•► "ಭಾರತದ ಸಂವಿಧಾನದಲ್ಲಿ 'ವಿಪ್'ನ ಪಾತ್ರ" :
(The Role of Whip in Indian Constitution)
━━━━━━━━━━━━━━━━━━━━━
★ ಭಾರತದ ಸಂವಿಧಾನ
(Indian Constitution)
★ ಪತ್ರಿಕೆ-3 ಸಾಮಾನ್ಯ ಅಧ್ಯಯನ-2
(Paper-3 General Studies-2)
• ವಿಪ್ ಎಂಬುದು ಪಕ್ಷಗಳು ತಮ್ಮ ಜನಪ್ರತಿನಿಧಿಗಳಿಗೆ ನೀಡುವ ಸೂಚನೆಯಾಗಿದೆ. ರಾಜ್ಯಸಭಾ ಚುನಾವಣೆ, ಪರಿಷತ್ ಚುನಾವಣೆ, ಅವಿಶ್ವಾಸ ನಿರ್ಣಯ ಮೊದಲಾದ ಸಂದರ್ಭಗಳಲ್ಲಿ ಮತದಾನ ಪ್ರಕ್ರಿಯೆಯನ್ನು ಪಾಲ್ಗೊಳ್ಳಲು ತಮ್ಮ ಜನಪ್ರತಿನಿಧಿಗಳಿಗೆ ಪಕ್ಷಗಳು ವಿಪ್ ಜಾರಿ ಮಾಡುತ್ತವೆ.
• ಯಾವುದೇ ಒಂದು ಪಕ್ಷ ತನ್ನ ಶಿಸ್ತನ್ನು ಕಾಪಾಡಿಕೊಳ್ಳಲು ವಿಪ್ ಅನ್ನು ಅಸ್ತ್ರದಂತೆ ಬಳಸುತ್ತದೆ. ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಲು, ಪಕ್ಷದ ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲು ವಿಪ್ ಮೂಲಕ ಪಕ್ಷದ ಶಾಸಕರಿಗೆ ಸೂಚಿಸಲಾಗುತ್ತದೆ.
• ಪಕ್ಷದ ಮುಖ್ಯ ಸಚೇತಕರು ವಿಪ್ ಜಾರಿಗೊಳಿಸಿ ಆದೇಶ ಹೊರಡಿಸುತ್ತಾರೆ. ವಿಪ್ ಜಾರಿಯಾದ ನಂತರ ಅದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರವನ್ನು ಪಕ್ಷ ಹೊಂದಿರುತ್ತದೆ.
• ಪಕ್ಷದ 'ಬಿ' ಫಾರಂ ಪಡೆದು ಪಕ್ಷದ ಚಿಹ್ನೆಯಡಿ ಶಾಸಕ ಅಥವಾ ಸಂಸದರಾಗಿ ಆಯ್ಕೆಯಾದವರು ಇದನ್ನು ಪಾಲಿಸಬೇಕು. ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯಿದೆಯಡಿ ಸದಸ್ಯತ್ವದಿಂದ ಅನರ್ಹಗೊಳ್ಳುತ್ತಾರೆ.
★ ವಿಪ್‌ನಲ್ಲಿ ಮೂರು ವಿಧಗಳು :
ಸಿಂಗಲ್ ಲೈನ್/ ಒನ್‌ಲೈನ್, ಡಬಲ್ ಲೈನ್ ಮತ್ತು ಥ್ರೀ ಲೈನ್ ವಿಪ್
• ಒನ್‌ಲೈನ್ ವಿಪ್: ವಿಶ್ವಾಸ ಮತ ಸಂದರ್ಭದಲ್ಲಿ ಸರಕಾರದ ಪರ ಹಾಗೂ ಪಕ್ಷದ ಆದೇಶ ಪಾಲನೆಗೆ ನೀಡುವ ವಿಪ್ ಅನ್ನು ಒನ್‌ಲೈನ್ ವಿಪ್ ಎಂದು ಕರೆಯಲಾಗುತ್ತದೆ.
• ಟೂ ಲೈನ್ ವಿಪ್: ಬಜೆಟ್ ಅಥವಾ ಪ್ರಮುಖ ವಿಧೇಯಕ ಮಂಡನೆ ಮತ್ತು ಅನುಮೋದನೆ ಸಮಯದಲ್ಲಿ ಜಾರಿ ಮಾಡಲಾಗುವ ವಿಪ್ ಅನ್ನು ಟೂ ಲೈನ್ ವಿಪ್ ಎಂದು ಕರೆಯಲಾಗುತ್ತದೆ.
• ತ್ರೀ ಲೈನ್ ವಿಪ್: ಅಧಿವೇಶನದಲ್ಲಿ ಹಾಜರಾತಿ, ವಿತ್ತೀಯ ಕಾರ‍್ಯಕಲಾಪದಲ್ಲಿ ಪಾಲ್ಗೊಳ್ಳುವಿಕೆ, ಬಜೆಟ್, ಅನುಮೋದನೆ ಸಂದರ್ಭದಲ್ಲಿ ಸರಕಾರದ ಪರ ಮತ ಚಲಾಯಿಸುವಿಕೆಗೆ ನೀಡುವ ವಿಪ್.
★ ವಿಪ್ ಕುರಿತು ಮಹತ್ವದ ವಿಷಯಗಳು:
• ಸಿಂಗಲ್ ಲೈನ್ ವಿಪ್‌ನಲ್ಲಿ ಮತದಾನದ ದಿನಾಂಕ ಮೊದಲಾದ ವಿವರವನ್ನು ನೋಟೀಸ್ ಮೂಲಕ ನೀಡಲಾಗುತ್ತದೆ. ಇದರಲ್ಲಿ ಜನಪ್ರತಿನಿಧಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವೇನೂ ಇರುವುದಿಲ್ಲ.
• ಡಬಲ್ ಲೈನ್ ವಿಪ್‌ನಲ್ಲಿ ಮತದಾನ ಮಾಡಲು ಪಕ್ಷವು ಸ್ವಲ್ಪಮಟ್ಟಿಗೆ ಕಡ್ಡಾಯ ಮಾಡಿರುತ್ತದೆ. ಸರಿಯಾದ ಕಾರಣ ಕೊಟ್ಟು ಮತದಾನದಿಂದ ದೂರು ಉಳಿಯುವ ಸ್ವಾತಂತ್ರ್ಯವನ್ನ ಕೊಟ್ಟಿರಲಾಗುತ್ತದೆ.
ಇನ್ನು, ಮೂರನೇಯದಾದ ಥ್ರೀಲೈನ್ ವಿಪ್‌ನಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟಿರಲಾಗುತ್ತದೆ.
• ಥ್ರೀಲೈನ್ ವಿಪ್ ಪಡೆದವರು ಮತದಾನ ಮಾಡಲಿಲ್ಲವೆಂದರೆ ಪಕ್ಷದಿಂದಲೇ ಅಮಾನತಾಗುವ ಸಾಧ್ಯತೆ ಇರುತ್ತದೆ. ಪಕ್ಷಗಳು ಕೊಡುವ ವಿಪ್ ಸಾಮಾನ್ಯವಾಗಿ ಥ್ರೀ ಲೈನ್ ವಿಪ್ ಆಗಿರುತ್ತದೆ.
- ಕಾಯಿದೆ ಪ್ರಕಾರ ಯಾವುದೇ ಶಾಸಕ, ಸಂಸದ ತನ್ನ ಪಕ್ಷದ ವಿಪ್ ಉಲ್ಲಂಘಿಸಿ ಮತ ಚಲಾಯಿಸಿದ ಬಳಿಕವಷ್ಟೇ ಸ್ಪೀಕರ್ ಕ್ರಮ ಕೈಗೊಳ್ಳಬಹುದು.
★ ವಿಪ್ ಯಾವಾಗ ಪ್ರಯೋಗಿಸಬಹುದು?
- ಇದು ಯಾವ ಸದಸ್ಯರು, ಶಾಸಕರ ಮೇಲೆ ವಿಶ್ವಾಸ ಇರೋದಿಲ್ವೋ, ಪಕ್ಷದ ವಿರುದ್ಧವಾಗಿ ಕೆಲಸ ಮಾಡ್ತಿದ್ದಾರೆ ಅಂತಾ ಕಂಡುಬರುತ್ತೋ, ಅಂತಹ ಟೈಮ್‌ನಲ್ಲಿ ವಿಪ್ ಜಾರಿ ಮಾಡಲಾಗುತ್ತದೆ. ಪಕ್ಷಾಂತರ ಕಾಯಿದೆ ಅಡಿ ಅವರ ಸದಸ್ಯತ್ವ ರದ್ದಾದರೆ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲಲು ಬರುವುದಿಲ್ಲ.

No comments:
Post a Comment