"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 3 January 2017

☀️ ಭಾಗ - V: 2016 ರ ಪ್ರಮುಖ ಸ್ಥಳೀಯ / ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ : (Important Current Affairs of 2016 at glance)

☀️ ಭಾಗ - V: 2016 ರ ಪ್ರಮುಖ ಸ್ಥಳೀಯ / ರಾಷ್ಟ್ರೀಯ / ಅಂತರರಾಷ್ಟ್ರೀಯ ಘಟನೆಗಳು - ಒಂದು ಹಿನ್ನೋಟ :
(Important Current Affairs of 2016 at glance)
━━━━━━━━━━━━━━━━━━━━━━━━━━━━━━━━━━━━━━━━━━━━━

★ 2016ರ ಪ್ರಚಲಿತ ಘಟನೆಗಳು.
(2016 current affairs in short)

...ಮುಂದುವರೆದ ಭಾಗ.


•► ‘ಒಂದು ದೇಶ, ಒಂದು ತೆರಿಗೆ’, ‘ಏಕ್ ಭಾರತ್, ಶ್ರೇಷ್ಠ ಭಾರತ್’, ‘ಸ್ಟಾರ್ಟಪ್ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ’ ಹೀಗೆ ವಿವಿಧ ಯೋಜನೆಗಳ ಅನುಷ್ಠಾನದ ಮೂಲಕ ತೆರಿಗೆ ವ್ಯವಸ್ಥೆ, ಆರ್ಥಿಕತೆಗಳ ಸಮಗ್ರ ಬದಲಾವಣೆಗೆ ದೇಶ ಸಜ್ಜಾದ ವರ್ಷ ಇದು. ಕೈಗಾರಿಕಾ ರಂಗ ಬೆಳವಣಿಗೆಯತ್ತ ಮುಖ ಮಾಡಿದರೆ, ಕಾಪೋರೇಟ್ ಕಂಪನಿಗಳು ಸಿಹಿ-ಕಹಿ ಎರಡನ್ನೂ ಅನುಭವಿಸಿದವು. ದೂರಸಂಪರ್ಕ ಕ್ಷೇತ್ರದಲ್ಲಿ ಬೆಲೆಸಮರಕ್ಕೆ ನಾಂದಿಯಾದ ಈ ವರ್ಷದಲ್ಲಿ ಉದ್ಯಮಕ್ಷೇತ್ರಕ್ಕೆ ಯುವ ಮುಖಗಳು ಆಗಮಿಸಿ, ಆಯಕಟ್ಟಿನ ಹುದ್ದೆಗಳನ್ನು ಸ್ವೀಕರಿಸಿದ್ದು ಮಹತ್ವದ ಬೆಳವಣಿಗೆ.
ಒಂದು ದೇಶ ಒಂದು ತೆರಿಗೆ

•► ಉದಾರೀಕರಣ ನೀತಿಗೆ ಭಾರತ ತೆರೆದುಕೊಂಡು 25 ವರ್ಷಗಳಾಗಿವೆ. ತೆರಿಗೆ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಗೆ ಕಾರಣವಾಗುವ ಜಿಎಸ್​ಟಿ(ಸರಕು ಮತ್ತು ಸೇವಾ ತೆರಿಗೆ) ಮಸೂದೆಯನ್ನು ಸಂಸತ್ತು ಈ ವರ್ಷ ಅಂಗೀಕರಿಸಿದೆ. ಒಂಭತ್ತು ವರ್ಷಗಳ ಹಿಂದಿನ ಈ ಮಸೂದೆ ಸಾಕಷ್ಟು ಪರಿಷ್ಕರಣೆಗಳನ್ನು ಕಂಡಿದೆ. ಈ ಪರಿಷ್ಕೃತ ಮಸೂದೆ ಕಳೆದ ವರ್ಷವೇ ಲೋಕಸಭೆಯ ಅಂಗೀಕಾರ ಪಡೆದಿತ್ತು. ಈ ವರ್ಷ ರಾಜ್ಯಸಭೆಯಲ್ಲೂ ಅಂಗೀಕಾರಗೊಂಡಿದ್ದು, ಮುಂದಿನ ಹಣಕಾಸು ವರ್ಷಾರಂಭದಲ್ಲೇ ಜಾರಿಗೊಳ್ಳುವ ನಿರೀಕ್ಷೆ ಇತ್ತಾದರೂ ವರ್ಷಾಂತ್ಯದಲ್ಲಿ ನಡೆದ ರಾಜ್ಯಗಳ ವಿತ್ತ ಸಚಿವರ ಸಭೆಯಲ್ಲಿ ಒಮ್ಮತ ಮೂಡದ್ದರಿಂದ ಈ ಸಾಧ್ಯತೆ ಅನುಮಾನಾಸ್ಪದವಾಗಿದೆ.

•► ಡಿಸೆಂಬರ್ 10 ಮತ್ತು 11ರಂದು ಜಿಎಸ್​ಟಿ ಸಭೆ ನಡೆಯಬೇಕಿತ್ತು. ಆದರೆ, ರಾಜ್ಯ-ಕೇಂದ್ರಗಳ ಪಾಲು ಹಂಚಿಕೆಗೆ ಸಂಬಂಧಿಸಿ ಮೂಡಿದ ಭಿನ್ನಮತದಿಂದಾಗಿ ಸಭೆ ಒಂದೇ ದಿನಕ್ಕೆ ಮೊಟಕುಗೊಂಡಿತು. ವಾರ್ಷಿಕ 1.5 ಕೋಟಿ ರೂ.ಗಿಂತ ಕಡಿಮೆ ವಹಿವಾಟು ಇರುವ ಉದ್ಯಮಗಳನ್ನು ರಾಜ್ಯಗಳ ವ್ಯಾಪ್ತಿಗೆ ಮತ್ತು 1.5 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಇರುವ ಉದ್ಯಮಗಳನ್ನು ಕೇಂದ್ರ ತೆರಿಗೆ ಮಂಡಳಿ ವ್ಯಾಪ್ತಿಗೆ ತರಬೇಕು ಎಂಬ ಪ್ರಸ್ತಾವನೆ ಜಿಎಸ್​ಟಿ ವಿಧೇಯಕದಲ್ಲಿದೆ. ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳು ಈ ನಿಯಮವನ್ನು ವಿರೋಧಿಸುತ್ತಿವೆ. ವಹಿವಾಟು ಆಧರಿಸಿ ತೆರಿಗೆ ಹಂಚಿಕೆಯಾಗಲಿ ಎಂಬುದು ಈ ರಾಜ್ಯಗಳ ಅಭಿಪ್ರಾಯ.



•► ಸ್ಟಾರ್ಟಪ್ ಇಂಡಿಯಾ ಸ್ಟ್ಯಾಂಡಪ್ ಇಂಡಿಯಾ

ಉದ್ಯಮಶೀಲತೆಯ ಹೊಸ ಮಂತ್ರ

ಯುವರಂಗದ ಕ್ರಿಯಾಶೀಲತೆ ಹಾಗೂ ಸೃಜನಶೀಲತೆಯನ್ನು ದೇಶದ ಅರ್ಥವ್ಯವಸ್ಥೆಗೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಸದ್ವಿನಿಯೋಗಪಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ‘ಸ್ಟಾರ್ಟಪ್ ಇಂಡಿಯಾ, ಸ್ಟ್ಯಾಂಡ್​ಪ್ ಇಂಡಿಯಾ’ ಯೋಜನೆಗೆ ಜ.16ರಂದು ಚಾಲನೆ ನೀಡಿತು. ಪ್ರಸಕ್ತ ಭಾರತವು 4,200 ಸ್ಟಾರ್ಟಪ್​ಗಳನ್ನು ಹೊಂದುವ ಮೂಲಕ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದ್ದು, 2020ರೊಳಗೆ ನಂ.1 ಸ್ಥಾನಕ್ಕೇರುವ ಗುರಿ ಹೊಂದಿದೆ. ನ್ಯಾಸ್ಕಾಮ್ ಹಾಗೂ ಜಿನೇವಾ ಕನ್ಸಲ್ಟಿಂಗ್​ನ 2016ರ ಜಂಟಿ ವರದಿಯು ಭಾರತ ನವೋದ್ಯಮಕ್ಕೆ ಪ್ರಶಸ್ತ ತಾಣ ಎಂದು ಉಲ್ಲೇಖಿಸಿದೆ. ವಿಶೇಷವೆಂದರೆ, ಶೇಕಡ 72ರಷ್ಟು ನವೋದ್ಯಮಗಳನ್ನು ಆರಂಭಿಸಿರುವವರು 35 ವರ್ಷದೊಳಗಿನವರು. ಭಾರತವೂ ಅತಿ ಹೆಚ್ಚು ಸ್ಟಾರ್ಟಪ್​ಗಳು ಬೆಂಗಳೂರು, ಮುಂಬೈ ಹಾಗೂ ದೆಹಲಿಯಲ್ಲಿವೆ.


•► ಏಕ್ ಭಾರತ್ ಶ್ರೇಷ್ಠ ಭಾರತ್

ರಾಜ್ಯ-ರಾಜ್ಯಗಳ ನಡುವಿನ ಶಕ್ತಿ ವಿನಿಮಯದಿಂದ ವ್ಯಾಪಾರ, ಆರ್ಥಿಕ ಸಂಬಂಧಗಳನ್ನು ಬಲಗೊಳಿಸುವ ಮಹತ್ವಾಕಾಂಕ್ಷೆಯಿಂದ ಕೇಂದ್ರ ಸರ್ಕಾರ ನವೆಂಬರ್ 1ರಂದು ‘ಏಕ್ ಭಾರತ್ ಶ್ರೇಷ್ಠ ಭಾರತ್’ ಯೋಜನೆಗೆ ಚಾಲನೆ ನೀಡಿತು. ಅದಕ್ಕೂ ಮುಂಚೆ, ಈ ಯೋಜನೆ ಬಗ್ಗೆ ಅಭಿಪ್ರಾಯ, ಸಲಹೆಗಳನ್ನು ಜನರಿಂದ ಆಹ್ವಾನಿಸಲಾಗಿತ್ತು. ‘ಮೈ ಗವರ್ನ್​ವೆುಂಟ್ ಡಾಟ್ ಇನ್’ನಲ್ಲಿ 50 ಸಾವಿರಕ್ಕೂ ಅಧಿಕ ಅಭಿಪ್ರಾಯ, ಸಲಹೆಗಳು ದಾಖಲಾದವು. ಇದರಲ್ಲಿ ಸರ್ಕಾರ ಮೂರು ಅತ್ಯುತ್ತಮ ಸಲಹೆಗಳನ್ನು ಆಯ್ದುಕೊಂಡು ಅವುಗಳಿಗೆ ಕ್ರಮವಾಗಿ 1 ಲಕ್ಷ ರೂ., 75 ಸಾವಿರ ರೂ., 50 ಸಾವಿರ ರೂ.ಗಳ ಬಹುಮಾನವನ್ನು ಘೊಷಿಸಿತು. ಈ ಯೋಜನೆಗಳ ಮೂಲೋದ್ದೇಶಗಳ ಅನ್ವಯ 2016ನೇ ವರ್ಷದಲ್ಲಿ ಹರಿಯಾಣದ ಕೃಷಿ ನೀತಿ-ಕೃಷಿ ತಂತ್ರಜ್ಞಾನವನ್ನು ತಮಿಳುನಾಡು ಅಳವಡಿಸಿಕೊಂಡಿತು, ತಮಿಳುನಾಡಿನ ಸಾಂಸ್ಕೃತಿಕ ವೈಶಿಷ್ಟ್ಯಳನ್ನು ಹರಿಯಾಣ ತನ್ನ ನೆಲದಲ್ಲಿ ಪಸರಿಸಿತು.


•► ಕುಸಿಯುತ್ತಿದೆ ಐಟಿ ಕ್ಷೇತ್ರ

1990ರಿಂದೀಚೆಗೆ ಅಭಿವೃದ್ಧಿ ಹಾದಿಯಲ್ಲೇ ಇದ್ದ ಭಾರತೀಯ ಐಟಿ ಕ್ಷೇತ್ರ ಇದೀಗ ಕುಸಿತದತ್ತ ಸಾಗಿದೆ. ಇನ್ಪೋಸಿಸ್, ವಿಪ್ರೋ, ಟಿಸಿಎಸ್ ಸೇರಿದಂತೆ ಹೆಚ್ಚಿನ ಐಟಿ ಸಂಸ್ಥೆಗಳು 2016ರಲ್ಲಿ ನಿರೀಕ್ಷೆಗಿಂತ ಕಡಿಮೆ ಆದಾಯ ಗಳಿಸಿವೆ. ಎಷ್ಟೋ ಸಂಸ್ಥೆಗಳು ನೂತನ ನೇಮಕಾತಿಗಳನ್ನು ಮಾಡಿಕೊಳ್ಳುತ್ತಿಲ್ಲ. ಇನ್ನೆಷ್ಟೋ ಸಂಸ್ಥೆಗಳು ಸಿಬ್ಬಂದಿ ಕಡಿತ ಮಾಡುತ್ತಿವೆ. ಐಬಿಎಂ 5,000, ಮೈಕ್ರೋಸಾಫ್ಟ್ 2,850, ಸಿಸ್ಕೋ 5,500 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ. ಹೆಚ್ಚಿನ ಸಂಸ್ಥೆಗಳು ಕ್ಲೌಡ್ ಬೇಸ್ಡ್ ಇನ್​ಫ್ರಾಸ್ಟ್ರಕ್ಚರ್​ನತ್ತ ಮುಖ ಮಾಡುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಮತ್ತೊಂದೆಡೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯಗಳಿಸಿದ್ದು ಕೂಡ ಭಾರತದ ಐಟಿ ಉದ್ಯಮದ ಮೇಲೆ ಪ್ರಭಾವ ಬೀರಿದೆ. ಔಟ್ ಸೋರ್ಸಿಂಗ್ ಸ್ಥಗಿತಗೊಳಿಸುವುದಾಗಿ ಟ್ರಂಪ್ ಹೇಳಿರುವುದು ಇದಕ್ಕೆ ಕಾರಣ.



•► ಆನ್​ಲೈನ್ ಷಾಪಿಂಗ್

ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಏರಿಕೆಯಾಗುತ್ತಿದೆ. 2016ರಲ್ಲಿ ಇಂಟರ್ನೆಟ್ ಬಳಕೆದಾರರ ಪ್ರಮಾಣ 50 ಕೋಟಿಗೆ ಏರಿದೆ ಎಂಬ ಅಂದಾಜಿದೆ. ಹೀಗಾಗಿ ಇ-ಕಾಮರ್ಸ್ ಕ್ಷೇತ್ರವೂ ಭಾರಿ ಪ್ರಮಾಣದಲ್ಲಿ ಅಭಿವೃದ್ಧಿಯಾಗುತ್ತಿದ್ದು, ಪ್ರತಿತಿಂಗಳು 60 ಲಕ್ಷ ಗ್ರಾಹಕರು ಸೇರ್ಪಡೆಯಾಗುತ್ತಿದ್ದಾರೆ. ಫ್ಲಿಪ್​ಕಾರ್ಟ್, ಸ್ನ್ಯಾಪ್​ಡೀಲ್, ಅಮೆಜಾನ್ ಇಂಡಿಯಾ ಮುಂತಾದ ಸಂಸ್ಥೆಗಳು ಮುಂಚೂಣಿಯಲ್ಲಿವೆ. ಇ-ಕಾಮರ್ಸ್ ಕ್ಷೇತ್ರ ವಿವಾದಗಳಿಂದೇನು ಹೊರತಲ್ಲ. ಬಿಗ್ ಬಿಲಿಯನ್ ಡೇ ಸೇಲ್​ನಿಂದಲೇ ಫ್ಲಿಪ್​ಕಾರ್ಟ್ ಭಾರಿ ವಿವಾದಕ್ಕೆ ಗುರಿಯಾಗಿತ್ತು. ಸೇಲ್ ದಿನ ಹಲವು ಉತ್ಪನ್ನಗಳ ಮಾರಾಟವನ್ನು ಸಂಸ್ಥೆಯೇ ಬ್ಲಾಕ್ ಮಾಡಿತ್ತು ಎಂದು ಮಾರಾಟಗಾರರು ಆರೋಪಿಸಿದ್ದರು. ನಂತರ ಕಂಪನಿ ಮಾರಾಟಗಾರರಲ್ಲಿ ಕ್ಷಮೆ ಕೇಳಿತ್ತು. ಗ್ರಾಹಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದರಿಂದ ಕೆಲ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿತ್ತು ಎಂದು ಕಂಪನಿ ತಿಳಿಸಿತು.

ಇ-ಕಾಮರ್ಸ್ ಗಮನ ಸೆಳೆದ ಟ್ರೆಂಡ್​ಗಳು: =ಕಳೆದ ಎರಡು ಮೂರು ವರ್ಷಗಳಲ್ಲಿ ಗ್ರಾಹಕರನ್ನು ಸೆಳೆಯುವುದೇ ಮೂಲಮಂತ್ರ ಎನ್ನುವಂತೆ ವರ್ತಿಸುತ್ತಿದ್ದ ಸಂಸ್ಥೆಗಳು ಈ ವರ್ಷ ಆದಾಯ ಗಳಿಕೆಯತ್ತ ಮುಖ ಮಾಡಿದ್ದವು. ಹೀಗಾಗಿ ಭಾರಿ ಬೆಲೆ ಕಡಿತದ ಮಾರಾಟ ಪ್ರಮಾಣ ತಗ್ಗಿತ್ತು. =ಕ್ಯಾಷ್ ಆನ್ ಡೆಲಿವರಿ ಪ್ರಮಾಣ ಇಳಿಕೆ ಮತ್ತು ಪೇಮೆಂಟ್ ವಾಲೆಟ್​ಗಳ ಬಳಕೆ ಏರಿಕೆ. =ಬಟ್ಟೆ, ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳ ಹೊರತಾಗಿಯೂ ಇತರ ಸೇವೆಗಳತ್ತ ವಿಸ್ತರಿಸಿಕೊಂಡಿದೆ. ಹಾಲು, ಕುಡಿಯುವ ನೀರು ಮುಂತಾದವುಗಳು ಕೂಡ ಇದರಲ್ಲಿ ಲಭ್ಯ. =ನಗರಗಳನ್ನೆ ಗುರಿಯಾಗಿಸಿಕೊಂಡು ಬೆಳೆಯುತ್ತಿದ್ದ ಉದ್ಯಮ ಗ್ರಾಮೀಣ ಭಾಗಕ್ಕೂ ವಿಸ್ತರಿಸುತ್ತಿದೆ.


•►  ಫ್ಯಾಟ್ ಟ್ಯಾಕ್ಸ್!

ಕೇರಳ ಸರ್ಕಾರ ಜಂಕ್​ಫುಡ್ ಮೇಲೆ ಈ ವರ್ಷದ ಜುಲೈಯಿಂದ ಶೇಕಡ 14.5ರಷ್ಟು ಫ್ಯಾಟ್ ಟ್ಯಾಕ್ಸ್ ಹೇರಿದೆ. ಪಿಜ್ಜಾ, ಬರ್ಗರ್, ಟೊಕೋಸ್, ಡಫ್​ನಟ್ಸ್, ಸ್ಯಾಂಡ್​ವಿಚ್, ಪಾಸ್ತಾ ಮತ್ತು ಇತರೆ ಫಾಸ್ಟ್​ಫುಡ್​ಗಳ ಮೇಲೆ ತೆರಿಗೆ ಹೇರಲಾಗಿದೆ. ಅಲ್ಲದೆ, ಬಿಹಾರ ಸರ್ಕಾರ ಸಮೋಸಾ, ಜಿಲೇಬಿ ಸೇರಿದಂತೆ ಹಲವು ತಿಂಡಿಗಳ ಮೇಲೆ ಶೇ.13.5ರಷ್ಟು ಐಷಾರಾಮಿ ತೆರಿಗೆ ವಿಧಿಸಿ, ಗಮನ ಸೆಳೆಯಿತು.


•► ಉದ್ಯಮಸಾಮ್ರಾಜ್ಯಕ್ಕೆ ಎರಡನೇ ಪೀಳಿಗೆ ಲಗ್ಗೆ

ದೇಶದ ಹಲವು ಪ್ರತಿಷ್ಠಿತ ಉದ್ಯಮಸಮೂಹ ಸಂಸ್ಥೆಗಳಲ್ಲಿ ಈ ಬಾರಿ ಬದಲಾವಣೆಯ ಗಾಳಿ ಜೋರಾಗಿಯೇ ಬೀಸಿತು. ಅಪ್ಪಂದಿರ ಹಾದಿಯಲ್ಲಿ ಸಾಗಿದ ಮಕ್ಕಳು ಕಂಪನಿಗಳ ಪ್ರಮುಖ ಜವಾಬ್ದಾರಿಗಳನ್ನು ಸ್ವೀಕರಿಸುವ ಮೂಲಕ ಗಮನಸೆಳೆದರು.


•► ಭರವಸೆ ಮೂಡಿಸಿದ ಹೊಸ ಮುಖಗಳು

ಜಿಯೋದಲ್ಲಿ ಮಕ್ಕಳ ಕಾರುಬಾರು: ಮುಖೇಶ್ ಅಂಬಾನಿ ರಿಲಯನ್ಸ್ ಜಿಯೋ ಯೋಜನೆಯ ಹೊಣೆಗಾರಿಕೆಯನ್ನು 23 ವರ್ಷದ ಪುತ್ರ ಆಕಾಶ್ ಮತ್ತು 24 ವರ್ಷದ ಪುತ್ರಿ ಇಶಾ ಅವರಿಗೆ ವಹಿಸಿದರು. ಇಶಾ ಕಾಲೇಜು ದಿನಗಳಲ್ಲೇ ತಂದೆಯ ಉದ್ಯಮ ವ್ಯವಹಾರಗಳಲ್ಲಿ ಸಹಕರಿಸುತ್ತಿದ್ದರೆ, ಆಕಾಶ್ ಉದ್ಯಮದಲ್ಲಿ ಹೊಸ ಐಡಿಯಾಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಗಮನ ಸೆಳೆದಿದ್ದಾರೆ. ಜಿಯೋ ಅಕ್ಟೋಬರ್ ಅಂತ್ಯಕ್ಕೆ 1 ಕೋಟಿಗೂ ಹೆಚ್ಚು ಗ್ರಾಹಕರನ್ನು ಪಡೆಯುವ ಮೂಲಕ ಹೊಸ ದಾಖಲೆ ಬರೆದಿದೆ.

ಅನಿಲ್​ಗೆ ಜತೆಯಾದ ಅನ್​ವೋಲ್: ಅನಿಲ್ ಅಂಬಾನಿ ಪುತ್ರ 24 ವರ್ಷದ ಅನ್​ವೋಲ್ ರಿಲಯನ್ಸ್ ಕ್ಯಾಪಿಟಲ್​ನ ಪ್ರಮುಖ ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದಾರೆ. ರಿಲಯನ್ಸ್​ನಲ್ಲಿ ಹಲವು ಹೊಸ ಪ್ರಯೋಗಗಳನ್ನು ಮಾಡುತ್ತಿರುವ ಅನ್​ವೋಲ್, ಇಂಗ್ಲೆಂಡ್​ನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ.



•► ಫೋರ್ಬ್ಸ್ ಪಟ್ಟಿಯಲ್ಲಿ ಮಿನುಗಿದ ಯಂಗಿಸ್ಥಾನ!

ಪ್ರತಿಷ್ಠಿತ ಫೋರ್ಬ್ಸ್ ಪತ್ರಿಕೆ ಬಿಡುಗಡೆ ಮಾಡಿದ 30 ವರ್ಷದೊಳಗಿನ ಸಾಧಕರ ಪಟ್ಟಿಯಲ್ಲಿ ಭಾರತ ಹಾಗೂ ಭಾರತೀಯ ಮೂಲದ 45 ಜನ ಸ್ಥಾನ ಪಡೆದುಕೊಂಡರು. ಆ ಪೈಕಿ ಯುವ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದದ್ದು ವಿಶೇಷ.

ರಿತೇಶ್ ಅಗರ್ವಾಲ್ (22), ಒಯೋ ರೂಮ್್ಸ ಸಿಇಒ
ಗಗನ್ ಬಿಯಾನಿ (28), ‘ಸ್ಪ್ರಿಂಗ್’ ಸಂಸ್ಥೆಯ ಸಹ-ಸಂಸ್ಥಾಪಕ
ನೀರಜ್ ಬೆರಿ (28), ‘ಸ್ಪ್ರಿಂಗ್’ ಸಂಸ್ಥೆಯ ಸಹ-ಸಂಸ್ಥಾಪಕ
ಕರಿಷ್ಮಾ ಷಾ (25), ಗೂಗಲ್ ಅಧಿಕಾರಿ
ಸಂಪ್ರೀತಿ ಭಟ್ಟಾಚಾರ್ಯ (28), ಹೈಡ್ರೊಸ್ವಾಮ್ರ್ ಸಂಸ್ಥೆ ಸಂಸ್ಥಾಪಕಿ
ಸಾಗರ್ ಗೋವಿಲ್ (29), ಸಿಇಒ ಸಿಮೆಟ್ರೆಕ್ಸ್
ಶಶಾಂಕ್ ಸಾಮ್ಲಾ (23), ಟೆಂಪೋ ಅಟೋಮೇಶನ್ ಸಂಸ್ಥೆಯ ಸಹ-ಸಂಸ್ಥಾಪಕ
ನೀಲಾ ದಾಸ್, ಸಿಟಿ ಗ್ರೂಪ್ ಉಪಾಧ್ಯಕ್ಷೆ
ದಿವ್ಯಾ ನೆಟ್ಮಿ (29), ವಿಕಿಂಗ್ ಗ್ಲೋಬಲ್ ಇನ್​ವೆಸ್ಟರ್ಸ್ ಸಂಸ್ಥೆಯಲ್ಲಿ ಬಂಡವಾಳ ಹೂಡಿಕೆ ವಿಶ್ಲೇಷಕಿ
ವಿಕಾಸ್ ಪಟೇಲ್ (29), ಮಿಲೇನಿಯಂ ಮ್ಯಾನೇಜರ್​ನ ಹಿರಿಯ ಅಧಿಕಾರಿ
ಮಿನೇಶ್ ಭಟ್, ಯುಬಿಎಸ್ ಸಂಸ್ಥೆ ನಿರ್ದೇಶಕ ?ರಮಣನ್ ಶಿವಲಿಂಗಮ್ (29), ಬ್ಯಾಂಕಿಂಗ್ ಕ್ಷೇತ್ರ
ಅನೀಶ್ ಸೋಹಾನಿ (27), ದ ನ್ಯೂ ಟೀಚರ್ಸ್ ಪ್ರಾಜೆಕ್ಟ್ ಅಧಿಕಾರಿ.
ವಿಪ್ರೋ ಕಂಪನಿ ಮುಖ್ಯಸ್ಥ ಅಜೀಂ ಪ್ರೇಮ್ೕ ಪುತ್ರ ರಿಷದ್ 2007ರಲ್ಲೇ ತಂದೆಯ ಉದ್ಯಮಕ್ಕೆ ಸೇರಿಕೊಂಡಿದ್ದರೂ ಈಗ ವಿಪ್ರೋದ ಆಡಳಿತ ಮಂಡಳಿ ಸದಸ್ಯರಾಗಿ ಮತ್ತು ಕಂಪನಿಯ ಕಾರ್ಯತಂತ್ರ ರೂಪಿಸುವ ಮುಖ್ಯ ಅಧಿಕಾರಿಯಾಗಿ ಜವಾಬ್ದಾರಿ ಹೊತ್ತಿದ್ದಾರೆ.


•► ಟಾಟಾ ಸಾಮ್ರಾಜ್ಯದಲ್ಲಿ ಕ್ಷಿಪ್ರಕ್ರಾಂತಿ

ಸೈರಸ್ ಔಟ್ ರತನ್ ಇನ್

ಭಾರತದ ಬೃಹತ್ ಉದ್ಯಮ ಸಮೂಹ ಟಾಟಾದಲ್ಲಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಅಕ್ಟೋಬರ್ 24ರಂದು ಸೈರಸ್ ಮಿಸ್ತ್ರಿ ಟಾಟಾ ಸನ್ಸ್​ನ ಅಧ್ಯಕ್ಷ ಸ್ಥಾನದಿಂದ ಪದಚ್ಯುತರಾಗಿ, ರತನ್ ಟಾಟಾ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡರು. ಐದು ವರ್ಷದ ಅಧಿಕಾರಾವಧಿ ಹೊಂದಿದ್ದ ಮಿಸ್ತ್ರಿ ನಾಲ್ಕು ವರ್ಷ ಪೂರೈಸಿದ್ದರು. ಲಾಭ ಉಂಟುಮಾಡುವ ಉದ್ಯಮಗಳನ್ನು ಮಾತ್ರ ಉಳಿಸಿ, ಬೆಳೆಸಬೇಕೆಂಬ ಅವರ ಕಾರ್ಯತಂತ್ರ ಟಾಟಾ ಟ್ರಸ್ಟ್, ವಿಶೇಷವಾಗಿ ರತನ್ ಟಾಟಾ ಅಸಮಾಧಾನಕ್ಕೆ ಕಾರಣವಾಯಿತು. ಟಾಟಾ ಸಮೂಹದಲ್ಲಿ ವಿವಿಧ ಕ್ಷೇತ್ರದ 100 ಉದ್ಯಮಗಳಿವೆ. ಈ ಪೈಕಿ ಲಾಭದಾಯಕ ಉದ್ಯಮವಾಗಿ ಸ್ಥಿರತೆ ಕಾಯ್ದುಕೊಂಡಿರುವುದು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಗಳು. ಉಳಿದ ಕಂಪನಿಗಳು ಲಾಭದಾಯಕ ಉದ್ಯಮವಾಗಿ ಮುಂದುವರಿಯಲು, ಸ್ಥಿರತೆ ಕಂಡುಕೊಳ್ಳಲು ಹೋರಾಟ ನಡೆಸುತ್ತಿವೆ. ಇದೀಗ ಹೊಸ ಅಧ್ಯಕ್ಷರ ನೇಮಕಕ್ಕಾಗಿ ಟಾಟಾ ಟ್ರಸ್ಟ್ ಐವರು ಸದಸ್ಯರ ಶೋಧ ಸಮಿತಿಯನ್ನು ರಚಿಸಿದೆ.

ಮಿಸ್ತ್ರಿ ಕಾನೂನುಸಮರ: ಡಿ.19ರಂದು ಟಾಟಾ ಸಮೂಹ ಸಂಸ್ಥೆಯ ಎಲ್ಲ ಹುದ್ದೆಗಳಿಗೂ ರಾಜೀನಾಮೆ ನೀಡಿರುವ ಮಿಸ್ತ್ರಿ ಟಾಟಾ ವಿರುದ್ಧ ಕಾನೂನು ಸಮರ ನಡೆಸುವುದಾಗಿ ಘೊಷಿಸಿದ್ದಾರೆ.

(Courtesy :Vijayavani) 

No comments:

Post a Comment