"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 19 January 2019

●.Human Trafficking (ಮಾನವ ಕಳ್ಳಸಾಗಣೆ) - (IAS Prelims 2019 ರ ತಯಾರಿಗಾಗಿ)



●.Human Trafficking (ಮಾನವ ಕಳ್ಳಸಾಗಣೆ) -  (IAS Prelims 2019 ರ ತಯಾರಿಗಾಗಿ)

(ತುಂಬಾ sensitive topic ಆಗಿದ್ದು ಸ್ವಲ್ಪ ಇದರ ಬಗ್ಗೆ Aspirants ಗಮನಹರಿಸುವುದು ಒಳಿತು.)
ನನ್ನ ಪ್ರಕಾರ IAS Prelims 2019 ರ ತಯಾರಿಗಾಗಿ ಈ ಕೆಳಕಂಡ ಜ್ವಲಂತ ವಿಷಯವಸ್ತು (Burning Topics) ಗಳ ಬಗ್ಗೆ ಒತ್ತು ಕೊಡಬೇಕೆಂಬ ಅನಿಸಿಕೆ ನನ್ನದು. ಆದರೆ ಇವೇ ಅಂತಿಮವಲ್ಲ.

━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

ಇತ್ತೀಚೆಗೆ ಮಾನವ ಸಾಗಣೆ (ತಡೆ, ಸಂರಕ್ಷಣೆ ಮತ್ತು ಪುನರ್ವಸತಿ) ಮಸೂದೆ 2018 ( Trafficking of Persons (Prevention, Protection & Rehabilitation Bill, 2018) ಯನ್ನು ಸಂಸತ್ತಿನಲ್ಲಿ ಪಾಸುಮಾಡಲಾಯಿತು.

ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಮೂರನೇ ಅತಿ ದೊಡ್ಡ ಸಂಘಟಿತ ಅಪರಾಧವೆಂದರೆ ಮಾನವ ಕಳ್ಳಸಾಗಣೆ. ಈ ಅಪರಾಧವನ್ನು ತಡೆಯಲು ಇದುವರೆಗೂ ಯಾವುದೇ ನಿರ್ದಿಷ್ಟ ಕಾನೂನು ಇಲ್ಲ.

Human Trafficking ನಿಷೇಧಿಸುವ ಸಂವಿಧಾನದ ವಿಧಿ - 23 (1) :
( ಶೋಷಣೆಯ ವಿರುದ್ಧ ಹಕ್ಕು (ವಿಧಿ 23-24):
• 23ನೇ ವಿಧಿಯು ಸ್ತೀಯರನ್ನು ಅನೈತಿಕ ಕೆಲಸಗಳಿಗೆ ಉಪಯೋಗಿಸುವದು, ಒತ್ತಾಯದ ದುಡುಮೆ, ಹೆಣ್ಣುಮಕ್ಕಳ ಮಾರಾಟ, ನಿಷೇಧಿಸಿದೆ.
• 24ನೇ ವಿಧಿಯು, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಅಪಾಯಕಾರಿ ಕಾರ್ಖಾನೆಗಳಲ್ಲಿ ನಿಷೇಧಿಸಲಾಗಿದೆ.)
• ಆದರೆ ಸಂವಿಧಾನದಲ್ಲಿ ಇದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ವ್ಯಾಖ್ಯಾನ ಹೊಂದಿಲ್ಲ.

ಇದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ವ್ಯಾಖ್ಯಾನವನ್ನು ಮೊದಲಬಾರಿಗೆ UN Protocol on  Trafficking ನಿಂದ ಆಯ್ದು 2013ರ criminal law (ತಿದ್ದುಪಡಿ) ಕಾಯಿದೆಯಲ್ಲಿ ವಿವರಿಸಲಾಗಿರುತ್ತದೆ. ವಿಶೇಷವೆಂದರೆ ಈ ಕಾಯಿದೆಯು "ಬಲವಂತದ ದುಡಿಮೆ (Forced Labour) ಯನ್ನೊಳಗೊಂಡಿಲ್ಲ! .
• POSCO Act ಕೂಡಾ ಇದಕ್ಕೆ ಸಂಬಂಧಿಸಿದ್ದಾಗಿದೆ.
ಮಾನವ ಕಳ್ಳ ಸಾಗಣೆಯ ಕುರಿತು ಅತೀ ಹೆಚ್ಚು case report ಆಗಿದ್ದು ಪ.ಬಂಗಾಳದಿಂದ
• ಇದಕ್ಕೆ ಸಂಬಂಧಪಟ್ಟಂತೆ 2003 UN Protocol on Trafficking ಎಂಬ ಅಂತರರಾಷ್ಟ್ರೀಯ ಒಪ್ಪಂದಕ್ಕೆ ಕರಾರು ಬದ್ದವಾಗಿರುವುದು.
• ಪಲೆಮೊ ಪ್ರೋಟೋಕಾಲ್ (Palemo Protocol) ಇದು ಮಕ್ಕಳ ಕಳ್ಳಸಾಗಣೆ ವಿರುದ್ಧ ರಕ್ಷಣೆ ನೀಡುವ ಒಂದು ಅಂತರರಾಷ್ಟ್ರೀಯ ಶಿಷ್ಟಾಚಾರವಾಗಿದೆ. ಆದರೆ ಇದನ್ನು ಅನುಷ್ಠಾನಗೊಳಿಸುವಲ್ಲಿ ಭಾರತ ವಿಫಲವಾಗಿದೆ.



●.ಇತ್ತೀಚೆಗೆ ಅನುಮೋದಿಸಲ್ಪಟ್ಟ ಮಸೂದೆಯು (ಈ ಮಸೂದೆಯ ಪ್ರಮುಖ ಅಂಶಗಳು ಹೀಗಿವೆ) — 
 
• ಮುಖ್ಯವಾಗಿ ಮಕ್ಕಳು ಹಾಗೂ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಕಠಿಣ ನಿಯಮಗಳನ್ನು ಇದು ಒಳಗೊಂಡಿದೆ.
• ಈ ಮಸೂದೆಯು ಮಾನವ ಕಳ್ಳಸಾಗಣೆಯನ್ನು ಹತ್ತಿಕ್ಕುವ ವಿಚಾರದಲ್ಲಿ ದಕ್ಷಿಣ ಏಷ್ಯಾ ದೇಶಗಳಲ್ಲಿ ಭಾರತವನ್ನು ಮುಂಚೂಣಿಯಲ್ಲಿರಿಸಿದೆ. ಮಾನವ ಕಳ್ಳಸಾಗಣೆಯು ಜಾಗತಿಕ ಸಮಸ್ಯೆಯಾದರೂ ದಕ್ಷಿಣ ಏಷ್ಯಾದಲ್ಲಿ ಭಾರಿ ಪ್ರಮಾಣದಲ್ಲಿ ನಡೆಯುತ್ತಿದೆ.
•  ಮಾನವ ಕಳ್ಳಸಾಗಣೆ ಕುರಿತ investigation ಸಂಬಂಧಪಟ್ಟ ಅಧಿಕಾರಗಳನ್ನು ದೇಶದ National Investigation Agency (NIA) ಗೆ ಕೊಟ್ಟಿದೆ.
• ಈ ಅಪರಾಧವನ್ನು ಪುನರಾವರ್ತಿಸುವ ಅಪರಾಧಿಗಳಿಗೆ— ಜೀವಾವಧಿ (life imprisonment) ಶಿಕ್ಷೆ, ಕುಮ್ಮಕ್ಕು ನೀಡುವ, ಪ್ರಚೋದಿಸುವ ಹಾಗೂ ಸಹಾಯಮಾಡುವ - ಭಾಗಿದಾರರಿಗೆ 3ವರ್ಷ ಜೈಲು ಶಿಕ್ಷೆ.
• ತನಿಖೆಗೊಳಪಟ್ಟು victims ಗೆ 30 ದಿನಗಳೊಳಗಾಗಿ interim relief ಹಾಗೂ chargesheet ತಯಾರಿಸಿದ 60 ದಿನಗಳೊಳಗಾಗಿ ಸಂಪೂರ್ಣ relief.
• ಇದಕ್ಕಾಗಿ ಒಂದು ರಾಷ್ಟ್ರೀಯ anti-trafficking relief & rehabilitation committee ರಚನೆಗೆ ಶಿಫಾರಸು. ಈ ಕಮಿಟಿಯು WCD Ministry ಯ ಸೆಕ್ರೆಟರಿಯನ್ನ ಮುಖ್ಯಸ್ಥನಾಗಿ ಹೊಂದಿರುವುದು.
• begging ಭಿಕ್ಷೆ ಬೇಡಲು ಹಚ್ಚುವ ಸಲುವಾಗಿ ಮಾಡಲಾದ ಮಾನವ ಕಳ್ಳಸಾಗಣೆಯು ಅತಿ ಹೆಚ್ಚು ಹದಗೆಡುವ, ಉಲ್ಬಣಗೊಳ್ಳಬಹುದಾದ ಅಪರಾಧ ( graver offense than other human trafficking! )ವೆಂದು ಪರಿಗಣಿಸಲಾಗಿದೆ.
 • ದೇಶದೊಳಗೆ ಅಕ್ರಮ ವಲಸೆಗಾಗಿ ಆಗಲಿ ಇಲ್ಲವೆ ಇತರೇ ವಿದೇಶಗಳಿಗೆ ದೇಶದಿಂದ ಅಕ್ರಮವಾಗಿ ಸಾಗುವುದಾಗಲಿ ಮಾಡುವ ಹಾಗೂ ಈ ಕೃತ್ಯಕ್ಕೆ ಪ್ರಚೋದಿಸುವ ವ್ಯಕ್ತಿಗೆ ಅಪರಾಧಿಯಾಗಿ ಪರಿಗಣಿಸಿ 10ವರ್ಷ ಜೈಲುಶಿಕ್ಷೆಗೊಳಪಡಿಸಬಹುದಾಗಿದೆ.
• ಈ ಕಾರ್ಯಕ್ಕಾಗಿ ಬಳಸಲಾಗುವ ಕಟ್ಟಡ, ಆಸ್ತಿ-ಪಾಸ್ತಿ, factories, premises ಗಳನ್ನು "to be used" a "Place of trafficking" ಎಂದು ಪರಿಗಣಿಸಿ ಈ ಮಸೂದೆಯ ಕಾಯ್ದೆಯನ್ವಯ ನಿರ್ಭಂಧಿಸಿ  ಮುಟ್ಟುಗೋಲು ಹಾಕಲಾಗುವುದು.


●.Nodal Authority —
 
• ಮಾನವ ಕಳ್ಳಸಾಗಣೆ ಕುರಿತ investigation ಸಂಬಂಧಪಟ್ಟ ಅಧಿಕಾರಗಳನ್ನು ದೇಶದ National Investigation Agency (NIA) ಗೆ ಕೊಟ್ಟಿದೆ.
• ಇದು Nodal Authority ಹಾಗು anti-trafficking bureau ಆಗಿ (ಅಂತರಾಷ್ಟ್ರೀಯವಾಗಿಯೂ ಭಾಗಿ) ಕಾರ್ಯ ನಿರ್ವಹಣೆ.
• ಮಾನವ ಕಳ್ಳಸಾಗಣೆ ಕುರಿತ (investigation) ತನಿಖೆಗೆ ನಿರ್ಭಯಾ ಫಂಡ್ ಕೊಡುತ್ತದೆ. 

 

ಪುನರ್ ಅವಲೋಕನಕ್ಕಾಗಿ —
 
●.ಮಾನವ ಸಾಗಣೆ (ತಡೆ, ಸಂರಕ್ಷಣೆ ಮತ್ತು ಪುನರ್ವಸತಿ) ಮಸೂದೆ 2018ಯ ವಿವಿಧ ಸ್ವರೂಪಗಳು
(Trafficking of Persons (Prevention, Protection and Rehabilitation) Bill 2018)


* ಮಾನವ ಕಳ್ಳಸಾಗಣೆಯನ್ನು ತಡೆಯುವ, ರಕ್ಷಿಸುವ ಹಾಗೂ ಅವರಿಗೆ ಪುನರ್ವಸತಿ ಕಲ್ಪಿಸುವ ದೃಷ್ಟಿಕೋನದಿಂದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದು.

* ಬಲವಂತದ ಕೂಲಿ ಉದ್ದೇಶದ ಸಾಗಣೆ, ಭಿಕ್ಷಾಟನೆ ಉದ್ದೇಶದ ಸಾಗಣೆ, ಮುಂಚಿನ ಲೈಂಗಿಕ ಪ್ರಬುದ್ಧತೆ ಮೂಡಿಸುವ ಉದ್ದೇಶದಿಂದ ವ್ಯಕ್ತಿಯ ಮೇಲೆ ರಾಸಾಯನಿಕ ಅಂಶಗಳು ಅಥವಾ ಹಾರ್ಮೋನುಗಳನ್ನು ಬಳಸುವ ಉದ್ದೇಶದ ಕಳ್ಳಸಾಗಣೆ, ಮದುವೆ ಉದ್ದೇಶದಿಂದ ಮಹಿಳೆ ಅಥವಾ ಮಗುವನ್ನು ಅಥವಾ ಮದುವೆ ನೆಪವೊಡ್ಡಿ ಅಥವಾ ಮದುವೆ ಬಳಿಕ ಕಳ್ಳಸಾಗಣೆ ಮಾಡುವ ಮಾನವ ಕಳ್ಳಸಾಗಣೆಯ ವಿವಿಧ ಸ್ವರೂಪಗಳನ್ನು ನಿಯಂತ್ರಿಸುವುದು.

* ಮಾನವ ಕಳ್ಳಸಾಗಣೆಗೆ ಕುಮ್ಮಕ್ಕು ನೀಡುವ ಯಾವುದೇ ಅಂಶಕ್ಕೆ ಶಿಕ್ಷೆ ನೀಡುವುದು. ಇದರಲ್ಲಿ ಮಾಹಿತಿಗಳ ಮುದ್ರಣ, ನಕಲಿ ಪ್ರಮಾಣಪತ್ರ ಸಿದ್ಧಪಡಿಸುವುದು, ಸರ್ಕಾರಿ ಅಗತ್ಯತೆಗಳನ್ನು ಒಳಗೊಂಡ ಪುರಾವೆಗಳಾಗಿ ನೋಂದಣಿ ಅಥವಾ ಸ್ಟಿಕ್ಕರ್‌ಗಳನ್ನು ಬಳಸುವುದು ಅಥವಾ ಸರ್ಕಾರಿ ಸಂಸ್ಥೆಗಳಿಂದ ಅನುಮತಿ ಹಾಗೂ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಲು ಸುಳ್ಳು ಮಾಹಿತಿಗಳನ್ನು ನೀಡುವುದು ಮುಂತಾದವು ಒಳಗೊಂಡಿವೆ.
ಸಂತ್ರಸ್ತರ ಗೋಪ್ಯತೆ ಕಾಪಾಡುವುದು

* ಸಂತ್ರಸ್ತರು/ಸಾಕ್ಷಿದಾರರು ಹಾಗೂ ದೂರುದಾರರ ಮಾಹಿತಿಯನ್ನು ಬಹಿರಂಗಪಡಿಸದೆ ಗೋಪ್ಯತೆ ಕಾಪಾಡುವುದು. ಸಂತ್ರಸ್ತರ ಹೇಳಿಕೆಯನ್ನು ವಿಡಿಯೋ ದಾಖಲೀಕರಣ ಮಾಡುವಾಗ ಅವರ ವೈಯಕ್ತಿಕ ಮಾಹಿತಿ ಗೋಪ್ಯತೆ ಕಾಪಾಡುವುದು.

* ಸಂತ್ರಸ್ತರ ವಿಚಾರಣೆ ಹಾಗೂ ಮರಳಿಸುವಿಕೆಗೆ ಕಾಲಮಿತಿ. ಪ್ರಕರಣವನ್ನು ಆದ್ಯತೆ ಮೇರೆಗೆ ಒಂದು ವರ್ಷದ ಅವಧಿಯೊಳಗೆ ವಿಚಾರಣೆ ಮುಗಿಸಬೇಕು.

* ಸಂತ್ರಸ್ತರನ್ನು ರಕ್ಷಿಸಿದ ಕೂಡಲೇ ಅವರಿಗೆ ಸೂಕ್ತ ಭದ್ರತೆ ಹಾಗೂ ಪುನರ್ವಸತಿ ಕಲ್ಪಿಸಬೇಕು. ಸಂತ್ರಸ್ತರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ತಪಾಸಣೆಗೆ ಅನುಕೂಲವಾಗುವಂತೆ 30 ದಿನಗಳ ಒಳಗೆ ತಕ್ಷಣ ಮಧ್ಯಂತರ ಪರಿಹಾರ ನೀಡಬೇಕು. ಮತ್ತು ದೋಷಾರೋಪ ಸಿದ್ಧಪಡಿಸಿದ 60 ದಿನಗಳ ಒಳಗೆ ಸೂಕ್ತ ಪರಿಹಾರ ಒದಗಿಸಬೇಕು.

* ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದು ಆರೋಪಿ ಮೇಲೆ ನಡೆಯುವ ಅಪರಾಧ ತನಿಖೆ ಅಥವಾ ಅದರ ಫಲಿತಾಂಶದ ಮೇಲೆ ನಿಶ್ಚಯವಾಗಬಾರದು.

* ಮೊದಲ ಬಾರಿಗೆ ಪುನರ್ವಸತಿ ನಿಧಿ ಸ್ಥಾಪಿಸುವುದು. ಇದನ್ನು ಸಂತ್ರಸ್ತರ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಒಳಿತಿನ ದೃಷ್ಟಿಯಿಂದ ಬಳಸುವುದು. ಇದರಲ್ಲಿ ಅವರ ಶಿಕ್ಷಣ, ಕೌಶಲ ಅಭಿವೃದ್ಧಿ, ಆರೋಗ್ಯ/ಮಾನಸಿಕ ನೆರವು, ಕಾನೂನು ನೆರವು ಮತ್ತು ಸುರಕ್ಷಿತ ವಸತಿ ಒದಗಿಸಲು ಬಳಸುವುದು.

* ಇಂತಹ ಪ್ರಕರಣಗಳ ತ್ವರಿತ ವಿಚಾರಣೆಗೆ ಪ್ರತಿ ಜಿಲ್ಲೆಯಲ್ಲಿಯೂ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದು

* ಜಿಲ್ಲೆ, ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಮಾನವ ಕಳ್ಳಸಾಗಣೆ ಪ್ರಕರಣದ ಕುರಿತು ಕ್ರಮ ತೆಗೆದುಕೊಳ್ಳಲು ಸಂಸ್ಥೆಗಳನ್ನು ಸ್ಥಾಪಿಸುವುದು.
ಇವು ಮಾನವ ಕಳ್ಳಸಾಗಣೆಯ ತಡೆ, ರಕ್ಷಣೆ ತನಿಖೆ ಹಾಗೂ ಪುನರ್ವಸತಿ ಕೆಲಸಗಳ ಹೊಣೆಗಾರಿಕೆ ನಿಭಾಯಿಸಬೇಕು. ರಾಷ್ಟ್ರೀಯ ತನಿಖಾ ಸಂಸ್ಥೆಯು ರಾಷ್ಟ್ರಮಟ್ಟದಲ್ಲಿ ಗೃಹಸಚಿವಾಲಯದ ಅಡಿಯಲ್ಲಿ ಮಾನವ ಕಳ್ಳಸಾಗಣೆ ನಿಗ್ರಹ ತಂಡವಾಗಿ ಕೆಲಸ ಮಾಡಲಿದೆ.

* ಕನಿಷ್ಠ 10 ವರ್ಷ ಜೈಲುವಾಸದಿಂದ 1 ಲಕ್ಷ ರೂ.ಗೆ ಕಡಿಮೆ ಇಲ್ಲದ ದಂಡ ವಿಧಿಸುವಂತಹ ಕಠಿಣ ಶಿಕ್ಷೆಗಳನ್ನು ನೀಡುವುದು.

* ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ರಚನಾತ್ಮಕ ಸಂಪರ್ಕವನ್ನು ಕಡಿತಗೊಳಿಸುವುದು, ಅಪರಾಧಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು.

* ಮಾನವ ಕಳ್ಳಸಾಗಣೆ ನಿಗ್ರಹ ದಳವು ಅಂತರ್‌ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹೊಣೆಗಾರಿಕೆಯನ್ನು ಸಹ ನಿಭಾಯಿಸಬೇಕು. ವಿದೇಶಿ ಅಧಿಕಾರಿಗಳು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳ ಜತೆ ಸಂವಹನ ನಡೆಸುವ ಕಾರ್ಯವನ್ನು ಮಾಡಲಿದೆ.

ಜತೆಗೆ ತನಿಖೆಗೆ ಅಂತಾರಾಷ್ಟ್ರೀಯ ನೆರವು, ಅಂತರ್‌ರಾಜ್ಯ ಹಾಗೂ ಗಡಿಯಾಚೆಗಿನ ಪುರಾವೆ ಮತ್ತು ವಸ್ತುಗಳ ಹಸ್ತಾಂತರ, ಸಾಕ್ಷಿದಾರರು ಹಾಗೂ ಇನ್ನಿತರೆ ನೆರವುಗಳನ್ನು ಅದು ಪಡೆದುಕೊಳ್ಳುವ ಕೆಲಸ ಮಾಡಲಿದೆ. ಜತೆಗೆ ನ್ಯಾಯಾಂಗ ಕಲಾಪಗಳ ಅಂತರ್‌ ರಾಜ್ಯ ಹಾಗೂ ಅಂತಾರಾಷ್ಟ್ರೀಯ ವಿಡಿಯೋ ಪ್ರಸಾರದ ಚಟುವಟಿಕೆ ನಿಭಾಯಿಸಲಿದೆ.

***





No comments:

Post a Comment