☀️ 1090 ಸ್ಥಾನಗಳಿಗೆ ಸಿವಿಲ್ ಸರ್ವೀಸಸ್ (IAS) ಪರೀಕ್ಷೆ ಅಧಿಸೂಚನೆ - 2017 ಪ್ರಕಟ
(UPSC Releases Civil Services (IAS) 2017 Notification for 980 Vacancies,)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಿವಿಲ್ ಸರ್ವೀಸಸ್ ಪರೀಕ್ಷೆ ಅಧಿಸೂಚನೆ
(Civil Services (IAS) notification)
★ ಐಎಎಸ್ ಪರೀಕ್ಷೆ
(IAS Exam)
ದೇಶದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಬಯಸುತ್ತಿರುವವರು, ಸಮಾಜ ಮುಖಿ ಕಾರ್ಯಗಳ ಮೂಲಕ ದೇಶದ ಅಭಿವೃದ್ಧಿ ವೇಗ ಹೆಚ್ಚಿಸಲು ಕಂಕಣ ತೊಟ್ಟವರು, ಉನ್ನತ ಹುದ್ದೆಗಳ ಮೂಲಕ ಜನರ ಸೇವೆಗೆ ಕಾಯುತ್ತಿರುವ ಯುವಕ-ಯುವತಿಯರಿಗೆ ಇಲ್ಲಿದೆ ಉತ್ತಮ ಅವಕಾಶ.
ಕೇಂದ್ರ ನಾಗರೀಕ ಸೇವಾ ಆಯೋಗ (ಯುಪಿಎಸ್‌ಸಿ) 2017ನೇ ಸಾಲಿನ ಸಿವಿಲ್ ಸರ್ವೀಸಸ್ ಮತ್ತು ಭಾರತೀಯ ಅರಣ್ಯ ಸೇವೆ(ಐಎಫ್ಎಸ್) ಪರೀಕ್ಷೆಗಳಿಗೆ ಅಧಿಸೂಚನೆ ಪ್ರಕಟಿಸಿದೆ.
*.980+110(ಐಎಫ್ಎಸ್) ಸ್ಥಾನಗಳ ಭರ್ತಿಗಾಗಿ ಪರೀಕ್ಷೆ ನಡೆಸಯಲಿದೆ.
*.ಮೂರು ಹಂತಗಳಲ್ಲಿ ಸಿವಿಲ್ ಸರ್ವೀಸಸ್ ಪರೀಕ್ಷೆ ನಡೆಸಲಾಗುತ್ತದೆ.
*.ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳು ಅಂಕ ಪಡೆಯುತ್ತಾರೆ.
*.ಗಳಿಸಿದ ಅಂಕಗಳ ಆಧಾರದ ಮೇಲೆ ರ‍್ಯಾಂಕ್ ಪಟ್ಟಿ ಸಿದ್ಧಪಡಿಸಲಾಗುತ್ತದೆ.
*.ಈ ಮೂಲಕ ಐಎಎಸ್, ಐಪಿಎಸ್, ಐಎಫ್‌ಎಸ್ ಸ್ಥಾನಗಳಿಗೆ ನೇಮಕಾತಿ ನಡೆಯುತ್ತದೆ.
==============
•► ಒಟ್ಟು ಸ್ಥಾನ: 1090
•► ಅರ್ಜಿ ಸಲ್ಲಿಕೆ ಕೊನೇ ದಿನ: ಮಾರ್ಚ್ 17
•► ಪೂರ್ವಭಾವಿ ಪರೀಕ್ಷೆ: ಜೂನ್ 18
•► ಜಾಲತಾಣ: www.upsc.gov.in; upsconline.nic.in
=======
•► ವಯೋಮಿತಿ:
* ಕನಿಷ್ಠ 21 ಹಾಗೂ ಗರಿಷ್ಠ 32 ವರ್ಷ (6 ಪ್ರಯತ್ನ).
* ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ
* ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ (ಗರಿಷ್ಠ 9 ಪ್ರಯತ್ನ)
* ಅಂಗವಿಕಲರಿಗೆ 10 ವರ್ಷ ಸಡಿಲಿಕೆ
•► ವಿದ್ಯಾರ್ಹತೆ:
* ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪೂರೈಸಿರಬೇಕು.
* ಭಾರತೀಯ ಅರಣ್ಯ ಸೇವೆ(ಐಎಫ್‌ಎಸ್) ಆಯ್ಕೆಗೆ ವಿಜ್ಞಾನ/ಕೃಷಿ/ಪಶುಶಾಸ್ತ್ರ/ಅರಣ್ಯ/ಗಣಿತ ಅಥವಾ ಇಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆದಿರಬೇಕು.
* ಪದವಿ ಅಂತಿಮ ವರ್ಷ/ಸೆಮಿಸ್ಟರ್‌ನಲ್ಲಿ ಅಭ್ಯಾಸ ಮಾಡುತ್ತಿರುವವರಿಗೂ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.
* ಎಂಬಿಬಿಎಸ್ ಅಭ್ಯರ್ಥಿಗಳು ಸಂದರ್ಶನಕ್ಕೂ ಮುನ್ನ ಇಂಟರ್ನ್‌ಷಿಪ್ ಪೂರೈಸಿರಬೇಕು.
•► ಆನ್‌ಲೈನ್ ಅರ್ಜಿ:
* ಆಯೋಗದ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಅರ್ಜಿ ಸ್ವೀಕೃತಿ ಬಳಿಕ ಚಲನ್ ಡೌನ್‌ಲೋಡ್ ಮಾಡಿ, ಯಾವುದೇ ಎಸ್‌ಬಿಐ ಶಾಖೆಯಲ್ಲಿ ಅಥವಾ ಆನ್‌ಲೈನ್‌ನಲ್ಲಿ ಸಾಮಾನ್ಯ ಹಾಗೂ ಒಬಿಸಿ ವರ್ಗದ ಪುರುಷ ಅಭ್ಯರ್ಥಿಗಳು ₹100 ಶುಲ್ಕ ಪಾವತಿಸಬೇಕು.
* ಮಹಿಳೆಯರು/ ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
•► ಪ್ರಿಲಿಮಿನರಿ ಪರೀಕ್ಷೆ (400 ಅಂಕ):
* ಅಧಿಸೂಚನೆ ಪ್ರಕಾರ ಜೂನ್ 18ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ.
* 200 ಅಂಕಗಳ ಬಹು ಆಯ್ಕೆ ಮಾದರಿಯ ಎರಡು ಪ್ರತ್ಯೇಕ ಪ್ರಶ್ನೆ ಪತ್ರಿಕೆಗಳಿರುತ್ತವೆ (ಸಾಮಾನ್ಯ ಅಧ್ಯಯನ ಪತ್ರಿಕೆ 1 ಮತ್ತು 2).
* ಸಾಮಾನ್ಯ ಅಧ್ಯಯನ ವಿಷಯದ 2ನೇ ಪ್ರತಿಕೆಯಲ್ಲಿ ಅರ್ಹತೆಗೆ ಶೇ.33ರಷ್ಟು ಅಂಕ ಪಡೆಯಬೇಕು. ತಪ್ಪು ಉತ್ತರಕ್ಕೆ ಶೇ.0.33ರಷ್ಟು ಅಂಕ ಕಡಿತವಿದೆ.
•► ಮುಖ್ಯ ಪರೀಕ್ಷೆ ಹಾಗೂ ವ್ಯಕ್ತಿತ್ವ ಪರೀಕ್ಷೆ(1750+275 ಅಂಕ):
* 2017ರ ಅಕ್ಟೋಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆಯಲಿದೆ.
* 300 ಅಂಕಗಳ ಇಂಗ್ಲಿಷ್ ಪತ್ರಿಕೆ ಹಾಗೂ ಯಾವುದೇ ಭಾರತೀಯ ಭಾಷೆಯಲ್ಲಿ ತೇರ್ಗಡೆಗೆ ಶೇ.25 ಅಂಕಗಳನ್ನು ಪಡೆಯಬೇಕು, ಆದರೆ ಒಟ್ಟು ಅಂಕಗಳಲ್ಲಿ ಈ ಪತ್ರಿಕೆ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ.
*500 ಅಂಕಗಳಿಗೆ ಐಚ್ಚಿಕ ವಿಷಯದ ಪರೀಕ್ಷೆ, ಭಾರತೀಯ ಭಾಷಾ ಪತ್ರಿಕೆ, 250 ಅಂಕಗಳ ನಾಲ್ಕು ಸಾಮಾನ್ಯ ಅಧ್ಯಯನ ಪತ್ರಿಕೆ ನಡೆಸಲಾಗುತ್ತದೆ.
* ವ್ಯಕ್ತಿತ್ವ ಪರೀಕ್ಷೆ/ಸಂದರ್ಶನಕ್ಕೆ 275 ಅಂಕಗಳು ನಿಗದಿಯಾಗಿದೆ.
•► ನೇಮಕಾತಿ ಹಂತ:
* ಮುಖ್ಯ ಪರೀಕ್ಷೆ ಬರೆಯಲು ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆಯಬೇಕಾಗುತ್ತದೆ.
* ಬಳಿಕ ಮುಖ್ಯ ಪರೀಕ್ಷೆಯಲ್ಲಿ ಗಳಿಸುವ ಅಂಕಗಳನ್ನು ಪರಿಗಣಿಸಿ ಅರ್ಹತಾ ಪಟ್ಟಿ ಸಿದ್ಧಪಡಿಸಿ ವ್ಯಕ್ತಿತ್ವ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ.
* 2025 ಅಂಕಗಳಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಅಂತಿಮ ರ್‍ಯಾಂಕಿಂಗ್ ಪ್ರಕಟಿಸಲಾಗುತ್ತದೆ.
* ಐಐಎಎಸ್/ಐಪಿಎಸ್/ಐಎಎಫ್‌ಎಸ್/ಐಆರ್‌ಎಸ್/ ಗ್ರೂಪ್ ಎ ಮತ್ತು ಬಿ ಸೇರಿದಂತೆ ದೇಶದ 20ಕ್ಕೂ ಹೆಚ್ಚು ವಿಭಾಗಗಳ ಆಡಳಿತಾತ್ಮಕ ಹುದ್ದೆಗಳಿಗೆ ರ‍್ಯಾಂಕ್ ಆಧರಿಸಿ ನೇಮಕಾತಿ ಮಾಡಲಾಗುತ್ತದೆ.
* ಭಾರತೀಯ ಅರಣ್ಯ ಸೇವೆ(ಐಎಫ್‌ಎಸ್)ಗಳಿಗೆ ಪ್ರತ್ಯೇಕ ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಅರ್ಹರ ಆಯ್ಕೆ ಮಾಡಲಾಗುತ್ತದೆ.
•► ಎಲ್ಲೆಲ್ಲಿ ಪರೀಕ್ಷೆ:
ದೇಶದ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪೂರ್ವಭಾವಿ ಪರೀಕ್ಷೆಗಳಿಗೆ ರಾಜ್ಯದ ಅಭ್ಯರ್ಥಿಗಳು ಬೆಂಗಳೂರು, ಧಾರವಾಡ ಅಥವಾ ಮೈಸೂರು ಕೇಂದ್ರ ಆಯ್ಕೆ ಮಾಡಿಕೊಳ್ಳಬಹುದು.
•► ಸಹಾಯವಾಣಿ:
011-23385271/23381125/ 23098543
(courtesy :22 Feb, 2017 / ಪ್ರಜಾವಾಣಿ ವಾರ್ತೆ )

No comments:
Post a Comment