"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 28 May 2014

ಲಾನಿನಾ (Lanina) ಪ್ರವಾಹ ಎಂದರೇನು? : (What do you mean by Lanina?) (ಟಿಪ್ಪಣಿ ಬರಹ)


★ ಲಾನಿನಾ (Lanina) ಪ್ರವಾಹ ಎಂದರೇನು? :
(What do you mean by Lanina?)

(ಟಿಪ್ಪಣಿ ಬರಹ)

━━━━━━━━━━━━━━━━━━━━━━━━━━━━━━━━━━━━━━━━━━━━━
★ (World Geography)
ಪ್ರಪಂಚದ ಭೂಗೋಳಶಾಸ್ತ್ರ

ಪ್ರಪಂಚದ ವಾಯುಗುಣದ ವಿಶ್ಲೇಷಣೆಯಲ್ಲಿ ಇಂದು ಎಲ್ ನಿನೋ (ElNiNo) ಮತ್ತು ಲಾನಿನಾ (Lanina) ಪ್ರವಾಹಗಳ ಪ್ರಭಾವವನ್ನು ಹೆಚ್ಚು ಪರಿಗಣಿಸಲಾಗುತ್ತಿದೆ.  ಇವುಗಳೆರಡೂ ಪ್ರಪಂಚದಾದ್ಯಂತ ವಿವಿಧ ಪ್ರದೇಶಗಳ ಸಾಮಾನ್ಯ ವಾಯುಗುಣ ಪರಿಸ್ಥಿತಿಗಳು ಏರುಪೇರಾಗಲು ಕಾರಣಗಳೆಂದು ವಿವರಿಸಲಾಗಿದೆ.

— ಲಾನಿನಾ (Lanina) ಎಂದರೆ 'ಚಿಕ್ಕ ಹುಡುಗಿ' (Little Girl) ಎಂದರ್ಥ.  ಇದನ್ನು 'ಓಲ್ಡ್ ಮ್ಯಾನ್' (Old Man) ಎಂತಲೂ ಕರೆಯುತ್ತಾರೆ. ಇದು ಕೂಡಾ ಎಲ್ ನಿನೋ ನಂತೆ ಸಮಭಾಜಕ ವೃತ್ತ ವಲಯದ ಫೆಸಿಫಿಕ್ ಸಾಗರದಲ್ಲಿ ಆಗಿಂದಾಗ್ಗೆ ಕಂಡುಬರುವ ಉಷ್ಣಾಂಶದ ಬದಲಾವಣೆಗೆ ಕಾರಣೀಕೃತವಾಗಿದೆ.

— ಲಾನಿನಾ ಪ್ರವಾಹವು ಎಲ್ ನಿನೋ (ElNiNo) ಉಷ್ಣೋದಕ ಪ್ರವಾಹಕ್ಕೆ ಸಂಪೂರ್ಣವಾಗಿ ವಿರುದ್ಧವಾದದ್ದು, ಉಷ್ಣವಲಯದ ಫೆಸಿಫಿಕ್ ಸಾಗರದಲ್ಲಿ ಪಶ್ಚಿಮದಿಂದ ಪೂರ್ವದ ಕಡೆಗೆ ಪ್ರವಹಿಸುವ ಶೀತ ಪ್ರವಾಹವಾಗಿದೆ.


* ಲಾನಿನಾ ಪ್ರವಾಹದ ಹುಟ್ಟು:

ಮಧ್ಯ ಫೆಸಿಫಿಕ್ ಸಾಗರದ ನೀರು ಪೂರ್ವದಲ್ಲಿ ಅಮೆರಿಕ ಖಂಡಗಳಿಗೆ ಅಪ್ಪಳಿಸಿ, ಶಬ್ಧದ ಅಲೆಗಳಂತೆ ಹಿಂತಿರುಗುತ್ತವೆ (Rebound or Bounce). ದಕ್ಷಿಣಾರ್ಧಗೋಳದ ಉಪ ಉಷ್ಣವಲಯದ ಅಧಿಕ ಒತ್ತಡ ಪಟ್ಟಿ ಉಷ್ಣಾಂಶದ ನೀರು ಪಶ್ಚಿಮದ ಕಡೆಗೆ ಸೆಳೆದೊಯ್ಯಲ್ಪಡುವುದು. ಇದರ ಪರಿಣಾಮವಾಗಿ ಆಳದಿಂದ ಹೆಚ್ಚು ತಂಪಾದ ನೀರು ಮೇಲೇರುವುದು.  ಇದನ್ನೇ 'ಆಪ್ ವೆಲ್ಲಿಂಗ್' ಎಂದು ಕರೆಯುವರು. ಇದರಿಂದ ಸಾಗರ ಮೇಲ್ಮೈನ ನೀರಿನ ಉಷ್ಣಾಂಶವು ಮತ್ತಷ್ಟು ಕಡಿಮೆಯಾಗುವುದು. ಪೂರ್ವ ಫೆಸಿಫಿಕ್ ಸಾಗರದಿಂದ ಹರಿಯುವ ಈ ಶೀತವಾದ ನೀರಿನ ಪ್ರವಾಹವನ್ನೇ 'ಲಾನಿನಾ' ಎಂದು ಕರೆಯುವರು.

No comments:

Post a Comment