"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 28 May 2014

★ ಹವಾಮಾನ ಮತ್ತು ವಾಯುಗುಣಗಳ ನಡುವಣ ಪ್ರಮುಖ ವ್ಯತ್ಯಾಸಗಳನ್ನು ಗುರುತಿಸಿ. (೧೦೦ ಶಬ್ಧಗಳಲ್ಲಿ) (The main differences between Weather and Climate)


★ ಹವಾಮಾನ ಮತ್ತು ವಾಯುಗುಣಗಳ ನಡುವಣ ಪ್ರಮುಖ ವ್ಯತ್ಯಾಸಗಳನ್ನು ಗುರುತಿಸಿ.  (೧೦೦ ಶಬ್ಧಗಳಲ್ಲಿ)
(The main differences between Weather and Climate)

ಹವಾಮಾನ ಮತ್ತು ವಾಯುಗುಣ ಈ ಎರಡೂ ಪದಗಳನ್ನು ವಾಯುಮಂಡಲದ ಪರಿಸ್ಥಿತಿಯನ್ನು ವಿವರಿಸಲು ಬಳಸುವರಾದರೂ,  ಅವುಗಳು ಅನ್ವಯಿಸುವ ಕಾಲ, ಪ್ರದೇಶದ ವಿಸ್ತಾರ, ವಾಯುಮಂಡಲದ ಸ್ಥಿತಿಯನ್ನು ಸೂಚಿಸುವ ರೀತಿ, ಮುಂತಾದವುಗಳಲ್ಲಿ ಸ್ಪಷ್ಟ ವ್ಯತ್ಯಾಸಗಳನ್ನು ಕಾಣಬಹುದು.

೧)  ಹವಾಮಾನವು ಯಾವುದೇ ಒಂದು ನಿರ್ದಿಷ್ಟ ಕಾಲದ ವಾಯುಮಂಡಲದ ಪರಿಸ್ತಿತಿ.
—ವಾಯುಗುಣವು ಧೀರ್ಘ ಅವಧಿಯ ಹವಾಮಾನದ ಸರಾಸರಿ.


೨) ಹವಾಮಾನವು ವಾಯುಮಂಡಲವು ಆಂತರಿಕವಾಗಿ ಒಳಗೊಂಡಿರುವ ಘಟಕಗಳಾದ ಉಷ್ಣಾಂಶ, ಒತ್ತಡ, ಮಾರುತಗಳು, ತೇವಾಂಶ ಮತ್ತು ವೃಷ್ಟಿಗಳಿಂದ ನಿರ್ಧರಿಸಲ್ಪಡುವುದು.
— ವಾಯುಗುಣವು ವಾಯುಮಂಡಲದ ಹೊರಗಿನ ಅಥವಾ ಬಾಹ್ಯ ಅಂಶಗಳಿಂದ ನಿರ್ಧರಿಸಲ್ಪಡುವುದು.  ಈ ಬಾಹ್ಯ ನಿರ್ಧಾರಕ ಅಂಶಗಳೆಂದರೆ ಅಕ್ಷಾಂಶ,  ಸಮುದ್ರದಿಂದ ಇರುವ ಎತ್ತರ,  ಸಮುದ್ರದಿಂದ ಇರುವ ದೂರ, ಮಾರುತಗಳ ದಿಕ್ಕು , ಸಾಗರ ಪ್ರವಾಹಗಳು ಮತ್ತು ಭೂ ಮೇಲ್ಮೈ ಲಕ್ಷಣಗಳು ಇತ್ಯಾದಿ.


೩) ಹವಾಮಾನವನ್ನು ಸೂಚಿಸಲು ಚಳಿ, ಸೆಖೆ, ಮೋಡ ತುಂಬಿದ,  ಆಹ್ಲಾದಕರ, ಬಿರುಗಾಳಿಯಿಂದ ಕೂಡಿದ ಮುಂತಾದ ಪದಗಳನ್ನು ಬಳಸುವರು.
— ವಾಯುಗುಣವನ್ನು ಸೂಚಿಸಲು ಉಷ್ಣ,  ಶೀತ, ಒಣ, ತೇವಯುತ,  ಆರ್ದ್ರತೆ ಮುಂತಾದ ಪದಗಳನ್ನು ಬಳಸುವರು.


೪)  ಹವಾಮಾನವು ಒಂದು ನಿರ್ದಿಷ್ಟ ಸ್ಥಳ ಹಾಗೂ ಅಲ್ಪಾವಧಿಯ ಸೂಚಕ.
— ವಾಯುಗುಣವು ಧೀರ್ಘಾವಧಿಯ ಹಾಗೂ ವಿಸ್ತಾರವಾದ ಪ್ರದೇಶಕ್ಕೆ ಅನ್ವಯಿಸುವುದು.

No comments:

Post a Comment