☀ ಉಷ್ಣವಲಯದ ಎಲ್ಲಾ ಮರಭೂಮಿಗಳೂ ಭೂ ರಾಶಿಗಳ ಪಶ್ಚಿಮ ಭಾಗದಲ್ಲಿಯೇ ಕಂಡು ಬರುತ್ತವೆ ಏಕೆ?
(why the all tropical deserts found in the piles of western section?)
━━━━━━━━━━━━━━━━━━━━━━━━━━━━━━━━━━━━━━━━━━━━━
ಪ್ರಾಕೃತಿಕ, ಪ್ರಾದೇಶಿಕ ಭೂಗೋಳಶಾಸ್ತ್ರ.
(Physical Geography)
— ಪ್ರಪಂಚದ ಅರ್ಧದಷ್ಟು ವಿಸ್ತಾರದ ಪ್ರದೇಶದಲ್ಲಿ ಗಂಟೆಗೆ ೧೫ ರಿಂದ ೨೫ ಕಿ.ಮೀ ವೇಗವಾಗಿ ಬೀಸುವ ವಾಣಿಜ್ಯ ಮಾರುತಗಳು ಕಡಿಮೆ ಉಷ್ಣಾಂಶವನ್ನು ಹೊಂದಿದ ಪ್ರದೇಶದಿಂದ ಹೆಚ್ಚು ಉಷ್ಣಾಂಶದ ಪ್ರದೇಶಗಳ ಕಡೆಗೆ ಬೀಸುವುದರಿಂದ ಅವುಗಳ ಉಷ್ಣಾಂಶವು ಹೆಚ್ಚುತ್ತಾ ಹೋಗಿ ಜಲಾಂಶವನ್ನು ಹೊಂದುವ ಅವುಗಳ ಸಾಮರ್ಥ್ಯವೂ ಸಹ ಹೆಚ್ಚುತ್ತಾ ಹೋಗುವುದು. ಇದರಿಂದ ಇವುಗಳು ತಮ್ಮ ಮಾರ್ಗದಲ್ಲಿ ಮುಂದುವರೆದಂತೆಲ್ಲ ಮಳೆ ನೀಡದೇ ಆ ಪ್ರದೇಶಗಳಲ್ಲಿನ ಜಲಭಾಗಗಳನ್ನೂ ಸಹ ಬತ್ತಿಸಿ ಆಲಿಯ ರೂಪದಲ್ಲಿ ಮುಂದೆ ಕೊಂಡೊಯ್ಯುತ್ತವೆ.
— ಈ ಮಾರುತಗಳು ಹೆಚ್ಚು ಎತ್ತರವಾದ ಪರ್ವತಗಳಿಂದ ತಡೆಯಲ್ಪಟ್ಟಾಗ ಮಾತ್ರ ಮಳೆ ನೀಡುತ್ತವೆ. ಇದರಿಂದ ವಾಣಿಜ್ಯ ಮಾರುತಗಳು ಬೀಸುವ ಭೂ ರಾಶಿಗಳ ಪೂರ್ವ ಭಾಗಗಳು ಮಳೆ ಪಡೆಯುತ್ತವೆ. ಆದರೆ ಪಶ್ಚಿಮದ ಕಡೆಗೆ ಬಂದಂತೆ ಮಳೆಯ ಪ್ರಮಾಣವು ಕಡಿಮೆಯಾಗುತ್ತಾ ಹೋಗುವುದು. ಇದರಿ೦ದ ಈ ವಲಯದ ಭೂ ರಾಶಿಗಳ ಪಶ್ಚಿಮ ಭಾಗಗಳು ಮರಭೂಮಿ ಹಾಗೂ ಅರೆ ಮರಭೂಮಿಗಳಾಗಿ ಪರಿಣಮಿಸಿವೆ.
ಇದರಿಂದಾಗಿಯೇ 'ಉಷ್ಣವಲಯದ ಎಲ್ಲಾ ಮರಭೂಮಿಗಳೂ ಭೂ ರಾಶಿಗಳ ಪಶ್ಚಿಮ ಭಾಗದಲ್ಲಿಯೇ ಕಂಡು ಬರುತ್ತವೆ'.
No comments:
Post a Comment