"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 27 May 2014

★ ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಅಳವಡಿಸುವ ಉದ್ದೇಶವೇನು? (Why Rights are emboied in the Constitution?)

☀ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಅಳವಡಿಸುವ ಉದ್ದೇಶವೇನು?
 (Why Rights are emboied in the Constitution?)

━━━━━━━━━━━━━━━━━━━━━━━━━━━━━━━━━━━━━━━━━━━━━

★ ಭಾರತದ  ಸಂವಿಧಾನ
(Indian Constitution)


 ಭಾರತದ ಸಂವಿಧಾನದ ೩ನೇ ಭಾಗದಲ್ಲಿ ೧೨ನೇ ಪರಿಚ್ಛೇದದಿಂದ ೩೫ನೇ ಪರಿಚ್ಛೇದದವರೆಗೆ ಮೂಲಭೂತ ಹಕ್ಕುಗಳ ವಿವರಣೆಯನ್ನು ಕೊಡಲಾಗಿದೆ. ಈ ಹಕ್ಕುಗಳನ್ನು ೮ ಭಾಗಗಳಾಗಿ ವಿಂಗಡಿಸಲಾಗಿದ್ದು ಅವು ಒಟ್ಟು ೨೪ ಪರಿಚ್ಛೇದಗಳನ್ನು ಒಳಗೊಂಡಿವೆ. ಅಷ್ಟೇ ಅಲ್ಲ, ಇನ್ನೂ ಅನೇಕ ರಾಷ್ಟ್ರಗಳ ಸಂವಿಧಾನಗಳಲ್ಲೂ ಮೂಲಭೂತ ಹಕ್ಕುಗಳನ್ನು ಸೇರಿಸಲಾಗಿದೆ.

ಇಂಥ ಸೇರ್ಪಡೆಯ ಉದ್ದೇಶವೇನೆಂದರೆ;

 ೧) ಅಧಿಕಾರದಲ್ಲಿ ಇದ್ದವರಿಗೆ ಅಧಿಕಾರ ದುರುಪಯೋಗ ಮಾಡಿಕೊಳ್ಳುವ ಪ್ರವೃತ್ತಿ ಸಹಜವಾಗಿ ಇರುತ್ತದೆ. ಅದರಿಂದ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಅಳವಡಿಸುವುದರ ಮೂಲಕ ಅಧಿಕಾರದ ದುರುಪಯೋಗ ಮಾಡಿಕೊಳ್ಳುವ ಪ್ರವೃತ್ತಿಯನ್ನು ತಡೆಗಟ್ಟಬಹುದು. ಇದರಿ೦ದ ಅವುಗಳಿಗೆ ಕಾನೂನಿನ ರಕ್ಷಣೆ ದೊರಕುತ್ತದೆ.

 ೨) ಶಾಸಕಾಂಗದಲ್ಲಿ ಬಹುಮತ ಪಡೆದಿರುವ ಪಕ್ಷ ಅಲ್ಪಸಂಖ್ಯಾತರ ಹಿತಗಳನ್ನು ಗಣನೆಗೆ ತೆಗೆದುಕೊಳ್ಳದೆ, ತನಗೆ ಬೇಕಾದ ಕಾಯ್ದೆಗಳನ್ನು ಮಾಡಬಹುದು. ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಸೇರಿಸಿ ಅಲ್ಪ ಸಂಖ್ಯಾತರ ಹಿತಾಸಕ್ತಿಗಳ ವಿರುಧ್ಧ ಕಾನೂನು ಮಾಡುವುದನ್ನು ತಡೆಗಟ್ಟಬಹುದು. ಇದರಿಂದ ಶಾಸಕಾಂಗದ ಸರ್ವಾಧಿಕಾರವನ್ನು ತಡೆಗಟ್ಟಬಹುದು.

 ೩) ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಸೇರಿಸುವುದರಿಂದ ಪೌರರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವುಂಟಾಗುತ್ತದೆ.

No comments:

Post a Comment