"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 28 May 2014

ಮಾರುತಗಳು (Winds) ಮತ್ತು ಅವುಗಳ ಸಂಬಂಧಪಟ್ಟ ಅಂಶಗಳು ( ಟಿಪ್ಪಣಿ ಬರಹ)

☀ಮಾರುತಗಳು (Winds) ಎಂದರೇನು? :
(ಟಿಪ್ಪಣಿ ಬರಹ)

━━━━━━━━━━━━━━━━━━━━━━━━━━━━━━━━━━━━━━━━━━━━━
★ ಟಿಪ್ಪಣಿ ಬರಹ
(Short notes for IAS / KAS)

ಅಧಿಕ ಒತ್ತಡದಿಂದ ಕಡಿಮೆ ಒತ್ತಡದ ಕಡೆಗೆ ಭೂ ಮೇಲ್ಮೈಯಲ್ಲಿ ಸಮಾನಾಂತರವಾಗಿ ಚಲಿಸುವ ವಾಯುವಿಗೆ 'ಮಾರುತ' ವೆಂದು ಕರೆಯಲಾಗುವುದು.

— ವಾಯುಮಂಡಲದಲ್ಲಿನ ಒತ್ತಡದ ಹಂಚಿಕೆಯು ಮಾರುತಗಳ ದಿಕ್ಕು ಹಾಗು ವೇಗವನ್ನು ನಿರ್ಧರಿಸುವುದು.
— ಭೂ ಮೇಲ್ಮೈಯಲ್ಲಿ ಉಷ್ಣಾಂಶ ಮತ್ತು ಒತ್ತಡದ ಅಸಮತೆಯನ್ನು ಸರಿದೂಗಿಸುವ ಪ್ರಮುಖ ಮಾಧ್ಯಮಗಳಾಗಿ ಮಾರುತಗಳು ವರ್ತಿಸುತ್ತವೆ.
— ಹವಾಮಾನದ ಪರಿಸ್ಥಿತಿಯ ಮೇಲೆ ಪ್ರತ್ಯಕ್ಷವಾಗಿ ಮಾರುತಗಳ ಪ್ರಭಾವ ಅಪಾರ. ಇದು ಉಷ್ಣಾಂಶ, ತೇವಾಂಶ ಹಾಗೂ ವೃಷ್ಟಿಯ ಮೇಲೆ ಹೆಚ್ಚು ಪ್ರಭಾವವನ್ನು ಬೀರುತ್ತವೆ. ಆದ್ದರಿಂದ ವಾಯುಗುಣದ ಮೂಲಾಂಶಗಳಲ್ಲಿ ಮಾರುತಗಳು ಸಹ ಪ್ರಮುಖವಾಗಿವೆ.


★ ಇತರೇ ಅಂಶಗಳು:
━━━━━━━━━━━━━━━━━━━━━━━━━━━━━━━━━━━━━━━━━━━━━

— ಗಾಳಿಯು ಬೀಸುವ ದಿಕ್ಕನ್ನು ತಿಳಿಯಲು ಬಳಸುವ ಉಪಕರಣ:
('ಪವನ ದಿಕ್ಸೂಚಿ' (Wind Vane)

— ಗಾಳಿಯ ವೇಗವನ್ನು ಅಳೆಯಲು ಬಳಸುವ ಮಾಪಕ:
(Anemometer. )

— ಗಾಳಿಯ ವೇಗವನ್ನು ಅಳೆಯುವ ಮಾನ:
('ನಾಟ್' (Knot) ಅಥವ  ಕಿ.ಮೀ )

— ಒಂದು 'ನಾಟ್' (Knot) ಎಂದರೆ ಒಂದು ನಾಟಿಕಲ್ ಮೈಲಿ (೬೦೮೦ ಆಡಿಗಳು)

— ಒಂದು ನಾಟಿಕಲ್ ಮೈಲಿ ಎಂದರೆ ೧.೮೫ ಕಿ.ಮೀ ಗೆ ಸಮನಾಗಿರುವುದು.

— ಒಂದು ಪ್ರದೇಶದಲ್ಲಿ ಒಂದು ವರ್ಷದ ಅವಧಿಯಲ್ಲಿ ಮಾರುತಗಳು ಸ್ಥಳೀಯವಾಗಿ ವಿವಿಧ ದಿಕ್ಕಿನಿಂದ ಬೀಸುವುವು.  ಇದನ್ನು 'ವಿಂಡ್ ರೋಸ್ (Wind Rose) ಮೂಲಕ ನಿರೂಪಿಸಲಾಗುವುದು.

No comments:

Post a Comment