"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 4 May 2014

★ಬೌದ್ಧಧರ್ಮದಲ್ಲಿ ಉದಯಿಸಿದ ಬೌದ್ಧ ಪಂಥಗಳ ಕುರಿತು ಬರೆಯಿರಿ. (100 ಶಬ್ದಗಳಲ್ಲಿ) (Write about Buddhist sects which raised in emerging Buddhism)

★ ಬೌದ್ಧಧರ್ಮದಲ್ಲಿ ಉದಯಿಸಿದ ಬೌದ್ಧ ಪಂಥಗಳ ಕುರಿತು ಬರೆಯಿರಿ.
(100 ಶಬ್ದಗಳಲ್ಲಿ)
 (Write about Buddhist sects which raised in emerging Buddhism)

ಬುದ್ಧನ ನಿಧನದ ನಂತರ ಕುಶಾಣ ದೊರೆ ಕನಿಷ್ಕನ ಆಶ್ರಯದಲ್ಲಿ ನಾಲ್ಕನೆಯ ಬೌದ್ದ ಮಹಾಸಭೆಯಲ್ಲಿ ಬೌದ್ದ ಧರ್ಮದ ಆಚರಣೆಯಲ್ಲಿ ಉಂಟಾದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಮಾಡಿದ ಪ್ರಯತ್ನ ವಿಫಲವಾಗಿದ್ದರಿಂದ ಬೌದ್ದ ಧರ್ಮದಲ್ಲಿ ಹಿನಾಯಾನ ಮತ್ತು ಮಹಾಯಾನ ಎಂಬ ಪಂಥಗಳು ಉದಯಿಸಿದವು.

 1. ಮಹಾಯಾನ (ಶ್ರೇಷ್ಠಮಾರ್ಗ):
ಮಹಾಯಾನ ಪಂಥವನ್ನು 'ಶ್ರೇಷ್ಠ ಮಾರ್ಗ' ಎಂದು ತಿಳಿಯಲಾಗಿದೆ. ಇದು ಹಿಂದೂ ಧರ್ಮದ ಪ್ರಭಾವಕ್ಕೆ ಒಳಗಾಗಿದ್ದು, ಬುದ್ಧನನ್ನು ದೇವರ ಸ್ವರೂಪವೆಂದು ತಿಳಿದು ಮೂರ್ತಿ ಪೂಜೆ ಪ್ರಾರಂಭಿಸಿತು. ಬುದ್ಧನ ತತ್ವಗಳಿಗಿಂತ ಬುದ್ಧನಲ್ಲಿ ನಂಬಿಕೆ ಹೂಂದಿತ್ತು.ಬುದ್ಧನು ದೇವರ ಅವತಾರವಗಿದ್ದು, ಅವನ ಆರಾದನೆ ಮೋಕ್ಷಕ್ಕೆ ಮಾರ್ಗವಾಗುತ್ತೆಂದು ತಿಳಿಯಲಾಯಿತು. ಹೂವು, ಬುದ್ಧನ ವಿಗ್ರಹ , ದೀಪ, ಕೂಡೆಗಳನ್ನು ಭಕ್ತಿಯಿಂದ ಪೂಜಿಸುತ್ತಿದ್ದರು. ಇವರು ಬುದ್ದನು ಪುನಃ ಜನ್ಮತಾಳುತ್ತಾನೆಂದು ನಂಬಿದರು.

 2. ಹಿನಾಯಾನ (ಕನಿಷ್ಠ ಮಾರ್ಗ):
ಹಿನಾಯಾನ ಪಂಥವನ್ನು 'ಕನಿಷ್ಟ ಮಾರ್ಗ' ವೆಂದು ತಿಳಿಯಲಾಗಿದೆ. ಬುದ್ದನ ತತ್ವಗಳನ್ನು ಈ ಪಂಥವು ನಿಷ್ಠೆಯಿಂದ ಪಾಲಿಸುತ್ತಿತ್ತು. ಇದು ಪರಿಶುದ್ದ ಬೌದ್ದಧರ್ಮವಾಗಿತ್ತು. ಇದರ ಗ್ರಂಥಗಳು ಪಾಲಿ ಭಾಷೆಯಲ್ಲಿ ರಚನೆಯಾದವು. ಮಾನವನ ನಿರ್ವಾಣವು ಸ್ವಪ್ರಯತ್ನದಿಂದ ಸಾಧ್ಯವಾಗುತ್ತದೆಂದು ತಿಳಿದಿದ್ದರು. ಇವರು ಕಮಲ, ಆನೆ, ಧರ್ಮಚಕ್ರಗಳನ್ನು ಆರಾಧಿಸುತ್ತಿದ್ದರು.

No comments:

Post a Comment