"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 4 May 2014

★ ಬೌದ್ಧ ಧರ್ಮದ ಬೆಳವಣಿಗೆಗಾಗಿ ನಡೆದ ಬೌದ್ಧ ಮಹಾಸಭೆಗಳ ಕುರಿತು ಚರ್ಚಿಸಿ. (250 ಶಬ್ಧಗಳಲ್ಲಿ) ( Discuss about the Buddhist conferences those were held for development of the Buddhist religion.)

★ ಬೌದ್ಧ ಧರ್ಮದ ಬೆಳವಣಿಗೆಗಾಗಿ ನಡೆದ ಬೌದ್ಧ ಮಹಾಸಭೆಗಳ ಕುರಿತು ಚರ್ಚಿಸಿ.
(250 ಶಬ್ಧಗಳಲ್ಲಿ)
 ( Discuss about the Buddhist conferences those were held for development of the Buddhist religion.)

 ವಿಶಾಲ ದೃಷ್ಟಿಕೋನ ಮತ್ತು ಹೊಂದಾಣಿಕೆಯ ಪ್ರವೃತ್ತಿಯಿಂದ ಜಾತಿ, ಲಿಂಗ, ಭಾಷೆ, ಜನಾಂಗಗಳ ಭೇಧವೆನಿಸದೆ 1200 ವರ್ಷಗಳ ಕಾಲ ಪ್ರಭಾವಶಾಲಿಯಾಗಿ ಬಾಳಿದ ಬೌದ್ಧ ಧರ್ಮದ ಬೆಳವಣಿಗೆಗಾಗಿ, ಬುದ್ಧನ ಮರಣದ ನಂತರ ಅವನ ಶಿಷ್ಯವರ್ಗ ನಾಲ್ಕು ಬೌದ್ಧ ಮಹಾಸಭೆಗಳನ್ನು ನಡೆಸಿದರು. ಅವುಗಳನ್ನು `ಬೌದ್ಧ ಮಹಾಸಮ್ಮೇಳನ`ಗಳೆಂದು ಕರೆಯಲಾಗಿದೆ.

 * ಪ್ರಥಮ ಬೌದ್ದ ಮಹಾಸಭೆ:
ಪ್ರಥಮ ಮಹಾಸಭೆಯು ಕ್ರಿ. ಪೂ. 487 ರಲ್ಲಿ ಮಗಧ ರಾಜ್ಯದ ರಾಜಧಾನಿ ರಾಜಗೃಹದಲ್ಲಿ ನಡೆಯಿತು. ಮಹಾಕಷ್ಯಪನು ಮಹಾಸಭೆಯ ಅಧ್ಯಕ್ಷತೆವಹಿಸಿದ್ದನು. ಸಭೆಯಲ್ಲಿ ಬುದ್ದನ ಶಿಷ್ಯರಾದ ಆನಂದ, ಉಪಾಲಿ, ಸುಬದ್ದರು ಭಾಗವಹಿಸಿದ್ದರು.
 — ಈ ಸಭೆಯಲ್ಲಿ ಬುದ್ದನ ಧಾರ್ಮಿಕ ಸಿಧ್ಧಾಂತಗಳನ್ನು ಮತ್ತು ಸನ್ಯಾಸ ನಿಯಮಗಳನ್ನು ಸಂಗ್ರಹಿಸಿ ಗ್ರಂಥ ರೂಪದಲ್ಲಿ ಹೊರತರಲಾಯಿತು. ಅವುಗಳನ್ನು ಧರ್ಮಪಿಟಕ ಮತ್ತು ವಿನಯ ಪಿಟಕಗಳೆಂದು ಕರೆಯಲಾಗಿದೆ.

 * ದ್ವಿತೀಯ ಬೌದ್ದ ಮಹಾಸಭೆ:
 ಎರಡನೆಯ ಮಹಾಸಭೆಯು ಕ್ರಿ. ಪೂ. 387 ರಲ್ಲಿ ವೈಶಾಲಿಯಲ್ಲಿ ನಡೆಯಿತು.ಈ ಸಮ್ಮೇಳನದಲ್ಲಿ ವಿನಯ ಪಿಟಕದ ಬಗ್ಗೆ ವಿರೋಧಭಾಸಗಳು ಉಂಟಾದವು. ನಿಯಮಗಳನ್ನು ಸಡಿಲಗೊಳಿಸಬೇಕೆಂದು ಮತ್ತು ಸಡಿಲಗೊಳಿಸಬಾರದೆಂಬ ಭಿನ್ನಾಭಿಪ್ರಾಯಗಳುಂಟಾದವು.
 — ಇದರಿಂದ ಮಹಾಸಂಘಿಕರು ಮತ್ತು ಸ್ಥಾವರವಾದಿಗಳು ಎಂಬ ಎರಡು ಗುಂಪುಗಳು ಹುಟ್ಟಿಕೊಂಡವು.

 * ತೃತಿಯ ಬೌದ್ಧ ಮಹಾಸಭೆ:
ಮೂರನೆಯ ಮಹಾಸಭೆಯು ಕಾಕವರ್ಣಿಯ ಆಶ್ರಯದಲ್ಲಿ ಮೌರ್ಯ ರಾಜಧಾನಿ ಪಾಟಲಿಪುತ್ರದಲ್ಲಿ ಕ್ರಿ. ಪೂ. 234 ರಲ್ಲಿ ನಡೆಯಿತು. ಮೊಗ್ಗಲಿ ಪುತ್ರ ತಿಸ್ಸನು ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದನು. ಬುದ್ದನ ತತ್ವಗಳಲ್ಲಿ ಎಕತೆಯನ್ನು ತರಲು ಮಹಾಸಭೆ ಪ್ರಯತ್ನಿಸಿತು. ಬುದ್ದನ ತತ್ವಗಳನ್ನು ನಿಷ್ಠೆಯಿಂದ ಪಾಲಿಸಬೇಕೆಂದು ನಿರ್ಣಯಿಸಲಾಯಿತು ಮತ್ತು ಬೌದ್ಧ ಧರ್ಮ ಪ್ರಸಾರದ ರೊಪರೇಷೆಗಳನ್ನು ಸಿದ್ದಪಡಿಸಲಾಯಿತು.
 — ಈ ಮಹಾಸಭೆಯಲ್ಲಿ ಬುದ್ಧನ ಬೋದನೆಗಳನ್ನೊಳಗೊಂಡ 'ಅಭಿದಮ್ಮ ಪಿಟಕ' ಎಂಬ ಕೃತಿಯನ್ನು ಹೊರತರಲಾಯಿತು.

 * ಚತುರ್ಥ ಬೌದ್ಧ ಮಹಾಸಭೆ:
 ನಾಲ್ಕನೆಯ ಬೌದ್ದ ಮಹಾಸಭೆಯು ಕುಶಾಣದೊರೆ ಕನಿಷ್ಕನ ಆಶ್ರಯದಲ್ಲಿ ಕ್ರಿ. ಶ. 100 ರಲ್ಲಿ ಕಾಶ್ಮೀರದ ಕುಂಡಲ ವನದಲ್ಲಿ ನಡೆಯಿತು. ವಸುಮಿತ್ರ ಎಂಬ ಬೌದ್ಧಸನ್ಯಾಸಿ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದನು. ಉಪಾಧ್ಯಕ್ಷತೆಯನ್ನು ಅಶ್ವಘೋಷ ವಹಿಸಿದನು. ನಾಗಾರ್ಜುನ ಎಂಬ ಬೌದ್ಧ ವಿದ್ವಾಂಸನು ಮಹಾಸಭೆಯಲ್ಲಿ ಭಾಗವಹಿಸಿದ್ದನು. ತ್ರಿಪಿಟಕಗಳ ಬಗ್ಗೆ ಮಹಾ ಭಾಷೆಗಳನ್ನು ಬರೆಯಲಾಯಿತು.
 — ಸಭೆಯು ಬೌದ್ದ ಧರ್ಮದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಮಾಡಿದ ಪ್ರಯತ್ನ ವಿಫಲವಾಗಿದ್ದರಿಂದ ಬೌದ್ದ ಧರ್ಮದಲ್ಲಿ ಹಿನಾಯಾನ ಮತ್ತು ಮಹಾಯಾನ ಎಂಬ ಪಂಥಗಳು ಉದಯಿಸಿದವು.

 * ಪಂಚಮ ಬೌದ್ದ ಮಹಾಸಭೆ:
 ಪಂಚಮ ಬೌದ್ದ ಮಹಾಸಭೆ ಹರ್ಷವರ್ಧನನ ಉಪರಾಜಧಾನಿ ಕನೋಜದಲ್ಲಿ ಕ್ರಿ. ಶ. 643 ರಲ್ಲಿ ಹ್ಯೂಯನತ್ಸಾಂಗನ ಅಧ್ಯಕ್ಷತೆಯಲ್ಲಿ ನಡೆಯಿತು. ಮಹಾಯಾನ ತತ್ವಗಳಿಗೆ ಪ್ರಚಾರ ಕೂಡುವುದು ಈ ಸಮ್ಮೇಳನದ ಉದ್ದೇಶವಾಗಿತ್ತು.
 — ಈ ಸಭೆಗೆ ಕಾಮರೂಪದ ದೂರೆ ಭಾಸ್ಕರವರ್ಮ, ಪಲ್ಲವಿಯ ದೂರೆ ಧೃವಸೇನ ಸೇರಿದಂತೆ 20 ಜನರಾಜರು 1000 ಬೌದ್ಧ ವಿದ್ವಾಂಸರು, 3000ಸಾವಿರ ಬೌದ್ಧ ಭಿಕ್ಷುಕರು, 3000 ಬ್ರಾಹ್ಮಣರು ಭಾಗವಹಿಸಿದರು.

No comments:

Post a Comment