಾಗ ಆತನನ್ನು ಬಲಾತ್ಕಾರವಾಗಿ ಆಸೆ, ಅಮಿಷ ಒಡ್ಡಿ ಮತಾಂತರ ಗೊಳಿಸುವುದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಅದೇ ರೀತಿ, ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ಮಾಡುವುದು, ಮೂರ್ತಿಗಳನ್ನು ಪುಡಿ ಮಾಡುವುದು, ಪವಿತ್ರ ಸ್ಥಳಗಳನ್ನು ಅಪವಿತ್ರ ಮಾಡಿ ಮತೀಯ ಭಾವನೆಗಳಿಗೆ ಧಕ್ಕೆ ತರುವುದು ಸಹಾ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಇತ್ತೀಚೆಗೆ ನಮ್ಮ ಜಿಲ್ಲೆಯಲ್ಲಿ ನಡೆದ ದುರ್ಘಟನೆಗಳ ಬಗ್ಗೆ ರಾಜ್ಯ ಮಾನವ ಹಕ್ಕಿನ ಅಧ್ಯಕ್ಷರಾದ ನ್ಯಾಯಮೂರ್ತಿ ಎಸ್. ಆರ್. ನಾಯಕ್ ಹಾಗೂ ಸದಸ್ಯರು ಘಟನಾ ಸ್ಥಳಗಳಿಗೆ ಭೇಟಿಯಿತ್ತು ಪರಿಶೀಲಿಸಿದ ಬಗ್ಗೆ ನಮಗೆ ತಿಳಿದಿರುತ್ತದೆ.



●.ಮಾನವ ಹಕ್ಕು ಆಯೋಗದ ಕಾರ್ಯ ಕಲಾಪ:
━━━━━━━━━━━━━━━━━━━━━━━━━

1. ಸರಕಾರಿ ಅಧಿಕಾರಿಯಿಂದ ಮಾನವ ಹಕ್ಕಿನ ಉಲ್ಲಂಘನೆಯಿಂದ ನೊಂದ ವ್ಯಕ್ತಿಯ ದೂರಿನ ಮೇರೆಗೆ ಅಥವಾ ಸ್ವಪ್ರೇರಣೆಯಿಂದ (Suo Moto) ಸಂಬಂಧ ಪಟ್ಟ ಮಾನವ ಹಕ್ಕಿನ ಉಲ್ಲಂಘನೆಯ ವಿಚಾರವಾಗಿ ತನಿಖೆ ಮಾಡುವುದು.
2. ಮಾನವ ಹಕ್ಕಿನ ಉಲ್ಲಂಘನೆಯ ಪ್ರಕರಣ ಯಾವುದಾದರೂ ನ್ಯಾಯಾಲಯದಲ್ಲಿ ತನಿಖೆಯಾಗುತ್ತಿದ್ದಲ್ಲಿ ಸದ್ರಿ ನ್ಯಾಯಾಲಯದ ಅನುಮತಿ ಪಡೆದು ತನಿಖೆಯಲ್ಲಿ ಭಾಗಿಯಾಗುವುದು.
3. ಜೈಲುಗಳಲ್ಲಿ ಅಥವಾ ಸರಕಾರಿ ಸ್ವಾಮ್ಯದ ಸಂಘ ಸಂಸ್ಥೆಗಳಲ್ಲಿ ಬಂಧಿಯಾಗಿರುವ ಅಥವಾ ಇರಿಸಲ್ಪಟ್ಟ, ವ ಚಿಕಿತ್ಸೆಗೊಳಪಡುತ್ತಿರುವ ಸ್ಥಳಗಳಿಗೆ ಸರಕಾರಕ್ಕೆ ಮುನ್ಸೂಚನೆ ಕೊಟ್ಟು ಭೇಟಿ ಕೊಡುವುದು. ಮತ್ತು ಸದ್ರಿ ವ್ಯಕ್ತಿಗಳ ಜೀವನ ಕ್ರಮದ ಬಗ್ಗೆ ಅಧ್ಯಯನ ಮಾಡುವುದು ಹಾಗೂ ಆ ಸ್ಥಳಗಳಲ್ಲಿ ಮಾನವ ಹಕ್ಕಿನ ಉಲ್ಲಂಘನೆಯಾಗದಂತೆ ಸರಕಾರಕ್ಕೆ ಸಲಹೆ ಸೂಚನೆ ಕೊಡುವುದು.
4. ಮಾನವ ಹಕ್ಕಿನ ವಿಚಾರಗಳಿಗೆ ಸಂಬಂಧ ಪಟ್ಟಂತೆ ಸಂಶೋಧನೆ ನಡೆಸುವುದು ಹಾಗೂ ಮಾನವ ಹಕ್ಕನ್ನು ಪರಿಪಾಲಿಸಲು ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಮಾಧ್ಯಮಗಳ ಮುಖಾಂತರ ಜನಸಾಮಾನ್ಯರಿಗೆ ಮಾನವ ಹಕ್ಕಿನ ಬಗ್ಗೆ ಅರಿವು ಮೂಡಿಸುವುದು ಹಾಗೂ ಆ ವಿಚಾರಗಳಲ್ಲಿ ಕಾರ್‍ಯಾಗಾರಗಳನ್ನು ಹಮ್ಮಿಕೊಳ್ಳುವುದು.
5. ಸರಕಾರೇತರ ಸಂಘ ಸಂಸ್ಥೆಗಳಿಗೆ ಮಾನವ ಹಕ್ಕಿನ ಬಗ್ಗೆ ಅರಿವು ಮೂಡಿಸಲು ಪ್ರೋತ್ಸಾಹ ಕೊಡುವುದು ಇತ್ಯಾದಿ.



●.ಆಯೋಗಕ್ಕೆ ತನಿಖಾ ವಿಚಾರದಲ್ಲಿರುವ ಅಧಿಕಾರಗಳು:
━━━━━━━━━━━━━━━━━━━━━━━━━━━━━
6. ದೂರನ್ನು ವಿಚಾರ ಮಾಡುವ ಕಾಲಕ್ಕೆ ಆಯೋಗಕ್ಕೆ ಸಿವಿಲ್ ನ್ಯಾಯಾಲಯಕ್ಕೆ ವ್ಯಾಜ್ಯ ತನಿಖೆ ಮಾಡಲು ಇರುವ ಎಲ್ಲಾ ಅಧಿಕಾರಗಳು ಇರುತ್ತವೆ. ಅಂದರೆ:-
a) ಸಂಬಂಧ ಪಟ್ಟ ವಿಚಾರದಲ್ಲಿ ತನಿಖೆಗಾಗಿ ಯಾರನ್ನಾದರೂ ಕರೆಸಿ ಪ್ರಮಾಣ ವಚನ ಬೋಧಿಸಿ ವಿಚಾರಣೆ ಮಾಡುವುದು.
b) ವಿಚಾರಣೆಗೆ ಸಂಬಂಧ ಪಟ್ಟ ದಾಖಲೆಗಳನ್ನು ಪತ್ತೆ ಹಚ್ಚಿ ಹಾಜರು ಪಡಿಸುವುದು.
c) ಅಫಿದಾವಿತ್ ಮೂಲಕ ಸಾಕ್ಷ್ಯವನ್ನು ಸ್ವೀಕರಿಸುವುದು.
d) ಸರಕಾರಿ ಕಛೇರಿ ಅಥವಾ ನ್ಯಾಯಾಲಯದಿಂದ ತನಿಖೆಗೆ ಸಂಬಂಧಿತ ಸಾರ್ವಜನಿಕ ದಾಖಲೆ (Public Servant) ಗಳನ್ನು ಆಯೋಗದ ಮುಂದೆ ಹಾಜರು ಪಡಿಸಲು ಕೋರುವುದು.
e) ಸಾಕ್ಷಿಗಳನ್ನು ಅಥವಾ ದಾಖಲೆಗಳನ್ನು ತನಿಖೆ ಮಾಡಲು ಕಮಿಷನ್ ನೇಮಕ ಮಾಡುವುದು.
f) ಒಬ್ಬ ವ್ಯಕ್ತಿಯಿಂದ ತನಿಖೆಗೆ ಅವಶ್ಯಕವಾದ ಮಾಹಿತಿಯನ್ನು ಆಯೋಗದ ಮುಂದೆ ಒದಗಿಸಲು ಆದೇಶಿಸುವುದು.
g) ಯಾವುದೇ ಕಟ್ಟಡ ಅಥವಾ ಸ್ಥಳದಲ್ಲಿ ತನಿಖೆಗೆ ಸಂಬಂಧ ಪಟ್ಟ ದಾಖಲೆಗಳು ಇದ್ದಲ್ಲಿ ಅಂತಹ ಸ್ಥಳಗಳಿಗೆ ಪ್ರವೇಶಿಸಿ ಸದ್ರಿ ದಾಖಲೆಗಳನ್ನು ಪರಿಶೀಲಿಸುವುದು ಅಥವಾ ವಶಪಡಿಸಿಕೊಳ್ಳುವುದು.
h) ಆಯೋಗದ ಸರಹದ್ದಿನಲ್ಲಿ ಅಥವಾ ಸಮ್ಮುಖದಲ್ಲಿ ಅಪರಾಧ ಸಂಭವಿಸಿದ್ದಲ್ಲಿ ಅಪರಾಧ ಸಂಭವಿಸಿದ ಬಗ್ಗೆ ಹೇಳಿಕೆಗಳನ್ನು ಬರೆದುಕೊಂಡು ಸಂಬಂಧಪಟ್ಟ ದಂಡಾಧಿಕಾರಿಯವರಿಗೆ (Judicial Magistrate) ಪ್ರಕರಣ ದಾಖಲಿಸಿ ತನಿಖೆ ಮಾಡುವಂತೆ ನಿರ್ದೇಶನ ಕೊಡುವುದು.
i) ತನಿಖಾ ಕಾಲದಲ್ಲಿ ಅವಶ್ಯಕತೆ ಇದ್ದಲ್ಲಿ ಕೇಂದ್ರ ಅಥವಾ ರಾಜ್ಯ ಸರಕಾರದ ಯಾವುದೇ ಅಧಿಕಾರಿಯನ್ನು ಅನುಮತಿ ಪಡೆದು ತನಿಖೆಗೆ ಬಳಸಿಕೊಳ್ಳುವುದು.

• ತನಿಖಾ ಕಾಲದಲ್ಲಿ ಆಯೋಗವು ಬರೆದುಕೊಂಡ ಹೇಳಿಕೆಯನ್ನು ಯಾವುದೇ ವ್ಯಕ್ತಿಯ ವಿರುದ್ಧ ಸಿವಿಲ್ ಅಥವಾ ಕೋರ್ಟಿನಲ್ಲಿ ಆತನ ವಿರುದ್ಧ ಬಳಸಿಕೊಳ್ಳಲು ಬರುವುದಿಲ್ಲ. ಆದರೆ ಸದ್ರಿ ವ್ಯಕ್ತಿ ಉದ್ದೇಶ ಪೂರ್ವಕ ಸುಳ್ಳು ಹೇಳಿಕೆ ನೀಡಿದ್ದಲ್ಲಿ ಆತನ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರವಿರುತ್ತದೆ.

• ಆಯೋಗದ ತನಿಖೆಯಿಂದ ಯಾವುದೇ ಒಬ್ಬ ವ್ಯಕ್ತಿಯ ಘನತೆ ಗೌರವಕ್ಕೆ ಧಕ್ಕೆಯಾದಲ್ಲಿ ಅಂತಹ ವ್ಯಕ್ತಿಯಿಂದ ಆಯೋಗವು ವಿವರಣೆಯನ್ನು ಪಡೆಯಬಹುದಾಗಿದೆ ಹಾಗೂ ಆತನಿಗೆ ಆತನ ಪರವಾದ ಸಾಕ್ಷ್ಯಾಧಾರಗಳನ್ನು ಒದಗಿಸಲು ಸಾಕಷ್ಟು ಕಾಲಾವಕಾಶವನ್ನು ಒದಗಿಸಬಹುದಾಗಿದೆ.


●.ದೂರು ತನಿಕೆ ಮಾಡುವ ಕ್ರಮ:
━━━━━━━━━━━━━━━━━━━━
• ಮಾನವ ಹಕ್ಕಿನ ಉಲ್ಲಂಘನೆಯ ಬಗೆಗಿನ ದೂರು ದಾಖಲಾದ ನಂತರ ಆಯೋಗವು ಕೇಂದ್ರ ಅಥವಾ ರಾಜ್ಯ ಸರಕಾರದಿಂದ ಅಥವಾ ಸಂಬಂಧಪಟ್ಟ ಸಂಸ್ಥೆಗಳಿಂದ ಇಂತಿಷ್ಟೇ ಸಮಯದೊಳಗೆ ಈ ಕುರಿತು ವಿವರಣೆಯನ್ನು ಕೊಡತಕ್ಕದ್ದೆಂದು ತಾಖೀತು ಮಾಡತಕ್ಕದ್ದು. ನಿಯಮಿತ ಕಾಲಾವಧಿಯಲ್ಲಿ ವಿವರಣೆ ಬಾರದಿದ್ದಲ್ಲಿ ಆಯೋಗವು ತನಿಖೆಯನ್ನು ಸ್ವತಃ ಮುಂದುವರಿಸಿಕೊಂಡು ಹೋಗಬಹುದು.

Tuesday, 22 January 2019

●.ಅಸಹಕಾರ ಚಳವಳಿ (ಆಧುನಿಕ ಭಾರತದ ಇತಿಹಾಸ) (Non-Cooperation Movement)


●.ಅಸಹಕಾರ ಚಳವಳಿ (ಆಧುನಿಕ ಭಾರತದ ಇತಿಹಾಸ)
(Non-Cooperation Movement)

━━━━━━━━━━━━━━━━━━━━━━━━━━━━━━━━━━━━━━━━

★  ಪತ್ರಿಕೆ—2 : ಸಾಮಾನ್ಯ ಅಧ್ಯಯನ— 1
(Paper-2 General Studies -1)

★ ಆಧುನಿಕ ಭಾರತದ ಇತಿಹಾಸ
(Modern Indian History)





1920 ಸೆಪ್ಟೆಂಬರ್ 4ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಲ್ಕತ್ತಾದ ವಿಶೇಷ ಅಧಿವೇಶನದಲ್ಲಿ ಅಸಹಕಾರ ಚಳವಳಿ ಆರಂಭಿಸಲು ಗೊತ್ತುವಳಿಯೊಂದನ್ನು ಅನುಮೋದಿಸಿತು. ಅಹಿಂಸೆಯ ಮೂಲಕ ಸ್ವರಾಜ್‍ಗಳಿಕೆ, ಬ್ರಿಟಿಷರ ನಿರ್ದಯಿ ಆಡಳಿತದ ವಿಕೃತ ಸ್ವರೂಪನ್ನು ಜನರಿಗೆ ಪರಿಚಯಿಸುವುದು ಹಾಗೂ ಮುಖ್ಯವಾಗಿ ಜಲಿಯನ್‍ವಾಲಾಬಾಗ್ ಹತ್ಯಾಕಾಂಡದಂತಹ ಘಟನೆಗಳು ಭವಿಷತ್ತಿನಲ್ಲಿ ನಡೆಯದಂತೆ ವಿರೋಧಿಸುವುದು, ಬ್ರಿಟಿಷ್ ಆಡಳಿತವನ್ನು ಸಂಪೂರ್ಣ ವಿರೋಧಿಸುವುದು ಪ್ರಮುಖ ಗುರಿಯಾಗಿತ್ತು. ಅದರೊಂದಿಗೆ ರೌಲತ್ ಕಾಯ್ದೆಯನ್ನು ಬ್ರಿಟಿಷ್ ಸರಕಾರ ಹಿಂತೆಗೆದುಕೊಳ್ಳುವುದು ಮತ್ತು ಹೊಸ ರಾಜಕೀಯ ಸುಧಾರಣೆಗಳನ್ನು ಜಾರಿಗೊಳಿಸುವ ಮೂಲಕ ಸ್ವರಾಜ್ಯವನ್ನು ಭಾರತಕ್ಕೆ ನೀಡಬೇಕೆಂಬುದು ಪ್ರಮುಖ ಬೇಡಿಕೆಯಾಗಿತ್ತು.


●.ಅಸಹಕಾರ ಚಳವಳಿಯ ಪ್ರಮುಖ ಕಾರ್ಯಕ್ರಮಗಳು :
━━━━━━━━━━━━━━━━━━━━━━━━━━━━━━━━━━━━━━━━
1. ಶಾಲಾ ಕಾಲೇಜುಗಳನ್ನು ಮತ್ತು ನ್ಯಾಯಾಲಯಗಳನ್ನು ಬಹಿಷ್ಕರಿಸುವುದು.
2. 1919ರ ಕಾಯ್ದೆಯನ್ವಯ ಪ್ರಾಂತೀಯ ಶಾಸನ ಸಭೆಗಳಿಗೆ ನಡೆಯುವ ಚುನಾವಣೆಯನ್ನು
ಬಹಿಷ್ಕರಿಸುವುದು.
3. ಬ್ರಿಟಿಷರು ನೀಡಿರುವ ಗೌರವ ಪದವಿಗಳನ್ನು ಮತ್ತು ಸ್ಥಾನಗಳನ್ನು ವಾಪಸ್ಸು ಮಾಡುವುದು.
4. ಸ್ಥಳೀಯ ಸಭೆಗಳಿಗೆ ನಾಮನಿರ್ದೇಶನಗೊಂಡ ಸದಸ್ಯರು ರಾಜೀನಾಮೆ ನೀಡುವುದು.
5. ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ ಬಹಿಷ್ಕರಿಸುವುದು.
6. ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವುದು.


— ಇವುಗಳ ಜೊತೆಗೆ ಅಸಹಕಾರ ಚಳವಳಿಯ ಇತರ ಪ್ರಮುಖ ಕಾರ್ಯ ಯೋಜನೆಗಳೆಂದರೆ; ಕೈಮಗ್ಗದ ನೇಕಾರಿಕೆಯನ್ನು ಉತ್ತೇಜಿಸುವುದು ಮತ್ತು ಖಾದಿಯನ್ನು ತಯಾರಿಸುವುದು, ರಾಷ್ಟ್ರೀಯ ಶಾಲೆಗಳನ್ನು ತೆರೆಯುವುದು, ಹಿಂದೂ ಮತ್ತು ಮುಸ್ಲಿಂರ ನಡುವೆ ಐಕ್ಯತೆಯನ್ನು ಸಾಧಿಸುವುದು, ಅಸ್ಪ್ರಶ್ಯತೆಯನ್ನು ಹೋಗಲಾಡಿಸುವುದು ಮತ್ತು ಮಹಿಳೆಯರನ್ನು ಶೋಚನೀಯ ಸ್ಥಿತಿಯಿಂದ ಪಾರು ಮಾಡಿ ಅವರಲ್ಲಿ ಸಬಲೀಕರಣವನ್ನು ತರುವುದು.



●.ಅಸಹಕಾರ ಚಳವಳಿಯ ಸಂದರ್ಭದಲ್ಲಿ ಆದ ಪ್ರಮುಖ ಬೆಳೆವಣಿಗೆಗಳು :
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
1. ದೇಶಬಂಧು ಚಿತ್ತರಂಜನ್‍ದಾಸ್, ಮೋತಿಲಾಲ್ ನೆಹರೂ, ರಾಜೇಂದ್ರ ಪ್ರಸಾದ್ ಮೊದಲಾದ ಹಿರಿಯ ವಕೀಲರು ತಮ್ಮ ವಕೀಲ ವೃತ್ತಿಯನ್ನು ಬಿಟ್ಟರು.
2. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳನ್ನು ತೊರೆದರು.
3. ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸದೆ ಕಾಂಗ್ರೆಸ್ 1919ರ ಕಾಯ್ದೆಯ ಅಡಿಯಲ್ಲಿ ಪ್ರಾಂತ್ಯಗಳಿಗೆ ನಡೆದ ಚುನಾವಣೆಯನ್ನು ಬಹಿಷ್ಕರಿಸಿತು.
4. ಕಾಶಿ ವಿದ್ಯಾಪೀಠ, ಗುಜರಾತ್ ವಿದ್ಯಾಪೀಠ, ಬಿಹಾರ ವಿದ್ಯಾಪೀಠ ಮತ್ತು ಜಾಮೀಯಾ ಮಿಲಿಯಾ ಇಸ್ಲಾಮಿಯಾ ರಾಷ್ಟ್ರೀಯ ವಿದ್ಯಾಲಯಗಳನ್ನು ಸ್ಥಾಪಿಸಲಾಯಿತು.
5. ರವಿಂದ್ರನಾಥ ಠಾಗೂರರ ತಮ್ಮ ‘ನೈಟ್ ವುಡ್’ ಪದವಿಯನ್ನು ಬ್ರಿಟಿಷ್ ಸರ್ಕಾರಕ್ಕೆ ಹಿಂದಿರುಗಿಸಿದರು.

6. ಮಹಿಳೆಯರೂ ಸೇರಿದಂತೆ ಜನಸಾಮಾನ್ಯರು ಕಾಂಗ್ರೆಸ್ ಹೋರಾಟಕ್ಕೆ ದೇಣಿಗೆ ನೀಡಿದರು. ವಿದೇಶಿ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳ ಮುಂದೆ ಮುಷ್ಕರ ನಡೆಸಲಾಯಿತು ಮತ್ತು ವಿದೇಶಿ ಬಟ್ಟೆಗಳನ್ನು ಸುಡಲಾಯಿತು.
7. 1921ರಲ್ಲಿ ‘ಪ್ರಿನ್ಸ್ ಆಫ್ ವೇಲ್ಸ್’ ರಾಜಕುಮಾರ ಬರುವ ಕಾರ್ಯಕ್ರಮವನ್ನು ವಿರೋಧಿಸಲಾಯಿತು. 




●.ಅಸಹಕಾರ ಚಳವಳಿಯ ಪರಿಣಾಮಗಳು:
━━━━━━━━━━━━━━━━━━━━━━━━━━━━━━━━━
— ಈ ಚಳವಳಿಯ ಪ್ರಮುಖ ಉದ್ದೇಶಗಳು ಕೈಗೂಡದಿದ್ದರೂ ಕೆಲವು ಗಂಭೀರ ಪರಿಣಾಮಗಳನ್ನು ಸೃಷ್ಟಿಸಿತ್ತು. ಪ್ರಮುಖವಾಗಿ ರಾಷ್ಟ್ರೀಯ ಹೋರಾಟ ಜನರ ಹೋರಾಟವಾಗಿ ರೂಪಾಂತರವಾಯಿತು. ಕಾಂಗ್ರೆಸ್ ಪ್ರಣೀತ ಚಳವಳಿಯು ಕ್ರಾಂತಿಕಾರಕ ಆಯಾಮಗಳನ್ನು ಪಡೆಯಿತು. ಹಿಂದೂ ಮುಸ್ಲಿಂ ಭ್ರಾತೃತ್ವವನ್ನು ತಾತ್ಕಾಲಿಕವಾಗಿಯಾದರೂ ಸೃಷ್ಟಿಸಿತು. ರಾಷ್ಟ್ರೀಯ ಹೋರಾಟ, ನಗರಗಳನ್ನು ದಾಟಿ ಗ್ರಾಮಾಂತರ ಪ್ರದೇಶಗಳಿಗೂ ಹಬ್ಬಲು ಪ್ರಾರಂಭಿಸಿತು. ಅಸ್ಪ್ರಶ್ಯತೆಯ ನಿವಾರಣೆ, ಮಹಿಳೆಯರಿಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶ ಮುಂತಾದವು ಗಮನಿಸಲೇಬೇಕಾದ ಪರಿಣಾಮಗಳಾಗಿವೆ.
(ಕೃಪೆ : KTBS ಕರ್ನಾಟಕ ಸರ್ಕಾರ)

Monday, 21 January 2019

●.ಪೌರತ್ವ ತಿದ್ದುಪಡಿ ಮಸೂದೆ - 2016 / ಪೌರತ್ವ ವಿಧೇಯಕ / ಭಾರತೀಯ ಪೌರತ್ವ ಕಾಯಿದೆ / The Citizenship (Amendment) Bill, 2016 / india citizenship / Citizenship

●.ಪೌರತ್ವ ತಿದ್ದುಪಡಿ ಮಸೂದೆ - 2016 / ಪೌರತ್ವ ವಿಧೇಯಕ / ಭಾರತೀಯ ಪೌರತ್ವ ಕಾಯಿದೆ /
The Citizenship (Amendment) Bill, 2016 /  india citizenship /  Citizenship bill / Citizenship Amendment Bill - (IAS prelims 2019 preparation)

━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ ಪ್ರಿಲಿಮ್ಸ್ 2019 ರ ತಯಾರಿ
 (IAS Prelims 2019)

— ಸುದ್ದಿಯಲ್ಲಿ ಈ ವಿಷಯ ಬಂದಿರೋದ್ರಿಂದ - ಪೌರತ್ವ ಕುರಿತು ಸಂವಿಧಾನದಲ್ಲಿ ವಿವರಿಸಲಾದ ವಿಧಿ-ವಿಧಾನಗಳನ್ನು ನಾವು ಅವಲೋಕಿಸಬೇಕು. ಅದರೊಂದಿಗೆ ಸಂವಿಧಾನ ತಿದ್ದುಪಡಿ ವಿಧಾನ, ಸಂಸತ್ತಿನ ಪ್ರಕ್ರಿಯೆ ಕುರಿತು ನಾವು ತಿಳಿದುಕೊಳ್ಳಬೇಕು.



• ಏನಿದು ಪೌರತ್ವ ವಿಧೇಯಕ?

ಪ್ರಸ್ತುತ ದೇಶದಲ್ಲಿ ಪೌರತ್ವ ಕಾಯಿದೆ-1955ರ ಪ್ರಕಾರ ವಲಸಿಗರನ್ನು ಗುರುತಿಸಲಾಗುತ್ತಿದೆ. ಈ ಕಾಯಿದೆಗೆ ತಿದ್ದುಪಡಿ ಮಾಡುವ ಪೌರತ್ವ ವಿಧೇಯಕವನ್ನು 2016ರಲ್ಲಿ ಪ್ರಸ್ತಾಪಿಸಲಾಯಿತು. ಇದರ ಮೂಲಕ 'ಅಕ್ರಮ ವಲಸಿಗ'ರ ವ್ಯಾಖ್ಯಾನವನ್ನು ಬದಲಾಯಿಸಲು ಸರಕಾರ ಪ್ರಯತ್ನಿಸುತ್ತಿದೆ.

ಸೂಕ್ತ ಪಾಸ್‌ಪೋರ್ಟ್‌ ಮತ್ತು ವೀಸಾ ಇಲ್ಲದೆ ಅಥವಾ ನಕಲಿ ದಾಖಲೆ ಹೊಂದಿ ದೇಶ ಪ್ರವೇಶಿಸಿದ, ಅಥವಾ ವೀಸಾ ಅವಧಿಗಿಂತ ಹೆಚ್ಚು ಕಾಲ ದೇಶದಲ್ಲಿ ಉಳಿದವರನ್ನು ಅಕ್ರಮ ವಲಸಿಗ
ಎಂದು ಪರಿಗಣಿಸಲಾಗುತ್ತದೆ. ಹೊಸ ಕಾಯಿದೆ ಜಾರಿಯಾದರೆ, 2014ರ ಡಿ.31ರ ಒಳಗೆ ಅಫಘಾನಿಸ್ತಾನ, ಬಾಂಗ್ಲಾ ಮತ್ತು ಪಾಕಿಸ್ತಾನಗಳಿಂದ ಆಗಮಿಸಿ ಇಲ್ಲಿ ನೆಲೆಸಿರುವ ಹಿಂದೂ, ಬೌದ್ಧ, ಜೈನ, ಸಿಖ್‌, ಪಾರ್ಸಿ ಅಥವಾ ಕ್ರೈಸ್ತ. (ಗಮನಿಸಿ- ಇಲ್ಲಿ ಮುಸ್ಲಿಂ ಮತದವರನ್ನು ಹೊರತುಪಡಿಸಿ) ಮತದವರು ಭಾರತೀಯ ಪೌರರೆನಿಸುತ್ತಾರೆ.

ಈ ತನಕ 12 ವರ್ಷಗಳಿಂದ ದೇಶದಲ್ಲಿ ನೆಲೆಸಿದ ವಿದೇಶಿಗರಿಗೆ ಪೌರತ್ವ ಪ್ರಾಪ್ತಿ ಆಗುತ್ತಿತ್ತು. ಹೊಸ ಕಾಯಿದೆ ಜಾರಿಯಾದರೆ ಅದು 6 ವರ್ಷಕ್ಕಿಳಿಯಲಿದೆ. 2014ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ, ಅಕ್ಕಪಕ್ಕದ ದೇಶಗಳಿಂದ ಸಂತ್ರಸ್ತರಾಗಿ ದೇಶದೊಳಗೆ ಪ್ರವೇಶಿಸಿದ ಹಿಂದೂಗಳಿಗೆ ಪೌರತ್ವ ನೀಡುವುದಾಗಿ ಬಿಜೆಪಿ ವಾಗ್ದಾನ ಮಾಡಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಈ ಕಾನೂನು ರೂಪಣೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.


• ವಿರೋಧ ಯಾಕೆ?

ಮುಖ್ಯವಾಗಿ, ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಗಿರುವುದು ಅಸ್ಸಾಂನಲ್ಲಿ. ಪಕ್ಕದ ಬಾಂಗ್ಲಾದೇಶದಲ್ಲಿ ಧಾರ್ಮಿಕ ಹಿಂಸಾಚಾರದಿಂದ ಸಂತ್ರಸ್ತರಾಗಿರುವ ಹಿಂದೂಗಳು ದೊಡ್ಡ ಸಂಖ್ಯೆಯಲ್ಲಿ ಬಂದು ಅಸ್ಸಾಂನಲ್ಲಿ ಬೀಡು ಬಿಟ್ಟಿದ್ದಾರೆ. ಅಸ್ಸಾಂ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್‌ ಮುಂತಾದ ರಾಜ್ಯಗಳಲ್ಲಿ ಬುಡಕಟ್ಟು ಸಮುದಾಯಗಳು ಹಾಗೂ ಕ್ರೈಸ್ತಮತೀಯರ ಸಂಖ್ಯೆ ಅಧಿಕವಾಗಿದೆ. ಹೊಸ ಜಾಯಿದೆ ಜಾರಿಗೆ ಬಂದರೆ, ದೊಡ್ಡ ಸಂಖ್ಯೆಯ ವಲಸಿಗ ಹಿಂದೂಗಳು ಇಲ್ಲಿ ಶಾಶ್ವತ ನೆಲೆ ಕಂಡುಕೊಳ್ಳಲಿದ್ದಾರೆ.

ಆದರೆ ಈ ರಾಜ್ಯಗಳ ಬುಡಕಟ್ಟು ಸಮುದಾಯ, ಸ್ಥಳೀಯ ಸಮುದಾಯಗಳು ಹೊರಗಿನವರಿಗೆ ಪೌರತ್ವ ಕೊಡುವುದನ್ನು ಇಷ್ಟಪಡುತ್ತಿಲ್ಲ. ವಲಸಿಗರು ಪೌರರಾಗುವುದರಿಂದ ರಾಜ್ಯದ ಪ್ರಾದೇಶಿಕ ಅಸ್ಮಿತೆ, ಸಂಸ್ಕೃತಿಯೇ ಮಾಯವಾಗಬಹುದು ಎಂಬುದು ಇವರ ಆತಂಕ. ಈ ವಿಧೇಯಕದ ಜಾರಿಯಿಂದ ಈಶಾನ್ಯ ಭಾರತೀಯರು ಸಂತ್ರಸ್ತರಾಗುತ್ತಾರೆ ಎಂಬುದು ಪ್ರತಿಪಕ್ಷಗಳ ವಾದ.

ಆದರೆ ಹೊಸ ಕಾನೂನು ಇಲ್ಲಿಗಷ್ಟೇ ಸೀಮಿತವಲ್ಲ; ಅದನ್ನು ವಿಶಾಲ ಭಾರತದ ವ್ಯಾಪ್ತಿಯಲ್ಲಿ ನೋಡಬೇಕು, ಈಶಾನ್ಯ ಭಾರತದ ಹಿತವೂ ಇದರಲ್ಲಿದೆ ಎಂದು ಬಿಜೆಪಿ ಹೇಳಿದೆ. ವಿಧೇಯಕದಲ್ಲಿ ಮುಸ್ಲಿಂ ವಲಸಿಗರನ್ನೂ ಸೇರಿಸಬೇಕು; ಮೂರು ದೇಶಗಳಿಗೆ ಸೀಮಿತಗೊಳಿಸಬಾರದು ಎಂಬುದು ಪ್ರತಿಪಕ್ಷಗಳ ಹಠ.


• ಮುಸ್ಲಿಮರು ಯಾಕಿಲ್ಲ?

ವಿಧೇಯಕದಲ್ಲಿ ಮುಸ್ಲಿಂ ವಲಸಿಗರ ಪ್ರಸ್ತಾಪವಿಲ್ಲ. ಮ್ಯಾನ್ಮಾರ್‌ನಲ್ಲಿ ನಡೆದ ಹಿಂಸಾಚಾರದಿಂದ ಸಂತ್ರಸ್ತರಾದ ರೋಹಿಂಗ್ಯಾ ಮುಸ್ಲಿಮರು ಸಾಕಷ್ಟು ಸಂಖ್ಯೆಯಲ್ಲಿ ಭಾರತ ಸೇರಿದ್ದಾರೆ. ಆದರೆ ಈ ಕಾಯಿದೆಯ ಮೂಲಭೂತ ಉದ್ದೇಶ, ಭಾರತವೇ ಮೂಲ ಮಾತೃಭೂಮಿಯಾಗಿದ್ದು, ಇಂದು ಸಂತ್ರಸ್ತರಾದವರಿಗೆ ನೆಲೆ ಒದಗಿಸುವುದು. ಹಿಂದೂ, ಬೌದ್ಧ, ಜೈನ ಮುಂತಾದ ವಲಸಿಗರಿಗೆ ಭಾರತ ಹೊರತುಪಡಿಸಿ ಹೋಗಲು ಬೇರೆ ದೇಶಗಳೇ ಇಲ್ಲ ಎಂಬುದನ್ನು ಇಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ವಿಧೇಯಕದಲ್ಲಿ ಕ್ರೈಸ್ತ ವಲಸಿಗರ ಪ್ರಸ್ತಾಪವಿದೆ; ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಸಾಕಷ್ಟು ಸಂಖ್ಯೆಯ ಕ್ರಿಶ್ಚಿಯನ್ನರಿದ್ದರು. ಬಾಂಗ್ಲಾ ಹಾಗೂ ಮ್ಯಾನ್ಮಾರ್‌ನಿಂದ ಅಕ್ರಮ ವಲಸಿಗರಾಗಿ ಬಂದ ಮುಸ್ಲಿಮರಲ್ಲಿ ಅನೇಕರು ದೇಶದ ಭದ್ರತೆಗೆ ಬೆದರಿಕೆಯಾಗಿ ಪರಿಣಮಿಸಿದ್ದಾರೆ ಎಂಬುದನ್ನೂ ಇಲ್ಲಿ ಗಮನಿಸಬೇಕು.


• ಯಾರು ಪೌರರು?

1950ರ ಜ.26ಕ್ಕಿಂತ ಮೊದಲು ಭಾರತದಲ್ಲಿ ಜನಿಸಿದವರು; ತಂದೆತಾಯಿಗಳಿಬ್ಬರೂ ಭಾರತದ ಪೌರರಾಗಿದ್ದು 2004ರ ಡಿ.3ರ ಮೊದಲು ಜನಿಸಿದವರು; 1950 ಜ.26ರಿಂದ 1992 ಡಿ.10ರ ನಡುವೆ ವಿದೇಶದಲ್ಲಿ ಜನಿಸಿದ್ದರೂ ಆ ವೇಳೆಗೆ ತಂದೆ ಭಾರತದ ಪೌರನಾಗಿದ್ದರೆ; 1992ರ ಡಿ.10ರ ನಂತರ ವಿದೇಶದಲ್ಲಿ ಜನಿಸಿದ್ದರೂ ಆ ವೇಳೆಗೆ ತಂದೆತಾಯಿಗಳಿಬ್ಬರೂ ಭಾರತೀಯ ಪೌರರಾಗಿದ್ದರೆ- ಅಂಥವರು ಭಾರತೀಯರಾಗಿರುತ್ತಾರೆ. 2004ರ ಡಿ.3ರ ಬಳಿಕ, ಭಾರತೀಯ ತಂದೆತಾಯಿಗೆ ವಿದೇಶದಲ್ಲಿ ಜನಿಸಿದ್ದರೂ, ಒಂದು ವರ್ಷದೊಳಗೆ ದೂತಾವಾಸದ ಮುಖೇನ ಜನನ ನೋಂದಣಿ ಆಗಿರಬೇಕು. ಇದಲ್ಲದೆ 1955ರ ಪೌರತ್ವ ಕಾಯಿದೆಯಲ್ಲಿ ತಿಳಿಸಿರುವಂತೆ ಭಾರತೀಯ ಮೂಲದವನಾಗಿದ್ದು ಭಾರತದಲ್ಲಿ 7 ವರ್ಷಗಳಿಂದ ನೆಲೆಸಿದ್ದರೆ; ಅವಿಭಜಿತ ಭಾರತದವನಾಗಿದ್ದು ಇತರೆಡೆ ನೆಲೆಸಿದ್ದರೆ; ಭಾರತೀಯ ವ್ಯಕ್ತಿಯನ್ನು ಮದುವೆಯಾಗಿ ಏಳು ವರ್ಷಗಳಿಂದ ಇಲ್ಲಿ ನೆಲೆಸಿದ್ದರೆ; ಈಗಾಗಲೇ ಭಾರತೀಯ ಪೌರತ್ವ ಪಡೆದಿರುವ ಪೋಷಕರ ಮಕ್ಕಳಾಗಿದ್ದರೆ- ಅಂಥವರು ಅರ್ಜಿ ಸಲ್ಲಿಸಿ ಪೌರತ್ವ ಪಡೆಯಬಹುದು. 


• ಎನ್‌ಆರ್‌ಸಿ ಮತ್ತು ಪೌರತ್ವ

ಮುಖ್ಯವಾಗಿ, ಈ ಕಾಯಿದೆಯ ದೊಡ್ಡ ಪರಿಣಾಮ ಕಾಣಿಸಲಿರುವುದು ಅಸ್ಸಾಂನಲ್ಲಿ. ಪ್ರಸ್ತುತ ಇಲ್ಲಿ ಅಸ್ಸಾಂ ಒಪ್ಪಂದ-1985 ಜಾರಿಯಲ್ಲಿದ್ದು, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ನಡೆಯುತ್ತಿದೆ. ಅದರ ಪ್ರಕಾರ, 1971ರ ಮಾರ್ಚ್‌ವರೆಗೆ ವಲಸಿಗರಾಗಿ ಇಲ್ಲಿಗೆ ಆಗಮಿಸಿದವರಿಗಷ್ಟೇ ಇಲ್ಲಿನ ಪೌರತ್ವ ಕೊಡಬಹುದು. ಈ ಸಂದರ್ಭದಲ್ಲಿ ಸಾಕಷ್ಟು ಹಿಂದೂಗಳೂ ಮುಸ್ಲಿಮರೂ ಆಗಮಿಸಿದ್ದಾರೆ. ಹೊಸ ಕಾಯಿದೆಯ ಪ್ರಕಾರ, 1971ರ ನಂತರ 2014ರವರೆಗೆ ಬಂದ ಮುಸ್ಲಿಮೇತರರಿಗೆ ಪೌರತ್ವ ಸಿಗಲಿದೆ. ಮುಸ್ಲಿಮರ ಪ್ರಸ್ತಾಪವಿಲ್ಲ. ಇದು ವಲಸಿಗ ಮುಸ್ಲಿಂ ಸಮುದಾಯದ ಆತಂಕಕ್ಕೆ ಕಾರಣವಾಗಿದೆ. ಇವರನ್ನು ಗಡೀಪಾರು ಮಾಡಲು ಈ ಕಾಯಿದೆ ರೂಪಿಸಲಾಗುತ್ತಿದೆ ಎಂಬುದು ಪ್ರತಿಪಕ್ಷಗಳ ಆರೋಪ.



• ಪೌರತ್ವ ಹೇಗೆ?

ನಿರ್ದಿಷ್ಟ ಆರು ಧಾರ್ಮಿಕ ಅಲ್ಪಸಂಖ್ಯಾತ ಕೋಮುಗಳ ಅಕ್ರಮ ವಲಸಿಗರು ಶಾಶ್ವತ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಮೊದಲ ಹಂತದಲ್ಲಿ ಜಿಲ್ಲಾಡಳಿತ ಅವರ ದಾಖಲೆಗಳನ್ನು ಪರಿಶೀಲಿಸಿ, ನಂತರ ರಾಜ್ಯ ಸರಕಾರದ ಸಮ್ಮತಿಗೆ ಕಳಿಸಿಕೊಡಲಾಗುತ್ತದೆ. ಈ ಎರಡೂ ಕಡೆಯಿಂದ ಒಪ್ಪಿಗೆ ಪಡೆದ ವಲಸಿಗರಿಗೆ ಕೇಂದ್ರದಿಂದ ಪೌರತ್ವ ಮಂಜೂರಾಗುತ್ತದೆ.


• ಯಾವ ರಾಜ್ಯಗಳಿಗೆ ಅನ್ವಯ?
ಈ ತಿದ್ದುಪಡಿ ವಿಧೇಯಕ ಕಾನೂನು ಆಗಿ ಪರಿವರ್ತನೆಗೊಂಡರೆ ಎಲ್ಲ ರಾಜ್ಯಗಳು ಇದನ್ನು ಪರಿಪಾಲಿಸಬೇಕಾಗುತ್ತದೆ.
(Courtesy : ವಿಜಯ ಕರ್ನಾಟಕ ದಿನಪತ್ರಿಕೆ)

Sunday, 20 January 2019

●.ಇಂಗ್ಲೀಷ್ ಗ್ರಾಮರ್ : ಇಂಗ್ಲಿಷ್ ವಾಕ್ಯ ವಿಧಗಳು (The Types of Sentences)

●.ಇಂಗ್ಲೀಷ್ ಗ್ರಾಮರ್ : ಇಂಗ್ಲಿಷ್ ವಾಕ್ಯ ವಿಧಗಳು
(The Types of Sentences)

━━━━━━━━━━━━━━━━━━━━━━━━━━━━━━━━━━━━
★ ಇಂಗ್ಲೀಷ್ ಗ್ರಾಮರ್
(English Grammar)


ಇಂಗ್ಲೀಷ್ ಗ್ರಾಮರ್ ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ. ಒಂದು ಉನ್ನತ ಹುದ್ದಗೆ ಹೋಗಲು ನಾವು ಖಂಡಿತ ಇಂಗ್ಲೀಷ್ ಭಾಷೆಯ ಮೇಲೆ ಪ್ರಭುತ್ವ ಹೊಂದಬೇಕಾಗುತ್ತದೆ. ಅ ಉದ್ದೇಶದಿಂದ English Grammar ಕುರಿತ ಮಾಹಿತಿಯನ್ನು ಸ್ಪರ್ಧಾಲೋಕದಲ್ಲಿ ಪುನಃ ಹಂಚಿಕೊಳ್ಳಲಿರುವೆ. ಏನಾದರೂ ತಪ್ಪು ತಿದ್ದುಪಡಿಗಳಿದ್ದಲ್ಲಿ ನನ್ನ ಗಮನಕ್ಕೆ ತನ್ನಿ
(Gmail : yaseen7ash@gmail.com)




ವೈವಿಧ್ಯತೆ ಜೀವಂತ ಭಾಷೆಯ ತಿರುಳು. ಸಂಭಾಷಣೆಯಲ್ಲಾಗಲೀ, ಬರವಣಿಗೆಯಲ್ಲಾಗಲೀ ಸತ್ವಯುತ ವಾಕ್ಯಗಳು ವಿಭಿನ್ನ ರೀತಿಯ ವಿನ್ಯಾಸಗಳನ್ನು (structures) ಹೊಂದಿರುತ್ತವೆ.

ಸ್ಥೂಲವಾಗಿ, ಭಾಷೆ ವಿವಿಧ ಘಟಕಗಳನ್ನು (units) ಹೊಂದಿರುತ್ತವೆ. ಅವುಗಳೆಂದರೆ,
• sentence (ವಾಕ್ಯ),
• clause (ವಾಕ್ಯಾಂಶ),
• phrase (ಪದಪುಂಜ),
• phoneme(ಧ್ವನಿಕಣ)

.ಈ ಘಟಕಗಳ ಅಂತರ್ ಸಂಬಂಧವನ್ನು ಅನುಸರಿಸಿ, ಇಂಗ್ಲಿಷ್ ವಾಕ್ಯಗಳನ್ನು simple sentence, complex sentence ಮತ್ತು compound sentence ಎಂದು ವಿಂಗಡಿಸಬಹುದು.

ಈ ವಿಂಗಡಣೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ನಾವು clause ಎಂದರೇನು ಎಂದು ತಿಳಿದುಕೊಳ್ಳಬೇಕು.

 Main clause ಮತ್ತು sub-ordinate clause ಎಂಬ ಎರಡು ವಿಧವಾದ ವಾಕ್ಯಾಂಶಗಳನ್ನು ಇಂಗ್ಲಿಷ್ ಭಾಷೆ ಗುರುತಿಸುತ್ತದೆ.

ಈ ಉದಾಹರಣೆಯನ್ನು ಗಮನಿಸಿ:

When it started raining, she opened her umbrella.

ಈ ವಾಕ್ಯದಲ್ಲಿ, she opened her umbrella’ ಎಂಬುದನ್ನು main clause ಎನ್ನುತ್ತೇವೆ. ಏಕೆಂದರೆ, ವಾಕ್ಯದ ಈ ಭಾಗ, ಸ್ವತಂತ್ರವಾಗಿ ಅರ್ಥಪೂರ್ಣವಾಗಿದೆ. ಅಂದರೆ, ತನ್ನ ಅರ್ಥವಂತಿಕೆಗೆ ಅದು ವಾಕ್ಯದ ಇತರ ಭಾಗಗಳ ಮೇಲೆ ಅವಲಂಬಿತವಾಗಿಲ್ಲ. ಇದೇ ಕಾರಣಕ್ಕಾಗಿ ಈ main clauseಅನ್ನು independent clause ಎಂದೂ ಕರೆಯುತ್ತೇವೆ.

ವಾಕ್ಯದ ಉಳಿದ ಭಾಗವನ್ನು (when it started raining), sub-ordinate clause ಎಂದು ಕರೆಯುತ್ತೇವೆ. ಅದು ತನ್ನ ಅರ್ಥವಂತಿಕೆಗಾಗಿ main clause ಮೇಲೆ ಅವಲಂಬಿತವಾಗಿರುವುದರಿಂದ ಇದನ್ನು dependent clause ಎಂದೂ ಕರೆಯುತ್ತೇವೆ.


ಈ ಪರಿಕಲ್ಪನೆಗಳನ್ನನುಸರಿಸಿ, ಮೇಲೆ ಹೇಳಿದಂತೆ ಮೂರು ವಿಧವಾದ ವಾಕ್ಯವಿನ್ಯಾಸಗಳು ಕಾಣಸಿಗುತ್ತವೆ. ಮೊದಲಿಗೆ, simple sentence ಎಂದರೇನು ಎಂದು ತಿಳಿದುಕೊಳ್ಳೋಣ.

ಈ ವಾಕ್ಯಗಳನ್ನು ಗಮನಿಸಿ:
1. She goes to college regularly.
. The sun-set is beautiful.

ಒಂದೇ main clause ಇರುವಂತಹ ಈ ರೀತಿಯ ವಾಕ್ಯಗಳನ್ನು simple sentences ಎನ್ನುತ್ತೇವೆ.


ಈಗ complex sentenceಗಳನ್ನು ನೋಡಿ:

* He continued walking, even though he was very tired.

You will succeed, if you put hard efforts.

ಈ ವಾಕ್ಯಗಳಲ್ಲಿ He continued walking’ ‘You will succeed’ ಎಂಬ ಒಂದೊಂದು main clause ಹಾಗೂ even though he was very tired’ ‘if you put hard efforts’ ಎನ್ನುವಂತಹ sub-ordinate clauseಗಳು ಇರುತ್ತವೆ.

ಗಮನಿಸಬೇಕಾದ ವಿಷಯವೆಂದರೆ, complex sentenceನಲ್ಲಿ ಎಷ್ಟೇ sub-ordinate clauseಗಳಿದ್ದರೂ, main clause ಮಾತ್ರ ಒಂದೇ ಇರುತ್ತದೆ. ಹಾಗೂ ಈ clauseಗಳನ್ನು ಬೆಸೆಯುವಂತಹ conjunctionಗಳೆಂದರೆ, wh-words, if, that, though, although ಮುಂತಾದವುಗಳು.

ಎರಡು main clauseಗಳನ್ನು, and. Or, but, yet ಮುಂತಾದ conjunctionಗಳು ಬೆಸೆದಾಗ, ಅದು compound sentence ಎನ್ನಿಸಿಕೊಳ್ಳುತ್ತದೆ.

ಉದಾ: She is a professional dancer and an amateur singer.

ನಾವು ಈ ವಿವಿಧ ವಾಕ್ಯ ವಿನ್ಯಾಸಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ನಮ್ಮ ಬರವಣಿಗೆಯಲ್ಲಿ ರೂಢಿಸಿಕೊಂಡಾಗ ನಮ್ಮ ಭಾಷೆಗೆ ವೈವಿದ್ಯಮಯ ಜೀವಂತಿಕೆ ಒದಗುತ್ತದೆ.

(ಕೃಪೆ: ವಿಜಯ ಕರ್ನಾಟಕ)

●.ಬೌದ್ಧ ವಿಹಾರಗಳು / ಭಾರತೀಯ ಪುರಾತತ್ತ್ವಶಾಸ್ತ್ರದ ಸಮೀಕ್ಷೆ / ಬೌದ್ಧ ವಾಸ್ತುಶೈಲಿಯ ವಿಧಗಳು / ಪ್ರಮುಖ ಬೌದ್ಧ ಧರ್ಮದ ಪವಿತ್ರ ಸ್ಥಳಗಳು / ದೇಶದಲ್ಲಿರುವ ಪ್ರಮುಖ ಬೌದ್ಧ ವಿಹಾರಗಳು : (Buddist Monasteries / Archaeological Survey of India (ASI) / Buddhist Architecture / Buddhist holy places)

●.ಬೌದ್ಧ ವಿಹಾರಗಳು /  ಭಾರತೀಯ ಪುರಾತತ್ತ್ವಶಾಸ್ತ್ರದ ಸಮೀಕ್ಷೆ  / ಬೌದ್ಧ ವಾಸ್ತುಶೈಲಿಯ ವಿಧಗಳು / ಪ್ರಮುಖ ಬೌದ್ಧ ಧರ್ಮದ ಪವಿತ್ರ ಸ್ಥಳಗಳು / ದೇಶದಲ್ಲಿರುವ ಪ್ರಮುಖ ಬೌದ್ಧ ವಿಹಾರಗಳು :
(Buddist Monasteries / Archaeological Survey of India (ASI) / Buddhist Architecture /  Buddhist holy places)

━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ ಪ್ರಿಲಿಮ್ಸ್ 2019 ರ ತಯಾರಿ
★ (IAS Prelims 2019)


ಇತ್ತೀಚೆಗೆ ಇದು ಈ ಕೆಳಕಂಡ ಕಾರಣಗಳೊಂದಿಗೆ ಸುದ್ದಿಯಲ್ಲಿ ಇತ್ತು. ಇತಿಹಾಸದೊಂದಿಗೆ ತಳುಕು ಹಾಕಿಕೊಂಡಿರುವುದರಿಂದ ನಾವು ಈ topic ಗೆ ಮಹತ್ವ ಕೊಡಬೇಕಾಗುತ್ತೆ. ಯಾಕೆಂದರೆ ಈ topic ಮೇಲೆ ಪ್ರತಿವರ್ಷ ಒಂದಿಲ್ಲೊಂದು question ಬಂದೇ ಬಂದಿರುತ್ತೆ. 


●.ಇತ್ತೀಚೆಗೆ ಸುದ್ದಿಯಲ್ಲಿ
━━━━━━━━━━━━━━━━━
• ಭಾರತದ ಪುರಾತತ್ತ್ವಶಾಸ್ತ್ರದ ಸಮೀಕ್ಷೆ (ASI) ಯು ಇತ್ತೀಚೆಗೆ ಗುಜರಾತಿನ ವಾಡ್ನಗರ ನಗರದಲ್ಲಿ ಬೌದ್ಧ ವಿಹಾರಗಳನ್ನು ಹೋಲುವ ರಚನೆಗಳನ್ನು ಸಂಶೋಧಿಸಿದೆ.
• ಮೂರು ದಿನಗಳ ಉತ್ಸವ, ಬೋಧಿ ಪರ್ವ—  ಬೌದ್ಧ ಪರಂಪರೆಯ BIMSTEC ಉತ್ಸವ (BIMSTEC Festival of Buddhist Heritage) ವನ್ನು ನವ ದೆಹಲಿಯಲ್ಲಿ ಆಚರಿಸಲಾಯಿತು.
• ಆಂಧ್ರಪ್ರದೇಶದ ಘಂತಾಸಲಾ (Ghantasala)ದಲ್ಲಿ 70 ಅಡಿ ಎತ್ತರದ ಬುದ್ಧನ ಪ್ರತಿಮೆಯನ್ನು ನಿರ್ಮಿಸಲು ಸರ್ಕಾರವು ನಿರ್ಧರಿಸಿದೆ.


●.ಭಾರತೀಯ ಪುರಾತತ್ತ್ವಶಾಸ್ತ್ರದ ಸಮೀಕ್ಷೆ :
(Archaeological Survey of India (ASI)) :
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
• ಪುರಾತತ್ತ್ವ ಸಂಶೋಧನೆ ಮತ್ತು ರಾಷ್ಟ್ರದ ಸಾಂಸ್ಕೃತಿಕ ಪರಂಪರೆ (cultural heritage) ಯ ರಕ್ಷಣೆಗಾಗಿ ಸ್ಥಾಪಿಸಲ್ಪಟ್ಟ ಪ್ರಧಾನ ಸಂಘಟನೆ ಇದಾಗಿದ್ದು, ಇದು ಸಂಸ್ಕೃತಿ ಸಚಿವಾಲಯ (Ministry of Culture) ದ ಅಡಿಯಲ್ಲಿ ಬರುತ್ತದೆ.
• ಇದರ ಪ್ರಮುಖ ಉದ್ದೇಶ : ಪ್ರಾಚೀನ ಸ್ಮಾರಕಗಳು, ಅವಶೇಷಗಳು ಮತ್ತು (ಪುರಾತತ್ತ್ವ) ಐತಿಹಾಸಿಕ ಮಹತ್ವದ ಸ್ಥಳಗಳ ನಿರ್ವಹಣೆ, ಸಂರಕ್ಷಣೆ
• ಹೆಚ್ಚುವರಿಯಾಗಿ, Ancient Monuments and Archaeological Sites and Remains Act, 1958. ನಿಬಂಧನೆಗಳ ಪ್ರಕಾರ ದೇಶದ ಎಲ್ಲ ಪುರಾತತ್ವ ಚಟುವಟಿಕೆಗಳನ್ನು ಅದು ನಿಯಂತ್ರಿಸುತ್ತದೆ. Antiquities and Art Treasure Act, 1972 ನ ಪ್ರಕಾರ ಕೂಡಾ ನಿಯಂತ್ರಿಸುತ್ತದೆ..
• ASI ಯನ್ನು 1861 ರಲ್ಲಿ ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್ ಅವರು ಸ್ಥಾಪಿಸಿದರು, ಇವರು ಅದರ ಮೊದಲ ನಿರ್ದೇಶಕ ಜನರಲ್ ಆಗಿದ್ದರು.
• ಉಪಖಂಡದ ಇತಿಹಾಸದ ಬಗೆಗಿನ ಮೊದಲ ವ್ಯವಸ್ಥಿತ ಸಂಶೋಧನೆಯು ಏಷಿಯಾಟಿಕ್ ಸೊಸೈಟಿಯಿಂದ ನಡೆಸಲ್ಪಟ್ಟಿತು, ಇದು ಜನವರಿ 15, 1784 ರಂದು ಬ್ರಿಟಿಷ್ ಇಂಡೊಲೊಜಿಸ್ಟ್ ವಿಲಿಯಂ ಜೋನ್ಸ್ ರಿಂದ ಸ್ಥಾಪಿಸಲ್ಪಟ್ಟಿತು.




●.ಬೌದ್ಧ ವಾಸ್ತುಶೈಲಿಯ ವಿಧಗಳು:
(Buddhist Architecture)

━━━━━━━━━━━━━━━━━━━━━

(ಈ ವಿಷಯವಸ್ತು ಮಹತ್ವವುಳ್ಳದ್ದು. ನಾನು ಸಂಕ್ಷೇಪಿಸಿದ್ದು, ಸ್ವಲ್ಪ ವ್ಯಾಪಕ ಅಧ್ಯಯನಕ್ಕೆ ಗಮನ ಕೊಡಿ.)

— ಮೂರು ಪ್ರಮುಖ ಬೌದ್ಧ ವಾಸ್ತುಶೈಲಿಯನ್ನು ಕಾಣಬಹುದು:

• ಸ್ತೂಪ (Stupa):
ಇದು ಬುದ್ಧನ ಸಮಾಧಿ ದಿಬ್ಬ, ಬುದ್ಧನ ದೇಹಾವಶೇಷವನ್ನು ಹುಗಿದಿಡಲಾಗಿರುವ ಸ್ಥಳ . ಪವಿತ್ರ ಅವಶೇಷಗಳನ್ನು ಸಂಗ್ರಹಿಸಿಡುವ ಉದ್ದೇಶಕ್ಕಾಗಿ ನಿರ್ಮಿಸಲಾಗುತ್ತಿದ್ದ ಸ್ಮಾರಕಾರ್ಥವಾದ ಕಟ್ಟಡವೆಂದರೆ ಗುಮ್ಮಟಾಕಾರದ ಸ್ಮಾರಕವಾದ ಬೌದ್ಧ ಸ್ತೂಪ. ಇದು ಅರ್ಧಗೋಳದ ಗುಮ್ಮಟ (hemispherical dome) ವನ್ನು ಒಳಗೊಂಡಿದೆ. ಮೂಲ ಸ್ತೂಪಗಳು ಬುದ್ಧನ ಬೂದಿಯನ್ನು ಒಳಗೊಂಡಿವೆ. ಮಧ್ಯಪ್ರದೇಶದ ಸಾಂಚಿ ಸ್ತೂಪ (Sanchi Stupa) ಭಾರತದ ಅತ್ಯಂತ ಪ್ರಸಿದ್ಧ ಸ್ತೂಪಗಳಲ್ಲಿ ಒಂದಾಗಿದೆ. ಉತ್ತರಪ್ರದೇಶದ ಪಿಪ್ರಹವಾ ಸ್ತೂಪ (Piprahwa Stupa) ವು ಕೂಡ ಗತಕಾಲದ ಸ್ತೂಪಗಳಲ್ಲಿ ಒಂದಾಗಿದೆ.

• ವಿಹಾರಗಳು (Viharas):
ಇದು ಬೌದ್ಧ ಸಂನ್ಯಾಸಿಗಳ ವಿರಕ್ತಗೃಹ, ನಿವಾಸ, ವಾಸಸ್ಥಳ ಆಗಿದೆ. ಭಿಕ್ಷುಗಳಿಗೆ ಆಶ್ರಯ ಒದಗಿಸುವ ಉದ್ದೇಶ ಹೊಂದಿತ್ತು. ಇದರಲ್ಲಿ ಒಂದು ಕೇಂದ್ರ ಸಭಾಂಗಣ ಮತ್ತು ಇದಕ್ಕೆ ಕೆಲವೊಮ್ಮೆ ಕಲ್ಲಿನಿಂದ ಕೆತ್ತಿದ ಹಾಸಿಗೆಗಳಿರುವ ಸಣ್ಣ ಕೊಠಡಿಗಳು ಸಂಪರ್ಕ ಹೊಂದಿದ್ದವು.

• ಚೈತ್ಯ ಅಥವಾ ಚೈತ್ಯಗಿರಿಯಾ (Chaitya or Chaityagriha):
ಬೌದ್ಧರ ಪೂಜಾಸ್ಥಳಗಳಿಗೆ ಈ ಹೆಸರಿದೆ. ಇದನ್ನು ಬೌದ್ಧ ದೇವಾಲಯವೆಂದೂ ಕರೆಯಲಾಗಿದೆ. ಸಾಮಾನ್ಯವಾಗಿ ಚೈತ್ಯದೊಳಗೆ ಸ್ತೂಪವೋ ಬೋಧಿವೃಕ್ಷವೋ ಧರ್ಮಚಕ್ರವೋ ಬುದ್ಧನ ಪಾದಗಳೋ ಇರುತ್ತವೆ. ಇವನ್ನು ಪೂಜೆ ಮಾಡಿ ಪ್ರದಕ್ಷಿಣೆ ಮಾಡಿ ಬರಲು ಪ್ರದಕ್ಷಿಣಾಪಥವನ್ನೊಳಗೊಂಡ ಮಂದಿರವೇ ಚೈತ್ಯ (ಪಾಳಿಯಲ್ಲಿ ಚೇತಿಯ) ಉದಾ: ಮಹಾರಾಷ್ಟ್ರದ ಲೊನಾವಲಾ ಸಮೀಪದ ಕಾರ್ಲೆ ಗುಹೆಗಳಲ್ಲಿನ ಚೈತ್ಯ (ಕ್ರಿ.ಶ.2ಶತಮಾನ).
ಪ್ರಾಚೀನ ಚೈತ್ಯಗಳಲ್ಲಿ ಬುದ್ಧನ ಮೂರ್ತಿಗಳಿರಲಿಲ್ಲ.!



●.ಪ್ರಮುಖ ಬೌದ್ಧ ಧರ್ಮದ ಪವಿತ್ರ ಸ್ಥಳಗಳು (8) ಅಷ್ಠ ಮಹಾಸ್ಥಾನಗಳು (Astamahasthanas)
(Important Eight Buddhist Sites /  Buddhist holy places)

━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

(ಇವು ಕೂಡಾ ಪರೀಕ್ಷಾ ದೃಷ್ಟಿಯಿಂದ ಮಹತ್ವವುಳ್ಳದ್ದವು. better to hv glance on it.)

• ಲುಂಬಿನಿ, ನೇಪಾಳ: ಬುದ್ಧನ ಜನನ.
• ಬೋಧಗಯಾ, ಬಿಹಾರ: ಬುದ್ಧನ ಜ್ಞಾನೋದಯ.
• ಸಾರನಾಥ್, ಯುಪಿ: ಮೊದಲ ಧಮ್ಮಚಕ್ರಪರಿವರ್ತನ
• ಕುಶಿನಗರ, ಉತ್ತರ ಪ್ರದೇಶ: ಮರಣ ಅಥವಾ ಮಹಾ ಪರಿನಿರ್ವಾಣ

("ಮಹಾ ಪರಿನಿರ್ವಾಣ" ನಿರ್ವಾಣದ ಅಂತಿಮ ಹಂತವನ್ನು ಸೂಚಿಸುತ್ತದೆ (ಶಾಶ್ವತವಾದ, ಅತ್ಯುನ್ನತ ಶಾಂತಿ ಮತ್ತು ಸಂತೋಷದಿಂದ ಕೂಡಿದ ಹಂತ))

ಇವುಗಳ ಜೊತೆಯಲ್ಲಿ ಇನ್ನುಳಿದ ನಾಲ್ಕು ಸ್ಥಳಗಳೆಂದರೆ—
 ಶ್ರವಸ್ತಿ(Shravasti), ಸಂಕಾಯ(Sankasya), ರಾಜಗೀರ್(Rajgir) ಮತ್ತು ವೈಶಾಲಿ (Vaishali)



●.ದೇಶದಲ್ಲಿರುವ ಪ್ರಮುಖ ಬೌದ್ಧ ವಿಹಾರಗಳು :
(Monasteries)

━━━━━━━━━━━━━━━━━━━━━━━━━━

(ಐತಿಹಾಸಿಕ ಸ್ಥಳಗಳ ಜೋಡಿ ಪದಗಳ ಪ್ರಶ್ನೆಗಳಲ್ಲಿ ಇವುಗಳಲ್ಲಿ ಕೆಲವೊಂದನ್ನು ಕೇಳಿರುವಂಥವು. ಸ್ವಲ್ಪ ಗಮನಹರಿಸುವುದು ಒಳಿತು.)
• ಲಡಾಖ್:
ಹೆಮಿಸ್ (Hemis), ತಿಕ್ಸೆ (Thiksey), ಫುಕ್ಟಾಲ್(Phuktal) ವಿಹಾರ, ಝನ್ಸ್ಕಾರ್,(Zanskar) ರಿಜಾಂಗ್ (Rizong)

• ಲೇಹ್:
ಡಿಸ್ಕಿಟ್ (Diskit)ವಿಹಾರ, ಲಮಾಯುರು (Lamayuru) ವಿಹಾರ.

• ಕರ್ನಾಟಕ:
ನಮ್ಡ್ರೊಲಿಂಗ್ ನಯಿಂಗ್ಮಾಪಾ (Namdroling Nyingmapa) ವಿಹಾರ (ಕೊಡಗು).

• ಹಿಮಾಚಲ ಪ್ರದೇಶ:
ಧಂಕರ್(Dhankar), ತಾಬೊ(Tabo) ವಿಹಾರ (ಸ್ಪಿತಿ ಕಣಿವೆ), ಪಾಲ್ಪುಂಗ್ ಶೆರಬ್ಲಿಂಗ್ (Palpung Sherabling) (ಕಾಂಗ್ರಾ ಕಣಿವೆ), ನಂಗ್ಯಾಲ್ (Namgyal) (ಧರ್ಮಶಾಲಾ), ಗಾಂಧಲಾ (Gandhola) ವಿಹಾರ, ಕುಂಗ್ರೆ (Kungri) ವಿಹಾರ, ಕಾರ್ಡಾಂಗ್ (Kardang) ವಿಹಾರ.

• ಪಶ್ಚಿಮ ಬಂಗಾಳ:
ಘೂಮ್(Ghoom) ವಿಹಾರ

• ಉತ್ತರಾಖಂಡ್:
ಮೈಂಡ್ರೋಲಿಂಗ್(Mindrolling) ವಿಹಾರ (ಡೆಹ್ರಾಡೂನ್).

• ಸಿಕ್ಕಿಂ:
ರುಮ್ಟೆಕ್(Rumtek) ಮತ್ತು ಗೊನ್ಜಾಂಗ್(Gonjang) ವಿಹಾರ, ಎನ್ಚೆ (Enchey) ವಿಹಾರ, ರಾಲಾಂಗ್(Ralang) ವಿಹಾರ, ಪೆಮಾಯಾಂಗ್ಟ್ಸೆ (Pemayangtse) ವಿಹಾರ.

• ಅರುಣಾಚಲ ಪ್ರದೇಶ:
ತವಾಂಗ್(Tawang) ವಿಹಾರ.


(ಆದಷ್ಟು ಮಟ್ಟಿಗೆ ಸಮಗ್ರ ಮಾಹಿತಿಯನ್ನು ಕಲೆಹಾಕಲು ಪ್ರಯತ್ನಿಸುತ್ತಿದ್ದು ಏನಾದರೂ ತಪ್ಪು ತಿದ್ದುಪಡಿಗಳಿದ್ದಲ್ಲಿ ನನ್ನ ಗಮನಕ್ಕೆ ತನ್ನಿ : Gmail - yaseen7ash@gmail.com)

Saturday, 19 January 2019

●.Human Trafficking (ಮಾನವ ಕಳ್ಳಸಾಗಣೆ) - (IAS Prelims 2019 ರ ತಯಾರಿಗಾಗಿ)



●.Human Trafficking (ಮಾನವ ಕಳ್ಳಸಾಗಣೆ) -  (IAS Prelims 2019 ರ ತಯಾರಿಗಾಗಿ)

(ತುಂಬಾ sensitive topic ಆಗಿದ್ದು ಸ್ವಲ್ಪ ಇದರ ಬಗ್ಗೆ Aspirants ಗಮನಹರಿಸುವುದು ಒಳಿತು.)
ನನ್ನ ಪ್ರಕಾರ IAS Prelims 2019 ರ ತಯಾರಿಗಾಗಿ ಈ ಕೆಳಕಂಡ ಜ್ವಲಂತ ವಿಷಯವಸ್ತು (Burning Topics) ಗಳ ಬಗ್ಗೆ ಒತ್ತು ಕೊಡಬೇಕೆಂಬ ಅನಿಸಿಕೆ ನನ್ನದು. ಆದರೆ ಇವೇ ಅಂತಿಮವಲ್ಲ.

━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

ಇತ್ತೀಚೆಗೆ ಮಾನವ ಸಾಗಣೆ (ತಡೆ, ಸಂರಕ್ಷಣೆ ಮತ್ತು ಪುನರ್ವಸತಿ) ಮಸೂದೆ 2018 ( Trafficking of Persons (Prevention, Protection & Rehabilitation Bill, 2018) ಯನ್ನು ಸಂಸತ್ತಿನಲ್ಲಿ ಪಾಸುಮಾಡಲಾಯಿತು.

ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಮೂರನೇ ಅತಿ ದೊಡ್ಡ ಸಂಘಟಿತ ಅಪರಾಧವೆಂದರೆ ಮಾನವ ಕಳ್ಳಸಾಗಣೆ. ಈ ಅಪರಾಧವನ್ನು ತಡೆಯಲು ಇದುವರೆಗೂ ಯಾವುದೇ ನಿರ್ದಿಷ್ಟ ಕಾನೂನು ಇಲ್ಲ.

Human Trafficking ನಿಷೇಧಿಸುವ ಸಂವಿಧಾನದ ವಿಧಿ - 23 (1) :
( ಶೋಷಣೆಯ ವಿರುದ್ಧ ಹಕ್ಕು (ವಿಧಿ 23-24):
• 23ನೇ ವಿಧಿಯು ಸ್ತೀಯರನ್ನು ಅನೈತಿಕ ಕೆಲಸಗಳಿಗೆ ಉಪಯೋಗಿಸುವದು, ಒತ್ತಾಯದ ದುಡುಮೆ, ಹೆಣ್ಣುಮಕ್ಕಳ ಮಾರಾಟ, ನಿಷೇಧಿಸಿದೆ.
• 24ನೇ ವಿಧಿಯು, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಅಪಾಯಕಾರಿ ಕಾರ್ಖಾನೆಗಳಲ್ಲಿ ನಿಷೇಧಿಸಲಾಗಿದೆ.)
• ಆದರೆ ಸಂವಿಧಾನದಲ್ಲಿ ಇದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ವ್ಯಾಖ್ಯಾನ ಹೊಂದಿಲ್ಲ.

ಇದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ವ್ಯಾಖ್ಯಾನವನ್ನು ಮೊದಲಬಾರಿಗೆ UN Protocol on  Trafficking ನಿಂದ ಆಯ್ದು 2013ರ criminal law (ತಿದ್ದುಪಡಿ) ಕಾಯಿದೆಯಲ್ಲಿ ವಿವರಿಸಲಾಗಿರುತ್ತದೆ. ವಿಶೇಷವೆಂದರೆ ಈ ಕಾಯಿದೆಯು "ಬಲವಂತದ ದುಡಿಮೆ (Forced Labour) ಯನ್ನೊಳಗೊಂಡಿಲ್ಲ! .
• POSCO Act ಕೂಡಾ ಇದಕ್ಕೆ ಸಂಬಂಧಿಸಿದ್ದಾಗಿದೆ.
ಮಾನವ ಕಳ್ಳ ಸಾಗಣೆಯ ಕುರಿತು ಅತೀ ಹೆಚ್ಚು case report ಆಗಿದ್ದು ಪ.ಬಂಗಾಳದಿಂದ
• ಇದಕ್ಕೆ ಸಂಬಂಧಪಟ್ಟಂತೆ 2003 UN Protocol on Trafficking ಎಂಬ ಅಂತರರಾಷ್ಟ್ರೀಯ ಒಪ್ಪಂದಕ್ಕೆ ಕರಾರು ಬದ್ದವಾಗಿರುವುದು.
• ಪಲೆಮೊ ಪ್ರೋಟೋಕಾಲ್ (Palemo Protocol) ಇದು ಮಕ್ಕಳ ಕಳ್ಳಸಾಗಣೆ ವಿರುದ್ಧ ರಕ್ಷಣೆ ನೀಡುವ ಒಂದು ಅಂತರರಾಷ್ಟ್ರೀಯ ಶಿಷ್ಟಾಚಾರವಾಗಿದೆ. ಆದರೆ ಇದನ್ನು ಅನುಷ್ಠಾನಗೊಳಿಸುವಲ್ಲಿ ಭಾರತ ವಿಫಲವಾಗಿದೆ.



●.ಇತ್ತೀಚೆಗೆ ಅನುಮೋದಿಸಲ್ಪಟ್ಟ ಮಸೂದೆಯು (ಈ ಮಸೂದೆಯ ಪ್ರಮುಖ ಅಂಶಗಳು ಹೀಗಿವೆ) — 
 
• ಮುಖ್ಯವಾಗಿ ಮಕ್ಕಳು ಹಾಗೂ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಕಠಿಣ ನಿಯಮಗಳನ್ನು ಇದು ಒಳಗೊಂಡಿದೆ.
• ಈ ಮಸೂದೆಯು ಮಾನವ ಕಳ್ಳಸಾಗಣೆಯನ್ನು ಹತ್ತಿಕ್ಕುವ ವಿಚಾರದಲ್ಲಿ ದಕ್ಷಿಣ ಏಷ್ಯಾ ದೇಶಗಳಲ್ಲಿ ಭಾರತವನ್ನು ಮುಂಚೂಣಿಯಲ್ಲಿರಿಸಿದೆ. ಮಾನವ ಕಳ್ಳಸಾಗಣೆಯು ಜಾಗತಿಕ ಸಮಸ್ಯೆಯಾದರೂ ದಕ್ಷಿಣ ಏಷ್ಯಾದಲ್ಲಿ ಭಾರಿ ಪ್ರಮಾಣದಲ್ಲಿ ನಡೆಯುತ್ತಿದೆ.
•  ಮಾನವ ಕಳ್ಳಸಾಗಣೆ ಕುರಿತ investigation ಸಂಬಂಧಪಟ್ಟ ಅಧಿಕಾರಗಳನ್ನು ದೇಶದ National Investigation Agency (NIA) ಗೆ ಕೊಟ್ಟಿದೆ.
• ಈ ಅಪರಾಧವನ್ನು ಪುನರಾವರ್ತಿಸುವ ಅಪರಾಧಿಗಳಿಗೆ— ಜೀವಾವಧಿ (life imprisonment) ಶಿಕ್ಷೆ, ಕುಮ್ಮಕ್ಕು ನೀಡುವ, ಪ್ರಚೋದಿಸುವ ಹಾಗೂ ಸಹಾಯಮಾಡುವ - ಭಾಗಿದಾರರಿಗೆ 3ವರ್ಷ ಜೈಲು ಶಿಕ್ಷೆ.
• ತನಿಖೆಗೊಳಪಟ್ಟು victims ಗೆ 30 ದಿನಗಳೊಳಗಾಗಿ interim relief ಹಾಗೂ chargesheet ತಯಾರಿಸಿದ 60 ದಿನಗಳೊಳಗಾಗಿ ಸಂಪೂರ್ಣ relief.
• ಇದಕ್ಕಾಗಿ ಒಂದು ರಾಷ್ಟ್ರೀಯ anti-trafficking relief & rehabilitation committee ರಚನೆಗೆ ಶಿಫಾರಸು. ಈ ಕಮಿಟಿಯು WCD Ministry ಯ ಸೆಕ್ರೆಟರಿಯನ್ನ ಮುಖ್ಯಸ್ಥನಾಗಿ ಹೊಂದಿರುವುದು.
• begging ಭಿಕ್ಷೆ ಬೇಡಲು ಹಚ್ಚುವ ಸಲುವಾಗಿ ಮಾಡಲಾದ ಮಾನವ ಕಳ್ಳಸಾಗಣೆಯು ಅತಿ ಹೆಚ್ಚು ಹದಗೆಡುವ, ಉಲ್ಬಣಗೊಳ್ಳಬಹುದಾದ ಅಪರಾಧ ( graver offense than other human trafficking! )ವೆಂದು ಪರಿಗಣಿಸಲಾಗಿದೆ.
 • ದೇಶದೊಳಗೆ ಅಕ್ರಮ ವಲಸೆಗಾಗಿ ಆಗಲಿ ಇಲ್ಲವೆ ಇತರೇ ವಿದೇಶಗಳಿಗೆ ದೇಶದಿಂದ ಅಕ್ರಮವಾಗಿ ಸಾಗುವುದಾಗಲಿ ಮಾಡುವ ಹಾಗೂ ಈ ಕೃತ್ಯಕ್ಕೆ ಪ್ರಚೋದಿಸುವ ವ್ಯಕ್ತಿಗೆ ಅಪರಾಧಿಯಾಗಿ ಪರಿಗಣಿಸಿ 10ವರ್ಷ ಜೈಲುಶಿಕ್ಷೆಗೊಳಪಡಿಸಬಹುದಾಗಿದೆ.
• ಈ ಕಾರ್ಯಕ್ಕಾಗಿ ಬಳಸಲಾಗುವ ಕಟ್ಟಡ, ಆಸ್ತಿ-ಪಾಸ್ತಿ, factories, premises ಗಳನ್ನು "to be used" a "Place of trafficking" ಎಂದು ಪರಿಗಣಿಸಿ ಈ ಮಸೂದೆಯ ಕಾಯ್ದೆಯನ್ವಯ ನಿರ್ಭಂಧಿಸಿ  ಮುಟ್ಟುಗೋಲು ಹಾಕಲಾಗುವುದು.


●.Nodal Authority —
 
• ಮಾನವ ಕಳ್ಳಸಾಗಣೆ ಕುರಿತ investigation ಸಂಬಂಧಪಟ್ಟ ಅಧಿಕಾರಗಳನ್ನು ದೇಶದ National Investigation Agency (NIA) ಗೆ ಕೊಟ್ಟಿದೆ.
• ಇದು Nodal Authority ಹಾಗು anti-trafficking bureau ಆಗಿ (ಅಂತರಾಷ್ಟ್ರೀಯವಾಗಿಯೂ ಭಾಗಿ) ಕಾರ್ಯ ನಿರ್ವಹಣೆ.
• ಮಾನವ ಕಳ್ಳಸಾಗಣೆ ಕುರಿತ (investigation) ತನಿಖೆಗೆ ನಿರ್ಭಯಾ ಫಂಡ್ ಕೊಡುತ್ತದೆ. 

 

ಪುನರ್ ಅವಲೋಕನಕ್ಕಾಗಿ —
 
●.ಮಾನವ ಸಾಗಣೆ (ತಡೆ, ಸಂರಕ್ಷಣೆ ಮತ್ತು ಪುನರ್ವಸತಿ) ಮಸೂದೆ 2018ಯ ವಿವಿಧ ಸ್ವರೂಪಗಳು
(Trafficking of Persons (Prevention, Protection and Rehabilitation) Bill 2018)


* ಮಾನವ ಕಳ್ಳಸಾಗಣೆಯನ್ನು ತಡೆಯುವ, ರಕ್ಷಿಸುವ ಹಾಗೂ ಅವರಿಗೆ ಪುನರ್ವಸತಿ ಕಲ್ಪಿಸುವ ದೃಷ್ಟಿಕೋನದಿಂದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದು.

* ಬಲವಂತದ ಕೂಲಿ ಉದ್ದೇಶದ ಸಾಗಣೆ, ಭಿಕ್ಷಾಟನೆ ಉದ್ದೇಶದ ಸಾಗಣೆ, ಮುಂಚಿನ ಲೈಂಗಿಕ ಪ್ರಬುದ್ಧತೆ ಮೂಡಿಸುವ ಉದ್ದೇಶದಿಂದ ವ್ಯಕ್ತಿಯ ಮೇಲೆ ರಾಸಾಯನಿಕ ಅಂಶಗಳು ಅಥವಾ ಹಾರ್ಮೋನುಗಳನ್ನು ಬಳಸುವ ಉದ್ದೇಶದ ಕಳ್ಳಸಾಗಣೆ, ಮದುವೆ ಉದ್ದೇಶದಿಂದ ಮಹಿಳೆ ಅಥವಾ ಮಗುವನ್ನು ಅಥವಾ ಮದುವೆ ನೆಪವೊಡ್ಡಿ ಅಥವಾ ಮದುವೆ ಬಳಿಕ ಕಳ್ಳಸಾಗಣೆ ಮಾಡುವ ಮಾನವ ಕಳ್ಳಸಾಗಣೆಯ ವಿವಿಧ ಸ್ವರೂಪಗಳನ್ನು ನಿಯಂತ್ರಿಸುವುದು.

* ಮಾನವ ಕಳ್ಳಸಾಗಣೆಗೆ ಕುಮ್ಮಕ್ಕು ನೀಡುವ ಯಾವುದೇ ಅಂಶಕ್ಕೆ ಶಿಕ್ಷೆ ನೀಡುವುದು. ಇದರಲ್ಲಿ ಮಾಹಿತಿಗಳ ಮುದ್ರಣ, ನಕಲಿ ಪ್ರಮಾಣಪತ್ರ ಸಿದ್ಧಪಡಿಸುವುದು, ಸರ್ಕಾರಿ ಅಗತ್ಯತೆಗಳನ್ನು ಒಳಗೊಂಡ ಪುರಾವೆಗಳಾಗಿ ನೋಂದಣಿ ಅಥವಾ ಸ್ಟಿಕ್ಕರ್‌ಗಳನ್ನು ಬಳಸುವುದು ಅಥವಾ ಸರ್ಕಾರಿ ಸಂಸ್ಥೆಗಳಿಂದ ಅನುಮತಿ ಹಾಗೂ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಲು ಸುಳ್ಳು ಮಾಹಿತಿಗಳನ್ನು ನೀಡುವುದು ಮುಂತಾದವು ಒಳಗೊಂಡಿವೆ.
ಸಂತ್ರಸ್ತರ ಗೋಪ್ಯತೆ ಕಾಪಾಡುವುದು

* ಸಂತ್ರಸ್ತರು/ಸಾಕ್ಷಿದಾರರು ಹಾಗೂ ದೂರುದಾರರ ಮಾಹಿತಿಯನ್ನು ಬಹಿರಂಗಪಡಿಸದೆ ಗೋಪ್ಯತೆ ಕಾಪಾಡುವುದು. ಸಂತ್ರಸ್ತರ ಹೇಳಿಕೆಯನ್ನು ವಿಡಿಯೋ ದಾಖಲೀಕರಣ ಮಾಡುವಾಗ ಅವರ ವೈಯಕ್ತಿಕ ಮಾಹಿತಿ ಗೋಪ್ಯತೆ ಕಾಪಾಡುವುದು.

* ಸಂತ್ರಸ್ತರ ವಿಚಾರಣೆ ಹಾಗೂ ಮರಳಿಸುವಿಕೆಗೆ ಕಾಲಮಿತಿ. ಪ್ರಕರಣವನ್ನು ಆದ್ಯತೆ ಮೇರೆಗೆ ಒಂದು ವರ್ಷದ ಅವಧಿಯೊಳಗೆ ವಿಚಾರಣೆ ಮುಗಿಸಬೇಕು.

* ಸಂತ್ರಸ್ತರನ್ನು ರಕ್ಷಿಸಿದ ಕೂಡಲೇ ಅವರಿಗೆ ಸೂಕ್ತ ಭದ್ರತೆ ಹಾಗೂ ಪುನರ್ವಸತಿ ಕಲ್ಪಿಸಬೇಕು. ಸಂತ್ರಸ್ತರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ತಪಾಸಣೆಗೆ ಅನುಕೂಲವಾಗುವಂತೆ 30 ದಿನಗಳ ಒಳಗೆ ತಕ್ಷಣ ಮಧ್ಯಂತರ ಪರಿಹಾರ ನೀಡಬೇಕು. ಮತ್ತು ದೋಷಾರೋಪ ಸಿದ್ಧಪಡಿಸಿದ 60 ದಿನಗಳ ಒಳಗೆ ಸೂಕ್ತ ಪರಿಹಾರ ಒದಗಿಸಬೇಕು.

* ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದು ಆರೋಪಿ ಮೇಲೆ ನಡೆಯುವ ಅಪರಾಧ ತನಿಖೆ ಅಥವಾ ಅದರ ಫಲಿತಾಂಶದ ಮೇಲೆ ನಿಶ್ಚಯವಾಗಬಾರದು.

* ಮೊದಲ ಬಾರಿಗೆ ಪುನರ್ವಸತಿ ನಿಧಿ ಸ್ಥಾಪಿಸುವುದು. ಇದನ್ನು ಸಂತ್ರಸ್ತರ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಒಳಿತಿನ ದೃಷ್ಟಿಯಿಂದ ಬಳಸುವುದು. ಇದರಲ್ಲಿ ಅವರ ಶಿಕ್ಷಣ, ಕೌಶಲ ಅಭಿವೃದ್ಧಿ, ಆರೋಗ್ಯ/ಮಾನಸಿಕ ನೆರವು, ಕಾನೂನು ನೆರವು ಮತ್ತು ಸುರಕ್ಷಿತ ವಸತಿ ಒದಗಿಸಲು ಬಳಸುವುದು.

* ಇಂತಹ ಪ್ರಕರಣಗಳ ತ್ವರಿತ ವಿಚಾರಣೆಗೆ ಪ್ರತಿ ಜಿಲ್ಲೆಯಲ್ಲಿಯೂ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದು

* ಜಿಲ್ಲೆ, ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಮಾನವ ಕಳ್ಳಸಾಗಣೆ ಪ್ರಕರಣದ ಕುರಿತು ಕ್ರಮ ತೆಗೆದುಕೊಳ್ಳಲು ಸಂಸ್ಥೆಗಳನ್ನು ಸ್ಥಾಪಿಸುವುದು.
ಇವು ಮಾನವ ಕಳ್ಳಸಾಗಣೆಯ ತಡೆ, ರಕ್ಷಣೆ ತನಿಖೆ ಹಾಗೂ ಪುನರ್ವಸತಿ ಕೆಲಸಗಳ ಹೊಣೆಗಾರಿಕೆ ನಿಭಾಯಿಸಬೇಕು. ರಾಷ್ಟ್ರೀಯ ತನಿಖಾ ಸಂಸ್ಥೆಯು ರಾಷ್ಟ್ರಮಟ್ಟದಲ್ಲಿ ಗೃಹಸಚಿವಾಲಯದ ಅಡಿಯಲ್ಲಿ ಮಾನವ ಕಳ್ಳಸಾಗಣೆ ನಿಗ್ರಹ ತಂಡವಾಗಿ ಕೆಲಸ ಮಾಡಲಿದೆ.

* ಕನಿಷ್ಠ 10 ವರ್ಷ ಜೈಲುವಾಸದಿಂದ 1 ಲಕ್ಷ ರೂ.ಗೆ ಕಡಿಮೆ ಇಲ್ಲದ ದಂಡ ವಿಧಿಸುವಂತಹ ಕಠಿಣ ಶಿಕ್ಷೆಗಳನ್ನು ನೀಡುವುದು.

* ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ರಚನಾತ್ಮಕ ಸಂಪರ್ಕವನ್ನು ಕಡಿತಗೊಳಿಸುವುದು, ಅಪರಾಧಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು.

* ಮಾನವ ಕಳ್ಳಸಾಗಣೆ ನಿಗ್ರಹ ದಳವು ಅಂತರ್‌ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹೊಣೆಗಾರಿಕೆಯನ್ನು ಸಹ ನಿಭಾಯಿಸಬೇಕು. ವಿದೇಶಿ ಅಧಿಕಾರಿಗಳು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳ ಜತೆ ಸಂವಹನ ನಡೆಸುವ ಕಾರ್ಯವನ್ನು ಮಾಡಲಿದೆ.

ಜತೆಗೆ ತನಿಖೆಗೆ ಅಂತಾರಾಷ್ಟ್ರೀಯ ನೆರವು, ಅಂತರ್‌ರಾಜ್ಯ ಹಾಗೂ ಗಡಿಯಾಚೆಗಿನ ಪುರಾವೆ ಮತ್ತು ವಸ್ತುಗಳ ಹಸ್ತಾಂತರ, ಸಾಕ್ಷಿದಾರರು ಹಾಗೂ ಇನ್ನಿತರೆ ನೆರವುಗಳನ್ನು ಅದು ಪಡೆದುಕೊಳ್ಳುವ ಕೆಲಸ ಮಾಡಲಿದೆ. ಜತೆಗೆ ನ್ಯಾಯಾಂಗ ಕಲಾಪಗಳ ಅಂತರ್‌ ರಾಜ್ಯ ಹಾಗೂ ಅಂತಾರಾಷ್ಟ್ರೀಯ ವಿಡಿಯೋ ಪ್ರಸಾರದ ಚಟುವಟಿಕೆ ನಿಭಾಯಿಸಲಿದೆ.

***





Monday, 7 January 2019

☀ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ : (IAS PRELIMS-2019) (Food Safety and Standards Authority of India - FSSAI)

☀ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ : (IAS PRELIMS-2019)
(Food Safety and Standards Authority of India - FSSAI)

━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ ಪ್ರಿಲಿಮ್ಸ್ - 2019
(IAS PRELIMS-2019)

★ ಭಾರತದ ಆರ್ಥಿಕತೆ
(Indian Economy)


• 2006 ರ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯಿದೆ ಅಡಿಯಲ್ಲಿ ಕೇಂದ್ರ ಸರ್ಕಾರವು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI)ವನ್ನು ಸ್ಥಾಪಿಸಿತು.
• ಆಗಸ್ಟ್ 1, 2011 ರ ಕೇಂದ್ರ ಸರಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ವಿನಿಮಯ (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ಅಧಿನಿಯಮದ ಅಡಿಯಲ್ಲಿ ಇದನ್ನು ಸೂಚಿಸಲಾಗಿದೆ.
• ಇದು ಭಾರತ ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
• ಇದರ ಕೇಂದ್ರ ಕಾರ್ಯಾಲಯವು ದೆಹಲಿಯಲ್ಲಿದೆ,
• ಇದು ಆಹಾರ ಭದ್ರತಾ ಕಾಯಿದೆಗಳ ವಿವಿಧ ನಿಬಂಧನೆಗಳನ್ನು ಕಾರ್ಯರೂಪಕ್ಕೆ ತರಲು ಕೆಲಸ ಮಾಡುತ್ತದೆ.
• ಆರೋಗ್ಯಕರ ಆಹಾರ ಉತ್ಪಾದನೆ, ಶೇಖರಣೆ, ವಿತರಣೆ, ಮಾರಾಟ ಮತ್ತು ಮಾನವ ಬಳಕೆಗೆ ಪೌಷ್ಟಿಕಾಂಶದ ಆಹಾರಗಳ ಆಮದನ್ನು ಖಚಿತಪಡಿಸಿಕೊಳ್ಳಲು FSSAI ಕಾರ್ಯನಿರ್ವಹಿಸುತ್ತದೆ.
• ಇದರ ಜೊತೆಗೆ, ಎಲ್ಲಾ ರಾಜ್ಯಗಳು, ಜಿಲ್ಲೆ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಆಹಾರ ಪದಾರ್ಥಗಳ ಉತ್ಪಾದನೆ ಮತ್ತು ಮಾರಾಟದ ನಿಗದಿತ ಮಾನದಂಡಗಳನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.
• ಇದು ಚಿಲ್ಲರೆ ಮತ್ತು ಸಗಟು ಆಹಾರ ಪದಾರ್ಥಗಳನ್ನು ಕಾಲಕಾಲಕ್ಕೆ ಪರಿಶೀಲಿಸುತ್ತದೆ.


— ಇತ್ತೀಚೆಗೆ ಭಾರತೀಯ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹೊಸ ಪ್ಯಾಕೇಜಿಂಗ್ ನಿಯಮಗಳನ್ನು ತಿಳಿಸಿದೆ.

☀ ಪ್ರಮುಖ ಅಂಶಗಳು :

━━━━━━━━━━━━━━━
•.ಈ ನಿಯಮಗಳ ಪ್ರಕಾರ, ಆಹಾರ ಉತ್ಪನ್ನಗಳ ಪ್ಯಾಕಿಂಗ್ ಗಾಗಿ, ಅವುಗಳ ಕವರ್, ಸಂಗ್ರಹಣೆ ಹಾಗೂ ವಿತರಣೆಗಾಗಿ ವೃತ್ತಪತ್ರಿಕೆ ಅಥವಾ ಮರುಬಳಕೆಯ ಪ್ಲ್ಯಾಸ್ಟಿಕ್ ಬಳಕೆಗೆ ನಿರ್ಬಂಧಿಸಲಾಗುತ್ತದೆ.
•.ಈ ಹೊಸ ನಿಯಮಗಳು ಜುಲೈ 1, 2019 ರಿಂದ ಜಾರಿಗೆ ಬರಲಿವೆ.
•.ಹೊಸ ವಿನಿಮಯ ಆಹಾರ ಉತ್ಪನ್ನಗಳ ಪ್ಯಾಕೇಜಿಂಗ್ ಗಾಗಿ ಬಳಸುವ ವಿವಿಧ ವಸ್ತುಗಳ ಗುಣಮಟ್ಟವನ್ನು ವ್ಯಾಖ್ಯಾನಿಸುತ್ತದೆ.
•.ಈ ನಿಯಮಗಳ ಅನುಸಾರ, ಆಹಾರ ಉತ್ಪನ್ನಗಳನ್ನು ಪ್ಯಾಕಿಂಗ್ ಅಥವಾ ಶೇಖರಣೆಗಾಗಿ ಬಳಸಲಾಗುವ ಪ್ಯಾಕೇಜಿಂಗ್ ವಸ್ತುಗಳ ಅನುಸೂಚಿಯಲ್ಲಿ ಒದಗಿಸಲಾದ ಭಾರತೀಯ ಮಾನದಂಡಗಳಿಗೆ ಅನುಗುಣವಾಗಿರುತ್ತವೆ.
•. ಈ ನಿಯಮಗಳು ಶಾಯಿ ಮತ್ತು ವರ್ಣದ್ರವ್ಯದ ಕಾರ್ಸಿನೋಜೆನಿಕ್ ಪರಿಣಾಮ (Carcinogenic Effect)ವನ್ನು ಅರಿತುಕೊಂಡು ಆಹಾರ ಪದಾರ್ಥಗಳ ಪ್ಯಾಕಿಂಗ್ ಅಥವಾ ಅವುಗಳ ಹೊದಿಕೆಗಾಗಿ ಪತ್ರಿಕೆಗಳು ಮತ್ತು ಇತರ ವಸ್ತುಗಳನ್ನು ಬಳಸುವುದನ್ನು ನಿಷೇಧಿಸುತ್ತವೆ.
•.ಆಹಾರ ಪ್ಯಾಕೇಜುಗಳಲ್ಲಿ ಮುದ್ರಣಕ್ಕಾಗಿ ಬಳಸುವ ಶಾಯಿಗಾಗಿ ಭಾರತೀಯ ಮಾನದಂಡಗಳನ್ನು ಕೂಡಾ ಸೇರಿಸಲಾಗಿದೆ.
•.FSSAI ಯು ಹೊಸ ನಿಯಮಗಳನ್ನು ಮಂಡಿಸುವ ಮೊದಲು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಯಾಕೇಜಿಂಗ್ (IIP), ಮುಂಬೈ ಮತ್ತು ನ್ಯಾಷನಲ್ ಟೆಸ್ಟ್ ಹೌಸ್ (NTH), ಕೊಲ್ಕತ್ತಾದಲ್ಲಿ ಅಧ್ಯಯನ ಮಾಡಿದೆ.
• ಈ ಅಧ್ಯಯನದಲ್ಲಿ ಸಂಘಟಿತ ವಲಯದಲ್ಲಿ ಬಳಸಿದ ಪ್ಯಾಕೇಜಿಂಗ್ ವಸ್ತುಗಳನ್ನು ಸಾಕಷ್ಟು ಸುರಕ್ಷಿತವೆಂದು ಬಹಿರಂಗಪಡಿಸಲಾಯಿತು, ಅಸಂಘಟಿತ ವಲಯದಲ್ಲಿ ಬಳಸಿದ ಪ್ಯಾಕೇಜಿಂಗ್ ವಸ್ತುಗಳ ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ.