"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 31 May 2014

★ ಅಸಂಪ್ರದಾಯಿಕ ಅಥವಾ ನವೀಕರಿಸಬಹುದಾದ ಅಥವಾ ಸುಸ್ಥಿರ ಪರಿಸರ ಸ್ನೇಹಿ ಶಕ್ತಿ ಸಂಪನ್ಮೂಲಗಳು ಯಾವವು? ಚರ್ಚಿಸಿರಿ. (೧೫೦ ಶಬ್ಧಗಳಲ್ಲಿ)


★ ಅಸಂಪ್ರದಾಯಿಕ ಅಥವಾ ನವೀಕರಿಸಬಹುದಾದ ಅಥವಾ ಸುಸ್ಥಿರ ಪರಿಸರ ಸ್ನೇಹಿ ಶಕ್ತಿ ಸಂಪನ್ಮೂಲಗಳು ಯಾವವು?  ಚರ್ಚಿಸಿರಿ.
(೧೫೦ ಶಬ್ಧಗಳಲ್ಲಿ)

ಇಂದು ಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳು ಬಹಳಷ್ಟು ಬರಿದಾಗಿದ್ದು, ಅವುಗಳ ಉತ್ಪಾದನೆ ಮತ್ತು ಬಳಕೆಯು ಬಹಳಷ್ಟು ಪರಿಸರ ಮಾಲಿನ್ಯವನ್ನು ಉಂಟು ಮಾಡಿದೆ. ಮುಂದಿನ ಜಗತ್ತು ಪರಿಸರ ಮಾಲಿನ್ಯದಿಂದ ಮುಕ್ತವಾಗಬೇಕಾದಲ್ಲಿ ಮಾಲಿನ್ಯವನ್ನು ಉಂಟು ಮಾಡದ, ಪುನರ್ ಉತ್ಪಾದಿಸಬಹುದಾದ
ಅಸಂಪ್ರದಾಯಿಕ ಶಕ್ತಿ ಸಂಪನ್ಮೂಲಗಳನ್ನು ಸೂಕ್ತ ತಂತ್ರಜ್ಞಾನದ ಮೂಲಕ ಸಂಶೋಧಿಸಿ ಅಭಿವೃದ್ದಿಪಡಿಸಿ ಬಳಸಿಕೊಳ್ಳಬೇಕು.

ಶಕ್ತಿ ಸಂಪನ್ಮೂಲಗಳ ಬಳಕೆಯು ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಹಾಗೂ ಪರಿಸರ ಮತ್ತು ಆರ್ಥಿಕ ಸ್ಥಿರತೆ ಗುರಿಯನ್ನು ಅಂದರೆ ಸುಸ್ಥಿರ ಪರಿಸರವನ್ನು ಸಾಧಿಸುವ ಸಾಧನವಾಗಬೇಕು. ಈ ಕಾರಣಕ್ಕಾಗಿ ಪರಿಸರ ಸ್ನೇಹಿ ಅಸಂಪ್ರದಾಯಿಕ ಶಕ್ತಿ ಸಂಪನ್ಮೂಲಗಳನ್ನು ಬಳಕೆ ಮಾಡುವುದು ಅತ್ಯವಶ್ಯಕವಾಗಿದೆ.

1.ಜೈವಿಕ ಅನಿಲ (Bio-gas) :

ಜಾನುವಾರುಗಳ ಅಂದರೆ ದನಕರುಗಳ ಸಗಣಿ, ಮತ್ತಿತರ ಕೃಷಿ ತ್ಯಾಜ್ಯಗಳನ್ನು ಹುದುಗಿಸಿ ಅದರಿಂದ ಉತ್ಪಾದಿಸಲಾಗುವ ಮಿಥೈಲ್ ಅನಿಲವನ್ನು ಜೈವಿಕ ಅನಿಲ ಎನ್ನಲಾಗಿದೆ.

— ಇದನ್ನು ಅಡುಗೆ ಮಾಡಲು, ಬೆಳಕಿಗಾಗಿ, ಶಾಖಕ್ಕಾಗಿ ಹಾಗೂ ಸಣ್ಣ ಸಣ್ಣ ಕೃಷಿ ಚಟುವಟಿಕೆಗಳಲ್ಲಿ ಯಂತ್ರಗಳ ಚಾಲನೆಗೆ ಬಳಕೆ ಮಾಡಲಾಗುತ್ತಿದೆ. ಇದು ಹೊಗೆ ರಹಿತವಾಗಿದ್ದು, ಪರಿಸರ ಸ್ನೇಹಿಯಾಗಿದೆ. ಹಾಗೂ ಇದು ಉರುವಲಿಗಾಗಿ ಅರಣ್ಯನಾಶವನ್ನು ತಡೆಯುತ್ತದೆ. ಕೃಷಿ ಪ್ರಧಾನವಾದ ಭಾರತ ಹಳ್ಳಿಗಳ ರಂಷಂಔಛಿವಾಗಿದ್ದು, ಪಶು ಸಂಪತ್ತು ಹೇರಳವಾಗಿದ್ದು, ಜೈವಿಕ ಅನಿಲ ತಯಾರಿಕೆಗೆ ಯಥೇಚ್ಛ ಅವಕಾಶಗಳಿವೆ. ಜೈವಿಕ ಅನಿಲ ಸ್ಥಾವರಗಳ ಸ್ಥಾಪನೆಗೆ ಸರ್ಕಾರ ಸಹಾಯಧನವನ್ನು ನೀಡುತ್ತಿದೆ.

— 'ದೀನಬಂಧು' ಎಂಬುದು ಜನಪ್ರಿಯವಾದ ಅನಿಲ ಸ್ಥಾವರದ ಮಾದರಿಯಾಗಿದ್ದು, ರೇಷ್ಮೆ ಹುಳುವಿನ ತ್ಯಾಜ್ಯದಿಂದಲೂ ಜೈವಿಕ ಅನಿಲವನ್ನು ಉತ್ಪಾದಿಸಬಹುದು. ಹಾಸನ ಜಿಲ್ಲೆಯ ರಂಗೇನಹಳ್ಳಿ ಕೊಪ್ಪಲು ಗ್ರಾಮ ಕರ್ನಾಟಕ  ರಾಜ್ಯದಲ್ಲೇ ಪ್ರಪ್ರಥಮ ಹಾಗೂ ಸಂಪೂರ್ಣ ಜೈವಿಕ ವಿದ್ಯುತ್ ಆಧಾರಿತ ಗ್ರಾಮವಾಗಿದೆ.

2.ಪವನ ಶಕ್ತಿ (Wind Energy) :

ವೇಗವಾಗಿ ಬೀಸುವ ಗಾಳಿಯಿಂದ ರಾಟೆಗಳನ್ನು ತಿರುಗಿಸಿ ಉತ್ಪಾದಿಸುವ ಶಕ್ತಿಗೆ ಪವನ ಶಕ್ತಿ ಎಂದು ಹೆಸರು.

— ನಮ್ಮ ದೇಶದಲ್ಲಿ ಪ್ರಥಮ ಬಾರಿಗೆ 1996 ರಲ್ಲಿ ಕರ್ನಾಟಕ ರಾಜ್ಯದ ಗದಗ್ ಜಿಲ್ಲೆಯ ಕಪ್ಪತಗುಡ್ಡ ದಲ್ಲಿ ಗಾಳಿ ಯಂತ್ರವನ್ನು ಸ್ಥಾಪಿಸಲಾಯಿತು.

— ಇಂದು ಭಾರತದ ಅನೇಕ ರಾಜ್ಯಗಳಲ್ಲಿ ಯಥೇಚ್ಛವಾಗಿ ಗಾಳಿ ಯಂತ್ರಗಳನ್ನು ಸ್ಥಾಪಿಸಲಾಗಿದ್ದು, ಭಾರತದಲ್ಲಿ ನಿರಂತರವಾಗಿ 45,000 ಮೆ.ವ್ಯಾ. ನಷ್ಟು ಪವನಶಕ್ತಿಯನ್ನು ಉತ್ಪಾದಿಸಬದೆಂದು ಅಂದಾಜು ಮಾಡಲಾಗಿದೆ.

— ಗಾಳಿ ಶಕ್ತಿ ಉತ್ಪಾದನೆಯಲ್ಲಿ ದೇಶದಲ್ಲಿಯೇ ತಮಿಳುನಾಡು ಪ್ರಥಮ ಸ್ಥಾನದಲ್ಲಿದೆ. ಪವನಶಕ್ತಿಯನ್ನು ಹೆಚ್ಚಾಗಿ ಖಾಸಗಿ ಕ್ಷೇತ್ರದಲ್ಲಿ ಉತ್ಪಾದಿಸುತ್ತಿದ್ದು, ನಂತರ ಇದನ್ನು ಸರ್ಕಾರದ  ವಿದ್ಯುತ್ಜಾಲಕ್ಕೆ ಮಾರಾಟ ಮಾಡಲಾಗುತ್ತಿದೆ.

— ಜರ್ಮನಿ, ಅಮೇರಿಕಾ, ಡೆನ್ಮಾರ್ಕ್, ಸ್ಪೈನ್, ದೇಶಗಳನ್ನು ಬಿಟ್ಟರೆ, ಪವನಶಕ್ತಿಯ ಉತ್ಪಾದನೆಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ.

— ಪವನಶಕ್ತಿ ಕೇವಲ ಪರ್ಯಾಯವಲ್ಲ . ಅಕ್ಷಯ ಪಾತ್ರೆಯಾಗಿದೆ. ತಣ್ಣನೆಯ ಕೆಂಡ ಎಂದು ಕರೆಸಿಕೊಳ್ಳುವ ಪವನಶಕ್ತಿಯ ಉತ್ಪಾದನೆಯಲ್ಲಿ ಅನೇಕ ದೇಶಿಯ ಮತ್ತು ವಿದೇಶಿಯ ಖಾಸಗಿ ಕಂಪನಿಗಳು ತೊಡಗಿವೆ.

* ಅವುಗಳೆಂದರೆ,
— ಸುಜಲಾನ್- 7500 ಮೆ.ವ್ಯಾ.(ಭಾರತ),
— ಎನರ್ಖಾನ್ -2500 ಮೆ.ವ್ಯಾ (ಜರ್ಮನಿ),
— ವೆಸ್ಪಾಜ್-600 ಮೆ.ವ್ಯಾ (ಇಂಗ್ಲೇಂಡ್),
— ಸದರ್ನ್ ವಿಂಡ್ ಪಾರ್-1000 ಮೆ.ವ್ಯಾ. (ಭಾರತ)
— ಚಿರಂಜೀವಿ-500 ಮೆ.ವ್ಯಾ. (ಭಾರತ)
— ವೆಸ್ಪಾಜ್ ಆರ್.ಆರ್.ಬಿ-500 ಮೆ.ವ್ಯಾ (ಹಾಲೆಂಡ್)


3.ಸೌರಶಕ್ತಿ ಅಥವಾ ಸೌರವಿದ್ಯುತ್ (Solar Power) :
ಸೂರ್ಯನ ಕಿರಣಗಳ ಬಳಕೆಯಿಂದ ತಯಾರಿಸಲಾಗುವ ಶಕ್ತಿಯನ್ನು ಸೌರಶಕ್ತಿ ಅಥವಾ ಸೌರವಿದ್ಯುತ್ ಎನ್ನಲಾಗಿದೆ.

— ವೈಜ್ಞಾನಿಕವಾಗಿ ಕಲೆಕ್ಟರ್ ಎಂಬ ಉಪಕರಣದ ಮೂಲಕ ಸೂರ್ಯನ ಕಿರಣಗಳನ್ನು ಸಂಗ್ರಹಿಸಿ ಸೌರಶಕ್ತಿಯನ್ನು ಉತ್ಪಾದಿಸಲಾಗುತ್ತಿದೆ.

— ಸೌರಶಕ್ತಿಯನ್ನು ಶಾಖ ಹಾಗೂ ವಿದ್ಯುತ್ಚ್ಛಕ್ತಿಯನ್ನಾಗಿ ಪರಿವರ್ತಿಸಿ ಸೋಲಾರ್ ವಾಟರ್ಹೀಟರ್ಸ್, ಸೋಲಾರ್ ಡ್ರೈಯರ್ಸ್, ಸೋಲಾರ್ ಕುಕ್ಕರ್, ಸೌರ ವಿದ್ಯುತ್ ಕೋಶ ಮುಂತಾದ ಸೌರ ಉಪಕರಣಗಳ ಮೂಲಕ ಸೌರಶಕ್ತಿಯನ್ನು ಅಡುಗೆ ಮಾಡಲು, ದೀಪ ಬೆಳಗಿಸಲು, ದ್ವಿಚಕ್ರವಾಹನ, ರಿಕ್ಷಾ, ಕಾರು,ವಿಮಾನಗಳ ಚಾಲನೆಯಲ್ಲಿ, ಕೃಷಿ ಯಂತ್ರಗಳ ಚಾಲನೆಯಲ್ಲಿ, ಹಣ್ಣು ಒಣಗಿಸಲು, ಕ್ಯಾಮರಾ ಚಾಲನೆಯಲ್ಲಿ, ಮೊಬೈಲ್ನಲ್ಲಿ ಬ್ಯಾಟರಿಯಾಗಿ ಬಳಸಬಹುದಾಗಿದೆ.

— ಭಾರತದಲ್ಲಿ ಇತ್ತೀಚೆಗೆ ಘೋಷಣೆಯಾಗಿರುವ 'ಜವಾಹರಲಾಲ್ ರಾಷ್ಟ್ರೀಯ ಸೋಲಾರ್ ಮಿಷನ್' ಕಾರ್ಯಕ್ರಮದಡಿ ಮನೆಗಳ ಛಾವಣಿಯ ಮೇಲೆ ಸೋಲಾರ್ ಫ್ಯಾನ್ ಗಳಿಂದ ವಿದ್ಯುತ್ ಉತ್ಪಾದಿಸುವುದನ್ನು ಪ್ರೋತ್ಸಾಹಿಸಲಾಗುತ್ತಿದೆ.

— ತಿರುಪತಿಯ ತಿರುಮಲ ದೇವಸ್ಥಾನ, ರಾಜಸ್ತಾನದ ಮೌಂಟ್ಅಬು, ಶೃಂಗೇರಿಯ ಶಾರದಪೀಠ, ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಕ್ಷೇತ್ರದಲ್ಲಿ ಅಡುಗೆ ಮಾಡಲು ದೊಡ್ಡ ಪ್ರಮಾಣದ ಸೋಲಾರ್ ಕುಕ್ಕರನ್ನು ಬಳಕೆ ಮಾಡಲಾಗುತ್ತದೆ.

— ಕೋಲಾರ ಜಿಲ್ಲೆಯ ಬಂಗಾರ ಪೇಟೆ ತಾಲ್ಲೂಕಿನ ಯಳೆಸಂದ್ರ ಗ್ರಾಮದಲ್ಲಿ 59 ಕೋಟಿ ರೂ.ಗಳ ವೆಚ್ಚದಲ್ಲಿ 3 ಮೆ.ವ್ಯಾ.ಸಾಮಥ್ರ್ಯದ ದೇಶದ ಮೊಟ್ಟಮೊದಲ ಸೌರವಿದ್ಯುತ್ ಘಟಕವನ್ನು 2010 ರ ಜೂನ್ 17 ರಂದು ಸ್ಥಾಪಿಸಲಾಗಿದೆ.

— ಇತ್ತೀಚೆಗೆ ಸೌರಶಕ್ತಿ ಚಾಲಿತ ಯು.ಪಿ.ಎಸ್. ಸೌರವಿದ್ಯುತ್ಕೋಶವನ್ನು ಮೈಸೂರಿನ ಇನೋವೇಷನ್ಸ್ ಸಂಸ್ಥೆ ಕಂಡುಹಿಡಿದು ಮಾರುಕಟ್ಟೆಗೆ ಪರಿಚಯಿಸಿದೆ.

— ಕರ್ನಾಟಕದ ಹುಬ್ಬಳ್ಳಿಯಲ್ಲಿ ಶ್ರೀ ಶಿವಸಿಂಪಿಗೇರ ಎಂಬ ವಿಜ್ಞಾನ ಪದವೀಧರ ಸೋಲಾರ್ ಮ್ಯೂಜಿಯಂನ್ನು ಸ್ಥಾಪಿಸಿದ್ದಾರೆ.

— ಆಂಧ್ರ ಪ್ರದೇಶದ ಬ್ಯಾಸನಿವರಪಳ್ಳಿ ಎಂಬ ಗ್ರಾಮ ಇಡೀ ಪ್ರಪಂಚದಲ್ಲಿಯೇ ಹೊಗೆ ಆಡದ ಸಂಪೂರ್ಣ ಸೂರ್ಯಶಾಖಮಯ ಗ್ರಾಮ ಎಂಬ ಹೆಸರು ಪಡೆದಿದೆ.

— ಬೆಂಗಳೂರಿನವರೇ ಆದ ಸೈಯದ್ ಸಾಜನ್ ಮಹಮ್ಮದ್ ಎಂಬುವವರು 2004 ರಲ್ಲಿ ವಿದ್ಯುತ್ ಮತ್ತು ಸೋಲಾರ್ ಸಹಾಯದಿಂದ ಚಲಿಸುವ ಕಾರೊಂದನ್ನು (ಕಾಟ್) ಮಾರುಕಟ್ಟೆಗೆ ಪರಿಚಯಿಸಿದ್ದಾರೆ.




4.ಸಮುದ್ರದ ಅಲೆಗಳ ಶಕ್ತಿ :
ಸಮುದ್ರದ ಅಲೆಗಳ ರಭಸದಿಂದ ತಯಾರಿಸುವ ಶಕ್ತಿಗೆ ಅಲೆಗಳ / ತೆರಗಳ ಶಕ್ತಿ ಎಂದು ಕರೆಯಲಾಗಿದೆ.

— ಭಾರತವು ಮೂರು ಕಡೆ ವಿಶಾಲವಾದ ಸಮುದ್ರ ತೀರವನ್ನು ಹೊಂದಿದ್ದು, ಪೂರ್ವ ಮತ್ತು ಪಶ್ಚಿಮದ ತೀರ ಪ್ರದೇಶಗಳಲ್ಲಿ ಅಲೆಗಳ ಶಕ್ತಿ ತಯಾರಿಸ ಬಹುದಾಗಿದೆ. ಭಾರತದ ಈ ಮೂಲದಿಂದ ಸುಮಾರು 50,000 ಮೆ.ವ್ಯಾ.ನಷ್ಟು ವಿದ್ಯುತ್ ಉತ್ಪಾದಿಸುವ ಸಾಮಥ್ರ್ಯ ಪಡೆದಿದೆ.

— ಸಧ್ಯದಲ್ಲಿ ಗುಜರಾತಿನ ಕಚ್, ಕ್ಯಾಂಬೆ, ಪಶ್ಚಿಮ ಬಂಗಾಳದ ಸುಂದರ್ಬನ್ಸ್ ಹಾಗೂ ಕೇರಳದ ವಿಜಿನ್ಜಾಮ್ನಲ್ಲಿ ಇಂತಹ ಪ್ರಯತ್ನ ಮಾಡಲಾಗಿದೆ.


5.ಭೂಶಾಖೋತ್ಪನ್ನ ಶಕ್ತಿ :
ಭೂಮಿಯ ಅಂತರಾಳದಲ್ಲಿರುವ ಶಾಖ ಅಥವಾ ಉಷ್ಣತೆಯನ್ನು ಬಳಸಿಕೊಂಡು ಉತ್ಪಾದಿಸಲಾಗುವ ಶಕ್ತಿಗೆ ಭೂ ಶಾಖೋತ್ಪನ್ನ ಶಕ್ತಿ ಎಂದು ಹೆಸರು.

— ಭೂಮಿಯ ಹೊರಚಿಪ್ಪಿನ 10 ಕಿ.ಮೀ.ಆಳದವರೆಗಿನ ಉಷ್ಣತೆಯನ್ನು ಈ ಉದ್ದೇಶಕ್ಕೆ ಬಳಸಬಹುದು.

— ಹೈದರಾಬಾದ್ ನಲ್ಲಿರುವ ರಾಷ್ಟ್ರೀಯ ಭೂ ಔಷ್ಣೀಯ ಸಂಶೋಧನಾ ಸಂಸ್ಥೆ ಈಗಾಗಲೇ 30000'ಛಿ ಉಷ್ಣವು ಪುಟಿಯುವ ಪ್ರದೇಶಗಳನ್ನು ಗುರುತಿಸಿದೆ. ಅವುಗಳೆಂದರೆ, ಜಾರ್ಖಂಡ್, ಉತ್ತರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಛತ್ತೀಸ್ಗಢ್ ಮುಂತಾದ ರಾಜ್ಯಗಳ ಕೆಲವು ಪ್ರದೇಶಗಳು. ಇವುಗಳಲ್ಲಿ ಕುಲು, ಮನಾಲಿ ಮತ್ತು ಸಟ್ಲೇಜ್ ಕಣಿವೆಗಳಲ್ಲಿ ಭೂಗರ್ಭ ಶಕ್ತಿಯ ಉತ್ಪಾದನೆಗೆ ಪ್ರಯತ್ನಿಸಲಾಗಿದೆ.


 6. ಬಯೋಮಾಸ್ ಅಥವಾ ಜೈವಿಕ ಇಂಧನ  (Bio-mas) :
ನಗರ ಪ್ರದೇಶದ ದೊಡ್ಡ ಪ್ರಮಾಣದ ಕಸಕಡ್ಡಿಗಳ ತ್ಯಾಜ್ಯ ಮತ್ತು ಕೃಷಿ ತ್ಯಾಜ್ಯ ವಸ್ತುಗಳಾದ ಕಡಲೆಕಾಯಿ ಸಿಪ್ಪೆ, ಕಾಳುಗಳ ಸಿಪ್ಪೆ, ಭತ್ತದ ಹೊಟ್ಟು, ತೆಂಗಿನ ಚಿಪ್ಪು, ಹಾಗೂ ಕಬ್ಬಿನ ಸಿಪ್ಪೆ ಮುಂತಾದವುಗಳಿಂದ ತಯಾರಿಸುವ ಶಕ್ತಿಗೆ ಬಯೋಮಾಸ್ ಇಂಧನ ಎಂದು ಹೆಸರು.

— ಈಗಾಗಲೇ ಸುಮಾರು 100 ಸಕ್ಕರೆ ಕಾರ್ಖಾನೆಗಳು ಕಬ್ಬಿನ ಸಿಪ್ಪೆಯಿಂದ 950 ಮೆ.ವ್ಯಾನಷ್ಟು ಹೆಚ್ಚುವರಿ ವಿದ್ಯುತ್ನ್ನು ಉತ್ಪಾದಿಸುತ್ತಿವೆ. ದೇಶದಲ್ಲಿ 19500 ಮೆ.ವ್ಯಾ.ವ್ಯಾನಷ್ಟು ಬಯೋಮಾಸ್ ಇಂಧನ ತಯಾರಿಸುವ ಸಾಮಥ್ರ್ಯವಿದೆ ಎಂದು ಅಂದಾಜಿಸಲಾಗಿದೆ.ಇದರಲ್ಲಿ ಸಕ್ಕರೆ ಕಾರ್ಖಾನೆಗಳ ಪಾಲು 3,500 ಮೆ.ವ್ಯಾ. ಗಳಷ್ಟಾಗಿದೆ.


7.ಜೈವಿಕ ಡೀಸೆಲ್  (Bio-diesel) :
ಭಾರತದಲ್ಲಿ ಜೈವಿಕ ಇಂಧನಗಳ ತಯಾರಿಕೆ ಹೆಚ್ಚು ಅವಕಾಶವಿದೆ. ಅಂದರೆ ನಮ್ಮಲ್ಲಿ ದೊರೆಯುವ ಬೇವು, ಹೊಂಗೆ ಬೀಜಗಳ ಜೊತೆಗೆ ಜತ್ರೋಪ ಮತ್ತು ಸಿಮೆರೂಬ ಗಿಡಗಳನ್ನು ಬೆಳೆದು ಅವುಗಳ ಬೀಜದಿಂದ ಎಣ್ಣೆಯಿಂದ ತೆಗೆಯಬಹುದು.

— ಈ ಎಣ್ಣೆಯನ್ನು ಪೆಟ್ರೋಲ್ ಮತ್ತು ಡೀಸೆಲ್ ಜೊತೆ ಮಿಶ್ರಣ ಮಾಡಿ ವಾಹನಗಳಿಗೆ ಬಳಸಬಹುದು.

— ಈಗಾಗಲೇ ಕರ್ನಾಟಕದ ದಾವಣಗೆರೆಯ ಹತ್ತಿರ ಒಂದು ಜೈವಿಕ ಡೀಸೆಲ್ ಬಂಕ್ ಕಾರ್ಯನಿರ್ವಹಿಸುತ್ತಿದೆ.

Wednesday, 28 May 2014

★ ಹವಾಮಾನ ಮತ್ತು ವಾಯುಗುಣಗಳ ನಡುವಣ ಪ್ರಮುಖ ವ್ಯತ್ಯಾಸಗಳನ್ನು ಗುರುತಿಸಿ. (೧೦೦ ಶಬ್ಧಗಳಲ್ಲಿ) (The main differences between Weather and Climate)


★ ಹವಾಮಾನ ಮತ್ತು ವಾಯುಗುಣಗಳ ನಡುವಣ ಪ್ರಮುಖ ವ್ಯತ್ಯಾಸಗಳನ್ನು ಗುರುತಿಸಿ.  (೧೦೦ ಶಬ್ಧಗಳಲ್ಲಿ)
(The main differences between Weather and Climate)

ಹವಾಮಾನ ಮತ್ತು ವಾಯುಗುಣ ಈ ಎರಡೂ ಪದಗಳನ್ನು ವಾಯುಮಂಡಲದ ಪರಿಸ್ಥಿತಿಯನ್ನು ವಿವರಿಸಲು ಬಳಸುವರಾದರೂ,  ಅವುಗಳು ಅನ್ವಯಿಸುವ ಕಾಲ, ಪ್ರದೇಶದ ವಿಸ್ತಾರ, ವಾಯುಮಂಡಲದ ಸ್ಥಿತಿಯನ್ನು ಸೂಚಿಸುವ ರೀತಿ, ಮುಂತಾದವುಗಳಲ್ಲಿ ಸ್ಪಷ್ಟ ವ್ಯತ್ಯಾಸಗಳನ್ನು ಕಾಣಬಹುದು.

೧)  ಹವಾಮಾನವು ಯಾವುದೇ ಒಂದು ನಿರ್ದಿಷ್ಟ ಕಾಲದ ವಾಯುಮಂಡಲದ ಪರಿಸ್ತಿತಿ.
—ವಾಯುಗುಣವು ಧೀರ್ಘ ಅವಧಿಯ ಹವಾಮಾನದ ಸರಾಸರಿ.


೨) ಹವಾಮಾನವು ವಾಯುಮಂಡಲವು ಆಂತರಿಕವಾಗಿ ಒಳಗೊಂಡಿರುವ ಘಟಕಗಳಾದ ಉಷ್ಣಾಂಶ, ಒತ್ತಡ, ಮಾರುತಗಳು, ತೇವಾಂಶ ಮತ್ತು ವೃಷ್ಟಿಗಳಿಂದ ನಿರ್ಧರಿಸಲ್ಪಡುವುದು.
— ವಾಯುಗುಣವು ವಾಯುಮಂಡಲದ ಹೊರಗಿನ ಅಥವಾ ಬಾಹ್ಯ ಅಂಶಗಳಿಂದ ನಿರ್ಧರಿಸಲ್ಪಡುವುದು.  ಈ ಬಾಹ್ಯ ನಿರ್ಧಾರಕ ಅಂಶಗಳೆಂದರೆ ಅಕ್ಷಾಂಶ,  ಸಮುದ್ರದಿಂದ ಇರುವ ಎತ್ತರ,  ಸಮುದ್ರದಿಂದ ಇರುವ ದೂರ, ಮಾರುತಗಳ ದಿಕ್ಕು , ಸಾಗರ ಪ್ರವಾಹಗಳು ಮತ್ತು ಭೂ ಮೇಲ್ಮೈ ಲಕ್ಷಣಗಳು ಇತ್ಯಾದಿ.


೩) ಹವಾಮಾನವನ್ನು ಸೂಚಿಸಲು ಚಳಿ, ಸೆಖೆ, ಮೋಡ ತುಂಬಿದ,  ಆಹ್ಲಾದಕರ, ಬಿರುಗಾಳಿಯಿಂದ ಕೂಡಿದ ಮುಂತಾದ ಪದಗಳನ್ನು ಬಳಸುವರು.
— ವಾಯುಗುಣವನ್ನು ಸೂಚಿಸಲು ಉಷ್ಣ,  ಶೀತ, ಒಣ, ತೇವಯುತ,  ಆರ್ದ್ರತೆ ಮುಂತಾದ ಪದಗಳನ್ನು ಬಳಸುವರು.


೪)  ಹವಾಮಾನವು ಒಂದು ನಿರ್ದಿಷ್ಟ ಸ್ಥಳ ಹಾಗೂ ಅಲ್ಪಾವಧಿಯ ಸೂಚಕ.
— ವಾಯುಗುಣವು ಧೀರ್ಘಾವಧಿಯ ಹಾಗೂ ವಿಸ್ತಾರವಾದ ಪ್ರದೇಶಕ್ಕೆ ಅನ್ವಯಿಸುವುದು.

ಲಾನಿನಾ (Lanina) ಪ್ರವಾಹ ಎಂದರೇನು? : (What do you mean by Lanina?) (ಟಿಪ್ಪಣಿ ಬರಹ)


★ ಲಾನಿನಾ (Lanina) ಪ್ರವಾಹ ಎಂದರೇನು? :
(What do you mean by Lanina?)

(ಟಿಪ್ಪಣಿ ಬರಹ)

━━━━━━━━━━━━━━━━━━━━━━━━━━━━━━━━━━━━━━━━━━━━━
★ (World Geography)
ಪ್ರಪಂಚದ ಭೂಗೋಳಶಾಸ್ತ್ರ

ಪ್ರಪಂಚದ ವಾಯುಗುಣದ ವಿಶ್ಲೇಷಣೆಯಲ್ಲಿ ಇಂದು ಎಲ್ ನಿನೋ (ElNiNo) ಮತ್ತು ಲಾನಿನಾ (Lanina) ಪ್ರವಾಹಗಳ ಪ್ರಭಾವವನ್ನು ಹೆಚ್ಚು ಪರಿಗಣಿಸಲಾಗುತ್ತಿದೆ.  ಇವುಗಳೆರಡೂ ಪ್ರಪಂಚದಾದ್ಯಂತ ವಿವಿಧ ಪ್ರದೇಶಗಳ ಸಾಮಾನ್ಯ ವಾಯುಗುಣ ಪರಿಸ್ಥಿತಿಗಳು ಏರುಪೇರಾಗಲು ಕಾರಣಗಳೆಂದು ವಿವರಿಸಲಾಗಿದೆ.

— ಲಾನಿನಾ (Lanina) ಎಂದರೆ 'ಚಿಕ್ಕ ಹುಡುಗಿ' (Little Girl) ಎಂದರ್ಥ.  ಇದನ್ನು 'ಓಲ್ಡ್ ಮ್ಯಾನ್' (Old Man) ಎಂತಲೂ ಕರೆಯುತ್ತಾರೆ. ಇದು ಕೂಡಾ ಎಲ್ ನಿನೋ ನಂತೆ ಸಮಭಾಜಕ ವೃತ್ತ ವಲಯದ ಫೆಸಿಫಿಕ್ ಸಾಗರದಲ್ಲಿ ಆಗಿಂದಾಗ್ಗೆ ಕಂಡುಬರುವ ಉಷ್ಣಾಂಶದ ಬದಲಾವಣೆಗೆ ಕಾರಣೀಕೃತವಾಗಿದೆ.

— ಲಾನಿನಾ ಪ್ರವಾಹವು ಎಲ್ ನಿನೋ (ElNiNo) ಉಷ್ಣೋದಕ ಪ್ರವಾಹಕ್ಕೆ ಸಂಪೂರ್ಣವಾಗಿ ವಿರುದ್ಧವಾದದ್ದು, ಉಷ್ಣವಲಯದ ಫೆಸಿಫಿಕ್ ಸಾಗರದಲ್ಲಿ ಪಶ್ಚಿಮದಿಂದ ಪೂರ್ವದ ಕಡೆಗೆ ಪ್ರವಹಿಸುವ ಶೀತ ಪ್ರವಾಹವಾಗಿದೆ.


* ಲಾನಿನಾ ಪ್ರವಾಹದ ಹುಟ್ಟು:

ಮಧ್ಯ ಫೆಸಿಫಿಕ್ ಸಾಗರದ ನೀರು ಪೂರ್ವದಲ್ಲಿ ಅಮೆರಿಕ ಖಂಡಗಳಿಗೆ ಅಪ್ಪಳಿಸಿ, ಶಬ್ಧದ ಅಲೆಗಳಂತೆ ಹಿಂತಿರುಗುತ್ತವೆ (Rebound or Bounce). ದಕ್ಷಿಣಾರ್ಧಗೋಳದ ಉಪ ಉಷ್ಣವಲಯದ ಅಧಿಕ ಒತ್ತಡ ಪಟ್ಟಿ ಉಷ್ಣಾಂಶದ ನೀರು ಪಶ್ಚಿಮದ ಕಡೆಗೆ ಸೆಳೆದೊಯ್ಯಲ್ಪಡುವುದು. ಇದರ ಪರಿಣಾಮವಾಗಿ ಆಳದಿಂದ ಹೆಚ್ಚು ತಂಪಾದ ನೀರು ಮೇಲೇರುವುದು.  ಇದನ್ನೇ 'ಆಪ್ ವೆಲ್ಲಿಂಗ್' ಎಂದು ಕರೆಯುವರು. ಇದರಿಂದ ಸಾಗರ ಮೇಲ್ಮೈನ ನೀರಿನ ಉಷ್ಣಾಂಶವು ಮತ್ತಷ್ಟು ಕಡಿಮೆಯಾಗುವುದು. ಪೂರ್ವ ಫೆಸಿಫಿಕ್ ಸಾಗರದಿಂದ ಹರಿಯುವ ಈ ಶೀತವಾದ ನೀರಿನ ಪ್ರವಾಹವನ್ನೇ 'ಲಾನಿನಾ' ಎಂದು ಕರೆಯುವರು.

ಲಾನಿನಾ (Lanina) ಪ್ರವಾಹ ಎಂದರೇನು? : (What do you mean by Lanina?) (ಟಿಪ್ಪಣಿ ಬರಹ)


★ ಲಾನಿನಾ (Lanina) ಪ್ರವಾಹ ಎಂದರೇನು? :
(What do you mean by Lanina?)

(ಟಿಪ್ಪಣಿ ಬರಹ)

━━━━━━━━━━━━━━━━━━━━━━━━━━━━━━━━━━━━━━━━━━━━━
★ (World Geography)
ಪ್ರಪಂಚದ ಭೂಗೋಳಶಾಸ್ತ್ರ

ಪ್ರಪಂಚದ ವಾಯುಗುಣದ ವಿಶ್ಲೇಷಣೆಯಲ್ಲಿ ಇಂದು ಎಲ್ ನಿನೋ (ElNiNo) ಮತ್ತು ಲಾನಿನಾ (Lanina) ಪ್ರವಾಹಗಳ ಪ್ರಭಾವವನ್ನು ಹೆಚ್ಚು ಪರಿಗಣಿಸಲಾಗುತ್ತಿದೆ.  ಇವುಗಳೆರಡೂ ಪ್ರಪಂಚದಾದ್ಯಂತ ವಿವಿಧ ಪ್ರದೇಶಗಳ ಸಾಮಾನ್ಯ ವಾಯುಗುಣ ಪರಿಸ್ಥಿತಿಗಳು ಏರುಪೇರಾಗಲು ಕಾರಣಗಳೆಂದು ವಿವರಿಸಲಾಗಿದೆ.

— ಲಾನಿನಾ (Lanina) ಎಂದರೆ 'ಚಿಕ್ಕ ಹುಡುಗಿ' (Little Girl) ಎಂದರ್ಥ.  ಇದನ್ನು 'ಓಲ್ಡ್ ಮ್ಯಾನ್' (Old Man) ಎಂತಲೂ ಕರೆಯುತ್ತಾರೆ. ಇದು ಕೂಡಾ ಎಲ್ ನಿನೋ ನಂತೆ ಸಮಭಾಜಕ ವೃತ್ತ ವಲಯದ ಫೆಸಿಫಿಕ್ ಸಾಗರದಲ್ಲಿ ಆಗಿಂದಾಗ್ಗೆ ಕಂಡುಬರುವ ಉಷ್ಣಾಂಶದ ಬದಲಾವಣೆಗೆ ಕಾರಣೀಕೃತವಾಗಿದೆ.

— ಲಾನಿನಾ ಪ್ರವಾಹವು ಎಲ್ ನಿನೋ (ElNiNo) ಉಷ್ಣೋದಕ ಪ್ರವಾಹಕ್ಕೆ ಸಂಪೂರ್ಣವಾಗಿ ವಿರುದ್ಧವಾದದ್ದು, ಉಷ್ಣವಲಯದ ಫೆಸಿಫಿಕ್ ಸಾಗರದಲ್ಲಿ ಪಶ್ಚಿಮದಿಂದ ಪೂರ್ವದ ಕಡೆಗೆ ಪ್ರವಹಿಸುವ ಶೀತ ಪ್ರವಾಹವಾಗಿದೆ.


* ಲಾನಿನಾ ಪ್ರವಾಹದ ಹುಟ್ಟು:

ಮಧ್ಯ ಫೆಸಿಫಿಕ್ ಸಾಗರದ ನೀರು ಪೂರ್ವದಲ್ಲಿ ಅಮೆರಿಕ ಖಂಡಗಳಿಗೆ ಅಪ್ಪಳಿಸಿ, ಶಬ್ಧದ ಅಲೆಗಳಂತೆ ಹಿಂತಿರುಗುತ್ತವೆ (Rebound or Bounce). ದಕ್ಷಿಣಾರ್ಧಗೋಳದ ಉಪ ಉಷ್ಣವಲಯದ ಅಧಿಕ ಒತ್ತಡ ಪಟ್ಟಿ ಉಷ್ಣಾಂಶದ ನೀರು ಪಶ್ಚಿಮದ ಕಡೆಗೆ ಸೆಳೆದೊಯ್ಯಲ್ಪಡುವುದು. ಇದರ ಪರಿಣಾಮವಾಗಿ ಆಳದಿಂದ ಹೆಚ್ಚು ತಂಪಾದ ನೀರು ಮೇಲೇರುವುದು.  ಇದನ್ನೇ 'ಆಪ್ ವೆಲ್ಲಿಂಗ್' ಎಂದು ಕರೆಯುವರು. ಇದರಿಂದ ಸಾಗರ ಮೇಲ್ಮೈನ ನೀರಿನ ಉಷ್ಣಾಂಶವು ಮತ್ತಷ್ಟು ಕಡಿಮೆಯಾಗುವುದು. ಪೂರ್ವ ಫೆಸಿಫಿಕ್ ಸಾಗರದಿಂದ ಹರಿಯುವ ಈ ಶೀತವಾದ ನೀರಿನ ಪ್ರವಾಹವನ್ನೇ 'ಲಾನಿನಾ' ಎಂದು ಕರೆಯುವರು.

★ ಎಲ್ ನಿನೋ (ElNiNo) ಎಂದರೇನು?: (ಟಿಪ್ಪಣಿ ಬರಹ)


★ ಎಲ್ ನಿನೋ (ElNiNo) ಎಂದರೇನು?:
(ಟಿಪ್ಪಣಿ ಬರಹ)

 ಇತ್ತೀಚಿನ ದಶಕಗಳಲ್ಲಿ ಭಾರತದ ಮಾನ್ಸೂನ್ ವಾಯುಗುಣದ ಮುನ್ಸೂಚನೆ ನೀಡಲು ಪರಿಗಣಿಸಲಾಗಿರುವ ೧೬ ಅಂಶಗಳಲ್ಲಿ ಎಲ್ ನಿನೋ  ಪ್ರಭಾವವನ್ನು ಪ್ರಧಾನವಾಗಿ ಗಮನಿಸಲಾಗುತ್ತಿದೆ. ಭಾರತದಲ್ಲಿ ಮಾನ್ಸೂನ್ ಮಾರುತಗಳ ಆಗಮನ, ಮಳೆಯ ಪ್ರಮಾಣ, ಬರಗಾಲ ಮೊದಲಾದವುಗಳಿಗೆ ಸಮೀಕರಿಸಿ ವಿವರಿಸಲಾಗುತ್ತಿದೆ.

— ಎಲ್ ನಿನೋ (ElNiNo) ಎಂದರೆ ' ಮಗು ಕ್ರಿಸ್ತ ' (Baby Christ) ಎಂದರ್ಥ. ಇದು ಸ್ಪಾನಿಷ್ ಭಾಷೆಯಿಂದ ಬಳಕೆಗೆ ಬಂದಿದೆ. ದಕ್ಷಿಣ ಅಮೆರಿಕದ ಪಶ್ಚಿಮ ತೀರದಲ್ಲಿ ಸಾಮಾನ್ಯವಾಗಿ ಪೆರು ದೇಶದ ಪಶ್ಚಿಮ ತೀರದಲ್ಲಿ ಕ್ರಿಸ್ ಮಸ್ ಅವಧಿಯಲ್ಲಿ ಕಾಣಿಸಿಕೊಳ್ಳುವ ಉಷ್ಣೋದಕ ಪ್ರವಾಹವನ್ನು ಈ ಎಲ್ ನಿನೋ ಹೆಸರಿನಿಂದ ಕರೆಯಲಾಗಿದೆ. ಇದನ್ನು ಸುಮಾರು ಕ್ರಿ.ಶ ೧೫೬೭ರಲ್ಲಿ ಮೊದಲು ಗಮನಿಸಲಾಯಿತು.


* ಎಲ್ ನಿನೋ ಪ್ರವಾಹದ ಹುಟ್ಟು:

 ಫೆಸಿಫಿಕ್ ಸಾಗರದ ಪಶ್ಚಿಮ ಭಾಗದಲ್ಲಿ ನೀರಿನ ಎತ್ತರ ಹೆಚ್ಚಾಗಿದ್ದು, ಈ ಹೆಚ್ಚು
ಉಷ್ಣಾಂಶದ ನೀರು ಪೂರ್ವದ ಕಡೆಗೆ ನಾಲಿಗೆಯಂತೆ ಚಾಚಿ ಮುಂದುವರಿಯುವುದು. ಈ ಹೆಚ್ಚು ನೀರಿನ ಉಷ್ಣಾಂಶದ ನೀರು ಪೂರ್ವದ ಕಡೆಗೆ ಮುಂದುವರಿದಂತೆ 'ಥರ್ಮೋಕ್ಲೈನ್' (Thermocline) ನ ಆಳವು ಸಹ ಹೆಚ್ಚುವುದು.  ಇದಕ್ಕಿಂತ ಕೆಳಭಾಗದಲ್ಲಿ ಸಾಗರದ ನೀರಿನ ಉಷ್ಣಾಂಶವು ಅತಿ ಕಡಿಮೆ.  ಥರ್ಮೋಕ್ಲೈನ್ ಹೆಚ್ಚು ಆಳದಲ್ಲಿರುವುದರಿಂದ ಹೆಚ್ಚು ಉಷ್ಣಾಂಶ ಹಾಗೂ ಕೆಳಭಾಗದ ಕಡಿಮೆ ಉಷ್ಣಾಂಶದ ನೀರಿನ ಮಿಶ್ರಣವು ಕಡಿಮೆಯಿದ್ದು, ಹೆಚ್ಚು ಉಷ್ಣಾಂಶದ ಅಗಾಧ ಪ್ರಮಾಣದ ನೀರು ಪೂರ್ವದ ಕಡೆಗೆ ಹರಿಯುವುದು.  ಇದೇ ಎಲ್ ನಿನೋ (ElNiNo).


* 'ಥರ್ಮೋಕ್ಲೈನ್' (Thermocline) ಎಂದರೇನು?

— 'ಥರ್ಮೋಕ್ಲೈನ್' ಎಂದರೆ ಸಾಗರದಲ್ಲಿ ಮೇಲ್ಮೈನ ಹೆಚ್ಚು ಉಷ್ಣಾಂಶದ ಹಾಗೂ ಳಗಿನ ಕಡಿಮೆ ಉಷ್ಣಾಂಶದ ನೀರನ್ನು ಬೇರ್ಪಡಿಸುವ ವಲಯ.

☀ ಉಷ್ಣವಲಯದ ಎಲ್ಲಾ ಮರಭೂಮಿಗಳೂ ಭೂ ರಾಶಿಗಳ ಪಶ್ಚಿಮ ಭಾಗದಲ್ಲಿಯೇ ಕಂಡು ಬರುತ್ತವೆ ಏಕೆ? (why the all tropical deserts found in the piles of western section?)


☀ ಉಷ್ಣವಲಯದ ಎಲ್ಲಾ ಮರಭೂಮಿಗಳೂ ಭೂ ರಾಶಿಗಳ ಪಶ್ಚಿಮ ಭಾಗದಲ್ಲಿಯೇ ಕಂಡು ಬರುತ್ತವೆ ಏಕೆ?
(why the all tropical deserts found in the piles of western section?)

━━━━━━━━━━━━━━━━━━━━━━━━━━━━━━━━━━━━━━━━━━━━━

ಪ್ರಾಕೃತಿಕ, ಪ್ರಾದೇಶಿಕ ಭೂಗೋಳಶಾಸ್ತ್ರ.
(Physical Geography)


— ಪ್ರಪಂಚದ ಅರ್ಧದಷ್ಟು ವಿಸ್ತಾರದ ಪ್ರದೇಶದಲ್ಲಿ ಗಂಟೆಗೆ ೧೫ ರಿಂದ ೨೫ ಕಿ.ಮೀ ವೇಗವಾಗಿ ಬೀಸುವ ವಾಣಿಜ್ಯ ಮಾರುತಗಳು ಕಡಿಮೆ ಉಷ್ಣಾಂಶವನ್ನು ಹೊಂದಿದ ಪ್ರದೇಶದಿಂದ ಹೆಚ್ಚು ಉಷ್ಣಾಂಶದ ಪ್ರದೇಶಗಳ ಕಡೆಗೆ ಬೀಸುವುದರಿಂದ ಅವುಗಳ ಉಷ್ಣಾಂಶವು ಹೆಚ್ಚುತ್ತಾ ಹೋಗಿ ಜಲಾಂಶವನ್ನು ಹೊಂದುವ ಅವುಗಳ ಸಾಮರ್ಥ್ಯವೂ ಸಹ ಹೆಚ್ಚುತ್ತಾ ಹೋಗುವುದು.  ಇದರಿಂದ ಇವುಗಳು ತಮ್ಮ ಮಾರ್ಗದಲ್ಲಿ ಮುಂದುವರೆದಂತೆಲ್ಲ ಮಳೆ ನೀಡದೇ ಆ ಪ್ರದೇಶಗಳಲ್ಲಿನ ಜಲಭಾಗಗಳನ್ನೂ ಸಹ ಬತ್ತಿಸಿ ಆಲಿಯ ರೂಪದಲ್ಲಿ ಮುಂದೆ ಕೊಂಡೊಯ್ಯುತ್ತವೆ.

— ಈ ಮಾರುತಗಳು ಹೆಚ್ಚು ಎತ್ತರವಾದ ಪರ್ವತಗಳಿಂದ ತಡೆಯಲ್ಪಟ್ಟಾಗ ಮಾತ್ರ ಮಳೆ ನೀಡುತ್ತವೆ. ಇದರಿಂದ ವಾಣಿಜ್ಯ ಮಾರುತಗಳು ಬೀಸುವ ಭೂ ರಾಶಿಗಳ ಪೂರ್ವ ಭಾಗಗಳು ಮಳೆ ಪಡೆಯುತ್ತವೆ.  ಆದರೆ ಪಶ್ಚಿಮದ ಕಡೆಗೆ ಬಂದಂತೆ ಮಳೆಯ ಪ್ರಮಾಣವು ಕಡಿಮೆಯಾಗುತ್ತಾ ಹೋಗುವುದು.  ಇದರಿ೦ದ ಈ ವಲಯದ ಭೂ ರಾಶಿಗಳ ಪಶ್ಚಿಮ ಭಾಗಗಳು ಮರಭೂಮಿ ಹಾಗೂ ಅರೆ ಮರಭೂಮಿಗಳಾಗಿ ಪರಿಣಮಿಸಿವೆ.

ಇದರಿಂದಾಗಿಯೇ 'ಉಷ್ಣವಲಯದ ಎಲ್ಲಾ ಮರಭೂಮಿಗಳೂ ಭೂ ರಾಶಿಗಳ ಪಶ್ಚಿಮ ಭಾಗದಲ್ಲಿಯೇ ಕಂಡು ಬರುತ್ತವೆ'.

ಮಾರುತಗಳು (Winds) ಮತ್ತು ಅವುಗಳ ಸಂಬಂಧಪಟ್ಟ ಅಂಶಗಳು ( ಟಿಪ್ಪಣಿ ಬರಹ)

☀ಮಾರುತಗಳು (Winds) ಎಂದರೇನು? :
(ಟಿಪ್ಪಣಿ ಬರಹ)

━━━━━━━━━━━━━━━━━━━━━━━━━━━━━━━━━━━━━━━━━━━━━
★ ಟಿಪ್ಪಣಿ ಬರಹ
(Short notes for IAS / KAS)

ಅಧಿಕ ಒತ್ತಡದಿಂದ ಕಡಿಮೆ ಒತ್ತಡದ ಕಡೆಗೆ ಭೂ ಮೇಲ್ಮೈಯಲ್ಲಿ ಸಮಾನಾಂತರವಾಗಿ ಚಲಿಸುವ ವಾಯುವಿಗೆ 'ಮಾರುತ' ವೆಂದು ಕರೆಯಲಾಗುವುದು.

— ವಾಯುಮಂಡಲದಲ್ಲಿನ ಒತ್ತಡದ ಹಂಚಿಕೆಯು ಮಾರುತಗಳ ದಿಕ್ಕು ಹಾಗು ವೇಗವನ್ನು ನಿರ್ಧರಿಸುವುದು.
— ಭೂ ಮೇಲ್ಮೈಯಲ್ಲಿ ಉಷ್ಣಾಂಶ ಮತ್ತು ಒತ್ತಡದ ಅಸಮತೆಯನ್ನು ಸರಿದೂಗಿಸುವ ಪ್ರಮುಖ ಮಾಧ್ಯಮಗಳಾಗಿ ಮಾರುತಗಳು ವರ್ತಿಸುತ್ತವೆ.
— ಹವಾಮಾನದ ಪರಿಸ್ಥಿತಿಯ ಮೇಲೆ ಪ್ರತ್ಯಕ್ಷವಾಗಿ ಮಾರುತಗಳ ಪ್ರಭಾವ ಅಪಾರ. ಇದು ಉಷ್ಣಾಂಶ, ತೇವಾಂಶ ಹಾಗೂ ವೃಷ್ಟಿಯ ಮೇಲೆ ಹೆಚ್ಚು ಪ್ರಭಾವವನ್ನು ಬೀರುತ್ತವೆ. ಆದ್ದರಿಂದ ವಾಯುಗುಣದ ಮೂಲಾಂಶಗಳಲ್ಲಿ ಮಾರುತಗಳು ಸಹ ಪ್ರಮುಖವಾಗಿವೆ.


★ ಇತರೇ ಅಂಶಗಳು:
━━━━━━━━━━━━━━━━━━━━━━━━━━━━━━━━━━━━━━━━━━━━━

— ಗಾಳಿಯು ಬೀಸುವ ದಿಕ್ಕನ್ನು ತಿಳಿಯಲು ಬಳಸುವ ಉಪಕರಣ:
('ಪವನ ದಿಕ್ಸೂಚಿ' (Wind Vane)

— ಗಾಳಿಯ ವೇಗವನ್ನು ಅಳೆಯಲು ಬಳಸುವ ಮಾಪಕ:
(Anemometer. )

— ಗಾಳಿಯ ವೇಗವನ್ನು ಅಳೆಯುವ ಮಾನ:
('ನಾಟ್' (Knot) ಅಥವ  ಕಿ.ಮೀ )

— ಒಂದು 'ನಾಟ್' (Knot) ಎಂದರೆ ಒಂದು ನಾಟಿಕಲ್ ಮೈಲಿ (೬೦೮೦ ಆಡಿಗಳು)

— ಒಂದು ನಾಟಿಕಲ್ ಮೈಲಿ ಎಂದರೆ ೧.೮೫ ಕಿ.ಮೀ ಗೆ ಸಮನಾಗಿರುವುದು.

— ಒಂದು ಪ್ರದೇಶದಲ್ಲಿ ಒಂದು ವರ್ಷದ ಅವಧಿಯಲ್ಲಿ ಮಾರುತಗಳು ಸ್ಥಳೀಯವಾಗಿ ವಿವಿಧ ದಿಕ್ಕಿನಿಂದ ಬೀಸುವುವು.  ಇದನ್ನು 'ವಿಂಡ್ ರೋಸ್ (Wind Rose) ಮೂಲಕ ನಿರೂಪಿಸಲಾಗುವುದು.

★ " ಪಾರಿವಾರಿಕ್ ಮಹಿಳಾ ಲೋಕ್ ಅದಾಲತ್ " (Parivarik Mahila Lil Adalat) : ( ಟಿಪ್ಪಣಿ ಬರಹ)


★ " ಪಾರಿವಾರಿಕ್ ಮಹಿಳಾ ಲೋಕ್ ಅದಾಲತ್ " (Parivarik Mahila Lil Adalat) :
(ಟಿಪ್ಪಣಿ ಬರಹ)

— ೧೯೮೭ ರಲ್ಲಿ ರಾಷ್ಟ್ರ ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ಕಾನೂನು ಸೇವಾ ಪ್ರಾಧಿಕಾರ ರಚನೆಗೊಂಡು ಉಚಿತ ಕಾನೂನು ನೆರವು ಮತ್ತು ಲೋಕ ಅದಾಲತ್ ಗಳ ಮೂಲಕ ಜನರಿಗೆ ಶೀಘ್ರ ನ್ಯಾಯದಾನ ವ್ಯವಸ್ಥೆ ಕಲ್ಪಿಸಿತು.

— ಲೋಕ ಅದಾಲತ್ ನಲ್ಲಿ ಕೌಟುಂಬಿಕ ವ್ಯಾಜ್ಯಗಳನ್ನು, ಮದುವೆಗೆ ಸಂಬಂಧಿಸಿದ ಖಟ್ಲೆಗಳನ್ನು ಬಗೆಹರಿಸಲು ಅವಕಾಶ ಕಲ್ಪಿಸಲಾಗಿತ್ತು.  ಇದನ್ನು ತ್ವರಿತವಾಗಿ ಬಗೆಹರಿಸಿ ಮಹಿಳೆಯರಿಗೆ ಆಗುವ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ಪಾರಿವಾರಿಕ್ ಮಹಿಳಾ ಲೋಕ್ ಅದಾಲತ್ ಗಳನ್ನು ಸ್ಥಾಪಿಸಲು ಸಲಹೆ ನೀಡಿತು.

— ೧೯೯೫ ರಲ್ಲಿ ಮೊದಲ ಬಾರಿಗೆ ಪಾರಿವಾರಿಕ್ ಮಹಿಳಾ ಲೋಕ್ ಅದಾಲತ್ ಏರ್ಪಾಡಾಗಿ ನ್ಯಾಯಾಲಯದ ಕಟ್ಟೆ ಹತ್ತುವ ಮುಂಚೆಯೇ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಯಿತು.

— ಅಲ್ಲಿಂದ ಇಲ್ಲಿಯವರೆಗೆ ಸುಮಾರು ೭೯ ಅದಾಲತ್ ಗಳು ಏರ್ಪಾಡಾಗಿದ್ದು ಸಮುದಾಯದಲ್ಲಿ ತುಳಿತಕ್ಕೊಳಪಟ್ಟ ನಿರಾಶ್ರಿತ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿವೆ.

Tuesday, 27 May 2014

★ ಕರ್ನಾಟಕವನ್ನಾಳಿದ ಪ್ರಮುಖ ರಾಜಮನೆತನ , ಸಂತತಿಗಳ ಸಂಕ್ಷಿಪ್ತ ಇತಿಹಾಸ ಪರಿಚಯ :


★ ಕರ್ನಾಟಕವನ್ನಾಳಿದ ಪ್ರಮುಖ ರಾಜಮನೆತನ , ಸಂತತಿಗಳ ಸಂಕ್ಷಿಪ್ತ ಇತಿಹಾಸ ಪರಿಚಯ  :

ಭಾರತದ 8ನೇ ಅತೀ ದೊಡ್ಡ ರಾಜ್ಯವಾಗಿರುವ ಕರ್ನಾಟಕವು ಶ್ರೀಮಂತ ಇತಿಹಾಸವನ್ನು ಹೊಂದಿದ್ದು,  ಹಲವಾರು ಶತಮಾನಗಳವರೆಗೆ ಹಬ್ಬಿದೆ.


೧) ಮೌರ್ಯರು :
ರಾಜ್ಯದ ನಾನಾ ಭಾಗಗಳಲ್ಲಿ ದೊರೆತಿರುವ ಶಾಸನಗಳು ಕನ್ನಡನಾಡು ಉತ್ತರದ ಮೌರ್ಯರ ಆಡಳಿತಕ್ಕೆ ಕ್ರಿ.ಪೂ. 3ನೇ ಶತಮಾನದಲ್ಲಿ ಒಳಪಟ್ಟಿತ್ತು ಎಂದು ಸಾರುತ್ತವೆ.  ಮೌರ್ಯರ ಹೆಸರಾಂತ ದೊರೆ ಅಶೋಕ (ಕ್ರಿ.ಪೂ. 273-233) ನ ಶಾಸನಗಳು ರಾಜ್ಯದ 11 ಸ್ಥಳಗಳಲ್ಲಿ ಕಂಡು ಬಂದಿವೆ.

* ಚಂದ್ರಗುಪ್ತ ಮೌರ್ಯನು ತನ್ನ ಗುರು ಭದ್ರಬಾಹುವಿನೊಡನೆ ಕರ್ನಾಟಕದ ಶ್ರವಣ ಬೆಳಗೊಳದಲ್ಲಿ ಬಂದು ನೆಲೆಸಿದ್ದನು.

* ಅಶೋಕನ ಕರ್ನಾಟಕದ ಪ್ರಾಂತ್ಯಗಳ ರಾಜಧಾನಿಗಳು  :
ಸುವರ್ಣಗಿರಿ,  ಇಸಿಲ,  ತೊಸಿಲ,  ಸಂಪ.

* ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರೆತ ಸ್ಥಳಗಳು :
- ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ,  ಅ.ಸಿದ್ದಾಪುರ,  ಜಿ.ರಾಮೇಶ್ವರ.
- ರಾಯಚೂರು ಜಿಲ್ಲೆಯ ಗವಿಮಠ,ಮಾಸ್ಕಿ,  ಪಾಲ್ಕಿಗುಂಡು,  ಕೊಪ್ಪಳ.
- ಗುಲ್ಬರ್ಗಾ ಜಿಲ್ಲೆಯ ಸನ್ನತಿ.
- ಬಳ್ಳಾರಿ ಜಿಲ್ಲೆಯ ನಿಟ್ಟೂರು,  ಉದೇಗೊಳ್ಳಂ


೨)  ಶಾತವಾಹನರು (ಕ್ರಿ.ಪೂ. 238 - ಕ್ರಿ.ಶ 225) :
ಮೌರ್ಯರ ಸಾಮಂತರಾಗಿದ್ದ ಇವರು, ಮೌರ್ಯರ ನಂತರ ಸ್ವತಂತ್ರರಾಗಿ,  (ಕ್ರಿ.ಪೂ. 225 ರವರೆಗೆ ಆಳ್ವಿಕೆ ನಡೆಸಿದರು.
* ಇವರ ರಾಜಧಾನಿ  :  ಪೈತಾನ್ ಅಥವಾ ಪ್ರತಿಷ್ಠಾನ.
* ಇವರ ಲಾಂಛನ :  ವರುಣ.
* ಇವರೇ ಕ್ರಿ.ಶ 78ರಲ್ಲಿ ಶಾಲಿವಾಹನ ಶಕೆಯನ್ನು ಪ್ರಾರಂಭಿಸಿದವರು.
* ಶಾತವಾಹನರ ಮೂಲ ಪುರುಷ  :  ಸಿಮುಖ.
* ಈ ಸಂತತಿಯ ಅತ್ಯಂತ ಪ್ರಮುಖ ದೊರೆ : ಗೌತಮಿಪುತ್ರ ಶಾತಕರ್ಣಿ
* ಶಾತವಾಹನರನ್ನು ' ಶಾತಕರ್ಣಿಗಳೆಂದು' ಕರೆಯುತ್ತಾರೆ.


೩)  ಬನವಾಸಿಯ ಕದಂಬರು (ಕ್ರಿ.ಶ 345 - 540)
* ಈ ಸಂತತಿಯ ಸ್ಥಾಪಕ  :ಮಯೂರವರ್ಮ (ಮಯೂರಶರ್ಮ)  (345-360)
* ಕದಂಬರ ರಾಜಧಾನಿ :  ಬನವಾಸಿ (ಉ.ಕನ್ನಡ ಜಿಲ್ಲೆಯಲ್ಲಿದೆ)
* ಬನವಾಸಿಗೆ ವನವಾಸಿ,  ವೈಜಯಂತಿ,  ಬೈಜಾಂಟಾಯಿನ್ ಎಂಬ ಹೆಸರುಗಳಿದ್ದವು.
* ಇವರ ಲಾಂಛನ :  ಸಿಂಹ.
* ಕದಂಬರಲ್ಲಿ ಹಾನಗಲ್, ಚಂದಾವರ,  ಗೋವೇ ಕದಂಬ ರೆಂದು ಮೂರು ಶಾಖೆಗಳಿದ್ದವು.
* ಕದಂಬರ ಮೂಲದ ಬಗ್ಗೆ 'ಶಾಂತಿವರ್ಮನ ತಾಳಗುಂದ ಶಾಸನ' ತಿಳಿಸುತ್ತದೆ.
* ಕನ್ನಡದ ಪ್ರಪ್ರಥಮ ಶಾಸನ - ಕಾಕುತ್ಸವರ್ಮನ ಹಲ್ಮಿಡಿ ಶಾಸನ.


೪)  ತಲಕಾಡಿನ ಗಂಗರು  (ಕ್ರಿ.ಶ 350- 999)
* ದಡಿಗ ಮತ್ತು ಮಾದವರು ಗಂಗ ವಂಶದ ಸ್ಥಾಪಕರು.
* ಈ ಸಂತತಿಯ ಮೊದಲ ದೊರೆ : ದಡಿಗ (350 -400)
* ಇವರ ಮೊದಲ ರಾಜಧಾನಿ :  ಕೋಲಾರ ಬಳಿಯ ಕುವಲಾಲ
* ಇವರ ಎರಡನೆಯ ರಾಜಧಾನಿ : ತಲಕಾಡು
* ತಲಕಾಡಿನ ಮತ್ತೊಂದು ಹೆಸರು  :  ತಲವನಪುರ.
* ಇವರ ಮೂರನೇ ರಾಜಧಾನಿ :  ಚೆನ್ನಪಟ್ಟಣ ಬಳಿಯ ಮಾಕುಂದ
* ಇವರ ಲಾಂಛನ : ಆನೆ(ಮದಗಜ)
* ಈ ಸಂತತಿಯ ಅತ್ಯಂತ ಪ್ರಸಿದ್ಧ  ದೊರೆ : ದುರ್ವಿನೀತ (540-600)
* ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹವನ್ನು ಕೆತ್ತಿಸಿದ ಚಾವುಂಡರಾಯ ಗಂಗರ ಆಸ್ಥಾನದಲ್ಲಿ ಮಂತ್ರಿ ಹಾಗೂ ದಂಡನಾಯಕನಾಗಿದ್ದನು.
* ಚಾವುಂಡರಾಯನು 4ನೇ ರಾಚಮಲ್ಲನ ಪ್ರಧಾನಮಂತ್ರಿಯಾಗಿದ್ದನು.


೫) ಬಾದಾಮಿಯ ಚಾಲುಕ್ಯರು (ಕ್ರಿ.ಶ 500- 757) :
* ಈ ಸಂತತಿಯ ಸ್ಥಾಪಕ  :  ಜಯಸಿಂಹ
* ಇವರ ರಾಜಧಾನಿ  : ಬಾದಾಮಿ ಅಥವಾ ವಾತಾಪಿ (ಬಿಜಾಪುರ ಜಿಲ್ಲೆಯಲ್ಲಿದೆ)
* ಈ ಸಂತತಿಯ ಅತ್ಯಂತ ಪ್ರಸಿದ್ಧ  ದೊರೆ :  ಇಮ್ಮಡಿ ಪುಲಕೇಶಿ (609-642)
* ಇವರ ರಾಜ ಲಾಂಛನ  : ವರಹ.
* ಇಮ್ಮಡಿ ಪುಲಕೇಶಿಯ ಆಸ್ಥಾನಕ್ಕೆ ಭೇಟಿಯಿತ್ತ ವಿದೇಶಿ ಪ್ರವಾಸಿಗ :  ಚೀನಾದ ಬೌದ್ಧ ಯಾತ್ರಿಕ  ಹ್ಯೂಯನ್ ತ್ಸಾಂಗ್.
* ಬಾದಾಮಿಯ ಚಾಲುಕ್ಯರ ನಿರ್ಮಿತ ಐಹೊಳೆಯನ್ನು 'ಭಾರತೀಯ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು ' ಎನ್ನುವರು.


೬) ಮಾನ್ಯಖೇಟದ ರಾಷ್ಟ್ರಕೂಟರು  (ಕ್ರಿ.ಶ 345 - 540) :
* ಈ ಸಂತತಿಯ ಸ್ಥಾಪಕ : ದಂತಿದುರ್ಗ
* ಇವರ ರಾಜಧಾನಿ :  ಮಾನ್ಯಖೇಟ ಅಥವಾ ಮಾಲಖೇಡವಾಗಿತ್ತು.
* ಇವರ ಲಾಂಛನ : ಗರುಡ
* ಈ ಸಂತತಿಯ ಅತ್ಯಂತ ಹೆಸರಾಂತ   ದೊರೆ :ಅಮೋಘವರ್ಷ ನೃಪತುಂಗ (814-878)
* ಕ್ರಿ.ಶ 851 ರಲ್ಲಿ ಅರಬ್ ಪ್ರವಾಸಿ ಸುಲೈಮಾನ್ ನು ಇವನ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನು.


೭) ಕಲ್ಯಾಣದ ಚಾಲುಕ್ಯರು (ಕ್ರಿ.ಶ 973-1156 ಹಾಗೂ 1183-1200)
* ಇಮ್ಮಡಿ ತೈಲಪ ಕಲ್ಯಾಣದ ಚಾಲುಕ್ಯ ಸಂಸ್ಥಾನದ ಸ್ಥಾಪಕ
* ಇವರ ರಾಜಧಾನಿ : ಕಲ್ಯಾಣ
* ಈ ಸಂತತಿಯ ಅತ್ಯಂತ ಪ್ರಮುಖ ದೊರೆ : 6ನೇ ವಿಕ್ರಮಾದಿತ್ಯ (1076-1126)
* 1156 ರಲ್ಲಿ ಸಿಂಹಾಸನವನ್ನು ಕಳೆದುಕೊಂಡ ಇವರ ದೊರೆಗಳು ಪುನಃ 1183 ರಿಂದ 1200 ರವರೆಗೆ ರಾಜ್ಯಭಾರ ನಡೆಸಿದರು.


೮) ಕಲ್ಯಾಣಿಯ ಕಲಚೂರಿಗಳು  (ಕ್ರಿ.ಶ 1156 - 1183)
* ಕೇವಲ ಸಾಮಂತರಾಗಿ ಅಧಿಕಾರ ನಡೆಸುತ್ತಿದ್ದ  ಕಲ್ಯಾಣಿಯ ಕಲಚೂರಿಗಳು ಬಿಜ್ಜಳ (1156-1168) ನಿಂದಾಗಿ ಅಲ್ಪಕಾಲ ಸ್ವತಂತ್ರವಾಗಿ ರಾಜ್ಯಭಾರ ನಡೆಸಿದರು.
* ಹೆಸರಾಂತ ಸಮಾಜ ಸುಧಾಕರ ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು.


೯) ದ್ವಾರಸಮುದ್ರದ ಹೊಯ್ಸಳರು  (ಕ್ರಿ.ಶ 985 - 1346) :
* ಈ ಸಂತತಿಯ ಮೂಲ ಪುರುಷ  : ಸಳ.
* ಇವರ ರಾಜಧಾನಿ : ಹಳೇಬೀಡು ಅಥವಾ ದ್ವಾರಸಮುದ್ರವಾಗಿತ್ತು.
* ಈ ಸಂತತಿಯ ಅತ್ಯಂತ ಪ್ರಮುಖ ದೊರೆ : ವಿಷ್ಣುವರ್ಧನ ಅಥವಾ ಬಿಟ್ಟಿದೇವ (1108-1152)
* ಬೇಲೂರಿನ ಚೆನ್ನಕೇಶವ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ಹೊಯ್ಸಳರ ಕೊಡುಗೆಗಳಾಗಿವೆ.


೧೦) ವಿಜಯನಗರ ಸಾಮ್ರಾಜ್ಯ  (ಕ್ರಿ.ಶ 1336 - 1565) :
* ವಿದ್ಯಾರಣ್ಯರ ಸಹಾಯದಿಂದ ಹಕ್ಕ -ಬುಕ್ಕ ಸಹೋದರರಿಂದ ಸ್ಥಾಪಿತವಾದ ಈ ಸಾಮ್ರಾಜ್ಯವನ್ನು ಹಲವಾರು ಸಂತತಿಯ ರಾಜರು ವೈಭವದಿಂದ ಆಳಿದರು.
* ಇವರ ರಾಜಧಾನಿ : ಹಂಪಿ
* ತುಳುವ ಸಂತತಿಯ ಕೃಷ್ಣದೇವರಾಯ (1519 - 1529) ವಿಜಯನಗರ ಸಾಮ್ರಾಜ್ಯದ  ಅತ್ಯಂತ ಪ್ರಬಲ ಹಾಗೂ ಖ್ಯಾತ ದೊರೆ.
* 1565 ರ ತಾಳೀಕೋಟೆ ಯುದ್ಧದಿಂದ ವಿಜಯನಗರ ಸಾಮ್ರಾಜ್ಯ ಪತನವಾಯಿತು.


೧೧) ಬಹಮನಿ ಸಾಮ್ರಾಜ್ಯ (ಕ್ರಿ.ಶ 1347 - 1527)
* ಈ ಬಹಮನಿ ಸಾಮ್ರಾಜ್ಯದ ಸ್ಥಾಪಕ: ಅಲ್ಲಾವುದ್ದೀನ್ ಹಸನ್ ಬಹಮನ್ ಷಾ.
* ಈ ಮುಸ್ಲಿಂ ಸಾಮ್ರಾಜ್ಯದ ರಾಜಧಾನಿಗಳು :  ಗುಲ್ಬರ್ಗಾ ಹಾಗೂ ಬೀದರ್.

★.'ಮಾಂಟ್ರಿಯಲ್ ಪ್ರೋಟೊಕಲ್' ಎಂದರೇನು ? (Montreal Protocol): (ಟಿಪ್ಪಣಿ ಬರಹ)


★.'ಮಾಂಟ್ರಿಯಲ್ ಪ್ರೋಟೊಕಲ್' ಎಂದರೇನು ?
(Montreal Protocol): (ಟಿಪ್ಪಣಿ ಬರಹ)

*.ಮಾನವ ಪ್ರೇರಿತ ಚಟುವಟಿಕೆಗಳಿಂದ ಓಝೋನ್ ಪದರ ಅತಿ ವೇಗವಾಗಿ ಹಾಳುಗುತ್ತಿರುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ ಮೇಲೆ ಓಝೋನ್ ಪದರದ ಸಂರಕ್ಷಣೆ ಬಗ್ಗೆ ವಿಶ್ವದ ಪ್ರಮುಖ ರಾಷ್ಟ್ರಗಳು ಮುಕ್ತವಾಗಿ ಚರ್ಚಿಸಲು ಮುಂದಾದವು. ಅದರ ಹಿನ್ನಲೆಯಲ್ಲಿ ಜಾರಿಗೆ ಬಂದಿದೆ ಮಾಂಟ್ರಿಯಲ್ ಪ್ರೋಟೊಕಲ್.

*.ಓಝೋನ್ ಪದರವನ್ನು ಹಾಳು ಮಾಡಬಲ್ಲ ಕ್ಲೋರೋ ಪ್ಲೋರೋ ಕಾರ್ಬನ್ ನಂತಹ ಹಾನಿಕಾರಕ ಅನಿಲಗಳ ಬಳಕೆಯನ್ನು ಕಾಲಕ್ರಮೇಣ ಕಡಿಮೆಗೊಳಿಸುವುದು ಈಪ್ರೋಟೊಕಲ್ ನ ಮುಖ್ಯ ಉದ್ದೇಶ.*.ಮಾಂಟ್ರಿಯಲ್ ಪ್ರೋಟೊಕಲ್ ಅನ್ನು ಸೆಪ್ಟೆಂಬರ್ 16, 1987 ರಲ್ಲಿ ಸಹಿ ಹಾಕಲಾಯಿತು. ಜನವರಿ 1, 1989 ರಿಂದ ಜಾರಿಗೆ ಬಂದಿದೆ.

★ 'ಓಝೋನ್ ಪದರ' ಎಂದರೇನು ? (Ozone Layer) ಟಿಪ್ಪಣಿ ಬರಹ


★ 'ಓಝೋನ್ ಪದರ' ಎಂದರೇನು ?
(Ozone Layer) (ಟಿಪ್ಪಣಿ ಬರಹ)

*.ಓಝೋನ್ ಪದರ ವಾತಾವರಣದ ಸ್ಟ್ರಾಟೋಸ್ಪೀಯರ್ ನಲ್ಲಿ ಕಂಡುಬರುವ ಅತ್ಯಂತ ಸೂಕ್ಷ್ಮ ಪದರ.ಓಝೋನ್ ನ ರಾಸಾಯನಿಕ ಹೆಸರು O3.

*.ಭೂಮಿಯ ಮೇಲೆ ಸುಮಾರು 10 ಕಿ.ಮೀ ಯಿಂದ 40 ಕಿ.ಮೀ ಯ ವ್ಯಾಪ್ತಿಯಲ್ಲಿ ಕಂಡು ಬರುವ ಓಝೋನ್ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಸೂರ್ಯನಿಂದ ಹೊರ ಬರುವ ಅತಿ ನೇರಳಾತೀತ ಕಿರಣಗಳನ್ನು ವಾತಾವರಣದಲ್ಲಿ ಹೀರಿಕೊಳ್ಳುವ ಮೂಲಕ ಪ್ರಾಣಿ ಸಂಕುಲದ ಮೇಲಾಗುವ ದುಷ್ಪರಿಣಾಮವನ್ನು ತಡೆಯುವಲ್ಲಿ ಓಝೋನ್ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದೆ.

★ ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಅಳವಡಿಸುವ ಉದ್ದೇಶವೇನು? (Why Rights are emboied in the Constitution?)

☀ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಅಳವಡಿಸುವ ಉದ್ದೇಶವೇನು?
 (Why Rights are emboied in the Constitution?)

━━━━━━━━━━━━━━━━━━━━━━━━━━━━━━━━━━━━━━━━━━━━━

★ ಭಾರತದ  ಸಂವಿಧಾನ
(Indian Constitution)


 ಭಾರತದ ಸಂವಿಧಾನದ ೩ನೇ ಭಾಗದಲ್ಲಿ ೧೨ನೇ ಪರಿಚ್ಛೇದದಿಂದ ೩೫ನೇ ಪರಿಚ್ಛೇದದವರೆಗೆ ಮೂಲಭೂತ ಹಕ್ಕುಗಳ ವಿವರಣೆಯನ್ನು ಕೊಡಲಾಗಿದೆ. ಈ ಹಕ್ಕುಗಳನ್ನು ೮ ಭಾಗಗಳಾಗಿ ವಿಂಗಡಿಸಲಾಗಿದ್ದು ಅವು ಒಟ್ಟು ೨೪ ಪರಿಚ್ಛೇದಗಳನ್ನು ಒಳಗೊಂಡಿವೆ. ಅಷ್ಟೇ ಅಲ್ಲ, ಇನ್ನೂ ಅನೇಕ ರಾಷ್ಟ್ರಗಳ ಸಂವಿಧಾನಗಳಲ್ಲೂ ಮೂಲಭೂತ ಹಕ್ಕುಗಳನ್ನು ಸೇರಿಸಲಾಗಿದೆ.

ಇಂಥ ಸೇರ್ಪಡೆಯ ಉದ್ದೇಶವೇನೆಂದರೆ;

 ೧) ಅಧಿಕಾರದಲ್ಲಿ ಇದ್ದವರಿಗೆ ಅಧಿಕಾರ ದುರುಪಯೋಗ ಮಾಡಿಕೊಳ್ಳುವ ಪ್ರವೃತ್ತಿ ಸಹಜವಾಗಿ ಇರುತ್ತದೆ. ಅದರಿಂದ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಅಳವಡಿಸುವುದರ ಮೂಲಕ ಅಧಿಕಾರದ ದುರುಪಯೋಗ ಮಾಡಿಕೊಳ್ಳುವ ಪ್ರವೃತ್ತಿಯನ್ನು ತಡೆಗಟ್ಟಬಹುದು. ಇದರಿ೦ದ ಅವುಗಳಿಗೆ ಕಾನೂನಿನ ರಕ್ಷಣೆ ದೊರಕುತ್ತದೆ.

 ೨) ಶಾಸಕಾಂಗದಲ್ಲಿ ಬಹುಮತ ಪಡೆದಿರುವ ಪಕ್ಷ ಅಲ್ಪಸಂಖ್ಯಾತರ ಹಿತಗಳನ್ನು ಗಣನೆಗೆ ತೆಗೆದುಕೊಳ್ಳದೆ, ತನಗೆ ಬೇಕಾದ ಕಾಯ್ದೆಗಳನ್ನು ಮಾಡಬಹುದು. ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಸೇರಿಸಿ ಅಲ್ಪ ಸಂಖ್ಯಾತರ ಹಿತಾಸಕ್ತಿಗಳ ವಿರುಧ್ಧ ಕಾನೂನು ಮಾಡುವುದನ್ನು ತಡೆಗಟ್ಟಬಹುದು. ಇದರಿಂದ ಶಾಸಕಾಂಗದ ಸರ್ವಾಧಿಕಾರವನ್ನು ತಡೆಗಟ್ಟಬಹುದು.

 ೩) ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಸೇರಿಸುವುದರಿಂದ ಪೌರರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವುಂಟಾಗುತ್ತದೆ.

ಭಾರತದ ಅಣು ವಿದ್ಯುತ್ ಕೇಂದ್ರಗಳು: (India's Nuclear Power Plants)

★ ಭಾರತದ ಪ್ರಮುಖ ಅಣು ವಿದ್ಯುತ್ ಕೇಂದ್ರಗಳ ಕುರಿತು ಬರೆಯಿರಿ.
 (India's Nuclear Power Plants)

 ಅಣು ವಿದ್ಯುತ್ ಶಕ್ತಿಯು 20 ನೇ ಶತಮಾನದಲ್ಲಿ ಮಾನವನಿಂದ ಅವಿಷ್ಕಾರಗೊಂಡ ಹೊಸ ಶಕ್ತಿ ಸಂಪನ್ಮೂಲಗಳಲ್ಲಿ ಮುಖ್ಯವಾದುದು. ಭಾರತವು ಅಣು ಖನಿಜಗಳನ್ನು ಸಾಕಷ್ಟು ಪ್ರಮಾಣದಲ್ಲಿ ಒಳಗೊಂಡಿದೆ. ಅಣು ವಿದ್ಯುತ್ ಉತ್ಪಾದನೆಗೆ ಬೇಕಾಗುವ ಅಣು ಕಚ್ಚಾವಸ್ತುಗಳಾದ ಯುರೇನಿಯಂ, ಥೋರಿಯಂ, ರೇಡಿಯಂ ಮತ್ತು ಲಿಥಿಯಂ ಖನಿಜ ಅದಿರುಗಳು ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹರಡಿಕೊಂಡಿದ್ದು ನಿಕ್ಷೇಪಗಳ ಮೂಲಕ ಪಡೆಯಲಾಗುತ್ತಿದೆ. ಭಾರತವು ಅಪಾರ ವಿದ್ಯುತ್ತಿನ ಕೊರತೆಯನ್ನು ಹೊಂದಿದ್ದು, ಅಣು ಸ್ಥಾವರಗಳ ಅಪಾರ ಅಗತ್ಯವನ್ನು ಹೊಂದಿದೆ. ಭಾರತವು ಅಣು ವಿದ್ಯುತ್ ಶಕ್ತಿಯ ಪ್ರಾಮುಖ್ಯತೆಯನ್ನು ಪರಿಗಣಿಸಿ, ಇದರ ಉತ್ಪಾದನೆಗೆ ಅವಶ್ಯಕವಾದ ಸಂಸ್ಥೆಗಳನ್ನು, ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಿದೆ.

ಭಾರತದಲ್ಲಿ ಇಂದು ೭ ಅಣು ವಿದ್ಯುತ್ ಉತ್ಪಾದನಾ ಕೇಂದ್ರಗಳಿವೆ.

 ೧) ತಾರಾಪುರ ಅಣು ವಿದ್ಯುತ್ ಕೇಂದ್ರ:
ಇದು ಭಾರತದ ಮೊದಲ ಅಣು ವಿದ್ಯುತ್ ಉತ್ಪಾದನಾ ಕೇಂದ್ರ. ಇದನ್ನು ೧೯೬೯ ರಲ್ಲಿ ಮುಂಬೈ ಬಳಿಯ ತಾರಾಪುರದಲ್ಲಿ ಸ್ಥಾಪಿಸಲಾಯಿತು.

 ೨) ರಾಣಾಪ್ರತಾಪಸಾಗರ ಅಣು ವಿದ್ಯುತ್ ಕೇಂದ್ರ:
 ಇದನ್ನು ರಾಜಸ್ಥಾನದ ಕೋಟಾ ಜಿಲ್ಲೆಯ ರಾಣಾಪ್ರತಾಪಸಾಗರ ಎಂಬಲ್ಲಿ ಸ್ಥಾಪಿಸಲಾಗಿದೆ. ಇದು ೧೯೭೧ ರಲ್ಲಿ ಕಾರ್ಯಾರಂಭ ಮಾಡಿತು.

 ೩) ಕಲ್ಪಾಕಂ ಅಣು ವಿದ್ಯುತ್ ಕೇಂದ್ರ:
ಇದನ್ನು ತಮಿಳುನಾಡಿನ ಚೆನ್ನೈ ಸಮೀಪದ ಕಲ್ಪಾಕಂ ಎಂಬಲ್ಲಿ ನಿರ್ಮಿಸಲಾಗಿದೆ.

 ೪) ನರೋರ ಅಣು ವಿದ್ಯುತ್ ಕೇಂದ್ರ:
 ಇದನ್ನು ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ಗಂಗಾನದಿ ದಡದಲ್ಲಿ ಸ್ಥಾಪಿಸಲಾಗಿದೆ.

 ೫) ಕಕ್ರಪಾರ ಅಣು ವಿದ್ಯುತ್ ಕೇಂದ್ರ:
 ಇದು ಗುಜರಾತಿನ ಸೂರತ್ ನಿಂದ ೮೦ ಕಿ.ಮೀ. ದೂರದಲ್ಲಿದ್ದು, ೧೯೯೩ ರಲ್ಲಿ ಸ್ಥಾಪನೆಗೊಂಡಿದೆ.

 ೬) ಕೈಗಾ ಅಣು ವಿದ್ಯುತ್ ಕೇಂದ್ರ:
ಇದು ಇತ್ತಿಚಿಗೆ ೨೦೦೦ ರಲ್ಲಿ ೨ನೇ ಘಟಕವು ಉತ್ಪಾದನೆಯನ್ನು ಆರಂಭಿಸಿತು. ಮೊದಲ ಘಟಕವು ನಿರ್ಮಾಣದ ಹಂತದಲ್ಲಿದೆ. ಇದನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ. ಇವುಗಳಲ್ಲದೆ ರಾಜಸ್ಥಾನದ ಕೋಟಾ, ಕೈಗಾ ಮತ್ತು ತಾರಾಪುರ ಕೇಂದ್ರಗಳಲ್ಲಿ ಇನ್ನೂ ಕೆಲವು ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.

 ೭) ಕೂಡುಂಕುಲಂ ಕೇಂದ್ರ:
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಕೂಡುಂಕುಲಂನಲ್ಲಿ ಸ್ಥಾಪಿಸಲಾಗಿದೆ. ಇದರ ವಿಸ್ತರಣೆಯ ಯೋಜನೆಗೆ ಸ್ಥಳೀಯರಿಂದ ಅಪಾರ ವಿರೋಧ ವ್ಯರ್ಥವಾಗುತ್ತಿದೆ.

 — ಹೀಗೇ ಹೊಸ ಅಣು ವಿದ್ಯುತ್ ಕೇಂದ್ರಗಳ ಸ್ಥಾಪನೆ ಹಾಗೂ ಮೊದಲಿನ ಘಟಕಗಳ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಿ ಒಟ್ಟು ವಿದ್ಯುತ್ತಿನ ಶೇ.೨೦೩ ರಷ್ಟು ಉತ್ಪಾದಿಸುತ್ತಿದೆ.

Sunday, 4 May 2014

★ಬೌದ್ಧಧರ್ಮದಲ್ಲಿ ಉದಯಿಸಿದ ಬೌದ್ಧ ಪಂಥಗಳ ಕುರಿತು ಬರೆಯಿರಿ. (100 ಶಬ್ದಗಳಲ್ಲಿ) (Write about Buddhist sects which raised in emerging Buddhism)

★ ಬೌದ್ಧಧರ್ಮದಲ್ಲಿ ಉದಯಿಸಿದ ಬೌದ್ಧ ಪಂಥಗಳ ಕುರಿತು ಬರೆಯಿರಿ.
(100 ಶಬ್ದಗಳಲ್ಲಿ)
 (Write about Buddhist sects which raised in emerging Buddhism)

ಬುದ್ಧನ ನಿಧನದ ನಂತರ ಕುಶಾಣ ದೊರೆ ಕನಿಷ್ಕನ ಆಶ್ರಯದಲ್ಲಿ ನಾಲ್ಕನೆಯ ಬೌದ್ದ ಮಹಾಸಭೆಯಲ್ಲಿ ಬೌದ್ದ ಧರ್ಮದ ಆಚರಣೆಯಲ್ಲಿ ಉಂಟಾದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಮಾಡಿದ ಪ್ರಯತ್ನ ವಿಫಲವಾಗಿದ್ದರಿಂದ ಬೌದ್ದ ಧರ್ಮದಲ್ಲಿ ಹಿನಾಯಾನ ಮತ್ತು ಮಹಾಯಾನ ಎಂಬ ಪಂಥಗಳು ಉದಯಿಸಿದವು.

 1. ಮಹಾಯಾನ (ಶ್ರೇಷ್ಠಮಾರ್ಗ):
ಮಹಾಯಾನ ಪಂಥವನ್ನು 'ಶ್ರೇಷ್ಠ ಮಾರ್ಗ' ಎಂದು ತಿಳಿಯಲಾಗಿದೆ. ಇದು ಹಿಂದೂ ಧರ್ಮದ ಪ್ರಭಾವಕ್ಕೆ ಒಳಗಾಗಿದ್ದು, ಬುದ್ಧನನ್ನು ದೇವರ ಸ್ವರೂಪವೆಂದು ತಿಳಿದು ಮೂರ್ತಿ ಪೂಜೆ ಪ್ರಾರಂಭಿಸಿತು. ಬುದ್ಧನ ತತ್ವಗಳಿಗಿಂತ ಬುದ್ಧನಲ್ಲಿ ನಂಬಿಕೆ ಹೂಂದಿತ್ತು.ಬುದ್ಧನು ದೇವರ ಅವತಾರವಗಿದ್ದು, ಅವನ ಆರಾದನೆ ಮೋಕ್ಷಕ್ಕೆ ಮಾರ್ಗವಾಗುತ್ತೆಂದು ತಿಳಿಯಲಾಯಿತು. ಹೂವು, ಬುದ್ಧನ ವಿಗ್ರಹ , ದೀಪ, ಕೂಡೆಗಳನ್ನು ಭಕ್ತಿಯಿಂದ ಪೂಜಿಸುತ್ತಿದ್ದರು. ಇವರು ಬುದ್ದನು ಪುನಃ ಜನ್ಮತಾಳುತ್ತಾನೆಂದು ನಂಬಿದರು.

 2. ಹಿನಾಯಾನ (ಕನಿಷ್ಠ ಮಾರ್ಗ):
ಹಿನಾಯಾನ ಪಂಥವನ್ನು 'ಕನಿಷ್ಟ ಮಾರ್ಗ' ವೆಂದು ತಿಳಿಯಲಾಗಿದೆ. ಬುದ್ದನ ತತ್ವಗಳನ್ನು ಈ ಪಂಥವು ನಿಷ್ಠೆಯಿಂದ ಪಾಲಿಸುತ್ತಿತ್ತು. ಇದು ಪರಿಶುದ್ದ ಬೌದ್ದಧರ್ಮವಾಗಿತ್ತು. ಇದರ ಗ್ರಂಥಗಳು ಪಾಲಿ ಭಾಷೆಯಲ್ಲಿ ರಚನೆಯಾದವು. ಮಾನವನ ನಿರ್ವಾಣವು ಸ್ವಪ್ರಯತ್ನದಿಂದ ಸಾಧ್ಯವಾಗುತ್ತದೆಂದು ತಿಳಿದಿದ್ದರು. ಇವರು ಕಮಲ, ಆನೆ, ಧರ್ಮಚಕ್ರಗಳನ್ನು ಆರಾಧಿಸುತ್ತಿದ್ದರು.

★ ಬೌದ್ಧ ಧರ್ಮದ ಬೆಳವಣಿಗೆಗಾಗಿ ನಡೆದ ಬೌದ್ಧ ಮಹಾಸಭೆಗಳ ಕುರಿತು ಚರ್ಚಿಸಿ. (250 ಶಬ್ಧಗಳಲ್ಲಿ) ( Discuss about the Buddhist conferences those were held for development of the Buddhist religion.)

★ ಬೌದ್ಧ ಧರ್ಮದ ಬೆಳವಣಿಗೆಗಾಗಿ ನಡೆದ ಬೌದ್ಧ ಮಹಾಸಭೆಗಳ ಕುರಿತು ಚರ್ಚಿಸಿ.
(250 ಶಬ್ಧಗಳಲ್ಲಿ)
 ( Discuss about the Buddhist conferences those were held for development of the Buddhist religion.)

 ವಿಶಾಲ ದೃಷ್ಟಿಕೋನ ಮತ್ತು ಹೊಂದಾಣಿಕೆಯ ಪ್ರವೃತ್ತಿಯಿಂದ ಜಾತಿ, ಲಿಂಗ, ಭಾಷೆ, ಜನಾಂಗಗಳ ಭೇಧವೆನಿಸದೆ 1200 ವರ್ಷಗಳ ಕಾಲ ಪ್ರಭಾವಶಾಲಿಯಾಗಿ ಬಾಳಿದ ಬೌದ್ಧ ಧರ್ಮದ ಬೆಳವಣಿಗೆಗಾಗಿ, ಬುದ್ಧನ ಮರಣದ ನಂತರ ಅವನ ಶಿಷ್ಯವರ್ಗ ನಾಲ್ಕು ಬೌದ್ಧ ಮಹಾಸಭೆಗಳನ್ನು ನಡೆಸಿದರು. ಅವುಗಳನ್ನು `ಬೌದ್ಧ ಮಹಾಸಮ್ಮೇಳನ`ಗಳೆಂದು ಕರೆಯಲಾಗಿದೆ.

 * ಪ್ರಥಮ ಬೌದ್ದ ಮಹಾಸಭೆ:
ಪ್ರಥಮ ಮಹಾಸಭೆಯು ಕ್ರಿ. ಪೂ. 487 ರಲ್ಲಿ ಮಗಧ ರಾಜ್ಯದ ರಾಜಧಾನಿ ರಾಜಗೃಹದಲ್ಲಿ ನಡೆಯಿತು. ಮಹಾಕಷ್ಯಪನು ಮಹಾಸಭೆಯ ಅಧ್ಯಕ್ಷತೆವಹಿಸಿದ್ದನು. ಸಭೆಯಲ್ಲಿ ಬುದ್ದನ ಶಿಷ್ಯರಾದ ಆನಂದ, ಉಪಾಲಿ, ಸುಬದ್ದರು ಭಾಗವಹಿಸಿದ್ದರು.
 — ಈ ಸಭೆಯಲ್ಲಿ ಬುದ್ದನ ಧಾರ್ಮಿಕ ಸಿಧ್ಧಾಂತಗಳನ್ನು ಮತ್ತು ಸನ್ಯಾಸ ನಿಯಮಗಳನ್ನು ಸಂಗ್ರಹಿಸಿ ಗ್ರಂಥ ರೂಪದಲ್ಲಿ ಹೊರತರಲಾಯಿತು. ಅವುಗಳನ್ನು ಧರ್ಮಪಿಟಕ ಮತ್ತು ವಿನಯ ಪಿಟಕಗಳೆಂದು ಕರೆಯಲಾಗಿದೆ.

 * ದ್ವಿತೀಯ ಬೌದ್ದ ಮಹಾಸಭೆ:
 ಎರಡನೆಯ ಮಹಾಸಭೆಯು ಕ್ರಿ. ಪೂ. 387 ರಲ್ಲಿ ವೈಶಾಲಿಯಲ್ಲಿ ನಡೆಯಿತು.ಈ ಸಮ್ಮೇಳನದಲ್ಲಿ ವಿನಯ ಪಿಟಕದ ಬಗ್ಗೆ ವಿರೋಧಭಾಸಗಳು ಉಂಟಾದವು. ನಿಯಮಗಳನ್ನು ಸಡಿಲಗೊಳಿಸಬೇಕೆಂದು ಮತ್ತು ಸಡಿಲಗೊಳಿಸಬಾರದೆಂಬ ಭಿನ್ನಾಭಿಪ್ರಾಯಗಳುಂಟಾದವು.
 — ಇದರಿಂದ ಮಹಾಸಂಘಿಕರು ಮತ್ತು ಸ್ಥಾವರವಾದಿಗಳು ಎಂಬ ಎರಡು ಗುಂಪುಗಳು ಹುಟ್ಟಿಕೊಂಡವು.

 * ತೃತಿಯ ಬೌದ್ಧ ಮಹಾಸಭೆ:
ಮೂರನೆಯ ಮಹಾಸಭೆಯು ಕಾಕವರ್ಣಿಯ ಆಶ್ರಯದಲ್ಲಿ ಮೌರ್ಯ ರಾಜಧಾನಿ ಪಾಟಲಿಪುತ್ರದಲ್ಲಿ ಕ್ರಿ. ಪೂ. 234 ರಲ್ಲಿ ನಡೆಯಿತು. ಮೊಗ್ಗಲಿ ಪುತ್ರ ತಿಸ್ಸನು ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದನು. ಬುದ್ದನ ತತ್ವಗಳಲ್ಲಿ ಎಕತೆಯನ್ನು ತರಲು ಮಹಾಸಭೆ ಪ್ರಯತ್ನಿಸಿತು. ಬುದ್ದನ ತತ್ವಗಳನ್ನು ನಿಷ್ಠೆಯಿಂದ ಪಾಲಿಸಬೇಕೆಂದು ನಿರ್ಣಯಿಸಲಾಯಿತು ಮತ್ತು ಬೌದ್ಧ ಧರ್ಮ ಪ್ರಸಾರದ ರೊಪರೇಷೆಗಳನ್ನು ಸಿದ್ದಪಡಿಸಲಾಯಿತು.
 — ಈ ಮಹಾಸಭೆಯಲ್ಲಿ ಬುದ್ಧನ ಬೋದನೆಗಳನ್ನೊಳಗೊಂಡ 'ಅಭಿದಮ್ಮ ಪಿಟಕ' ಎಂಬ ಕೃತಿಯನ್ನು ಹೊರತರಲಾಯಿತು.

 * ಚತುರ್ಥ ಬೌದ್ಧ ಮಹಾಸಭೆ:
 ನಾಲ್ಕನೆಯ ಬೌದ್ದ ಮಹಾಸಭೆಯು ಕುಶಾಣದೊರೆ ಕನಿಷ್ಕನ ಆಶ್ರಯದಲ್ಲಿ ಕ್ರಿ. ಶ. 100 ರಲ್ಲಿ ಕಾಶ್ಮೀರದ ಕುಂಡಲ ವನದಲ್ಲಿ ನಡೆಯಿತು. ವಸುಮಿತ್ರ ಎಂಬ ಬೌದ್ಧಸನ್ಯಾಸಿ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದನು. ಉಪಾಧ್ಯಕ್ಷತೆಯನ್ನು ಅಶ್ವಘೋಷ ವಹಿಸಿದನು. ನಾಗಾರ್ಜುನ ಎಂಬ ಬೌದ್ಧ ವಿದ್ವಾಂಸನು ಮಹಾಸಭೆಯಲ್ಲಿ ಭಾಗವಹಿಸಿದ್ದನು. ತ್ರಿಪಿಟಕಗಳ ಬಗ್ಗೆ ಮಹಾ ಭಾಷೆಗಳನ್ನು ಬರೆಯಲಾಯಿತು.
 — ಸಭೆಯು ಬೌದ್ದ ಧರ್ಮದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಮಾಡಿದ ಪ್ರಯತ್ನ ವಿಫಲವಾಗಿದ್ದರಿಂದ ಬೌದ್ದ ಧರ್ಮದಲ್ಲಿ ಹಿನಾಯಾನ ಮತ್ತು ಮಹಾಯಾನ ಎಂಬ ಪಂಥಗಳು ಉದಯಿಸಿದವು.

 * ಪಂಚಮ ಬೌದ್ದ ಮಹಾಸಭೆ:
 ಪಂಚಮ ಬೌದ್ದ ಮಹಾಸಭೆ ಹರ್ಷವರ್ಧನನ ಉಪರಾಜಧಾನಿ ಕನೋಜದಲ್ಲಿ ಕ್ರಿ. ಶ. 643 ರಲ್ಲಿ ಹ್ಯೂಯನತ್ಸಾಂಗನ ಅಧ್ಯಕ್ಷತೆಯಲ್ಲಿ ನಡೆಯಿತು. ಮಹಾಯಾನ ತತ್ವಗಳಿಗೆ ಪ್ರಚಾರ ಕೂಡುವುದು ಈ ಸಮ್ಮೇಳನದ ಉದ್ದೇಶವಾಗಿತ್ತು.
 — ಈ ಸಭೆಗೆ ಕಾಮರೂಪದ ದೂರೆ ಭಾಸ್ಕರವರ್ಮ, ಪಲ್ಲವಿಯ ದೂರೆ ಧೃವಸೇನ ಸೇರಿದಂತೆ 20 ಜನರಾಜರು 1000 ಬೌದ್ಧ ವಿದ್ವಾಂಸರು, 3000ಸಾವಿರ ಬೌದ್ಧ ಭಿಕ್ಷುಕರು, 3000 ಬ್ರಾಹ್ಮಣರು ಭಾಗವಹಿಸಿದರು.

★ ಭಾರತದಲ್ಲಿ ಪಂಚಾಯಿತಿ ರಾಜ್ ವ್ಯವಸ್ಧೆಯ ಉಗಮದ ಕುರಿತು ವಿವರಿಸಿ. ಪಂಚಾಯಿತಿ ರಾಜ್ ವ್ಯವಸ್ಧೆಯಲ್ಲಿ 73ನೇ ಸಂವಿಧಾನಾತ್ಮಕ ತಿದ್ದುಪಡಿಯ ಮಹತ್ವವೇನು? (Explain the origins of the Panchayati Raj system in India and the significance of the 73rd Constitutional Amendment in Panchayati Raj systems)

★ ಭಾರತದಲ್ಲಿ ಪಂಚಾಯಿತಿ ರಾಜ್ ವ್ಯವಸ್ಧೆಯ ಉಗಮದ ಕುರಿತು ವಿವರಿಸಿ. ಪಂಚಾಯಿತಿ ರಾಜ್ ವ್ಯವಸ್ಧೆಯಲ್ಲಿ 73ನೇ ಸಂವಿಧಾನಾತ್ಮಕ ತಿದ್ದುಪಡಿಯ ಮಹತ್ವವೇನು?
 (Explain the origins of the Panchayati Raj system in India and the significance of the 73rd Constitutional Amendment in Panchayati Raj systems)

ಪಂಚಾಯಿತಿಗಳು ಅಥವಾ ಗ್ರಾಮಸಭೆಗಳಿಗೆ ಭಾರತದಲ್ಲಿ ಒಂದು ದೀರ್ಘ ಇತಿಹಾಸವೇ ಇದೆ. ಸಾಂಪ್ರದಾಯಿಕ ಪಂಚಾಯಿತಿಗಳು ಅನೌಪಚಾರಿಕ ಅಧಿಕಾರ ಕೇಂದ್ರಗಳಾಗಿದ್ದರೂ ಗ್ರಾಮದ ಸಕಲ ವ್ಯವಹಾರಗಳನ್ನು ನಡೆಸುವ, ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುವ ಹಾಗೂ ಶಾಂತಿ-ಸುವ್ಯವಸ್ಧೆಗಳನ್ನು ಕಾಪಾಡುವ ಜವಾಬ್ದಾರಿ ಅವುಗಳ ಮೇಲಿದ್ದದ್ದು ಗಮನಾರ್ಹ.

 ಗ್ರಾಮ ಮಟ್ಟದ, ಅಥವಾ ನೆರೆಹೊರೆಯ ಗ್ರಾಮಗಳ ಒಂದು ಘಟಕವಾಗಿ ಕಾರ್ಯನಿರ್ವಹಿಸುತ್ತಿದ್ದ ಗ್ರಾಮ ಪಂಚಾಯತಿಗಳೇ ಅಲ್ಲದೆ ಜಾತಿ ಪಂಚಾಯತಿಗಳೂ ಕೌಟುಂಬಿಕ ಹಾಗೂ ಜಾತಿ ಸಂಬಂಧಿ ವಿಚಾರಗಳನ್ನು ಕುರಿತಂತೆ ತೀರ್ಮಾನಗಳನ್ನು ನೀಡುವ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಬ್ರಿಟೀಷರು ಭಾರತಕ್ಕೆ ಬಂದ ನಂತರ ಪಂಚಾಯಿತಿ ವ್ಯವಸ್ಧೆಗೆ ಒಂದು ಔಪಚಾರಿಕ ಸ್ವರೂಪ ದೊರೆಯಿತು. ಪಂಚಾಯಿತಿಗಳ ಸ್ವಾಯತ್ತತೆಯನ್ನು ಕಾಪಾಡುವ ಮನಸ್ಸಿಲ್ಲದ ಬ್ರಿಟೀಷರು ಅವುಗಳನ್ನು ಪ್ರಧಾನವಾಗಿ ಆದಾಯ ಸಂಗ್ರಹಣಾ ಮೂಲಗಳಾಗಿ ನೋಡಿದರೂ, ಗ್ರಾಮ ಮಟ್ಟದಲ್ಲಿ ಸ್ಧಳೀಯ ಆಡಳಿತ ಸಂಸ್ಧೆಗಳಾಗಿ ಅವು ರೂಪುಗೊಂಡವು.

ಇಪ್ಪತ್ತನೇ ಶತಮಾನದ ಆರಂಭ ಕಾಲದಲ್ಲಿ ಪ್ರಜಾಸತ್ತಾತ್ಮಕ ಸ್ವರೂಪವನ್ನು ಈ ಸಂಸ್ಧೆಗಳಿಗೆ ನೀಡಲು ಬ್ರಿಟೀಷರಿಂದಲೇ ಪ್ರಯತ್ನಗಳು ನಡೆದು Royal Committee On Decentralized , (ರಾಯಲ್ ಕಮಿಟಿ ಆನ್ ಡಿಸೆಂಟ್ರಲಾಯೀಡ್ಜ್) ಎಂಬ ಸಮಿತಿಯ ನೇಮಕವಾದಾಗ, ಗ್ರಾಮ ಸ್ಧಳೀಯ ಸಂಸ್ಧೆಗಳಾಗಿ ಪಂಚಾಯಿತಿಗಳು ಉಗಮವಾಗಲು ಪೂರಕವಾದ ವಾತಾವರಣ ನಿರ್ಮಾಣವಾಯಿತು.

 ಮಹಾತ್ಮಗಾಂಧೀಜಿಯವರು ಈ ಸಂಸ್ಥೆಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ನೀಡಿದ ಗೋಚರತೆ, ಹಾಗೂ ಸ್ಧಳೀಯ ಅಗತ್ಯಗಳನ್ನು ಪೂರೈಸುವ ಅಧಿಕಾರವನ್ನು ಪಂಚಾಯಿತಿಗಳಿಗೇ ನೀಡಬೇಕೆಂಬ ಮಾಡಿದ ಒತ್ತಾಸೆ, ಅವುಗಳು ಸ್ಧಳೀಯ ಸರ್ಕಾರಗಳ ಸ್ವರೂಪವನ್ನು ಪಡೆಯಲು ಕಾರಣವಾದ ಮತ್ತೊಂದು ಪ್ರಮುಖ ಅಂಶ.

 * 73ನೇ ತಿದ್ದುಪಡಿ - 'ಮೌನಕ್ರಾಂತಿ':
ಭಾರತದಲ್ಲಿ ಪಂಚಾಯಿತಿ ರಾಜ್ ವ್ಯವಸ್ಧೆಗೆ ಒಂದು ದಿಕ್ಕು ದೊರೆತು, ಪಂಚಾಯತ್ ಸಂಸ್ಥೆಗಳು ಸ್ಧಳೀಯ ಹಾಗೂ ಸ್ವಯಂ-ಆಡಳಿತ ತತ್ವಗಳನ್ನು ರೂಢಿಸಿಕೊಳ್ಳುವಂಥ ಅವಕಾಶ ದೊರೆತದ್ದು 73ನೇ ಸಂವಿಧಾನಾತ್ಮಕ ತಿದ್ದುಪಡಿಯ ಕಾರಣದಿಂದಾಗಿ. ಈ ತಿದ್ದುಪಡಿಯನ್ನು ವಿಕೇಂದ್ರೀಕರಣದ ಇತಿಹಾಸದಲ್ಲಿ 'ಮೌನಕ್ರಾಂತಿ' ಎಂದು ಬಣ್ಣಿಸಲಾಗಿದೆ. ಸ್ಧಳೀಯ ಸಂಸ್ಧೆಗಳಿಗೆ ಪ್ರಜಾಸತ್ತಾತ್ಮಕ ಅಧಿಕಾರವನ್ನು ನೀಡಿ ಗ್ರಾಮೀಣ ಸಾಮಾಜಿಕ ಅಭಿವೃದ್ಧಿಯಲ್ಲಿ ಪಾಲುದಾರರಾಗಲು ಒಂದು ನಿಜವಾದ ಅರ್ಥದಲ್ಲಿ ಸ್ಧಾನ ದೊರೆತಿದ್ದೇ 73ನೇ ಸಂವಿಧಾನಾತ್ಮಕ ತಿದ್ದುಪಡಿಯ ಮೂಲಕ.

Saturday, 3 May 2014

★ 'ಬಾಡಿಗೆ ತಾಯ್ತನ' ದ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಿರಿ. (50 ಶಬ್ದಗಳಲ್ಲಿ) (Briefly discuss about 'Surrogate Motherhood')

★ 'ಬಾಡಿಗೆ ತಾಯ್ತನ' ದ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಿರಿ. (50 ಶಬ್ದಗಳಲ್ಲಿ)
 (Briefly discuss about 'Surrogate Motherhood')

 * ಮಕ್ಕಳನ್ನು ಬಯಸುವ ದಂಪತಿಗಳಿಗಾಗಿ ಮಹಿಳೆಯೊಬ್ಬಳು ಮಗು ಹೆತ್ತುಕೊಡುವುದನ್ನು ಬಾಡಿಗೆ ತಾಯ್ತನ ಎನ್ನುತ್ತಾರೆ. ಮಗುವನ್ನು ಹೆತ್ತುಕೊಡುವ ಮಹಿಳೆ, ಮಗುವಿನ ಜೈವಿಕ ತಾಯಿ ಆಗಿದ್ದಿರಬಹುದು ಅಥವಾ ಆಗಿರದೆಯೂ ಇರಬಹುದು.

 * ಬಾಡಿಗೆ ತಾಯ್ತನ ಪ್ರಕ್ರಿಯೆಯ ಭ್ರೂಣದಹಂತ ನೈಸರ್ಗಿಕವಾಗಿರದ ಕಾರಣ ಹಲವು ನೀತಿ ಸಂಹಿತೆ, ಕಾನೂನು ಮತ್ತು ಆರೋಗ್ಯ ವಿಚಾರಗಳನ್ನು ಒಳಗೊಂಡಿದೆ. ಈ ಪ್ರಕ್ರಿಯೆ ಮಹಿಳೆಯ ಶೋಷಣೆಗೂ ಕಾರಣವಾಗಬಹುದೆಂಬ ಭೀತಿ ಉಂಟಾಗಿದ್ದು ಕಟ್ಟುನಿಟ್ಟಾದ ಶಾಸನ ತರುವ ಮೂಲಕ ನಿರ್ಬಂಧಿತ ಪ್ರಕ್ರಿಯೆಯನ್ನಾಗಿಸಲು ಯತ್ನಗಳು ನಡೆದಿವೆ.

 * ಭಾರತದಲ್ಲಿ ಬಾಡಿಗೆ ತಾಯ್ತನ ಅತಿ ದೊಡ್ಡ ವಾಣಿಜ್ಯಿಕ ಚಟುವಟಿಕೆಯಾಗುತ್ತಿದ್ದು ಬಡಮಹಿಳೆಯರು ಶೋಷಣೆಗೊಳಗಾಗುವ ಭೀತಿ ಒಡ್ಡಿದೆ. ಈ ಹಿನ್ನೆಲೆಯಲ್ಲಿ ನೆರವಿನ ಪ್ರಜನನ ತಂತ್ರಜ್ಞಾನ ವಿಧೇಯಕ ತರಲು ಸರ್ಕಾರ ಪ್ರವೃತ್ತವಾಗಿದೆ.

★ ಟ್ರೋಲಿಂಗ್ (Trolling) : (ಟಿಪ್ಪಣಿ ಬರಹ)

★ ಟ್ರೋಲಿಂಗ್ (Trolling) :
(ಟಿಪ್ಪಣಿ ಬರಹ)

*  ಅಂತರ್ಜಾಲದಲ್ಲಿ ಆಕ್ಷೇಪಾರ್ಹ, ಚಿತ್ರ ಸಂದೇಶ ಹರಿಬಿಡುವುದನ್ನು ಟ್ರೋಲಿಂಗ್ ಎಂದು ಕರೆಯುತ್ತಾರೆ. ದ್ವೇಷ ಜನಾಂಗೀಯ ಜಗಳ ಮೊದಲಾದ ಸಮಾಜ ವಿರೋಧಿ ಭಾವನೆಗಳನ್ನು ಬಿತ್ತುವ ಕೆಟ್ಟ ವಿಚಾರ ಉದ್ದೇಶ ಇದರದ್ದಾಗಿದೆ.

* ಕೆಲವೊಮ್ಮೆ ಆನ್ ಲೈನ್ ವೇದಿಕೆಗಳ ಚರ್ಚೆಗಳನ್ನು ಹೈಜಾಕ್ (Hijack) ಮಾಡಿ ತಮ್ಮ ವಿಚಾರಗಳನ್ನು ಹೇರುವ ಹೇಯ ಕೃತ್ಯಗಳನ್ನು ಇವರು ನಡೆಸುತ್ತಾರೆ.

★ (Bitcoin) ಬಿಟ್ಕೊ ನ್ ಎಂದರೇನು? ಆನ್ ಲೈನ್ ನಲ್ಲಿ ಇದರ ಬಳಕೆ ಕುರಿತು ವಿಶ್ಲೇಷಿಸಿ. (What is Bitcoin? Analyze its uses in on-line. (150 ಶಬ್ದಗಳಲ್ಲಿ)

★ (Bitcoin) ಬಿಟ್ಕೊ ನ್ ಎಂದರೇನು? ಆನ್ ಲೈನ್ ನಲ್ಲಿ ಇದರ ಬಳಕೆ ಕುರಿತು ವಿಶ್ಲೇಷಿಸಿ.
(What is Bitcoin? Analyze its uses in on-line. (150 ಶಬ್ದಗಳಲ್ಲಿ)

 ಬಿಟ್ಕೊ ನ್, ಕೆಲವು ಆನ್ ಲೈನ್ ಬಳಕೆದಾರರು ಬಳಸುತ್ತಿರುವ ಅಭೌತಿಕ ಹಣವಾಗಿದೆ. ಬಿಟ್ಕೊ ನ್ ಅನ್ನು ವಿಶಿಷ್ಟ ಆನ್ಲೈನ್ ನೊಂದಣಿ ಸಂಖ್ಯೆಯ ಆಧಾರದ ಮೇಲೆ ನಮೂದಿಸಲಾಗುತ್ತದೆ.

 * ಪ್ರಸ್ತುತ 11 ದಶಲಕ್ಷ ಬಿಟ್ಕೊ ನ್ ಗಳು ಚಾಲ್ತಿಯಲ್ಲಿವೆ. `ಮೈನಿಂಗ್' ಎಂದು ಕರೆಯಲಾಗುವ ಪ್ರಕ್ರಿಯೆಯಲ್ಲಿ ಕಂಪ್ಯೂಟರ್ ಮೂಲಕ ಗಣಿತ ಸಮಸ್ಯೆಯನ್ನು 64 ಅಂಕೆಗಳ ರೂಪದಲ್ಲಿ ಬಿಡಿಸಲಾಗುತ್ತದೆ / ಪರಿಹರಿಸಲಾಗುತ್ತದೆ. ಈ ರೀತಿ ಸಮಸ್ಯೆ ಬಿಡಿಸುವ ಕಂಪ್ಯೂಟರ್ ಮಾಲೀಕರಿಗೆ 25 ಬಿಟ್ಕೊ ನ್ ನೀಡಲಾಗುತ್ತದೆ. ಈ ರೀತಿ ಕಂಪ್ಯೂಟರ್ ಮೂಲಕ ಪ್ರೋಗ್ರಾಂ ಪರಿಹಾರ ಒದಸುವವರಿಗಾಗಿ ಸದ್ಯ ಪ್ರತಿ ದಿನ ಒಟ್ಟು 3600 ಬಿಟ್ಕೊನ್ ವಿತರಣೆ ಆಗುತ್ತಿದೆ. ಸಮಸ್ಯೆಗೆ ಪರಿಹಾರ ಒದಗಿಸಲು ಬಯಸುವವರು ಮೊದಲು ತಮ್ಮನ್ನು / ಕಂಪ್ಯೂಟರನ್ನು ನಮೂದಿಸಿಕೊಳ್ಳಬೇಕಾಗುತ್ತದೆ. ಆಗ ದೊರಕುವ ಬಿಟ್ಕೊನ್ ವಿಳಾಸ ಖಾತೆ (27 ರಿಂದ 34 ಅಕ್ಷರ ಇರುತ್ತದೆ) ಬಿಟ್ಕೊ ನ್ ಪಡೆಯಲು ಅಭೌತಿಕ ಅಂಚೆ ಪೆಟ್ಟಿಗೆಯಾಗಿ ಕಾರ್ಯನಿರ್ವಹಿಸುತ್ತದೆ.

 * ಸತೋಷಿನತ ಮೊಟೊ, ಬಿಟ್ಕೊ ನ್ ತಂತ್ರಾಂಶವನ್ನು ಮೊದಲು ರೂಪಿಸಿದ ವ್ಯಕ್ತಿ. 2009 ರಲ್ಲಿ ಈ ವಿಚಿತ್ರ ಯೋಜನೆ ಪ್ರಾರಂಭವಾಯಿತು. ಇದಕ್ಕೆ ವಿನಿಮಯ ಮೌಲ್ಯವೂ ಇದೆಯೆಂದು ನಂಬಲಾಗಿದೆ. ಆದರೆ ಇದಕ್ಕೆ ಕೇಂದ್ರೀಯ ಹಣಕಾಸು ಪ್ರಾಧಿಕಾರ ಇಲ್ಲದಿರುವ ಕಾರಣ ನೈಜ ಹಣದ ರೂಪ ಇಲ್ಲ. ಇದರ ಚಲಾವಣೆ ಅನಿಯಂತ್ರಿತವಾಗಿದೆ. ಇದು ಯಾವುದೇ ರೀತಿಯ ಖೊಟ್ಟಿ ವ್ಯವಹಾರಕ್ಕೂ ಕಾರಣವಾಗ ಬಹುದು. ಆದರೆ. ಕೆಲವು ವೆಬ್ ಸೈಟ್ ಗಳು ಬಿಟ್ಕೊ ನ್ ವಿನಿಮಯ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ. ಬಿಟ್ಕೊನ್ ಗೆ ಯಾವುದೇ ಅಧಿಕೃತ ಸ್ವರೂಪ ಇರದೇ ಗೌಪ್ಯವಾಗಿರುವ ಕಾರಣ ಇದು ಮಾದಕ ದ್ರವ್ಯ ಕಳ್ಳಸಾಗಣೆಗಳಂತಹ ಅಕ್ರಮ ಜಾಲದಲ್ಲಿ ನಡೆಯುವ ಅಭೌತಿಕ ಕರೆನ್ಸಿ ಎಂದು ಭಾವಿಸಲಾಗಿದೆ.

★ Carbon Trading (ಕಾರ್ಬನ್ ಟ್ರೇಡಿಂಗ್) - ಇಂಗಾಲ ವ್ಯಾಪಾರ : (ಟಿಪ್ಪಣಿ ಬರಹ)

☀Carbon Trading (ಕಾರ್ಬನ್ ಟ್ರೇಡಿಂಗ್) - ಇಂಗಾಲ ವ್ಯಾಪಾರ :
(ಟಿಪ್ಪಣಿ ಬರಹ)

━━━━━━━━━━━━━━━━━━━━━━━━━━━━━━━━━━━━━━━━━━━━━

★ ಟಿಪ್ಪಣಿ ಬರಹ
(Short notes for IAS / KAS)


 ವಿವಿಧ ದೇಶಗಳ ವಾತಾವರಣಕ್ಕೆ ಇಂಗಾಲಾಮ್ಲ ಅಥವಾ ಹಸಿರು ಮನೆ ಅನಿಲ ಬಿಡುವ ಹಕ್ಕಿನ ಕೊಡು - ಕೊಳ್ಳುವಿಕೆಗೆ ಕಾರ್ಬನ್ ಟ್ರೇಡಿಂಗ್ ಎಂದು ಕರೆಯಲಾಗುತ್ತಿದೆ. ಜಪಾನ್ನಲ್ಲಿ 1997 ರಲ್ಲಿ ನಡೆದ ಕ್ಯುಟೊ ಶಿಷ್ಟಾಚಾರ ಒಪ್ಪಂದದ ನಂತರ ಈ ವ್ಯಾಪಾರ ಆರಂಭವಾಯಿತು. ವಿಶ್ವದ 180 ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ.