"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 28 February 2017

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ : ಪತ್ರಿಕೇ-2: ಸಾಮಾನ್ಯ ಅಧ್ಯಯನಗಳು-1 (PART -VI) ( KAS Mains General Studies Paper II Syllabus)

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ :  ಪತ್ರಿಕೇ-2: ಸಾಮಾನ್ಯ ಅಧ್ಯಯನಗಳು-1  (PART -VI)
( KAS Mains General Studies Paper II Syllabus)
•─━━━━━═══════════━━━━━─••─━━━━━═══════════━━━━━─•

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)

★ ಕೆಎಎಸ್ ಸಾಮಾನ್ಯ ಅಧ್ಯಯನ
(KAS General Studies)


... ಮುಂದುವರೆದ ಭಾಗ.


●. ಪತ್ರಿಕೇ-2:      ಸಾಮಾನ್ಯ ಅಧ್ಯಯನಗಳು-1

●. ವಿಭಾಗ-1:
ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆ (ಭಾರತದ ಮತ್ತು ಕರ್ನಾಟಕ) – (ಆರು ಘಟಕಗಳು)


ಘಟಕ-1: ಭಾರತದ ಸಾಂಸ್ಕೃತಿಕ ಪರಂಪರೆ (ಅಯ್ದ ಕ್ಷೇತ್ರ ಮತ್ತು ವಿಷಯಗಳು)
(1) ಸಿಂಧೂ ನಾಗರೀಕತೆ - ಸಿಂಧೂ ನಾಗರೀಕತೆ ಮತ್ತು ವೇದಕಾಲಿನ ನಾಗರೀಕತೆ ನಡುವಿನ ವೈಶಿಷ್ಟ್ಯತೆ – ವರ್ಣ, ಜಾತಿ/ಜಾತಿ ವ್ಯವಸ್ಥೆಯ ವಿಕಾಸ ಧಾರ್ಮಿಕ ಸ್ಥಿತಿ-ಧಾರ್ಮಿಕ ಚಳುವಳಿಗಳ ಉಗಮ.

(2) ಸಾಹಿತ್ಯ: ಸಂಸ್ಕೃತ ಸಾಹಿತ್ಯ (ಪ್ರಾಚೀನ); ವೇದಕಾಲೀನ ಸಾಹಿತ್ಯ, ಮಹಾಕಾವ್ಯಗಳು ಮತ್ತು ಪುರಾಣಗಳು: ಭಾರತೀಯ ಜನ ಜೀವನ ಹಾಗೂ ಸಂಸ್ಕೃತಿಯ ಮೇಲೆ ಅದರ ಪ್ರಭಾವ; ರಾಜ್ಯಾಡಳಿತದಲ್ಲಿ ಗದ್ಯಕೃತಿಗಳ ರಚನೆಗಳು, ನೀತಿಶಾಸ್ತ್ರ, (ನೀತಿ), ಜನಪ್ರಿಯ ಮತ್ತು ಪಂಚತಂತ್ರ ಕಥೆಗಳು (ಪ್ರಮುಖ ಕೃತಿಗಳ ರಚನೆಗಳು ಮಾತ್ರ); ಸಾಹಿತ್ಯಕ್ಕೆ ಮೊಗಲರ ಕೊಡುಗೆಗಳು.

(3) ವಿಜ್ಞಾನ ಮತ್ತು ತಂತ್ರಜ್ಞಾನ: ಗಣಿತಶಾಸ್ತ್ರ, ಖಗೋಳ ಶಾಸ್ತ್ರ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಶರೀರ ಶಾಸ್ತ್ರ ಮತ್ತು ಔಷಧ ಶಾಸ್ತ್ರ (ಸರ್ಜರಿಯನ್ನು ಒಳಗೊಂಡು) ನೌಕಾ ನಿರ್ಮಾಣ, ಗಣಿಗಾರಿಕೆ ಮತ್ತು ಲೋಹಶಾಸ್ತ್ರ, ಎಂಜಿನೀಯರಿಂಗ್ ಮತ್ತು ವಾಸ್ತುಶಿಲ್ಪ.

(4) ಕಲೆಗಳು (ಕರ್ನಾಟಕವನ್ನು ಹೊರತುಪಡಿಸಿ): ಮೌರ್ಯರ ಮತ್ತು ಗುಪ್ತರ ಕಾಲಗಳು, ಖಜುರಾಹೋ ದೇವಾಲಯಗಳು; ಮೌಂಟ್ ಅಬುವಿನ ಜೈನ ದೇವಾಲಯಗಳು ಮತ್ತು ಒಡಿಸಿಯಾದ ದೇವಾಲಯಗಳು; ಪಲ್ಲವ, ಜೋಳ ಮತ್ತು ಪಾಂಡ್ಯರ ಕೊಡುಗೆಗಳು, ಮೊಗಲರ ವಾಸ್ತುಶಿಲ್ಪ; ಕ್ಯಾಥೆಡ್ರಾಲ್ ವಾಸ್ತುಶಿಲ್ಪ; ಬೋಮ್ ಜೀಸಸ್ - ಹಳೆಯ ಗೋವಾ, ಸೇಂಟ್ ಪಾಲ್ಸ್ – ಕೋಲ್ಕತ್ತಾ ಸೇಂಟ್ ಧಾಮಸ್-ಚೆನ್ನೈ, ಚಿತ್ರಕಲೆ: ಅಜಂತಾದ ಚಿತ್ರಾಲಂಕಾರಗಳು; ಮೊಗಲರ ಮತ್ತು ರಜಪೂತರ ಕಾಲದ ಚಿತ್ರಕಲೆ. ನೃತ್ಯ ಮತ್ತು ಸಂಗೀತ: ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಮೊಗಲರ ಕೊಡುಗೆಗಳು. ಭಾರತದ ಜನಪದ ಕಲೆಗಳು.

(5) ಬಾಹ್ಯ ಜಗತ್ತಿಗೆ ಭಾರತದ ಸಂಸ್ಕೃತಿಯ ಕೊಡುಗೆ: ಕೇಂದ್ರ ಏಷ್ಯಾ, ಚೀನಾ, ಜಪಾನ್, ಅಗ್ನೇಯಾ ಏಷ್ಯಾ ಮತ್ತು ಶ್ರೀಲಂಕಾ.

(6) ಭಾರತದ ಧರ್ಮಗಳು:-
(1)ಹಿಂದೂ ಧರ್ಮ: ಸಾಮಾನ್ಯ ವೈಶಿಷ್ಟ್ಯತೆಗಳು ಮತ್ತು ಕೆಲವು ಸಾಮಾನ್ಯ ನಂಬಿಕೆಗಳು - ಪುರುಷಾರ್ಥಗಳು – ಮತಾಚರಣೆಗಳು ಮತ್ತು ನೀತಿಶಾಸ್ತ್ರಗಳು - ಹಬ್ಬಗಳು ಮತ್ತು ಪವಿತ್ರ ದಿನಗಳು – ತೀರ್ಥಯಾತ್ರೆ ಮತ್ತು ಜಾತ್ರೆಗಳು, ಹಿಂದೂ ಪಂಥಗಳು: ವಿವಿಧ ಪಂಥಗಳಲ್ಲಿ ಸಂಯುಕ್ತವಾಗಿರುವಂಥ ಹಿಂದೂ ಧರ್ಮ, ಶೈವ, ವೈಷ್ಣವ ಮತ್ತು ಶಕ್ತ. ಉಪನಿಷತ್ ಮತ್ತು ಭಗವದ್ಗೀತೆಯ ತತ್ವ - ಪತಂಜಲಿಯ ಯೋಗತತ್ವ.

(2) ಜೈನ ಧರ್ಮ: ತತ್ವಗಳು – ರತ್ನಾತ್ರಯ, ನೀತಿ ಸಂಹಿತೆ, ಸಮಾನತೆ (ಸಮಾನ), ಅಹಿಂಸೆ, ಪಂಥಗಳು; ದಿಗಂಬರ ಮತ್ತು ಶ್ವೆತಾಂಬರ.

(3) ಬೌದ್ಧ ಧರ್ಮ: ತತ್ವಗಳು - ನಾಲ್ಕು ಮಹಾ ಸತ್ಯಗಳು, ಅಷ್ಟಾಂಗ ಮಾರ್ಗಗಳು, ನಿರ್ವಾಣ, ನೀತಿ ಸಿದ್ದಾಂಥಗಳು ಪಂಥಗಳು; ಹೀನಾಯಾನ ಮತ್ತು ಮಹಾಯಾನ.

(4) ಕ್ರಿಶ್ಚಿಯನ್ ಧರ್ಮ: ಯೇಸುಕ್ರಿಸ್ತನ ಬೋಧನೆಗಳು, ಕ್ರಶ್ಚಿಯನ್ನ ಉಪದೇಶಗಳು, ಸಿದ್ದಾಂಥಗಳು ಮತ್ತು ಧರ್ಮಶಾಸ್ತ್ರ, ಕ್ರಿಶ್ಚಿಯನ್ ಪಂಗಡಗಳು – ರೋಮನ್ ಕ್ಯಾಥೋಲಿಕ್ ಚರ್ಚ್ಗಳು, ಪೂರ್ವ ಸಾಂಪ್ರದಾಯಿಕ ಚರ್ಚ್ಗಳು ಮತ್ತು ಪ್ರೊಟೆಸ್ಟಂಟ್ಗಳ ಚರ್ಚುಗಳು, ಭಾರತದಲ್ಲಿ ಧರ್ಮ ಪ್ರಚಾರಕ ಚಟುವಟಿಕೆಗಳು.

(5) ಇಸ್ಲಾಂ ಧರ್ಮ: ತತ್ವಗಳು ಮತ್ತು ಆಚರಣೆಗಳು – ದೇವರು, ಧರ್ಮದ ಮೇಲಿನ ನಂಬಿಕೆ ಐದು “ಇಸ್ಲಾಂ ಧರ್ಮ ಕಂಬಗಳು”; ಪವಿತ್ರ ಸ್ಥಳಗಳು ಮತ್ತು ದಿನಗಳು, ಕುಟುಂಬ ವ್ಯವಸ್ಥೆ ಮತ್ತು ಷರಿಯಾ, ಕರ್ನಾಟಕದಲ್ಲಿ ಸೂಫಿಗಳು, ಪಂಥಗಳು: ಶಿಯಾ ಮತ್ತು ಸುನ್ನಿ.

(6) ಸಿಖ್ಖ್ ಧರ್ಮ: ತತ್ವಗಳು ಮತ್ತು ಆಚರಣೆಗಳು ಮತ್ತು ಇದರ ವಿಕಾಶ.


●. ಘಟಕ-2: ಪರಿವರ್ತನೆಯತ್ತ ಭಾರತೀಯ ಸಮಾಜ: ಚಿಂತನೆಯ ಪ್ರಮುಖ ಮಾರ್ಗಗಳು, ಆಧುನಿಕ ಭಾರತದ ಇತಿಹಾಸ – 19ನೇ ಶತಮಾನದ ಪ್ರಾರಂಭದಿಂದ; ಸುಧರಣೆಗಳು ಮತ್ತು ಸುಧಾರಕರು
1. ಸಾಮಾಜಿಕ ಮತ್ತು ಧರ್ಮಿಕ ದೋಷಗಳ ನಿರ್ಮೂಲನೆ
2. ಎಲ್ಲರಿಗಾಗಿ ವೇದಗಳು – ಜಾತ್ಯಾತೀತ ಸಮಾಜ
3. ಆದರ್ಶ ಸೇವೆ
4. ಶೋಷಿತ ಮಾರ್ಗದ ವಿಮೋಚನೆ
5. “ಎರಡು ರಾಷ್ಟ್ರದ” ಸಿದ್ಧಾಂತ ಮತ್ತು ಇಸ್ಲಾಮಿಕ್ ಧರ್ಮದ ಪುನರುಜೀವನ
6. ಧರ್ಮ ಮತ್ತು ಶಿಕ್ಷಣದ ಮೂಲಕ ಶೋಷಿತ ವರ್ಗದ ಸಬಲೀಕರಣ.
7. ಹಿಂದುತ್ವ ಮತ್ತು ದೇಶಭಕ್ತಿ
8. ದ್ರಾವಿಡ ಚಳುವಳಿ
9. ದಲಿತರ ವಿಮೋಚನೆಗಾಗಿ ಹೋರಾಟ ಮತ್ತು ಅವರ ಸಬಲೀಕರಣ
10. ಸಮಾಜವಾದಿ ಪ್ರಸ್ತಾವನೆ ಮತ್ತು ಸಂಪೂರ್ಣ ಕ್ರಾಂತಿ
11. ಗ್ರಾಮ ಸ್ವರಾಜ್, ಸತ್ಯಾಗ್ರಹ ಮತ್ತು ಭೋದಾನ


●. ಘಟಕ-3: ಕದಂಬ ರಿಂದ ಹೊಯ್ಸಳರ ವರೆಗೆ,
(1) ಕರ್ನಾಟಕದ ಪ್ರಾಚೀನತೆ: ಕನ್ನಡ ಭಾಷೆ ಮತ್ತು ಸಾಹಿತ್ಯ; ಕನ್ನಡ ನಾಡಿನ ವ್ಯಾಪ್ತಿ; ರಾಜ್ಯ ಮತ್ತು ಜಿಲ್ಲಾ ಗೆಜೆಟಿಯರುಗಳು; ಕರ್ನಾಟಕದ ವಸ್ತು ಸಂಗ್ರಹಾಲಯಗಳು ಮತ್ತು ಪ್ರಾಚೀನ ಪತ್ರಾಗಾರಗಲು; ಐತಿಹಾಸಿಕ ಸ್ವಾರಕಗಳ ಸಂರಕ್ಷಣೆ ಮತ್ತು ರಕ್ಷಣೆ - ಭಾರತೀಯ ಪುರಾತತ್ವ ಇಲಾಖೆ ಕೆಲಸಗಳು – ಕರ್ನಾಟಕದಲ್ಲಿ ವಿಶ್ವ ಪಾರಂಪರಿಕ ತಾಣಗಳು.

(2) ಕದಂಬರಿಂದ ಹೊಯ್ಸಳವರೆಗೆ: ವಾಸ್ತು ಶಿಲ್ಪ, ಶಿಲ್ಪ, ಸಾಹಿತ್ಯ ಮತ್ತು ಧರ್ಮಕ್ಕೆ ಇವರ ಕೊಡುಗೆಗಳು.


●. ಘಟಕ-4: ವಿಜಯನಗರ ಸಾಮ್ಯಾಜ್ಯ ಮತ್ತು ನಂತರದ ಕಾಲ (1336-1799):
(1) ವಿಜಯನಗರ ಸಾಮ್ರಾಜ್ಯ: ಸಾಮ್ರಾಜ್ಯದ ಉದಯ, ಉದ್ದೇಶಗಳು ಮತ್ತು ಮಹತ್ವಾಕಾಂಕ್ಷೆ – ವಿದ್ಯಾರಣ್ಯ ರಾಜಕೀಯ ಇತಿಹಾಸ, ಹರಿಹರ, ಬುಕ್ಕ, ಇಮ್ಮಡಿ ದೇವರಾಯ, ಕೃಷ್ಣದೇವರಾಯ ಮತ್ತು ಅಳಿಯ ರಾಮರಾಯ – ತಾಲೀಕೋಟಿ ಕದನ ಮತ್ತು ಅದರ ಪರಿಣಾಮಗಳು ರಾಜಧಾನಿಯ ವೈಭವ – ಆಡಳಿತ - ಸಮಾಜ, ಆರ್ಥಿಕತೆ ಮತ್ತು ಧಾರ್ಮಿಕತೆ; ಕಲೆಗಳು: ಚಿತ್ರಕಲೆ; ಸಂಗೀತ, ನೃತ್ಯ, ಸಾಹಿತ್ಯ, ವಾಸ್ತುಶಿಲ್ಪ ಮತ್ತು ಶಿಲ್ಪ; ವಿಜಯನಗರದ ವಿದೇಶಿಗರ ವಿವರಣೆ.
(2) ಧಾರ್ಮಿಕ ಪಂಥಗಳು: ಸಂಕರಚಾರ್ಯರು, ರಾಮಾನುಜಚಾರ್ಯ, ಮಧ್ವಾಚಾರ್ಯರು - ಶ್ರೀ ಬಸವೇಶ್ವರ, ವೀರಶೈವ ಮತ್ತು ವಚನ ಚಳುವಳಿ - ಹರಿದಾಸ ಚಳುವಳಿ - ಕಲಮುಖ ಶಕ್ತ ಮತ್ತು ಪಾಶುಪಥ ಪಂಥಗಳು.
 (3) ಬಹುಮನಿ ಷಾಹಿಗಳು: ಮಹಮದ್ ಗವಾನ್ - ಬಹಮನಿಯ ಕೊಡುಗೆಗಳು - ಬಿಜಾಪುರದ ಆದಿಲ್ ಷಾಹಿಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪಕ್ಕೆ ಕೊಡುಗೆಗಳು – ಕರ್ನಾಟಕದ ಸೂಫಿಗಳು.
(4) ಚಿಕ್ಕದೇವರಾಜ ಒಡೆಯರವರ ಕೊಡುಗೆಗಳು – ಕೆಳದಿ ಮತ್ತು ಚಿತ್ರದುರ್ಗದ ನಾಯಕರು; ಕಿತ್ತೂರಿನ ರಾಣಿಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ, ಯಲಹಂಕದ ನಾಡಪ್ರಭು; ಹೈದರಾಲಿ ಮತ್ತು ಟಿಪ್ಪು ಸುಲ್ತಾನ (1761-1799)


●. ಘಟಕ-5: ಆಧುನಿಕ ಮೈಸೂರು (1799-1947)
(1) ಕೃಷ್ಣರಾಜ ಒಡೆಯರ್-3 ಅವರ ಕೊಡುಗೆಗಳು
(2) ಕರ್ನಾಟಕದಲ್ಲಿ ಬ್ರಿಟಿಷರ ವಿರುದ್ಧ ಸಶಸ್ತ್ರ ದಂಗೆ
(3) ಕಮೀಷನರುಗಳ ಆಳ್ವಿಕೆ (1831-1881)
(4) ಹೈದರಾಬಾದ್ – ಕರ್ನಾಟಕದಲ್ಲಿ ನಿಜಾಮರ ಆಳ್ವಿಕೆ
(5) ದಿವಾನರ ಆಳ್ವಿಕೆಯಲ್ಲಿ ಮೈಸೂರು ಪ್ರಗತಿ.


●. ಘಟಕ-6: ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿ ಮತ್ತು ಏಕೀಕರಣ (1885-1956)
(1) ರಾಷ್ಟ್ರೀಯತೆಯ ಉದಯ: ಪೂರ್ವಗಾಂಧಿಯುಗ (1885-1920); ಗಾಂಧಿಯುಗ (1920-1948)
(2) ಹೈದರಾಬಾದ್ – ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿ
(3) ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ವ್ಯಕ್ತಿಗಳು
(4) ಕರ್ನಾಟಕ ಏಕೀಕರಣ; ಏಕೀಕರಣ ಚಳುವಳಿಯ ಉದಯಕ್ಕೆ ಕಾರಣಗಳು – ಆಲೂರು ವೆಂಕಟರಾವ್ - ಸಾಕ್ಷರತೆಯ ಪಾತ್ರ, ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಪತ್ರಿಕಾ ಮಾಧ್ಯಮ – ಕರ್ನಾಟಕ ಏಕೀಕರಣದ ಮೂರು ಹಂತಗಳು (1947-1956)
(5) ಸಾಮಜಿಕ ಮತ್ತು ಸಂಸ್ಕೃತಿಯ ಬೆಳವಣಿಗೆಗಳು; ಧರ್ಮ ಪ್ರಚಾರಕದಿಂದ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಂದ ಶಿಕ್ಷಣ ಪ್ರಸಾರ – ಮುದ್ರಣ ಮತ್ತು ಪತ್ರಿಕಾ - ಸಾಹಿತ್ಯ ಮತಯ್ತು ವಿದ್ವತ್ಪೂರ್ಣ ಅಧ್ಯಯನಗಳು – ಕನ್ನಡ ಸಾಹಿತ್ಯದಲ್ಲಿ ನವೀನ ಸಾಹಿತ್ಯ ಪ್ರಕಾರಗಳು - ಹಿಂದುಳಿದ ವರ್ಗದ ಚಳುವಳಿ - ಮಿಲ್ಲರ್ ಸಮಿತಿಯ ವರದಿ, ಕರ್ನಾಟಕದಲ್ಲಿ ಜಾನಪದ ಕಲೆಗಳು.

... ಮುಂದುವರೆಯುವುದು.

(ಕೃಪೆ : ಯುಸಿಸಿ ಬೆಂಗಳೂರು) 

Monday, 27 February 2017

☀.ಐಎಎಸ್ ಪ್ರಶ್ನೆಪತ್ರಿಕೆ 2016 (ಕನ್ನಡ ಭಾಷಾಂತರ) (IAS GENERAL STUDIES PAPER I 2016)

☀.ಐಎಎಸ್ ಪ್ರಶ್ನೆಪತ್ರಿಕೆ 2016 (ಕನ್ನಡ ಭಾಷಾಂತರ)
(IAS GENERAL STUDIES PAPER I 2016)
•─━━━━━═══════════━━━━━─••─━━━━━═══════════━━━━━─•

★ ಐಎಎಸ್ ಪ್ರಶ್ನೆಪತ್ರಿಕೆ 2016
(IAS Question Paper I 2016)


2016 ನೇ ಸಾಲಿನ ಯು.ಪಿ.ಎಸ್.ಸಿ. ನಡೆಸಿದ ಸಿವಿಲ್ ಸರ್ವಿಸ್ ಪರೀಕ್ಷೆ (ಐಎಎಸ್) ಯ ಪತ್ರಿಕೆ -1 ನ್ನು ಉತ್ತರಗಳೊಂದಿಗೆ ಕನ್ನಡಕ್ಕೆ ಭಾಷಾಂತರ ಮಾಡಿದ್ದು,  ಸ್ಪರ್ಧಾರ್ಥಿಗಳಿಗೆ ಸಹಾಯವಾಗಬಹುದೆಂಬ ನಂಬಿಕೆ ನನ್ನದು.



1. ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿ?
1. ಪರಿಶಿಷ್ಟ ಜಾತಿ, ಪಂಗಡ ಹಾಗೂ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವುದು ಇದರ ಮೂಲ ಉದ್ದೇಶ.
2. ಇದು ಎಸ್‍ಐಡಿಬಿಐ ಮೂಲಕ ಹಣಕಾಸು ನೆರವನ್ನು ನೀಡುತ್ತದೆ.
ಎ. ಹೇಳಿಕೆ 1 ಮಾತ್ರ
ಬಿ. ಹೇಳಿಕೆ 2 ಮಾತ್ರ
ಸಿ. ಹೇಳಿಕೆ 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಸಿ


2. ಎಫ್‍ಎಓ ಜಾಗತಿಕ ಮಹತ್ವದ ಕೃಷಿ ಪರಂಪರೆ ವ್ಯವಸ್ಥೆ (ಜಿಐಎಎಸ್‍ಎಚ್)ಗೆ ಚಾಲನೆ ನೀಡಿದೆ. ಇದರ ಉದ್ದೇಶ ಏನು?
1. ಆಧುನಿಕ ತಂತ್ರಜ್ಞಾನ, ಆಧುನಿಕ ಕೃಷಿ ತರಬೇತಿ ಮತ್ತು ಹಣಕಾಸು ನೆರವು ನೀಡಿ ಈ ಯೋಜನೆಯಡಿ ಆಯ್ಕೆ ಮಾಡಿದ ಫಲಾನುಭವಿಗಳಿಗೆ ಕೃಷಿ ಉತ್ಫಾದನೆ ಹೆಚ್ಚಿಸಲು ಉತ್ತೇಜನ ನಿಡುವುದು.
2. ಪರಿಸರ ಸ್ನೇಹಿ ಸಾಂಪ್ರದಾಯಿಕ ಕೃಷಿ ವಿಧಾನವನ್ನು ಉಳಿಸುವುದು/
3. ಎಲ್ಲ ಬಗೆಯ ಕೃಷಿ ಉತ್ಪನ್ನಗಳಿಗೆ ಭೌಗೋಳಿಕ ವೈಶಿಷ್ಟ್ಯ ಗುರುತಿಸುವಿಕೆ ಸ್ಥಾನಮಾನ ನೀಡುವುದು.
ಎ. 1 ಮತ್ತು 3
ಬಿ. 2 ಮಾತ್ರ
ಸಿ. 2 ಮತ್ತು 3
ಡಿ. 1,2,3

ಉ:


3, ಈ ಕೆಳಗಿನ ಯಾವ ನದಿಗಳು ಬ್ರಹ್ಮಪುತ್ರಾದ ಉಪನದಿಗಳು?
1. ದಿಬಾಂಗ್
2. ಕುರ್ದೆಂಗ್
3. ಲೋಹಿತ್
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3
ಡಿ. 1,2,3

ಉ: ಡಿ


4. ಕೋರ್‍ಬ್ಯಾಂಕಿಂಗ್ ಸೊಲ್ಯೂಶನ್ ಎಂಬ ಬಳಕೆಯನ್ನು ಸುದ್ದಿಗಳಲ್ಲಿ ಕಾಣುತ್ತೇವೆ. ಈ ಕೆಳಗಿನ ಯಾವ ಹೇಳಿಕೆ ಅದಕ್ಕೆ ಸೂಕ್ತವಾಗುತ್ತದೆ?
1. ಇದು ಬ್ಯಾಂಕ್ ಶಾಖೆಗಳ ಜಾಲವಾಗಿದ್ದು, ಇದರಿಂದ ಗ್ರಾಹಕರು ಯಾವುದೇ ಶಾಖೆಯಲ್ಲಿ ಖಾತೆ ಹೊಂದಿದ್ದರೂ ಮತ್ತೊಂದು ಶಾಖೆಯಲ್ಲಿ ವ್ಯವಹರಿಸಲು ಸಾಧ್ಯವಾಗುತ್ತದೆ.
2. ಇದು ಕಂಪ್ಯೂಟರೀಕರಣದ ಮೂಲಕ ಆರ್‍ಬಿಐ ಬ್ಯಾಂಕ್‍ಗಳ ನಿಯಂತ್ರಣಕ್ಕೆ ಮಾಡಿಕೊಂಡ ವ್ಯವಸ್ಥೆ.
3. ಇದು ಒಂದು ಬ್ಯಾಂಕಿನ ದೊಡ್ಡ ಪ್ರಮಾಣದ ಅನುತ್ಪಾದಕ ಆಸ್ತಿಯನ್ನು ಮತ್ತೊಂದ ಬ್ಯಾಂಕ್ ತೆಗೆದುಕೊಳ್ಳುವ ಪ್ರಕ್ರಿಯೆ.
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3
ಡಿ. 1,2,3

ಉ: ಎ


5. ಹೊಂದಿಸಿ ಬರೆಯಿರಿ
1. ಪ್ರಮಾಣೀಕರಿಸಿದ ದೇಶಗಳು ಎ. ಕಾರ್ಟೆಜೆನಾ ಒಪ್ಪಂದ
2. ಪ್ರಮಾಣೀಕೃತ ಹೊಗೆಯುಗುಳುವಿಕೆ ಕಡಿಮೆಮಾಡುವುದು ಬಿ. ನಗೋಯಾ ಒಪ್ಪಂದ
3. ಸ್ವಚ್ಛ ಅಭಿವೃದ್ಧಿ ವ್ಯವಸ್ಥೆ ಸಿ. ಕ್ಯೂಟೊ ಒಪ್ಪಂದ
ಮೇಲಿನ ಯಾವುದು ಸರಿ ಹೊಂದಾಣಿಕೆಯಾಗುತ್ತವೆ?
ಎ. 1 ಮತ್ತು 2
ಬಿ. 2 ಮತ್ತು 3
ಸಿ. 3 ಮಾತ್ರ
ಡಿ. 1,2,3

ಉ: ಬಿ


6. ಬಯೋಇನ್ರ್ಫೋಮ್ಯಾಟಿಕ್ಸ್‍ಗೆ ಸಂಬಂಧಿಸಿದಂತೆ ಸುದ್ದಿಗಳಲ್ಲಿ ಟ್ರಾನ್ಸ್‍ಸ್ಕ್ರಿಪ್ಟೋನ್ ಎಂಬ ಪದ ಕಾಣಿಸುತ್ತದೆ. ಇದು ಯಾವುದಕ್ಕೆ ಸಂಬಂಧಿಸಿದ್ದು?
ಎ. ಜೆನೋಮ್ ಸಂಸ್ಕರಣೆಯಲ್ಲಿ ಬಳಸುವ ಒಂದು ಬಗೆಯ ಎನ್ಸಾಯಿಮ್ (ಇಓZಙಒಇ)
ಬಿ. ಜೈವಿಕ ಕಣಗಳು ಹೊರಸೂಸುವ ಆರ್‍ಎನ್‍ಎ ಕಣಗಳು
ಸಿ. ವಂಶವಾಹಿ ಅಭಿವ್ಯಕ್ತಿಯ ವಿವರಣೆ
ಡಿ. ಕೋಶಗಳಲ್ಲಿ ಸಂಭವಿಸುವ ವಂಶವಾಹಿ ಕುಲಾಂತರ

ಉ: ಬಿ


7. ಭಾರತ ಸರ್ಕಾರ ಆರಂಭಿಸಿದ ಮಿಷನ್ ಇಂದ್ರಧನುಷ್ ಯಾವುದಕ್ಕೆ ಸಂಬಂದಿಸಿದ್ದು?
ಎ. ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರ ಲಸಿಕೆ ಕಾರ್ಯಕ್ರಮ
ಬಿ. ದೇಶಾದ್ಯಂತ ಸ್ಮಾರ್ಟ್ ಸಿಟಿಗಳ ನಿರ್ಮಾಣ
ಸಿ. ಬಾಹ್ಯಾಕಾಶದಲ್ಲಿ ಭೂಮಾದರಿಯ ಗ್ರಹಗಳ ಅನ್ವೇಷಣೆ
ಡಿ. ಹೊಸ ಶಿಕ್ಷಣ ನೀತಿ

ಉ: ಎ


8. ಭಾರತ ಸರ್ಕಾರದ ಗ್ರೀನ್ ಇಂಡಿಯಾ ಮಿಷನ್ ಯೋಜನೆಯನ್ನು ಕೆಳಗಿನ ಯಾವುದು ಸರಿಯಾಗಿ ವಿವರಿಸುತ್ತದೆ?
1. ಪರಿಸರ ಲಾಭ ಮತ್ತು ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಬಜೆಟ್‍ಗಳಲ್ಲಿ ಸೇರಿಸುವ ಮೂಲಕ ಹಸಿರು ಲೆಕ್ಕಾಚಾರವನ್ನು ಅನುಷ್ಠಾನಗೊಳಿಸುವುದು.
2. ಕೃಷಿ ಉತ್ಪಾದನೆ ಹೆಚ್ಚಿಸಲು ಎರಡನೇ ಹಸಿರು ಕ್ರಾಂತಿ ಜಾರಿಗೊಳಿಸುವುದು.
3. ಅರಣ್ಯ ಪ್ರದೇಶವನ್ನು ಉಳಿಸುವುದು ಮತ್ತು ವಿಸ್ತರಿಸುವುದು.
ಎ. ಕೇವಲ 1
ಬಿ. 2 ಮತ್ತು 3
ಸಿ. 3 ಮಾತ್ರ
ಡಿ. 1,2 ಮತ್ತು 3

ಉ: ಸಿ


9. ಆಹಾರ ಸುರಕ್ಷೆ ಮತ್ತು ಗುಣಮಟ್ಟ (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ನಿಯಮಾವಳಿ-2011ರ ಅನ್ವಯ ಈ ಕೆಳಗಿನ ಯಾವ ಮಾಹಿತಿಯನ್ನು ಲೇಬಲ್‍ನಲ್ಲಿ ಪ್ರದರ್ಶಿಸಬೇಕು?
1. ಉತ್ಪನ್ನದಲ್ಲಿ ಒಳಗೊಂಡ ಅಂಶಗಳು
2. ಪೌಷ್ಟಿಕ ಮಾಹಿತಿ
3. ಯಾವುದೇ ಅಲರ್ಜಿಗೆ ಕಾರಣವಾಗುವ ಅಂಶಗಳ ಸಾಧ್ಯತೆ ಬಗ್ಗೆ ಮಾಹಿತಿ
4. ಸಸ್ಯಾಹಾರಿ/ ಮಾಂಸಾಹಾರಿ ಎಂಬ ಮಾಹಿತಿ
ಎ. ಕೇವಲ 1,2,3
ಬಿ. 2 3, ಮತ್ತು 4
ಸಿ. 1,2,4 ಮಾತ್ರ
ಡಿ. 1 ಮತ್ತು 4

ಉ: ಸಿ


10. ಸಾಮಾನ್ಯವಾಗಿ ಸುದ್ದಿಗಳಲ್ಲಿ ಕಂಡುಬರುವ ಪ್ರಾಜೆಕ್ಟ್ ಲೂನ್ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದ್ದು?
ಎ. ನೀರು ನಿರ್ವಹಣೆ ತಂತ್ರಜ್ಞಾನ
ಬಿ. ನಿಸ್ತಂತು ಸಂವಹನಾ ತಂತ್ರಜ್ಞಾನ
ಸಿ. ಜಲವಿದ್ಯುತ್ ಉತ್ಪಾದನಾ ತಂತ್ರಜ್ಞಾನ
ಡಿ. ನೀರು ಸಂರಕ್ಷಣೆ ತಂತ್ರಜ್ಞಾನ

ಉ: ಬಿ


11. ನೆಟ್‍ಸೆಂಟರಿಂಗ್ ಎಂಬ ಪದ ಸುದ್ದಿಯಲ್ಲಿ ಕಂಡುಬರುತ್ತದೆ. ಇದು ಯಾವ ಸಂದರ್ಭಕ್ಕೆ ಅನ್ವಯಿಸುತ್ತದೆ?
ಎ. ಕುಟುಂಬಗಳು ಅಥವಾ ಗ್ರಾಹಕರಿಂದ ಸೌರಶಕ್ತಿಯ ಉತ್ಪಾದನೆ ಮತ್ತು ಬಳಕೆ
ಬಿ. ಕುಟುಂಬಗಳಿಗೆ ಪೈಪ್ ಮೂಲಕ ನೈಸರ್ಗಿಕ ಅನಿಲ ಸರಬರಾಜು ವ್ಯವಸ್ಥೆ
ಸಿ. ಸಿಎನ್‍ಜಿ ಕಿಟ್‍ಗಳನ್ನು ವಾಹನಗಳಲ್ಲಿ ಅಳವಡಿಸುವುದು.
ಡಿ. ನಗರಗಳ ಮನೆಗಳಿಗೆ ನೀರಿನ ಮೀಟರ್ ಅಳವಡಿಸುವುದು.

ಉ: ಎ


12. ವ್ಯವಹಾರ ನಡೆಸಲು ಅನುಕೂಲಕರ ವಾತಾವರಣದ ರ್ಯಾಂಕಿಂಗ್ ಎನ್ನುವುದು ಸುದ್ದಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಈ ರ್ಯಾಂಕಿಂಗ್ ನೀಡುವ ಸಂಸ್ಥೆ ಯಾವುದು?
ಎ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ
ಬಿ. ವಿಶ್ವ ಆರ್ಥಿಕ ವೇದಿಕೆ
ಸಿ. ವಿಶ್ವಬ್ಯಾಂಕ್
ಡಿ. ವಿಶ್ವ ವ್ಯಾಪಾರ ಸಂಘಟನೆ

ಉ: ಸಿ


13. ಮಧ್ಯಕಾಲೀನ ಇತಿಹಾಸದಲ್ಲಿ ಕಂಡುಬರುವ ಬಂಜಾರಾ ಸಮುದಾಯದವರು ಯಾರು?
ಎ. ಕೃಷಿಕರು
ಬಿ. ಯೋಧರು
ಸಿ. ನೇಕಾರರು
ಡಿ. ವ್ಯಾಪಾರಿಗಳು

ಉ: ಡಿ


14. ಈ ಕೆಳಗಿನ ಯಾರು ಚಕ್ರವರ್ತಿ ಅಶೋಕನ ಸಂಹಿತೆಗಳ ಅರ್ಥ ಗ್ರಹಿಸಿದವರು?
ಎ. ಜಾರ್ಜ್ ಓಲರ್
ಬಿ. ಜೇಮ್ಸ್ ಪ್ರಿನೇಪ್
ಸಿ. ಮ್ಯಾಕ್ಸ್ ಮುಲ್ಲರ್
ಡಿ. ವಿಲಿಯಂ ಜೋನ್ಸ್

ಉ: ಬಿ


15. ಗ್ರಾಮನ್ಯಾಯಾಲಯ ಕಾಯ್ದೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಈ ಕಾಯ್ದೆಯ ಅನ್ವಯ, ಗ್ರಾಮನ್ಯಾಯಾಲಯಗಳು ಕೇವಲ ಸಿವಿಲ್ ಪ್ರಕರಣಗಳ ವಿಚಾರಣೆ ನಡೆಸಬಹುದು.
2. ಈ ಕಾಯ್ದೆಯು ಸ್ಥಳೀಯ ಸಾಮಾಜಿಕ ಕಾರ್ಯಕರ್ತರನ್ನು ಮಧ್ಯಸ್ಥಿಕೆದಾರರನ್ನಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಬಿ


16. ಟ್ರಾನ್ಸ್‍ಫೆಸಿಫಿಕ್ ಪಾಲುದಾರಿಕೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಇದು ಚೀನಾ ಮತ್ತು ರಷ್ಯಾ ಹೊರತುಪಡಿಸಿ ಎಲ್ಲ ಪೆಸಿಫಿಕ್ ವಲಯದ ದೇಶಗಳ ನಡುವೆ ಆದ ಒಪ್ಪಂದ.
2. ಸಾಗರ ಭದ್ರತೆಗೆ ಸಂಬಂಧಿಸಿದ ತಂತ್ರಗಾರಿಕೆ ಮೈತ್ರಿಕೂಟ ಇದಾಗಿದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಡಿ


17. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
1. 2015ರಲ್ಲಿ ನಡೆದ ಭಾರತ ಆಫ್ರಿಕಾ ಶೃಂಗವು ಮೂರನೇ ಶೃಂಗವಾಗಿದೆ.
2. ಇದನ್ನು ಜವಾಹರ್‍ಲಾಲ್ ನೆಹರೂ 1951ರಲ್ಲಿ ಆರಂಭಿಸಿದ್ದರು.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಎ


18. ಸಾಲ ದರಕ್ಕೆ ಅನುಗುಣವಾಗಿ ಆರ್‍ಬಿಐ ಘೋಷಿಸಿದ ನಿಧಿಗಳ ಮಾರ್ಜಿನಲ್ ವೆಚ್ಚದ ಉದ್ದೇಶವೇನು?
1. ಬ್ಯಾಂಕುಗಳು ಸಾಲದ ಬಡ್ಡಿದರವನ್ನು ನಿರ್ಧರಿಸಲು ಅನುಸರಿಸಬೇಕಾದ ವಿಧಿವಿಧಾನಗಳಲ್ಲಿ ಪಾರದರ್ಶಕತೆಯನ್ನು ಇದು ಸುಧಾರಿಸುವ ಮಾರ್ಗದರ್ಶಿ ಸೂತ್ರವಾಗಿದೆ.
2. ಬ್ಯಾಂಕ್ ಹಾಗೂ ಸಾಲಪಡೆಯುವವರಿಗೆ ನ್ಯಾಯಬದ್ಧ ಎನಿಸುವ ದರದಲ್ಲಿ ಸಾಲವನ್ನು ಪಡೆಯಲು ಇದು ಮಾರ್ಗಸೂಚಿಯಾಗುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಸಿ


19. ಭಾರತದಲ್ಲಿ ಕಂಡುಬರುವ ಖರಾಜ್ ಒಂಟೆಯ ತಳಿಯ ವೈಶಿಷ್ಠ್ಯ ಏನು?
1, ಇದು ಸಮುದ್ರದ ನೀರಿನಲ್ಲಿ 3 ಕಿಲೋಮೀಟರ್ ಈಜಬಲ್ಲದು
2. ಇದು ಮ್ಯಾಂಗ್ರೋವ್ ಅರಣ್ಯದಲ್ಲಿ ಮೇಯುವ ಮೂಲಕ ಜೀವಿಸಬಲ್ಲದು.
3. ಇದು ವನ್ಯಮೃಗವಾಗಿದ್ದು ಸಾಕಲು ಸಾಧ್ಯವಿಲ್ಲ.
ಎ. ಕೇವಲ 1 ಮತ್ತು 2
ಬಿ. ಕೇವಲ 3
ಸಿ. 1 ಮತ್ತು 3
ಡಿ. 1, 2, 3

ಉ: ಎ


20. ಇತ್ತೀಚೆಗೆ ಭಾರತೀಯ ವಿಜ್ಞಾನಿಗಳು ಹೊಸ ತಳಿಯ ಬಾಳೆಯನ್ನು ಕಂಡುಹಿಡಿದಿದ್ದು, ಇದು 11 ಮೀಟರ್ ಎತ್ತರ ಬೆಳೆಯಬಲ್ಲದು ಹಾಗೂ ಕಿತ್ತಳೆ ಬಣ್ಣದ ಪಲ್ಪ್ ಹೊಂದಿರುತ್ತದೆ. ಇದು ಎಲ್ಲಿ ಪತ್ತೆಯಾಗಿದೆ?
ಎ. ಅಂಡಮಾನ್ ದ್ವೀಪ
ಬಿ. ಅಣ್ಣಾಮಲೈ ಅರಣ್ಯ
ಸಿ. ಮೈಕೆಲಾ ಬೆಟ್ಟ
ಡಿ. ಈಶಾನ್ಯದ ಉಷ್ಣವಲಯದ ಮಳೆ ಕಾಡು

ಉ: ಎ



21. ಇತ್ತೀಚೆಗೆ ಸುದ್ದಿ ಮಾಡಿದ ಐಎನ್‍ಎಸ್ ಅಷ್ಟಧಾರಿಣಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
ಎ. ನೀರು/ ಭೂಮಿಯಲ್ಲಿ ಬಳಸಬಹುದಾದ ಯುದ್ಧನೌಕೆ
ಬಿ. ಅಣ್ವಸ್ತ್ರ ಸಜ್ಜಿತ ಸಬ್‍ಮೆರಿನ್
ಸಿ. ಟಾರ್ಪೆಡೊ ಉಡಾವಣೆ ಮತ್ತು ಪತ್ತೆ ನೌಕೆ
ಡಿ. ಅಣ್ವಸ್ತ್ರ ಸಾಮಥ್ರ್ಯದ ವಿಮಾನ ವಾಹನ

ಉ: ಸಿ


22. ಇತ್ತೀಚೆಗೆ ಸುದ್ದಿಯಲ್ಲಿದ್ದ ಗ್ರೀಸ್‍ಡ್ ಲೈಟನಿಂಗ್-10 ಎಂದರೇನು?
ಎ. ನಾಸಾ ಪರೀಕ್ಷಿಸಿದ ಎಲೆಕ್ಟ್ರಿಕ್ ವಿಮಾನ
ಬಿ. ಜಪಾನ್ ವಿನ್ಯಾಸಗೊಳಿಸಿದ ಎರಡು ಆಸನಗಳ ಸೌರವಿಮಾನ
ಸಿ. ಚೀನಾ ಉಡಾಯಿಸಿದ ಬಾಹ್ಯಾಕಾಶ ವೀಕ್ಷಣಾ ವ್ಯವಸ್ಥೆ
ಡಿ. ಇಸ್ರೊ ವಿನ್ಯಾಸಗೊಳಿಸಿದ ಮರುಬಳಕೆ ರಾಕೆಟ್

ಉ: ಎ


23. ತೀವ್ರ ತೃಣಧಾನ್ಯ ಉತ್ತೇಜನ ಮೂಲಕ ಪೌಷ್ಟಿಕ ಭದ್ರತೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಈ ಯೋಜನೆಯ ಮುಖ್ಯ ಉದ್ದೇಶ ಸುಧಾರಿತ ಉತ್ಪಾದನೆ ಮತ್ತು ಕೊಯ್ಲೋತ್ತರ ತಂತ್ರಜ್ಞಾನವನ್ನು ಉತ್ತೇಜಿಸುವುದು.
2. ಬಡ, ಸಣ್ಣ, ಅತಿಸಣ್ಣ ಹಾಗೂ ಬುಡಕಟ್ಟು ಕೃಷಿಕರು ಈ ಯೋಜನೆಯಲ್ಲಿ ದೊಡ್ಡ ಪಾಲು ಪಡೆಯುತ್ತಾರೆ.
3. ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತರನ್ನು ತೃಣಧಾನ್ಯ ಬೆಳೆಯಲು ಪ್ರೋತ್ಸಾಹಿಸುವುದು.
ಎ. ಕೇವಲ 1
ಬಿ. 2 ಮತ್ತು 3
ಸಿ. 1, 2
ಡಿ. 1, 2, 3

ಉ: ಸಿ


24. ಸ್ವದೇಶಿ ಮತ್ತು ಬಹಿಷ್ಕಾರ ವಿಧಾನವನ್ನು ಸಂಘರ್ಷದ ವಿಧಾನವಾಗಿ ಮೊಟ್ಟಮೊದಲು ಯಾವಾಗ ಬಳಸಿಕೊಳ್ಳಲಾಯಿತು?
ಎ. ಬಂಗಾಳ ವಿಭಜನೆ ಸಂದರ್ಭದ ಪ್ರತಿಭಟನೆಯಲ್ಲಿ
ಬಿ. ಹೋಂರೂಲ್ ಚಳವಳಿ
ಸಿ. ಅಸಹಕಾರ ಚಳವಳಿ
ಡಿ. ಭಾರತಕ್ಕೆ ಸೈಮನ್ ಕಮಿಷನ್ ಭೇಟಿ ಸಂದರ್ಭ

ಉ: ಎ


25. ಭಾರತದ ಧಾರ್ಮಿಕ ಇತಿಹಾಸಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ್ದನ್ನು ಗುರುತಿಸಿ.
1. ಬೋಧಿಸತ್ವ ಪರಿಕಲ್ಪನೆಯು ಬೌದ್ಧಧರ್ಮದ ಹಿನಾಯಾನ ಪಂಥಕ್ಕೆ ಸೀಮಿತ
2. ಬೋಧಿಸತ್ವ ಎನ್ನುವುದು ಜ್ಞಾನೋದಯದ ಮಾರ್ಗದ ಅನುಕಂಪ.
3. ತನ್ನ ಸ್ವಂತ ಮುಕ್ತಿಯನ್ನು ಪಡೆಯುವುದನ್ನು ಬೋಧಿಸತ್ವ ನಿರಾಕರಿಸುತ್ತದೆ.
ಎ. ಕೇವಲ 1
ಬಿ. 2 ಮತ್ತು 3
ಸಿ. 2 ಮಾತ್ರ
ಡಿ. 1,2,3

ಉ: ಬಿ


26. ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ ಎನ್ನುವುದು ಸುದ್ದಿಯಲ್ಲಿದೆ. ಹಾಗೆಂದರೆ:
ಎ. ವಿಶ್ವ ಆರೋಗ್ಯ ಸಂಸ್ಥೆಯ ವಿಭಾಗ
ಬಿ. ಇದೊಂದು ಸರ್ಕಾರೇತರ ಅಂತರರಾಷ್ಟ್ರೀಯ ಸಂಸ್ಥೆ
ಸಿ. ಯೂರೋಪಿಯನ್ ಯೂನಿಯನ್ ಪ್ರಾಯೋಜಕತ್ವದ ಅಂತರ ಸರ್ಕಾರ ಏಜೆನ್ಸಿ
ಡಿ. ವಿಶ್ವಸಂಸ್ಥೆಯ ವಿಶೇಷ ಏಜೆನ್ಸಿ

ಉ: ಬಿ


27. ಪರಿಸರ ಹಾಗೂ ಜೀವವೈವಿಧ್ಯದ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಸರಿ ಹೇಳಿಕೆಗಳನ್ನು ಗುರುತಿಸಿ.
1. ಇದನ್ನು ಯುಎನ್‍ಇಪಿ, ಐಎಂಎಫ್ ಹಾಗೂ ವಿಶ್ವ ಆರ್ಥಿಕ ವೇದಿಕೆ ಆರಂಭಿಸಿದೆ.
2. ಜೀವವೈವಿಧ್ಯದ ಆರ್ಥಿಕ ಲಾಭಗಳ ಬಗ್ಗೆ ಗಮನ ಸೆಳೆಯುವ ಯೋಜನೆ‘
3. ನೀತಿ ನಿರೂಪಕರು ಪರಿಸರ ಹಾಗೂ ಜೀವವೈವಿಧ್ಯದ ಮಹತ್ವವನ್ನು ಅರ್ಥಮಾಡಿಕೊಳ್ಳುವುದು.
ಎ. ಕೇವಲ 1 ಮತ್ತು 2
ಬಿ. 3
ಸಿ. 2 ಮತ್ತು 3
ಡಿ. 1, 2, 3

ಉ: ಸಿ


28. ರೆಡ್‍ಸ್ಯಾಂಡರ್ಸ್ ಎಂಬ ಶಬ್ದ ಸುದ್ದಿಯಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ಸರಿ ಹೇಳಿಕೆಗಳನ್ನು ಗುರುತಿಸಿ.
1. ಇದು ಒಂದು ಬಗೆಯ ಮರದ ಪ್ರಬೇಧವಾಗಿದ್ದು, ದಕ್ಷಿಣ ಭಾರತದಲ್ಲಿ ಕಂಡುಬರುತ್ತದೆ.
2. ಇದು ದಕ್ಷಿಣ ಭಾರತದ ಮಹತ್ವದ ಮಳೆಕಾಡಿನಲ್ಲಿ ಕಂಡುಬರುವ ಮರದ ಪ್ರಬೇಧವಾಗಿದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಸಿ


29. ಯುಎನ್ ಆರ್‍ಇಡಿಡಿ ಯೋಜನೆಯು ಈ ಕೆಳಗಿನ ಯಾವುದಕ್ಕೆ ಕೊಡುಗೆ ನೀಡುತ್ತದೆ?
1. ಜೀವವೈವಿಧ್ಯ ಸಂರಕ್ಷಣೆ
2. ಅರಣ್ಯ ಪರಿಸರ ಸಂರಕ್ಷಣೆ
3. ಬಡತನ ಕಡಿಮೆ ಮಾಡುವುದು‘
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 2 ಮತ್ತು 3 ಮಾತ್ರ
ಡಿ. 1, 2, 3

ಉ: ಎ


30. ಹಸಿರು ಮನೆ ಅನಿಲ ಒಪ್ಪಂದ ಎಂದರೇನು?
ಎ. ಹಸಿರುಮನೆ ಅನಿಲದ ಪ್ರಮಾಣವನ್ನು ಅಂದಾಜು ಮಾಡಲು ಸರ್ಕಾರ ಹಾಗೂ ಉದ್ಯಮಿಗಳಿಗೆ ಲೆಕ್ಕಾಚಾರ ಮಾಡುವ ಸಾಧನವಾಗಿದೆ.
ಬಿ. ಅಭಿವೃದ್ಧಿಶೀಲ ದೇಶಗಳು ಹಸಿರುಮನೆ ಅನಿಲ ಕಡಿಮೆ ಮಾಡಲು ನೆರವು ನೀಡುವ ವಿಶ್ವಸಂಸ್ಥೆಯ ಯೋಜನೆ.
ಸಿ. ವಿಶ್ವಸಂಸ್ಥೆಯ ಎಲ್ಲ ಸದಸ್ಯದೇಶಗಳ ಅಂತರಸರ್ಕಾರ ಒಪ್ಪಂದವಾಗಿದೆ.
ಡಿ. ಇದು ಆರ್‍ಇಡಿಡಿಯ ಬಹುಮುಖಿ ಒಪ್ಪಂದವಾಗಿದ್ದು, ವಿಶ್ವಬ್ಯಾಂಕ್ ಪ್ರಾಯೋಜಿತವಾಗಿದೆ.

ಉ: ಎ


31. ಹಣಕಾಸಿನ ಸ್ಥಿರತೆ ಹಾಗೂ ಅಭಿವೃದ್ಧಿ ಮಂಡಳಿಗೆ ಸಂಬಂಧಿಸಿದಂತೆ ಸರಿ ಹೇಳಿಕೆಗಳನ್ನು ಗುರುತಿಸಿ.
1. ಇದು ನೀತಿ ಆಯೋಗದ ಅಂಗಸಂಸ್ಥೆ
2. ಕೇಂದ್ರ ಹಣಕಾಸು ಸಚಿವರು ಇದರ ಮುಖ್ಯಸ್ಥರಾಗಿರುತ್ತಾರೆ.
3. ಇದು ಆರ್ಥಿಕತೆಯ ಮೇಲ್ವಿಚಾರಣೆ ನಿರ್ವಹಿಸುತ್ತದೆ.
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 2 ಮತ್ತು 3
ಡಿ. 1, 2, 3

ಉ: ಸಿ


32. ಅಜಂಡಾ 21ಕ್ಕೆ ಸಂಬಂಧಿಸಿದಂತೆ ಸರಿ ಹೇಳಿಕೆಗಳನ್ನು ಗುರುತಿಸಿ.
1. ಇದು ಸುಸ್ಥಿರ ಅಭಿವೃದ್ಧಿಯ ಜಾಗತಿಕ ಕ್ರಿಯಾಯೋಜನೆ
2. ಇದು 2002ರಲ್ಲಿ ಜೋಹಾನ್ಸ್‍ಬರ್ಗ್‍ನಲ್ಲಿ ನಡೆದ ಸುಸ್ಥಿರ ಅಭಿವೃದ್ಧಿ ಶೃಂಗದಲ್ಲಿ ಹುಟ್ಟಿಕೊಂಡಿದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ

ಉ: ಎ


33. ಸತ್ಯಬೋಧಕ ಸಮಾಜವು ಈ ಕೆಳಗಿನ ಯಾವ ಚಳವಳಿಯನ್ನು ಸಂಘಟಿಸಿದೆ?
ಎ. ಬಿಹಾರದ ಬುಡಕಟ್ಟು ಜನಾಂಗದ ಉನ್ನತಿ
ಬಿ. ಗುಜರಾತ್‍ನಲ್ಲಿ ದೇವಸ್ಥಾನ ಪ್ರವೇಶ ಚಳವಳಿ
ಸಿ. ಮಹಾರಾಷ್ಟ್ರದ ಜಾತಿ ವಿರೋಧಿ ಚಳವಳಿ
ಡಿ. ಪಂಜಾಬ್‍ನ ರೈತ ಚಳವಳಿ

ಉ: ಸಿ

...ಮುಂದುವರೆಯುವುದು.

(courtesy :ಕನ್ನಡದಲ್ಲಿ ಐಎಎಸ್ & ಕೆಎಎಸ್ ಮುಖ್ಯ ಪರೀಕ್ಷೆ)

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ : ಅರ್ಹತಾ ಪತ್ರಿಕೆ - ಕನ್ನಡ, ಇಂಗ್ಲೀಷ್ ಹಾಗು ಪತ್ರಿಕೆ-1: ಪ್ರಬಂಧ (PART -V) ( KAS Mains Compulsory Kannada and English Papers and Paper I Essay Syllabus)

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ :  ಅರ್ಹತಾ ಪತ್ರಿಕೆ - ಕನ್ನಡ, ಇಂಗ್ಲೀಷ್ ಹಾಗು ಪತ್ರಿಕೆ-1: ಪ್ರಬಂಧ  (PART -V)
( KAS Mains Compulsory Kannada and English Papers and Paper I Essay Syllabus)
•─━━━━━═══════════━━━━━─••─━━━━━═══════════━━━━━─•

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)

... ಮುಂದುವರೆದ ಭಾಗ.



●. ಅರ್ಹತಾ ಪತ್ರಿಕೆ                  ಕನ್ನಡ

ಈ ಪತ್ರಿಕೆಯ ಗುರಿ, ಅಭ್ಯರ್ಥಿಗಳು ಗಂಭೀರವಾದ ತಾರ್ಕಿಕ ಗದ್ಯವನ್ನು ಓದಲು ಮತ್ತು ಅರ್ಥಮಾಡಿಕೊಳ್ಳುವುದು ಮತ್ತು ತನ್ನ ವಿಚಾರಗಳನ್ನು ಕನ್ನಡದಲ್ಲಿ ಸ್ವಷ್ಟವಾಗಿ ಮತ್ತು ಸರಿಯಾಗಿ ವ್ಯಕ್ತಪಡಿಸುವ ಪರೀಕ್ಷೆಯಾಗಿರುವುದು.

ಪ್ರಶ್ನೆಗಳ ವಿಧಾನವು ಕೆಳಗಿನಂತೆ ಸ್ಥೂಲವಾಗಿರುತ್ತದೆ:


●. ಸಾಮಾನ್ಯ ಕನ್ನಡ

1 ವಿಷಯದ ಸಮಗ್ರ ಅರ್ಥೈಸುವಿಕೆ 25 ಅಂಕಗಳು

2 ಪದ ಪ್ರಯೋಗ 25 ಅಂಕಗಳು

3 ವಿಷಯ ಸಂಕ್ಷೇಪಣೆ 25 ಅಂಕಗಳು

4 ಪದಜ್ಞಾನ 25 ಅಂಕಗಳು

5 ಲಘು ಪ್ರಬಂಧ 25 ಅಂಕಗಳು

6 ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರ 25 ಅಂಕಗಳು

━━━━━━━━━━━━━━━━━━━━━━━━━━━━━━━━━━━━━━━━━━━━━


●. ಅರ್ಹತಾ ಪತ್ರಿಕೆ            ಇಂಗ್ಲೀಷ್

ಈ ಪತ್ರಿಕೆಯ ಗುರಿ, ಅಭ್ಯರ್ಥಿಗಳು ಗಂಭೀರವಾದ ತಾರ್ಕಿಕ ಗದ್ಯವನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಮತ್ತು ತನ್ನ ವಿಚಾರಗಳನ್ನು ಇಂಗ್ಲೀಷ್ನಲ್ಲಿ ಸ್ವಷ್ಟವಾಗಿ ಮತ್ತು ಸರಿಯಾಗಿ ವ್ಯಕ್ತಪಡಿಸುವ ಪರೀಕ್ಷೆಯಾಗಿರುವುದು.

ಪ್ರಶ್ನೆಗಳ ಮಾದರಿ ಈ ಕೆಳಗಿನಂತೆ ಸ್ಥೂಲವಾಗಿರುತ್ತದೆ:

1 (Compreshension of given passages)
ನೀಡಲಾದ ವಾಕ್ಯವೃಂದಗಳ ವ್ಯಾಪಕತೆ 25 ಅಂಕಗಳು

2 (precise writing) ನಿಖರವಾದ ಬರವಣಿಗೆ 25 ಅಂಕಗಳು

3 (usage) ಪದ ಪ್ರಯೋಗ 25 ಅಂಕಗಳು

4 (Vocabulary) ಶಬ್ದ ಸಂಗ್ರಹ 25 ಅಂಕಗಳು

5 (Short Essay) ಲಘು ಪ್ರಬಂಧ 25 ಅಂಕಗಳು

6 (Communication Skills) ಸಂವಹನ ಕೌಶಲ್ಯಗಳು 25 ಅಂಕಗಳು

━━━━━━━━━━━━━━━━━━━━━━━━━━━━━━━━━━━━━━━━━━━━━


●. ಪತ್ರಿಕೆ-1: ಪ್ರಬಂಧ                  250 ಅಂಕಗಳು,                  3 ಗಂಟೆಗಳು

ಎರಡು ಪ್ರಬಂಧಗಳು (ಕನ್ನಡ/ಇಂಗ್ಲೀಷ್ ಭಾಷೆಯಲ್ಲಿ) ಪ್ರತಿಯೊಂದು 125 ಅಂಕಗಳು.

ಪ್ರಬಂಧ-1:
ಅಂತರಾಷ್ಟ್ರೀಯ/ರಾಷ್ಟ್ರೀಯ ಮಹತ್ವದ ವಿಷಯಗಳು

ಪ್ರಬಂಧ-2:
ರಾಜ್ಯ ಮಹತ್ವ/ಸ್ಥಳೀಯ ಮಹತ್ವ ವಿಷಯಗಳು

ಮುಂದುವರೆಯುವುದು. 

Friday, 24 February 2017

☀.ಕೆ.ಎ.ಎಸ್. ಮುಖ್ಯ ಪರೀಕ್ಷೆಯ ಪಠ್ಯಕ್ರಮ : (PART -IV) (KAS Mains Paper's Syllabus)

☀.ಕೆ.ಎ.ಎಸ್. ಮುಖ್ಯ ಪರೀಕ್ಷೆಯ ಪಠ್ಯಕ್ರಮ : (PART -IV)
(KAS Mains Paper's Syllabus)
•─━━━━━═══════════━━━━━─••─━━━━━═══════════━━━━━─•

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)

●.2ನೇ ಪ್ರಕರಣದ ಮೇರೆಗೆ ಭಾಗ-ಬಿ ಯ ಉಪ-ಶೀರ್ಷಿಕೆಯ ಅಡಿಯಲ್ಲಿ ಮುಖ್ಯ ಪರೀಕ್ಷೆಗೆ, ಅದಕ್ಕೆ ಸಂಬಂಧಿಸಿದ ನಮೂದುಗಳನ್ನು ಈ ಕೆಳಗಿನಂತೆ ಬದಲಿಯಾಗಿ ಸೇರಿಸತಕ್ಕದ್ದು ಎಂದರೆ:


☀.ಅರ್ಹತಾ ಪತ್ರಿಕೆಗಳು

1.ಕನ್ನಡ                 150 ಅಂಕಗಳು                 2 ಗಂಟೆಗಳು
2.ಇಂಗೀಷ್               150 ಅಂಕಗಳು                 2 ಗಂಟೆಗಳು


●. ಪತ್ರಿಕೆಗಳು

ಪತ್ರಿಕೆ-1: ಪ್ರಬಂಧಗಳು               ಎರಡು ಪ್ರಬಂಧಗಳು                 (ಕನ್ನಡ/ಇಂಗ್ಲೀಷ್‍ನಲ್ಲಿ)
ಒಟ್ಟು ಅಂಕಗಳು 250    (ಎರಡು ಪ್ರಬಂಧಗಳು ಪ್ರತಿ ಪ್ರಬಂಧ 125 ಅಂಕ)     3 ಗಂಟೆಗಳು  

ಪ್ರಬಂಧ-1: ರಾಷ್ಟ್ರೀಯ/ ಅಂತರಾಷ್ಟ್ರೀಯ ಮಹತ್ವ ವಿಷಯ.

ಪ್ರಬಂಧ-2: ರಾಜ್ಯ ಮಹತ್ವ / ಸ್ಥಳೀಯ ಮಹತ್ವ ವಿಷಯ


ಪತ್ರಿಕೆ-2: ಸಾಮಾನ್ಯ ಅಧ್ಯಯನಗಳು-1        
ಒಟ್ಟು ಅಂಕಗಳು 250          3 ಗಂಟೆಗಳು  

1.  ಇತಿಹಾಸ ಮತ್ತು ಸಂಕೃತಿಕ ಪರಂಪರೆ (ಭಾರತ ಮತ್ತು ಕರ್ನಾಟಕ)
2. ಸಾಮಾಜಿಕ ಮತ್ತು ರಾಜಕೀಯ ದೃಷ್ಠಿಕೋನ
3.  ಭಾರತದ ಅರ್ಥವ್ಯವಸ್ಥೆ –ಯೋಜನೆ, ಗ್ರಾಮೀಣ ಅಭಿವೃದ್ಧಿ, ದತ್ತಾಂಶ ಸಂಗ್ರಹಣೆಗಳ ವಿಶ್ಲೇಷಣೆ,
ಅರ್ಥವಿವರಣೆ    
ಮೂರು ವಿಭಾಗಗಳು
ಮೂರು ವಿಭಾಗಗಳು


ಪತ್ರಿಕೆ-3 ಸಾಮಾನ್ಯ ಅಧ್ಯಯನಗಳು-2        
ಒಟ್ಟು ಅಂಕಗಳು 250          3 ಗಂಟೆಗಳು  

1. ಭೌತಿಕ ಲಕ್ಷಣಗಳು ಮತ್ತು ಸ್ವಾಭಾವಿಕ ಸಂಪನ್ಮೂಲಗಳು
2. ಭಾರತ ಸಂವಿಧಾನದ ಸ್ಥೂಲ ಸಮೀಕ್ಷೆ
3. ಸಾರ್ವಜನಿಕ ಆಡಳಿತ ಮತ್ತು ನಿರ್ವಹಣೆ, ಅಂತರಾಷ್ಟ್ರೀಯ ಸಂಬಂಧಗಳು  


ಪತ್ರಿಕೆ-4 ಸಾಮಾನ್ಯ ಅಧ್ಯಯನಗಳು-3        
ಒಟ್ಟು ಅಂಕಗಳು 250          3 ಗಂಟೆಗಳು      

1. ಭಾರತದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಮತ್ತು ಪ್ರಭಾವ ಸಾರ್ವಜನಿಕ
ವಲಯದಲ್ಲಿ ಮಾಹಿತಿ ತಂತ್ರಜ್ಞಾನ
2. ಸ್ವಾಭಾವಿಕ ವಿಜ್ಞಾನ, ಜೀವ ವಿಜ್ಞಾನ, ಕೃಷಿ ವಿಜ್ಞಾನದ ಆರೋಗ್ಯ ಮತ್ತು ನೈರ್ಮಲ್ಯದಲ್ಲಿ
ಮುಂದುವರೆದ ಮತ್ತು ಆಧುನಿಕ ಪ್ರವೃತ್ತಿಗಳು    


ಪತ್ರಿಕೆ-5 ಸಾಮಾನ್ಯ ಅಧ್ಯಯನಗಳು-4        
ಒಟ್ಟು ಅಂಕಗಳು 250          3 ಗಂಟೆಗಳು  

1. ನೀತಿಶಾಸ್ತ್ರ
2. ಸಮಗ್ರತೆ
3. ಕೌಶಲ್ಯ      


ಪತ್ರಿಕೆ-6 ವಿಷಯ ಪತ್ರಿಕೆ-1-        
ಒಟ್ಟು ಅಂಕಗಳು 250          3 ಗಂಟೆಗಳು  

ಪತ್ರಿಕೆ-7 ವಿಷಯ ಪತ್ರಕೆ-2        
ಒಟ್ಟು ಅಂಕಗಳು 250          3 ಗಂಟೆಗಳು  

ಒಟ್ಟು -                 -1750

ವ್ಯಕ್ತಿತ್ವ ಪರೀಕ್ಷೆ                    200

ಒಟ್ಟು ಅಂಕಗಳು                 1950

 ...ಮುಂದುವರೆಯುವುದು.

Thursday, 23 February 2017

☀️ 1090 ಸ್ಥಾನಗಳಿಗೆ ಸಿವಿಲ್ ಸರ್ವೀಸಸ್ (IAS) ಪರೀಕ್ಷೆ ಅಧಿಸೂಚನೆ - 2017 ಪ್ರಕಟ (UPSC Releases Civil Services (IAS) 2017 Notification for 980 Vacancies,)

☀️ 1090 ಸ್ಥಾನಗಳಿಗೆ ಸಿವಿಲ್ ಸರ್ವೀಸಸ್ (IAS) ಪರೀಕ್ಷೆ ಅಧಿಸೂಚನೆ - 2017 ಪ್ರಕಟ
(UPSC Releases Civil Services (IAS) 2017 Notification for 980 Vacancies,)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಿವಿಲ್ ಸರ್ವೀಸಸ್ ಪರೀಕ್ಷೆ ಅಧಿಸೂಚನೆ
(Civil Services (IAS) notification)
   
★ ಐಎಎಸ್ ಪರೀಕ್ಷೆ
(IAS Exam)


ದೇಶದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಬಯಸುತ್ತಿರುವವರು, ಸಮಾಜ ಮುಖಿ ಕಾರ್ಯಗಳ ಮೂಲಕ ದೇಶದ ಅಭಿವೃದ್ಧಿ ವೇಗ ಹೆಚ್ಚಿಸಲು ಕಂಕಣ ತೊಟ್ಟವರು, ಉನ್ನತ ಹುದ್ದೆಗಳ ಮೂಲಕ ಜನರ ಸೇವೆಗೆ ಕಾಯುತ್ತಿರುವ ಯುವಕ-ಯುವತಿಯರಿಗೆ ಇಲ್ಲಿದೆ ಉತ್ತಮ ಅವಕಾಶ.

ಕೇಂದ್ರ ನಾಗರೀಕ ಸೇವಾ ಆಯೋಗ (ಯುಪಿಎಸ್‌ಸಿ) 2017ನೇ ಸಾಲಿನ ಸಿವಿಲ್ ಸರ್ವೀಸಸ್ ಮತ್ತು ಭಾರತೀಯ ಅರಣ್ಯ ಸೇವೆ(ಐಎಫ್ಎಸ್) ಪರೀಕ್ಷೆಗಳಿಗೆ ಅಧಿಸೂಚನೆ ಪ್ರಕಟಿಸಿದೆ.

*.980+110(ಐಎಫ್ಎಸ್) ಸ್ಥಾನಗಳ ಭರ್ತಿಗಾಗಿ ಪರೀಕ್ಷೆ ನಡೆಸಯಲಿದೆ.

*.ಮೂರು ಹಂತಗಳಲ್ಲಿ ಸಿವಿಲ್ ಸರ್ವೀಸಸ್ ಪರೀಕ್ಷೆ ನಡೆಸಲಾಗುತ್ತದೆ.

*.ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳು ಅಂಕ ಪಡೆಯುತ್ತಾರೆ.
*.ಗಳಿಸಿದ ಅಂಕಗಳ ಆಧಾರದ ಮೇಲೆ ರ‍್ಯಾಂಕ್‌ ಪಟ್ಟಿ ಸಿದ್ಧಪಡಿಸಲಾಗುತ್ತದೆ.
*.ಈ ಮೂಲಕ ಐಎಎಸ್, ಐಪಿಎಸ್, ಐಎಫ್‌ಎಸ್ ಸ್ಥಾನಗಳಿಗೆ ನೇಮಕಾತಿ ನಡೆಯುತ್ತದೆ.

==============

•► ಒಟ್ಟು ಸ್ಥಾನ: 1090
•► ಅರ್ಜಿ ಸಲ್ಲಿಕೆ ಕೊನೇ ದಿನ: ಮಾರ್ಚ್‌ 17
•► ಪೂರ್ವಭಾವಿ ಪರೀಕ್ಷೆ: ಜೂನ್‌ 18
•► ಜಾಲತಾಣ: www.upsc.gov.in; upsconline.nic.in

=======

•► ವಯೋಮಿತಿ:

* ಕನಿಷ್ಠ 21 ಹಾಗೂ ಗರಿಷ್ಠ 32 ವರ್ಷ (6 ಪ್ರಯತ್ನ).
* ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ
* ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ (ಗರಿಷ್ಠ 9 ಪ್ರಯತ್ನ)
* ಅಂಗವಿಕಲರಿಗೆ 10 ವರ್ಷ ಸಡಿಲಿಕೆ


•► ವಿದ್ಯಾರ್ಹತೆ:

* ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪೂರೈಸಿರಬೇಕು.
* ಭಾರತೀಯ ಅರಣ್ಯ ಸೇವೆ(ಐಎಫ್‌ಎಸ್‌) ಆಯ್ಕೆಗೆ ವಿಜ್ಞಾನ/ಕೃಷಿ/ಪಶುಶಾಸ್ತ್ರ/ಅರಣ್ಯ/ಗಣಿತ ಅಥವಾ ಇಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆದಿರಬೇಕು.
* ಪದವಿ ಅಂತಿಮ ವರ್ಷ/ಸೆಮಿಸ್ಟರ್‌ನಲ್ಲಿ ಅಭ್ಯಾಸ ಮಾಡುತ್ತಿರುವವರಿಗೂ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.
* ಎಂಬಿಬಿಎಸ್ ಅಭ್ಯರ್ಥಿಗಳು ಸಂದರ್ಶನಕ್ಕೂ ಮುನ್ನ ಇಂಟರ್ನ್‌ಷಿಪ್ ಪೂರೈಸಿರಬೇಕು.


•► ಆನ್‌ಲೈನ್‌ ಅರ್ಜಿ:

* ಆಯೋಗದ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಅರ್ಜಿ ಸ್ವೀಕೃತಿ ಬಳಿಕ ಚಲನ್ ಡೌನ್‌ಲೋಡ್ ಮಾಡಿ, ಯಾವುದೇ ಎಸ್‌ಬಿಐ ಶಾಖೆಯಲ್ಲಿ ಅಥವಾ ಆನ್‌ಲೈನ್‌ನಲ್ಲಿ ಸಾಮಾನ್ಯ ಹಾಗೂ ಒಬಿಸಿ ವರ್ಗದ ಪುರುಷ ಅಭ್ಯರ್ಥಿಗಳು ₹100 ಶುಲ್ಕ ಪಾವತಿಸಬೇಕು.
* ಮಹಿಳೆಯರು/ ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.


•► ಪ್ರಿಲಿಮಿನರಿ ಪರೀಕ್ಷೆ (400 ಅಂಕ):

* ಅಧಿಸೂಚನೆ ಪ್ರಕಾರ ಜೂನ್‌  18ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ.
* 200 ಅಂಕಗಳ ಬಹು ಆಯ್ಕೆ ಮಾದರಿಯ ಎರಡು ಪ್ರತ್ಯೇಕ ಪ್ರಶ್ನೆ ಪತ್ರಿಕೆಗಳಿರುತ್ತವೆ (ಸಾಮಾನ್ಯ ಅಧ್ಯಯನ ಪತ್ರಿಕೆ 1 ಮತ್ತು 2).
* ಸಾಮಾನ್ಯ ಅಧ್ಯಯನ ವಿಷಯದ 2ನೇ ಪ್ರತಿಕೆಯಲ್ಲಿ ಅರ್ಹತೆಗೆ ಶೇ.33ರಷ್ಟು ಅಂಕ ಪಡೆಯಬೇಕು. ತಪ್ಪು ಉತ್ತರಕ್ಕೆ ಶೇ.0.33ರಷ್ಟು ಅಂಕ ಕಡಿತವಿದೆ.


•► ಮುಖ್ಯ ಪರೀಕ್ಷೆ ಹಾಗೂ ವ್ಯಕ್ತಿತ್ವ ಪರೀಕ್ಷೆ(1750+275 ಅಂಕ):

* 2017ರ ಅಕ್ಟೋಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆಯಲಿದೆ.
* 300 ಅಂಕಗಳ ಇಂಗ್ಲಿಷ್ ಪತ್ರಿಕೆ ಹಾಗೂ ಯಾವುದೇ ಭಾರತೀಯ ಭಾಷೆಯಲ್ಲಿ ತೇರ್ಗಡೆಗೆ ಶೇ.25  ಅಂಕಗಳನ್ನು ಪಡೆಯಬೇಕು, ಆದರೆ ಒಟ್ಟು ಅಂಕಗಳಲ್ಲಿ ಈ ಪತ್ರಿಕೆ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ.
*500 ಅಂಕಗಳಿಗೆ ಐಚ್ಚಿಕ ವಿಷಯದ ಪರೀಕ್ಷೆ, ಭಾರತೀಯ ಭಾಷಾ ಪತ್ರಿಕೆ, 250 ಅಂಕಗಳ ನಾಲ್ಕು ಸಾಮಾನ್ಯ ಅಧ್ಯಯನ ಪತ್ರಿಕೆ ನಡೆಸಲಾಗುತ್ತದೆ.

* ವ್ಯಕ್ತಿತ್ವ ಪರೀಕ್ಷೆ/ಸಂದರ್ಶನಕ್ಕೆ 275 ಅಂಕಗಳು ನಿಗದಿಯಾಗಿದೆ.


•► ನೇಮಕಾತಿ ಹಂತ:

* ಮುಖ್ಯ ಪರೀಕ್ಷೆ ಬರೆಯಲು ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆಯಬೇಕಾಗುತ್ತದೆ.
* ಬಳಿಕ ಮುಖ್ಯ ಪರೀಕ್ಷೆಯಲ್ಲಿ ಗಳಿಸುವ ಅಂಕಗಳನ್ನು ಪರಿಗಣಿಸಿ ಅರ್ಹತಾ ಪಟ್ಟಿ ಸಿದ್ಧಪಡಿಸಿ ವ್ಯಕ್ತಿತ್ವ ಪರೀಕ್ಷೆಗೆ   ಆಹ್ವಾನಿಸಲಾಗುತ್ತದೆ.
* 2025 ಅಂಕಗಳಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಅಂತಿಮ ರ್‍ಯಾಂಕಿಂಗ್ ಪ್ರಕಟಿಸಲಾಗುತ್ತದೆ.
* ಐಐಎಎಸ್/ಐಪಿಎಸ್/ಐಎಎಫ್‌ಎಸ್/ಐಆರ್‌ಎಸ್/ ಗ್ರೂಪ್ ಎ ಮತ್ತು ಬಿ ಸೇರಿದಂತೆ ದೇಶದ 20ಕ್ಕೂ ಹೆಚ್ಚು ವಿಭಾಗಗಳ ಆಡಳಿತಾತ್ಮಕ ಹುದ್ದೆಗಳಿಗೆ ರ‍್ಯಾಂಕ್‌ ಆಧರಿಸಿ ನೇಮಕಾತಿ ಮಾಡಲಾಗುತ್ತದೆ.
* ಭಾರತೀಯ ಅರಣ್ಯ ಸೇವೆ(ಐಎಫ್‌ಎಸ್)ಗಳಿಗೆ ಪ್ರತ್ಯೇಕ ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಅರ್ಹರ ಆಯ್ಕೆ ಮಾಡಲಾಗುತ್ತದೆ.


•► ಎಲ್ಲೆಲ್ಲಿ ಪರೀಕ್ಷೆ:

ದೇಶದ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪೂರ್ವಭಾವಿ ಪರೀಕ್ಷೆಗಳಿಗೆ ರಾಜ್ಯದ ಅಭ್ಯರ್ಥಿಗಳು ಬೆಂಗಳೂರು, ಧಾರವಾಡ ಅಥವಾ ಮೈಸೂರು ಕೇಂದ್ರ ಆಯ್ಕೆ ಮಾಡಿಕೊಳ್ಳಬಹುದು.


•► ಸಹಾಯವಾಣಿ:

011-23385271/23381125/ 23098543

(courtesy :22 Feb, 2017 / ಪ್ರಜಾವಾಣಿ ವಾರ್ತೆ )

Wednesday, 22 February 2017

☀.ಕೆ.ಎ.ಎಸ್. ಮುಖ್ಯ ಪರೀಕ್ಷೆಯ ಪಠ್ಯಕ್ರಮ : (PART-III) (KAS Mains Paper's Syllabus)

☀.ಕೆ.ಎ.ಎಸ್. ಮುಖ್ಯ ಪರೀಕ್ಷೆಯ ಪಠ್ಯಕ್ರಮ : (PART-III)
(KAS Mains Paper's Syllabus)
•─━━━━━═══════════━━━━━─••─━━━━━═══════════━━━━━─•

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)

... ಮುಂದುವರೆದ ಭಾಗ.


ಮುಖ್ಯ ಪರೀಕ್ಷೆಯು ಲಿಖಿತ ಪರೀಕ್ಷೆ ಮತ್ತು ವ್ಯಕ್ತತ್ವ ಪರೀಕ್ಷೆಯನ್ನು ಒಳಗೊಂಡಿರತಕ್ಕದ್ದು.



  • ಲಿಖಿತ ಪರೀಕ್ಷೆ:


●.ಅರ್ಹತಾ ಪತ್ರಿಕೆಗಳು

1.ಕನ್ನಡ.                150 ಅಂಕಗಳು                2 ಗಂಟೆಗಳು

2.ಇಂಗ್ಲೀಷ್                 150 ಅಂಕಗಳು                2 ಗಂಟೆಗಳು


●.ಕಡ್ಡಾಯ ಪತ್ರಿಕೆಗಳು

ಪತ್ರಿಕೆ-1                 ಪ್ರಬಂಧ.                250 ಅಂಕಗಳು                3 ಗಂಟೆಗಳು

ಪತ್ರಿಕೆ-2                 ಸಾಮಾನ್ಯ ಅಧ್ಯಯನ-1                250 ಅಂಕಗಳು                3 ಗಂಟೆಗಳು

ಪತ್ರಿಕೆ-3                 ಸಾಮಾನ್ಯ ಅಧ್ಯಯನ-2                250 ಅಂಕಗಳು                3 ಗಂಟೆಗಳು

ಪತ್ರಿಕೆ-4                 ಸಾಮಾನ್ಯ ಅಧ್ಯಯನ-3                250 ಅಂಕಗಳು                3 ಗಂಟೆಗಳು

ಪತ್ರಿಕೆ-5                 ಸಾಮಾನ್ಯ ಅಧ್ಯಯನ-4                250 ಅಂಕಗಳು                3 ಗಂಟೆಗಳು

ಪತ್ರಿಕೆ-6                 ಐಚ್ಛೆಕ ವಿಷಯ (ಪತ್ರಿಕೆ-1)               250 ಅಂಕಗಳು                3 ಗಂಟೆಗಳು

ಪತ್ರಿಕೆ-7                 ಐಚ್ಛಿಕ ವಿಷಯ (ಪತ್ರಿಕೆ-2)               250 ಅಂಕಗಳು                 3 ಗಂಟೆಗಳು

●.ಲಿಖಿತ ಪರೀಕ್ಷೆಗೆ ಒಟ್ಟು ಅಂಕಗಳು                 1750 ಅಂಕಗಳು  


●.ಸೂಚನೆ:

1. ಅರ್ಹತಾ ಪತ್ರಿಕೆಗಳು ಎಂದರೆ, ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಅರ್ಹತಾ ಪತ್ರಿಕೆಗಳಲ್ಲಿ ಪಡೆದ ಅಂಕಗಳು ಅರ್ಹತಾ ಸ್ವರೂಪದ್ದಾಗಿರತಕ್ಕದ್ದು. ಈ ಪತ್ರಿಕೆಗಳಲ್ಲಿ ಅರ್ಹತೆಗಾಗಿ ಪ್ರತಿಯೊಂದು ಪತ್ರಿಯೊಂದು ಪತ್ರಿಕೆಯಲ್ಲಿ ಕನಿಷ್ಠ 35% ಎಂದು ನಿಗಧಿಪಡಿಸಿದೆ. ಈ ಎರಡು ಪತ್ರಿಕೆಗಳಲ್ಲಿ ಪಡೆದ ಅಂಕಗಳನ್ನು ಆಯ್ಕೆಗಾಗಿ ಮೆರಿಟ್ಟನ್ನು ನಿರ್ಧರಿಸುವುದಕ್ಕಾಗಿ ಪರಿಗಣಿಸತಕ್ಕದ್ದಲ್ಲ. ಅರ್ಹತಾ ಪರೀಕ್ಷೆಗಳು ಎಂದರೆ, ಕನ್ನಡ ಮತ್ತು ಇಂಗ್ಲೀಷ್ನಲ್ಲಿ ನಿಗದಿಪಡಿಸಿದ ಕನಿಷ್ಠ ಅಂಕಗಳನ್ನು ಪಡೆಯದೆ ಇರುವಂಥ ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಗೆ ಮತ್ತು ಆಯ್ಕೆಗೆ ಅರ್ಹರಾಗತಕ್ಕದ್ದಲ್ಲ.

2. ಪರೀಕ್ಷೆಯು, ಸಾಂಪ್ರಾದಾಯಿಕವಾದ ವಿವರಣಾತ್ಮಕ ರೀತಿಯ ಸ್ವರೂಪದ್ದಾಗಿರತಕ್ಕದ್ದು ಮತ್ತು ಎಲ್ಲಾ ಪತ್ರಿಕೆಗಳು ಕಡ್ಡಾಯವಾಗಿರತಕ್ಕದ್ದು.

3. ಪ್ರಶ್ನೆಪತ್ರಿಕೆಗಳು ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿ ಸಿದ್ಧ ಗೊಂಡಿರುತ್ತವೆ. ಅಭ್ಯರ್ಥಿಯು ಪತ್ರಿಕೆಯನ್ನು ಸಂಪೂರ್ಣವಾಗಿ ಕನ್ನಡದಲ್ಲಾಗಲಿ ಮತ್ತು ಇಂಗ್ಲೀಷ್ನಲ್ಲಾಗಲಿ ಉತ್ತರಿಸಬಹುದು.

4. ಮುಖ್ಯಪರೀಕ್ಷೆಯ ಪತ್ರಿಕೆ-1 ಕನ್ನಡ ಮತ್ತು ಪತ್ರಿಕೆ-2 ಇಂಗ್ಲೀಷ್ನ್ನು ಹೊರತುಪಡಿಸಿ ಮುಖ್ಯ ಪರೀಕ್ಷೆಯ ಮಟ್ಟವು ಪದವಿಯ ಹಂತದಲ್ಲಿರುತ್ತದೆ. ಪತ್ರಿಕೆ-1 ಕನ್ನಡ ಮತ್ತು ಪತ್ರಿಕೆ-2 ಇಂಗ್ಲೀಷ್ ಮಟ್ಟವು ಮೊದಲ ಭಾಷೆ ಕನ್ನಡ ಮತ್ತು ಮೊದಲ ಭಾಷೆ ಇಂಗ್ಲೀಷ್ ಅನುಕ್ರಮವಾಗಿ ಎಸ್.ಎಸ್.ಎಲ್.ಸಿ ಹಂತದಲ್ಲಿರುತ್ತವೆ.

5. ಎಲ್ಲಾ ಏಳು ಪತ್ರಿಕೆಗಳು ಕಡ್ಡಾಯವಾಗಿರುವವು ಪತ್ರಿಕೆ-2 ರಿಂದ 5 ನೇ ಪತ್ರಿಕೆ ಮೂರು ವಿಭಾಗಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಪತ್ರಿಕೆ ಗರಿಷ್ಠ 250 ಅಂಕಗಳನ್ನು ಒಳಗೊಮಡಿರುವುದು ಮತ್ತು ಮೂರು ಗಂಟೆಗಳ ಕಾಲಾವಧಿ ಮಾತ್ರ ಇರುತ್ತದೆ.

6. ಲಿಖಿತ ಮತ್ತು ಮೌಖಿಕ ಪರೀಕ್ಷೆ ಅಂಕಗಳನ್ನು ಆಯ್ಕೆ ಪಟ್ಟಿಯೊಂದಿಗೆ ಪ್ರಕಟಿಸಲಾಗುವುದು.


●.ವ್ಯಕ್ತಿತ್ವ ಪರೀಕ್ಷೆ:

ಆತ/ಆಕೆಯು ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಹೊರತುಪಡಿಸಿ, ಅವರ ಮುಂದೆ ದಾಖಲೆಗಳನ್ನು ಹಾಜರುಪಡಿಸಲಾಗುವ ಆ ಅಭ್ಯರ್ಥಿಯನ್ನು ಮಂಡಳಿಯು ಸಂದರ್ಶನ ನಡೆಸುತ್ತದೆ. ಆತ/ಆಕೆಯನ್ನು ಸಾಮಾನ್ಯ ಆಸಕ್ತಿಗಳ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುವುದು.

ಸಂದರ್ಶನ ಉದ್ದೇಶ ಸಕ್ಷಮ ಮಂಡಳಿಯು ಮತ್ತು ವೀಕ್ಷಕರು, ನಿಷ್ಪಕ್ಷಪಾತವಾಗಿ ಸಾರ್ವಜನಿಕ ಸೇವೆಗಳ ನಿರ್ವಹಣೆಗೆ ಅಭ್ಯರ್ಥಿಯ ವೈಯಕ್ತಿಕ ಅರ್ಹತೆಯನ್ನು ನಿರ್ವಹಿಸುವುದಾಗಿದೆ, ಪರೀಕ್ಷೆಯು, ಅಭ್ಯರ್ಥಿಯ ಮಾನಸಿಕ ಸಾಮಥ್ರ್ಯವನ್ನು ನಿರ್ಣಯಿಸಲು ಉದ್ದೇಶಿಸಲಾಗಿದೆ.

ಸ್ಥೂಲವಾಗಿ ಆತ/ಆಕೆಯ ಬೌದ್ಧಿಕ ಅರ್ಹತೆಗಳನ್ನು ಮಾತ್ರವಲ್ಲದೆ ವಾಸ್ತವಿಕತೆಯನ್ನು ನಿರ್ಧರಿಸುವುದಾಗಿದೆ, ನಿರ್ಧರಿಸುವ ಕೆಲವು ಅರ್ಹತೆಗಳು ಮಾನಸಿಕವಾಗಿ ಜಾಗರೂಕತೆ, ಹೊಂದಾಣಿಕೆಯ ಸಂಧಿಗ್ಧ ಅಧಿಕಾರಗಳು, ಸ್ಪಷ್ಟತೆ ಮತ್ತು ತಾರ್ಕಿಕ ನಿರೂಪಣೆ, ಸರಿ ಹೊಂದುವ ನಿರ್ಣಯಗಳು ವಿಭಿನ್ನ ಆಸಕ್ತಿ, ಗಾಢತೆ, ಸಾಮಾಜಿಕ ಒಗ್ಗಟ್ಟು ಮತ್ತು ನಾಯಕತ್ವ, ಬೌದ್ಧಕ ಹಾಗೂ ನೈತಿಕ ದೃಢ ನಿಷ್ಠೆಯಾಗಿರುವುದು, ಸಂದರ್ಶನ ಕೌಶಲವು ಕಟ್ಟುನಿಟ್ಟಾದ ಪಾಟೀ ಸವಾಲು ಆಗಿರುವುದಿಲ್ಲ. ಆದರೆ, ಸಹಜವಾದುದಾಗಿರುತ್ತದೆ. ಪ್ರತ್ಯಕ್ಷವಾಗಿ ಮತ್ತು ಉದ್ದೇಶಿತ ಚರ್ಚೆ ಇದ್ದಾಗ್ಯೂ ಅಭ್ಯರ್ಥಿಯ ಮಾನಸಿಕ ಸಾಮಥ್ರ್ಯವನ್ನು ವ್ಯಕ್ತಪಡಿಸುವ ಉದ್ದೇಶವಾಗಿದೆ.

 ಸಂದರ್ಶನ ಪರೀಕ್ಷೆಯು ಅಭ್ಯರ್ಥಿಯ ವಿಶಿಷ್ಟತೆ ಅಥವಾ ಸಾಮಾನ್ಯ ಜ್ಞಾನವನ್ನಾಗಲಿ ಪರೀಕ್ಷಿಸುವ ಉದ್ದೇಶವಲ್ಲ. ಅದನ್ನು ಈಗಾಗಲೇ ಲಿಖಿತ ಪರೀಕ್ಷೆಗಳ ಮೂಲಕ ಪರೀಕ್ಷಿಸಿರುವುದಾಗಿರುತ್ತದೆ. ಅಭ್ಯರ್ಥಿಗಳು ಅವರ ಶೈಕ್ಷಣಿಕ ಅಧ್ಯಯನಕ್ಕೆ ಸಂಬಂಧಿಸಿದಂತೆ ವಿಶೇಷ ವಿಷಯಗಳಲ್ಲಿ ಆಸಕ್ತಿವಹಿಸುವುದು ಮಾತ್ರವಲ್ಲದೆ ಉತ್ತಮ ಶಿಕ್ಷಣ ಯುವಕರ ಕೌತುಕವನ್ನು ಕೆರಳಿಸುವಂತಹ ಘಟನೆಗಳು, ಅವರ ಸುತ್ತಮುತ್ತ ನಡೆಯುತ್ತಿರುವ ರಾಜ್ಯದ ಅಥವಾ ದೇಶದ ಒಳಗಿನ ಹಾಗೂ ಹೊರಗಿನ ಘಟನೆಗಳು ಬಗ್ಗೆ ಹಾಗೂ ಆಧುನಿಕ ಚಿಂತನೆಗಳು ಮತ್ತು ಹೊಸ ಅನ್ವೇಷಣೆಗಳ ಬಗ್ಗೆ ಆಸಕ್ತಿವಹಿಸಬೇಕಾಗುತ್ತದೆ.

ಆಯೋಗವು ಸಂದರ್ಭಾನುಸಾರ ಗ್ರೂಪ್-ಎ ಮತ್ತು ಗ್ರೂಪ್-ಬಿ ನ ಸೇವೆಗಳಲ್ಲಿ ಖಾಲಿ ಇರುವ ಹುದ್ದೆಗಳ ಅಭ್ಯರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೂರರಷ್ಟು ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಅಹ್ವಾನಿಸತಕ್ಕದ್ದು. ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಖಚಿತಪಡಿಸಿಕೊಂಡು, ಖಾಲಿ ಹುದ್ದೆಗಳ ಅನುಪಾತದ ಆಧಾರದಲ್ಲಿ ಮುಖ್ಯ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಮೆರಿಟ್ ಕ್ರಮಾನುಸಾರ ಅಭ್ಯರ್ಥಿಗಳನ್ನು ವ್ಯಕ್ತತ್ವ ಪರೀಕ್ಷೆಗೆ ಆಹ್ವಾನಿಸುವುದು ವ್ಯಕ್ತಿತ್ವ ಪರೀಕ್ಷೆಯನ್ನು ಗರಿಷ್ಠ 200 ಅಂಕಗಳಿಗೆ ನಡೆಸತಕ್ಕದ್ದು.

...ಮುಂದುವರೆಯುವುದು. 
(Courtesy : UCC Bangalore) 

Tuesday, 21 February 2017

☀ ಇಂದಿನ ಐಎಎಸ್ / ಕೆಎಎಸ್ ಮಾದರಿ ಪರೀಕ್ಷಾ ಪ್ರಶ್ನೆ :— ☀️ ಅಮೇರಿಕಾದ 1 ಡಾಲರಿನ ಮಾರುಕಟ್ಟೆ ಬೆಲೆ 67 ರೂಪಾಯಿಗಳಾಗಿದೆ ಏಕೆ ? ರೂಪಾಯಿ ಮೌಲ್ಯ ಹೇಗೆ ನಿರ್ಧಾರವಾಗುತ್ತದೆ ? (Why the market price of 1 US dollar is equals to Rs 67 Rupees ? How the Rupee value is Determined?

☀ ಇಂದಿನ ಐಎಎಸ್ / ಕೆಎಎಸ್ ಮಾದರಿ ಪರೀಕ್ಷಾ ಪ್ರಶ್ನೆ :—
☀️ ಅಮೇರಿಕಾದ 1 ಡಾಲರಿನ ಮಾರುಕಟ್ಟೆ ಬೆಲೆ 67 ರೂಪಾಯಿಗಳಾಗಿದೆ ಏಕೆ ? ರೂಪಾಯಿ ಮೌಲ್ಯ ಹೇಗೆ ನಿರ್ಧಾರವಾಗುತ್ತದೆ ?
(Why the market price of 1 US dollar is equals to Rs 67 Rupees ? How the Rupee value is Determined?
━━━━━━━━━━━━━━━━━━━━━━━━━━━━━━━━━━━━━━━━━━━━━

ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆ ತಯಾರಿ
(IAS /KAS Mains exam preparation)

★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)


ಡಾಲರ್ vs ರುಪಾಯಿ

ಒಂದು ರಾಷ್ಟ್ರ ತನ್ನ ಕರೆನ್ಸಿ ನೋಟುಗಳನ್ನು ಇಷ್ಟಬಂದಂತೆ ಮುದ್ರಿಸುವ ಹಾಗೆ ಇಲ್ಲ ಅದಕ್ಕೆ ಅಂತರಾಷ್ಟ್ರೀಯ ಮಾನದಂಡಗಳು ನಿಯಮಗಳು ಇವೆ ಸ್ವರ್ಣಮಿತಿ ನಿಯಮ

ಚಿನ್ನದ ಮೌಲ್ಯವನ್ನು ಕೇಂದ್ರವಾಗಿಟ್ಟುಕೊಂಡು ವಿಶ್ವದ ಎಲ್ಲಾ ರಾಷ್ಟ್ರಗಳು ತಮ್ಮ ಕರೆನ್ಸಿ ನೋಟುಗಳನ್ನು ಮುದ್ರಿಸಬೇಕು.

➡️ ಸರಳವಾಗಿ ಅರ್ಥ ಮಾಡಿಸುವುದಾದರೆ

★ ಭಾರತದಲ್ಲಿ 100 ಗ್ರಾಂ ವನ್ನು ಆಧರಿಸಿ ರಿಸರ್ವ ಬ್ಯಾಂಕ್ 100 ರೂಪಾಯಿಗಳನ್ನು ಮುದ್ರಿಸಿ ಚಲಾವಣೆಗೆ ತರುತ್ತದೆ  ಎಂದರೆ ಒಂದು ಗ್ರಾಂ ಚಿನ್ನದ ಬೆಲೆ 1 ರೂಪಾಯಿ ಹಾಗೆ ಅಮೆರಿಕಾದಲ್ಲೂ 100 ಗ್ರಾಂ ಚಿನ್ನ ಆಧರಿಸಿ ಅಮೆರಿಕಾದ ಫೆಡರಲ್ ಬ್ಯಾಂಕ್ 100 ಡಾಲರ್ ಗಳನ್ನು ಮುದ್ರಿಸಿ ಚಲಾವಣೆಗೆ ತರುತ್ತದೆ ಆಗ 1 ಗ್ರಾಂ ಚಿನ್ನದ ಬೆಲೆ 1 ಡಾಲರ್  ಆಗಿರುತ್ತದೆ ಆಗ 1 ರೂಪಾಯಿ ಮುಖಬೆಲೆಗೆ  1 ಡಾಲರ್ ಸಮವಾಗಿರುತ್ತದೆ

★ ಚಲಾವಣೆಯಲ್ಲಿರುವ 100 ರೂಪಾಯಿ ಮತ್ತು ಚಲಾವಣೆಯಲ್ಲಿರುವ 100 ಡಾಲರ್ ವಾಪಸ್ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಎಷ್ಟು ಬರುತ್ತದೆಯೋ ಅಷ್ಟು ಹಣದ ಮೌಲ್ಯದ ಚಿನ್ನವನ್ನು ಖರೀಧಿಸಿ ಅಷ್ಟು ಹಣವನ್ನು ಮುದ್ರಿಸಿ ಚಲಾವಣೆಗೆ ತರಬೇಕು

★ ಉದಾಹರಣೆಗೆ ಭಾರತದಲ್ಲಿ ಚಲಾವಣೆಯಲ್ಲಿರುವ 100 ರೂಪಾಯಿಯಲ್ಲಿ  ತೆರಿಗೆ ರೂಪದಲ್ಲಿ 10 ರೂಪಾಯಿ ಸರಕಾರಕ್ಕೆ ವಾಪಸ್ಸ್ ಬಂದಿರುತ್ತದೆ  ರಿಸರ್ವ ಬ್ಯಾಂಕ್ ಆ10 ರೂಪಾಯಿಗೆ 10 ಗ್ರಾಂ ಚಿನ್ನ ಖರೀಧಿಸಿ 10 ರೂಪಾಯಿ ನೋಟುಗಳನ್ನು ಮುದ್ರಿಸುತ್ತದೆ

★ಚಲಾವಣೆಯಲ್ಲಿರುವ ಅಮೆರಿಕಾದ 100 ಡಾಲರ್ ಗಳಲ್ಲಿ ವಾಪಸ್ಸು ಸರ್ಕಾರಕ್ಕೆ ತೆರಿಗೆ ರೂಪದಲ್ಲಿ 50 ಡಾಲರ್ ಬರುತ್ತದೆ ಪೆಡರಲ್ ಬ್ಯಾಂಕ್ ಆ 50 ಡಾಲರ್ ಗಳಿಗೆ 50 ಗ್ರಾಂ ಚಿನ್ನ ಖರೀಧಿಸಿ ಮತ್ತೆ 50 ಡಾಲರ್ ಕರೆನ್ಸಿ ಮುದ್ರಿಸಿ ಚಲಾವಣೆಗೆ ತರುತ್ತದೆ  ಇಂಥಹ ಪರಿಸ್ಥಿತಿಯಲ್ಲಿಯೂ 1 ರೂಪಾಯಿ 1 ಡಾಲರಿಗೆ ಸಮವಾಗಿರುತ್ತದೆ

★ ಭಾರತದ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ಕೊರತೆಯಾಗಿ 40 ರೂಪಾಯಿಗಳಷ್ಟು ಕರೆನ್ಸಿ ಬೇಡಿಕೆ ಸೃಷ್ಟಿಯಾಗಿ ಆ 40 ರೂಪಾಯಿ ಮುದ್ರಿಸಲು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಹಣ ವಾಪಸ್ಸು ಬರದಿದ್ದ ಪರಿಸ್ಥಿತಿಯಲ್ಲಿ 40 ರೂಪಾಯಿ ಮೌಲ್ಯದ ಚಿನ್ನ ಖರೀಧಿಸಿ 40 ರೂಪಾಯಿ ಕರೆನ್ಸಿ ಮುದ್ರಿಸಿ ಚಲಾವಣೆಗೆ ತರಲು ಸಾಧ್ಯವಿಲ್ಲ ಆಗ ಸರ್ಕಾರ ರೂಪಾಯಿ ಮೌಲ್ಯವನ್ನು ಕುಗ್ಗಿಸಿ 40 ರೂಪಾಯಿ ಕರೆನ್ಸಿಯನ್ನು ಮುದ್ರಿಸಿ ಚಲಾವಣೆಗೆ ತರುತ್ತದೆ
★ ಆಗ ಮಾರುಕಟ್ಟೆಯಲ್ಲಿ 150 ರೂಪಾಯಿ ಕರೆನ್ಸಿ ಚಲಾವಣೆಯಲ್ಲಿ ಇರುತ್ತದೆ ರಿಸರ್ವ್ ಬ್ಯಾಂಕಿನಲ್ಲಿ 110 ಗ್ರಾಂ ಚಿನ್ನ ಮಾತ್ರವಿರುತ್ತದೆ. ಆಗ  1ರೂಪಾಯಿಯಾಗಿದ್ದ 1ಗ್ರಾಂ ಚಿನ್ನ 1ರೂಪಾಯಿ 40 ಪೈಸೆಯಾಗುತ್ತದೆ
—1ಗ್ರಾಂ ಚಿನ್ನಕ್ಕೆ 1 ಡಾಲರ್  ಇರುವುದ್ದರಿಂದ 1ಡಾಲರಿನ ಮುಖ ಬೆಲೆ 1ರೂಪಾಯಿ 40 ಪೈಸೆಯಾಗುತ್ತದೆ

extra points
★ ಭಾರತದಲ್ಲಿ ಜನರು ತೆರಿಗೆಯನ್ನು ಸರಿಯಾಗಿ ಪಾವತಿಸದಿರುವುದು ರೂಪಾಯಿ ಬೆಲೆ ಡಾಲರಿನ ಮುಂದೆ ಕಡಿಮೆಯಾಗಲು ಕೂಡ ಪ್ರಮುಖ ಕಾರಣ.
★ ಡಾಲರಿನ ಮುಖಬೆಲೆ ಮತ್ತು ಮಾರುಕಟ್ಟೆ ಬೆಲೆ ನಡುವೆ ವೆತ್ಯಾಸವಿದೆ.
— ಡಾಲರಿನ ಪೂರೈಕೆ ಮತ್ತು ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆ ಬೆಲೆ ನಿರ್ಧಾರವಾಗುತ್ತದೆ ಆದರೆ ಮುಖಬೆಲೆ ಚಿನ್ನದ ಆಧಾರದ ಮೇಲೆ ನಿರ್ಧಾರವಾಗುತ್ತದೆ.

☀ 2014 ರಂತೆ️ ಕೆಎಎಸ್ ಮುಖ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆ ಮಾದರಿ, ಅಂಕ : (PART II) (KAS MAINS QUESTION PAPERS PATTERN according to 2014 )

☀ 2014 ರಂತೆ️ ಕೆಎಎಸ್ ಮುಖ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆ ಮಾದರಿ, ಅಂಕ : (PART II)
(KAS MAINS QUESTION PAPERS PATTERN according to 2014 )
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಪರಿಕ್ಷೆಯ ಮಾದರಿ
(KAS Exam Pattern)

ಮುಂದುವರಿದ ಭಾಗ...

■. ಕನ್ನಡ 150 ಅಂಕ

■. ಇಂಗ್ಲಿಷ್ 150 ಅಂಕ


■. ಪತ್ರಿಕೆ 1 ಪ್ರಬಂಧ-250 ಅಂಕ
(ಅಂತಾರಾಷ್ಟ್ರೀಯ, ರಾಷ್ಟ್ರೀಯ ವಿಷಯಕ್ಕೆ 125 ಅಂಕದ ಪ್ರಬಂಧ, ರಾಜ್ಯ ಮತ್ತು ಸ್ಥಳೀಯ ಮಹತ್ವದ 125 ಅಂಕದ ಮತ್ತೊಂದು ಪ್ರಬಂಧ)


■. ಪತ್ರಿಕೆ 2 ಸಾಮಾನ್ಯ ಅಧ್ಯಯನ 1-250 ಅಂಕ
(ಇತಿಹಾಸ, ಸಂಸ್ಕೃತಿ, ಭಾರತದ ಆರ್ಥಿಕತೆ, ಯೋಜನೆ, ಗ್ರಾಮೀಣಾಭಿವೃದ್ಧಿ)


■. ಪತ್ರಿಕೆ 3 ಸಾಮಾನ್ಯ ಅಧ್ಯಯನ 2-250 ಅಂಕ
(ಭೌತಿಕ ಲಕ್ಷಣಗಳು ಮತ್ತು ನೈಸರ್ಗಿಕ ಸಂಪತ್ತು, ಭಾರತದ ಸಂವಿಧಾನ, ಸಾರ್ವಜನಿಕ ಆಡಳಿತ)


■. ಪತ್ರಿಕೆ 4 ಸಾಮಾನ್ಯ ಅಧ್ಯಯನ 3-250 ಅಂಕ
(ಭಾರತದ ಅಭಿವೃದ್ಧಿಯಲ್ಲಿ ಐಟಿ, ವಿಜ್ಞಾನದ ಬಳಕೆ, ಜೀವಶಾಸ್ತ್ರ, ಕೃಷಿ, ಆರೋಗ್ಯ, ಶುಚಿತ್ವದ ಹೊಸ ಅಲೆಗಳು, ಎಕಾಲಜಿ, ಪರಿಸರದ ಸವಾಲುಗಳು)


■. ಪತ್ರಿಕೆ 5 ಸಾಮಾನ್ಯ ಅಧ್ಯಯನ 4-250 ಅಂಕ
(ನೈತಿಕತೆ, ಪ್ರಾಮಾಣಿಕ, ಕೌಶಲ್ಯ ವಿಷಯಗಳು)


■. ಪತ್ರಿಕೆ 6 ಐಚ್ಚಿಕ ವಿಷಯ, ಪತ್ರಿಕೆ 1-250 ಅಂಕ

■. ಪತ್ರಿಕೆ 7 ಐಚ್ಚಿಕ ವಿಷಯ, ಪತ್ರಿಕೆ 2-250 ಅಂಕ

( ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯ ಮಾದರಿಯಲ್ಲಿ ಪಠ್ಯಕ್ರಮ ಬದಲಾವಣೆ ಮಾಡಲಾಗಿದೆ. ಮುಖ್ಯ ಪರೀಕ್ಷೆಯ ಒಟ್ಟು ಅಂಕವನ್ನು 1800ರಿಂದ 1750ಕ್ಕೆ ಇಳಿಸಲಾಗಿದೆ.)

(Courtesy : UCC Bangalore)

Monday, 20 February 2017

☀️ ಕೆಎಎಸ್‌ ಪೂರ್ವಭಾವಿ ಪರಿಕ್ಷೆಯ ಪಠ್ಯಕ್ರಮ : (PART I) (KAS PRELIMINARY PAPERS SYLLABUS)

☀️ ಕೆಎಎಸ್‌ ಪೂರ್ವಭಾವಿ ಪರಿಕ್ಷೆಯ ಪಠ್ಯಕ್ರಮ : (PART I)
(KAS PRELIMINARY PAPERS SYLLABUS)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)


 ಪೂರ್ವಭಾವಿ ಪರಿಕ್ಷೆಯು ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಐಎಎಸ್‌ ಪೂರ್ವಭಾವಿ ಪರೀಕ್ಷೆಯ ಸ್ವರೂಪದಲ್ಲಿರುತ್ತದೆ.

ಪೂರ್ವಭಾವಿ ಪರೀಕ್ಷೆಯು ವಸ್ತುನಿಷ್ಠ (ಬಹು ಆಯ್ಕೆ) ಮಾದರಿಯ ಎರಡು ಸಾಮಾನ್ಯ ಜ್ಞಾನ ಪತ್ರಿಕೆಗಳನ್ನು ಒಳಗೊಂಡಿರುತ್ತದೆ.

ಪ್ರತಿ ಪತ್ರಿಕೆಯು ಎರಡು ಗಂಟೆ ಕಾಲಾವಧಿಯನ್ನು ಹೊಂದಿರುತ್ತದೆ. ಹಾಗೇ ಗರಿಷ್ಠ 200 ಅಂಕಗಳನ್ನು ನಿಗದಿಪಡಿಸಲಾಗಿದೆ.

ಪ್ರತಿ ಪತ್ರಿಕೆಯಲ್ಲಿ ನೂರು ಪ್ರಶ್ನೆಗಳಿರುತ್ತವೆ.

ಒಂದು ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗಿದೆ.

ತಪ್ಪು ಉತ್ತರವನ್ನು ಗುರುತಿಸುವ ಪ್ರಶ್ನೆಗಳಿಗೆ ಅಂಕಗಳನ್ನು ಕಳೆಯುವ ಋಣಾತ್ಮಕ ಅಂಕ ಪದ್ಧತಿಯನ್ನು ಇದೇ ಮೊದಲ ಬಾರಿಗೆ ಪರಿಚಯಿಸಲಾಗಿದೆ.

ಈ ಪದ್ಧತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಜ್ಞರು ಭಾವಿಸಿದ್ದಾರೆ. @spardhaloka


☀️ KAS PRELIMINARY PAPERS SYLLABUS (explanation)
━━━━━━━━━━━━━━━━━━━━━━━━━━━━━━━━━━━━━━━━━━━━━

ಕೆಎಎಸ್‌ ಹುದ್ದೆಗಳಿಗೂ ಐಎಎಸ್‌  ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮದ ಮಾದರಿಯನ್ನೇ ಅನುಸರಿಸಲಾಗಿದೆ. ಪೂರ್ವಭಾವಿ ಪರೀಕ್ಷೆಯು ಒಟ್ಟು 400 ಅಂಕಗಳಿಗೆ ನಡೆಸಲಾಗುವುದು.

ಎರಡು ಸಾಮಾನ್ಯ ಜ್ಞಾನ ಪತ್ರಿಕೆಗಳ ಪಠ್ಯಕ್ರಮ ಈ ಕೆಳಕಂಡಂತಿದೆ.


☀️ ಪತ್ರಿಕೆ–1:

ಈ ಪತ್ರಿಕೆಯಲ್ಲಿ 100 ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಗೂ ಎರಡು ಅಂಕಗಳನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಎರಡು ಗಂಟೆಯ ಕಾಲಾವಧಿಯಲ್ಲಿ ಉತ್ತರಿಸಬೇಕು.

ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳು,
ಕರ್ನಾಟಕವನ್ನು ಮುಖ್ಯವಾಗಿರಿಸಿಕೊಂಡು ಭಾರತ ಇತಿಹಾಸದ ಮೇಲೆ ಪ್ರಶ್ನೆಗಳನ್ನು ಕೇಳಲಾಗುವುದು.
ಮುಖ್ಯವಾಗಿ ರಾಷ್ಟ್ರೀಯ ಚಳವಳಿ, ಸ್ವಾತಂತ್ರ್ಯಹೋರಾಟ, ಆ ಕಾಲಘಟ್ಟದ ಸಾಮಾಜಿಕ, ಆರ್ಥಿಕ ಪರಿಸ್ಥಿತಿ, ಸಾಂಸ್ಕೃತಿಕ ಮತ್ತು ರಾಜಕೀಯ ಇತಿಹಾಸದ ಪ್ರಶ್ನೆಗಳಿರುತ್ತವೆ.
ಜಾಗತಿಕ ಭೂಗೋಳ, ಭಾರತದ ಭೂಗೋಳ ಸೇರಿದಂತೆ ಕರ್ನಾಟಕ ಭೂಗೋಳವನ್ನು ಮುಖ್ಯವಾಗಿರಿಸಿಕೊಂಡ ಪ್ರಶ್ನೆಗಳು,
ಕರ್ನಾಟಕವನ್ನು ಮುಖ್ಯವಾಗಿರಿಸಿಕೊಂಡು ದೇಶದ ರಾಜಕೀಯ ವ್ಯವಸ್ಥೆ, ಆರ್ಥಿಕ ಸುಧಾರಣೆಗಳು, ಗ್ರಾಮೀಣಾಭಿವೃದ್ಧಿ, ಬಡತನ ನಿರ್ಮೂಲನೆ, ಜನಸಂಖ್ಯಾ ಶಾಸ್ತ್ರ ಹಾಗೂ ಸಾಮಾಜಿಕ ಬದಲಾವಣೆಗಳನ್ನು ಒಳಗೊಂಡ ಭಾರತದ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆ, ಈ ಅಂಶಗಳನ್ನು ಪ್ರಾಮುಖ್ಯವಾಗಿರಿಸಿಕೊಂಡು ಪ್ರಶ್ನೆಗಳನ್ನು ಕೇಳಲಾಗುವುದು.

ಈ ಪತ್ರಿಕೆಯು ಸಂಪೂರ್ಣವಾಗಿ ಪದವಿ ಮಟ್ಟದಾಗಿರುತ್ತದೆ.


☀️ ಪತ್ರಿಕೆ–2:

ಈ ಪತ್ರಿಕೆಯಲ್ಲಿ ಅಭ್ಯರ್ಥಿಗಳು ಎರಡು ಗಂಟೆಯ ಕಾಲಾವಧಿಯಲ್ಲಿ 200 ಅಂಕಗಳಿಗೆ 100 ಪ್ರಶ್ನೆಗಳಿಗೆ ಉತ್ತರಿಸಬೇಕು.

ರಾಜ್ಯದ ಪ್ರಚಲಿತ ವಿದ್ಯಮಾನಗಳು ಮತ್ತು ರಾಜ್ಯ ಸರ್ಕಾರದ ಯೋಜನೆಗಳು, ದೈನಂದಿನ ವಿಜ್ಞಾನ, ಪರಿಸರ ವಿಜ್ಞಾನ ಮತ್ತು ಸಮಕಾಲೀನ ತಂತ್ರಜ್ಞಾನ ಕುರಿತ ಪ್ರಶ್ನೆಗಳು ಇರುತ್ತವೆ.
ವಿಜ್ಞಾನ, ಪರಿಸರ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಎಸ್‌ಎಸ್‌ಎಲ್‌ಸಿ ಮಟ್ಟದಾಗಿರುತ್ತವೆ. ಅಥವಾ ಒಬ್ಬ ಸುಕ್ಷಿತ ವ್ಯಕ್ತಿ ಸಾಮಾನ್ಯವಾಗಿ ತಿಳಿದಿರುವ ಜ್ಞಾನ ಮಟ್ಟದಲ್ಲಿ ವಿಜ್ಞಾನ ಪ್ರಶ್ನೆಗಳನ್ನು ಕೇಳಲಾಗುವುದು.
ಎಸ್‌ಎಸ್‌ಎಲ್‌ಸಿ ಮಟ್ಟದ ಮನೋ ಸಾಮರ್ಥ್ಯದ ಪ್ರಶ್ನೆಗಳನ್ನು ಕೇಳಲಾಗುವುದು. ಇದರಲ್ಲಿ ಗ್ರಹಿಕೆ, ತಾರ್ಕಿಕ ಸಮರ್ಥನೆ ಮತ್ತು ವಿಶ್ಲೇಷಣೆ, ನಿರ್ಧಾರ ಕೈಗೊಳ್ಳುವಿಕೆ, ಸಮಸ್ಯೆ ಬಿಡಿಸುವಿಕೆ, ಮೂಲ ಗಣಿದ ಜ್ಞಾನ, ದತ್ತಾಂಶ, ಪರಿಮಾಣ, ಸಂಖ್ಯೆಗಳು, ನಕ್ಷೆಗಳು, ರೇಖಾಚಿತ್ರಗಳು ಮತ್ತು ಕೋಷ್ಟಕಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಇರುತ್ತವೆ.

ಎರಡನೇ ಪತ್ರಿಕೆಯಲ್ಲಿ ಮನೋಸಾಮರ್ಥ್ಯ ಮತ್ತು ಗಣಿತದ ಪ್ರಶ್ನೆಗಳನ್ನು ಹೊರತು ಪಡಿಸಿದರೆ ಉಳಿದ ಎಲ್ಲಾ ಪ್ರಶ್ನೆಗಳು ಪದವಿ ಮಟ್ಟದಲ್ಲಿರುತ್ತವೆ.


☀️ ಋಣಾತ್ಮಕ ಮೌಲ್ಯಮಾಪನ:

ಅಭ್ಯರ್ಥಿಗಳು ತಪ್ಪು ಉತ್ತರವನ್ನು ಗುರುತಿಸಿದ ಪ್ರಶ್ನೆಗೆ ಪಡೆದ ಅಂಕಗಳಲ್ಲಿ 1/4 ಅಂಕವನ್ನು ಕಳೆಯಲಾಗುವುದು.
ಅಂದರೆ ಅಭ್ಯರ್ಥಿಯು 100 ಪ್ರಶ್ನೆಗಳಲ್ಲಿ 40 ಪ್ರಶ್ನೆಗಳನ್ನು ತಪ್ಪಾಗಿ ಗುರುತಿಸಿದ್ದರೆ ಅಭ್ಯರ್ಥಿಯು ಪಡೆದ ಒಟ್ಟು ಅಂಕಗಳಲ್ಲಿ 10 ಅಂಕಗಳನ್ನು ಕಳೆಯಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಉತ್ತರವನ್ನು ನಿಖರವಾಗಿ ಗೊತ್ತಿದ್ದಲ್ಲಿ ಮಾತ್ರ ಉತ್ತರಿಸಬೇಕು.
(Courtesy : UCC Bangalore)