"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್
Showing posts with label ಪ್ರಾಕೃತಿಕ ಭೂಗೋಳಶಾಸ್ತ್ರ. Show all posts
Showing posts with label ಪ್ರಾಕೃತಿಕ ಭೂಗೋಳಶಾಸ್ತ್ರ. Show all posts

Saturday, 17 February 2018

●.ಹವಾಗುಣ ಮತ್ತು ವಾಯುಗುಣ : (Weather and Climate)

●.ಹವಾಗುಣ ಮತ್ತು ವಾಯುಗುಣ :
(Weather and Climate)
 ━━━━━━━━━━━━━━━━━━━━━━━

★ ಸಾಮಾನ್ಯ ಭೂಗೋಳಶಾಸ್ತ್ರ
(Physical geography)



•► ಒಂದು ಸ್ಥಳದ ಅಲ್ಪಾವಧಿಯ ವಾಯುಗೋಳದ ಪರಿಸ್ಥಿತಿಯನ್ನು ಹವಾಗುಣ ಎನ್ನುವರು. ಉದಾ: ಮೋಡಯುಕ್ತ ಪ್ರಖರ ಬಿಸಿಲು, ಹಿತಕರ ಹವಾಗುಣ. ಹವಾಗುಣ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡುವುದಕ್ಕೆ ‘ಹವಾಗುಣ ಶಾಸ್ತ್ರ’ (Meteorology) ಎನ್ನುವರು.

•► ಒಂದು ಪ್ರದೇಶದ ದೀರ್ಘಾವಧಿಯ ಹವಾಗುಣದ ಸರಾಸರಿಯನ್ನು ವಾಯುಗುಣವೆನ್ನುವರು.

ಉದಾ: ಸಮಭಾಜಕ ವೃತ್ತದ ವಾಯುಗುಣ, ತಂಡ್ರಾ ವಾಯುಗುಣ, ಮರುಭೂಮಿ ವಾಯುಗುಣ, ಮೆಡಿಟರೇನಿಯನ್, ಮಾನ್ಸೂನ್ ವಾಯುಗುಣ ಮೊದಲಾದವು.

•► ವಾಯುಗುಣದ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಶಾಸ್ತ್ರವನ್ನು ‘ವಾಯುಗುಣಶಾಸ್ತ್ರ’ (Climatology) ಎನ್ನುವರು.

•► ಒಂದು ಪ್ರದೇಶದ ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳೆಂದರೆ ಅಕ್ಷ್ಮಾಂಶ, ಸಮುದ್ರ ಮಟ್ಟದಿಂದ ಇರುವ ಎತ್ತರ, ಮಾರುತಗಳು, ಸಮುದ್ರದಿಂದ ಇರುವ ದೂರ, ಭೂಮಿ ಮತ್ತು ಜಲರಾಶಿಗಳ ಹಂಚಿಕೆ, ಸಾಗರ ಪ್ರವಾಹಗಳು ಇತ್ಯಾದಿ.

Sunday, 1 May 2016

☀ ಭೂಮಿಯ ವಾಯುಮಂಡಲದ ಐದು ವಲಯಗಳು : (Short Notes) (Five distinct Layers of the Atmosphere)

☀ ಭೂಮಿಯ ವಾಯುಮಂಡಲದ ಐದು ವಲಯಗಳು :(Short Notes)
(Five distinct Layers of the Atmosphere)
━━━━━━━━━━━━━━━━━━━━━━━━━━━━━━━━━━━━━━━━━━━━━
★ಸಾಮಾನ್ಯ ಭೂಗೋಳ
(General Geography)


1-ಪರಿವರ್ತನಾ ವಲಯ (ಟ್ರಾಟೋಸ್ಪೀಯರ್)

✧. ಮಿಶ್ರಣ ವಲಯ,

✧.ಹವಾಮಾನ ಉತ್ಪಾದಕ ವಲಯವೆನ್ನುವರು

★.ಎತ್ತರ
✧.ದೃವ ಪ್ರದೇಶದಲ್ಲಿ 0-8KM
✧.ಸ.ವೃತ್ತದಲ್ಲಿ         0-18KM
✧.ಸರಾಸರಿ             0-12KM

✧.ಎತ್ತರಕ್ಕೆ ಹೋದಂತೆ ಉಷ್ಣಾಂಶ ಹೆಚ್ಚಾಗುತ್ತದೆ
✧.165 °C ಗೆ- 1°C

★.ಈ ಕೆಳಗಿನವುಗಳು ಕಂಡು ಬರುತ್ತವೆ
✧.ಒತ್ತಡ              
✧.ಮಾರುತ          
✧.ಮೋಡ
✧.ಮಿಂಚು          
✧.ಗುಡುಗು
✧.ಕಾಮನ ಬಿಲ್ಲು
✧.ಮಳೆ
✧.ವಾಯು ಸಾಂದ್ರತೆ
✧.ಉಷ್ಣತೆ



2- ಸಮೋಷ್ಣವಲಯ (ಸ್ಟ್ರಾಟೋಸ್ಪೀಯರ್)

✧.12- 50 KM

✧.ವಿಮಾನ ಹಾರಾಟ ವಲಯ

✧.ಇಲ್ಲಿ ಮೋಡಗಳಿಲ್ಲ

✧.ವಾಯುವಿರಳ,ಉಷ್ಣತೆ ಸ್ಥಿರ

✧.ಓಝೋನ್ ಇದೆ (03)-

✧.ಒಝೋನ್ ಕಂಡು ಹಿಡಿದವರು ಚಾರ್ಲ್ಸ್ ಪ್ಯಾಬ್ರೆ -ಹೆನ್ರಿ ಬುಯಸನ್ ಕಂಡು ಹಿಡಿದರು-1913

✧.ಓಝೋನ್ ಅಳೆಯುವ ಮಾಪಕ -Dobson unit

✧.ಓಝೋನ್ ಗಾಳಿ ನೀರನ್ನು ಶುದ್ದೀಕರಿಸುತ್ತದೆ

✧.1 ಕ್ಲೋರಿನ್ ಅಣು 1 ಲಕ್ಷ ಓಝೋನ್ ಅಣುಗಳನ್ನು ನಾಶಗೊಳಿಸುತ್ತದೆ

✧.ಓಝೋನ್ 5KM 20KM ಒಳಗಿದೆ



3- ಮಧ್ಯಂತರ ವಲಯ (ಮೀಸೋಸ್ಪೀಯರ್)

✧.50-80 Km  ಇದೆ

✧.ಅತೀ ಶೀತವಲಯ

✧.ಅತಿ ಕಡಮೆ ಉಷ್ಣತೆ

✧.ಆಮ್ಲಜನಕ ಇಲ್ಲ

✧.ಅನಿಲರಹಿತ ವಲಯ

✧.ಉಲ್ಕೆಗಳು ಬಸ್ಮವಾಗುತ್ತವೆ



4- ಉಷ್ಣಾತಾ ವಲಯ  (ಥರ್ಮೋಸ್ಪೀಯರ್)

✧.80-600KM ಇದೆ

★.ಇಲ್ಲಿ 2 ವಲಯಗಳಿವೆ
1 - ಬಾಹ್ಯವಲಯ
2-ಆಯಾನು ವಲಯ

✧.ಹೆಚ್ಚು ಉಷ್ಣತೆ

✧.X- ಕಿರಣಗಳು ಕಂಡು ಬರುತ್ತವೆ

✧.ರೇಡಿಯೋ- ಮೊಬೈಲ್ ತರಂಗಗಳಿವೆ.

✧.ರಾಡಾರ್ - ನಾವಿಕರ ಸಂಪರ್ಕಕ್ಕೆ ಸಹಾಯಕ

✧.ಅನಿಲಗಳು ವಿದ್ಯದ್ವಾಹಕ ಗುಣ ಹೊಂದಿ ಆಯಾನುಗಳಾಗುತ್ತವೆ

✧.ಆಯಾನುಗಳ ಮೇಲೆ ಗೋಚರ ಬೆಳಕು ಬಿದ್ದಾಗ ವಿವಿದ ಬಣ್ಣಗಳಲ್ಲಿ ಕಾಣುತ್ತವೆ ಇವುಗಳನ್ನು ದೃವ ಜ್ಯೋತಿ ಗಳ ಎನ್ನುವರು

★ ದೃವ ಜ್ಯೋತಿಗಳು
✧.ಉ- ಬೋರಾಲಿಸ್
✧.ದ- ಆಸ್ಟ್ರಾಲೀಸ್

★ ಆಯಾನುಮಂಡಲದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ನಿರ್ಮಿಸಲಾಗಿದೆ



5-ಬಾಹ್ಯವಲಯ  (ಎಕ್ಸೋಸ್ಫೀಯರ್)

✧.600-1000km

✧.ಗುರುತ್ವಬಲ ಕಡಮೆ

✧.ಕಾಂತತ್ವ ಕಂಡು ಬರುತ್ತದೆ

✧.ಜಲಜನಕ,ಹೀಲಿಯಂ‌ ಇವೆ

(Courtesy : Mr.Nazeer Moratagi) 

Wednesday, 29 April 2015

☀"ಭೂಮಿಯ ಮೇಲಿರುವ ಪ್ರಮುಖ ಭೂಕಂಪ ವಲಯಗಳಲ್ಲಿ ಒಂದಾದ ಹಿಮಾಲಯ ವಲಯವು ಇತರೇ ಭೂಕಂಪ ವಲಯಗಳಿಗಿಂತ ಹೆಚ್ಚು ಹಾನಿಗೆ ಒಳಗಾಗುವುದು." ಹಾಗಾದರೆ ಹೆಚ್ಚು ಭೂಕಂಪಗಳು ಹಿಮಾಲಯದಲ್ಲಿಯೇ ಏಕೆ ಸಂಭವಿಸುತ್ತವೆ? ("Why more earthquakes occurs in Himalayan region?")

☀"ಭೂಮಿಯ ಮೇಲಿರುವ ಪ್ರಮುಖ ಭೂಕಂಪ ವಲಯಗಳಲ್ಲಿ ಒಂದಾದ ಹಿಮಾಲಯ ವಲಯವು ಇತರೇ ಭೂಕಂಪ ವಲಯಗಳಿಗಿಂತ ಹೆಚ್ಚು ಹಾನಿಗೆ ಒಳಗಾಗುವುದು." ಹಾಗಾದರೆ ಹೆಚ್ಚು ಭೂಕಂಪಗಳು ಹಿಮಾಲಯದಲ್ಲಿಯೇ ಏಕೆ ಸಂಭವಿಸುತ್ತವೆ?
("Why more earthquakes occurs in Himalayan region?")

━━━━━━━━━━━━━━━━━━━━━━━━━━━━━━━━━━━━━━━━━━━━━

★ (Physical Geography)
★ (ಪ್ರಾಕೃತಿಕ ಭೂಗೋಳಶಾಸ್ತ್ರ.)


— ಸುಮಾರು 400 ವರ್ಷಗಳ ಭೂಕಂಪದ ದಾಖಲೆಗಳನ್ನು ಅವಲೋಕಿಸಿದಾಗ, ಈ ಭೂಮಿಯ ಮೇಲೆ ಮುಖ್ಯವಾಗಿ ಎರಡು ಭೂಕಂಪ ವಲಯಗಳು ಕಾಣುತ್ತವೆ.
●.ಒಂದು ಶಾಂತಸಾಗರವನ್ನು ಸುತ್ತುವರಿದ ಪ್ರದೇಶ.

●.ಇನ್ನೊಂದು ವಲಯ ಈಸ್ಟ್ ಇಂಡೀಸ್‌ನಿಂದ ಆರಂಭವಾಗಿ ಹಿಮಾಲಯ, ಕ್ಯಾಸ್‌ಕಸ್, ಆಲ್ಪ್ಸ್ ಪರ್ವತ ಶ್ರೇಣಿಗಳನ್ನು ಹಾದು ಮೆಡಿಟರೇನಿಯನ್‌ವರೆಗೆ ಸಾಗುತ್ತದೆ.


— ಭಾರತದಲ್ಲಿ ಮುಖ್ಯವಾಗಿ ಮೂರು ಭೂಕಂಪ ವಲಯಗಳನ್ನು ಗುರುತಿಸಬಹುದು.
ಅದರಲ್ಲಿ ಹೆಚ್ಚು ಹಾನಿಗೆ ಒಳಗಾಗುವುದು ಹಿಮಾಲಯ ವಲಯ. ಇಷ್ಟಕ್ಕೂ ಹೆಚ್ಚು ಭೂಕಂಪಗಳು ಹಿಮಾಲಯದಲ್ಲಿ ಏಕೆ ಸಂಭವಿಸುತ್ತವೆ? ಎಂಬುವುದಕ್ಕೆ ಪ್ರಮುಖ ವೈಜ್ಞಾನಿಕ ಕಾರಣಗಳಿವೆ.


★.ಹಿಮಾಲಯ ಭೂಕಂಪಗಳ ತವರು.
━━━━━━━━━━━━━━━━━
— ಇಲ್ಲಿ 100 ವರ್ಷಗಳಲ್ಲಿ ಸರಾಸರಿ ನಾಲ್ಕು  ಅಥವಾ ಐದು ಬಾರಿ ದೊಡ್ಡ ಪ್ರಮಾಣದ ಭೂಕಂಪಗಳು ಘಟಿಸುತ್ತವೆ. ವಿಪರ್ಯಾಸವೆಂದರೆ ಇಡೀ ನೇಪಾಳ ದೇಶ ಹಿಮಾಲಯ ಪರ್ವತಗಳ ಮಡಿಲಲ್ಲಿದೆ.

✧.ಪಶ್ಚಿಮದಲ್ಲಿ ಆಪ್ಘಾನಿಸ್ತಾನದಿಂದ ಹಿಡಿದು ಪೂರ್ವದಲ್ಲಿ ಮ್ಯಾನ್ಮಾರ್‌ವರಗೆ ಚಾಚಿಕೊಂಡಿರುವ ಹಿಮಾಲಯ ಶ್ರೇಣಿಯ ಉದ್ದ 2400 ಕಿ.ಮೀ. ಅಗಲ 160 ಕಿ.ಮೀ.ದಿಂದ 400 ಕಿ.ಮೀ.ವರೆಗೂ ಇದೆ.

✧.ಹಿಮಾಲಯವು ಪೃಥ್ವಿಯ ಮೇಲೆ ಅತಿ ಎತ್ತರದ ಪರ್ವತ ಶ್ರೇಣಿಗಳನ್ನು ಹೊಂದಿದ್ದು ವರ್ಷಕ್ಕೆ ಆರರಿಂದ 10 ಸೆಂಟಿಮೀಟರ್‌ವರೆಗೆ ಬೆಳೆಯುತ್ತಿದೆ.


●.ಭೌಗೋಳಿಕ ಇತಿಹಾ ಸ:—
━━━━━━━━━━━━
✧.ಯುರೇಷ್ಯಾ ಮತ್ತು ಇಂಡಿಯಾ ಭೂಖಂಡಗಳು ಎದುರುಬದುರಾಗಿ ಘರ್ಷಣೆಗೆ ನಿಂತಾಗ ಎರಡೂ ಖಂಡಗಳ ಅಂಚಿನಿಂದ ಕೊಚ್ಚಿ ಬರುತ್ತಿದ್ದ ಅಗಾಧ ಮರಳು, ಮೆಕ್ಕಲುಮಣ್ಣು ಪೂರ್ವ ಮತ್ತು  ಪಶ್ಚಿಮದಲ್ಲಿ  ಸಂಚಯನಗೊಳ್ಳುತ್ತಿತ್ತು.ಹೀಗೆ ಸಂಚಯನ ಮೂಡುತ್ತಿದ್ದ ಸಾಗರವನ್ನು ಮುಂದೆ ಟೆಥಿಸ್ ಮಹಾಸಾಗರ ಎಂದು ಕರೆಯಲಾಯಿತು.

✧.ಉತ್ತರದಲ್ಲಿ ಯುರೇಷ್ಯಾ ಮತ್ತು ದಕ್ಷಿಣದಲ್ಲಿ ಇಂಡಿಯಾ ಭೂಫಲಕಗಳು ಮೆಲ್ಲಮೆಲ್ಲನೆ ಟೆಥಿಸ್ ಮಹಾಸಾಗರದ ಕತ್ತನ್ನು ಹಿಸುಕಲು ಪ್ರಾರಂಭಿಸಿದವು. ಇಂಡಿಯಾ ಫಲಕ ದಕ್ಷಿಣದಿಂದ ಉತ್ತರದ ಕಡೆಗೆ ನೂಕಲು ಪ್ರಾರಂಭಿಸಿದರೆ, ಉತ್ತರದಲ್ಲಿದ್ದ ಯುರೇಷ್ಯಾ ಫಲಕ ಒತ್ತಿ ಹಿಡಿದುಕೊಂಡಿತು. ಪರಿಣಾಮ ಟೆಥಿಸ್ ಸಾಗರದ ಸಂಚಯನವೆಲ್ಲ ಹಿಮಾಲಯ ಪರ್ವತಗಳಾಗಿ ಅದರಲ್ಲೂ ಮಧ್ಯ ಹಿಮಾಲಯ ಟಿಬೆಟ್ ಪ್ರಸ್ಥಭೂಮಿ ಅಥವಾ ಪ್ರಪಂಚದ ಮೇಲ್ಛಾವಣಿಯಾಗಿ ನಿಂತುಕೊಂಡಿತು.

✧.ಹಿಮಾಲಯ ಶ್ರೇಣಿ ಐದು ಹಂತಗಳಲ್ಲಿ (3.5 ಕೋಟಿ ವರ್ಷಗಳಿಂದ 2.5 ಕೋಟಿ ವರ್ಷಗಳ ನಡುವೆ) ಇಂದಿನ ರೂಪ ಪಡೆದುಕೊಂಡಿತು.


●.ಭೂಕಂಪ ವಲಯವಾಗಿ ಹಿಮಾಲಯ:
━━━━━━━━━━━━━━━━━━
✧.ಎರಡು ಭೂಖಂಡ ಅಥವಾ ಭೂಫಲಕಗಳ ನಡುವೆ ಅಗಾಧವಾದ ಬಿರುಕುಗಳಿದ್ದು, ಅವು ಚಲಿಸುತ್ತಿರುವ ಕಾರಣ ಘರ್ಷಣೆಗೆ ಒಳಗಾಗುತ್ತವೆ. ಎರಡು ಫಲಕಗಳ ಮಧ್ಯೆ ಸಿಕ್ಕಿಕೊಂಡಿರುವ ಹಿಮಾಲಯದ ಮೆದು ಶಿಲೆಗಳ ನಡುವೆ ರಾಕ್ಷಸ ಬಿರುಕುಗಳು ಅಥವಾ ದೈತ್ಯ ಸ್ತರಭಂಗಗಳಿವೆ.

✧.ಎರಡು ಭೂಫಲಕಗಳ ನಡುವೆ ನೂರಾರು ವರ್ಷಗಳ ಕಾಲ ಒತ್ತಡ ಬೆಳೆದು ಮುಂಚೂಣಿಯಲ್ಲಿರುವ ಶಿಲೆಗಳು ಒಮ್ಮೆಲೆ ಆಳದಲ್ಲಿ ಮುರಿದುಬಿದ್ದಾಗ ಭೂಕಂಪ ಘಟಿಸುತ್ತದೆ.

✧.ಇದೇ ಕಠ್ಮಂಡು ಪ್ರದೇಶದಲ್ಲಿ 1255ರಲ್ಲಿ ಆದ ಭೂಕಂಪದಿಂದ ಇಡೀ ನಗರ ನೆಲಸಮವಾದ ದಾಖಲೆ ಇದೆ.ಆದಾದ 679 ವರ್ಷಗಳ ನಂತರ 1934ರಲ್ಲಿ ದೊಡ್ಡ ಭೂಕಂಪವಾಗಿತ್ತು. ಮತ್ತೆ 81 ವರ್ಷಗಳ ನಂತರ ಈಗ ಸಂಭವಿಸಿದೆ.

✧.ಕಳೆದ 100 ವರ್ಷಗಳಲ್ಲಾದ ಅತ್ಯಂತ ಪ್ರಬಲ ಭೂಕಂಪಗಳೆಂದರೆ, 1847-ಅಸ್ಸಾಂ, 1905-ಕಾಂಗ್ರಾ, 1934-ಬಿಹಾರ್-ನೇಪಾಳ, 1950-ಅಸ್ಸಾಂ.

✧.ದೊಡ್ಡ ಕಲ್ಲೊಂದನ್ನು ನೀರಿಗೆ ಎಸೆದಾಗ ಸುತ್ತಲೂ ಅಲೆಗಳು ಏಳುತ್ತವೆ. ಅದೇ ರೀತಿ ಭೂಕಂಪದ ಮಧ್ಯಕೇಂದ್ರದಲ್ಲಿ ಹೆಚ್ಚು ಹಾನಿ ಕಾಣಿಸಿಕೊಂಡು, ದೂರಹೋದಷ್ಟೂ ಹಾನಿ ಕಡಿಮೆಯಾಗುತ್ತ ಹೋಗುತ್ತದೆ .

✧.ಇದನ್ನು ರಿಕ್ಟರ್ ಮಾಪನದಿಂದ ಅಳೆಯಲಾಗುತ್ತದೆ.

✧.ಈಗಿನ ಭೂಕಂಪದ ವ್ಯಾಪ್ತಿ ಸುಮಾರು 4000 ಚದರ ಕಿ.ಮೀ.ಗಳವರೆಗೂ ಹರಡಿದೆ.

(ಕೃಪೆ: prajawani)

Wednesday, 28 May 2014

☀ ಉಷ್ಣವಲಯದ ಎಲ್ಲಾ ಮರಭೂಮಿಗಳೂ ಭೂ ರಾಶಿಗಳ ಪಶ್ಚಿಮ ಭಾಗದಲ್ಲಿಯೇ ಕಂಡು ಬರುತ್ತವೆ ಏಕೆ? (why the all tropical deserts found in the piles of western section?)


☀ ಉಷ್ಣವಲಯದ ಎಲ್ಲಾ ಮರಭೂಮಿಗಳೂ ಭೂ ರಾಶಿಗಳ ಪಶ್ಚಿಮ ಭಾಗದಲ್ಲಿಯೇ ಕಂಡು ಬರುತ್ತವೆ ಏಕೆ?
(why the all tropical deserts found in the piles of western section?)

━━━━━━━━━━━━━━━━━━━━━━━━━━━━━━━━━━━━━━━━━━━━━

ಪ್ರಾಕೃತಿಕ, ಪ್ರಾದೇಶಿಕ ಭೂಗೋಳಶಾಸ್ತ್ರ.
(Physical Geography)


— ಪ್ರಪಂಚದ ಅರ್ಧದಷ್ಟು ವಿಸ್ತಾರದ ಪ್ರದೇಶದಲ್ಲಿ ಗಂಟೆಗೆ ೧೫ ರಿಂದ ೨೫ ಕಿ.ಮೀ ವೇಗವಾಗಿ ಬೀಸುವ ವಾಣಿಜ್ಯ ಮಾರುತಗಳು ಕಡಿಮೆ ಉಷ್ಣಾಂಶವನ್ನು ಹೊಂದಿದ ಪ್ರದೇಶದಿಂದ ಹೆಚ್ಚು ಉಷ್ಣಾಂಶದ ಪ್ರದೇಶಗಳ ಕಡೆಗೆ ಬೀಸುವುದರಿಂದ ಅವುಗಳ ಉಷ್ಣಾಂಶವು ಹೆಚ್ಚುತ್ತಾ ಹೋಗಿ ಜಲಾಂಶವನ್ನು ಹೊಂದುವ ಅವುಗಳ ಸಾಮರ್ಥ್ಯವೂ ಸಹ ಹೆಚ್ಚುತ್ತಾ ಹೋಗುವುದು.  ಇದರಿಂದ ಇವುಗಳು ತಮ್ಮ ಮಾರ್ಗದಲ್ಲಿ ಮುಂದುವರೆದಂತೆಲ್ಲ ಮಳೆ ನೀಡದೇ ಆ ಪ್ರದೇಶಗಳಲ್ಲಿನ ಜಲಭಾಗಗಳನ್ನೂ ಸಹ ಬತ್ತಿಸಿ ಆಲಿಯ ರೂಪದಲ್ಲಿ ಮುಂದೆ ಕೊಂಡೊಯ್ಯುತ್ತವೆ.

— ಈ ಮಾರುತಗಳು ಹೆಚ್ಚು ಎತ್ತರವಾದ ಪರ್ವತಗಳಿಂದ ತಡೆಯಲ್ಪಟ್ಟಾಗ ಮಾತ್ರ ಮಳೆ ನೀಡುತ್ತವೆ. ಇದರಿಂದ ವಾಣಿಜ್ಯ ಮಾರುತಗಳು ಬೀಸುವ ಭೂ ರಾಶಿಗಳ ಪೂರ್ವ ಭಾಗಗಳು ಮಳೆ ಪಡೆಯುತ್ತವೆ.  ಆದರೆ ಪಶ್ಚಿಮದ ಕಡೆಗೆ ಬಂದಂತೆ ಮಳೆಯ ಪ್ರಮಾಣವು ಕಡಿಮೆಯಾಗುತ್ತಾ ಹೋಗುವುದು.  ಇದರಿ೦ದ ಈ ವಲಯದ ಭೂ ರಾಶಿಗಳ ಪಶ್ಚಿಮ ಭಾಗಗಳು ಮರಭೂಮಿ ಹಾಗೂ ಅರೆ ಮರಭೂಮಿಗಳಾಗಿ ಪರಿಣಮಿಸಿವೆ.

ಇದರಿಂದಾಗಿಯೇ 'ಉಷ್ಣವಲಯದ ಎಲ್ಲಾ ಮರಭೂಮಿಗಳೂ ಭೂ ರಾಶಿಗಳ ಪಶ್ಚಿಮ ಭಾಗದಲ್ಲಿಯೇ ಕಂಡು ಬರುತ್ತವೆ'.